ವೃತ್ತಿ ಮತ್ತು ವೈಯಕ್ತಿಕ ಜೀವನದಲ್ಲಿ ಯಶಸ್ಸು ಪಡೆಯುವುದು ಪ್ರತಿಯೊಬ್ಬರ ಕನಸು. ಯಶಸ್ಸು ಪಡೆಯಲು ಬೇಕಿರುವುದು ಏನು? ಹಣವೇ? ಶೈಕ್ಷಣಿಕ ಅರ್ಹತೆಗಳೇ? ಅಥವಾ ಮಹಾತ್ವಕಾಂಕ್ಷೆಯೇ? ಇವೆಲ್ಲವೂ ಅವಶ್ಯಕ ನಿಜ. ಆದರೆ, ಯಶಸ್ಸು ಪಡೆಯಲು ಇಷ್ಟೇ ಸಾಕಾಗದು. ಇಂದಿನ ಕನ್ನಡ ಕ್ಯಾಡ್‌ನೆಸ್ಟ್ ಲೇಖನದಲ್ಲಿ ಯಶಸ್ಸು ಪಡೆಯಲು ಅತ್ಯಮೂಲ್ಯವಾದ ಅಂಶವೊಂದರ ಬಗ್ಗೆ ಚರ್ಚಿಸೋಣ. ಅದು ಟೈಮ್ ಮ್ಯಾನೇಜ್ ಮೆಂಟ್ ಅಥವಾ ಸಮಯದ ನಿರ್ವಹಣೆ. ಜಗತ್ತು ಈಗ ಕೊರೊನಾ ಸಂಕಷ್ಟದಲ್ಲಿದೆ. ಬಹುತೇಕರು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ಮನೆಯಿಂದಲೇ ಓದುತ್ತಿದ್ದಾರೆ. (ನೀವು ಆನ್‌ಲೈನ್ ಸರ್ಟಿಫಿಕೇಷನ್ ಕೋರ್ಸ್‌ಗಳಿಗೆ ಸೇರಲು ಬಯಸಿದರೆ ಕ್ಯಾಡ್‌ನೆಸ್ಟ್ ಸಹಾಯವಾಣಿ ಸಂಪರ್ಕಿಸಬಹುದು). ಈಗಿನ ವರ್ಕ್ ಫ್ರಂ ಹೋಂ ಟ್ರೆಂಡ್ ಗಮನಿಸಿದರೆ ಕಂಪನಿಗಳು ಕೊರೊನಾ ಮುಗಿದ ಬಳಿಕವೂ ನಿಮ್ಮ ಮನೆಯನ್ನೇ ಅವರ ಆಫೀಸ್ ಆಗಿಸಬಹುದು. ಭವಿಷ್ಯದಲ್ಲಿ ನಿಮ್ಮ ಉದ್ಯೋಗ ಸ್ಥಳವು ನಿಮ್ಮ ಮನೆಯೇ ಆಗಿರಬಹುದು. ಆಫೀಸ್ ಆಗಲಿ, ಮನೆಯಿಂದ ಮಾಡುವ ಕೆಲಸವಾಗಲಿ ಅಥವಾ ನಿಮ್ಮ ಸ್ವಂತ ಉದ್ಯಮವಾಗಲಿ. ಅಲ್ಲಿ ಯಶಸ್ಸು ಪಡೆಯಬೇಕಿದ್ದರೆ ನೀವು ಸಮಯದ ನಿರ್ವಹಣೆ ಕಲಿಯಲೇ…
Author: Prakash Gowda
