Author: Prakash Gowda

ನಾನು ಪ್ರಕಾಶ್ ಗೌಡ ಎಚ್. ಎಂ. ಕನ್ನಡ ಕ್ಯಾಡ್‌ನೆಸ್ಟ್‌ .ಕಾಂ ನಿರ್ದೇಶಕ. ಬೆಂಗಳೂರಿನ ಬಸವನಗುಡಿ, ರಾಜಾಜಿನಗರ, ಶೇಷಾದ್ರಿಪುರಂ, ಮಲ್ಲೇಶ್ವರಂ. ರಾಜರಾಜೇಶ್ವರಿ ನಗರದಲ್ಲಿರುವ ಕ್ಯಾಡ್‌ನೆಸ್ಟ್‌ ನ ನಿರ್ದೇಶಕ.

ಕನ್ನಡ ಕ್ಯಾಡ್‌ನೆಸ್ಟ್‌‌ ಓದುಗರಿಗೆ ನಮಸ್ಕಾರ. ಕನ್ನಡ ಕ್ಯಾಡ್‌ನೆಸ್ಟ್‌‌ ವಿದ್ಯಾರ್ಥಿಗಳಿಗೆ ಮತ್ತು ಇತರೆ ಓದುಗರಿಗೆ ಪ್ರತಿನಿತ್ಯ ಬಳಸಲು ಉಪಯುಕ್ತವಾದ ವಿವಿಧ ಗೂಗಲ್‌ ಟೂಲ್‌ಗಳನ್ನು ಇಲ್ಲಿ ಪರಿಚಯಿಸಲಾಗುತ್ತಿದೆ. ಇದು ನಿಮ್ಮ ವಿದ್ಯಾರ್ಥಿ ಜೀವನವನ್ನು ಅಥವಾ ವೃತ್ತಿಪರ ಜೀವನವನ್ನು ಇನ್ನಷ್ಟು ಸರಾಗಗೊಳಿಸಲಿದೆ. ತಂತ್ರಜ್ಞಾನ ಜಗತ್ತಿನಲ್ಲಿ ಸಾಧನವೊಂದನ್ನು ಸಮಗ್ರವಾಗಿ ಬಳಕೆ ಮಾಡಿಕೊಂಡರೆ ಪ್ರಯೋಜನ ಹೆಚ್ಚು ದೊರಕುತ್ತದೆ. ಉದಾಹರಣೆಗೆ ನೀವು ವಾಟ್ಸಾಪ್‌ನಲ್ಲಿ ಕೇವಲ ಚಾಟಿಂಗ್, ವಿಡಿಯೋ, ಫೋಟೊ ಕಳುಹಿಸುವುದು, ಸ್ಟೇಟಸ್‌ ಹಾಕುವುದು, ಇತರರ ಸ್ಟೇಟಸ್‌ ನೋಡುವುದು ಇತ್ಯಾದಿಗಳನ್ನು ಮಾತ್ರ ನೋಡಬಹುದು. ಆದರೆ, ವಾಟ್ಸಾಪ್‌ನಲ್ಲಿ ಇನ್ನೂ ಸಾಕಷ್ಟು ಒಳ್ಳೆಯ ಫೀಚರ್‌ಗಳಿವೆ. ಈಗ ಬಹುತೇಕ ಕಂಪನಿಗಳು ವಾಟ್ಸಾಪ್‌ ಮೂಲಕವೇ ವರ್ಕ್‌ ಫ್ರಂ ಹೋಂನಲ್ಲಿರುವವರ ಜೊತೆ ವಿವಿಧ ಟಾಸ್ಕ್ ಗಳನ್ನು ಮಾಡುತ್ತಿದೆ. ಇದೇ ರೀತಿ ನೀವು ಸ್ಮಾರ್ಟ್‍ಫೋನ್ ನಲ್ಲಿ ಕೇವಲ ಕಾಲ್ ಮತ್ತು ಮೆಸೆಜ್ ಮಾತ್ರ ಮಾಡುತ್ತೀರಿ ಎಂದಿರಲಿ. ಈ ಕೆಲಸವನ್ನು ಸಾಮಾನ್ಯ ಫೋನ್‍ನಲ್ಲಿಯೂ ಮಾಡಬಹುದಾಗಿದೆ. ಇದರ ಬದಲು ಅದರಲ್ಲಿರುವ ಆ್ಯಪ್‍ಗಳನ್ನು ಬಳಸುವುದು, ಗೂಗಲ್ ಮ್ಯಾಪ್, ಗೂಗಲ್ ಡ್ರೈವ್ ಇತ್ಯಾದಿಗಳನ್ನು ಬಳಸಿದರೆ ಹಲವು…

Read More

ಕೊರೊನಾ ಬಳಿಕದ ಜಗತ್ತು ಹೆಚ್ಚು ಆನ್‌ಲೈನ್‌ಮಯವಾಗಿರಲಿದೆ. ಆನ್‌ಲೈನ್‌ ಖರೀದಿ, ಮಾರಾಟವು ಈ ಹಿಂದಿಗಿಂತಲೂ ಹೆಚ್ಚಿರಲಿದೆ. ಇದೇ ಕಾರಣಕ್ಕೆ ಎಲ್ಲರೂ ಆನ್‌ಲೈನ್‌ ಅಂಗಡಿ ತೆರೆಯಲು ಉತ್ಸುಕರಾಗಿದ್ದಾರೆ. ವಿದ್ಯಾರ್ಥಿಗಳು ಸಹ ಇಂತಹ ಸಮಯದಲ್ಲಿ ಆನ್‌ಲೈನ್‌ ಜಗತ್ತಿಗೆ ಪೂರಕವಾದ ಕೋರ್ಸ್‌ ಕಲಿಯಬೇಕು. ಇದೇ ಕಾರಣಕ್ಕೆ ಕನ್ನಡ ಕ್ಯಾಡ್‌ನೆಸ್ಟ್‌‌ನ ಈ ಸಂಚಿಕೆಯಲ್ಲಿ ಇ-ಕಾಮರ್ಸ್‌ ಗೈಡ್‌ ನೀಡಲಾಗಿದೆ. ಒಂದು ಕತೆ ಕೇಳಿ ಬೆಂಗಳೂರಲ್ಲಿ ಇಬ್ರು ಫ್ರೆಂಡ್ಸ್ ಇದ್ರು. ಅವರಿಗೆ ದೊಡ್ಡ ಕಂಪನಿಯಲ್ಲಿ ಹಲವು ಲಕ್ಷ ರೂಪಾಯಿ ವೇತನದ ಉದ್ಯೋಗವಿತ್ತು. ಆದರೆ, ಅವರು ಕನಸು ಕಣ್ಣಿನ ಹುಡುಗರು. ಸ್ವಂತ ಇ-ಕಾಮರ್ಸ್‌ ಕಂಪನಿ ಆರಂಭಿಸಲು ಉದ್ದೇಶಿಸಿದರು. ಆಗ ಆನ್‌ಲೈನ್‌ ಮಾರಾಟ ಈಗಿನಷ್ಟು ಫೇಮಸ್‌ ಆಗಿರಲಿಲ್ಲ. ಇವರು ಆನ್‌ಲೈನ್‌ನಲ್ಲಿ ಬುಕ್‌ ಸ್ಟೋರ್‌ ಆರಂಭಿಸಿದರು. ಎಲ್ಲರೂ ಸಪ್ನ ಬುಕ್‌ ಹೌಸ್‌, ಸ್ನೇಹಬುಕ್‌ ಹೌಸ್‌ ಎಂದು ಪುಸ್ತಕದಂಗಡಿಗಳಿಗೆ ಹೋಗಿ ಖರೀದಿಸಿಸುತ್ತಿದ್ದರು, ಹೊರತು ಇವರ ಆನ್‌ಲೈನ್‌ ಅಂಗಡಿಗೆ ಯಾರೂ ಬರಲಿಲ್ಲ. ಆದರೆ, ಈ ಫ್ರೆಂಡ್ಸ್‌ ನಿರಾಶೆ ಅನುಭವಿಸಲಿಲ್ಲ. ಒಳ್ಳೆಯ ದಿನಕ್ಕಾಗಿ ಕಾದರು. ಎಷ್ಟೋ ದಿನ ಕಳೆದ ಬಳಿಕ…

