Kannada CADD Nest Private Limited

Personality Development

ಪವರ್‌ಸ್ಟಾರ್‌ ಉದ್ಯೋಗಮೇಳ: ಪುನೀತ್‌ ರಾಜ್‌ಕುಮಾರ್‌ ನೆನಪಿನಲ್ಲಿ ಬೆಂಗಳೂರಿನಲ್ಲಿ ಬೃಹತ್‌ ಉದ್ಯೋಗಮೇಳ, ನಿರುದ್ಯೋಗಿಗಳಿಗೆ ಸುವರ್ಣಾವಕಾಶ

ಬೆಂಗಳೂರು: ದಿವಂಗತ ಪುನೀತ್‌ ರಾಜ್‌ಕುಮಾರ್‌ ನೆನಪಿನಲ್ಲಿ ಬೆಂಗಳೂರಿನ ರಾಜಾಜಿನಗರದಲ್ಲಿ ಅಕ್ಟೋಬರ್‌ 29ರಂದು ಬೃಹತ್‌ ಉದ್ಯೋಗ ಮೇಳ ನಡೆಯಲಿದೆ. ಪವರ್‌ ಸ್ಟಾರ್‌ ಉದ್ಯೋಗ ಮೇಳದ ಹೆಸರಿನಲ್ಲಿ ಸತತ ಎರಡನೇ ವರ್ಷ ಕರ್ನಾಟಕದ ಪ್ರಮುಖ ಕೌಶಲ್ಯ ತರಬೇತಿ ಸಂಸ್ಥೆ ಕ್ಯಾಡ್‌ನೆಸ್ಟ್‌ (caddnest.org) ಈ ಉದ್ಯೋಗ ಮೇಳ ಆಯೋಜಿಸಿದೆ. ಈ ಉದ್ಯೋಗಮೇಳದಲ್ಲಿ 50ಕ್ಕೂ ಹೆಚ್ಚು ಪ್ರಮುಖ ಕಂಪನಿಗಳು ಭಾಗವಹಿಸುತ್ತಿದ್ದು, ಹೊಸ ಉದ್ಯೋಗ ಪಡೆಯಲು ಬಯಸುವವರು ಈ ಜಾಬ್‌ ಡ್ರೈವ್‌ನ ಪ್ರಯೋಜನ ಪಡೆಯಬಹುದು. ನಿರುದ್ಯೋಗಿಗಳಿಗೆ ಕರ್ನಾಟಕ ರತ್ನ ಪುನೀತ್‌ ರಾಜ್‌ಕುಮಾರ್‌ ಉದ್ಯೋಗಮೇಳವನ್ನು ಕ್ಯಾಡ್‌ನೆಸ್ಟ್‌ …

ಪವರ್‌ಸ್ಟಾರ್‌ ಉದ್ಯೋಗಮೇಳ: ಪುನೀತ್‌ ರಾಜ್‌ಕುಮಾರ್‌ ನೆನಪಿನಲ್ಲಿ ಬೆಂಗಳೂರಿನಲ್ಲಿ ಬೃಹತ್‌ ಉದ್ಯೋಗಮೇಳ, ನಿರುದ್ಯೋಗಿಗಳಿಗೆ ಸುವರ್ಣಾವಕಾಶ Read More »

ಕರ್ನಾಟಕ ರತ್ನ ಪವರ್‌ ಸ್ಟಾರ್‌ ಉದ್ಯೋಗ ಮೇಳ-2023: ಪುನೀತ್‌ ರಾಜ್‌ಕುಮಾರ್‌ ಗೌರವಾರ್ಥ ಕ್ಯಾಡ್‌ನೆಸ್ಟ್‌ನಿಂದ ಬೆಂಗಳೂರಿನಲ್ಲಿ ಉಚಿತ ಉದ್ಯೋಗ ಮೇಳ, ಈಗಲೇ ಹೆಸರು ನೋಂದಾಯಿಸಿ

