ಕರ್ನಾಟಕದ ಪ್ರಮುಖ ಕೌಶಲಭಿವೃದ್ಧಿ ಕೇಂದ್ರ ಬೆಂಗಳೂರಿನ ಕ್ಯಾಡ್‌ನೆಸ್ಟ್ (CADD Nest Private Limited Bengaluru)ಗೆ ತನ್ನ ಎರಡನೇ ವಾರ್ಷಿಕೋತ್ಸವದ ಸಂಭ್ರಮವನ್ನು “ಪುನೀತ ನಮನ” ಹೆಸರಿನಲ್ಲಿ ಕನ್ನಡದ ಪವರ್‌ಸ್ಟಾರ್ ದಿವಂಗತ ಡಾ. ಪುನೀತ್ ರಾಜ್ ಕುಮಾರ್‌ಗೆ ಅರ್ಪಿಸುತ್ತಿದೆ. ಇದೇ ಶನಿವಾರ , ಏಪ್ರಿಲ್ 1ರಂದು ನಡೆಯಲಿರುವ ಪುನೀತ ನಮನ- ಕ್ಯಾಡ್‌ನೆಸ್ಟ್ ವಾರ್ಷಿಕೋತ್ಸವವನ್ನು ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಶಾಸಕರು, ಉನ್ನತ ಶಿಕ್ಷಣ, ವಿದ್ಯುನ್ಮಾನ, ಐಟಿ ಬಿಟಿ ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಯ ಇಲಾಖೆಯ ಸಚಿವರಾದ ಡಾ. ಸಿ.ಎನ್. ಅಶ್ವತ್ಥನಾರಾಯಣ ಉದ್ಘಾಟಿಸಲಿದ್ದಾರೆ. (ಅಪ್‌ಡೇಟ್: ಚುನಾವಣಾ ನೀತಿ ಸಂಹಿತೆ ಜಾರಿಯಾಗಿರುವುದರಿಂದ ಡಾ. ಸಿ.ಎನ್. ಅಶ್ವತ್ಥನಾರಾಯಣ ಮತ್ತು ಭಾಸ್ಕರ್ ರಾವ್ ಐಪಿಎಸ್ (ನಿ ) ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ, ಉಳಿದಂತೆ ಕಾರ್ಯಕ್ರಮದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ- ಪ್ರಕಾಶ್ ಎಚ್‌ಎಂ, ಎಂಡಿ, ಕ್ಯಾಡ್‌ನೆಸ್ಟ್) ಪುನೀತ ನಮನ ಕ್ಯಾಡ್‌ನೆಸ್ಟ್ ವಾರ್ಷಿಕೋತ್ಸವಕ್ಕೆ ಯುವ ರಾಜಕುಮಾರ್ ರವರು ಚಾಲನೆ ನೀಡಿ ಶ್ಲಾಘನೆ ವ್ಯಕ್ತಪಡಿಸಿದ್ದರೆ. “ಕೌಶಲ ತರಬೇತಿ ಕ್ಷೇತ್ರದಲ್ಲಿ ಹತ್ತು ಹಲವು ವರ್ಷಗಳ ಅನುಭವದಿಂದ ಎರಡು…
Author: Prakash Gowda