ಈಗಿನ ಪೀಳಿಗೆಯಲ್ಲಿ ನಾವು ಕಲಿತಿರುವ ಗಾತ್ರಕ್ಕಿಂತ ಕಲಿಯಬೇಕಾಗಿರುವ ಗಾತ್ರವೇ ಹೆಚ್ಚು. ಇದರ ಉತ್ತಮ ಉಧಾಹರಣೆ ಎಂದರೆ ಸಿವಿಲ್ ಇಂಜೀನೀರಿಂಗ್ ಎಂದು ಹೇಳಬಹುದು .ಹೌದು ಅನಾಧಿ ಕಾಲದಲ್ಲಿ ತಂತ್ರಜ್ಞಾನದ ಬಳಕೆ ಇಲ್ಲದಿದ್ದರೂ ನಮ್ಮ ಪೂರ್ವಜರು ಅತ್ಯುತ್ತಮವಾದ ಕಟ್ಟಡಗಳನ್ನು ಹಾಗು ಸ್ಮಾರಕಗಳ್ಳನು ನಿರ್ಮಿಸಿ ಅವರ ಹೆಸರುಗಳನ್ನೂ ಇತಿಹಾಸದಲ್ಲಿ ಉಳಿಸಿಕೊಂಡಿದ್ದಾರೆ. ಇಷ್ಟಕ್ಕೆ ಸಿವಿಲ್ ಇಂಜಿನಿಯರ್ ಗಳು ಕೈ ಕಟ್ಟಿ ಕುಳಿತಿಲ್ಲ. ತಂತ್ರಜ್ಞಾನ ಮುಂದುವರೆದಂತೆ ಅವರ ಕೊಡುಗೆ ಕೂಡ ಅಪಾರವಾಗುತ್ತ ಆಕಾಶವನ್ನೇ ಮುಟ್ಟುವಂತಹ ಕಟ್ಟಡಗಳೊಂದಿಗೆ ದಿಟ್ಟ ಹೆಜ್ಜೆ ಇಂದ ಮುಂದೆ ಬರುತಿದ್ದಾರೆ. ಟ್ರೆಂಡ್ ಆಫ್ ಟೆಕ್ನಾಲಜಿ ! ಪೀಳಿಗೆ ಬದಲಾಗುತ್ತ ನಮ್ಮ ಟೆಕ್ನಾಲಜಿ ಕೂಡ ಬದಲಾಗುವುದು ಸಹಜ, ಹೀಗಿರುವಾಗ ಅನಾಧಿ ಕಾಲದಂತೆ ದೊಡ್ಡ ಹಾಳೆ ಗಳಲ್ಲಿ ಕಟ್ಟಡದ ಚಿತ್ರಣವನ್ನು ಬಿಡಿಸಿ ಗ್ರಾಹಕರಿ ಗೆ ಕೊಟ್ಟರೆ ಈಗಿನ ಪೀಳಿಗೆಯು ತಿರಸ್ಕರಿಸುವ ಸಾಧ್ಯತೆ ಹೆಚ್ಚು . ಇಂತಹ ಸ್ಥಿತಿಯಲ್ಲಿ ನಮ್ಮ ಸಹಾಯಕ್ಕೆ ಬರುವುದು ಕ್ಯಾಡ್ ಸಾಫ್ಟ್‌ವೇರ್ ಗಳು ,ಈ ಸಾಫ್ಟ್‌ವೇರ್ ಗಳು ನಮ್ಮ ಕೆಲಸಗಳನ್ನು ಅಚ್ಚುಕಟ್ಟಾಗಿ ಹಾಗು ಕಡಿಮೆ ಅವಧಿಯಲ್ಲಿ…
ಸ್ನೇಹ ಝಣ ಝಣ ಕಾಂಚಾಣ – ಯಾರಿಗೆ ತಾನೆ ಬೇಡ ಹೇಳಿ. ಹಣ ಅಂದ್ರೆ ಹೆಣಾನು ಬಾಯಿ ಬಿಡೋ ಕಾಲ ಇದು. ಯಾಕೆ ಅಂದ್ರೆ ಹಣಕ್ಕೆ ಅಷ್ಟು ಮಹತ್ವಾ ಇದೆ. ನಿಮಗೆ ಹಣ ಬೇಕು ಅಂದರೆ ಮೊದಲು ವಿದ್ಯೆ-ಬುದ್ದಿ ಇರಬೇಕು, ಅದಕ್ಕೆ ತಕ್ಕ ಕೆಲಸ ಸಿಗಬೇಕು. ನಮ್ಮ ಕೆಲಸ ಬೇಕು ಅಂದ್ರೆ ಕೇವಲ ಡಿಗ್ರಿ ಅಥವಾ ವಿದ್ಯೆ ಇದ್ರೆ ಸಾಲದು. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೆಲಸ ಸಿಗಬೇಕು ಅಂದ್ರೆ ಮೊದಲು ವಿದ್ಯೆ, ನಂತರ ಬುದ್ದಿ, ಜೊತೆಗೆ ಒಂದಷ್ಟು ಕೌಶಲ್ಯಗಳು ಇರಬೇಕು. ಇಲ್ಲ ನಾನು ಲಂಚ ಕೊಟ್ಟು ಕೆಲ್ಸಕ್ಕೆ ಸೇರ್ಕೋತೀನಿ, ಅಂತ ನೀವೇನಾದ್ರು ಭ್ರಮಾತ್ಮಕ ಜಗ್ಗತ್ತಿನಲ್ಲಿ ಇದ್ರೆ ದಯವಿಟ್ಟು ಆ ತರದ ಭ್ರಮೆ ಯಿಂದ ಹೊರಗೆ ಬನ್ನಿ. ಇದು ಡಿಜಿಟಲೈಜ್ಡ್ ಇಂಡಿಯಾ, ದಿನದಿಂದ ದಿನಕ್ಕೆ ಕಾಲ ಬದಲಾಗುತ್ತಿದೆ. ನಾವು ಅಪ್ಡೇಟ್ ಆಗದೆ ನಾನು ಈ ಸ್ಪರ್ಧಾತ್ಮಕ ಜಗತ್ತಿನ ಸ್ಪರ್ಧೆಯಲ್ಲಿ ಗೆಲ್ಲಬಲ್ಲೆ ಅಂದು ಕೊಂಡ್ರೆ ಅದು ತಪ್ಪು. ಭಾರತದ ಸದ್ಯ ಪರಿಸ್ಥಿತಿಯಲ್ಲಿ ಒಟ್ಟಾರೆಯಾಗಿ ಶೇಕಡ 23.5%…
ಕೋವಿಡ್-೧೯ ಸಂಕಷ್ಟ ಕಾಲದಲ್ಲಿ ಏನು ಓದುವುದು, ಯಾವ ಕೋರ್ಸ್ ಮಾಡುವುದು, ನಮ್ಮ ಭವಿಷ್ಯ ಏನಾಗುತ್ತದೆಯೋ ಎಂಬ ಆತಂಕ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಸಹಜವಾದದ್ದು. ಇಂತಹ ಸಮಯದಲ್ಲಿ ಕ್ಯಾಡ್‌ನೆಸ್ಟ್ ಸಂಸ್ಥೆಯು ಆನ್‌ಲೈನ್ ಮೂಲಕ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡುತ್ತಿದೆ.
ಶರದ್ ಕೋವಿಡ್ -19 ಹೆಮ್ಮಾರಿಯ ಬಗ್ಗೆ ಗೊತ್ತಿಲ್ಲದೆ ಇರುವವರು ಯಾರು ? ನಾಲ್ಕು ತಿಂಗಳುಗಳಿಂದ ಇಡೀ ವಿಶ್ವವನ್ನೇ ಕಾಡುತ್ತಿರುವ ಈ ಕಾಯಿಲೆ ಇನ್ನೂ ತನ್ನ ಕ್ರೂರ ಛಟವನ್ನು ಬಿಟ್ಟಿಲ್ಲ. ಇದಕ್ಕೆ ಬಲಿಯಾದವರ ಸಂಖ್ಯೆ ಸುಮಾರು ಐನೂರು ಸಾವಿರ. ಲೋಕದ ಪ್ರತೀ ಮೂಲೆಗೆ ವ್ಯಾಪಿಸಿದ ಕೋವಿಡ್ ಮಾನವರೆಲ್ಲರ ಜೀವನವನ್ನು ಬದಲಿಸಿದೆ. ಈಗ “N-95 ಮಾಸ್ಕ್ ” ಅಥವಾ ಯಾವುದೇ ಮುಖವಾಡ ಧರಿಸದೇ ಯಾರೂ ಆಚೆ ಕಾಲಿಡಲು ಅಸಾಧ್ಯ. ಆಚೆ ಬಂದವರು ಸಾಮಾಜಿಕ ಅಂತರ ಪಾಲಿಸೋದು ಅಗತ್ಯ. ಸಮಯೋಚಿತವಾಗಿ ಕೈ ತೊಳೆಯುವುದು ಈಗ ಒಂದು ಆರೋಗ್ಯಕರ ಅಭ್ಯಾಸ ಅಷ್ಟೇ ಅಲ್ಲದೇ ದೈನಂದಿನ ಜೀವನದಲ್ಲಿ ಅವಶ್ಯವಾಗಿದೆ. ಪರಿಸ್ಥಿತಿ ಹೀಗಿದ್ದಾಗ ಕೆಲವು ಸಾಮಾಜಿಕ ಕಾರ್ಯಗಳು ಅನಿರ್ಧಿಷ್ಟ ನಿಲುಗಡೆಗೆ ಬರುವುದು ಸಹಜ . ಅವುಗಳಲ್ಲಿ ಶಿಕ್ಷಣ ಒಂದಾಗಿದೆ. ಪ್ರಾಥಮಿಕ ಶಾಲೆಯಿಂದ ಹಿಡಿದು ಕಲಾಶಾಲೆ, ಟ್ರೈನಿಂಗ್ ಇನ್ಸ್ಟಿಟ್ಯೂಟ್ ಗಳೆಲ್ಲ ತಮ್ಮ ವಿದ್ಯಾರ್ಥಿಗಳಿಗೆ ದೂರವಾಗಿವೆ. ಕ್ಲಾಸ್ರೂಮ್ಗಳಲ್ಲಿ ಈ ವೈರಸ್ ಹರಡುವ ಅವಕಾಶ ಹೆಚ್ಚಾಗಿರುವುದರಿಂದ ಸರ್ಕಾರವೂ ಶೈಕ್ಷಣಿಕ ಸ್ಥಾಪನೆಗಳಿಗೆ ಮತ್ತೆ ತಮ್ಮ ಬಾಗಿಲುಗಳನ್ನು ತೆರೆಯಲು…
ಸ್ನೇಹಾ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಪದ ಪ್ರೇರಣೆ. ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಏನನ್ನಾದರೂ ಸಾಧಿಸಲು ಪ್ರೇರೇಪಿಸುವುದೇ, ಪ್ರೋತ್ಸಾಹಿಸುವುದೆ ಈ ಪ್ರೇರಣೆ.ಲ್ಯಾಟಿನ್ ನ ‘ಎಮೋವರ್’ ಎಂಬ ಪದದಿಂದ ಜನನಗೊಂಡಿರುವುದೆ ಈ ಪ್ರೇರಣಾ ಎಂಬ ಪದ. ಅಸಾಧ್ಯ ಎಂಬ ಮೂರಕ್ಷರದ ಮೂಢನಂಬಿಕೆಗೆ ಬರೆಯೆಳೆಯುವ ಸತ್ಕಾರ್ಯ ಮಾಡಿ ಸಾಧ್ಯ ಎಂಬ ಎರಡಕ್ಷರದ ಬೆಳಕು ಪ್ರತಿಯೊಬ್ಬರಲ್ಲೂ ಮೂಡಿಸುವುದೇ ಪ್ರೇರಣೆ. ಉತ್ತರ ಇಲ್ಲದಿರುವ ಅಂದರೆ, ಹೇಗಪ್ಪಾ ಕೆಲಸ ಮಾಡೋದು?, ಈ ಕೆಲ್ಸ ನನ್ನಿಂದ ಸಾಧ್ಯನಾ? ನನ್ನಿಂದ ಈ ಗೇಮ್ ಗೆಲ್ಲೋಕೆ ಆಗುತ್ತಾ?, ನಾನು ಸಾಧನೆ ಮಾಡಬಹುದಾ? ಈ ರೀತಿಯ ಅದೆಷ್ಟೋ ಗೊಂದಲಗಳಿಗೆ, ಪ್ರಶ್ನೆಗಳಿಗೆ ಪ್ರೇರಣೆ ಉತ್ತರವನ್ನು ಸಹ ನೀಡುತ್ತದೆ.