ಈಗಾಗಲೇ ವಿದ್ಯಾರ್ಥಿಗಳ ಕೌಶಲ್ಯವೃದ್ಧಿಗೆ ಪೂರಕವಾಗಿ ಕ್ಯಾಡ್‌ನೆಸ್ಟ್ ಬೆಂಗಳೂರಿನ ರಾಜಾಜಿನಗರ, ಮಲ್ಲೇಶ್ವರಂ, ಶೇಷಾದ್ರಿಪುರಂ ಮತ್ತು ಬಸವನಗುಡಿ ಕೌಶಲ್ಯ ತರಬೇತಿ ಕೇಂದ್ರಗಳು ಹತ್ತು ಹಲವು ಉಪಯುಕ್ತ ಉಪಕ್ರಮಗಳನ್ನು ಕೈಗೊಂಡಿವೆ. ಇದೀಗ ಸಂಪೂರ್ಣವಾಗಿ ಡಿಜಿಟಲ್ ಮಾರ್ಕೆಟಿಂಗ್ ಕಲಿಕೆಗೆ ಮೀಸಲಿಟ್ಟ ಕ್ಯಾಡ್‌ನೆಸ್ಟ್ ಡಿಜಿಸ್ಕಿಲ್ಸ್ ಮೂಲಕ ವಿದ್ಯಾರ್ಥಿಗಳ ಡಿಜಿಟಲ್ ಮಾರ್ಕೆಟಿಂಗ್ ಕೌಶಲ್ಯ ಹೆಚ್ಚಿಸಿ ಡಿಜಿಸ್ಕಿಲ್ಸ್ ಪರಿಣಿತರನ್ನಾಗಿ ಮಾಡಲು ಕ್ಯಾಡ್‌ನೆಸ್ಟ್ ಮುಂದಾಗಿದೆ. ಡಿಜಿಸ್ಕಿಲ್ಸ್- ಇದು ಈ ತಲೆಮಾರಿನ ತರುಣ-ತರುಣಿಯರು ಹೊಂದಿರಲೇಬೇಕಾದ ಕಡ್ಡಾಯ ಕೌಶಲ್ಯ. ಎಲ್ಲವೂ ಇಂಟರ್‌ನೆಟ್‌ಮಯವಾಗಿರುವ ಈ ಪರ್ವಕಾಲದಲ್ಲಿ ಡಿಜಿಸ್ಕಿಲ್ ಹೊಂದಿರುವ ವಿದ್ಯಾರ್ಥಿಗಳು ಒಳ್ಳೆಯ ಕರಿಯರ್ ರೂಪಿಸಿಕೊಳ್ಳಬಲ್ಲರು. ಹೀಗಾಗಿ, ವಿದ್ಯಾರ್ಥಿಗಳ ಡಿಜಿಟಲ್ ಮಾರ್ಕೆಟಿಂಗ್ ಕೌಶಲ್ಯ ಹೆಚ್ಚಿಸಲು ಉಚಿತ ಸೆಮಿನಾರ್ ಅನ್ನು ಆಯೋಜಿಸಲಾಗಿದೆ. ಈ ಸೆಮಿನಾರ್ ನಿಮ್ಮ ಡಿಜಿಟಲ್ ಮಾರ್ಕೆಟಿಂಗ್ ಕೌಶಲ್ಯ ಹೆಚ್ಚಿಸುವುದರ ಜೊತೆಗೆ ನಿಮ್ಮ ರೆಸ್ಯೂಂ ತೂಕ ಹೆಚ್ಚಿಸಿ ನಿಮ್ಮ ಕರಿಯರ್‌ಗೆ ದಾರಿದೀಪವಾಗಲಿದೆ. ಹೀಗಾಗಿ ಮಿಸ್ ಮಾಡದೆ ಸೆಮಿನಾರ್‌ನಲ್ಲಿ ಭಾಗಿಯಾಗಿ. ನಿಮ್ಮ ಗೆಳೆಯ ಗೆಳತಿಯರಿಗೂ ಕ್ಯಾಡ್‌ನೆಸ್ಟ್ ಡಿಜಿಸ್ಕಿಲ್ಸ್ ಸೆಮಿನಾರ್ ಬಗ್ಗೆ ತಿಳಿಸಲು ಮರೆಯಬೇಡಿ. ಉಚಿತ ಸೆಮಿನಾರ್: ವಿದ್ಯಾರ್ಥಿಗಳ ಕಲಿಕೆಗೊಂದು ಹೊಸ…
Author: Prakash Gowda
ಕಂಪ್ಯೂಟರ್ ಏಯ್ಡೆಡ್ ಡಿಸೈನ್ ಅಥವಾ ಕ್ಯಾಡ್ ಎಂಬ ತಂತ್ರಜ್ಞಾನವು ಜಗತ್ತಿನ ಬಹುಬೇಡಿಕೆಯ ಉದ್ಯೋಗ ಕೌಶಲ್ಯ. ಕ್ಯಾಡ್ ಎನ್ನುವುದು ೨ಡಿ ಮತ್ತು ೩ಡಿ ಡ್ರಾಯಿಂಗ್‌ಗೆ ಸಂಬಂಧಪಟ್ಟ ಟೂಲ್ ಮತ್ತು ಸಾಫ್ಟ್ ವೇರ್. ಆರ್ಕಿಟೆಕ್ಚರ್, ಎಂಜಿನಿಯರ್‌ಗಳು, ಡ್ರಾಫ್ಟರ್‌ಗಳು ಮತ್ತು ಕಲಾವಿದರು ಟೆಕ್ನಿಕಲ್ ಇಲ್ಯುಸ್ಟ್ರೇಷನ್ ಮಾಡುವ ಸಮಯದಲ್ಲಿ ಕ್ಯಾಡ್ ತಂತ್ರಜ್ಞಾನ ಬಳಸುತ್ತಾರೆ. ಇದಕ್ಕಾಗಿ 2ಡಿ ಅಥವಾ 3ಡಿ ಗ್ರಾಫಿಕ್ಸ್ ಟೂಲ್ ಅಥವಾ ಸಾಫ್ಟ್‌ವೇರ್ ಬೇಕಾಗುತ್ತದೆ. ಇದರ ಮೂಲಕ ಉತ್ಪನ್ನದ ಚಿತ್ರ ಬಿಡಿಸಲಾಗುತ್ತದೆ. ೧೯೮೨ರ ಇಸವಿಯಲ್ಲಿ ಆಟೋಡೆಸ್ಕ್ ಕಂಪನಿಯು ಆಟೋಕ್ಯಾಡ್ ಎಂಬ ತಂತ್ರಾಂಶವನ್ನು ಪರಿಚಯಿಸಿತು. ಮೂಲಸೌಕರ್ಯ, ತಯಾರಿಕೆ ಮತ್ತು ನಿರ್ಮಾಣ ಕ್ಷೇತ್ರದಲ್ಲಿ ಈ ತಂತ್ರಜ್ಞಾನವನ್ನು ವ್ಯಾಪಕವಾಗಿ ಬಳಸಲಗುತ್ತದೆ. ಮನರಂಜನೆ ಮತ್ತು ಮಾಧ್ಯಮ ಕ್ಷೇತ್ರವೂ ೩ಡಿ ವಿಷುಯಲ್ ಮತ್ತು ಎಫೆಕ್ಟ್‌ಗಳಿಗಾಗಿ ಆಟೋಕ್ಯಾಡ್ ತಂತ್ರಾಂಶವನ್ನು ಬಳಸುತ್ತದೆ. ಮೆಕ್ಯಾನಿಕಲ್ ಮತ್ತು ಸಿವಿಲ್ ಕ್ಯಾಡ್ ಮೆಕ್ಯಾನಿಕಲ್ ಮತ್ತು ಸಿವಿಲ್ ಕ್ಯಾಡ್ ಪ್ರೋಗ್ರಾಂಗಳಲ್ಲಿ ಅಂತಹ ಗಮನಾರ್ಹ ವ್ಯತ್ಯಾಸಗಳು ಇಲ್ಲ. ಆದರೆ, ಈ ತಂತ್ರಜ್ಞಾನವನ್ನು ಇವೆರಡು ಭಿನ್ನವಾದ ಕ್ಷೇತ್ರಗಳು ಬಳಸುವುದೇ ಪ್ರಮುಖ ವ್ಯತ್ಯಾಸ. ಸಿವಿಲ್ ಎಂಜಿನಿಯರ್…
ಜಗತ್ತಿನ ಬಹುತೇಕ ಜನರಿಂದು ಇಂಟರ್‍ನೆಟ್ ಬಳಸುತ್ತಿದ್ದಾರೆ. ಖರೀದಿ, ಮಾಹಿತಿಗಾಗಿ ಪ್ರತಿಯೊಬ್ಬರೂ ವೆಬ್‌ಸೈಟ್‌ಗಳನ್ನು ತಡಕಾಡುತ್ತಿದ್ದಾರೆ. ಆಸ್ಪತ್ರೆ, ಜಿಮ್, ಶಿಕ್ಷಣ ಸಂಸ್ಥೆಗಳು, ಸುದ್ದಿತಾಣಗಳು ಮಾತ್ರವಲ್ಲದೆ ಪ್ರತಿಯೊಬ್ಬರೂ ಸ್ವಂತ ವೆಬ್‍ಸೈಟ್ ಹೊಂದಲು ಆಸಕ್ತಿ ವಹಿಸುತ್ತಾರೆ. ಇ-ಕಾಮರ್ಸ್, ಇಂಟರ್‍ನೆಟ್ ಸುದ್ದಿ ವೆಬ್‍ಸೈಟ್ ಸೇರಿದಂತೆ ವೆಬ್‍ಸೈಟ್ ಅವಲಂಬಿತ ಕಂಪನಿಗಳಲ್ಲಿಯೂ ವೆಬ್‍ಸೈಟ್ ಡಿಸೈನರ್‍ಗಳಿಗೆ ಬೇಡಿಕೆಯಿದೆ. ನೀವು ಯಾವುದೇ ಉದ್ಯೋಗ ಪೋರ್ಟಲ್‌ಗಳನ್ನು