ಕ್ಯಾಡ್‌ನೆಸ್ಟ್ ಸಂಸ್ಥೆಯಲ್ಲಿ ಗ್ರಾಫಿಕ್ ಡಿಸೈನ್ ಸೇರಿದಂತೆ ವಿವಿಧ ಡಿಸೈನ್ ಕೌಶಲ ಕಲಿತ ವಿದ್ಯಾರ್ಥಿಗಳಿಗೆ ಅಪೂರ್ವ ಅವಕಾಶವೊಂದು ಇಲ್ಲಿದೆ. ಡಿಸೈನಿಂಗ್ ಕುರಿತು ಆಸಕ್ತಿ ಇರುವ ಇತರೆ ವಿದ್ಯಾರ್ಥಿಗಳಿಗೂ ಇದು ಉತ್ತಮ ಅವಕಾಶ. ಕ್ಯಾಡ್‌ನೆಸ್ಟ್‌ನ ಕ್ರಿಯಾಶೀಲ, ಅತ್ಯುತ್ತಮ ಐಡಿಯಾಗಳಿರುವ ವಿದ್ಯಾರ್ಥಿಗಳು ಕರ್ನಾಟಕ ಸರಕಾರದ ನಮ್ಮ ಕ್ಲಿನಿಕ್ಸ್ ಲೋಗೊ ಡಿಸೈನ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು. ಈ ಕುರಿತು ಹೆಚ್ಚಿನ ವಿವರ ಇಲ್ಲಿದೆ. ಕ್ರಿಯಾಶೀಲ ವಿದ್ಯಾರ್ಥಿಗಳಿಗೆ ಆಲ್ ದಿ ಬೆಸ್ಟ್- ಪ್ರಕಾಶ್ ಗೌಡ ಎಚ್.ಎಂ., ವ್ಯವಸ್ಥಾಪಕ ನಿರ್ದೇಶಕರು, ಕ್ಯಾಡ್‌ನೆಸ್ಟ್ ರಾಜ್ಯದ ಜನತೆಯ ಆರೋಗ್ಯ ಸೇವೆಗೆ ರಾಜ್ಯ ಸರ್ಕಾರ ಶ್ರೀಘ್ರದಲ್ಲೇ ನಮ್ಮ ಕ್ಲಿನಿಕ್ ಅನ್ನು ಆರಂಭ ಮಾಡಲಿದೆ. ಆದರೆ ಅದಕ್ಕೂ ಮುನ್ನವೇ ನಮ್ಮ ಕ್ಲಿನಿಕ್ ಜೊತೆ ಕೈ ಜೋಡಿಸಲು ಆರೋಗ್ಯ ಇಲಾಖೆ ಸುವರ್ಣಾವಕಾಶ ಮಾಡಿಕೊಟ್ಟಿದೆ. ಸರ್ಕಾರವು ‘ನಮ್ಮ ಕ್ಲಿನಿಕ್”ಗೆ ವಿಶಿಷ್ಟವಾದ ಗುರುತನ್ನು ಎದುರು ನೋಡುತ್ತಿದೆ. ಸೃಜನಾತ್ಮಕ ಮತ್ತು ನವೀನ ಲೋಗೋ ವಿನ್ಯಾಸ ಮಾಡಲು ರಾಜ್ಯದ ಜನತೆ ಅವಕಾಶವಿದೆ. ನಮ್ಮ ಕ್ಲಿನಿಕ್‌ನ ವಿಭಿನ್ನ ಮತ್ತು ಆಕರ್ಷಕ ಗುರುತು ಹೇಗಿರಬೇಕು ಅನ್ನುವುದನ್ನು ನೀವು…
ಈ ಯುಗಾದಿ ಹಬ್ಬದ ಸಮಯದಲ್ಲಿನಮ್ಮ ಸಂಭ್ರಮಕ್ಕೆ ಹಲವು ಕಾರಣಗಳಿವೆ. ಮೊದಲನೆಯದಾಗಿ ಉತ್ಸಾಹಿ ವಿದ್ಯಾರ್ಥಿಗಳು ಮತ್ತು ಆತ್ಮೀಯ ಸಹೋದ್ಯೋಗಿಗಳ ನೆರವಿನಿಂದ ಕ್ಯಾಡ್‌ನೆಸ್ಟ್ ಮೊದಲ ವರ್ಷ ಪೂರೈಸಿದೆ. ಮೊದಲ ವಾರ್ಷಿಕೋತ್ಸವದ ಈ ಸಮಯದಲ್ಲಿನಮ್ಮ ಕಳೆದ ಹದಿನೆಂಟು ವರ್ಷಗಳ ಅನುಭವದಿಂದ ಸಾಕಷ್ಟು ಸಾಧಿಸಲು ಸಾಧ್ಯವಾಗಿದೆ. ನಮ್ಮ ಸಂಸ್ಥೆಯ ಭಾಗವಾದ ಪ್ರತಿಯೊಬ್ಬರಿಗೂ ಮೊದಲಿಗೆ ಪ್ರೀತಿಯ ಧನ್ಯವಾದ. ಕೊರೊನಾ ಮತ್ತು ಕೊರೊನೋತ್ತರ ಕಾಲದಲ್ಲಿನೀವು ನಮ್ಮ ಮೇಲಿಟ್ಟ ಪ್ರೀತಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು. ಈ ಸಮಯದಲ್ಲಿಸುಮಾರು 3 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕ ವೃತ್ತಿಪರ ಮತ್ತು ಕೌಶಲ್ಯ ಕೋರ್ಸ್‌ಗಳ ತರಬೇತಿ ನೀಡಿದ್ದೇವೆ. ಈ ರೀತಿ ತರಬೇತಿ ಪಡೆದವರಲ್ಲಿ500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈಗಾಗಲೇ ಉದ್ಯೋಗ ಪಡೆದಿದ್ದಾರೆ. ಉಳಿದವರಲ್ಲಿಬಹುತೇಕರು ವಿದ್ಯಾರ್ಥಿಗಳು, ಅವರಿನ್ನೂ ಕಾಲೇಜುಗಳಲ್ಲಿಓದುತ್ತಿದ್ದಾರೆ. ಕಾಲೇಜಿನಲ್ಲಿಓದುತ್ತಿರುವುದರ ಜೊತೆಗೆ ನಮ್ಮಲ್ಲಿಕೋರ್ಸ್‌ಗಳನ್ನು ಕಲಿತು ತಮ್ಮ ರೆಸ್ಯುಮೆ ತೂಕ ಹೆಚ್ಚಿಸಿಕೊಂಡಿದ್ದಾರೆ. ಅವರಿಗೆ ಖಂಡಿತವಾಗಿಯೂ ಮುಂದೆ ಒಳ್ಳೆಯ ಉದ್ಯೋಗ ದೊರಕುವ ಭರವಸೆ ನಮಗಿದೆ. ಕಳೆದ ಯುಗಾದಿ ಹಬ್ಬದ ಸಮಯದಲ್ಲಿಕ್ಯಾಡ್‌ನೆಸ್ಟ್ ಆರಂಭಿಸಿದ್ದು ನಿಜಕ್ಕೂ ನಮ್ಮ ಪಾಲಿಗೆ…
ಐಟಿ ಅಥವಾ ಐಟಿಯೇತರ ಉದ್ಯೋಗ ಮಾಡುವವರು ವಿವಿಧ ಸಾಫ್ಟ್‌ವೇರ್ ಸ್ಕಿಲ್‌ಗಳು, ಕಂಪ್ಯೂಟರ್ ಸ್ಕಿಲ್‌ಗಳನ್ನು ಕಲಿಯುತ್ತಿರಬೇಕಾಗುತ್ತದೆ. ಜೊತೆಗೆ, ಇತ್ತೀಚಿನ ತಂತ್ರಾಂಶಗಳಿಗೆ ಅಪ್‌ಡೇಟ್ ಆಗುತ್ತಿರಬೇಕಾಗುತ್ತದೆ. ಇಂತಹ ಹೊಸ ಸ್ಕಿಲ್‌ಗಳನ್ನು ವಿದ್ಯಾರ್ಥಿಗಳು ಯಾಕೆ ಕಲಿಯಬೇಕು ಎನ್ನುವ ಮಾಹಿತಿಯನ್ನು ಕ್ಯಾಡ್‌ನೆಸ್ಟ್ ಇಲ್ಲಿ ನೀಡಿದೆ. ಐಟಿ ಲೋಕದ ಹೊಸ ಕೌಶಲ ಪಡೆದಿದ್ದರೆ ಕಂಪನಿಗಳು ನಿಮ್ಮನ್ನು ಬೇಗನೇ ನೇಮಕ ಮಾಡಿಕೊಳ್ಳುವುದು ಮಾತ್ರವಲ್ಲದೆ ಅತ್ಯುತ್ತಮ ವೇತನದ ಆಫರ್ ಅನ್ನೂ ನೀಡುತ್ತವೆ.ನಿಮ್ಮ ಉದ್ಯೋಗ ಕ್ಷೇತ್ರಕ್ಕೆ ಅವಶ್ಯವಿರುವ ಪ್ರಸಕ್ತ ಮತ್ತು ಭವಿಷ್ಯದ ಕೌಶಲಗಳು ಯಾವುವು ಎಂದು ತಿಳಿದುಕೊಂಡು ಮುಂದುವರೆಯಿರಿ.ಮೊಬೈಲ್ ಆ್ಯಪ್ ಡೆವಲಪರ್ ಅಥವಾ ಹಡೂಪ್ ಡೆವಲಪರ್ಗೂ ಈಗ ಬಂಪರ್ ವೇತನದ ಆಫರ್ ದೊರಕುತ್ತದೆ. ಹಡೂಪ್ ಎನ್ನುವುದು ಕಂಪ್ಯೂಟಿಂಗ್ನಲ್ಲಿಬೃಹತ್ ಪ್ರಮಾಣದ ಡೇಟಾಗಳನ್ನು ಪ್ರೊಸೆಸ್ ಮಾಡಲು ಬೆಂಬಲ ನೀಡುವ ಪ್ರೋಗ್ರಾಮ್ ಆಗಿದೆ.