ಬೆಂಗಳೂರು: ದಿವಂಗತ ಪುನೀತ್ ರಾಜ್‌ಕುಮಾರ್ ನೆನಪಿನಲ್ಲಿ ಬೆಂಗಳೂರಿನ ರಾಜಾಜಿನಗರದಲ್ಲಿ ಅಕ್ಟೋಬರ್ 29ರಂದು ಬೃಹತ್ ಉದ್ಯೋಗ ಮೇಳ ನಡೆಯಲಿದೆ. ಪವರ್ ಸ್ಟಾರ್ ಉದ್ಯೋಗ ಮೇಳದ ಹೆಸರಿನಲ್ಲಿ ಸತತ ಎರಡನೇ ವರ್ಷ ಕರ್ನಾಟಕದ ಪ್ರಮುಖ ಕೌಶಲ್ಯ ತರಬೇತಿ ಸಂಸ್ಥೆ ಕ್ಯಾಡ್‌ನೆಸ್ಟ್ (caddnest.org) ಈ ಉದ್ಯೋಗ ಮೇಳ ಆಯೋಜಿಸಿದೆ. ಈ ಉದ್ಯೋಗಮೇಳದಲ್ಲಿ 50ಕ್ಕೂ ಹೆಚ್ಚು ಪ್ರಮುಖ ಕಂಪನಿಗಳು ಭಾಗವಹಿಸುತ್ತಿದ್ದು, ಹೊಸ ಉದ್ಯೋಗ ಪಡೆಯಲು ಬಯಸುವವರು ಈ ಜಾಬ್ ಡ್ರೈವ್‌ನ ಪ್ರಯೋಜನ ಪಡೆಯಬಹುದು. ನಿರುದ್ಯೋಗಿಗಳಿಗೆ ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಉದ್ಯೋಗಮೇಳವನ್ನು ಕ್ಯಾಡ್‌ನೆಸ್ಟ್ ಕಳೆದ ವರ್ಷದಿಂದ ಬೆಂಗಳೂರಿನಲ್ಲಿ ನಡೆಸುತ್ತಿದೆ. ಐವತ್ತಕ್ಕೂ ಹೆಚ್ಚು ಖಾಸಗಿ ಕಂಪನಿಗಳು ಈ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳುವುದರಿಂದ ಒಂದೇ ವೇದಿಕೆಯಲ್ಲಿ ಹಲವು ಸಂದರ್ಶನಗಳನ್ನು ಎದುರಿಸಲು, ಉತ್ತಮ ಉದ್ಯೋಗ ಪಡೆಯಲು ಇದು ದಾರಿಯಾಗುತ್ತಿದೆ. ಕಳೆದ ವರ್ಷ ಈ ಉದ್ಯೋಗ ಮೇಳಕ್ಕೆ ದೊರಕಿದ ಅಭೂತಪೂರ್ವ ಪ್ರತಿಕ್ರಿಯೆಯನ್ನು ಗಮನದಲ್ಲಿಟ್ಟುಕೊಂಡು ಈ ವರ್ಷವೂ ಕ್ಯಾಡ್‌ನೆಸ್ಟ್ ಈ ಉದ್ಯೋಗ ಮೇಳ ಆಯೋಜಿಸುತ್ತಿದೆ. “ಕಳೆದ ವರ್ಷದಿಂದ ನಾವು ಪವರ್ ಸ್ಟಾರ್ ಉದ್ಯೋಗಮೇಳವನ್ನು ಆಯೋಜಿಸುತ್ತಿದ್ದೇವೆ.…
Author: Admin
ಬೆಂಗಳೂರು: ಕರ್ನಾಟಕದ ಪ್ರಮುಖ ಕೌಶಲಭಿವೃದ್ಧಿ ಕೇಂದ್ರ ಬೆಂಗಳೂರಿನ ಕ್ಯಾಡ್‌ನೆಸ್ಟ್ (CADD Nest Private Limited Bengaluru)ಗೆ ತನ್ನ ಎರಡನೇ ವಾರ್ಷಿಕೋತ್ಸವದ ಸಂಭ್ರಮವನ್ನು “ಪುನೀತ ನಮನ” ಹೆಸರಿನಲ್ಲಿ ಶನಿವಾರ (ಏಪ್ರಿಲ್ 1) ಸಾಂಗವಾಗಿ ನಡೆಯಿತು. ಕ್ಯಾಡ್‌ನೆಸ್ಟ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾದ ಪ್ರಕಾಶ್ ಎಚ್.ಎಂ. ಸಿಇಒ ಜ್ಯೋತಿ ವಿ ಜೆ,ಎಸ್.ಕೆ. ಜೈನ್, ವೆಂಕಟರಾಮೇ ಗೌಡ, ನಮ್ಮ ಸೂಪರ್ ಸ್ಟಾರ್ ಹಾಗು ಸ್ಟಾರ್ ಕನ್ನಡದ ಸಿ ಇ ಓ ಅಸ್ಲಾಂ,ಡಾ.