Kannada CADD Nest Private Limited

ಫುಲ್‌ ‌ ಸ್ಟಾಕ್‌ ಡೆವಲಪರ್‌ ಕೋರ್ಸ್‌ ಕಲಿತರೆ ಜಾಬ್‌ ಗ್ಯಾರಂಟಿ

ಫುಲ್‌ ‌ ಸ್ಟಾಕ್‌ ಡೆವಲಪರ್‌ ಕೋರ್ಸ್‌ ಕಲಿತರೆ ಜಾಬ್‌ ಗ್ಯಾರಂಟಿ

ಕನ್ನಡಕ್ಯಾಡ್‌ನೆಸ್ಟ್‌‌ ಕರಿಯರ್‌ ಗೈಡ್‌ಗೆ ಸ್ವಾಗತ. ಇಂದು ನಾವು ಬಹುಬೇಡಿಕೆಯ ಒಂದು ಸ್ಕಿಲ್‌ ಬಗ್ಗೆ ಚರ್ಚಿಸೋಣ. ಆ ಸ್ಕಿಲ್‌ ಹೆಸರು “ಫುಲ್‌ ಸ್ಟಾಕ್‌ ವೆಬ್‌ ಡೆವಲಪರ್”.

ಅಮ್ಮ ಅಥವಾ ಹೆಂಡತಿ ಎಂಬ ವ್ಯಕ್ತಿತ್ವವನ್ನು ಕಲ್ಪಿಸಿಕೊಳ್ಳಿ. ಬೆಳಗ್ಗೆದ್ದು ರುಚಿರುಚಿಯಾದ ತಿಂಡಿ ಮಾಡುತ್ತಾಳೆ. ಮಕ್ಕಳನ್ನು ಶಾಲೆಗೆ ಸಿದ್ಧಪಡಿಸುತ್ತಾಳೆ. ಮಧ್ಯಾಹ್ನದ ಊಟ, ರಾತ್ರಿಯ ಊಟ, ತನ್ನ ಉದ್ಯೋಗ, ಬಿಡುವು ಸಿಕ್ಕರೆ ಇನ್ನೆನ್ನಾದರೂ ಕೆಲಸ… ಹೀಗೆ “ಮನೆʼʼ ಎಂಬ ವಿಷಯಕ್ಕೆ ಸಂಬಂಧಪಟ್ಟ ಎಲ್ಲಾ ಕೆಲಸವನ್ನು ಮಾಡುತ್ತಾಳೆ. ಹೀಗಾಗಿ ಅಮ್ಮ ಅಥವಾ ಹೆಂಡತಿ ಸಹ ಫುಲ್‌ ಸ್ಟಾಕ್‌ ಉದ್ಯೋಗಿ!

ವೆಬ್‌ಸೈಟ್‌ ಫ್ರಂಟ್‌ ಎಂಡ್‌ ಡೆವಲಪರ್‌, ವೆಬ್‌ಸೈಟ್‌ ಬ್ಯಾಕೆಂಡ್‌ ಡೆವಲಪರ್‌, ವೆಬ್‌ ಸೈಟ್‌ ಮ್ಯಾನೇಜರ್‌… ಹೀಗೆ ಒಂದು ವೆಬ್ಸೈಟ್‌ ಪ್ರಾಜೆಕ್ಟ್‌ ಮಾಡಲು ವಿವಿಧ ಕೌಶಲಗಳನ್ನು ಹೊಂದಿರುವ ಹಲವು ಜನರ ಅವಶ್ಯಕತೆ ಇರುತ್ತದೆ. ಈ ರೀತಿ ಹಲವು ಕೌಶಲ ಹೊಂದಿರುವ ಹಲವು ಜನರಿಗಿಂತ ಎಲ್ಲಾ ಕೌಶಲ ಹೊಂದಿರುವ ಒಬ್ಬ ವ್ಯಕ್ತಿ ಇದ್ದರೆ ಹೇಗಿರುತ್ತದೆ? ಅವನೇ ಸಕಲಕಲಾವಲ್ಲಭ! ಅವನೇ ಫುಲ್‌ ಸ್ಟಾಕ್‌ ಡೆವಲಪರ್‌.

