Author: Prakash Gowda

ನಾನು ಪ್ರಕಾಶ್ ಗೌಡ ಎಚ್. ಎಂ. ಕನ್ನಡ ಕ್ಯಾಡ್‌ನೆಸ್ಟ್‌ .ಕಾಂ ನಿರ್ದೇಶಕ. ಬೆಂಗಳೂರಿನ ಬಸವನಗುಡಿ, ರಾಜಾಜಿನಗರ, ಶೇಷಾದ್ರಿಪುರಂ, ಮಲ್ಲೇಶ್ವರಂ. ರಾಜರಾಜೇಶ್ವರಿ ನಗರದಲ್ಲಿರುವ ಕ್ಯಾಡ್‌ನೆಸ್ಟ್‌ ನ ನಿರ್ದೇಶಕ.

ವಿದ್ಯಾರ್ಥಿಗಳಿಗೆ, ಪೋಷಕರಿಗೆ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಈ ಅಕ್ಟೋಬರ್‌ ಎಂದಿನಂತೆ ಇಲ್ಲ. ಪ್ರತಿಶಾಲೆ ಕಾಲೇಜುಗಳಲ್ಲಿ ಜೂನ್‌ ಬಳಿಕ ಕಾಣುತ್ತಿದ್ದ ಗಡಿಬಿಡಿ ಈ ತಿಂಗಳಲ್ಲಿ ಕಾಣುತ್ತಿದೆ. ಕೋವಿಡ್‌-೧೯ ಎಂಬ ಸಾಂಕ್ರಾಮಿಕವು ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಸೇರಿದಂತೆ ಈ ವರ್ಷ ಸಾಕಷ್ಟು ಸವಾಲುಗಳನ್ನೇ ನೀಡಿತ್ತು. ಇದೀಗ ನಾಡಿದ್ದು ಹದಿನೈದರ ಬಳಿಕ ಎಲ್ಲಾ ಶಾಲೆ ಕಾಲೇಜುಗಳು ತೆರೆಯುವ ಸೂಚನೆಯಿದೆ. ಬೆಂಗಳೂರಿನ ಕ್ಯಾಡ್‌ನೆಸ್ಟ್‌ ಕೌಶಲ ಅಭಿವೃದ್ಧಿ ಸಂಸ್ಥೆಯಂತಹ ಸ್ಕಿಲ್‌ ಸೆಂಟರ್‌ಗಳು ಈಗಾಗಲೇ ತೆರೆದಿದ್ದು, ವಿದ್ಯಾರ್ಥಿಗಳ ಅಡ್ಮಿಷನ್‌ ಆರಂಭವಾಗಿದೆ. ನಮ್ಮ ಆನ್‌ಲೈನ್‌ ತರಗತಿಗಳೂ ಇದ್ದು, ವಿದ್ಯಾರ್ಥಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಆನ್‌ಲೈನ್‌ ಅಥವಾ ಆಫ್‌ಲೈನ್‌ ಕ್ಲಾಸ್‌ಗೆ ಸೇರಬಹುದು. ಈ ವರ್ಷ ವಿದ್ಯಾರ್ಥಿಗಳು ಗಮನದಲ್ಲಿಟ್ಟುಕೊಳ್ಳಬೇಕಾದ ೧೦ ಸಂಗತಿಗಳು ಇಲ್ಲಿವೆ. 1 ಆರೋಗ್ಯದ ಬಗ್ಗೆ ಅಲಕ್ಷ್ಯ ಬೇಡ ಎನ್ನುವುದನ್ನು ಈ ದಿನದಿಂದಲೇ ವಿದ್ಯಾರ್ಥಿಗಳು ಗಮನದಲ್ಲಿಟ್ಟುಕೊಳ್ಳಬೇಕು. ಶಾಲಾ, ಕಾಲೇಜು ಅಥವಾ ತರಬೇತಿ ಕೇಂದ್ರಗಳಲ್ಲಿ ಸ್ನೇಹಿತ, ಸ್ನೇಹಿತೆಯರೆಂದು ತುಂಬಾ ಹತ್ತಿರ ಕುಳಿತು ಮಾತನಾಡುವುದು, ಹಗ್ ಮಾಡುವುದು, ಆಟವಾಡುವುದು ಬೇಡ. ಸಾಮಾಜಿಕ ಅಂತರವನ್ನು ಪಾಲಿಸುವುದನ್ನು ಪ್ರತಿಕ್ಷಣ ಮರೆಯಬೇಡಿ.…

