ಬೆಂಗಳೂರಿನ ರಾಜಾಜಿನಗರದ ಕ್ಯಾಡ್‌ನೆಸ್ಟ್ ಶಿಕ್ಷಣ ಸಂಸ್ಥೆಯಲ್ಲಿ ಸೋಮವಾರ ನಡೆದ ಟೆಕ್ನೋ ಚತುರ್ಥಿ 2025ರ ಚಿತ್ರಗಳು ಇಲ್ಲಿವೆ. ಕ್ರಿಯೇಟಿವ್ ಸ್ಟುಡೆಂಟ್ ಪ್ರಾಜೆಕ್ಟ್ಸ್, ಟೈಪಿಂಗ್ ಸ್ಪೀಡ್ ಟೆಸ್ಟ್, ರೀಲ್ಸ್ ಸ್ಪರ್ಧೆ, ಪ್ರೆಸೆಂಟೋಪಿಯಾ ಸ್ಪರ್ಧೆಗಳ ಜತೆ ಡ್ಯಾನ್ಸ್ ಮಸ್ತಿಯೂ ಕಾರ್ಯಕ್ರಮದ ಆಕರ್ಷಣೆಯಾಗಿತ್ತು. ಎಂಜಿನಿಯರಿಂಗ್ ದಿನದಂದು ಗಣೇಶ ಹಬ್ಬವನ್ನೂ ಆಚರಿಸಿ ಎಲ್ಲರೂ ಸಂಭ್ರಮಿಸಿದರು.
Author: Praveen Chandra Puttur
ಬೆಂಗಳೂರಿನ ರಾಜಾಜಿನಗರದ ಕ್ಯಾಡ್‌ನೆಸ್ಟ್ ಶಿಕ್ಷಣ ಸಂಸ್ಥೆಯಲ್ಲಿ ಸೆಪ್ಟೆಂಬರ್ 15ರ ಸೋಮವಾರದಂದು ಬಹುನಿರೀಕ್ಷಿತ “ಕ್ಯಾಡ್‌ನೆಸ್ಟ್ ಟೆಕ್ನೋ ಚತುರ್ಥಿ” ಕಾರ್ಯಕ್ರಮ ನಡೆಯಲಿದೆ. ಗಣೇಶ ಹಬ್ಬ, ಎಂಜಿನಿಯರಿಂಗ್ ದಿನವೆರಡರ ಸಂಯೋಜನೆಯ ಈ ಟೆಕ್ನೋ ಚತುರ್ಥಿಯಲ್ಲಿ ವಿದ್ಯಾರ್ಥಿಗಳ ಭವಿಷ್ಯದ ಕರಿಯರ್‌ಗೆ ಟಾನಿಕ್ ನೀಡುವಂತಹ ಆಸಕ್ತಿದಾಯಕ ಸ್ಪರ್ಧೆಗಳು ಇವೆ. ಟೆಕ್ನೋ ಚತುರ್ಥಿಯಲ್ಲಿ ಏನೆಲ್ಲ ಸ್ಪರ್ಧೆಗಳಿವೆ? ಕ್ರಿಯೇಟಿವ್ ಸ್ಟುಡೆಂಟ್ ಪ್ರಾಜೆಕ್ಟ್ಸ್: ಸಿವಿಲ್ ಮತ್ತು ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ಈ ಸ್ಪರ್ಧೆಯು ತಂಡದ ಕೆಲಸ, ಯೋಜನಾ ನಿರ್ವಹಣೆ ಮತ್ತು ತಾಂತ್ರಿಕ ಕೌಶಲ್ಯಗಳನ್ನು ವೃದ್ಧಿಸುವ ಗುರಿಯನ್ನು ಹೊಂದಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸುವವರು ತಮ್ಮ ವಿನೂತನ ಯೋಜನೆಗಳನ್ನು ಪ್ರದರ್ಶಿಸಲಿದ್ದಾರೆ. ಟೈಪಿಂಗ್ ಸ್ಪೀಡ್ ಟೆಸ್ಟ್: ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಟೈಪಿಂಗ್ ಕೌಶಲ್ಯವನ್ನು ಪರೀಕ್ಷಿಸುವ ಈ ಸ್ಪರ್ಧೆಯು