ಹಲವು ಉದ್ಯೋಗಗಳು ಕಾಣೆಯಾಗುತ್ತಿರುವ ಈ ಸಮಯದಲ್ಲಿ ಬೇಡಿಕೆ ಹೆಚ್ಚಿಸಿಕೊಳ್ಳುತ್ತಿರುವ ಉದ್ಯೋಗದಲ್ಲಿ ಮತ್ತು ಅತ್ಯಂತ ಬೇಡಿಕೆ ಇರುವ ಉದ್ಯೋಗಗಳಲ್ಲಿ ಫುಲ್‌ ಸ್ಟಾಕ್‌ ವೆಬ್‌ ಡೆವಲಪ್‌ಮೆಂಟ್‌ ಒಂದಾಗಿದೆ. ಮಿನ್‌ ಸ್ಟಾಕ್‌, ಮೆರ್ನ್‌ ಸ್ಟಾಕ್‌, ರಿಯಾಕ್ಟ್‌ ನೇಟಿವ್‌ ಮತ್ತು ಕ್ಷಮರಿನ್‌ ಇತ್ಯಾದಿ ಜನಪ್ರಿಯ ವೆಬ್‌ ಮತ್ತು ಮೊಬೈಲ್‌ ಸ್ಟಾಕ್ಸ್‌ಗಳಲ್ಲಿ ಕಾರ್ಯ ನಿರ್ವಹಿಸುವ ಫುಲ್‌-ಸ್ಟಾಕ್‌ ಡೆವಲಪರ್‌ಗಳ ಅಗತ್ಯವನ್ನು ಕಂಪನಿಗಳು ಮನಗೊಂಡಿವೆ. ಹೀಗಾಗಿ, ನಿಮ್ಮ ರೆಸ್ಯೂಂನಲ್ಲಿ ಫುಲ್‌ ಸ್ಟಾಕ್‌ ಡೆವಲಪರ್‌ ಎಂಬ ಕೀವರ್ಡ್‌ ಕಂಡರೆ ಕಂಪನಿಗಳಿಗೆ ಫುಲ್‌ ಮೀಲ್ಸ್‌ ಊಟ ಮಾಡಿದ್ದಷ್ಟು ಆನಂದವಾಗುತ್ತದೆ!

ಪೀಠಿಕೆಯಲ್ಲಿ ಹೇಳಿದ ರೀತಿಯಲ್ಲಿಯೇ ಫುಲ್‌ ಸ್ಟಾಕ್‌ ಡೆವಲಪರ್‌ ಎಂದರೆ ಏನು ಎಂದು ನಿಮಗೆ ಅರ್ಥವಾಗಿರಬಹುದು. ಇನ್ನೂ ಸರಳವಾಗಿ ಹೇಳಬೇಕೆಂದರೆ, ಫುಲ್‌ ಸ್ಟಾಕ್‌ ಎಂದರೆ ಪೂರ್ಣ ಪ್ರಮಾಣದ ಎಂಜಿನಿಯರ್‌ಗಳು. ಒಂದು ಪ್ರಾಜೆಕ್ಟ್‌ ಅನ್ನು ಆರಂಭಿಸಿ ಅದರ ಬ್ಯಾಕ್‌ ಎಂಡ್‌ನಿಂದ ಫ್ರಂಟ್‌ ಎಂಡ್‌ವರೆಗೆ ಸಕಲವನ್ನು ಮಾಡಿ ಪ್ರಾಜೆಕ್ಟ್‌ ಅನ್ನು ಅಚ್ಚುಕಟ್ಟಾಗಿ ಮುಗಿಸಿಕೊಡುವ ಡೆವಲಪರ್‌ಗಳಿವರು.