Read More

ಕರಿಯರ್ ಯೋಜನೆ ಮಾಡುವುದು ಕೊಂಚ ಕಷ್ಟದ ಕೆಲಸ. ಹೀಗಾಗಿ, ಬಹುತೇಕರು ಇದನ್ನು ಮಾಡಲು ಹೋಗುವುದಿಲ್ಲ. ಇದರಿಂದಾಗಿ ಹೆಚ್ಚಿನವರ ಕರಿಯರ್ ಬದುಕು ಗಾಳಿಬಂದ ಕಡೆ ಸಾಗುವ ಗಾಳಿಪಟದಂತಾಗುತ್ತದೆ. ಕನ್ನಡ ಕ್ಯಾಡ್‌ನೆಸ್ಟ್‌‌ ಇಂದು ವಿಶೇಷ ಮಾರ್ಗದರ್ಶಿಯ ಮೂಲಕ ನಿಮ್ಮ ಮುಂದೆ ಬಂದಿದೆ. ನೀವು ನಿಮ್ಮ ಕರಿಯರ್‌ ಕುರಿತು ಸರಿಯಾದ ಯೋಜನೆ ರೂಪಿಸಲು ನೆರವಾಗುವ Career Planning Guide ಅನ್ನು ಈ ಲೇಖನದ ಮೂಲಕ ನೀಡಿದೆ. ಏನಿದು Career Planning? ವ್ಯಕ್ತಿಯೊಬ್ಬರ ವೃತ್ತಿಪರ ಗುರಿಗಳನ್ನು ನಿಗದಿಪಡಿಸುವ ಮತ್ತು ಅವುಗಳನ್ನು ಸಾಸಲು ದಾರಿ ಹುಡುಕುವ ನಿರಂತರ ಪ್ರಕ್ರಿಯೆಯಾಗಿದೆ. ಇದಕ್ಕಾಗಿ ಸ್ವಯಂ ಮೌಲ್ಯಮಾಪನ, ಮಾರುಕಟ್ಟೆ ಅಧ್ಯಯನ ಮತ್ತು ನಿರಂತರ ಕಲಿಕೆ ಅತ್ಯಂತ ಅವಶ್ಯ. ನಿಮ್ಮ ಕರಿಯರ್ ಅನ್ನು ಯಶಸ್ವಿಯಾಗಿ ನಿರ್ವಹಣೆ ಮಾಡಲು ಇದು ಅಗತ್ಯವಾಗಿದೆ. Career Planning ವಿಧಾನಗಳು *ನಿಮ್ಮ ಗುರಿಗಳನ್ನು ಕಂಡುಕೊಳ್ಳಿ: ಗುರಿರಹಿತವಾಗಿ ಕೆಲಸ ಮಾಡುವ ಬದಲು ಕರಿಯರ್ ಪ್ಲ್ಯಾನಿಂಗ್ ಮೂಲಕ ನಿಮ್ಮ ವೈಯಕ್ತಿಕ ಉದ್ದೇಶಗಳನ್ನು ಮತ್ತು ಗುರಿಗಳನ್ನು ಕಂಡುಕೊಂಡು ಸಾಗುವುದು ಸೂಕ್ತ. * ಸಮಯ ಮತ್ತು…

Read More

ಸ್ನೇಹಿತರೇ, ಈಗಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಲ್ಲರೂ ಅಂಕಗಳ ಹಿಂದೆ ಬಿದ್ದಿದ್ದಾರೆ. ಆದರೆ, ಯಾರಲ್ಲಿ ಕ್ರಿಯಾಶೀಲತೆ, ಹೊಸತು ಕಲಿಯುವ ಆಸಕ್ತಿ ಇರುತ್ತದೆಯೋ ಅವರು ಅದ್ಭುತ ಸಾಧನೆ ಮಾಡುತ್ತಾರೆ. ಇವತ್ತಿನ ಕನ್ನಡ ಕ್ಯಾಡ್‌ನೆಸ್ಟ್‌‌ನಲ್ಲಿ rank ಅಗತ್ಯವಿಲ್ಲದ ಕೆಲವು ಅದ್ಭುತ ಕರಿಯರ್‌ ಅವಕಾಶಗಳ ಕುರಿತು ತಿಳಿದುಕೊಳ್ಳೋಣ. ಶೇಕಡ 90ಕ್ಕಿಂತ ಹೆಚ್ಚು ಅಂಕ ಪಡೆದವರೆಲ್ಲ ಎಂಬಿಬಿಎಸ್, ಎಂಜಿನಿಯರಿಂಗ್ ಸೀಟುಗಳಿಗೆ ಪ್ರಯತ್ನಿಸುತ್ತಿದ್ದಾರೆ. ಶೇಕಡ 40, ಶೇಕಡ 50, ಶೇಕಡ 60 ಇತ್ಯಾದಿ ಅಂಕ ಪಡೆದವರೆಲ್ಲ ಇಂತಹ ಸೀಟು ಪಡೆಯುವ ಟೆನ್ಷನ್ ಇಲ್ಲದೆ ಹಾಯಾಗಿರಬಹುದು. ಈ ರೀತಿ ಕಡಿಮೆ ಅಂಕ ಪಡೆದವರೂ ತಮ್ಮ ಕರಿಯರ್ ಬಗ್ಗೆ ಸೀರಿಯಸ್ ಆಗಿ ಯೋಚನೆ ಮಾಡಿದರೆ ಹೆಚ್ಚು ಅಂಕ ಪಡೆದವರನ್ನು ಮೀರಿಸುವಂತೆ ಸಾಧನೆ ಮಾಡಬಹುದು. ಫೋಟೊಗ್ರಫಿ ಈಗಿನ ಸೆಲ್ಫಿ, ಮೊಬೈಲ್ ಫೋಟೊಗ್ರಫಿ ಕಾಲದಲ್ಲಿಯೂ ವೃತ್ತಿಪರ ಛಾಯಾಗ್ರಾಹಕರಿಗೆ ಬೇಡಿಕೆ ಕಡಿಮೆಯಾಗಿಲ್ಲ. ಕಾಲೇಜಲ್ಲಿ ಕಡಿಮೆ ಅಂಕ ಪಡೆದಿದ್ದರೂ ಊರಲ್ಲಿ ಮದುವೆ ಫೋಟೊಗ್ರಫಿ ಮಾಡಿ ಹೆಚ್ಚು ಹಣ ಸಂಪಾದಿಸಬಹುದು. ಪತ್ರಿಕಾ ಛಾಯಾಗ್ರಾಹಕ ವೃತ್ತಿ ಮಾಡಬಹುದು. ಫೊಟೊಗ್ರಫಿ ಕುರಿತೂ ಇನ್ನೂ…

