Kannada CADD Nest Private Limited

ಕನ್ನಡಿಗರ ಸ್ವಾಭಿಮಾನದ ಸಂಕೇತದ ಹಬ್ಬ ಕನ್ನಡ ರಾಜ್ಯೋತ್ಸವ

ಕನ್ನಡಿಗರ ಸ್ವಾಭಿಮಾನದ ಸಂಕೇತದ ಹಬ್ಬ ಕನ್ನಡ ರಾಜ್ಯೋತ್ಸವ

ಕನ್ನಡ ಕ್ಯಾಡ್‌ನೆಸ್ಟ್‌‌ ಓದುಗರಿಗೆ, ವಿದ್ಯಾರ್ಥಿಗಳು ಸೇರಿದಂತೆ ಸಮಸ್ತ ಕ್ಯಾಡ್‌ನೆಸ್ಟ್‌‌ ಓದುಗರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಕಳೆದ ಹಲವು ಸಮಯದಿಂದ ಕನ್ನಡದಲ್ಲಿ ಉದ್ಯೋಗ ಮತ್ತು ಕೌಶಲ ಮಾಹಿತಿಯನ್ನು ನೀಡುವ ಮೂಲಕ ಕ್ಯಾಡ್‌ನೆಸ್ಟ್‌‌ ಬೆಂಗಳೂರು ವಿಭಾಗವು ಕನ್ನಡಮ್ಮನ ಸೇವೆ ಮಾಡುತ್ತ ಬಂದಿದೆ. ರಾಜ್ಯದ ಬಡ ವಿದ್ಯಾರ್ಥಿಗಳು ಸೇರಿದಂತೆ ಕನ್ನಡ ಮಕ್ಕಳಿಗೆ ಸರಿಯಾದ ಉದ್ಯೋಗ ಮತ್ತು ಕೌಶಲ್ಯ ಮಾರ್ಗದರ್ಶನ ನೀಡಬೇಕು ಎನ್ನುವುದು ನಮ್ಮ ಆಶಯ. ಕನ್ನಡಿಗರಿಗೆಲ್ಲ ಸಂಭ್ರಮ ತರುವ ಈ ಕನ್ನಡ ಹಬ್ಬದ ದಿನದಂದು ಕನ್ನಡ ರಾಜ್ಯೋತ್ಸವದ ಇತಿಹಾಸ ಮತ್ತು ಇತರೆ ಮಾಹಿತಿಗಳನ್ನು ತಿಳಿದುಕೊಳ್ಳೋಣ. ಕನ್ನಡಿಗರಾಗಿ ನಮಗೇ ಕನ್ನಡ ಏಕೀಕರಣ ಮತ್ತು ಇತರೆ ಇತಿಹಾಸದ ಘಟನೆಗಳ ಬಗ್ಗೆ ಗೊತ್ತಿಲ್ಲದಿದ್ದರೆ ನಾಚಿಕೆಗೇಡು ಅಲ್ಲವೇ? ಇಂತಹ ಅಪಸವ್ಯ ತಪ್ಪಿಸುವ ಸಲುವಾಗಿ ಕನ್ನಡ ಏಕೀಕರಣ, ಕನ್ನಡ ಬಾವುಟ ಸೇರಿದಂತೆ ಕನ್ನಡ ರಾಜ್ಯೋತ್ಸವಕ್ಕೆ ಸಂಬಂಧಪಟ್ಟ ಹಲವು ವಿಚಾರಗಳನ್ನು ಇಲ್ಲಿ ನೀಡಲಾಗಿದೆ.