ಈ ರೀತಿಯ ಕೌಶಲ ಹೊಂದಿದ್ದರೆ ತಂಡದಲ್ಲಿ ಕಾರ್ಯನಿರ್ವಹಿಸುವಾಗ ಪ್ರಾಜೆಕ್ಟ್‌ ಅನ್ನು ವೇಗವಾಗಿ ಮತ್ತು ನಮ್ಯವಾಗಿ ಮುಗಿಸಲು ಸಾಧ್ಯವಾಗುತ್ತದೆ. ಇದೇ ಕಾರಣಕ್ಕೆ ಬಹುತೇಕ ಕಂಪನಿಗಳು ಫುಲ್‌ ಸ್ಟಾಕ್‌ ಎಂಜಿನಿಯರ್‌ಗಳನ್ನು ಇಷ್ಟಪಡುತ್ತವೆ. ಭವಿಷ್ಯದಲ್ಲಿ ಫುಲ್‌ ಸ್ಟಾಕ್‌ ಡೆವಲಪರ್‌ಗಳಿಗೆ ಬೇಡಿಕೆ ಇನ್ನೂ ಹೆಚ್ಚಾಗಲಿದೆ. ಕೊರೊನಾ ಕಾಲದಲ್ಲಿ ವರ್ಕ್‌ ಫ್ರಂ ಹೋಂ ಪರಿಕಲ್ಪನೆ ಹೆಚ್ಚಿರುವುದರಿಂದ ಒಬ್ಬ ವ್ಯಕ್ತಿಗೆ ಒಂದು ಪ್ರಾಜೆಕ್ಟ್‌ ಅನ್ನು ಸಂಪೂರ್ಣವಾಗಿ ವಹಿಸಿಕೊಡುವುದೂ ಕಂಪನಿಗಳಿಗೆ ಸಾಧ್ಯವಾಗುತ್ತದೆ.

ಇಲ್ಲಿ ಡೆವಲಪರ್‌ಗಳು ಕೇವಲ ಒಂದು ಪ್ರೋಗ್ರಾಮಿಂಗ್‌ ಭಾಷೆ ಮಾತ್ರ ಕಲಿತಿರುವುದಿಲ್ಲ. ಅಗತ್ಯ ಪ್ರೋಗ್ರಾಮಿಂಗ್‌ ಭಾಷೆಯನ್ನು ಕಲಿತಿರುತ್ತಾರೆ, ಹೊಸ ಸ್ಕಿಲ್‌ಗಳನ್ನು ಕಲಿಯುತ್ತಿರುತ್ತಾರೆ. ಡೇಟಾಬೇಸ್‌, ಫ್ರಂಟ್‌ ಎಂಟ್‌ ಟೆಕ್ನಾಲಜಿ , ವಿವಿಧ ವೆಬ್‌ ಆಪ್‌ ಡೆವಲಪ್‌ಮೆಂಟ್‌ , ಯುಎಕ್ಸ್‌ ಡಿಸೈನ್‌ ಮಾತ್ರವಲ್ಲದೆ ಪ್ರಾಜೆಕ್ಟ್‌ ಮ್ಯಾನೇಜ್‌ಮೆಂಟ್‌ ಅನ್ನೂ ಮಾಡಬಲ್ಲವರಾಗಿರುತ್ತಾರೆ.

ಏನು ಕೌಶಲ ಕಲಿಯಬೇಕು?