ವಿದ್ಯಾರ್ಥಿಗಳ ಭಾಷಾ ಕೌಶಲ್ಯವನ್ನು ಉತ್ತೇಜಿಸುತ್ತದೆ. ರೀಲ್ಸ್ ಸ್ಪರ್ಧೆ: ಡಿಜಿಟಲ್ ಕಂಟೆಂಟ್ ನಿರ್ಮಾಣದಲ್ಲಿ ಆಸಕ್ತಿಯಿರುವವರಿಗೆ ಈ ಸ್ಪರ್ಧೆಯು ಸೃಜನಶೀಲತೆಯನ್ನು ಪ್ರದರ್ಶಿಸಲು ಅವಕಾಶವನ್ನು ನೀಡುತ್ತದೆ. ಪ್ರೆಸೆಂಟೋಪಿಯಾ: ಪ್ರಸೆಂಟೇಷನ್ ಅನ್ನು ಆಕರ್ಷಕವಾಗಿ ಮಂಡಿಸುವ ಕೌಶಲ್ಯವನ್ನು ವೃದ್ಧಿಸಲು ಈ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಸಖತ್…
ವಿದ್ಯಾರ್ಥಿಗಳು ಮತ್ತು ಉದ್ಯೋಗಾಕಾಂಕ್ಷಿಗಳು ಕಾತರದಿಂದ ಕಾಯುತ್ತಿರುವ ಟೆಕ್ನೋ ಚತುರ್ಥಿ 2025 ಹತ್ತಿರದಲ್ಲಿದೆ. ನಾಡಿದ್ದು ಅಂದರೆ, ಇದೇ ಸೋಮವಾರ ಸೆಪ್ಟೆಂಬರ್ 15ರಂದು ರಾಜಾಜಿನಗರದ ಕ್ಯಾಡ್‌ನೆಸ್ಟ್‌ನಲ್ಲಿ ಸಂಪೂರ್ಣ ಹಬ್ಬದ ವಾತಾವರಣ ಇರಲಿದೆ. ಗಣೇಶ ಚತುರ್ಥಿಯ ಆಧ್ಯಾತ್ಮಿಕ ಆಚರಣೆಯ ಜೊತೆಗೆ ಎಂಜಿನಿಯರ್ ದಿನಾಚರಣೆಯನ್ನು ಸಂಯೋಜಿಸಿ, ವಿದ್ಯಾರ್ಥಿಗಳಿಗೆ ಮತ್ತು ವೃತ್ತಿಪರರಿಗೆ ಕೌಶಲ್ಯ ವೃದ್ಧಿಯ ಸುವರ್ಣಾವಕಾಶವನ್ನು ಒದಗಿಸುವ ವಿಶಿಷ್ಟ ಕಾರ್ಯಕ್ರಮ ಇದಾಗಿದೆ. “ಈ ಸುಂದರ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳು, ಉದ್ಯೋಗಾಕಾಂಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕಾಗಿ ಕೋರುತ್ತಿದ್ದೇನೆ. ನೀವು ಬನ್ನಿ, ನಿಮ್ಮ ಸ್ನೇಹಿತರು, ಬಂಧುಬಳಗದವರನ್ನೂ ಕರೆತನ್ನಿ” ಎಂದು ಕ್ಯಾಡ್‌ನೆಸ್ಟ್ ವ್ಯವಸ್ಥಾಪಕರ ನಿರ್ದೇಶಕರಾದ ಪ್ರಕಾಶ್ ಗೌಡ ತಿಳಿಸಿದ್ದಾರೆ. ದಿನಾಂಕ: 15 ಸೆಪ್ಟೆಂಬರ್ 2025 (ಸೋಮವಾರ)ಸ್ಥಳ: ಕ್ಯಾಡ್‌ನೆಸ್ಟ್, ರಾಜಾಜಿನಗರ, ಬೆಂಗಳೂರುಸಮಯ: ಬೆಳಿಗ್ಗೆ 9:00 ರಿಂದ ಸಂಜೆ 6:00 ರವರೆಗೆ “ನಾವು ಪ್ರತಿವರ್ಷ ವಿದ್ಯಾರ್ಥಿಗಳಿಗೆ ಕಲಿಕೆಯ ಉತ್ಸಾಹವನ್ನು ಹೆಚ್ಚಿಸುವ ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸುತ್ತೇವೆ. ಈ ಬಾರಿ ಟೆಕ್ನೋ ಚತುರ್ಥಿ 2025ರಲ್ಲಿ, ಗಣೇಶ ಚತುರ್ಥಿಯ ಸಾಂಸ್ಕೃತಿಕ ಮಹತ್ವದ ಜೊತೆಗೆ ತಾಂತ್ರಿಕ ಕೌಶಲ್ಯಗಳನ್ನು ಒಂದುಗೂಡಿಸಿ, ಭವಿಷ್ಯದ ಉದ್ಯೋಗ ಮಾರುಕಟ್ಟೆಗೆ…
Techno Chaturthi 2025: ಕರ್ನಾಟಕದ ಪ್ರಮುಖ ಕೌಶಲ್ಯ ಅಭಿವೃದ್ಧಿಸಂಸ್ಥೆಯಾಗಿರುವ ಕ್ಯಾಡ್‌ನೆಸ್ಟ್ ಬೆಂಗಳೂರು ಇದೇ ಸೆಪ್ಟೆಂಬರ್ 15ರಂದು ತನ್ನ ರಾಜಾಜಿನಗರ ಶಾಖೆಯಲ್ಲಿ “ಟೆಕ್ನೋ ಚತುರ್ಥಿ 2025” ಹಮ್ಮಿಕೊಂಡಿದೆ. ಗಣೇಶ ಚತುರ್ಥಿ ಮತ್ತು ಎಂಜಿನಿಯರ್ ದಿನಾಚರಣೆ ಎರಡನ್ನೂ ಒಟ್ಟಿಗೆ ಆಚರಿಸುವ ವಿನೂತನ ಕಾರ್ಯಕ್ರಮ ಇದಾಗಿದೆ. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಕರಿಯರ್ ಅಪ್‌ಗ್ರೇಡ್ ಮಾಡಲು ಬಯಸುವ ವೃತ್ತಿಪರರಿಗೆ ವಿವಿಧ ಸ್ಪರ್ಧೆಗಳು ನಡೆಯಲಿವೆ. ಕಾರ್ಯಕ್ರಮದ ವಿವರದಿನಾಂಕ: 15 ಸೆಪ್ಟೆಂಬರ್ 2025 (ಸೋಮವಾರ)ಸ್ಥಳ: ಕ್ಯಾಡ್ ನೆಸ್ಟ್, ರಾಜಾಜಿನಗರಸಮಯ: ಬೆಳಿಗ್ಗೆ 9:00 – ಸಂಜೆ 6:00 “ಪ್ರತಿವರ್ಷ ಕ್ಯಾಡ್‌ನೆಸ್ಟ್ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿದ್ಯಾರ್ಥಿಗಳಲ್ಲಿ ಕಲಿಕಾ ಸಂಭ್ರಮ ಹೆಚ್ಚಿಸುತ್ತಿದೆ. ಇದರೊಂದಿಗೆ ಕ್ಷಿಪ್ರವಾಗಿ ಬದಲಾಗುತ್ತಿರುವ ಉದ್ಯೋಗ ಮಾರುಕಟ್ಟೆಗೆ ತಕ್ಕಂತೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ. ಈ ಹಿಂದೆ ಕ್ಯಾಡ್‌ನೆಸ್ಟ್ ಹಮ್ಮಿಕೊಂಡ ಪುನೀತ್ ರಾಜ್‌ಕುಮಾರ್ ಉದ್ಯೋಗ ಮೇಳಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಸಾವಿರಾರು ಉದ್ಯೋಗಾಕಾಂಕ್ಷಿಗಳು ಭಾಗವಹಿಸಿದ್ದರು. ಸಾಕಷ್ಟು ಜನರಿಗೆ ಉದ್ಯೋಗ ದೊರಕಿತ್ತು. ಈ ಬಾರಿ ಕ್ಯಾಡ್‌ನೆಸ್ಟ್ ಟೆಕ್ನೋ ಚತುರ್ಥಿ” ಎಂಬ…
