ಕೈತುಂಬಾ ವೇತನ ನೀಡುವ ಉದ್ಯೋಗಗಳಲ್ಲಿ ಸ್ಯಾಪ್ ಸಂಬಂಧಪಟ್ಟ ಉದ್ಯೋಗಗಳು ಪ್ರಮುಖವಾದದ್ದು. ಸ್ಯಾಪ್ ಎನ್ನುವುದು ಜಗತ್ತಿನಾದ್ಯಂತ ಜನಪ್ರಿಯತೆ ಪಡೆದಿರುವ ಮತ್ತು ಬಹುಬೇಡಿಕೆ ಇರುವ ಇಆರ್‌ಪಿ ಸಾಫ್ಟ್‌ವೇರ್. ಸ್ಯಾಪ್ ಕೋರ್ಸ್ ಕಲಿತವರಿಗೆ ಈಗಲೂ, ಮುಂದೆಯೂ ಉತ್ತಮ ಬೇಡಿಕೆ ಇರಲಿದೆ ಎನ್ನುತ್ತಾರೆ ಉದ್ಯೋಗ ತಜ್ಞರು. ಸ್ನೇಹಿತರೇ, ಕನ್ನಡ ಕ್ಯಾಡ್‌ನೆಸ್ಟ್‌ನ ಈ ಬ್ಲಾಗ್ ಪೋಸ್ಟ್‌ನಲ್ಲಿ ಸ್ಯಾಪ್ ಫಿಕೊ ಬಗ್ಗೆ ತಿಳಿದುಕೊಳ್ಳೋಣ. SAP FICO ಯಾರು ಕಲಿಯಬಹುದು? ಈ ಕೋರ್ಸ್ ಕಲಿಯಲು ಇಂತಹದ್ದೇ ಕನಿಷ್ಠ ಅರ್ಹತೆ ಹೊಂದಿರಬೇಕೆಂದಿಲ್ಲ. ಸ್ಯಾಪ್ ವೃತ್ತಿ ಪಡೆಯಲು ಬಯಸುವ ಯಾರೂ ಬೇಕಾದರೂ ಈ ಕೋರ್ಸ್ ಕಲಿಯಬಹುದು. ಆದರೆ, ಈ ಮುಂದಿನ ಅರ್ಹತೆಗಳು ನಿಮ್ಮಲ್ಲಿ ಇದ್ದರೆ ಸ್ಯಾಪ್ ಫಿಕೊ ಕಲಿಕೆ ನಿಮಗೆ ಸುಲಭವಾಗಬಹುದು. ಬಿ.ಕಾಂ ಅಥವಾ ಎಂ.ಕಾಂ ಪದವಿಬಿಬಿಎ ಅಥವಾ ಎಂಬಿಎಸಿಎ, ಸಿಎಸ್, ಸಿಎಫ್‌ಎ ಮಾಡಿದ ಯಾರಾದರೂಯಾವುದೇ ಅಕೌಂಟಿಂಗ್ ಸಾಫ್ಟ್‌ವೇರ್‌ನಲ್ಲಿ ಕೆಲಸ ಮಾಡಿದ ಅನುಭವ ಇದ್ದರೆ ಇತ್ಯಾದಿಎಂಜಿನಿಯರಿಂಗ್ ಅಥವಾ ಯಾವುದೇ ಪದವಿ ಪಡೆದವರೂ ಕಲಿಯಬಹುದು ಸ್ಯಾಪ್ ಫಿಕೊಗೆ ಬೇಡಿಕೆ ಹೇಗಿದೆ? ಸ್ಯಾಪ್ ಫಿಕೊ ಎನ್ನುವುದು ಬಹುಬೇಡಿಕೆಯ…
Author: Prakash Gowda
ದೇಶದ ಭವ್ಯ ಭವಿಷ್ಯ ಬರೆಯುವ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಒಳಿತಿನ ದೃಷ್ಟಿಯಿಂದ ವಿವಿಧ ಕೌಶಲ್ಯಗಳನ್ನು ಕಲಿಯುತ್ತಿರುವುದು ಹೆಮ್ಮೆಯ ಸಂಗತಿ. ವಿಶೇಷವಾಗಿ ತಮ್ಮ ರೆಸ್ಯೂಂ ತೂಕ ಹೆಚ್ಚಿಸಿಕೊಳ್ಳಲು ಹೊಸತನ್ನು ಕಲಿಯಲು ಆದ್ಯತೆ ನೀಡುತ್ತಿದ್ದಾರೆ. ಇಂಟರ್ನ್ಶಿಪ್ ಮಾಡುವವರಿಗೆ ವೇದಿಕೆ ಕಲ್ಪಿಸಿಕೊಡುವ ಇಂಟರ್ನ್‌ಶಾಲಾ ಎಂಬ ದೇಶದ ಪ್ರಮುಖ ಸಂಸ್ಥೆಯ ಅಂಗಸಂಸ್ಥೆಯಾದ ಇಂಟರ್ನ್ ಶಾಲಾ ಟ್ರೇನಿಂಗ್ ಒಂದು ಅಧ್ಯಯನ ವರದಿ ಪ್ರಕಟಿಸಿದ್ದು, ಅದರಲ್ಲಿ ಕೆಲವೊಂದು ಆಸಕ್ತಿದಾಯಕ ಅಂಶಗಳು ಬಹಿರಂಗಗೊಂಡಿವೆ. ಡಿಜಿಟಲ್ ಮಾರ್ಕೆಟಿಂಗ್ ಕಲಿಕೆಗೆ ಆದ್ಯತೆ ಎಲ್ಲಾ ಪದವಿ ಕಾರ್ಯಕ್ರಮಗಳಲ್ಲಿ, 31 ಪ್ರತಿಶತದಷ್ಟು ಪದವೀಧರರು ಮತ್ತು ಎಂಜಿನಿಯರಿಂಗ್ (ಬಿಟೆಕ್ / ಬಿಇ / ಎಂಸಿಎ) ಪದವೀಧರರು ಹಾಗೂ 25 ಪ್ರತಿಶತದಷ್ಟು ಎಂಬಿಎ ಮತ್ತು ವಾಣಿಜ್ಯ ವಿದ್ಯಾರ್ಥಿಗಳು ೨೦೨೦ರಲ್ಲಿ ಹೆಚ್ಚುವರಿಯಾಗಿ ಡಿಜಿಟಲ್ ಮಾರ್ಕೆಟಿಂಗ್ ತರಬೇತಿಗೆ ಸೇರಿದ್ದಾರೆ ಎಂದು ಇಂಟರ್ನ್‌ಶಾಲಾ ವರದಿ ಹೇಳಿದೆ. ಇತರೆ ಸ್ಕಿಲ್ ಕಲಿಕೆಗಿಂತ ಬಹುತೇಕರಿಗೆ ಡಿಜಿಟಲ್ ಮಾರ್ಕೆಟಿಂಗ್ ಕೌಶಲ್ಯವೇ ಆಪ್ತವೆನಿಸಿದೆ. ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ತಮ್ಮ ವಿಶ್ಲೇಷಣಾತ್ಮಕ ಕೌಶಲ್ಯವೃದ್ಧಿಗೊಳಿಸಲು ಡಿಜಿಟಲ್ ಮಾರ್ಕೆಟಿಂಗ್ ಕೋರ್ಸ್‌ಗಳು ನೆರವಾಗಿವೆಯಂತೆ. ವಿದ್ಯಾರ್ಥಿನಿಯರ ಫೇವರಿಟ್ ಕೋರ್ಸ್…
ಮೊದಲಿಗೆ ಕನ್ನಡ ಕ್ಯಾಡ್‌ನೆಸ್ಟ್ ಓದುಗರಿಗೆ ಎಳ್ಳುಬೆಲ್ಲದ ಸುಂದರ ಹಬ್ಬ ಮಕರ ಸಂಕ್ರಾಂತಿಯ ಶುಭಾಶಯಗಳು. ಮಕರ ಸಂಕ್ರಾಂತಿಯೆಂದರೆ ಉತ್ತರಾಯಣ ಕಾಲದ ಆರಂಭ. ಮನುಷ್ಯರ ಒಂದು ವರ್ಷವು ದೇವರ ಒಂದು ದಿನಕ್ಕೆ ಸಮ. ಉತ್ತರಾಯಣ ಕಾಲವೆಂದರೆ ದೇವರ ಹಗಲು ಹೊತ್ತು. ಈ ಆರುತಿಂಗಳು ವಿವಿಧ ಶುಭಕಾರ್ಯಗಳಿಗೆ ಮೀಸಲು. ಹೊಸ ವ್ಯವಹಾರ, ಕಂಪನಿ ಅಥವಾ ಕಲಿಕೆ ಆರಂಭಿಸಲು ಸೂಕ್ತ ಕಾಲವಿದು. ಕಳೆದ ಹಲವು ತಿಂಗಳಿನಿಂದ ಕೋವಿಡ್-19ನಿಂದ ಸಂಕಷ್ಟ ಅನು ಭವಿಸಿದ್ದ ಜಗತ್ತಿಗೆ ಈ ಉತ್ತರಾಯಣ ಕಾಲವು ಹೊಸ ಆಶಾಕಿರಣವೆಂದರೂ ತಪ್ಪಾಗದು. ಕಲಿಕೆಯಿಂದ ವಂಚಿತರಾಗಿದ್ದ ವಿದ್ಯಾರ್ಥಿಗಳಿಗೆ ಹೊಸತು ಕಲಿಯಲು ಈ ಸಂಕ್ರಾಂತಿಯ ಬಳಿಕ ಶುಭ ಸಮಯ ಎನ್ನಬಹುದು. ವಿದ್ಯಾರ್ಥಿಗಳು ಏನು ಕಲಿಯಬಹುದು? ಈ ಉತ್ತರಾಯಣದ ಕಾಲದಲ್ಲಿ ವಿದ್ಯಾರ್ಥಿಗಳು ತಮ್ಮ ಭವ್ಯ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಬೇಡಿಕೆಯಲ್ಲಿರುವ ಕೌಶಲ ಕಲಿಯಬೇಕು. ಮುಖ್ಯವಾಗಿ ಹೊಸ ಟೆಕ್ ಸ್ಕಿಲ್‍ಗಳ ಮೂಲಕ ತಮ್ಮ ರೆಸ್ಯೂಂ ತೂಕ ಹೆಚ್ಚಿಸಿಕೊಳ್ಳಬೇಕು. 2021ರ ಬಹುಬೇಡಿಕೆಯ ಕೌಶಲ್ಯಗಳನ್ನು ಕಲಿಯಲು ಆದ್ಯತೆ ನೀಡಬೇಕಿದೆ. ಈ ವರ್ಷದ ಬಹುಬೇಡಿಕೆಯ ಕೆಲವು ಕೌಶಲ್ಯಗಳನ್ನು ಈ…
ಯಾವುದೇ ಕೆಲಸವನ್ನು ಕಠಿಣ ಪರಿಶ್ರಮದಿಂದ ಮಾಡುವುದು ಒಂದು ವಿಧ. ಸ್ಮಾರ್ಟ್ ಆಗಿ ಮಾಡುವುದು ಇನ್ನೊಂದು ವಿಧ. ಈಗಿನ ಟೆಕ್ ಜಗತ್ತಿನಲ್ಲಿ ಕಠಿಣ ಪರಿಶ್ರಮಿಗಳಿಗಿಂತ ಸ್ಮಾರ್ಟಾಗಿ ಕೆಲಸ ಮಾಡುವವರಿಗೆ ಎಲ್ಲಿಲ್ಲದ ಆದ್ಯತೆ. ಕನ್ನಡ ಕ್ಯಾಡ್‌ನೆಸ್ಟ್ ಇಂದಿನ ಬ್ಲಾಗ್ ಲೇಖನದಲ್ಲಿ ಕಂಪ್ಯೂಟರ್‌ನ ವಿವಿಧ ಶಾರ್ಟ್‌ಕಟ್ ಕೀಗಳನ್ನು ಪರಿಚಯಿಸುತ್ತಿದೆ. ಒಮ್ಮೆ ನೀವು ಈ ಶಾರ್ಟ್‌ಕಟ್‌ಗಳನ್ನು ಕಲಿತರೆ, ನಿಮ್ಮಷ್ಟು ವೇಗವಾಗಿ ವರ್ಡ್, ಎಕ್ಸೆಲ್, ವಿಂಡೋಸ್ ಕಂಪ್ಯೂಟರ್‌ನಲ್ಲಿ ಕೆಲಸ ಮಾಡುವವರು ಯಾರೂ ಇರುವುದಿಲ್ಲ. ಕಂಪ್ಯೂಟರ್‌ನ ಬೇಸಿಕ್ ಶಾರ್ಟ್‌ಕಟ್ ಕೀಗಳು (basic computer shortcut keys) ಕಂಟ್ರೋಲ್ ಸಿ, ಕಂಟ್ರೋಲ್ ಎಕ್ಸ್, ಕಂಟ್ರೋಲ್ ಎ ಇತ್ಯಾದಿಗಳನ್ನು ಬಳಸಿ ಕಾಪಿ, ಪೇಸ್ಟ್, ಸೆಲೆಕ್ಟ್ ಆಲ್ ಇತ್ಯಾದಿಗಳನ್ನು ಮಾಡಲು ನೀವು ಕಲಿತಿರಬಹುದು. ಕಂಪ್ಯೂಟರ್ ಕೀ ಬೋರ್ಡ್‌ನಲ್ಲಿ ಸಾಕಷ್ಟು ಶಾರ್ಟ್‌ಕಟ್‌ಗಳಿದ್ದು, ಬೇಕಿದ್ದರೆ ಮೌಸ್ ಬಳಸದೆಯೂ ಕೆಲಸ ಮಾಡಬಹುದಾಗಿದೆ. ಕಂಪ್ಯೂಟರ್‌ನಲ್ಲಿ ಬಳಸಬಹುದಾದ ಸಾಮಾನ್ಯ ಶಾರ್ಟ್‌ಕಟ್ ಕೀಗಳು ಈ ಮುಂದಿನಂತೆ ಇವೆ. Alt + F–File menu options in the current program.Alt + E–Edits…