ಟೆರ್ಮ್ಸ್, ಜೂಲಿಯಾ, ಹಡೂಪ್, ಸ್ಕ್ರೂಮ್ ಮಾಸ್ಟರ್, ಡೆವ್ಒಫ್ಸ್ ಇತ್ಯಾದಿ ಕೌಶಲಗಳಿಗೆ ಉದ್ಯೋಗ ಮಾರುಕಟ್ಟೆಯಲ್ಲಿಂದು ಉತ್ತಮ ಬೇಡಿಕೆ ಇದೆ. ಇಂತವುಗಳನ್ನು ಕಲಿಯಲು ಆದ್ಯತೆ ನೀಡಿ.ಇಂತಹ ಕೌಶಲಗಳನ್ನು ಸಾಫ್ಟ್ವೇರ್ ಆಧರಿತ ಹೆಚ್ಚಿನ ಕಂಪನಿಗಳು ಬಯಸುತ್ತಿವೆ. ಹೊಸ ಕೌಶಲಗಳಿಗೆ ಅಪ್ಡೇಟ್…
ಕನ್ನಡ ನಾಡಿನ ಯಾವುದೇ ಮೂಲೆಯಲ್ಲಿ ಓದಿರುವ ವಿದ್ಯಾರ್ಥಿ/ವಿದ್ಯಾರ್ಥಿನಿ ಉದ್ಯೋಗ ಸಂದರ್ಶನವೊಂದರ ಬಾಗಿಲು ತೆರೆದಾಗ “ಮೇ ಐ ಕಮಿನ್ ಸರ್/ಮೇಡಮ್” ಎಂದು ಹೇಳಿ ಒಳ ಪ್ರವೇಶಿಸಬೇಕಾದ ಅನಿವಾರ್ಯತೆಯಿದೆ. ಉದ್ಯೋಗ ಸಂದರ್ಶನದ ಬಾಗಿಲು ತೆರೆದು ಕುಳಿತ ಮೇಲೂ “ಟೆಲ್ ಮಿ ಅಬೌಟ್ ಯುವರ್ ಸೆಲ್ಫ್” ಇತ್ಯಾದಿ ಪ್ರಶ್ನೆಗಳಿಗೂ ಇಂಗ್ಲಿಷ್‌ನಲ್ಲಿಯೇ ಉತ್ತರಿಸಬೇಕಾದ ಅನಿವಾರ್ಯ ಸಂದರ್ಭದಲ್ಲಿ ನಾವಿದ್ದೇವೆ. ನಿಮ್ಮ ಬಗ್ಗೆ ನೀವು ಕನ್ನಡದಲ್ಲಿ ಏನೂ ಬೇಕಾದರೂ ಹೇಳುವ ಶಕ್ತಿ ಹೊಂದಿರುವಿರಿ. ನಿಮ್ಮಲ್ಲಿರುವ ಸ್ಕಿಲ್‌ಗಳ ಬಗ್ಗೆ, ನಿಮ್ಮ ಭವಿಷ್ಯದ ಕನಸಿನ ಕುರಿತು ಕನ್ನಡದಲ್ಲಿ ಎಷ್ಟು ಬೇಕಾದರೂ ಹೇಳುವ ಸಾಮರ್ಥ್ಯ ನಿಮಗಿರಬಹುದು. ಆದರೆ, ಈ ಮಾಹಿತಿಗಳನ್ನು ಇಂಗ್ಲಿಷ್‌ನಲ್ಲಿ ಹೇಳುವ ಅನಿವಾರ್ಯತೆ ನಿಮ್ಮ ಮುಂದೆ ಬಂದಾಗ ತಡಬಡಾಯಿಸುವಿರಿ. ನಿಮ್ಮಲ್ಲಿ ಒಳ್ಳೆಯ ಉದ್ಯೋಗ ಕೌಶಲ್ಯವಿದ್ದರೂ ಮಾತುಬಲ್ಲ ಕಡಿಮೆ ಕೌಶಲ್ಯದ ಪ್ರತಿಸ್ಪರ್ಧಿ ವಿದ್ಯಾರ್ಥಿಯ ಮುಂದೆ ನೀವು ಸೋಲಬೇಕಾಗಬಹುದು. ಇನ್ನೊಂದು ಸಮಸ್ಯೆ ಶಿಕ್ಷಣ ಸಂಸ್ಥೆಗಳದ್ದು. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸುಲಭವಾಗಿ ಅರ್ಥವಾಗದಂತೆ ಕೇವಲ ಇಂಗ್ಲಿಷ್‌ನಲ್ಲಿಯೇ ಬೋಧಿಸಲಾಗುತ್ತದೆ. ಟೆಕ್ ಕೋರ್ಸ್‌ಗಳ ವಿವರವನ್ನು ಕನ್ನಡದಲ್ಲಿ ಹೇಳಿಕೊಡುವವರಿಲ್ಲ. ಇಂತಹ ಸಂದರ್ಭದಲ್ಲಿ…