Read More

ಕನ್ನಡ ಕ್ಯಾಡ್‌ನೆಸ್ಟ್‌ ಕರಿಯರ್ ಗೈಡ್ ಮಾಲಿಕೆಯಲ್ಲಿ ಇಂದು ಉದ್ಯೊಗ ಸಂದರ್ಶನದಲ್ಲಿ ಕೇಳಬಹುದಾದ ಪ್ರಮುಖ ಪ್ರಶ್ನೆಗಳನ್ನು ನೀಡಲಾಗಿದೆ. ಜೊತೆಗೆ, ಇಂತಹ ಪ್ರಶ್ನೆಗಳನ್ನು ಕೇಳಿದಾಗ ಹೇಗೆ ಉತ್ತರಿಸಬಹುದು ಎಂಬ ಸಂಭಾವ್ಯ ಉತ್ತರಗಳನ್ನೂ ಇಲ್ಲಿ ನೀಡಲಾಗಿದೆ. ಉದ್ಯೋಗ ಸಂದರ್ಶಕರು ಪ್ರತಿದಿನ ಹಲವು ಅಭ್ಯರ್ಥಿಗಳನ್ನು ಸಂದರ್ಶನ ನಡೆಸುತ್ತ ಇರುತ್ತಾರೆ. ಇವರಲ್ಲಿ ಕೇಳಲು ಪ್ರತಿನಿತ್ಯ ಹೊಸ ಪ್ರಶ್ನೆಗಳು ಇರುವುದಿಲ್ಲ. ಯಾವುದೋ ಕೆಲವು ಪ್ರಶ್ನೆಗಳು ಮಾತ್ರ ಹೊಸದಿರಬಹುದು. ಹೀಗಾಗಿ, ಯಾವುದೇ ಉದ್ಯೋಗ ಸಂದರ್ಶನಕ್ಕೆ ಹೋದಾಗ ಒಂದಿಷ್ಟು ಪ್ರಶ್ನೆಗಳನ್ನು ಮೊದಲೇ ನಿರೀಕ್ಷಿಸಬಹುದು. ನೀವು ಅಂತಹ ಪ್ರಶ್ನೆಗಳಿಗೆ ಉತ್ತರ ನೀಡುವುದು ಹೇಗೆಂದು ಮೊದಲೇ ಸಿದ್ಧತೆ ನಡೆಸಿಕೊಂಡರೆ ಉದ್ಯೋಗ ಪಡೆಯುವುದು ನಿಮಗೆ ಸುಲಭವಾದೀತು. Tell me about yourself ನಿಮ್ಮ ಬಗ್ಗೆ ಹೇಳುವುದು ಸುಲಭವಾದ ಪ್ರಶ್ನೆ ಎಂದುಕೊಂಡಿರಾ? ಆದರೆ, ಸಾಮಾನ್ಯ ಪ್ರಶ್ನೆಯಂತೆ ಕಂಡರೂ ಇದು ಅಸಾಮಾನ್ಯ ಪ್ರಶ್ನೆ. ನನ್ನ ಹೆಸರು ರಮೇಶ್. ನನ್ನ ತಂದೆ ಎಂಜಿನಿಯರ್. ಅಮ್ಮ ಹೌಸ್ ವೈಫ್. ನನ್ನ ಊರು ಮೈಸೂರು. ನಾನು ಕ್ಯಾಡ್‌ನೆಸ್ಟ್‌ ಬಸವನಗುಡಿಯಲ್ಲಿ ಅನಿಮೇಷನ್ ಓದಿದ್ದೇನೆ. ಹೀಗೆ ಹೇಳುತ್ತ…

Read More

ಕನ್ನಡ ಕ್ಯಾಡ್‌ನೆಸ್ಟ್‌‌ ಓದುಗರಿಗೆ ನಮಸ್ಕಾರ. ಈ ವೆಬ್‌ಸೈಟ್‌ನಲ್ಲಿ ನೀಡುವ ಸರಣಿ ಲೇಖನಗಳು ನಿಮಗೆ ಉಪಯುಕ್ತವಾಗುತ್ತಿವೆ ಎಂಬ ನಂಬಿಕೆಯೊಂದಿಗೆ ಇಂದು ಅತ್ಯಂತ ಆಸಕ್ತಿದಾಯಕವಾದ ವಿಷಯದೊಂದಿಗೆ ನಿಮ್ಮ ಮುಂದೆ ಬಂದಿದ್ದೇವೆ. ವಿದ್ಯಾರ್ಥಿಗಳು ಮತ್ತು ವೃತ್ತಿಪರರನ್ನು ಗಮನದಲ್ಲಿಟ್ಟುಕೊಂಡು “ನಿಮ್ಮ ಜೀವನದಲ್ಲಿ ಗುರಿ ನಿಗದಿಪಡಿಸಿಕೊಳ್ಳುವುದು ಹೇಗೆ’’ ಎಂಬ ವಿಷಯದ ಕುರಿತು ಇಲ್ಲಿ ಮಾಹಿತಿ ನೀಡಲಾಗಿದೆ. ನಿಮ್ಮ ಗುರಿಯೇನು? ಈ ಪ್ರಶ್ನೆಯನ್ನು ಎಲ್ಲರಿಗೂ ಯಾರಾದರೂ ಯಾವುದಾದರೂ ಸಂದರ್ಭದಲ್ಲಿ ಕೇಳಿರುತ್ತಾರೆ. ಒಬ್ಬ ಪ್ರಾಥಮಿಕ ಶಾಲಾ ವಿದ್ಯಾರ್ಥಿಯನ್ನೇ ಕೇಳಿ ನೋಡಿ. ನಿನ್ನ ಗುರಿಯೇನು ಎಂದರೆ “ಡಾಕ್ಟರ್‌ ಆಗಬೇಕು” “ಸೈಂಟಿಸ್ಟ್‌ ಆಗಬೇಕು” ಎಂದೆಲ್ಲ ಹೇಳುತ್ತಾರೆ. ಹೈಸ್ಕೂಲ್‌ ವಿದ್ಯಾರ್ಥಿಯ ಗುರಿ ಇನ್ನೊಂದು ರೀತಿ ಇರುತ್ತದೆ. ಹೀಗೆ ಬೆಳೆಯುತ್ತ ಹೋದಂತೆ ವ್ಯಕ್ತಿಯ ಗುರಿಯು ಬದಲಾಗುತ್ತ ಹೋಗುತ್ತದೆ, ಗುರಿಯ ಕುರಿತು ಸ್ಪಷ್ಟತೆ ದೊರಕುತ್ತ ಹೋಗುತ್ತದೆ. ಹೈಸ್ಕೂಲ್‌ ವಿದ್ಯಾರ್ಥಿಗೆ ಕಾಲೇಜಿಗೆ ಸೇರುವ ಗುರಿ, ಕಾಲೇಜು ವಿದ್ಯಾರ್ಥಿಗೆ ಎಂಜಿನಿಯರಿಂಗ್‌, ಮೆಡಿಕಲ್‌ ಇತ್ಯಾದಿ ಸೀಟು ಪಡೆಯುವ ಗುರಿ. ಓದು ಮುಗಿಸಿದ ಬಳಿಕ ಯಾವುದಾದರೂ ಒಳ್ಳೆಯ ವೇತನದ ಉದ್ಯೊಗ ಪಡೆಯುವ ಗುರಿ. ಐಎಎಸ್‌,…

Read More

ಈ ಕೊರೊನಾ ಸಂಕಷ್ಟದ ಸಮಯದಲ್ಲಿ ನೀವು ನಿಮ್ಮ ಕರಿಯರ್‌ ಕುರಿತು ಗಂಭೀರವಾಗಿ ಆಲೋಚಿಸುತ್ತಿದ್ದೀರಿ ಎಂದುಕೊಂಡಿದ್ದೇವೆ. ಈ ಸಮಯವನ್ನು ನಿಮ್ಮ ಕೌಶಲವೃದ್ಧಿಗೆ ಅಥವಾ ಅಪ್‌ ಸ್ಕಿಲ್‌ಗೆ ಬಳಸಿಕೊಳ್ಳುತ್ತಿದ್ದೀರಿ ಎಂದಿರಲಿ. ಗ್ರೇಟ್‌, ಅಪ್‌ಸ್ಕಿಲ್‌ ಬಗ್ಗೆ ಯೋಚಿಸುವಾಗ ನಿಮ್ಮ ಮುಂದಿರುವ ಅತ್ಯುತ್ತಮ ಆಯ್ಕೆ ಎಂದರೆ ಕ್ಯಾಡ್‌ನೆಸ್ಟ್‌‌ ಆನ್‌ಲೈನ್‌ ಕೋರ್ಸ್‌. ಈಗಾಗಲೇ ಸಾಕಷ್ಟು ವಿದ್ಯಾರ್ಥಿಗಳಿಂದ ಮೆಚ್ಚುಗೆ ಪಡೆದಿರುವ ಕ್ಯಾಡ್‌ನೆಸ್ಟ್‌‌ ಆನ್‌ಲೈನ್‌ ಕೋರ್ಸ್‌ಗಳು ನಿಮಗೆ ಸೂಕ್ತವಾಗಿದೆ. ಆದರೆ, ಎಲ್ಲಾ ಆನ್‌ಲೈನ್‌ ಕೋರ್ಸ್‌ಗಳು ಉತ್ತಮ ಎಂದಲ್ಲ. ಕೆಲವೊಂದು ಹಣದಾಸೆಗೆ ಅತ್ಯುತ್ತಮ ಜ್ಞಾನ ನೀಡದ ಆನ್‌ಲೈನ್‌ ಕೋರ್ಸ್‌ಗಳು ಇರಬಹುದು. ಅಂತಹ ಕೋರ್ಸ್‌ಗಳಿಗೆ ಸೇರಿ ನಿಮ್ಮ ಸಮಯ ಮತ್ತು ಹಣ ವ್ಯರ್ಥ ಮಾಡಿಕೊಳ್ಳಬೇಡಿ. ಹೀಗಾಗಿ, ಆನ್‌ಲೈನ್‌ ಕೋರ್ಸ್‌ಗಳಿಗೆ ಸೇರುವ ಮೊದಲು ಈ ಮುಂದಿನ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ. ೧. ಲಭ್ಯವಿರುವ ವಿವಿಧ ಕರಿಯರ್‌ ಆಯ್ಕೆಗಳನ್ನುತಿಳಿದುಕೊಳ್ಳಿ ನಿಮ್ಮ ಕರಿಯರ್‌ ಅನ್ನು ಮೇಲ್ದರ್ಜೆಗೆ ಏರಿಸಬಲ್ಲ ವಿವಿಧ ಕರಿಯರ್‌ ಆಯ್ಕೆಗಳನ್ನು ಮೌಲ್ಯಮಾಪನಮಾಡುವುದು ಅಷ್ಟು ಸುಲಭವಲ್ಲ. ಆದರೆ, ನೀವು ಕಲಿಕೆಗೆ ಹೂಡಿಕೆ ಮಾಡಿದ ಸಮಯ ಮತ್ತು ಹಣದ ಕುರಿತು ಮೊದಲು…