ನಿಮ್ಮ ಜೀವನ ಶೈಲಿ, ಸಂಸ್ಕೃತಿ, ಸುತ್ತಮುತ್ತಲಿನ ಸಮಾಜ ಹಾಗು ಸಹಜತೆ ಇವೆಲ್ಲವೂ ಪ್ರೇರಣೆಯ ಮುಖ್ಯ ಅಂಶಗಳು. ಈ ನಾಲ್ಕು ಅಂಶಗಳು ಒಬ್ಬ ವ್ಯಕ್ತಿಯ ವ್ಯಕ್ತಿತ್ವಾ ವೃದ್ಧಿಸುವ ಲಾಂಛನಗಳಾಗಿವೆ ಇದಕ್ಕೆ ಮುಖ್ಯ ಅಡಿಪಾಯವೇ ಪ್ರೇರಣೆಮನೋವಿಜ್ಞಾನದಲ್ಲೂ ಪ್ರೇರಣೆಗೆ ಮಹತ್ವದ ಸ್ಥಾನವಿದೆ. ಬಹಳಷ್ಟು ಮನೋವಿಜ್ನ್ಯಾನಿಗಳು ಹೇಳೋ ಪ್ರಕಾರ, ಒಬ್ಬ ವ್ಯಕ್ತಿಯ…
ಕನ್ನಡಕ್ಯಾಡ್‌ನೆಸ್ಟ್ ಕರಿಯರ್ ಗೈಡ್‌ಗೆ ಸ್ವಾಗತ. ಇಂದು ನಾವು ಬಹುಬೇಡಿಕೆಯ ಒಂದು ಸ್ಕಿಲ್ ಬಗ್ಗೆ ಚರ್ಚಿಸೋಣ. ಆ ಸ್ಕಿಲ್ ಹೆಸರು “ಫುಲ್ ಸ್ಟಾಕ್ ವೆಬ್ ಡೆವಲಪರ್”. ಅಮ್ಮ ಅಥವಾ ಹೆಂಡತಿ ಎಂಬ ವ್ಯಕ್ತಿತ್ವವನ್ನು ಕಲ್ಪಿಸಿಕೊಳ್ಳಿ. ಬೆಳಗ್ಗೆದ್ದು ರುಚಿರುಚಿಯಾದ ತಿಂಡಿ ಮಾಡುತ್ತಾಳೆ. ಮಕ್ಕಳನ್ನು ಶಾಲೆಗೆ ಸಿದ್ಧಪಡಿಸುತ್ತಾಳೆ. ಮಧ್ಯಾಹ್ನದ ಊಟ, ರಾತ್ರಿಯ ಊಟ, ತನ್ನ ಉದ್ಯೋಗ, ಬಿಡುವು ಸಿಕ್ಕರೆ ಇನ್ನೆನ್ನಾದರೂ ಕೆಲಸ… ಹೀಗೆ “ಮನೆʼʼ ಎಂಬ ವಿಷಯಕ್ಕೆ ಸಂಬಂಧಪಟ್ಟ ಎಲ್ಲಾ ಕೆಲಸವನ್ನು ಮಾಡುತ್ತಾಳೆ. ಹೀಗಾಗಿ ಅಮ್ಮ ಅಥವಾ ಹೆಂಡತಿ ಸಹ ಫುಲ್ ಸ್ಟಾಕ್ ಉದ್ಯೋಗಿ! ವೆಬ್‌ಸೈಟ್ ಫ್ರಂಟ್ ಎಂಡ್ ಡೆವಲಪರ್, ವೆಬ್‌ಸೈಟ್ ಬ್ಯಾಕೆಂಡ್ ಡೆವಲಪರ್, ವೆಬ್ ಸೈಟ್ ಮ್ಯಾನೇಜರ್… ಹೀಗೆ ಒಂದು ವೆಬ್ಸೈಟ್ ಪ್ರಾಜೆಕ್ಟ್ ಮಾಡಲು ವಿವಿಧ ಕೌಶಲಗಳನ್ನು ಹೊಂದಿರುವ ಹಲವು ಜನರ ಅವಶ್ಯಕತೆ ಇರುತ್ತದೆ. ಈ ರೀತಿ ಹಲವು ಕೌಶಲ ಹೊಂದಿರುವ ಹಲವು ಜನರಿಗಿಂತ ಎಲ್ಲಾ ಕೌಶಲ ಹೊಂದಿರುವ ಒಬ್ಬ ವ್ಯಕ್ತಿ ಇದ್ದರೆ ಹೇಗಿರುತ್ತದೆ? ಅವನೇ ಸಕಲಕಲಾವಲ್ಲಭ! ಅವನೇ ಫುಲ್ ಸ್ಟಾಕ್ ಡೆವಲಪರ್. ಹಲವು…