ಇತ್ತೀಚಿನ ದಿನಗಳಲ್ಲಿ ಬಹುಬೇಡಿಕೆ ಪಡೆದುಕೊಂಡಿರುವ ಟೆಕ್ನಿಕಲ್ ಸ್ಕಿಲ್‍ಗಳ ವಿವರ ಇಲ್ಲಿದೆ. ನೀವು ಉದ್ಯೋಗ ಜಗತ್ತಿಗೆ ಹೊಸದಾಗಿ ಕಾಲಿಟ್ಟವರು ಆಗಿರಬಹುದು ಅಥವಾ ಈಗಾಗಲೇ ಅನುಭವಿ ಉದ್ಯೋಗಿ ಎಂದು ಹಣೆಪಟ್ಟಿ ಕಟ್ಟಿಕೊಂಡಿರಬಹುದು. ಆದರೆ, ಇತ್ತೀಚಿನ ಕೌಶಲಗಳನ್ನು ಕಲಿಯದೆ ಇದ್ದರೆ ನಿಮ್ಮ ರೆಸ್ಯೂಂಗೆ ತೂಕ ಇರದು. ತಂತ್ರಜ್ಞಾನ ಜಗತ್ತಿನಲ್ಲಿ ವಿವಿಧ ಕೌಶಲಗಳು ಬೇಡಿಕೆ ಹೆಚ್ಚಿಸಿಕೊಂಡಿವೆ. ಮುಂದಿನ ದಿನಗಳಲ್ಲಿ ಇವು ಇನ್ನಷ್ಟು ಬೇಡಿಕೆ ಕಾಣುವ ನಿರೀಕ್ಷೆ ಇದೆ. ಅಂತಹ ಕೌಶಲಗಳ ವಿವರ ಇಲ್ಲಿದೆ. ಪ್ರೋಗ್ರಾಮಿಂಗ್ ಪ್ರೋಗ್ರಾಮಿಂಗ್ ಭಾಷೆಗಳನ್ನು ಬಳಸಿಕೊಂಡು ಸಾಫ್ಟ್‍ವೇರ್ ಮತ್ತು ಅಪ್ಲಿಕೇಷನ್‍ಗಳನ್ನು ನಿರ್ಮಿಸುವುದು ಪ್ರೋಗ್ರಾಮಿಂಗ್‌ನಲ್ಲಿ ಒಳಗೊಂಡಿದೆ. ಕೋಡ್ ಮತ್ತು ಕ್ರಮಾವಳಿ ರಚನೆ ಸಮರ್ಪಕವಾಗಿದೆಯೇ ಎಂದು ಪರಿಶೀಲಿಸುವುದೂ ಇದರಲ್ಲಿ ಒಳಗೊಂಡಿದೆ. ಫೈನಾನ್ಸ್, ಮ್ಯಾನುಫ್ಯಾಕ್ಚರಿಂಗ್, ಡಿಸೈನ್, ಹೆಲ್ತ್‍ಕೇರ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕಂಪ್ಯೂಟರ್ ಸಾಫ್ಟ್‍ವೇರ್‍ಗಳ ಬಳಕೆ ಹೆಚ್ಚುತ್ತಿದ್ದು ಪ್ರೋಗ್ರಾಮರ್ ಗಳಿಗೆ ಬೇಡಿಕೆ ಹೆಚ್ಚಿದೆ. ವೇತನ: 0-5 ವರ್ಷ ಅನುಭವ ಇರುವ ಸಾಫ್ಟ್‍ವೇರ್ ಎಂಜಿನಿಯರ್‍ಗೆ ವಾರ್ಷಿಕ ವೇತನ 4.3ರಿಂದ 7.35 ಲಕ್ಷ ರೂ. ಆಸುಪಾಸಿನಲ್ಲಿ ವೇತನ ಇರುತ್ತದೆ. ವೆಬ್ ಡೆವಲಪ್‍ಮೆಂಟ್…