ಕನ್ನಡ ನಮ್ಮ ಅಸ್ಮಿತೆ

ಕನ್ನಡ ನಮ್ಮ ಅನನ್ಯತೆ

ಕನ್ನಡವೇ ನಮ್ಮ ಆದ್ಯತೆ

ಕನ್ನಡ ಕ್ಯಾಡ್‌ನೆಸ್ಟ್‌‌


ಕ್ಯಾಡ್‌ನೆಸ್ಟ್‌‌ ಕನ್ನಡ ಕಲಿಕಾ ಕೇಂದ್ರ

ಈ ಕನ್ನಡ ರಾಜ್ಯೋತ್ಸವದ ಶುಭ ಸಮಯಮದಲ್ಲಿ ಕ್ಯಾಡ್‌ನೆಸ್ಟ್‌‌ ಕಡೆಯಿಂದಲೂ ಒಂದು ಶುಭ ಸುದ್ದಿಯಿದೆ. ಕ್ಯಾಡ್‌ನೆಸ್ಟ್‌‌ನಿಂದ ಕನ್ನಡ ಕ್ಲಾಸ್‌ಗಳು ಇನ್ನು ಮುಂದೆ ಆರಂಭವಾಗಲಿವೆ. ಕ್ಯಾಡ್‌ನೆಸ್ಟ್‌‌ ಕನ್ನಡ ಕಲಿಕಾ ಕೇಂದ್ರವು ಕ್ಯಾಡ್‌ನೆಸ್ಟ್‌‌ ವಿದ್ಯಾರ್ಥಿಗಳಿಗೆ ಒಂದು ಉತ್ತಮ ಅವಕಾಶವಾಗಿದೆ. ಆರಂಭದಿಂದಲೇ ನಾವು ಇಂಗ್ಲಿಷ್‌ ಮಾಧ್ಯಮ ಮಾತ್ರವಲ್ಲದೆ ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಕುರಿತು ವಿಶೇಷ ಅಸ್ಥೆ ವಹಿಸಿದ್ದೇವೆ. ವಿವಿಧ ತಾಂತ್ರಿಕ ಕೋರ್ಸ್‌ಗಳನ್ನು ನಮ್ಮ ತರಬೇತುದಾರರು ಸಾಮಾನ್ಯ ವಿದ್ಯಾರ್ಥಿಗಳಿಗೂ ಅರ್ಥವಾಗುವಂತೆ ಕನ್ನಡದಲ್ಲಿಯೂ ಹೇಳಿಕೊಡುತ್ತಾರೆ. ಹೀಗಾಗಿ, ನಮ್ಮ ತರಬೇತಿ ಕೇಂದ್ರದಲ್ಲಿ ಕಲಿಯುವುದು ತುಂಬಾ ಆಪ್ತ.

ಕನ್ನಡ ರಾಜ್ಯೋತ್ಸವದ ಆರಂಭ


ಮೈಸೂರು ರಾಜ್ಯವು (ಈಗಿನ ಕರ್ನಾಟಕ ) 1956ರ ನವೆಂಬರ್ 1ರಂದು ನಿರ್ಮಾಣವಾಯಿತು.  ಮೈಸೂರು ಸಂಸ್ಥಾನ, ಮುಂಬಯಿ ಕರ್ನಾಟಕ, ಹೈದರಾಬಾದ್ ಕರ್ನಾಟಕ ಹಾಗೂ ಮದ್ರಾಸ್ ಕರ್ನಾಟಕ ಎಂದು ನಾಲ್ಕು ಭಾಗಗಳಾಗಿದ್ದ ಕನ್ನಡ ನಾಡು ಈ ದಿನ ರಾಜಕೀಯವಾಗಿ ಒಂದಾಯಿತು. ದಕ್ಷಿಣ ಭಾರತದ ಕನ್ನಡ ಭಾಷೆ ಮಾತನಾಡುವ ಎಲ್ಲ ಪ್ರದೇಶಗಳನ್ನು ವಿಲೀನಗೊಲಿಸಿ ಒಂದು ರಾಜ್ಯವಾಗಿ ಘೋಷಣೆ ಮಾಡಿದ ಈ ದಿನವನ್ನು ಕನ್ನಡ ರಾಜ್ಯೋತ್ಸವವಾಗಿ ಆಚರಿಸಲಾಗುತ್ತದೆ.  

