Kannada CADD Nest Private Limited

skill course

ಏಪ್ರಿಲ್‌ 1ರಂದು ಪುನೀತ ನಮನ, ಬನ್ನಿ ಪುನೀತರಾಗೋಣ- ಕ್ಯಾಡ್‌ನೆಸ್ಟ್‌ ವಾರ್ಷಿಕೋತ್ಸವಕ್ಕೆ ಸುಸ್ವಾಗತ

ಕರ್ನಾಟಕದ ಪ್ರಮುಖ ಕೌಶಲಭಿವೃದ್ಧಿ ಕೇಂದ್ರ ಬೆಂಗಳೂರಿನ ಕ್ಯಾಡ್‌ನೆಸ್ಟ್‌ (CADD Nest Private Limited Bengaluru)ಗೆ ತನ್ನ ಎರಡನೇ ವಾರ್ಷಿಕೋತ್ಸವದ ಸಂಭ್ರಮವನ್ನು “ಪುನೀತ ನಮನ” ಹೆಸರಿನಲ್ಲಿ ಕನ್ನಡದ ಪವರ್‌ಸ್ಟಾರ್‌ ದಿವಂಗತ ಡಾ. ಪುನೀತ್‌ ರಾಜ್‌ ಕುಮಾರ್‌ಗೆ ಅರ್ಪಿಸುತ್ತಿದೆ. ಇದೇ ಶನಿವಾರ , ಏಪ್ರಿಲ್‌ 1ರಂದು ನಡೆಯಲಿರುವ ಪುನೀತ ನಮನ- ಕ್ಯಾಡ್‌ನೆಸ್ಟ್‌ ವಾರ್ಷಿಕೋತ್ಸವವನ್ನು ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಶಾಸಕರು, ಉನ್ನತ ಶಿಕ್ಷಣ, ವಿದ್ಯುನ್ಮಾನ, ಐಟಿ ಬಿಟಿ ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಯ ಇಲಾಖೆಯ ಸಚಿವರಾದ ಡಾ. ಸಿ.ಎನ್‌. ಅಶ್ವತ್ಥನಾರಾಯಣ …

ಏಪ್ರಿಲ್‌ 1ರಂದು ಪುನೀತ ನಮನ, ಬನ್ನಿ ಪುನೀತರಾಗೋಣ- ಕ್ಯಾಡ್‌ನೆಸ್ಟ್‌ ವಾರ್ಷಿಕೋತ್ಸವಕ್ಕೆ ಸುಸ್ವಾಗತ Read More »

ಸಕ್ಸಸ್ ಟಿಪ್ಸ್: ತ್ರಿವಿಕ್ರಮ ಸಾಧನೆ ಮಾಡುವುದು ಹೇಗೆ?

ಮೊದಲಿಗೆ ಕನ್ನಡ ಕ್ಯಾಡ್‌ನೆಸ್ಟ್‌ ಓದುಗರಿಗೆ ದೀಪಾವಳಿ ಹಬ್ಬದ ಶುಭಾಶಯಗಳು. ಜೀವನದಲ್ಲಿ ತ್ರಿವಿಕ್ರಮ ಸಾಧನೆ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುವ ಸಲುವಾಗಿ ಇವತ್ತು ಅಮೂಲ್ಯ ಸಲಹೆಯೊಂದಿಗೆ ಬಂದಿದ್ದೇವೆ. ಮೊದಲಿಗೆ ತ್ರಿವಿಕ್ರಮ ಮತ್ತು ಬಲಿಯಂದ್ರನ ಕತೆಯನ್ನು ಸಂಕ್ಷಿಪ್ತವಾಗಿ ನೆನಪಿಸಿಕೊಳ್ಳೋಣ. ತ್ರಿವಿಕ್ರಮ ಮತ್ತು ಬಲಿಯಂದ್ರನ ಕತೆ ಈ ದೀಪಾವಳಿ ಹಬ್ಬದ ಪೌರಾಣಿಕ ಹಿನ್ನೆಲೆ ತಿಳಿದಿರುವವರಿಗೆ ತ್ರಿವಿಕ್ರಮ, ವಾಮನ, ಬಲಿಯೇಂದ್ರ ಮುಂತಾದ ಹೆಸರುಗಳು ತಿಳಿದಿರಬಹುದು. ಪ್ರಹ್ಲಾದನ ಮಗನಾದ ವಿರೋಚನನ ಪುತ್ರ ಬಲಿಚಕ್ರವರ್ತಿ. ವಿಷ್ಣು ಭಕ್ತನಾಗಿದ್ದರೂ ಹಿಂಸಾಪ್ರವೃತ್ತಿ ಹೊಂದಿದ್ದನು. ಈತನ ರಾಜ್ಯವು ಸುಭಿಕ್ಷವಾಗಿತ್ತು. …

ಸಕ್ಸಸ್ ಟಿಪ್ಸ್: ತ್ರಿವಿಕ್ರಮ ಸಾಧನೆ ಮಾಡುವುದು ಹೇಗೆ? Read More »

error: Content is protected !!
Scroll to Top