ಹೊಸ ವರ್ಷದ ನಿರ್ಣಯಗಳು ಅಥವಾ ರೆಸಲ್ಯೂಷನ್ ಕೈಗೊಳ್ಳಲು ವಿದ್ಯಾರ್ಥಿಗಳು ಯೋಚಿಸುತ್ತಿರಬಹುದು. ವಿವಿಧ ನಿರ್ಣಯಗಳನ್ನು ಪಟ್ಟಿ ಮಾಡುತ್ತಿರಬಹುದು. ವಿದ್ಯಾರ್ಥಿಗಳ ಭವಿಷ್ಯಕ್ಕೆ ಪೂರಕವಾದ ವಿವಿಧ ಲೇಖನಗಳನ್ನು “2021 ಹೊಸ ವರ್ಷಕ್ಕೆ ಸ್ವಾಗತ’ಮಾಲಿಕೆಯಲ್ಲಿ ಕನ್ನಡ ಕ್ಯಾಡ್‌ನೆಸ್ಟ್ ನಿಮ್ಮ ಮುಂದಿಡುತ್ತಿದೆ. ಮೊದಲ ಲೇಖನವು ಈ ಹೊಸ ವರ್ಷದಲ್ಲಿ ಬಹುಬೇಡಿಕೆ ಪಡೆಯುವ ಹತ್ತು ಸಾಫ್ಟ್ ಸ್ಕಿಲ್‌ಗಳ ಕುರಿತಾಗಿದೆ. ಇದು ಭವಿಷ್ಯದ ನಿಮ್ಮ ಉದ್ಯೋಗದಲ್ಲಿ ಕಂಪನಿಗಳು ನಿಮ್ಮಲ್ಲಿ ಬಯಸುವ ಕೌಶಲಗಳೂ ಹೌದು. “ಸಾಫ್ಟ್‌ಸ್ಕಿಲ್ ಎನ್ನುವುದು ವಿದ್ಯಾರ್ಥಿಗಳು ಮತ್ತು ಉದ್ಯೋಗದಲ್ಲಿರುವವರು ಕಲಿಯಲೇಬೇಕಾದ ಕೌಶಲ್ಯವಾಗಿದ್ದು, ಕರಿಯರ್ ಪ್ರಗತಿಗೆ ನೆರವಾಗುತ್ತದೆ. ನಿಮ್ಮಲ್ಲಿ ಎಷ್ಟೇ ವಿದ್ಯಾರ್ಹತೆ ಇದ್ದರೂ, ನಿಮ್ಮ ಅಂಕಪಟ್ಟಿಯಲ್ಲಿ ಎಷ್ಟೇ ಅಂಕಗಳಿದ್ದರೂ ಸಾಫ್ಟ್ ಸ್ಕಿಲ್ ಇಲ್ಲದೆ ಇದ್ದರೆ ಪ್ರಯೋಜನವಿಲ್ಲ. ವಿದ್ಯಾರ್ಥಿಗಳು ಸಂವಹನ ಕೌಶಲ್ಯ, ಪ್ರಸಂಟೇಷನ್ ಸ್ಕಿಲ್ಸ್, ಭಾವನಾತ್ಮಕ ಬುದ್ಧಿಮತ್ತೆ ಇತ್ಯಾದಿ ಹಲವು ಸಾಫ್ಟ್‌ಸ್ಕಿಲ್‌ಗಳನ್ನು ಕಲಿಯಲು ಗಮನ ನೀಡಬೇಕು”ಎಂದು ಪ್ರಕಾಶ್ ಇನ್ಫೋಟೆಕ್ ಮತ್ತು ಕ್ಯಾಡ್‌ನೆಸ್ಟ್ ಬೆಂಗಳೂರು (ಬಸವನಗುಡಿ, ರಾಜಾಜಿನಗರ, ಮಲ್ಲೇಶ್ವರಂ ಮತ್ತು ಶೇಷಾದ್ರಿಪುರಂ ಕ್ಯಾಡ್‌ನೆಸ್ಟ್‌ಕೌಶಲ್ಯ ತರಬೇತಿ ಕೇಂದ್ರಗಳು) ವ್ಯವಸ್ಥಾಪಕ ನಿರ್ದೇಶಕರಾದ ಪ್ರಕಾಶ್ ಗೌಡ ಎಚ್‌ಎಂ ಅಭಿಪ್ರಾಯಪಟ್ಟಿದ್ದಾರೆ.…