ಮೊದಲಿಗೆ ಕ್ಯಾಡ್‌ನೆಸ್ಟ್ ಬೆಂಗಳೂರು ವತಿಯಿಂದ ಶಿಕ್ಷಕರ ದಿನಾಚರಣೆಯ ಶುಭಾಶಯಗಳು. ಕ್ಯಾಡ್‌ನೆಸ್ಟ್‌ನ ಬೋಧಕ ವರ್ಗವೂ ಕರ್ನಾಟಕದ ಸಾವಿರಾರು ವಿದ್ಯಾರ್ಥಿಗಳ ಕರಿಯರ್ ರೂಪಿಸಲು, ಕರಿಯರ್‌ನಲ್ಲಿ ಪ್ರಗತಿ ಕಾಣಲು ನೆರವಾಗಿದ್ದಾರೆ. ಪ್ರತಿ ವರ್ಷ ಸೆಪ್ಟೆಂಬರ್ 5 ರಂದು ಭಾರತದಾದ್ಯಂತ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಈ ದಿನವು ಶಿಕ್ಷಕರ ಶ್ರಮ, ತ್ಯಾಗ ಮತ್ತು ಸಮಾಜದಲ್ಲಿ ಅವರು ನೀಡುವ ಅಮೂಲ್ಯ ಕೊಡುಗೆಯನ್ನು ಸ್ಮರಿಸುವ ಸಂದರ್ಭವಾಗಿದೆ. ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ರವರ ಜನ್ಮದಿನದ ಸ್ಮರಣೆಯಾಗಿ ಆಚರಿಸಲಾಗುವ ಈ ದಿನವು ಗುರು-ಶಿಷ್ಯ ಸಂಬಂಧದ ಪವಿತ್ರತೆಯನ್ನು ಎತ್ತಿ ತೋರಿಸುತ್ತದೆ. ಕ್ಯಾಡ್‌ನೆಸ್ಟ್ ಬೆಂಗಳೂರು ಸಮುದಾಯದ ಪರವಾಗಿ, ಎಲ್ಲ ಶಿಕ್ಷಕರಿಗೆ ಹೃದಯಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇವೆ. ಶಿಕ್ಷಕರ ದಿನಾಚರಣೆಯ ಹಿನ್ನೆಲೆ ಶಿಕ್ಷಕರ ದಿನಾಚರಣೆಯು ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ರವರಿಗೆ ಗೌರವ ಸಲ್ಲಿಸುವ ಸಂಕೇತವಾಗಿದೆ. ಭಾರತದ ಮಾಜಿ ರಾಷ್ಟ್ರಪತಿಯಾಗಿದ್ದ ಇವರು ಒಬ್ಬ ಮೇರು ಶಿಕ್ಷಕರಾಗಿ, ತತ್ವಶಾಸ್ತ್ರಜ್ಞರಾಗಿ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅದ್ಭುತವಾದ ಕೊಡುಗೆ ನೀಡಿದ್ದಾರೆ. 1962ರಲ್ಲಿ ರಾಧಾಕೃಷ್ಣನ್‌ರವರ ಜನ್ಮದಿನವನ್ನು ಆಚರಿಸಲು ಶಿಷ್ಯರು ಮುಂದಾದಾಗ, ಅವರು “ನನ್ನ ಜನ್ಮದಿನದ ಆಚರಣೆಗಿಂತ, ಈ ದಿನವನ್ನು…