ಕನ್ನಡದ ಪವರ್‌ಸ್ಟಾರ್‌ ಪುನೀತ್‌ ರಾಜಕುಮಾರ್‌ ನಿಜ ಜೀವನದಲ್ಲಿಯೂ ತನ್ನ ಒಳ್ಳೆಯ ಕೆಲಸಗಳಿಂದ ಮಾದರಿಯಾಗಿದ್ದರು. ವಿಶೇಷವಾಗಿ ಯುವ ಜನರ ಮೇಲೆ ಅವರಿಗೆ ವಿಶೇಷ ಅಕ್ಕರೆ. ಅಪ್ಪುವಿನ ಸಮಾಜ ಸೇವೆಯನ್ನು ಸ್ಫೂರ್ತಿಯಾಗಿಟ್ಟುಕೊಂಡು ಬೆಂಗಳೂರಿನ ಪ್ರಮುಖ ಕೌಶಲ ತರಬೇತಿ ಕೇಂದ್ರವಾದ ಕ್ಯಾಡ್‌ನೆಸ್ಟ್‌ ಉಚಿತ ಉದ್ಯೋಗ ಮೇಳವನ್ನು ಪವರ್‌ ಸ್ಟಾರ್‌ ಹೆಸರಿನಲ್ಲಿ ಆಯೋಜಿಸಿದೆ. ಬೆಂಗಳೂರಿನಲ್ಲಿ ಸಾಕಷ್ಟು ಜನರು ಉದ್ಯೋಗದ ಹುಡುಕಾಟದಲ್ಲಿರುತ್ತಾರೆ. ಶಿಕ್ಷಣ ಅಥವಾ ಕೌಶಲವಿದ್ದರೂ ಕೆಲವರಿಗೆ ಉದ್ಯೋಗಾವಕಾಶ ದೊರಕಿರುವುದಿಲ್ಲ. ಸಾಕಷ್ಟು ಕಂಪನಿಗಳಿಗೆ ಅರ್ಜಿ ಸಲ್ಲಿಸಿದರೂ ಮಾರುತ್ತರ ಬಂದಿರುವುದಿಲ್ಲ. ಇಂತಹ ಯುವ ಜನರಿಗಾಗಿ, ನಿರುದ್ಯೋಗಿ …

ಕರ್ನಾಟಕ ರತ್ನ ಪವರ್‌ ಸ್ಟಾರ್‌ ಉದ್ಯೋಗ ಮೇಳ-2023: ಪುನೀತ್‌ ರಾಜ್‌ಕುಮಾರ್‌ ಗೌರವಾರ್ಥ ಕ್ಯಾಡ್‌ನೆಸ್ಟ್‌ನಿಂದ ಬೆಂಗಳೂರಿನಲ್ಲಿ ಉಚಿತ ಉದ್ಯೋಗ ಮೇಳ, ಈಗಲೇ ಹೆಸರು ನೋಂದಾಯಿಸಿ Read More »

stickies, post-it, list

ಕರಿಯರ್ Planning ಮಾಡಲು ಗೊತ್ತೆ?, ವಿದ್ಯಾರ್ಥಿಗಳು ಓದಲೇಬೇಕಾದ ಮಾರ್ಗದರ್ಶಿ

ಕರಿಯರ್ ಯೋಜನೆ ಮಾಡುವುದು ಕೊಂಚ ಕಷ್ಟದ ಕೆಲಸ. ಹೀಗಾಗಿ, ಬಹುತೇಕರು ಇದನ್ನು ಮಾಡಲು ಹೋಗುವುದಿಲ್ಲ. ಇದರಿಂದಾಗಿ ಹೆಚ್ಚಿನವರ ಕರಿಯರ್ ಬದುಕು ಗಾಳಿಬಂದ ಕಡೆ ಸಾಗುವ ಗಾಳಿಪಟದಂತಾಗುತ್ತದೆ. ಕನ್ನಡ ಕ್ಯಾಡ್‌ನೆಸ್ಟ್‌‌ ಇಂದು ವಿಶೇಷ ಮಾರ್ಗದರ್ಶಿಯ ಮೂಲಕ ನಿಮ್ಮ ಮುಂದೆ ಬಂದಿದೆ. ನೀವು ನಿಮ್ಮ ಕರಿಯರ್‌ ಕುರಿತು ಸರಿಯಾದ ಯೋಜನೆ ರೂಪಿಸಲು ನೆರವಾಗುವ Career Planning Guide ಅನ್ನು ಈ ಲೇಖನದ ಮೂಲಕ ನೀಡಿದೆ. ಏನಿದು Career Planning? ವ್ಯಕ್ತಿಯೊಬ್ಬರ ವೃತ್ತಿಪರ ಗುರಿಗಳನ್ನು ನಿಗದಿಪಡಿಸುವ ಮತ್ತು ಅವುಗಳನ್ನು ಸಾಸಲು ದಾರಿ …

ಕರಿಯರ್ Planning ಮಾಡಲು ಗೊತ್ತೆ?, ವಿದ್ಯಾರ್ಥಿಗಳು ಓದಲೇಬೇಕಾದ ಮಾರ್ಗದರ್ಶಿ Read More »

ನಿಮಗೆ ಉದ್ಯೋಗ ದೊರಕುತ್ತಿಲ್ಲವೇ? ನೀವು ಮಾಡಿದ ಈ ತಪ್ಪುಗಳೇ ಕಾರಣ!