Read More

ಡಿಜಿಟಲ್‌ ಮಾರ್ಕೆಟಿಂಗ್‌, ಈ ಎರಡು ಪದಗಳು ಈಗ ಜಗತ್ತಿನಲ್ಲಿ ಹೊಸ ಬದಲಾವಣೆಯನ್ನೇ ಸೃಷ್ಟಿಸುತ್ತಿದೆ. ಸಣ್ಣ ಅಂಗಡಿಯಿಂದ ಹಿಡಿದು ದೊಡ್ಡ ಕಂಪನಿಯವರೆಗೆ ಎಲ್ಲರಿಗೂ ಡಿಜಿಟಲ್‌ ಮಾರ್ಕೆಟಿಂಗ್‌ ಬೇಕೇ ಬೇಕು. ಡಿಜಿಟಲ್‌ ಮಾರ್ಕೆಟಿಂಗ್‌ ಕೌಶಲ ಹೊಂದಿರುವವರನ್ನು ನೇಮಕ ಮಾಡಿಕೊಳ್ಳಲು ಹೆಚ್ಚಿನ ಕಂಪನಿಗಳು ಆದ್ಯತೆ ನೀಡುತ್ತಿವೆ. ಏನಿದು ಡಿಜಿಟಲ್‌ ಮಾರ್ಕೆಟಿಂಗ್‌?ಡಿಜಿಟಲ್‌ ಮಾರ್ಕೆಟಿಂಗ್‌ ಹೇಗೆ ಕಾರ್ಯನಿರ್ವಹಿಸುತ್ತದೆ?ಲೀಡ್‌ ಜಗತ್ತಿನ ಬಗ್ಗೆ ನಿಮಗೆಷ್ಟು ಗೊತ್ತು?ಡಿಜಿಟಲ್‌ ಮಾರ್ಕೆಟಿಂಗ್‌ನಲ್ಲಿ ಯಶಸ್ಸು ಪಡೆಯುವುದು ಹೇಗೆ?ಡಿಜಿಟಲ್‌ ಮಾರ್ಕೆಟಿಂಗ್‌ನಲ್ಲಿ ಮಾಡಬಾರದ ತಪ್ಪುಗಳೇನು?ಆನ್‌ಲೈನ್‌ನಲ್ಲಿ ಜನರ ನಂಬಿಕೆ ಗಳಿಸುವುದು ಹೇಗೆ?ಆನ್‌ಲೈನ್‌ನಲ್ಲಿ ಜಾಹೀರಾತು ನೀಡುವುದು ಹೇಗೆ?ಆನ್‌ಲೈನ್‌ ಜಾಹೀರಾತುಗಳನ್ನು ಟಾರ್ಗೆಟ್‌ ಗ್ರಾಹಕರಿಗೆ ತಲುಪಿಸುವುದು ಹೇಗೆ?ಫೇಸ್‌ಬುಕ್‌ನಲ್ಲಿ ಪರಿಣಾಮಕಾರಿಯಾಗಿ ಬೂಸ್ಟ್‌ ಮಾಡುವುದು ಹೇಗೆ?ಯೂಟ್ಯೂಬ್‌ ಮೂಲಕ ಮಾರ್ಕೆಟಿಂಗ್‌ ಮಾಡುವುದು ಹೇಗೆ?ಇನ್‌ಸ್ಟಾಗ್ರಾಂನ ಮೂಲಕ ಗ್ರಾಹಕರನ್ನು ತಲುಪುವುದು ಹೇಗೆ?ಗೂಗಲ್‌ ಆಡ್‌ವರ್ಡ್ಸ್‌ ಎಂಬ ಬೃಹತ್‌ ಜಾಹೀರಾತು ಜಗತ್ತಿನ ಪರಿಚಯ ನಿಮಗಿದೆಯೇ?ಆನ್‌ಲೈನ್‌ನಲ್ಲಿ ಮಾರ್ಕೆಟಿಂಗ್‌ ಮಾಡುವುದು ಹೇಗೆ?ಡಿಜಿಟಲ್‌ ಮಾರ್ಕೆಟಿಂಗ್‌ನಲ್ಲಿ ಉದ್ಯೋಗಾವಕಾಶ ಹೇಗಿದೆ? via GIPHY ಆನ್‌ಲೈನ್‌ ಮಾರ್ಕೆಟಿಂಗ್‌ ಬಗ್ಗೆ ಇಂತಹ ನೂರಾರು ಪ್ರಶ್ನೆಗಳು ನಿಮ್ಮಲ್ಲಿ ಇರಬಹುದು. ಡಿಜಿಟಲ್‌ ಮಾರ್ಕೆಟಿಂಗ್‌ ಬಗ್ಗೆ ಪರಿಣತಿ ಪಡೆದರೆ ನಿಮ್ಮ…