ಬೆಂಗಳೂರು: ಕರ್ನಾಟಕದ ಪ್ರಮುಖ ಉದ್ಯೋಗ ಕೌಶಲ್ಯ ಕೇಂದ್ರವೆಂದು ಖ್ಯಾತಿ ಪಡೆದಿರುವ ಕ್ಯಾಡ್‌ನೆಸ್ಟ್ (Caddnest) ಸಂಸ್ಥೆ, ದೊಡ್ಡ ಗಣಪತಿ ದೇಗುಲದ ಸಮೀಪವಿರುವ ತನ್ನ ಬಸವನಗುಡಿಯ ಶಾಖೆಯಲ್ಲಿ ಇಂದು ಗಣೇಶ ಹಬ್ಬವನ್ನು ಭಕ್ತಿ, ಸಂಭ್ರಮ ಮತ್ತು ಸಡಗರದಿಂದ ಆಚರಿಸಿತು. ಕಾರ್ಯಕ್ರಮದ ಆರಂಭದಲ್ಲಿ ಕ್ಯಾಡ್‌ನೆಸ್ಟ್ ಬೆಂಗಳೂರಿನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಪ್ರಕಾಶ್ ಗೌಡ ಅವರು ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು. ಪೂಜೆ ಬಳಿಕ ಎಲ್ಲರೂ ಒಟ್ಟಾಗಿ ಸಿಹಿತಿಂಡಿ ಮತ್ತು ಪ್ರಸಾದವನ್ನು ಸವಿದರು. ವಿದ್ಯಾರ್ಥಿಗಳು ಪರಸ್ಪರ ಶುಭಾಶಯಗಳನ್ನು ಹಂಚಿಕೊಂಡು, ಹಬ್ಬದ ಸಂಭ್ರಮವನ್ನು ಹೆಚ್ಚಿಸಿದರು. ಗಣೇಶ ಹಬ್ಬದ ಸಂಭ್ರಮದ ಚಿತ್ರಗಳು
ಸದ್ಯ ಎಲ್ಲೆಡೆ ಎಐ ಹವಾ. ಕೈಯಲ್ಲಿರುವ ಮೊಬೈಲ್‌ನಲ್ಲಿ, ಕಂಪ್ಯೂಟರ್‌ನಲ್ಲಿ ಎಲ್ಲೆಲ್ಲಿ ಎಐಯದ್ದೇ ಕಾರುಬಾರು. ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಕಳೆದ ಒಂದು ವರ್ಷದಿಂದ ಎಲ್ಲೆಡೆ ಆವರಿಸಿದ ಪರಿ ಅಚ್ಚರಿಗೊಳಿಸುತ್ತದೆ. ಭವಿಷ್ಯದಲ್ಲಿ ಅತ್ಯುತ್ತಮ ಕರಿಯರ್ ಪಡೆಯಲು ಎಐ ಮತ್ತು ಮೆಷಿನ್ ಲರ್ನಿಂಗ್ ಕಲಿಯುವ ಅನಿವಾರ್ಯತೆಯನ್ನು ಇದು ಸೂಚಿಸುತ್ತದೆ. ಹೀಗಾಗಿ, ವಿದ್ಯಾರ್ಥಿಗಳು ಎಐ ಮತ್ತು ಎಂಎಲ್ ಕೋರ್ಸ್‌ಗಳನ್ನು ಕಲಿತು ಭವಿಷ್ಯದ ಉದ್ಯೋಗಕ್ಕೆ ಸಿದ್ಧರಾಗಬೇಕು ಎಂದು ಕ್ಯಾಡ್‌ನೆಸ್ಟ್ ಬೆಂಗಳೂರಿನ ವ್ಯವಸ್ಥಾಪಕ ನಿರ್ದೇಶಕರಾದ ಪ್ರಕಾಶ್ ಗೌಡ ಅಭಿಪ್ರಾಯಪಟ್ಟಿದ್ದಾರೆ. “ಡಿಜಿಟಲ್ ಯುಗದಲ್ಲಿ ತಂತ್ರಜ್ಞಾನದ ವೇಗವು ನಿರಂತರವಾಗಿ ಹೆಚ್ಚುತ್ತಿದ್ದು, ಆರ್ಟಿಫಿಶಿಯಲ್ ಇಂಟಲಿಜೆನ್ಸ್ (AI) ಮತ್ತು ಮೆಷಿನ್ ಲರ್ನಿಂಗ್ (ML) ಕ್ಷೇತ್ರಗಳು ಜಗತ್ತಿನ ಆರ್ಥಿಕತೆಯನ್ನು ಪುನರ್‌ರೂಪಿಸುತ್ತಿವೆ. 2025ರ ಹೊತ್ತಿಗೆ, ಈ ತಂತ್ರಜ್ಞಾನಗಳು ಎಲ್ಲಾ ಉದ್ಯಮಗಳಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರುತ್ತವೆ ಎಂದು ಅಧ್ಯಯನಗಳು ಸೂಚಿಸುತ್ತಿವೆ. ವರ್ಲ್ಡ್ ಇಕಾನಮಿಕ್ ಫೋರಂನ ಇತ್ತೀಚಿನ ವರದಿಯ ಪ್ರಕಾರ, ಬಿಗ್ ಡೇಟಾ ಸ್ಪೆಷಲಿಸ್ಟ್‌ಗಳು, ಫಿನ್‌ಟೆಕ್ ಎಂಜಿನಿಯರ್‌ಗಳು ಮತ್ತು AI-ML ತಜ್ಞರು ಭವಿಷ್ಯದ ಅತಿ ಬೇಡಿಕೆಯ ಉದ್ಯೋಗಗಳಾಗಿರುತ್ತಾರೆ. ಭಾರತದಂತಹ ದೇಶಗಳಲ್ಲಿ, ವಿಶೇಷವಾಗಿ ತಂತ್ರಜ್ಞಾನದ…
ಕರ್ನಾಟಕದ ಪ್ರಮುಖ ಕೌಶಲ್ಯ ಅಭಿವೃದ್ಧಿ ಸಂಸ್ಥೆಯಾದ ಕ್ಯಾಡ್‌ನೆಸ್ಟ್ ಬೆಂಗಳೂರು ತನ್ನ ರಾಜಾಜಿನಗರ ಮತ್ತು ಬಸವನಗುಡಿ ಶಾಖೆಗಳಲ್ಲಿ ವರಮಹಾಲಕ್ಷ್ಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿತ್ತು. ಈ ಸಂಭ್ರಮದ ಕಾರ್ಯಕ್ರಮದಲ್ಲಿ ಕ್ಯಾಡ್‌ನೆಸ್ಟ್‌ನ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ್ ಗೌಡ ಮತ್ತು ಸಂಸ್ಥೆಯ ಸಿಬ್ಬಂದಿಗಳು, ವಿದ್ಯಾರ್ಥಿಗಳು ಪಾಲ್ಗೊಂಡರು. ಈ ಸಂಭ್ರಮದ ಫೋಟೋಗಳು ಇಲ್ಲಿವೆ. ಕಣ್ತುಂಬಿಕೊಳ್ಳಿ. (ಫೋಟೋ ಗ್ಯಾಲರಿಯಲ್ಲಿರುವ ಎಲ್ಲಾ ಫೋಟೋಗಳನ್ನು ನೋಡಲು ನೆಕ್ಸ್ಟ್ ಬಟನ್ ಕ್ಲಿಕ್ ಮಾಡಿ) ಇದನ್ನೂ ಓದಿ: ವರಮಹಾಲಕ್ಷ್ಮಿ ಹಬ್ಬ 2025: ಆಚರಣೆ, ಮಹತ್ವ ತಿಳಿಯಿರಿ; ವಿದ್ಯಾರ್ಥಿಗಳಿಗೆ ಇದು ಶುಭ ಸಮಯ ಏಕೆ ಗೊತ್ತೆ?