ಕನ್ನಡ ಕ್ಯಾಡ್‌ನೆಸ್ಟ್‌ ಓದುಗರಿಗೆ ನಮಸ್ಕಾರ. ಈಗಾಗಲೇ ವಿವಿಧ ಉದ್ಯೋಗ ಮತ್ತು ಶಿಕ್ಷಣ ಮಾಹಿತಿಯ ಮೂಲಕ ಸಾಕಷ್ಟು ವಿದ್ಯಾರ್ಥಿಗಳು ಕನ್ನಡಕ್ಯಾಡ್‌ನೆಸ್ಟ್‌.ಕಾಂನ ಪ್ರಯೋಜನ ಪಡೆಯುತ್ತಿದ್ದೀರಿ ಎನ್ನುವುದಕ್ಕೆ ನೀವು ಕಳುಹಿಸುವ ವಾಟ್ಸ್‌ಆಪ್ ಸಂದೇಶಗಳು, ಇಮೇಲ್‌ಗಳೇ ಸಾಕ್ಷಿ. ಇದರಿಂದ ಇನ್ನಷ್ಟು ಖುಷಿಗೊಂಡ ನಾವು ಇಂದು ಒಂದು ಒಳ್ಳೆಯ ವಿಷಯದೊಂದಿಗೆ ಬಂದಿದ್ದೇವೆ. ನಮ್ಮಲ್ಲಿ ಸಾಕಷ್ಟು ವಿದ್ಯಾರ್ಥಿಗಳು ಏನೋ ಓದಿರುತ್ತಾರೆ. ಕಷ್ಟಪಟ್ಟು ಉದ್ಯೋಗ ಹುಡುಕುತ್ತಾರೆ. ಎಲ್ಲೆಲ್ಲೂ ರಿಜೆಕ್ಟ್‌ ಆಗುತ್ತಾರೆ. ಎಷ್ಟು ಕಷ್ಟಪಟ್ಟರೂ ಉದ್ಯೋಗ ದೊರಕುತ್ತಿಲ್ಲ ಎಂದು ಅವಲತ್ತುಕೊಳ್ಳುತ್ತಾರೆ. ಇದಕ್ಕೆ ಏನು ಕಾರಣ ಎನ್ನುವುದನ್ನು ಆಲೋಚಿಸಿ ಕನ್ನಡ …

ನಿಮಗೆ ಉದ್ಯೋಗ ದೊರಕುತ್ತಿಲ್ಲವೇ? ನೀವು ಮಾಡಿದ ಈ ತಪ್ಪುಗಳೇ ಕಾರಣ! Read More »

ವಿದ್ಯಾರ್ಥಿಗಳು ಫ್ಲಿಪ್‌ಕಾರ್ಟ್‌ನಂತಹ ಕಂಪನಿ ಸ್ಥಾಪಿಸುವುದು ಹೇಗೆ?

ಕೊರೊನಾ ಬಳಿಕದ ಜಗತ್ತು ಹೆಚ್ಚು ಆನ್‌ಲೈನ್‌ಮಯವಾಗಿರಲಿದೆ. ಆನ್‌ಲೈನ್‌ ಖರೀದಿ, ಮಾರಾಟವು ಈ ಹಿಂದಿಗಿಂತಲೂ ಹೆಚ್ಚಿರಲಿದೆ. ಇದೇ ಕಾರಣಕ್ಕೆ ಎಲ್ಲರೂ ಆನ್‌ಲೈನ್‌ ಅಂಗಡಿ ತೆರೆಯಲು ಉತ್ಸುಕರಾಗಿದ್ದಾರೆ. ವಿದ್ಯಾರ್ಥಿಗಳು ಸಹ ಇಂತಹ ಸಮಯದಲ್ಲಿ ಆನ್‌ಲೈನ್‌ ಜಗತ್ತಿಗೆ ಪೂರಕವಾದ ಕೋರ್ಸ್‌ ಕಲಿಯಬೇಕು. ಇದೇ ಕಾರಣಕ್ಕೆ ಕನ್ನಡ ಕ್ಯಾಡ್‌ನೆಸ್ಟ್‌‌ನ ಈ ಸಂಚಿಕೆಯಲ್ಲಿ ಇ-ಕಾಮರ್ಸ್‌ ಗೈಡ್‌ ನೀಡಲಾಗಿದೆ. ಒಂದು ಕತೆ ಕೇಳಿ ಬೆಂಗಳೂರಲ್ಲಿ ಇಬ್ರು ಫ್ರೆಂಡ್ಸ್ ಇದ್ರು. ಅವರಿಗೆ ದೊಡ್ಡ ಕಂಪನಿಯಲ್ಲಿ ಹಲವು ಲಕ್ಷ ರೂಪಾಯಿ ವೇತನದ ಉದ್ಯೋಗವಿತ್ತು. ಆದರೆ, ಅವರು ಕನಸು ಕಣ್ಣಿನ …