Read More

ಕೆಲವೇ ದಿನಗಳಲ್ಲಿ ದೇಶದ ಬಹುತೇಕ ಶಾಲಾ ಕಾಲೇಜುಗಳಲ್ಲಿ ತರಗತಿಗಳು ಆರಂಭವಾಗಲಿವೆ. ಈ ಕೋವಿಡ್‌-೧೯ ಸಂಕಷ್ಟದ ಸಮಯದಲ್ಲಿ ಸಾಕಷ್ಟು ವಿದ್ಯಾರ್ಥಿಗಳು ಕ್ಯಾಡ್‌ನೆಸ್ಟ್‌‌ ಆನ್‌ಲೈನ್‌ ತರಗತಿಗಳನ್ನು ಪಡೆದಿದ್ದು, ವಿವಿಧ ಸರ್ಟಿಫಿಕೇಟ್‌ಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಸಂಕಷ್ಟದ ಸಮಯದಲ್ಲಿಯೂ ತಮ್ಮ ರೆಸ್ಯೂಂ ತೂಕ ಹೆಚ್ಚಿಸಿಕೊಳ್ಳುವ ಸರ್ಟಿಫಿಕೇಷನ್‌ ಪಡೆದ ಆ ವಿದ್ಯಾರ್ಥಿಗಳಿಗೆ ಮೊದಲಿಗೆ ಕ್ಯಾಡ್‌ನೆಸ್ಟ್‌‌ ಬೆಂಗಳೂರು ಕಡೆಯಿಂದ ಅಭಿನಂದನೆಗಳು. ಖುಷಿಯ ಸಂಗತಿಯೆಂದರೆ, ಕ್ಯಾಡ್‌ನೆಸ್ಟ್‌‌ ಆಫ್ ಲೈನ್ ತರಗತಿಗಳಿಗೆ ಸೇರಲು ಬಯಸುವವರಿಗೆ ಅಡ್ಮಿಷನ್‌ ಆರಂಭವಾಗಿದೆ. ಸಾಕಷ್ಟು ವಿದ್ಯಾರ್ಥಿಗಳು ಕರೆ ಮಾಡಿ, ನಮ್ಮ ಬೆಂಗಳೂರಿನ ಬಸವನಗುಡಿ, ರಾಜಾಜಿನಗರ, ಶೇಷಾದ್ರಿಪುರಂ, ಮಲ್ಲೇಶ್ವರಂ ಶಾಖೆಗಳಿಗೆ ಭೇಟಿ ನೀಡಿ ವಿಚಾರಿಸುತ್ತಿದ್ದಾರೆ. ಇನ್ನಷ್ಟು ವಿದ್ಯಾರ್ಥಿಗಳಿಗೆ ಕೋರ್ಸ್‌ ಪಡೆಯುವ ಮನಸ್ಸಿದ್ದರೂ ಈ ಕೋವಿಡ್‌-೧೯ ಇನ್ನಷ್ಟು ಮುಗಿಯಲಿ ಎಂದು ಕಾಯುತ್ತಿದ್ದಾರೆ. ಆದರೆ, ಹೆಚ್ಚಿನವರು ಕೋವಿಡ್‌ ಕುರಿತು ಜಾಗೃತಿ ಹೊಂದಿದ್ದು, ಭಯಬಿಟ್ಟು ಹೊಸ ಕೋರ್ಸ್‌ ಕಲಿಕೆಗೆ ಆಸಕ್ತಿ ವಹಿಸುತ್ತಿದ್ದಾರೆ. ಕೆಲವೊಂದು ಸಂಕಷ್ಟಗಳು ಹೊಸ ದಾರಿಗಳನ್ನು ತೋರಿಸುತ್ತವೆ. ಈ ಸಂಕಷ್ಟದ ಸಮಯದಲ್ಲಿ ಬಹುಬೇಡಿಕೆಯ ಹಲವು ಉದ್ಯೋಗಗಳ ಕುರಿತು ಮಾಹಿತಿಯೂ ಬಹಿರಂಗಗೊಂಡಿದೆ. ಜೊತೆಗೆ. ಕೆಲವೊಂದು…