ಕರ್ನಾಟಕದ ಅನೇಕ ಪ್ರತಿಭಾನ್ವಿತ ವಿದ್ಯಾರ್ಥಿಗಳು ಉತ್ತಮ ಉದ್ಯೋಗ ಪಡೆಯಲು ವಿಫಲರಾಗಲು ಪ್ರಮುಖ ಕಾರಣ ಇಂಗ್ಲಿಷ್‌ನಲ್ಲಿ ಸಂದರ್ಶಕರ ಜತೆಗೆ ಅತ್ಯುತ್ತಮವಾಗಿ ಮಾತನಾಡಲು ಸಾಧ್ಯವಾಗದೆ ಇರುವುದು. ಸಾಕಷ್ಟು ವಿದ್ಯಾರ್ಥಿಗಳು ಗ್ರಾಮೀಣ ಹಿನ್ನೆಲೆಯಿಂದ ಬಂದವರಾಗಿರುತ್ತಾರೆ. ಕನ್ನಡ ಮಾಧ್ಯಮಗಳಲ್ಲಿ ಓದಿರುವ ಹೆಚ್ಚಿನ ವಿದ್ಯಾರ್ಥಿಗಳು ಇಂಗ್ಲಿಷ್‌ನಲ್ಲಿ ಯೋಚಿಸುವುದು ಕಡಿಮೆ. ಸಂದರ್ಶಕರು ಕೇಳಿದ ಪ್ರಶ್ನೆಗೆ ಕನ್ನಡದಲ್ಲಿಯಾದರೆ ನಿರರ್ಗಳವಾಗಿ ಮಾತನಾಡಬಲ್ಲರು. ಆದರೆ, ಇಂಗ್ಲಿಷ್‌ನಲ್ಲಿ ಉತ್ತರಿಸಲು ಪದಗಳಿಗೆ ತಡಕಾಡುತ್ತಾರೆ. ಕೆಲವೊಮ್ಮೆ ಆತ್ಮವಿಶ್ವಾಸದ ಕೊರತೆಯೂ ಇಂಗ್ಲಿಷ್‌ನಲ್ಲಿ ಮಾತನಾಡಲು ಹಿಂಜರಿಯುವಂತೆ ಮಾಡುತ್ತದೆ. ಆದರೆ, ಈಗಿನ ಉದ್ಯೋಗ ಜಗತ್ತಿನಲ್ಲಿ ಇಂಗ್ಲಿಷ್ ಗೊತ್ತಿದ್ದರೆ ಸಾಕಷ್ಟು ಉತ್ತಮ ಅವಕಾಶಗಳನ್ನು ಪಡೆಯಬಹುದು. ಕರ್ನಾಟಕ ಮಾತ್ರಲ್ಲದೆ ದೇಶದ ಇತರೆ ಭಾಗಗಳಲ್ಲಿ, ವಿದೇಶಗಳಲ್ಲಿ ಕೆಲಸ ಮಾಡಲು ಇಂಗ್ಲಿಷ್ ಜ್ಞಾನ ಅಗತ್ಯವಾಗಿದೆ. ಕನ್ನಡ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಕಲಿಸಲು ಕ್ಯಾಡ್‌ನೆಸ್ಟ್ ವಿಶೇಷ ಕಾಳಜಿ ವಹಿಸುತ್ತದೆ. ಸ್ಪೋಕನ್ ಇಂಗ್ಲಿಷ್ ಕಲಿಕೆ ಏಕೆ ಅಗತ್ಯ? ಇಂದಿನ ಜಾಗತಿಕ ಯುಗದಲ್ಲಿ ಇಂಗ್ಲಿಷ್ ಕೇವಲ ಭಾಷೆಯಲ್ಲ, ಬದಲಿಗೆ ಯಶಸ್ಸಿನ ಬಾಗಿಲು ತೆರೆಯುವ ಕೀಲಿಯಾಗಿದೆ. ಉದ್ಯೋಗ ಸಂದರ್ಶನ, ಕಚೇರಿ ಸಂವಹನ, ವಿದೇಶಿ ಪ್ರವಾಸ, ಅಥವಾ…