ಕನ್ನಡ ರಾಜ್ಯೋತ್ಸವದ ಇತಿಹಾಸ

ಕನ್ನಡದ ಕುಲಪುರೋಹಿತರಾದ ಆಲೂರು ವೆಂಕಟರಾವ್, ಕರ್ನಾಟಕ ಏಕೀಕರಣ ಚಳುವಳಿಯನ್ನು 1905 ರಲ್ಲಿ ಪ್ರಾರಂಭಿಸಿದರು. 1950ರಲ್ಲಿ, ಭಾರತವು ಗಣರಾಜ್ಯವಾದ ನಂತರ ಭಾರತದ ವಿವಿಧ ಪ್ರಾಂತ್ಯಗಳು, ಭಾಷೆಗಳ ಆಧಾರದ ಮೇಲೆ ರಾಜ್ಯಗಳಾಗಿ ರೂಪು ಗೊಂಡವು. ಈ ಹಿಂದೆ ರಾಜರ ಆಳ್ವಿಕೆಯಲ್ಲಿ ದಕ್ಷಿಣ ಭಾರತದಲ್ಲಿ ಹಲವಾರು ಸಂಸ್ಥಾನಗಳನ್ನು ಒಳಗೊಂಡಂತೆ ರಾಜ್ಯಗಳು ರೂಪುಗೊಂಡಿದ್ದವು. ಕನ್ನಡ ಮಾತನಾಡುವ ಪ್ರಾಂತ್ಯಗಳು ಸೇರಿ, ಮೈಸೂರು ರಾಜ್ಯವು ಉದಯವಾಯಿತು.


1956 ರ ನವೆಂಬರ್ 1 ರಂದು, ಮದ್ರಾಸ್, ಮುಂಬಯಿ, ಹೈದರಬಾದ್ ಪ್ರಾಂತ್ಯದ ಕನ್ನಡ ಮಾತನಾಡುವ ಪ್ರದೇಶಗಳು ವಿಲೀನಗೊಂಡು ಮೈಸೂರು ರಾಜ್ಯ ಉದಯವಾಯಿತು ಹಾಗೂ ಉತ್ತರ ಕರ್ನಾಟಕ, ಮಲೆನಾಡು ಮತ್ತು ಹಳೆಯ ಮೈಸೂರು ಎಂಬುದಾಗಿ ಹೊಸದಾಗಿ ರೂಪುಗೊಂಡ ಮೈಸೂರು ರಾಜ್ಯವನ್ನು ಮೂರು ಪ್ರದೇಶಗಳಲ್ಲಿ ಗುರುತಿಸಲಾಯಿತು.


ಹೊಸದಾಗಿ ಏಕೀಕೃತಗೊಂಡ ರಾಜ್ಯದ ಆರಂಭದಲ್ಲಿ ಹೊಸ ಘಟಕದ ಕೋರ್ ರೂಪುಗೊಂಡು ಮುಂಚಿನ ರಾಜ್ಯದ ಹೆಸರು ಇರಲೆಂದು ಮೈಸೂರು ಹೆಸರನ್ನು ಉಳಿಸಿಕೊಂಡರು. ಆದರೆ ಉತ್ತರ ಕರ್ನಾಟಕದ ಜನರ ತರ್ಕ ಮಾನ್ಯತೆಗಾಗಿ, ರಾಜ್ಯದ ಹೆಸರು ನವೆಂಬರ್  1, 1973 ರಂದು ಕರ್ನಾಟಕ ಎಂದು ಬದಲಾಯಿತು.
ಈ ಸಂದರ್ಭದಲ್ಲಿ ದೇವರಾಜ ಅರಸ್ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಕರ್ನಾಟಕ ಏಕೀಕರಣದ ಮನ್ನಣೆ ಇತರ ವ್ಯಕ್ತಿಗಳಿಗೂ ಸೇರುತ್ತದೆ. ಅವರೆಂದರೆ ಅನಕೃ, ಕೆ. ಶಿವರಾಮ್ ಕಾರಂತ, ಕುವೆಂಪು, ಮಾಸ್ತಿ ವೆಂಕಟೇಶ್  ಅಯ್ಯಂಗಾರ್, ಎ.ಎನ್ . ಕೃಷ್ಣರಾವ್ ಮತ್ತು ಬಿ.ಎಂ. ಶ್ರೀಕಂಠಯ್ಯ ಮತ್ತಿತರರು.

ಕನ್ನಡ ರಾಜ್ಯೋತ್ಸವದ ಆಚರಣೆ ಹೇಗೆ ?