Read More

ಕೋವಿಡ್‌-೧೯ನಿಂದ ಇಡೀ ಜಗತ್ತಿಗೆ ಒಂದಲ್ಲ ಒಂದು ರೀತಿಯಾಗಿ ಹಾನಿಯಾಗಿದೆ ಮತ್ತು ಸಂಕಷ್ಟ ಎದುರಾಗಿದೆ. ಆದರೆ, ಈ ಸಮಯದಲ್ಲಿ ಜಗತ್ತು ಒಂದಿಷ್ಟು ವೇಗವಾಗಿ ಮುಂದೆ ಸಾಗಿರುವುದು ಸುಳ್ಳಲ್ಲ. ರಾಜ್ಯದ ಕುಗ್ರಾಮದ ಶಾಲೆಗಳಲ್ಲಿಯೂ ಇ-ಕಲಿಕೆ ಪರಿಚಯಿಸಿದ ಸಮಯವಿದು. ವ್ಯವಹಾರಗಳು ಸಹ ಹೊಸ ಪ್ರಯತ್ನಗಳನ್ನು, ಮಾರುಕಟ್ಟೆ ವಿಸ್ತರಣೆಗೆ ಹೊಸ ಹಾದಿಗಳನ್ನು ಆಯ್ಕೆ ಮಾಡಿಕೊಂಡಿವೆ. ಇತ್ತೀಚಿನ ಅಧ್ಯಯನದ ಪ್ರಕಾರ ಮುಂದಿನ ದಿನಗಳಲ್ಲಿ ಸೈಬರ್‌ ಸೈಕ್ಯುರಿಟಿ, ಡೇಟಾ ಸೈನ್ಸ್‌, ಕ್ಲೌಡ್‌ ಕಂಪ್ಯೂಟಿಂಗ್‌, ಲಾಜಿಸ್ಟಿಕ್‌ ಮತ್ತು ಸಪ್ಲೈ ಚೈನ್‌ ಮ್ಯಾನೇಜ್‌ಮೆಂಟ್‌ ಮತ್ತು ಡಿಜಿಟಲ್‌ ಮಾರ್ಕೆಟಿಂಗ್‌ಗೆ ಬೇಡಿಕೆ ಹೆಚ್ಚಲಿದೆ ಎಂದು ಇತ್ತೀಚಿನ ಅಧ್ಯಯನವೊಂದು ಹೇಳಿದೆ. ಡಿಜಿಟಲ್‌ ಮಾರ್ಕೆಟಿಂಗ್‌ಗೆ ಬಹುಬೇಡಿಕೆ ಕೋವಿಡ್‌-೧೯ ಬಳಿಕ ಇ-ಕಾಮರ್ಸ್‌ಗಳ ಬಳಕೆ ಇನ್ನಷ್ಟು ಹೆಚ್ಚಲಿದೆ, ಡಿಜಿಟಲೈಜೇಷನ್‌ ಅಗತ್ಯವೂ ಹೆಚ್ಚಲಿದೆ ಮತ್ತು ಆನ್‌ಲೈನ್‌ ಮೀಡಿಯಾಗಳ ಸಂಖ್ಯೆಯೂ ಏರಿಕೆ ಕಾಣಲಿದೆ. ಇದೇ ಕಾರಣಕ್ಕೆ ಡಿಜಿಟಲ್‌ ಮಾರ್ಕೆಟ್‌ ಟ್ರೆಂಡ್‌ಗೆ ತಕ್ಕಂತೆ ವ್ಯವಹಾರ ಹೆಚ್ಚಿಸುವ ಪರಿಣಿತರಿಗೂ ಬೇಡಿಕೆ ಹೆಚ್ಚಲಿದೆ ಎಂದು ಎಕಾನಾಮಿಕ್‌ ಟೈಮ್ಸ್‌ ವರದಿ ಹೇಳಿದೆ. ಡಿಜಿಟಲ್‌ ಮಾರ್ಕೆಟಿಂಗ್‌ ಪರಿಣಿತರ ಕೊರತೆ ಈ ಸಾಂಕ್ರಾಮಿಕದ…