ಹೋಗಿ ಹುಡುಕಿ ಅಲ್ಲಿ ವೆಬ್ ವಿನ್ಯಾಸಕ್ಕೆ ಸಂಬಂಧಪಟ್ಟ ಉದ್ಯೋಗಗಳಿಗೆ ಸದಾ ಬೇಡಿಕೆ ಇರುವುದನ್ನು ಗಮನಿಸಬಹುದು. ಯಾಕೆಂದರೆ, ಈ ಕ್ಷೇತ್ರಕ್ಕೆ ಅಷ್ಟೊಂದು ಪರಿಣಿತರ ಅವಶ್ಯಕತೆಯಿದೆ. ವೆಬ್ ಡಿಸೈನ್ ಕಲಿಯಿರಿ ಇದು ಡಿಜಿಟಲ್ ಜಗತ್ತು. ಪ್ರತಿಯೊಂದು ಕಂಪನಿಗಳು, ವ್ಯವಹಾರಗಳು ಇಂಟರ್‌ನೆಟ್ ಜಗತ್ತಿನಲ್ಲಿ ತಮ್ಮ ಅಸ್ತಿತ್ವ ಹೆಚ್ಚಿಸಲು ಪ್ರಯತ್ನಿಸುತ್ತಿವೆ. ಪ್ರತಿಯೊಂದು ವೆಬ್‌ಸೈಟ್‌ಗಳಿಗೂ ಸೂಕ್ತವಾಗಿ ವಿನ್ಯಾಸ ಮಾಡುವ ವೆಬ್ ವಿನ್ಯಾಸಕರ ಅಗತ್ಯವಿರುತ್ತದೆ. ವಿದ್ಯಾರ್ಥಿಗಳು ಮುಖ್ಯವಾಗಿ ಎಚ್‌ಟಿಎಂಎಲ್ ೫, ಸಿಎಸ್‌ಎಸ್ ೩, ಜಾವಾಸ್ಕ್ರಿಪ್ಟ್, ಬೂಟ್‌ಸ್ಟ್ರಾಪ್ ೪ ಮತ್ತು ಜೆಕ್ವಾರಿಯಂತಹ ವೃತ್ತಿಪರ ವೆಬ್ ವಿನ್ಯಾಸ ಕೌಶಲ್ಯಗಳನ್ನು ಕಲಿಯುವ ಅಗತ್ಯವಿರುತ್ತದೆ. ಇಂತಹ ಸ್ಕಿಲ್‌ಗಳು ನಿಮ್ಮಲ್ಲಿ ಇದ್ದರೆ ನೀವು ವೆಬ್…
ಮೊದಲಿಗೆ ಕನ್ನಡ ಕ್ಯಾಡ್‌ನೆಸ್ಟ್ ಓದುಗರಿಗೆ ದೀಪಾವಳಿ ಹಬ್ಬದ ಶುಭಾಶಯಗಳು. ಜೀವನದಲ್ಲಿ ತ್ರಿವಿಕ್ರಮ ಸಾಧನೆ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುವ ಸಲುವಾಗಿ ಇವತ್ತು ಅಮೂಲ್ಯ ಸಲಹೆಯೊಂದಿಗೆ ಬಂದಿದ್ದೇವೆ. ಮೊದಲಿಗೆ ತ್ರಿವಿಕ್ರಮ ಮತ್ತು ಬಲಿಯಂದ್ರನ ಕತೆಯನ್ನು ಸಂಕ್ಷಿಪ್ತವಾಗಿ ನೆನಪಿಸಿಕೊಳ್ಳೋಣ. ತ್ರಿವಿಕ್ರಮ ಮತ್ತು ಬಲಿಯಂದ್ರನ ಕತೆ ಈ ದೀಪಾವಳಿ ಹಬ್ಬದ ಪೌರಾಣಿಕ ಹಿನ್ನೆಲೆ ತಿಳಿದಿರುವವರಿಗೆ ತ್ರಿವಿಕ್ರಮ, ವಾಮನ, ಬಲಿಯೇಂದ್ರ ಮುಂತಾದ ಹೆಸರುಗಳು ತಿಳಿದಿರಬಹುದು. ಪ್ರಹ್ಲಾದನ ಮಗನಾದ ವಿರೋಚನನ ಪುತ್ರ ಬಲಿಚಕ್ರವರ್ತಿ. ವಿಷ್ಣು ಭಕ್ತನಾಗಿದ್ದರೂ ಹಿಂಸಾಪ್ರವೃತ್ತಿ ಹೊಂದಿದ್ದನು. ಈತನ ರಾಜ್ಯವು ಸುಭಿಕ್ಷವಾಗಿತ್ತು. ಆದರೆ, ಎಷ್ಟು