Read More

ಪುಟ್ಟ ಮಕ್ಕಳಿಗೆ ಕಾರ್ಟೂನ್‌ ಟೀವಿ ನೋಡಬೇಕು. ಬಾಹುಬಲಿಯ ಬಳಿಕ ಭಾರತದ ಬಹುತೇಕ ಸಿನಿಮಾಗಳಲ್ಲಿ ವಿಷುಯಲ್‌ ಎಫೆಕ್ಟ್‌, ಗ್ರಾಫಿಕ್ಸ್‌, ವಿಎಫ್‌ಎಕ್ಸ್‌ ತಂತ್ರಜ್ಞಾನಗಳ ಬಳಕೆ ಹೆಚ್ಚಿದೆ. ಟೀವಿಯಲ್ಲಿ ಗ್ರಾಫಿಕ್ಸ್‌ ಮೂಲಕ ಸುದ್ದಿಯ ಸೆನ್ಸೆಷನ್‌ ಹೆಚ್ಚಿಸಲಾಗುತ್ತಿದೆ. ದೃಶ್ಯ ಮಾಧ್ಯಮವನ್ನು ಇನ್ನಷ್ಟು ಆಕರ್ಷಕಗೊಳಿಸಲು ಅನಿಮೇಟರ್‌ ಮತ್ತು ಗ್ರಾಫಿಕ್ಸ್‌ ಕಲಾವಿದರ ಕೈಚಳಕ ಬೇಕೇ ಬೇಕು. ಇಂತಹ ಸಮಯದಲ್ಲಿ ಅನಿಮೇಷನ್‌ ಎನ್ನುವುದು ಬಹುಬೇಡಿಕೆಯ ಕರಿಯರ್‌ ಆಗಿ ಚಾಲ್ತಿಯಲ್ಲಿದೆ. ಮುಂದಿನ ದಿನಗಳಲ್ಲಿ ಪ್ರತಿಭಾನ್ವಿತ, ಕ್ರಿಯಾಶೀಲ ಅನಿಮೇಟರ್‌ಗಳಿಗೆ ಬಹುಬೇಡಿಕೆ ಇರಲಿದೆ. ಈ ಕ್ಷೇತ್ರದ ವಿಶಾಲ ವ್ಯಾಪ್ತಿ ಮತ್ತು ಕರಿಯರ್‌ ಅವಕಾಶಗಳನ್ನು ಮನಗಂಡು ಈಗಿನ ದಿನಗಳಲ್ಲಿ ಬಹುತೇಕ ತರುಣ/ತರುಣಿಯರು ಅನಿಮೇಷನ್‌ ಕೋರ್ಸ್‌ಗಳನ್ನು ಕಲಿಯಲು ಆಸಕ್ತಿವಹಿಸುತ್ತಿದ್ದಾರೆ. ಅನಿಮೇಷನ್‌ ವೃತ್ತಿಪರರಿಗೆ ಇರುವ ಅತ್ಯುತ್ತಮ ವೇತನ, ಕರಿಯರ್‌ನಲ್ಲಿ ಪ್ರಗತಿ ಕಾಣುವ ಅವಕಾಶಗಳನ್ನು ಮನಗಂಡು ೨ಡಿ, ೩ಡಿ ಅನಿಮೇಷನ್‌ ಸೇರಿದಂತೆ ವಿವಿಧ ಅನಿಮೇಷನ್‌ ಕೋರ್ಸ್‌ಗಳನ್ನು ಕಲಿಯುತ್ತಿದ್ದಾರೆ. ಬಾಹುಬಲಿ, ಕುಂಗ್‌ ಫೂ ಪಾಂಡ, ಐಸ್‌ ಏಜ್‌ ಸೇರಿದಂತೆ ವಿವಿಧ ಸಿನಿಮಾಗಳನ್ನು ಮಕ್ಕಳು,ದೊಡ್ಡವರು ಎಂಬ ಬೇಧಭಾವವಿಲ್ಲದೆ ನೋಡುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಪಡೆಯಬಹುದಾದ ಅವಕಾಶಗಳಿಗೆ…