Read More

ಸರಕಾರವು ಅಕ್ಟೋಬರ್‌ ೧ರಿಂದ ಶಾಲಾ ಕಾಲೇಜುಗಳ ಆರಂಭಕ್ಕೆ ನಿರ್ಧರಿಸಿದ್ದರೂ, ವೃತ್ತಿಶಿಕ್ಷಣ, ಕೌಶಲ್ಯ ಮತ್ತು ಉದ್ಯಮ ತರಬೇತಿಗೆ ಈಗಾಗಲೇ ಅನುಮತಿ ನೀಡಿದೆ. ಕರ್ನಾಟಕದ ವಿಶ್ವಾಸನೀಯ ಕೌಶಲ್ಯ ಅಭಿವೃದ್ಧಿ ವೃತ್ತಿಶಿಕ್ಷಣ ಮತ್ತು ಉದ್ಯೋಗ ಮಾರ್ಗದರ್ಶನ ಸಂಸ್ಥೆ ಬೆಂಗಳೂರಿನ ರಾಜಾಜಿನಗರ, ಮಲ್ಲೇಶ್ವರಂ, ಶೇಷಾದ್ರಿಪುರಂ ಮತ್ತು ಬಸನಗುಡಿಯಲ್ಲಿರುವ ತನ್ನ ಶಿಕ್ಷಣ ಕೇಂದ್ರಗಳ ಬಾಗಿಲು ತೆರೆದಿದ್ದು, ವಿದ್ಯಾರ್ಥಿಗಳು ಅಡ್ಮಿಷನ್‌ ಮತ್ತು ಇಲ್ಲಿ ಲಭ್ಯವಿರುವ ಕೋರ್ಸ್‌ಗಳ ಮಾಹಿತಿಗೆ ಭೇಟಿ ನೀಡಬಹುದು. ಕೋವಿಡ್‌ ೧೯ ಸಂಕಷ್ಟದ ಸಮಯದಲ್ಲಿಯೂ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಮೂಲಕ ಕೌಶಲ್ಯಭಿವೃದ್ಧಿ ತರಗತಿಗಳನ್ನು ನೀಡುತ್ತ ಬಂದಿರುವ ಬೆಂಗಳೂರು ಮುಂಬರುವ ತರಗತಿಗಳಲ್ಲಿಯೂ ಕೋವಿಡ್‌ ೧೯ ಮಾರ್ಗಸೂಚಿಗಳನ್ವಯವೇ ತರಗತಿಗಳನ್ನು ನಡೆಸಲಿದೆ. ಇಷ್ಟು ದಿನ ಮನೆಯಲ್ಲಿದ್ದು, ಭವಿಷ್ಯದ ಬಗ್ಗೆ ಆತಂಕದಲ್ಲಿದ್ದ ವಿದ್ಯಾರ್ಥಿಗಳು  ಬೆಂಗಳೂರು ಸಂಸ್ಥೆಗೆ ಕರೆ ಮಾಡಿ ಅಥವಾ ಭೇಟಿ ನೀಡಿ ಮುಂದಿನ ತರಗತಿಗಳು ಯಾವಾಗ ಆರಂಭವಾಗುತ್ತವೆ ಎಂದು ವಿಚಾರಿಸಬಹುದು. ನಿಮಗಾಗಿ ಕೌಶಲ್ಯ ಅಭಿವೃದ್ಧಿ ವೃತ್ತಿಶಿಕ್ಷಣ ಮತ್ತು ಉದ್ಯೋಗ ಮಾರ್ಗದರ್ಶನ ಸಂಸ್ಥೆ ಬಾಗಿಲು ತೆರೆದಿದೆ. ತರಗತಿ ಕಲಿಕೆಯ ಖುಷಿ ಮತ್ತೆ ನಿಮ್ಮದಾಗಲಿ ಸತತ ಐದಾರು…