ವಸುಧಾ ಶ್ರೀನಿವಾಸ್, ಕಿರುತರೆ ನಟರಾದ ರೂಪೇಶ್ ನಕ್ಷತ್ರ, ಸುಹೈಲ್, ಅರವಿಂದ್ ವಿವೇಕ್, ಚರಣ್ , ಗುರುಮೂರ್ತಿ ರವರು ಮತ್ತಿತ್ತರು ವಿಶೇಷ ಅತಿಥಿಗಳಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕರ್ನಾಟಕದ ಪ್ರಮುಖ ಕೌಶಲಭಿವೃದ್ಧಿ ಕೇಂದ್ರ ಬೆಂಗಳೂರಿನ ಕ್ಯಾಡ್‌ನೆಸ್ಟ್ (CADD Nest Private Limited Bengaluru)ಗೆ ತನ್ನ ಎರಡನೇ ವಾರ್ಷಿಕೋತ್ಸವದ ಸಂಭ್ರಮವನ್ನು “ಪುನೀತ ನಮನ” ಹೆಸರಿನಲ್ಲಿ ಕನ್ನಡದ ಪವರ್‌ಸ್ಟಾರ್ ಡಾ. ಪುನೀತ್ ರಾಜ್ ಕುಮಾರ್ ರವರಿಗೆ ಗೆ ಅರ್ಪಿಸಿತು “ಕೌಶಲ ತರಬೇತಿ ಕ್ಷೇತ್ರದಲ್ಲಿ ಹತ್ತು ಹಲವು ವರ್ಷಗಳ ಅನುಭವದಿಂದ ಎರಡು ವರ್ಷದ ಹಿಂದೆ ಯುಗಾದಿ…
ಬೆಂಗಳೂರು: ಮನೆಯ ಪುಟ್ಟ ಮಕ್ಕಳಿಗೆ ಬೇಸಿಗೆ ರಜೆ ಆರಂಭವಾಗಿದೆ. ರಜೆಯಲ್ಲಿ ಮಕ್ಕಳನ್ನು ಬೇಸಿಗೆ ಶಿಬಿರಕ್ಕೆ ಕಳುಹಿಸುವ ಯೋಜನೆ ನಿಮ್ಮಲ್ಲಿರಬಹುದು. ಬೇಸಿಗೆ ರಜೆಯಲ್ಲಿ ಆಡುತ್ತ, ನಲಿಯುತ್ತ ವಿವಿಧ ಕೌಶಲ್ಯಗಳನ್ನು ಕಲಿತರೆ ಮಕ್ಕಳು ಇನ್ನಷ್ಟು ಬುದ್ಧಿವಂತರಾಗುತ್ತಾರೆ. ನಿಮಗೆ ಗೊತ್ತೆ, ಮಕ್ಕಳು ಹೇಗಿದ್ದರೂ ಕ್ಯೂಟ್. ಮಕ್ಕಳಲ್ಲಿ ಹಲವು ಟ್ಯಾಲೆಂಟ್ ಇದ್ರೆ ಇನ್ನಷ್ಟು ಕ್ಯೂಟ್. ಸ್ಕಿಲ್ಸ್ ಕಲಿತ ಮಕ್ಕಳಂತೂ ತುಂಬಾ ಕ್ಯೂಟ್. ಇದೇ ಕಾರಣಕ್ಕೆ ಮಕ್ಕಳಿಗೆ ವಿವಿಧ ಸ್ಕಿಲ್ಸ್ ಕಲಿಸಲು ಎಲ್ಲರೂ ಬಯಸುತ್ತಾರೆ. ಬೇಸಿಗೆ ಶಿಬಿರದಲ್ಲಿ ಮಕ್ಕಳ ಬುದ್ಧಿಗೆ ಒರೆಹಚ್ಚುವ, ಮಕ್ಕಳ ಸ್ವಂತ ಯೋಚನಾ ಶಕ್ತಿ ಹೆಚ್ಚಿಸುವ, ಮಕ್ಕಳನ್ನು ಇನ್ನಷ್ಟು ಬುದ್ಧಿವಂತರಾಗಿಸುವಂತಹ ವಾತಾವರಣ ಅತ್ಯಂತ ಮುಖ್ಯ. ಇಂತಹ ಹತ್ತು ಹಲವು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಬೆಂಗಳೂರಿನ ಬೃಹತ್ ಬೇಸಿಗೆ ಶಿಬಿರ ಆರಂಭವಾಗಿದೆ. ಆ ಬೇಸಿಗೆ ಶಿಬಿರದ ಹೆಸರು ಕಿಡ್ಸ್‌ನೆಸ್ಟ್. ಇದು ಬೆಂಗಳೂರು ಬೃಹತ್ ಕೌಶಲ ತರಬೇತಿ ಕೇಂದ್ರವಾದ ಕ್ಯಾಡ್‌ನೆಸ್ಟ್‌ನ ಉಪಕ್ರಮ. ವಿವಿಧ ಬ್ಯಾಚ್‌ಗಳಿಗೆ ಈಗಾಗಲೇ ನೋಂದಣಿ ಆರಂಭವಾಗಿದೆ. ಕಿಡ್ಸ್‌ನೆಸ್ಟ್ ಬೇಸಿಗೆ ಶಿಬಿರದಲ್ಲಿ ಏನು ಕಲಿಯಬಹುದು? ಈ ಬೇಸಿಗೆ ಶಿಬಿರ…