ಒಳ್ಳೆಯವನೋ ಅಷ್ಟು ಹಿಂಸಾ ಪ್ರವೃತ್ತಿಯವನಾಗಿದ್ದನು ಎಂದು ಪುರಾಣ ಕತೆಗಳು ಹೇಳುತ್ತವೆ. ಹಿಂಸಾ ಪ್ರವೃತ್ತಿ ಹೆಚ್ಚಾದಗ ಈತನ ಸಂಹಾರಕ್ಕೆ ವಿಷ್ಣು ಮುಂದಾದನು. ಇಂತಹ ಸಮಯದಲ್ಲಿ ಬಲಿಚಕ್ರವರ್ತಿಗೆ ಅಶ್ವಮೇಧಯಾಗ ಮಾಡಬೇಕೆಂಬ ಯೋಚನೆ ಬಂತು. ಯಾರು ಏನೇ ಕೇಳಲಿ, ಬಂದವರಿಗೆಲ್ಲರಿಗೂ ಕೇಳಿದ ವಸ್ತುಗಳನ್ನುದಾನವಾಗಿ ಕೊಡುವ ನಿರ್ಧಾರ ಮಾಡಿದನು. ಈ ಕಾರ್ಯ ಮಾಡಬೇಡ ಎಂದು ಶುಕ್ರ ಎಂಬ ಋಷಿಯ ಸಲಹೆಯನ್ನೂ ಬಲಿ ಕೇಳಲಿಲ್ಲ. ಇದೇ ಸೂಕ್ತ…
ಈ ವರ್ಷದ ದೀಪಾವಳಿ ತುಂಬಾ ವಿಶೇಷ. ಕಳೆದ ಹಲವು ತಿಂಗಳುಗಳಿಂದ ಕವಿದ ಕೊರೊನಾ ಕತ್ತಲಿನಿಂದ ಜಗತ್ತು ನಿಧಾನವಾಗಿ ಹೊರಕ್ಕೆ ಬರುತ್ತಿದೆ. ಕೋವಿಡ್-೧೯ ಪ್ರಕರಣಗಳ ಪ್ರಮಾಣ ದಿನೇ ದಿನೇ ಇಳಿಕೆಯತ್ತ ಸಾಗುತ್ತಿದೆ. ಪದವಿ, ಡಿಪ್ಲೊಮಾ ತರಗತಿಗಳ ಆರಂಭಕ್ಕೆ ಹೊಸ ಎಸ್‌ಒಪಿಯನ್ನು ಸರಕಾರ ಬಿಡುಗಡೆ ಮಾಡಿದೆ. ವಿದ್ಯಾರ್ಥಿ ಸ್ನೇಹಿತರೇ, ಈ ಬೆಳಕಿನ ಹಬ್ಬದ ಸಮಯದಲ್ಲಿ ಜ್ಞಾನವೆಂಬ ಹಣತೆ ಹಚ್ಚಲು ಯೋಜನೆ ರೂಪಿಸಿ. ಹೊಸ ಸ್ಕಿಲ್‌ಗಳನ್ನು ಕಲಿತು ನಿಮ್ಮ ರೆಸ್ಯೂಂ ತೂಕ ಹೆಚ್ಚಿಸಿಕೊಂಡು ಕನಸಿನ ಕರಿಯರ್ ಕ್ಷೇತ್ರದಲ್ಲಿ ಸಾಧನೆ ಮಾಡಿ. ನಿಮ್ಮ ಕರಿಯರ್ ಕನಸುಗಳನ್ನು ಈಡೇರಿಸಲು ಕ್ಯಾಡ್‌ನೆಸ್ಟ್ ಬೆಂಗಳೂರಿನ ರಾಜಾಜಿನಗರ, ಶೇಷಾದ್ರಿಪುರಂ, ಬಸವನಗುಡಿ ಮತ್ತು ಮಲ್ಲೇಶ್ವರಂ ಶಾಖೆಗಳು ಭರ್ಜರಿ ಆಫರ್‌ನೊಂದಿಗೆ ಬಂದಿವೆ. ಕ್ಯಾಡ್‌ನೆಸ್ಟ್‌ನ ಎಲ್ಲಾ ಕೋರ್ಸ್‌ಗಳಿಗೆ ಶೇಕಡ 50 ಡಿಸ್ಕೌಂಟ್ ಹೌದು, ನೀವು ಕೇಳುತ್ತಿರುವುದು ಸುಳ್ಳಲ್ಲ. ಅತ್ಯಂತ ಕಡಿಮೆ ಶುಲ್ಕದಲ್ಲಿ ಶ್ರೇಷ್ಠ ಗುಣಮಟ್ಟದ ಶಿಕ್ಷಣ ನೀಡುತ್ತ ಬಂದಿರುವ ಕರ್ನಾಟಕದ ವಿಶ್ವಾಸನೀಯ ಕೌಶಲ್ಯ ಮತ್ತು ಅಭಿವೃದ್ಧಿ ವೃತ್ತಿ ಶಿಕ್ಷಣ ಹಾಗೂ ಉದ್ಯೋಗ ಮಾರ್ಗದರ್ಶನ ಸಂಸ್ಥೆಯಾದ ಕ್ಯಾಡ್‌ನೆಸ್ಟ್ ಅತಿ…