ಶ್ರಾವಣ ಮಾಸದ ಸಂಭ್ರಮವು ಕನ್ನಡಿಗರಿಗೆ ವಿಶೇಷವಾದದ್ದು. ಈ ತಿಂಗಳಿನಲ್ಲಿ ಬರುವ ವರಮಹಾಲಕ್ಷ್ಮಿ ಹಬ್ಬವು ಭಕ್ತಿಯ ಸಂಕೇತವಾಗಿರುವುದರ ಜೊತೆಗೆ, ಸಂಪತ್ತು, ಸಮೃದ್ಧಿ ಮತ್ತು ಶುಭಕಾರ್ಯಗಳಿಗೆ ಒಂದು ಸುಂದರ ಆರಂಭವನ್ನು ಒಡ್ಡುತ್ತದೆ. 2025ರ ಆಗಸ್ಟ್ 8ರಂದು ಶುಕ್ರವಾರ ಆಚರಿಸಲಾಗುವ ಈ ಹಬ್ಬವು ಮಹಿಳೆಯರಿಗೆ ಮಾತ್ರವಲ್ಲ, ವಿದ್ಯಾರ್ಥಿಗಳಿಗೂ ಹೊಸ ಕಲಿಕೆಯ ದಾರಿಯನ್ನು ತೆರೆಯುವ ಸುಸಂದರ್ಭವಾಗಿದೆ. ವರಮಹಾಲಕ್ಷ್ಮಿ ಹಬ್ಬದ ಆಚರಣೆ ವರಮಹಾಲಕ್ಷ್ಮಿ ವ್ರತವು ಶ್ರಾವಣ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯ ಹಿಂದಿನ ಶುಕ್ರವಾರ ಆಚರಿಸಲ್ಪಡುತ್ತದೆ. 2025ರಲ್ಲಿ ಈ ಹಬ್ಬ ಆಗಸ್ಟ್ 8ರಂದು ಬಂದಿದ್ದು, ಈ ದಿನದಂದು ಲಕ್ಷ್ಮೀ ದೇವಿಯನ್ನು ಭಕ್ತಿಯಿಂದ ಆರಾಧಿಸಲಾಗುತ್ತದೆ. ಆಚರಣೆಯ ವಿಧಾನ ಹಬ್ಬದ ದಿನ ಬೆಳಿಗ್ಗೆ ಮನೆಯನ್ನು ಶುಚಿಗೊಳಿಸಿ, ರಂಗೋಲಿಯಿಂದ ಅಲಂಕರಿಸಲಾಗುತ್ತದೆ. ಇದು ಲಕ್ಷ್ಮೀ ದೇವಿಯ ಆಗಮನಕ್ಕೆ ಸ್ವಾಗತದ ಸಂಕೇತವಾಗಿದೆ.ಬಿಂದಿಗೆಯನ್ನು ಕಲಶವಾಗಿಟ್ಟು, ಅದರಲ್ಲಿ ನೀರು, ಖರ್ಜೂರ, ದ್ರಾಕ್ಷಿಯನ್ನು ತುಂಬಿಸಿ, ಮಾವಿನ ಎಲೆ, ವೀಳ್ಯೆದೆಲೆಯಿಂದ ಸುತ್ತುವರಿಯಲಾಗುತ್ತದೆ. ಕಲಶದ ಮೇಲೆ ಅರಿಶಿಣ-ಕುಂಕುಮ ಹಚ್ಚಿದ ತೆಂಗಿನಕಾಯಿಯನ್ನು ಇರಿಸಿ, ಕೆಂಪು-ಬಿಳಿ ಸೀರೆಯಿಂದ ದೇವಿಯನ್ನು ಅಲಂಕರಿಸಲಾಗುತ್ತದೆ.ಸ್ಥಿರ ಲಗ್ನದ ಸಮಯದಲ್ಲಿ (ಉದಾಹರಣೆಗೆ, ಸಿಂಹ…