ಸ್ನೇಹಿತರೇ ನಮಸ್ಕಾರ. ನಾನು ಪ್ರಕಾಶ್ ಗೌಡ ಎಚ್. ಎಂ. ಕನ್ನಡ ಕ್ಯಾಡ್ ನೆಸ್ಟ್ ಕಾಂ ನಿರ್ದೇಶಕ. ಬೆಂಗಳೂರಿನ ಬಸವನಗುಡಿ, ರಾಜಾಜಿನಗರ, ಶೇಷಾದ್ರಿಪುರಂ, ಮಲ್ಲೇಶ್ವರಂನಲ್ಲಿರುವ ಕ್ಯಾಡ್ ನೆಸ್ಟ್ ನ ನಿರ್ದೇಶಕ. ಈಗಾಗಲೇ ನಮ್ಮ ಸಂಸ್ಥೆಗೆ ರಾಜ್ಯದ ವಿವಿಧ ಮೂಲೆಮೂಲೆಗಳಿಂದ ವಿದ್ಯಾರ್ಥಿಗಳು ಬಂದು ಭಾಷಾ ಮತ್ತು ತಂತ್ರಜ್ಞಾನ ಕೌಶಲಗಳು ಒಳಗೊಂಡಂತೆ ವಿವಿಧ ಸ್ಕಿಲ್‌ಗಳನ್ನು ಕಲಿಯುತ್ತಿದ್ದಾರೆ, ಕಲಿತಿದ್ದಾರೆ. ಈ ಮೂಲಕ ತಮ್ಮ ಕನಸಿನ ಉದ್ಯೋಗ ಪಡೆಯಲು, ಕರಿಯರ್‌ನಲ್ಲಿ ಮೇಲ್ದರ್ಜೆಗೆ ಏರಲು ವಿದ್ಯಾರ್ಥಿಗಳಿಗೆ ಬೆಂಬಲ ನೀಡುತ್ತ ಬಂದಿದ್ದೇವೆ. ರಾಜ್ಯದ ವಿದ್ಯಾರ್ಥಿಗಳು, ಮುಖ್ಯವಾಗಿ ಕನ್ನಡ ವಿದ್ಯಾರ್ಥಿಗಳು ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿವಿಧ ಔದ್ಯೋಗಿಕ ಕೌಶಲಗಳನ್ನು ತಮ್ಮದಾಗಿಸಿಕೊಳ್ಳುವಂತಾಗಲು ಒಂದಿಷ್ಟು ಮಾರ್ಗದರ್ಶನ ನೀಡಬೇಕೆಂಬ ಸದುದ್ದೇಶದಿಂದ ಕನ್ನಡ ಕ್ಯಾಡ್ ನೆಸ್ಟ್ .ಕಾಂ ಅನ್ನು ನಿರ್ಮಿಸಲಾಗಿದೆ. ರಾಜ್ಯದಲ್ಲಿರುವ ಶಾಲಾ ಕಾಲೇಜುಗಳಲ್ಲಿ ಈಗ ನೂರಾರು ಬಗೆಯ ಕೋರ್ಸ್‌ಗಳು, ಪಠ್ಯಕ್ರಮಗಳು ಇವೆ. ಇವುಗಳಲ್ಲಿ ಬಹುತೇಕ ಕೋರ್ಸ್‌ಗಳು ವಿದ್ಯಾರ್ಥಿಗಳಿಗೆ ಉದ್ಯೋಗ ದೊರಕಿಸಿಕೊಡಲು ಬೆಂಬಲ ನೀಡುತ್ತಿಲ್ಲವೆನ್ನುವುದು ಅಷ್ಟೇ ಸತ್ಯ. ಟೆಕ್ ಜಗತ್ತು ದಿನೇದಿನೇ ಬದಲಾಗುತ್ತಿದ್ದು, ಪ್ರತಿದಿನ ಅಪ್‌ಡೇಟ್ ಆಗುತ್ತಿದೆ. ಕೆಲವು…