ಕಳೆದ ಹಲವು ತಿಂಗಳುಗಳಿಂದ ಕ್ಲಾಸ್ ಕಲಿಕೆಯಿಂದ ವಂಚಿತರಾಗಿರುವ ವಿದ್ಯಾರ್ಥಿಗಳಿಗೆ ಶುಭ ಸುದ್ದಿಯೊಂದನ್ನು ರಾಜ್ಯ ಉನ್ನತ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ. ಕನ್ನಡಕ್ಯಾಡ್‌ನೆಸ್ಟ್ ಓದುಗರಿಗಾಗಿ ಈ ಎಸ್‌ಒಪಿ ಅಥವಾ ಪ್ರಮಾಣಿತ ಕಾರ್ಯಚರಣಾ ವಿಧಾನದ ಕುರಿತು ಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ವಿಶೇಷವೆಂದರೆ ಬೆಂಗಳೂರಿನ ಕ್ಯಾಡ್‌ನೆಸ್ಟ್ ಕೌಶಲ ತರಬೇತಿ ಕೇಂದ್ರದಲ್ಲಿ ಕೌಶಲ ತರಬೇತಿಗಳು ನಡೆಯುತ್ತಿದ್ದು, ಆಸಕ್ತರು ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು. ನಮ್ಮ ಸಂಸ್ಥೆಯು ಈ ಎಸ್‌ಒಪಿಯಂತೆ ಕಾರ್ಯನಿರ್ವಹಿಸುತ್ತದೆ. ಬನ್ನಿ ಈ ಎಸ್‌ಒಪಿಯಲ್ಲಿ ಏನಿದೆ ಎಂದು ನೋಡೋಣ. ನವೆಂಬರ್ 17ರಿಂದ ತರಗತಿಗಳು ಆರಂಭ ಕೋವಿಡ್-19 ಪಿಡುಗಿನ ಹಿನ್ನೆಲೆಯಲ್ಲಿ ಸ್ಥಗಿತವಾಗಿರುವ ಪದವಿ, ಎಂಜನಿಯರಿಂಗ್ ಹಾಗೂ ಡಿಪ್ಲೊಮೋ ಕಾಲೇಜುಗಳ ತರಗತಿಗಳನ್ನು ಇದೇ ನವೆಂಬರ್ 17ರಿಂದ ಆರಂಭಿಸುವ ಬಗ್ಗೆ ಯುಜಿಸಿ ಮಾರ್ಗಸೂಚಿಯಂತೆ ಉನ್ನತ ಶಿಕ್ಷಣ ಇಲಾಖೆ ಎಸ್‌ಒಪಿ (ಪ್ರಮಾಣಿತ ಕಾರ್ಯಚರಣಾ ವಿಧಾನ) ಯನ್ನು ಬಿಡುಗಡೆ ಮಾಡಿದೆ.ಈ ಬಗ್ಗೆ ಮಾಹಿತಿ ನೀಡಿರುವ ಉನ್ನತ ಶಿಕ್ಷಣ ಖಾತೆ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಆಫ್‌ಲೈನ್ ತರಗತಿಗಳ ಆರಂಭಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ…