Read More

ಕಳೆದ ಕೆಲವು ಸಮಯದಿಂದ ಕೊರೊನಾ ಎಂಬ ವೈರಸ್‌ ಜಗತ್ತಿನ ರೀತಿ ರಿವಾಜುಗಳನ್ನೇ ಬದಲಾಯಿಸಿಬಿಟ್ಟಿದೆ. ವಿದ್ಯಾರ್ಥಿಗಳು ಶಾಲೆಗೆ ಹೋಗಬೇಕಿಲ್ಲ. ಟೀಚರ್‌ಗಳು ಮೊಬೈಲ್‌ ಅಥವಾ ಕಂಪ್ಯೂಟರ್‌ ಮುಂದೆಕುಳಿತು ಪಾಠ ಮಾಡುತ್ತಿದ್ದಾರೆ. ದಿನಾ ಆಫೀಸ್‌ಗೆ ಹೋಗುತ್ತಿದ್ದ ಅಪ್ಪ/ಅಮ್ಮ ಮನೆಯಲ್ಲಿಯೇ ಕುಳಿತು ವರ್ಕ್‌ ಫ್ರಂ ಹೋಂ ಮಾಡುತ್ತಿದ್ದಾರೆ. ಒಂದರ್ಥದಲ್ಲಿ ಈಗ ಮನೆಯೇ ಮಂತ್ರಾಲಯ, ವಿದ್ಯಾರ್ಥಿಗಳಿಗೆ ಮನೆಯೇ ವಿದ್ಯಾಲಯ. ಶಾಲಾ ಕಾಲೇಜುಗಳು ಮಾಡುವ ನಿಗದಿತ ಆನ್‌ಲೈನ್‌ ಕ್ಲಾಸ್‌ಗಳನ್ನು ತೆಗೆದುಕೊಂಡು ಕೆಲವು ವಿದ್ಯಾರ್ಥಿಗಳು ಒಂದರ್ಥದಲ್ಲಿ ಆರಾಮವಾಗಿದ್ದಾರೆ. ಒಂದಿಷ್ಟು ವಿದ್ಯಾರ್ಥಿಗಳು ಆನ್‌ಲೈನ್‌ ಕ್ಲಾಸ್‌ನಲ್ಲಿ ನೀಡುವ ಹೋಂವರ್ಕ್‌ ಹೊರೆ ನೋಡಿ ಒಮ್ಮೆ ಶಾಲೆ/ಕಾಲೇಜು ಶುರುವಾಗ್ಲಿ ಎಂದು ಬೇಡಿಕೊಳ್ಳುತ್ತಿದ್ದಾರೆ. ಕೆಲವು ಬುದ್ಧಿವಂತ ಮಕ್ಕಳು ಮಾತ್ರ ಲಾಕ್‌ಡೌನ್‌ ಸಮಯದಲ್ಲಿ ಕಲಿಕೆಗೆ ಇರುವ ಅವಕಾಶಗಳ ಬೆನ್ನುಬಿದ್ದಿದ್ದಾರೆ.ಶಾಲೆ/ಕಾಲೇಜಿಗೆ ಹೋಗುವಾಗ ದಿನದ ಬಹುತೇಕ ಸಮಯ ಕ್ಲಾಸ್, ಪ್ರಯಾಣದಲ್ಲಿಯೇ ಮುಗಿಯುತ್ತಿತ್ತು. ಆದರೆ, ಈಗ ಮನೆಯಲ್ಲಿಯೇ ಇರುವುದರಿಂದ ಶಾಲೆ/ ಕಾಲೇಜುಗಳು ಮಾಡುವ ಆನ್‌ಲೈನ್‌ ಕ್ಲಾಸ್‌,ಹೋಂವರ್ಕ್‌ ಮುಗಿದರೂ ಸಾಕಷ್ಟು ಬಿಡುವಿನ ವೇಳೆ ಇರುವುದನ್ನು ಗುರುತಿಸಿದ್ದಾರೆ. ಆನ್‌ಲೈನ್‌ ಎನ್ನುವುದು ಸಮುದ್ರಕ್ಕಿಂತಲೂ ವಿಶಾಲ ಎನ್ನಬಹುದು.ಇಲ್ಲಿಹುಡುಕಿದರೆ ಉಚಿತ, ವಿನಾಯಿತಿದರದ…

Read More

ಇಂಗ್ಲಿಷ್‌ನಲ್ಲಿ ಇರುವುದು 26 ಅಕ್ಷರವಾದರೂ ಅದರಿಂದ ಸೃಷ್ಟಿಯಾದ ಕೋಟಿ ಕೋಟಿ ಪದಗಳು ಬೆರಗು ಹುಟ್ಟಿಸುವಂತದ್ದು. ಸರ್ವವ್ಯಾಪಿಯಾಗಿರುವ ಇಂಗ್ಲಿಷ್‌ ಈಗ ಅವಶ್ಯಕ ಸಂವಹನ ಮಾಧ್ಯಮ. ಉದ್ಯೋಗ ದೃಷ್ಟಿಯಿಂದ ಇಂಗ್ಲಿಷ್‌ ಕಲಿಕೆಯಂತೂ ಅನಿವಾರ್ಯ ಎಂದಾಗಿದೆ. ರಾಜ್ಯದ ವಿದ್ಯಾರ್ಥಿಗಳು ಅದರಲ್ಲಿಯೂ ಗ್ರಾಮೀಣ ವಿದ್ಯಾರ್ಥಿಗಳು ಇಂಗ್ಲಿಷ್‌ ಅನ್ನು ಒಂದು ವಿಷಯವಾಗಿ ಓದುವುದು ಹೆಚ್ಚು. ಆದರೆ, ಮನೆಯಲ್ಲಿ ಅಥವಾ ಕಾಲೇಜಿನಲ್ಲಿ ಹೆಚ್ಚಾಗಿ ಕನ್ನಡ ಅಥವಾ ಮಾತೃಭಾಷೆಯಲ್ಲಿಯೇ ಸಂವಹನ ಮಾಡುತ್ತಾರೆ. ಕಾಲೇಜು ಅಥವಾ ಮನೆಯಲ್ಲಿರುವಾಗ ಸಮಸ್ಯೆಯಾಗುವುದಿಲ್ಲ. ಓದು ಮುಗಿಸಿದ ಬಳಿಕ ಉದ್ಯೊಗ ಸಂದರ್ಶನಕ್ಕೆ ಹೋದಾಗ ಅಥವಾ ಯಾವುದಾದರೂ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವಾಗ ಇಂಗ್ಲಿಷ್‌ ಭೂತವಾಗಿ ಕಾಡುತ್ತದೆ. ಈ ವಿದ್ಯಾರ್ಥಿಗಳಿಗೆ ಇಂಗ್ಲಿಷ್‌ ಗೊತ್ತಿಲ್ಲ ಎಂದಲ್ಲ. ಇಂಗ್ಲಿಷ್‌ ಪರೀಕ್ಷೆಯಲ್ಲಿ ಅತ್ಯುತ್ತಮವಾಗಿಯೇ ಅಂಕ ಪಡೆದಿರುತ್ತಾರೆ. ಆದರೆ, ಯಾರಲ್ಲಿಯಾದರೂ ಇಂಗ್ಲಿಷ್‌ನಲ್ಲಿ ಮಾತನಾಡುವಾಗ ತಡಬಡಿಸುತ್ತಾರೆ. ಮನಸ್ಸಿನಲ್ಲಿ ಹೇಳಬೇಕೆನಿಸುವ ಸಾಕಷ್ಟು ಪದಗಳು ಇರುತ್ತವೆ. ಸಂದರ್ಶಕರಿಗೆ ಹೇಳಬೇಕಾದ ಮಾತುಗಳೆಲ್ಲವೂ ಇಂಗ್ಲಿಷ್‌ ಸಂವಹನ ಕೌಶಲವಿಲ್ಲದೆ ಇರುವುದರಿಂದ ಬಾಯಲ್ಲಿಯೇ ಉಳಿದು ಹೋಗುತ್ತದೆ. ನಮ್ಮ ಕ್ಯಾಡ್‌ನೆಸ್ಟ್‌‌ ಬಸವನಗುಡಿ ಶಾಖೆಗೆ ಕೋಲಾರದ ವಿದ್ಯಾರ್ಥಿನಿಯೊಬ್ಬರು ಬಂದಿದ್ದರು. ಆಕೆ…

Read More

ಜ್ಯೋತಿ ಪ್ರಕಾಶ್‌ ಎಲ್ಲರಿಗೂ ತಿಳಿದಿರುವ ಹಾಗೆ SSLC ಪರೀಕ್ಷೆ ಮುಗಿದಿದೆ. ಈಗ ಎಲ್ಲ ವಿದ್ಯಾರ್ಥಿಗಳಿಗೆ ಇರುವ ಪ್ರಶ್ನೆಯೆಂದರೆ ನಾನು ಯಾವ ವಿಭಾಗದಲ್ಲಿ ನನ್ನ ವಿದ್ಯಾಭ್ಯಾಸವನ್ನು ಮುಂದುವರಿಸಬೇಕು ಹಾಗೂ ಯಾವ ವಿಭಾಗವನ್ನು ನಾನು ಆಯ್ಕೆ ಮಾಡಿಕೊಂಡರೆ ನನ್ನ ಮುಂದಿನ ಜೀವನಕ್ಕೆ ಉಪಯೋಗವಾಗುತ್ತದೆ ಎಂದು.   ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ SSLC ನಂತರ ವಿದ್ಯಾರ್ಥಿಗಳಿಗೆ ಅವರ ಆಸಕ್ತಿಗೆ ತಕ್ಕಂತೆ ಆಯ್ಕೆ ಮಾಡಿಕೊಳ್ಳುವಂತಹ ಹಾಗೂ ಪ್ರಯೋಜನವಾಗುವಂತಹ ಅನೇಕ ವಿಭಾಗಗಳಿವೆ. ಅದರಲ್ಲಿ ಎಲ್ಲರಿಗೂ ತಿಳಿದಿರುವ PUC ಮತ್ತು DIPLOMA.   ವಿದ್ಯಾರ್ಥಿಗಳು PUC ಆಯ್ಕೆ ಮಾಡಿಕೊಂಡರೆ ಅದರಲ್ಲಿ ಕೂಡ  Arts, Science & Commerce ಎಂದು ಮೂರು ವಿಭಾಗಗಳಲ್ಲಿ ಆಯ್ಕೆಮಾಡಿಕೊಳ್ಳಬಹುದು. ಅದರಲ್ಲೂ ಕೂಡ ನಿಮಗಿಷ್ಟವಾದ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಇನ್ನು DIPLOMA ಎಂದರೆ CIVIL, MECHANICAL, ELECTRICAL, COMPUTER SCIENCE ಎಂದು ಇನ್ನೂ ಅನೇಕ ವಿಭಾಗಗಳಿರುತ್ತವೆ. PUC ಮತ್ತು DIPLOMA ವಿಭಾಗಗಳನ್ನು ಬಿಟ್ಟು ಮತ್ತೊಂದು ದೊಡ್ಡ ಪ್ರಪಂಚ SSLC ವಿದ್ಯಾರ್ಥಿಗಳನ್ನು ಕೈಬೀಸಿ ಕರೆಯುತ್ತದೆ. ಅದೇನೆಂದರೆ ಮಲ್ಟಿಮೀಡಿಯಾ ಕ್ಷೇತ್ರ. ಇತ್ತೀಚಿನ…