ಮೊದಲೇ ಹೇಳಿದಂತೆ ನೀವು ಹಲವು ಸ್ಕಿಲ್‌ಗಳನ್ನು ಕಲಿತರೆ ಮಾತ್ರ ಫುಲ್‌ ಸ್ಟಾಕ್‌ ಡೆವಲಪರ್‌ ಆಗಲು ಸಾಧ್ಯ. ಫ್ರಂಟ್‌ ಎಂಡ್‌ ಡೆವಲಪ್‌ಮೆಂಟ್‌ ಕಲಿಯಬೇಕು. ಇಲ್ಲಿ ಜಾವಾಸ್ಕ್ರಿಪ್ಟ್‌ ಕುರಿತು ಹೆಚ್ಚಿನ ಗಮನ ನೀಡಬೇಕು. ವೆಬ್‌ ಸರ್ವರ್ಸ್‌, ಸರ್ಚ್‌ ಎಂಜಿನ್‌ಗಳು, ಎಪಿಐಗಳು ಮತ್ತು ಇತರೆ ಡೆವಲಪ್‌ಮೆಂಟ್‌ ಟೂಲ್‌ಗಳು (ಪೈಥಾನ್‌, ಪಿಎಚ್‌ಪಿ, ನೋಡ್‌.ಜೆಸ್‌ ಇತ್ಯಾದಿ ಸರ್ವರ್‌ ಸಂಬಂಧಿತ ಭಾಷೆಗಳು) ಒಳಗೊಂಡಂತೆ ಬ್ಯಾಕ್‌ ಎಂಡ್‌ ಪ್ರೋಗ್ರಾಮಿಂಗ್‌ ಪರಿಣತಿ ಪಡೆಯಬೇಕು.

ವೆಬ್‌ ಸರ್ವರ್ಸ್‌, ಸರ್ಚ್‌ ಎಂಜಿನ್‌ಗಳು, ಎಪಿಐಗಳು ಮತ್ತು ಇತರೆ ಡೆವಲಪ್‌ಮೆಂಟ್‌ ಟೂಲ್‌ಗಳು (ಪೈಥಾನ್‌, ಪಿಎಚ್‌ಪಿ, ನೋಡ್‌.ಜೆಸ್‌ ಇತ್ಯಾದಿ ಸರ್ವರ್‌ ಸಂಬಂಧಿತ ಭಾಷೆಗಳು) ಒಳಗೊಂಡಂತೆ ಬ್ಯಾಕ್‌ ಎಂಡ್‌ ಪ್ರೋಗ್ರಾಮಿಂಗ್‌ ಪರಿಣತಿ ಪಡೆಯಬೇಕು. ಗ್ರೂಪ್ಸ್‌ ಮತ್ತು ಯೂಸರ್ಸ್‌ ಮ್ಯಾನೇಜ್‌ಮೆಂಟ್‌, ಸೆಕ್ಯುರಿಟಿ ಕನ್ಸರ್ನ್ಸ್‌, ಫೈರ್‌ವಾಲ್ಸ್‌, ಸಾಫ್ಟ್‌ವೇರ್‌ ಅಪ್‌ಡೇಟ್‌, ಇನ್‌ಸ್ಟಾಲ್‌ ಮ್ಯಾನೇಜ್‌ಮೆಂಟ್‌ ಇತ್ಯಾದಿಗಳನ್ನು ಒಳಗೊಂಡ ಸರ್ವರ್‌ ನಿರ್ವಹಣೆ ಕಾರ್ಯ ಗೊತ್ತಿರಬೇಕು.

ಕ್ಲೌಡ್‌ ಕಂಪ್ಯೂಟಿಂಗ್‌, ಮೈಎಸ್‌ಕ್ಯುಎಲ್‌, ನೋಎಸ್‌ಕ್ಯೂಎಲ್‌ ಇತ್ಯಾದಿ ಡೇಟಾಬೇಸ್‌ ವಿಷಯಗಳನ್ನು ಕಲಿಯಬೇಕು. ಇಷ್ಟೇ ಅಲ್ಲ, ಒಂದು ವೆಬ್‌ಸೈಟ್‌ಗೆ ಸಂಬಂಧಪಟ್ಟ ಸಕಲವನ್ನೂ ಕಲಿಯಬೇಕು.

ಎಲ್ಲಿ ಕಲಿಯಬಹುದು?

ನೀವು ಔಪಚಾರಿಕ ಶಿಕ್ಷಣದ ಮೂಲಕ ಕೆಲವು ಕೌಶಲ ಕಲಿಯಬಹುದು. ಫುಲ್‌ ಸ್ಟಾಕ್‌ ಕೌಶಲಗಳನ್ನು ಒಂದೊಂದೇ ಕಲಿಯಲು ನಿಮಗೆ ಸಾಕಷ್ಟು ವರ್ಷ, ಸಮಯ ಬೇಕಾಗಬಹುದು. ಇದರ ಬದಲು ಫುಲ್‌ ಸ್ಟಾಕ್‌ ಡೆವಲಪರ್‌ ಕೋರ್ಸ್‌ ಎಂಬ ಪ್ಯಾಕೇಜ್‌ ಕೋರ್ಸ್‌ಗಳಿಗೆ ಸೇರಬಹುದು. ಇಂತಹ ಡೆಡಿಕೇಟೆಡ್‌ ಕೋರ್ಸ್‌ನಿಂದ ನಿಮಗೆ ಕೇವಲ ಆರು ತಿಂಗಳಲ್ಲಿ ಈ ಕೌಶಲಗಳನ್ನು ಮತ್ತು ಸರ್ಟಿಫಿಕೇಟ್‌ ಪಡೆಯಲು ಸಾಧ್ಯವಿದೆ.

ಆದರೆ, ಹೆಚ್ಚಿನ ಸಂಸ್ಥೆಗಳಲ್ಲಿ ಇನ್ನೂ ಇಂತಹ ಕೋರ್ಸ್‌ಗಳ ಲಭ್ಯವಿಲ್ಲ. ಕೆಲವೇ ಕೆಲವು ಶಿಕ್ಷಣ ಸಂಸ್ಥೆಗಳು ಮಾತ್ರ ಫುಲ್‌ ಸ್ಟಾಕ್‌ ಡೆವಲಪರ್‌ ಕೋರ್ಸ್‌ಗಳನ್ನು ಕಲಿಸುತ್ತವೆ.

ಬೆಂಗಳೂರಿನಲ್ಲಿರುವ ಬಸವನಗುಡಿ, ರಾಜಾಜಿನಗರ, ಶೇಷಾದ್ರಿಪುರಂ, ಮಲ್ಲೇಶ್ವರಂ ಭಾರತೀಯ ಅಕಾಡೆಮಿ ಆಫ್ ಲಿಂಗ್ವಿಸ್ಟಿಕ್ಸ್ ಅಂಡ್ ಕಮ್ಯುನಿಕೇಷನ್ ಸಂಸ್ಥೆಯು ವಿಶೇಷವಾಗಿ ಫುಲ್‌ ಸ್ಟಾಕ್‌ ಕೋರ್ಸ್‌ಗಳನ್ನು ಕಲಿಸುತ್ತದೆ.

ಈಗಿನ ಉದ್ಯೋಗ ಕ್ಷೇತ್ರಕ್ಕೆ ಯಾವುದಾದರೂ ಒಂದು ವಿಷಯದಲ್ಲಿ ತಜ್ಞತೆ ಪಡೆದ ವ್ಯಕ್ತಿ ಸಾಕಾಗುವುದಿಲ್ಲ.ಯಾವುದಾದರೂ ಒಂದು ಕೌಶಲಕ್ಕೆ ಜೋತುಬೀಳದೆ ಬಹುಕೌಶಲ ನಿಮ್ಮದಾಗಿಸಿಕೊಂಡು ಉತ್ತಮ ಕರಿಯರ್‌ ರೂಪಿಸಿಕೊಳ್ಳಿರಿ. ಶುಭವಾಗಲಿ.

Ad Widget

Related Posts

error: Content is protected !!
Scroll to Top