ಕಂಪ್ಯೂಟರ್ ಬಳಕೆದಾರರು ಇಂದು ಮೈಕ್ರೊಸಾಫ್ಟ್ ಉತ್ಪನ್ನಗಳನ್ನು ಒಂದಲ್ಲ ಒಂದು ರೀತಿ ಬಳಸಿಯೇ ಬಳಸುತ್ತಾರೆ .ಎಂಎಸ್ ವರ್ಡ್, ಎಕ್ಸೆಲ್ ಸೇರಿದಂತೆ ವಿವಿಧ ಟೂಲ್‌ಗಳ ಬಳಕೆ ನಿತ್ಯ ಜೀವನಕ್ಕೆ ಅನಿವಾರ್ಯವಾಗಿಬಿಟ್ಟಿದೆ. ಮುಖ್ಯವಾಗಿ ವಾಣಿಜ್ಯ ವಿಭಾಗದಲ್ಲಿ ಕೆಲಸ ಮಾಡುವವರಿಗೆ ಮೈಕ್ರೊಸಾಫ್ಟ್ ಎಕ್ಸೆಲ್ ಕಲಿಯುವುದು ಅತ್ಯಂತ ಅವಶ್ಯಕ. ಎಕ್ಸೆಲ್ ಬೇಸಿಕ್ ಮಾತ್ರವಲ್ಲದೆ ಅಡ್ವಾನ್ಸಡ್ ಎಕ್ಸೆಲ್ ಕಲಿತರೆ ನೀವು ಕರಿಯರ್‌ನಲ್ಲಿ ಸಾಕಷ್ಟು ಸಾಧನೆ ಮಾಡಬಹುದಾಗಿದೆ. ಕನ್ನಡ ಕ್ಯಾಡ್‌ನೆಸ್ಟ್ ಓದುಗ ಮಿತ್ರರಿಗೆ ಇಂದು ಅಡ್ವಾನ್ಸಡ್ ಎಕ್ಸೆಲ್ ಕುರಿತು ಹೆಚ್ಚಿನ ಮಾಹಿತಿ ನೀಡುವ ಸಲುವಾಗಿ ಈ ಬ್ಲಾಗ್ ಬರೆಯಲಾಗಿದೆ. ಅಡ್ವಾನ್ಸಡ್ ಎಕ್ಸೆಲ್ ಎಂದರೇನು? ಸಾಮಾನ್ಯ ಎಂಎಸ್ ಎಕ್ಸೆಲ್‌ಗೆ ಹೋಲಿಸಿದರೆ ಅಡ್ವಾನ್ಸಡ್ ಎಕ್ಸೆಲ್ ಎನ್ನುವುದು ನೂರಾರು ಹೆಚ್ಚುವರಿ ಪ್ರಯೋಜನಗಳನ್ನು ಹೊಂದಿರುವ ಅಮೂಲ್ಯವಾದ ಟೂಲ್ ಆಗಿದೆ. ಮೈಕ್ರೊಸಾಫ್ಟ್ ತನ್ನ ಅಡ್ವಾನ್ಸ್ ಎಕ್ಸೆಲ್‌ನಲ್ಲಿ ಇತ್ತೀಚಿನ ಮತ್ತು ಸುಧಾರಿತ ಫೀಚರ್‌ಗಳನ್ನು ನೀಡುತ್ತಿದೆ. ಗ್ರಾಫಿಕ್ಸ್, ಟೇಬಲ್ಸ್ ಇತ್ಯಾದಿಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಕೆ ಮಾಡಬಹುದು. ಎಂಐಎಸ್ ಅನಾಲಿಸ್ಟ್, ಡೇಟಾ ಅನಾಲಿಸ್ಟ್, ಬಿಸ್ನೆಸ್ ಅನಾಲಿಸ್ಟ್ ಇತ್ಯಾದಿ ಪ್ರಮುಖ ಕರಿಯರ್ ಆಯ್ಕೆ ಮಾಡಿಕೊಳ್ಳುವವರಿಗಂತೂ…
ಕನ್ನಡ ಕ್ಯಾಡ್‌ನೆಸ್ಟ್ ಓದುಗರಿಗೆ, ವಿದ್ಯಾರ್ಥಿಗಳು ಸೇರಿದಂತೆ ಸಮಸ್ತ ಕ್ಯಾಡ್‌ನೆಸ್ಟ್ ಓದುಗರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಕಳೆದ ಹಲವು ಸಮಯದಿಂದ ಕನ್ನಡದಲ್ಲಿ ಉದ್ಯೋಗ ಮತ್ತು ಕೌಶಲ ಮಾಹಿತಿಯನ್ನು ನೀಡುವ ಮೂಲಕ ಕ್ಯಾಡ್‌ನೆಸ್ಟ್ ಬೆಂಗಳೂರು ವಿಭಾಗವು ಕನ್ನಡಮ್ಮನ ಸೇವೆ ಮಾಡುತ್ತ ಬಂದಿದೆ. ರಾಜ್ಯದ ಬಡ ವಿದ್ಯಾರ್ಥಿಗಳು