ಕನ್ನಡಿಗರ ಸೂರ್ತಿಯ ಸಂಕೇತವಾಗಿರುವ `ಹಳದಿ-ಕೆಂಪು’ ಬಣ್ಣದ ಬಾವುಟವನ್ನು ರಾಜ್ಯದ ಎಲ್ಲೆಡೆ ಹಾರಿಸಲಾಗುತ್ತದೆ. ಕನ್ನಡ ನಾಡಗೀತೆ (ಜಯಭಾರತ ಜನನಿಯ ತನುಜಾತೆ )ಯನ್ನು ಹಾಡಲಾಗುತ್ತದೆ. ಸರಕಾರಿ ಕಚೇರಿ ಮತ್ತು ಪ್ರಮುಖ ಪ್ರದೇಶಗಳಲ್ಲಿ  ವಾಹನಗಳ ಮೇಲೆ ಭುವನೇಶ್ವರಿ ಚಿತ್ರವನ್ನಿಟ್ಟು ಮೆರವಣಿಗೆ ನಡೆಸಲಾಗುತ್ತದೆ. ರಾಜ್ಯೋತ್ಸವದ ಪ್ರಯುಕ್ತ ಕರ್ನಾಟಕ ಸರಕಾರದ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. ಹಲವಾರು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ಕನ್ನಡ ಕ್ಯಾಡ್‌ನೆಸ್ಟ್‌ ಓದುಗರಿಗೆ ಕನ್ನಡ ರಾಜ್ಯೋತ್ಸವದ ಬಗ್ಗೆ ತಿಳಿದುಕೊಳ್ಳುವ ಸಲುವಾಗಿ ಇಷ್ಟು ಸಂಕ್ಷಿಪ್ತ ಮಾಹಿತಿಯನ್ನು ಇಲ್ಲಿ ನೀಡಲಾಗಿದ್ದು, ಇನ್ನಷ್ಟು ಮಾಹಿತಿ ಬೇಕಿದ್ದರೆ ಕನ್ನಡ ಭಾಷೆ ಮತ್ತು ಏಕೀಕರಣಕ್ಕೆ ಸಂಬಂಧಪಟ್ಟ ಪುಸ್ತಕಗಳನ್ನು ಓದಬಹುದು.

ಹೊಸ ಆರಂಭಕ್ಕೆ ಸ್ಫೂರ್ತಿ

ಪ್ರತಿವರ್ಷ ಜೂನ್ ವೇಳೆಗೆ ತೆರೆಯುತ್ತಿದ್ದ ಶಾಲೆಗಳ ಬಾಗಿಲು ಇನ್ನಷ್ಟು ತೆರೆಯಬೇಕಷ್ಟೇ. ಕ್ಯಾಡ್‌ನೆಸ್ಟ್‌ ಬೆಂಗಳೂರು ಸೇರಿದಂತೆ ಕೆಲವು ಕೌಶಲ ಅಭಿವೃದ್ಧಿ ಕೇಂದ್ರಗಳಲ್ಲಿ ಈಗಾಗಲೇ ಕಲಿಕೆಗೆ ಅವಕಾಶವಿದೆ. ಈ ಕನ್ನಡ ರಾಜ್ಯೋತ್ಸವವನ್ನು ಈ ಶೈಕ್ಷಣಿಕ ವರ್ಷದ ಆರಂಭವೆಂದು ತಿಳಿದುಕೊಂಡು ಹೊಸ ಕೌಶಲ ಕಲಿಕೆಗೆ ಮುಂದಾಗಲು ಇದು ಸೂಕ್ತ ಸಮಯ. ಹೆಚ್ಚಿನ ಮಾಹಿತಿಗೆ ನಮ್ಮನ್ನ ಸಂಪರ್ಕಿಸಿರಿ.

ಕನ್ನಡ ನಮ್ಮ ಅಸ್ಮಿತೆ

ಕನ್ನಡ ನಮ್ಮ ಅನನ್ಯತೆ

ಕನ್ನಡವೇ ನಮ್ಮ ಆದ್ಯತೆ

ಪ್ರೀತಿ ಕನ್ನಡಿಗರಿಗೆ 65ನೇ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು




Ad Widget

Related Posts

error: Content is protected !!
Scroll to Top