Read More

ಕನ್ನಡ ಕ್ಯಾಡ್‌ನೆಸ್ಟ್‌ ಓದುಗರಿಗೆ, ವಿದ್ಯಾರ್ಥಿಗಳಿಗೆ ನಮಸ್ಕಾರ. ಇಂದು ನಿಮಗೆ ಅತ್ಯಂತ ಬೇಡಿಕೆಯ ಕೋರ್ಸ್‌ ಅನ್ನು ಪರಿಚಯಿಸುತ್ತಿದ್ದೇವೆ. ಆ ಕೋರ್ಸ್ ಹೆಸರು Interior design course. ಮನೆ ಖರೀದಿ ಬಳಿಕ ಹಲವು ಲಕ್ಷ ರೂಪಾಯಿಗಳನ್ನು ಇಂಟೀರಿಯರ್‌ ಡಿಸೈನ್‌ಗೆ ಜನರು ವ್ಯಯಿಸುತ್ತಾರೆ. ಬೆಂಗಳೂರಿನಂತಹ ನಗರಗಳಲ್ಲಿ ಮಧ್ಯಮ ವರ್ಗದವರು ಒಳಾಂಗಣ ವಿನ್ಯಾಸಕ್ಕೆ ಒಂದೆರಡು ಲಕ್ಷ ರೂ. ಖರ್ಚು ಮಾಡಿದರೆ, ಶ್ರೀಮಂತರು ಹತ್ತು ಲಕ್ಷ ರೂ.ನಿಂದ 50 ಲಕ್ಷ ರೂ.ವರೆಗೂ ಖರ್ಚು ಮಾಡುವುದುಂಟು. ಅವರವರ ಟೇಸ್ಟ್‍ಗೆ ತಕ್ಕಂತೆ ಒಳಾಂಗಣವನ್ನು ವಿನ್ಯಾಸ ಮಾಡಿಕೊಡುವ ಈ ಇಂಟೀರಿಯರ್ ಪರಿಣಿತರಿಗೆ ದೇಶದಲ್ಲಿಂದು ಬೇಡಿಕೆ ಹೆಚ್ಚಿದೆ. ಹೊಸ ಮನೆಯ ಒಳಾಂಗಣ ವಿನ್ಯಾಸ, ಹಳೆ ಮನೆಯ ನವೀಕರಣ ಮಾತ್ರವಲ್ಲದೆ ಆಫೀಸ್, ಹೋಟೆಲ್, ಅಂಗಡಿ ಸೇರಿದಂತೆ ವಿವಿಧ ವಾಣಿಜ್ಯ ಕಟ್ಟಡಗಳ ಒಳಾಂಗಣ ರೂಪಿಸಲು ಇಂಟೀರಿಯರ್ ಡಿಸೈನರ್‍ಗಳು ಬೇಕೇಬೇಕು. ಸ್ಥಳಾವಕಾಶ ಯೋಜನೆ, ಬಣ್ಣಗಳ ಆಯ್ಕೆ ಇತ್ಯಾದಿಗಳ ಕುರಿತೂ ಇಂಟೀರಿಯರ್ ಡಿಸೈನರ್ ಗಮನ ನೀಡಬೇಕಾಗುತ್ತದೆ. ಆರ್ಕಿಟೆಕ್ಟ್, ಎಂಜಿನಿಯರ್ ಮತ್ತು ಬಿಲ್ಡರ್‍ಗಳ ಜೊತೆ ಇಂಟೀರಿಯರ್ ಡಿಸೈನರ್ ಕಾರ್ಯನಿರ್ವಹಿಸಬೇಕಾಗುತ್ತದೆ. ಬೆಂಗಳೂರಿನಲ್ಲಿ ಇಂಟೀರಿಯರ್‌…

Read More

ಇದು ಡಿಜಿಟಲ್‌ ಯುಗ. ಈ ಕಾಲದಲ್ಲಿ ಕಂಪನಿಗಳು ತಮ್ಮ ವ್ಯವಹಾರ, ಸೇವೆಗಳ ಪ್ರಚಾರವನ್ನು ಡಿಜಿಟಲ್‌ ಮೂಲಕವೇ ಹೆಚ್ಚಾಗಿ ನಡೆಸುತ್ತಿವೆ. ಇಂತಹ ಟ್ರೆಂಡ್‌ ಅನ್ನು ಗಮನದಲ್ಲಿಟ್ಟುಕೊಂಡು ಕನ್ನಡ ಕ್ಯಾಡ್‌ನೆಸ್ಟ್‌‌ನ ಈ ಲೇಖನದಲ್ಲಿ ಡಿಜಿಟಲ್‌ ಮಾರ್ಕೆಟಿಂಗ್‌ ಕುರಿತು ಹೆಚ್ಚಿನ ಮಾಹಿತಿ ಪಡೆದುಕೊಳ್ಳೋಣ. ಡಿಜಿಟಲ್‌ ಮಾರ್ಕೆಟಿಂಗ್‌ ಎನ್ನುವುದು ಸಾಂಪ್ರದಾಯಿಕ ಪ್ರಚಾರ, ಜಾಹೀರಾತು ಆಯ್ಕೆಗಳಿಗಿಂತ ಅಗ್ಗವೂ ಹೌದು. ಎಲ್ಲವೂ ಇಂಟರ್‍ನೆಟ್‍ಮಯವಾಗುತ್ತಿರುವ ಈ ಯುಗದಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಬಲ್ಲವರಿಗೆ ಉತ್ತಮ ಬೇಡಿಕೆಯಿದೆ. ಸರ್ಚ್ ಎಂಜಿನ್ ಆಪ್ಟಿಮಿಜೇಷನ್, ಸೋಷಿಯಲ್ ಮೀಡಿಯಾ ಆಪ್ಟಿಮಿಜೇಷನ್ ಸೇರಿದಂತೆ ಡಿಜಿಟಲ್ ಮಾರ್ಕೆಟಿಂಗ್ ತಂತ್ರಗಳನ್ನು ಕಲಿಯಲು ಎಲ್ಲರೂ ಆಸಕ್ತಿ ವಹಿಸುತ್ತಿದ್ದಾರೆ. ಡಿಜಿಟಲ್ ಮಾರ್ಕೆಟಿಂಗ್ ಎಂದರೇನು? ಸರಳವಾಗಿ ಹೇಳುವುದಾದರೆ ಯಾವುದಾದರೂ ಉತ್ಪನ್ನ ಅಥವಾ ಬ್ರಾಂಡ್ ಅನ್ನು ವಿವಿಧ ರೀತಿಯ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಚಾರ ಪಡಿಸುವುದನ್ನು ಡಿಜಿಟಲ್ ಮಾರ್ಕೆಟಿಂಗ್ ಎನ್ನಬಹುದು. ಈಗ ಗೂಗಲ್, ಫೇಸ್‍ಬುಕ್, ಇಮೇಲ್, ಮೊಬೈಲ್, ಸ್ಮಾರ್ಟ್‍ಫೋನ್‌ ಇತ್ಯಾದಿ ಮಾಧ್ಯಮಗಳ ಮೂಲಕ ಮಾರುಕಟ್ಟೆ ವಿಸ್ತರಿಸಿಕೊಳ್ಳುವ ವಿಧಾನವನ್ನು ಅನುಸರಿಸುತ್ತದೆ. ಇಂತಹ ನವ ಮಾಧ್ಯಮದಲ್ಲಿ ಉತ್ಪನ್ನ ಅಥವಾ ಬ್ರಾಂಡ್ ಪ್ರಚಾರ ಪಡಿಸಲು…