Read More

ಕೋವಿಡ್‌ ೧೯ನಿಂದಾಗಿ ಉದ್ಯೋಗ ಸಂದರ್ಶನಗಳು ಹೆಚ್ಚಾಗಿ ಟೆಲಿಫೋನ್‌ ಅಥವಾ ವಿಡಿಯೋ ಮೂಲಕ ನಡೆಯುತ್ತವೆ. ವಿದ್ಯಾರ್ಥಿಗಳಿಗೆ ಭವಿಷ್ಯದ ಕೋರ್ಸ್‌ ಆಯ್ಕೆ, ಕಾಲೇಜು ಆಯ್ಕೆ, ಅಡ್ಮಿಷನ್‌ ಪ್ರಕ್ರಿಯೆಗಳೂ ಟೆಲಿಫೋನ್‌ ಮೂಲಕವೇ ಹೆಚ್ಚಾಗಿ ನಡೆಯಲಿದೆ. ವಿವಿಧ ಆನ್‌ಲೈನ್‌ ಕೊರ್ಸ್ ಗಳು ಈಗ ಜನಪ್ರಿಯವಾಗುತ್ತಿವೆ. ಕ್ಯಾಡ್‌ನೆಸ್ಟ್‌‌ ಈಗಾಗಲೇ ವಿವಿಧ ಕೋರ್ಸ್‌ ಗಳನ್ನು ಆನ್‌ಲೈನ್‌ ಮೂಲಕವೇ ನೀಡುತ್ತಿದೆ. ಜಗತ್ತು ಹೀಗೆ ವರ್ಚ್ಯುವಲ್‌ ಆಗುತ್ತಿರುವಾಗ ನೀವು ಅದಕ್ಕೆ ತಕ್ಕಂತೆ ಸಿದ್ಧತೆ ನಡೆಸಬೇಕಾಗುತ್ತದೆ. ಉದಾಹರಣೆಗೆ ನಿಮಗೆ ನಾಳೆ ಒಂದು ಟೆಲಿಫೋನ್‌ ಇಂಟರ್‌ವ್ಯೂ ಇದೆ ಎಂದಿಟ್ಟುಕೊಳ್ಳಿ. ಫೋನ್‌ನಲ್ಲಿ ಏನು ಬೇಕಾದರೂ ಮಾತನಾಡಿದಾಯ್ತು ಎಂದುಕೊಳ್ಳಬೇಡಿ. ಟೆಲಿಫೋನ್‌ ಸಂದರ್ಶನಕ್ಕೂ ನೇರ ಸಂದರ್ಶನದಷ್ಟೇ ಗಮನ ನೀಡಿ. ಯಾಕೆ ಟೆಲಿಫೋನ್‌ ಇಂಟರ್‌ವ್ಯೂ? ಈಗ ಕಂಪನಿಗಳಿಗೆ ಉದ್ಯೋಗಿಗಳ ಅವಶ್ಯಕತೆ ಇರುತ್ತದೆ. ಉದಾಹರಣೆಗೆ, ಈ ಕೊರೊನಾ ಕಾಲದಲ್ಲಿ ನೇರ ಸಂದರ್ಶನಕ್ಕೆ ಬೆಂಗಳೂರಿನ ಬಸವನಗುಡಿಯಲ್ಲಿರುವ ಕ್ಯಾಡ್‌ನೆಸ್ಟ್‌‌ ಕಚೇರಿಗೋ, ಮಲ್ಲೇಶ್ವರಂ ಕ್ಯಾಡ್‌ನೆಸ್ಟ್‌‌ ಕಚೇರಿಗೋ ಸಂದರ್ಶನಕ್ಕೆ ಬರಲು ಹೇಳುವುದು ಕಷ್ಟ. ಇದಕ್ಕಾಗಿ ಕ್ಯಾಡ್‌ನೆಸ್ಟ್‌‌ ಮುಖ್ಯಸ್ಥರು ನಿಮಗೆ ಟೆಲಿಫೋನ್‌ ಇಂಟರ್‌ವ್ಯೂ ಏರ್ಪಡಿಸಬಹುದು. ಕೆಲವೊಮ್ಮೆ ಕಂಪನಿಯ ಪ್ರಧಾನ ಕಚೇರಿ…

Read More