ವಿದ್ಯಾರ್ಥಿಗಳು ಫ್ಲಿಪ್‌ಕಾರ್ಟ್‌ನಂತಹ ಕಂಪನಿ ಸ್ಥಾಪಿಸುವುದು ಹೇಗೆ? Read More »

ಲಾಕ್‌ಡೌನ್‌ ಸಮಯದಲ್ಲಿ ಬುದ್ಧಿವಂತ ವಿದ್ಯಾರ್ಥಿಗಳು ಏನು ಮಾಡುತ್ತಿದ್ದಾರೆ ಗೊತ್ತೆ?

ಕಳೆದ ಕೆಲವು ಸಮಯದಿಂದ ಕೊರೊನಾ ಎಂಬ ವೈರಸ್‌ ಜಗತ್ತಿನ ರೀತಿ ರಿವಾಜುಗಳನ್ನೇ ಬದಲಾಯಿಸಿಬಿಟ್ಟಿದೆ. ವಿದ್ಯಾರ್ಥಿಗಳು ಶಾಲೆಗೆ ಹೋಗಬೇಕಿಲ್ಲ. ಟೀಚರ್‌ಗಳು ಮೊಬೈಲ್‌ ಅಥವಾ ಕಂಪ್ಯೂಟರ್‌ ಮುಂದೆಕುಳಿತು ಪಾಠ ಮಾಡುತ್ತಿದ್ದಾರೆ. ದಿನಾ ಆಫೀಸ್‌ಗೆ ಹೋಗುತ್ತಿದ್ದ ಅಪ್ಪ/ಅಮ್ಮ ಮನೆಯಲ್ಲಿಯೇ ಕುಳಿತು ವರ್ಕ್‌ ಫ್ರಂ ಹೋಂ ಮಾಡುತ್ತಿದ್ದಾರೆ. ಒಂದರ್ಥದಲ್ಲಿ ಈಗ ಮನೆಯೇ ಮಂತ್ರಾಲಯ, ವಿದ್ಯಾರ್ಥಿಗಳಿಗೆ ಮನೆಯೇ ವಿದ್ಯಾಲಯ. ಶಾಲಾ ಕಾಲೇಜುಗಳು ಮಾಡುವ ನಿಗದಿತ ಆನ್‌ಲೈನ್‌ ಕ್ಲಾಸ್‌ಗಳನ್ನು ತೆಗೆದುಕೊಂಡು ಕೆಲವು ವಿದ್ಯಾರ್ಥಿಗಳು ಒಂದರ್ಥದಲ್ಲಿ ಆರಾಮವಾಗಿದ್ದಾರೆ. ಒಂದಿಷ್ಟು ವಿದ್ಯಾರ್ಥಿಗಳು ಆನ್‌ಲೈನ್‌ ಕ್ಲಾಸ್‌ನಲ್ಲಿ ನೀಡುವ ಹೋಂವರ್ಕ್‌ ಹೊರೆ …

ಲಾಕ್‌ಡೌನ್‌ ಸಮಯದಲ್ಲಿ ಬುದ್ಧಿವಂತ ವಿದ್ಯಾರ್ಥಿಗಳು ಏನು ಮಾಡುತ್ತಿದ್ದಾರೆ ಗೊತ್ತೆ? Read More »

ಟೈಮ್‌ ಮ್ಯಾನೇಜ್‌ಮೆಂಟ್: ಸಮಯದ ಸದ್ಭಳಕೆಯಿಂದ ಯಶಸ್ಸು

ವೃತ್ತಿ ಮತ್ತು ವೈಯಕ್ತಿಕ ಜೀವನದಲ್ಲಿ ಯಶಸ್ಸು ಪಡೆಯುವುದು ಪ್ರತಿಯೊಬ್ಬರ ಕನಸು. ಯಶಸ್ಸು ಪಡೆಯಲು ಬೇಕಿರುವುದು ಏನು? ಹಣವೇ? ಶೈಕ್ಷಣಿಕ ಅರ್ಹತೆಗಳೇ? ಅಥವಾ ಮಹಾತ್ವಕಾಂಕ್ಷೆಯೇ? ಇವೆಲ್ಲವೂ ಅವಶ್ಯಕ ನಿಜ. ಆದರೆ, ಯಶಸ್ಸು ಪಡೆಯಲು ಇಷ್ಟೇ ಸಾಕಾಗದು. ಇಂದಿನ ಕನ್ನಡ ಕ್ಯಾಡ್‌ನೆಸ್ಟ್‌‌ ಲೇಖನದಲ್ಲಿ ಯಶಸ್ಸು ಪಡೆಯಲು ಅತ್ಯಮೂಲ್ಯವಾದ ಅಂಶವೊಂದರ ಬಗ್ಗೆ ಚರ್ಚಿಸೋಣ. ಅದು ಟೈಮ್‌ ಮ್ಯಾನೇಜ್‌ ಮೆಂಟ್‌ ಅಥವಾ ಸಮಯದ ನಿರ್ವಹಣೆ. ಜಗತ್ತು ಈಗ ಕೊರೊನಾ ಸಂಕಷ್ಟದಲ್ಲಿದೆ. ಬಹುತೇಕರು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ಮನೆಯಿಂದಲೇ ಓದುತ್ತಿದ್ದಾರೆ. (ನೀವು ಆನ್‌ಲೈನ್‌ …

ಟೈಮ್‌ ಮ್ಯಾನೇಜ್‌ಮೆಂಟ್: ಸಮಯದ ಸದ್ಭಳಕೆಯಿಂದ ಯಶಸ್ಸು Read More »

ಜೀವನದಲ್ಲಿ ಯಶಸ್ಸು ಪಡೆಯಬೇಕೆ? ಪ್ರೇರಣಾ ಶಕ್ತಿ ನಿಮ್ಮದಾಗಿಸಿಕೊಳ್ಳಿ

ಸ್ನೇಹಾ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಪದ ಪ್ರೇರಣೆ.  ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಏನನ್ನಾದರೂ ಸಾಧಿಸಲು ಪ್ರೇರೇಪಿಸುವುದೇ, ಪ್ರೋತ್ಸಾಹಿಸುವುದೆ  ಈ ಪ್ರೇರಣೆ.ಲ್ಯಾಟಿನ್ ನ ‘ಎಮೋವರ್’ ಎಂಬ ಪದದಿಂದ ಜನನಗೊಂಡಿರುವುದೆ ಈ ಪ್ರೇರಣಾ ಎಂಬ ಪದ. ಅಸಾಧ್ಯ ಎಂಬ ಮೂರಕ್ಷರದ ಮೂಢನಂಬಿಕೆಗೆ ಬರೆಯೆಳೆಯುವ ಸತ್ಕಾರ್ಯ ಮಾಡಿ ಸಾಧ್ಯ ಎಂಬ ಎರಡಕ್ಷರದ ಬೆಳಕು ಪ್ರತಿಯೊಬ್ಬರಲ್ಲೂ ಮೂಡಿಸುವುದೇ ಪ್ರೇರಣೆ. ಉತ್ತರ ಇಲ್ಲದಿರುವ ಅಂದರೆ, ಹೇಗಪ್ಪಾ ಕೆಲಸ ಮಾಡೋದು?, ಈ ಕೆಲ್ಸ ನನ್ನಿಂದ ಸಾಧ್ಯನಾ? ನನ್ನಿಂದ ಈ ಗೇಮ್ ಗೆಲ್ಲೋಕೆ …

ಜೀವನದಲ್ಲಿ ಯಶಸ್ಸು ಪಡೆಯಬೇಕೆ? ಪ್ರೇರಣಾ ಶಕ್ತಿ ನಿಮ್ಮದಾಗಿಸಿಕೊಳ್ಳಿ Read More »

error: Content is protected !!
Scroll to Top