ಫೇಸ್‌ಬುಕ್ ಮಾಲಿಕತ್ವದ ವಾಟ್ಸಪ್ ಈಗ ಹೊಸ ದಿಕ್ಕಿಗೆ ತನ್ನ ಕಣ್ಣನ್ನು ನೆಟ್ಟಿದೆ.ಈಗಾಗಲೇ ಗೂಗಲ್ ಪೇ, ಫೋನ್ ಪೇ, ಪೇಟಿಎಂ ಸಾಮ್ರಾಜ್ಯದಲ್ಲಿರುವ ಭಾರತದ ಯುಪಿಐ ಸಾಮ್ರಾಜ್ಯದಲ್ಲಿ ತನ್ನ ಬಾವುಟವನ್ನೂ ನೆಡಲು ಮುಂದಾಗಿದೆ. ಈಗಾಗಲೇ ಫೇಸ್‌ಬುಕ್ ಪೇಮೆಂಟ್ ಫೀಚರ್ ಲಭ್ಯವಿದ್ದು, ಕ್ಯಾಡ್‌ನೆಸ್ಟ್ ವಿದ್ಯಾರ್ಥಿಗಳು ಕೂಡ ಇದೇ ಫೀಚರ್ ಬಳಸಿ ಕಲಿಕಾ ಶುಲ್ಕ ಪಾವತಿಸುತ್ತಿರುವುದು ವಿಶೇಷ. ಆದರೂ, ಒಂದಿಷ್ಟು ಮಂದಿಗೆ ಇನ್ನೂ ವಾಟ್ಸಪ್ ಪೇಮೆಂಟ್ ಕುರಿತು ಅರಿವಿಲ್ಲ. ಇನ್ನು ಕೆಲವರು ಈಗಾಗಲೇ ಫೋನ್‌ಪೇ, ಗೂಗಲ್ ಪೇ ಇದೆಯಲ್ವ? ಇನ್ಯಾಕೆ ವಾಟ್ಸಪ್ ಪೇ ಎಂದುಕೊಂಡು ಸುಮ್ಮನಿದ್ದಾರೆ. ಸಂತೋಷ, ಅವರವರ ಪಾವತಿ ವಿಧಾನ ಅವರವರಿಗೆ. ವಾಟ್ಸಪ್ ಪೇಮೆಂಟ್ ವಿಧಾನ ಬಳಸಲು ಬಯಸುವ ವಿದ್ಯಾರ್ಥಿಗಳಿಗಾಗಿ ಈ ಲೇಖನ. ಉಳಿದವರೂ ಈ ಸುದ್ದಿ ಓದಬಹುದು. ಅಥವಾ ಕನ್ನಡ ಕ್ಯಾಡ್‌ನೆಸ್ಟ್‌ನಲ್ಲಿ ಬರೆದಿರುವ ಇತರೆ ಉಪಯುಕ್ತ ಟಿಪ್ಸ್‌ಗಳನ್ನು ಓದಬಹುದು. ಈಗಾಗಲೇ WhatsApp Pay ಭಾರತದಲ್ಲಿ ಲೈವ್ ಆಗಿದ್ದು, ಆಸಕ್ತರು ತಮ್ಮ ವಾಟ್ಸಪ್ ಅಪ್‌ಡೇಟ್ ಮಾಡಿಕೊಂಡು ಈ ಫೀಚರ್ ಬಳಸಬಹುದು. ವಿಶೇಷವೆಂದರೆ ಈಗಾಗಲೇ ಸ್ಟೇಟ್ ಬ್ಯಾಂಕ್…
ಕ್ಯಾಡ್‌ನೆಸ್ಟ್ ಬೆಂಗಳೂರು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಆಗಾಗ ಆನ್‌ಲೈನ್ ಮತ್ತು ಆಫ್‌ಲೈನ್ ಸೆಮಿನಾರ್‌ಗಳನ್ನು ಆಯೋಜಿಸುತ್ತ ಇರುತ್ತದೆ. ಹಲವು ವಿದ್ಯಾರ್ಥಿಗಳು ಇಂತಹ ಸೆಮಿನಾರ್‌ನಲ್ಲಿ ಭಾಗವಹಿಸಲು ಅತ್ಯುತ್ಸಾಹ ಇರುತ್ತದೆ. ಇನ್ನು ಕೆಲವರು ಸೆಮಿನಾರ್, ವರ್ಕ್‌ಶಾಪ್ ಯಾಕೆ, ಯಾವುದಾದರೂ ಸಿನಿಮಾ ನೋಡೋಣ ಎಂದುಕೊಳ್ಳುತ್ತಾರೆ. ಆದರೆ, ವಿದ್ಯಾರ್ಥಿ ಜೀವನದಲ್ಲಿ ಸೆಮಿನಾರ್, ವರ್ಕ್‌ಶಾಪ್ ಮತ್ತು ಕಾನ್ಫರೆನ್ಸ್‌ಗಳು ಅತ್ಯಂತ ಮಹತ್ವಪೂರ್ಣವಾಗಿದೆ. ಯಾಕೆ ಇವು ಇಂಪಾರ್ಟೆಂಟ್ ಅನ್ನುವ ಸಂಗತಿಯನ್ನು ಈ ಬ್ಲಾಗ್‌ನಲ್ಲಿ ಚರ್ಚಿಸೋಣ ಬನ್ನಿ. ವಿದ್ಯಾರ್ಥಿ ಜೀವನದಲ್ಲಿ ಸೆಮಿನಾರ್‌ಗಳು, ವರ್ಕ್‌ಶಾಪ್‌ಗಳು ಮತ್ತು ಕಾನ್ಫರೆನ್ಸ್‌ಗಳು ಅತ್ಯಂತ ಮಹತ್ವಪೂರ್ಣ. ಇವುಗಳಲ್ಲಿ ಭಾಗವಹಿಸುವುದರ ಮೂಲಕ ಕೇವಲ ಹೊಸ ವಿಷಯಗಳನ್ನು, ದೃಷ್ಟಿಕೋನಗಳನ್ನು ಪಡೆಯುವುದು ಮಾತ್ರವಲ್ಲದೆ ಅತ್ಯುತ್ತಮ ನೆಟ್‌ವರ್ಕಿಂಗ್‌ಗೂ ಸಹಾಯ ಮಾಡುತ್ತದೆ. ಈಗ ನೀವು ಕಾಲೇಜಿನಲ್ಲಿ ಪಡೆಯುವ ಶಿಕ್ಷಣವು ಉದ್ಯಮಗಳ ನಿರೀಕ್ಷೆಯನ್ನು ತಲುಪುತ್ತಿಲ್ಲ. ಈಗಿನ ತಲೆಮಾರಿನ ವಿದ್ಯಾರ್ಥಿಗಳಿಗೆ ಕಾಲೇಜು ಕೊಠಡಿಯಲ್ಲಿ ಪಡೆದ ಪದವಿ ಅಥವಾ ಸರ್ಟಿಫಿಕೇಟ್‌ಗಳು ಸಾಕಾಗುವುದಿಲ್ಲ. ಇಂತಹ ಸಮಯದಲ್ಲಿ ಕಾಲೇಜು ಶಿಕ್ಷಣ ಮತ್ತು ಉದ್ಯಮದ ನಿರೀಕ್ಷೆಯ ನಡುವಿನ ಅಂತರ ತಗ್ಗಿಸಲು ಇಂತಹ ಸೆಮಿನಾರ್‌ಗಳು, ವರ್ಕ್‌ಶಾಪ್‌ಗಳು ಸಹಾಯ ಮಾಡುತ್ತವೆ. ಸೆಮಿನಾರ್‌ನಲ್ಲಿ…
ಬೆಂಗಳೂರಿನ ರಾಜಾಜಿನಗರ, ಬಸವನಗುಡಿ, ಮಲ್ಲೇಶ್ವರಂ ಮತ್ತು ಶೇಷಾದ್ರಿಪುರಂನಲ್ಲಿ ಶಾಖೆಗಳನ್ನು ಹೊಂದಿರುವ ಕ್ಯಾಡ್‌ನೆಸ್ಟ್ ಕ್ಯಾಡ್ ವಿಭಾಗವು ಸಿವಿಲ್ ಕ್ಯಾಡ್ ವಿಷಯದಲ್ಲಿ ವೆಬಿನಾರ್ ಆಯೋಜಿಸುತ್ತಿದ್ದು, ಆಸಕ್ತ ಡಿಪ್ಲೊಮಾ ಮತ್ತು ಬಿಇ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಪಾಲ್ಗೊಳ್ಳಬಹುದು. ಈ ವಿಶೇಷ ಸೆಮಿನಾರ್ ಡಿಸೆಂಬರ್ 19ರ ಶನಿವಾರ ಬೆಳಗ್ಗೆ 11 ಗಂಟೆಗೆ ನಡೆಯಲಿದ್ದು, ಸಿವಿಲ್ ಕ್ಯಾಡ್ ಕುರಿತಾದ ನಿಮ್ಮ ಜ್ಞಾನ ಹೆಚ್ಚಿಸಲು ಸಹಕಾರಿಯಾಗಲಿದೆ. ಬೆಂಗಳೂರಿನ ವಿದ್ಯಾರ್ಥಿಗಳು ಮಾತ್ರವಲ್ಲದೆ ಎಲ್ಲಾ ವಿದ್ಯಾರ್ಥಿಗಳು ಪಾಲ್ಗೊಳ್ಳಲು ಅನುಕೂಲವಾಗುವಂತೆ ಈ ಬಾರಿ ಈ ಸೆಮಿನಾರ್ ಅನ್ನು ಆನ್‌ಲೈನ್ ಮೂಲಕ ಆಯೋಜಿಸಲಾಗಿದೆ. ಕ್ವಿಕ್ ಲುಕ್ ಆಯೋಜಿಸುವುದು ಯಾರು? ಕ್ಯಾಡ್‌ನೆಸ್ಟ್ ಕ್ಯಾಡ್ ಯಾವಾಗ?: ಡಿಸೆಂಬರ್ 19, 2020 ಯಾವ ವಾರ?: ಶನಿವಾರ ಎಷ್ಟು ಗಂಟೆಗೆ?: ಬೆಳಗ್ಗೆ 11 ಗಂಟೆಗೆ ಯಾರು ಭಾಗವಹಿಸಬಹುದು?: ಡಿಪ್ಲೊಮಾ ಮತ್ತು ಬಿಇ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಹೆಸರು ನೋಂದಾಯಿಸುವುದು ಹೇಗೆ?: ಆನ್‌ಲೈನ್ ಮೂಲಕ ಹೆಸರು ನೋಂದಾಯಿಸಲು ಇಲ್ಲಿ ಕ್ಲಿಕ್ ಮಾಡಿ ಇದನ್ನೂ ಓದಿ: ವಿದ್ಯಾರ್ಥಿಗಳು ಸೆಮಿನಾರ್‌ನಲ್ಲಿ ಯಾಕೆ ಪಾಲ್ಗೊಳ್ಳಬೇಕು? Dear Students, Invitation for…
ಬೆಂಗಳೂರು ದಕ್ಷಿಣ ಭಾಗದಲ್ಲಿರುವ ಬಸವನಗುಡಿಯು ಶಾಪಿಂಗ್ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಹೆಸರುವಾಸಿ. ದೊಡ್ಡ ಬಸವನ ದೇಗುಲವು ಇಲ್ಲಿನ ಅತ್ಯಂತ ಹಳೆಯ ದೇಗುಲ. ಇಲ್ಲಿನ ಕಡಲೆಕಾಯಿ ಪರಿಷೆಗೆ ತನ್ನದೇ ಆದ ಇತಿಹಾಸವಿದೆ. ಪರಂಪರೆ, ಸಂಸ್ಕೃತಿ ಮತ್ತು ತನ್ನದೇ ಆದ ಸೊಬಗು ಹೊಂದಿರುವ ಬಸವನಗುಡಿಯಲ್ಲಿ ನಿಮ್ಮ ಪ್ರೀತಿಯ ಕ್ಯಾಡ್‌ನೆಸ್ಟ್ ಶಿಕ್ಷಣ ಸಂಸ್ಥೆ ಆರಂಭವಾಗಿ ಈ ಡಿಸೆಂಬರ್ ೨ಕ್ಕೆ ಭರ್ತಿ ಒಂಬತ್ತು ವರ್ಷಗಳಾಗಿವೆ. ಪುಟ್ಟ ಪುಟ್ಟ ಹೆಜ್ಜೆಯಿಟ್ಟು ಆರಂಭವಾದ ಈ ಸಂಸ್ಥೆಯೀಗ ಬೆಂಗಳೂರಿನ ಪ್ರಮುಖ ಕೌಶಲ್ಯ ತರಬೇತಿ ಸಂಸ್ಥೆಯೂ ಹೌದು. ನಮ್ಮ ಈ ಯಶಸ್ಸಿಗೆ ಸಹಕರಿಸಿದ ವಿದ್ಯಾರ್ಥಿಮಿತ್ರರಿಗೆ, ಬೋಧಕ ವೃಂದಕ್ಕೆ ಮೊದಲಿಗೆ ಅನಂತ ಧನ್ಯವಾದಗಳು. ಯಶಸ್ಸಿನ ಹಿಂದಿನ ಪ್ರೇರಣೆ ಸುಮಾರು ಒಂಬತ್ತು ವರ್ಷಗಳ ಹಿಂದೆ ಬೆಂಗಳೂರು ಹೀಗಿರಲಿಲ್ಲ. ಆಗಿನ ಸವಾಲುಗಳು, ಸಾಧ್ಯತೆಗಳು ಬೇರೆಯಿದ್ದವು. ಐಟಿ ಜಗತ್ತಿನ ಪ್ರಮುಖ ಆಕರ್ಷಣೆಯಾಗಿ ಬೆಳೆಯುತ್ತಿದ್ದ ಬೆಂಗಳೂರಿನಲ್ಲಿ ಸೂಕ್ತ ಐಟಿ ಕೌಶಲ್ಯಗಳನ್ನು ಹೊಂದಿರುವ ಕನ್ನಡಿಗರ ಸಂಖ್ಯೆ ಕಡಿಮೆಯಿತ್ತು ಮುಖ್ಯವಾಗಿ ಬಹುಬೇಡಿಕೆಯ ಸ್ಕಿಲ್‌ಗಳ ಅರಿವು ಸಾಮಾನ್ಯ ವಿದ್ಯಾರ್ಥಿಗಳಿಗೆ ಇರಲಿಲ್ಲ. ಅತ್ಯಂತ ಕಡಿಮೆ ಶುಲ್ಕದಲ್ಲಿ…
ಉದ್ಯೋಗ ಗ್ಯಾರಂಟಿ ಮತ್ತು ಒಳ್ಳೆಯ ವೇತನ ಗ್ಯಾರಂಟಿ ನೀಡುವ ಜನಪ್ರಿಯ ಉದ್ಯೋಗ ಕೌಶಲ್ಯವೆಂದರೆ ಸ್ಯಾಪ್. ಆರಂಭದಲ್ಲಿ ಕೆಲವು ಸಾವಿರ ರೂ.ನಿಂದ ವೇತನ ಆರಂಭವಾಗಿ ಬಳಿಕ ತಿಂಗಳಿಗೆ ಲಕ್ಷಲಕ್ಷ ವೇತನ ತಂದುಕೊಡುವ ಅಪರೂಪದ ಕೌಶಲ್ಯವಿದು. ಖಾಸಗಿ ಕ್ಷೇತ್ರಗಳಲ್ಲಿ ಉದ್ಯೋಗ ಖಾತ್ರಿ ನೀಡುವ ಸ್ಯಾಪ್ ಆಗಮಿಸಿ ಹಲವು ವರ್ಷಗಳೇ ಕಳೆದಿವೆ. ಈ ಹಳೆಯ ಸ್ಕಿಲ್ ಈಗಲೂ ತನ್ನ ಆಕರ್ಷಣೆ ಉಳಿಸಿಕೊಂಡಿದೆ. ಹುಣಸೆ ಮರ ಮುಪ್ಪಾದರೂ ಹುಳಿ ಮುಪ್ಪೇ ಎಂಬ ಗಾದೆ ಮಾತು ಈ ಸ್ಯಾಪ್‌ಗೆ ಸೂಕ್ತವಾಗಿ ಹೊಂದುತ್ತದೆ. ಸ್ಯಾಪ್‌ನ ಇತ್ತೀಚಿನ ಆವೃತ್ತಿಗಳು ಸಾಕಷ್ಟು ಬಂದಿದ್ದು, ಕಾಲಕ್ಕೆ ತಕ್ಕಂತೆ ಅಪ್‌ಡೇಟ್ ಆಗುತ್ತಿದೆ. ಪ್ರಸ್ತುತ ಮತ್ತು ಭವಿಷ್ಯದಲ್ಲಿ ಸದಾ ಬೇಡಿಕೆಯಲ್ಲಿರುವ ಸ್ಯಾಪ್ ಕೋರ್ಸ್ ಕಲಿತರೆ ವಿದ್ಯಾರ್ಥಿಗಳು ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳಬಹುದು. ಇಷ್ಟೆಲ್ಲ ಪೀಠಿಕೆ ಹೇಳಲು ಒಂದು ಕಾರಣವಿದೆ. ಬೆಂಗಳೂರಿನ ಪ್ರತಿಷ್ಠಿತ ಮತ್ತು ಅತ್ಯುತ್ತಮ ಸ್ಯಾಪ್ ಕಲಿಕಾ ಶಿಕ್ಷಣ ಸಂಸ್ಥೆಯೆಂದು ಹೆಸರು ಪಡೆದಿರುವ ಕ್ಯಾಡ್‌ನೆಸ್ಟ್ ಬೆಂಗಳೂರಿನ ಬಸವನಗುಡಿ ಮತ್ತು ರಾಜಾಜಿನಗರ ಶಾಖೆಗಳು ವಿದ್ಯಾರ್ಥಿಗಳಿಗಾಗಿ ಉಚಿತ ಸ್ಯಾಪ್ ಸೆಮಿನಾರ್‌ನಲ್ಲಿ ಪಾಲ್ಗೊಂಡರೆ…