ಸೇರಿದಂತೆ ಕನ್ನಡ ಮಕ್ಕಳಿಗೆ ಸರಿಯಾದ ಉದ್ಯೋಗ ಮತ್ತು ಕೌಶಲ್ಯ ಮಾರ್ಗದರ್ಶನ ನೀಡಬೇಕು ಎನ್ನುವುದು ನಮ್ಮ ಆಶಯ. ಕನ್ನಡಿಗರಿಗೆಲ್ಲ ಸಂಭ್ರಮ ತರುವ ಈ ಕನ್ನಡ ಹಬ್ಬದ ದಿನದಂದು ಕನ್ನಡ ರಾಜ್ಯೋತ್ಸವದ ಇತಿಹಾಸ ಮತ್ತು ಇತರೆ ಮಾಹಿತಿಗಳನ್ನು ತಿಳಿದುಕೊಳ್ಳೋಣ. ಕನ್ನಡಿಗರಾಗಿ ನಮಗೇ ಕನ್ನಡ ಏಕೀಕರಣ ಮತ್ತು ಇತರೆ ಇತಿಹಾಸದ ಘಟನೆಗಳ ಬಗ್ಗೆ ಗೊತ್ತಿಲ್ಲದಿದ್ದರೆ ನಾಚಿಕೆಗೇಡು ಅಲ್ಲವೇ? ಇಂತಹ ಅಪಸವ್ಯ ತಪ್ಪಿಸುವ ಸಲುವಾಗಿ ಕನ್ನಡ ಏಕೀಕರಣ, ಕನ್ನಡ ಬಾವುಟ ಸೇರಿದಂತೆ ಕನ್ನಡ ರಾಜ್ಯೋತ್ಸವಕ್ಕೆ ಸಂಬಂಧಪಟ್ಟ ಹಲವು ವಿಚಾರಗಳನ್ನು ಇಲ್ಲಿ ನೀಡಲಾಗಿದೆ. ಕನ್ನಡ ನಮ್ಮ ಅಸ್ಮಿತೆಕನ್ನಡ ನಮ್ಮ ಅನನ್ಯತೆಕನ್ನಡವೇ ನಮ್ಮ ಆದ್ಯತೆಕನ್ನಡ ಕ್ಯಾಡ್‌ನೆಸ್ಟ್ ಕ್ಯಾಡ್‌ನೆಸ್ಟ್ ಕನ್ನಡ ಕಲಿಕಾ ಕೇಂದ್ರ ಈ ಕನ್ನಡ ರಾಜ್ಯೋತ್ಸವದ…
ಅನಿಮೇಷನ್ ಸಿನಿಮಾಗಳ ಅಂತಾರಾಷ್ಟ್ರೀಯ ಸಂಘಟನೆಯಾದ “ದಿ ಅಸೋಸಿಯೇಷನ್ ಇಂಟರ್‌ನ್ಯಾಷನಲ್ ಫಿಲ್ಮ್ ಅನಿಮೇಷನ್ (ಎಎಸ್‌ಐಎಫ್‌ಎ) ಇಂದು ಜಗತ್ತಿನಾದ್ಯಂತ ಅಂತಾರಾಷ್ಟ್ರೀಯ ಅನಿಮೇಷನ್ ದಿನವನ್ನು ಆಚರಿಸುತ್ತಿದೆ. ASIFAನ ಭಾರತದ ವಿಭಾಗವು ಭಾರತದ ಅತ್ಯುತ್ತಮ ಅನಿಮೇಷನ್ ಸಿನಿಮಾ ತಯಾರಕರನ್ನು ಗುರುತಿಸುವ ಸಲುವಾಗಿ ದೇಶದ ಅತ್ಯುತ್ತಮ ಕಿರುಚಿತ್ರಗಳನ್ನು ಆಯ್ಕೆ ಮಾಡಿದೆ. ದೇಶದ ನೂರಾರು ಪ್ರತಿಭಾನ್ವಿತ ಅನಿಮೇಷನ್ ತಯಾರಕರು ತಯಾರಿಸಿದ ಫಿಲ್ಮ್‌ಗಳಲ್ಲಿ ರಾಜು ಆಂಡ್ ಐ (Raju & I) ಮತ್ತು ಧಕ್- ದಿ ಡ್ರಮ್ ಚಿತ್ರಗಳನ್ನು ಈ ವರ್ಷದ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ASIFAನ ಭಾರತೀಯ ಚಾಪ್ಟರ್‌ನ ಅಧ್ಯಕ್ಷರಾದ ಕೆ. ಚಂದ್ರಶೇಕರ್ ಅವರು ವಿಜೇತರಿಗೆ ಬಹುಮಾನ ವಿತರಿಸಿದರು. ಬಹುಮಾನ ಪಡೆದ ರಾಜು ಆಂಡ್ ಐ ಚಿತ್ರವು ಬಾಲ ಕಾರ್ಮಿಕರ ಕುರಿತಾದ ಅರ್ಧ ಗಂಟೆಯ ಅವಧಿಯ ಚಿತ್ರವಾಗಿದೆ. ಗಾಯತ್ರಿ ರಾವ್ ಅವರು ಈ ಕಿರು ಚಿತ್ರ ನಿರ್ದೇಶಿಸಿದ್ದಾರೆ. ರಾಜೇಶ್ ಚಕ್ರವರ್ತಿ ನಿರ್ದೇಶಿಸಿದ ಪುಟ್ಟ ಮೂರು ನಿಮಿಷದ ಅನಿಮೇಷನ್ ಚಿತ್ರ Dhak – The Drum ಕೂಡ ತೀರ್ಪುಗಾರರ ಗಮನ ಸೆಳೆದೆದ್ದು,…
ಕನ್ನಡ ಕ್ಯಾಡ್‌ನೆಸ್ಟ್ ವಿದ್ಯಾರ್ಥಿಗಳಿಗೆ ಮತ್ತು ಬ್ಲಾಗ್ ಓದುಗರಿಗೆ ಈ ಬಾರಿ ಮೂರು ವಿಶೇಷ ಫೆಲೋಶಿಪ್‌ಗಳ ಕುರಿತು ಮಾಹಿತಿ ನೀಡುತ್ತಿದ್ದೇವೆ. ಬೆಂಗಳೂರಿನ ಬಸವನಗುಡಿ, ರಾಜಾಜಿನಗರ, ಮಲ್ಲೇಶ್ವರಂ ಮತ್ತು ಶೇಷಾದ್ರಿಪುರಂ ಕ್ಯಾಡ್‌ನೆಸ್ಟ್ ಕೌಶಲ್ಯ ತರಬೇತಿ ಕೇಂದ್ರದಲ್ಲಿ ಅಡ್ಮಿಷನ್ ಆಗಲು ಈ ಕೂಡಲೇ ನಮ್ಮನ್ನು ಸಂಪರ್ಕಿಸಬಹುದು. ಸಂಪರ್ಕ ವಿವರ ಇಲ್ಲಿದೆ. Teach for India Fellowship ದೇಶದ ಜನಪ್ರಿಯ ಫೆಲೋಶಿಪ್ ಯೋಜನೆಗಳಲ್ಲಿ ಇದು ಒಂದಾಗಿದೆ. ದೇಶದ ಶಿಕ್ಷಣ ಕ್ರಾಂತಿಯಲ್ಲಿ ಕ್ರಾಂತಿಯಲ್ಲಿ ಪಾಲ್ಗೊಳ್ಳಲು ಟೀಚ್ ಫಾರ್ ಇಂಡಿಯಾ ಫೆಲೋಶಿಪ್ ಯುವಜನತೆಗೆ ಒಂದು ಉತ್ತಮ ಅವಕಾಶ ಇದಾಗಿದೆ. ಈ ಕಾರ್ಯಕ್ರಮದ ಮೂಲಕ ವಿವಿಧ ಶೈಕ್ಷಣಿಕ ಹಿನ್ನಲೆಯನ್ನು ಹೊಂದಿದ ಮತ್ತು ವಿವಿಧ ವೃತ್ತಿಗಳಲ್ಲಿ ಅನುಭವವನ್ನು ಹೊಂದಿದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡು ಫೆಲೋಶಿಪ್ ನೀಡಲಾಗುತ್ತದೆ. ಕೆಲವು ತಿಂಗಳುಗಳ ತರಬೇತಿಯ ನಂತರ ಶೈಕ್ಷಣಿಕವಾಗಿ ಮತ್ತು ಸಂಪನ್ಮೂಲದ ದೃಷ್ಟಿಯಿಂದ ಹಿಂದುಳಿದ ಶಾಲೆಗಳಲ್ಲಿ ಎರಡು ವರ್ಷಗಳ ಅವಧಿಯವರೆಗೆ ಬೋಧನೆ ಮಾಡಲು ಕಳಿಸಲಾಗುತ್ತದೆ. ಇಂತಹ ಶಾಲೆಗಳಲ್ಲಿ ಟೀಚ್ ಫಾರ್ ಇಂಡಿಯಾ ಕಾರ್ಯಕ್ರಮದ ಮೂಲಕ ಆಯ್ಕೆಯಾದ ಫೇಲೋಗಳು ವಿಭಿನ್ನ…