ನಾಡಿನೆಲ್ಲೆಡೆ ನಾಡಹಬ್ಬ ದಸರಾ ಸಂಭ್ರಮ ಮನೆ ಮಾಡಿದ್ದು, ಎಲ್ಲರೂ ಒಂಬತ್ತು ದಿನಗಳ ಕಾಲ ದುರ್ಗೆಯ ಆರಾಧನೆ, ಬಣ್ಣಬಣ್ಣದ ಉಡುಗೆ ತೊಟ್ಟು ಸಂಭ್ರಮಿಸುವ ತವಕದಲ್ಲಿದ್ದಾರೆ. ಇತ್ತೀಚೆಗಷ್ಟೇ ಕ್ಲಾಸ್‌ರೂಂ ತರಗತಿಗಳು ಆರಂಭವಾದ ಖುಷಿಯಲ್ಲಿರುವ ವಿದ್ಯಾರ್ಥಿಗಳಿಗೆ ದಸರಾ ರಜೆಗಿಂತ ಕ್ಲಾಸ್ ರೂಂ ಹೆಚ್ಚು ಹಿತವಾಗಿರುವುದು ಸುಳ್ಳಲ್ಲ. ಕಳೆದ ಒಂದೂವರೆ, ಎರಡು ವರ್ಷದಿಂದ ಜಗತ್ತನ್ನೇ ಕಾಡಿದ ಕೊರೊನಾದಿಂದಾಗಿ ವಿದ್ಯಾರ್ಥಿಗಳ ಜ್ಞಾನ, ಕೌಶಲ್ಯಗಳು ಕಡಿಮೆಯಾಗಿದ್ದು, ವಿವಿಧ ವಿದ್ಯಾರ್ಥಿಗಳು ಭವಿಷ್ಯ ಬೆಳಗುವ ವಿವಿಧ ಕರಿಯರ್ ಸ್ಕಿಲ್‌ಗಳನ್ನು ಬಿಡುವಿನ ವೇಳೆಯಲ್ಲಿ ಕಲಿಯುತ್ತಿದ್ದಾರೆ. ಇಂತಹ ಸಮಯದಲ್ಲಿ ಕನ್ನಡಿಗ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ, ಮುಖ್ಯವಾಗಿ ಬಡ ವಿದ್ಯಾರ್ಥಿಗಳು ಉತ್ತಮ ಸ್ಕಿಲ್ ಸೆಟ್‌ಗಳನ್ನು ಹೊಂದಲು ನೆರವಾಗುವಂತೆ ಕರ್ನಾಟಕದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯೊಂದು ವಿದ್ಯಾರ್ಥಿಗಳಿಗೆ ಶೇಕಡ ೫೦ ಡಿಸ್ಕೌಂಟ್ ನೀಡಿದ್ದು, ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ. ಕರ್ನಾಟಕದ ಪ್ರಮುಖ ಕೌಶಲ್ಯ ತರಬೇತಿ ಕೇಂದ್ರವಾದ, ಬೆಂಗಳೂರಿನ ಬಸವನಗುಡಿ, ರಾಜಾಜಿನಗರ, ಮಲ್ಲೇಶ್ವರಂ, ಶೇಷಾದ್ರಿಪುರಂ, ಆರ್‌ಟಿ ನಗರ ಮತ್ತು ರಾಜಾರಾಜೇಶ್ವರಿ ನಗರಗಳಲ್ಲಿ ಶಾಖೆಗಳನ್ನು ಹೊಂದಿರುವ ಕ್ಯಾಡ್‌ನೆಸ್ಟ್‌ನಲ್ಲಿ ಎಲ್ಲಾ ಪ್ಯಾಕೇಜ್ ಕೋರ್ಸ್‌ಗಳಿಗೆ ಶೇಕಡ 50 ಡಿಸ್ಕೌಂಟ್…
ಈ ಕಥೆ ನಿಮಗೆ ಗೊತ್ತಿರಬಹುದು. ಒಂದು ಊರಿಗೆ ಪ್ರವಾಹ ಬಂತು. ಎಲ್ಲರೂ ಸುರಕ್ಷಿತ ಸ್ಥಳ ಹುಡುಕುತ್ತ ಓಡಿದರು. ಆದರೆ ಆತ ಮಾತ್ರ ಓಡಲಿಲ್ಲ. ನೀನ್ಯಾಕೆ ಓಡುತ್ತಿಲ್ಲ’ ಎಂದು ಎಲ್ಲರೂ ಅವನಲ್ಲಿ ಕೇಳಿದರು. ಅದಕ್ಕೆ ಆತ `ನನ್ನನ್ನು ದೇವರು ಕಾಪಾಡುತ್ತಾನೆ. ನನಗೆ ಆತನ ಮೇಲೆ ನಂಬಿಕೆಯಿದೆ’ ಎನ್ನುತ್ತಾನೆ. ನೀರಿನ ಪ್ರಮಾಣ ಸ್ವಲ್ಪ ಹೆಚ್ಚಾದಗ ಒಂದು ಕಾರು ಬಂತು. ಆದರೆ ನನ್ನನ್ನು ದೇವರು ಕಾಪಾಡುತ್ತಾನೆ’ ಎಂದು ಅವನು ಕಾರನ್ನು ವಾಪಸ್ ಕಳುಹಿಸಿದ. ನೀರಿನ ಪ್ರಮಾಣ ಇನ್ನೂ ಹೆಚ್ಚಾದಗ ಲಾರಿಯೊಂದು ಬಂತು. ದೇವರು ಬಂದು ಕಾಪಾಡುತ್ತಾನೆ ಎಂದು ಲಾರಿಯನ್ನೂ ವಾಪಸ್ ಕಳುಹಿಸಿದ. ನೀರು ಮತ್ತೂ ಹೆಚ್ಚಾಯಿತು. ಆಗ ಒಂದು ದೋಣಿ ಬಂತು. ನನ್ನನ್ನು ಕಾಪಾಡಲು ದೇವರು ಬರುತ್ತಾನೆ ಎಂದ. ಅದನ್ನೂ ವಾಪಸ್ ಕಳುಹಿಸಿದ. ನೀರಿನ ಪ್ರಮಾಣ ಹೆಚ್ಚಾಗಿ ಮನೆಯ ಮಹಡಿಯನ್ನು ಏರಿ ಕುಳಿತ. ಆಗ ಅಲ್ಲಿಗೆ ಹೆಲಿಕಾಪ್ಟರ್ ಬಂತು. ದೇವರು ಬಂದು ಕಾಪಾಡುತ್ತಾನೆ ಎಂದು ಹೆಲಿಕಾಪ್ಟರ್‍ನಲ್ಲೂ ಆತ ಹೋಗಲಿಲ್ಲ. ನೀರು ಹೆಚ್ಚಾಯಿತು. ಆತ ನೀರಲ್ಲಿ…
ಸ್ಯಾಪ್ ಎನ್ನುವುದು ಬೃಹತ್ ಸಾಗರವಾಗಿದ್ದು, ಪರಿಣತಿ ಪಡೆದವರಿಗೆ ಕೈತುಂಬಾ ವೇತನ ನೀಡುವ ಅದ್ಭುತ ಕರಿಯರ್ ಆಯ್ಕೆಯಾಗಿದೆ. ಸ್ಯಾಪ್‌ನಲ್ಲಿ ಸಾಕಷ್ಟು ಮಾಡೆಲ್‌ಗಳಿದ್ದು (ಸಂಪೂರ್ಣ ಮಾಡ್ಯುಲ್‌ಗಳ ವಿವರ ಇಲ್ಲಿದೆ) ಪ್ರತಿಯೊಂದು ಮಾಡ್ಯುಲ್‌ಗಳೂ ಅಪಾರ ಅವಕಾಶಗಳ್ನನು ಹೊಂದಿದೆ. ಇಂದಿನ ಬ್ಲಾಗ್ ಪೋಸ್ಟ್‌ನಲ್ಲಿ ಸ್ಯಾಪ್ ಎಚ್‌ಆರ್ ಮಾಡ್ಯುಲ್ ಬಗ್ಗೆ ತಿಳಿದುಕೊಳ್ಳೋಣ. ಏನಿದು ಸ್ಯಾಪ್ ಎಚ್‌ಆರ್? ಸ್ಯಾಪ್ ಹ್ಯೂಮನ್ ರಿಸೋಸರ್ಸ್ ಅಥವಾ ಸ್ಯಾಪ್ ಮಾನವ ಸಂಪನ್ಮೂಲವನ್ನು ಸರಳವಾಗಿ ಸ್ಯಾಪ್ ಎಚ್‌ಆರ್ ಎನ್ನಲಾಗುತ್ತದೆ. ಇದಕ್ಕೆ ಸ್ಯಾಪ್ ಹ್ಯೂಮನ್ ಕ್ಯಾಪಿಟಲ್ ಮ್ಯಾನೇಜ್‌ಮೆಂಟ್ (SAP HCM) ಮತ್ತು ಸ್ಯಾಪ್ ಹ್ಯೂಮನ್ ರಿಸೋರ್ಸ್ ಮ್ಯಾನೇಜ್‌ಮೆಂಟ್ ಸಿಸ್ಟಮ್ (SAP HRMS) ಎಂಬ ಹೆಸರುಗಳೂ ಇವೆ. SAP HR ಎನ್ನುವುದು ರೆಕಾರ್ಡ್ ಕಾಪಾಡುವ ಪ್ರಕ್ರಿಯೆಯನ್ನು ಸ್ವಯಂಚಾಲಿತಗೊಳಿಸುವ ಸಾಫ್ಟ್ ವೇರ್ ಇದಾಗಿದೆ. ಮುಖ್ಯವಾಗಿ ವಿವಿಧ ಕಂಪನಿಗಳ ಎಚ್‌ಆರ್ ವಿಭಾಗಕ್ಕೆ ಇದು ಅವಶ್ಯ ಸಾಫ್ಟ್ ವೇರ್ ಆಗಿದೆ. ಉದ್ಯೋಗಿಗಳ ವೇತನಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ನಿರ್ವಹಿಸುವುದು ಇದರಿಂದ ಅತ್ಯಂತ ಸುಲಭವಾಗಿದೆ. ಸ್ಯಾಪ್ ಎಚ್‌ಆರ್ ವಿಭಾಗಗಳು ಸ್ಯಾಪ್ ಎಚ್‌ಆರ್‌ನಲ್ಲಿ ಸಾಂಸ್ಥಿಕ ನಿರ್ವಹಣೆ (Organizational…
ಮೊನ್ನೆಯಷ್ಟೇ ಪಿಯುಸಿ ಫಲಿತಾಂಶ ಬಂದಿದ್ದು, ಈ ಬಾರಿ ಪಾಸ್‌ಗಿಂತ ಫೇಲ್ ಆದವರ ಸಂಖ್ಯೆಯೇ ಹೆಚ್ಚಿರುವುದನ್ನು ಕಂಡು ಎಲ್ಲರೂ ಆಶ್ಚರ್ಯಚಕಿತರಾಗಿದ್ದರು. 2020-21 ನೇ ಸಾಲಿನಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ತಿರಸ್ಕರಿಸಿದ್ದ ಹೊಸ ವಿದ್ಯಾರ್ಥಿಗಳು ಖಾಸಗಿ ಹಾಗೂ ಪುನರಾವರ್ತಿತ ವಿದ್ಯಾರ್ಥಿಗಳು, ಖಾಸಗಿ ಹಾಗೂ ಪುನರಾವರ್ತಿತ ವಿದ್ಯಾರ್ಥಿಗಳಿಗೆ ಆಗಸ್ಟ್- ಸೆಪ್ಟೆಂಬರ್ ನಲ್ಲಿ ನಡೆದಿದ್ದ ವಾರ್ಷಿಕ ಪರೀಕ್ಷೆಯಲ್ಲಿ ಶೇ. 29.91 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪಾಸ್‌ಗಿಂತ ಫೇಲ್ ಆದವರೇ ಹೆಚ್ಚಿರುವ ಈ ರಿಸಲ್ಟ್ ಕೊರೊನಾ ಕಾರಣದಿಂದ ಒಂದಿಷ್ಟು ವಿಶೇಷವಾದದ್ದು. ಆದರೆ, ಪ್ರತಿವರ್ಷ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಫೇಲ್ ಆಗುತ್ತಿದ್ದಾರೆ. ಇವರಲ್ಲಿ ಬಹುತೇಕರು ಓದಿಗೆ ತಿಲಾಂಜಲಿ ಇಟ್ಟು ಬೇರೆ ಯಾವುದೋ ತಮ್ಮದಲ್ಲದ ಕೌಶಲ್ಯದ ಉದ್ಯೋಗಕ್ಕೆ ಹೋಗುತ್ತಾರೆ. ಜೀವನಪೂರ್ತಿ ಜಿತಕ್ಕೆ ಬಿದ್ದವರಂತೆ ಕೆಲಸ ಮಾಡುತ್ತ ಇರುತ್ತಾರೆ. ಯಶಸ್ಸಿಗೆ ಪಾಸ್ ಫೇಲ್ ಮುಖ್ಯವಲ್ಲ! ಈ ಜಗತ್ತಿನಲ್ಲಿ ಯಶಸ್ಸು ಪಡೆದ ಲಕ್ಷಲಕ್ಷ ಜನರನ್ನು ನೋಡಿ, ಅವರಲ್ಲಿ ಬಹುತೇಕರು ಎಸ್‌ಎಸ್‌ಎಲ್‌ಸಿ, ಪಿಯುಸಿ, ಡಿಗ್ರಿಯಲ್ಲಿ ಉತ್ತೀರ್ಣ ಪಡೆದಿರುವುದಿಲ್ಲ. ಆದರೆ, ಅವರು ಚೆನ್ನಾಗಿ ಅಂಕ…