Read More

ಡಿಜಿಟಲ್‌ ಮಾರ್ಕೆಟಿಂಗ್‌ ಎನ್ನುವುದು ಕಳೆದ ಕೆಲವು ವರ್ಷಗಳಿಂದ ತುಂಬಾ ಬೇಡಿಕೆಯಲ್ಲಿರುವ ಉದ್ಯೋಗ. ಸಣ್ಣ ವ್ಯಾಪಾರಸ್ಥರಿಂದ ಹಿಡಿದು ದೊಡ್ಡ ಕಂಪನಿಯವರೆಗೆ ಪ್ರತಿಯೊಬ್ಬರು ತಮ್ಮ ಉತ್ಪನ್ನಗಳು ಮತ್ತು ಸೇವೆಗಳನ್ನು ಆನ್‌ಲೈನ್‌ ಮೂಲಕ ಪ್ರಚಾರ ಮಾಡಲು ಬಯಸುತ್ತಿದ್ದಾರೆ. ಇಂತಹ ಸಮಯದಲ್ಲಿ ಡಿಜಿಟಲ್ ಮಾರ್ಕೆಟಿಂಗ್‌ ಕೌಶಲ ಕಲಿತವರ ನೇಮಕವೂ ಗಣನೀಯವಾಗಿ ಏರಿಕೆ ಕಾಣುತ್ತಿದೆ. ಇದೇ ಕಾರಣಕ್ಕೆ ಡಿಜಿಟಲ್‌ ಮಾರ್ಕೆಟಿಂಗ್‌ ಕೋರ್ಸ್‌ ಕಲಿಯಲು ಬಯಸುವ ವಿದ್ಯಾರ್ಥಿಗಳು (ಯಾವುದೇ ವಯೋಮಿತಿ ಇಲ್ಲದೆ, ಬಿಸ್ನೆಸ್‌ಮ್ಯಾನ್‌ಗಳು ಸೇರಿದಂತೆ) ಹೆಚ್ಚಾಗುತ್ತಿದ್ದಾರೆ. ಆದರೆ, ಡಿಜಿಟಲ್‌ ಮಾರ್ಕೆಟಿಂಗ್‌ ಕೋರ್ಸ್‌ ಫೀಸ್‌ಗಳನ್ನು ನೋಡಿ ಕೆಲವರು ಬೆಚ್ಚಿ ಬೀಳುವುದಂಟು. ೩೦ ಸಾವಿರ ರೂ.ನಿಂದ ಒಂದೆರಡು ಲಕ್ಷ ರೂ.ವರೆಗೂ ಡಿಜಿಟಲ್‌ ಮಾರ್ಕೆಟಿಂಗ್‌ ಕೋರ್ಸ್‌ ಫೀಸ್‌ ಇರುತ್ತದೆ. ಈ ರೀತಿ ಫೀಸ್‌ ಇದ್ದರೆ ಸಾಮಾನ್ಯ ಜನರಿಗೆ ಇದು ಕೈಗೆಟುಕದ ಶಿಕ್ಷಣವಾಗಿ ಪರಿಣಮಿಸಬಹುದು. ಡಿಜಿಟಲ್‌ ಜಗತ್ತಿನಲ್ಲಿ ಒಳ್ಳೆಯ ಅವಕಾಶ ಪಡೆಯಲು ಬಯಸುವ ಸಾಮಾನ್ಯ ವಿದ್ಯಾರ್ಥಿಗಳಿಗೆ ಡಿಜಿಟಲ್ ಮಾರ್ಕೆಟಿಂಗ್‌ ಸೇರಿದಂತೆ ಹಲವು ಬೇಡಿಕೆಯ ಕೋರ್ಸ್‌ಗಳು ಗಗನಕುಸುಮವಾಗಬಾರದು, ಮುಖ್ಯವಾಗಿ ಕನ್ನಡಿಗರಿಗೆ ತೊಂದರೆಯಾಗಬಾರದು ಎಂಬ ನಿಟ್ಟಿನಲ್ಲಿ ಕನ್ನಡ ಕ್ಯಾಡ್‌ನೆಸ್ಟ್‌‌ನ…

Read More