ಸ್ನೇಹಿತರೇ ನಮಸ್ಕಾರ. ನಾನು ಪ್ರಕಾಶ್ ಗೌಡ ಎಚ್. ಎಂ. ಕನ್ನಡ ಕ್ಯಾಡ್ ನೆಸ್ಟ್ ಕಾಂ ನಿರ್ದೇಶಕ. ಬೆಂಗಳೂರಿನ ಬಸವನಗುಡಿ, ರಾಜಾಜಿನಗರ, ಶೇಷಾದ್ರಿಪುರಂ, ಮಲ್ಲೇಶ್ವರಂನಲ್ಲಿರುವ ಕ್ಯಾಡ್ ನೆಸ್ಟ್ ನ ನಿರ್ದೇಶಕ. ಈಗಾಗಲೇ ನಮ್ಮ ಸಂಸ್ಥೆಗೆ ರಾಜ್ಯದ ವಿವಿಧ ಮೂಲೆಮೂಲೆಗಳಿಂದ ವಿದ್ಯಾರ್ಥಿಗಳು ಬಂದು ಭಾಷಾ ಮತ್ತು ತಂತ್ರಜ್ಞಾನ ಕೌಶಲಗಳು ಒಳಗೊಂಡಂತೆ ವಿವಿಧ ಸ್ಕಿಲ್‌ಗಳನ್ನು ಕಲಿಯುತ್ತಿದ್ದಾರೆ, ಕಲಿತಿದ್ದಾರೆ. ಈ ಮೂಲಕ ತಮ್ಮ ಕನಸಿನ ಉದ್ಯೋಗ ಪಡೆಯಲು, ಕರಿಯರ್‌ನಲ್ಲಿ ಮೇಲ್ದರ್ಜೆಗೆ ಏರಲು ವಿದ್ಯಾರ್ಥಿಗಳಿಗೆ ಬೆಂಬಲ ನೀಡುತ್ತ ಬಂದಿದ್ದೇವೆ.
ರಾಜ್ಯದ ವಿದ್ಯಾರ್ಥಿಗಳು, ಮುಖ್ಯವಾಗಿ ಕನ್ನಡ ವಿದ್ಯಾರ್ಥಿಗಳು ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿವಿಧ ಔದ್ಯೋಗಿಕ ಕೌಶಲಗಳನ್ನು ತಮ್ಮದಾಗಿಸಿಕೊಳ್ಳುವಂತಾಗಲು ಒಂದಿಷ್ಟು ಮಾರ್ಗದರ್ಶನ ನೀಡಬೇಕೆಂಬ ಸದುದ್ದೇಶದಿಂದ ಕನ್ನಡ ಕ್ಯಾಡ್ ನೆಸ್ಟ್ .ಕಾಂ ಅನ್ನು ನಿರ್ಮಿಸಲಾಗಿದೆ. ರಾಜ್ಯದಲ್ಲಿರುವ ಶಾಲಾ ಕಾಲೇಜುಗಳಲ್ಲಿ ಈಗ ನೂರಾರು ಬಗೆಯ ಕೋರ್ಸ್‌ಗಳು, ಪಠ್ಯಕ್ರಮಗಳು ಇವೆ. ಇವುಗಳಲ್ಲಿ ಬಹುತೇಕ ಕೋರ್ಸ್‌ಗಳು ವಿದ್ಯಾರ್ಥಿಗಳಿಗೆ ಉದ್ಯೋಗ ದೊರಕಿಸಿಕೊಡಲು ಬೆಂಬಲ ನೀಡುತ್ತಿಲ್ಲವೆನ್ನುವುದು ಅಷ್ಟೇ ಸತ್ಯ. ಟೆಕ್ ಜಗತ್ತು ದಿನೇದಿನೇ ಬದಲಾಗುತ್ತಿದ್ದು, ಪ್ರತಿದಿನ ಅಪ್‌ಡೇಟ್ ಆಗುತ್ತಿದೆ. ಕೆಲವು ವರ್ಷಗಳ ಹಿಂದೆ ಬೇಡಿಕೆಯಲ್ಲಿದ್ದ ಸ್ಕಿಲ್‌ಗಳು ಇಂದು ನೇಪತ್ಯಕ್ಕೆ ಸರಿಯುತ್ತಿವೆ.
ಇಂತಹ ಸಮಯದಲ್ಲಿ ಈಗ ಮತ್ತು ಭವಿಷ್ಯದಲ್ಲಿ ಬಹುಬೇಡಿಕೆಯಲ್ಲಿರುವ ಕೌಶಲಗಳನ್ನು ಕಲಿಯುವುದು ನಮ್ಮ ಮುಂದಿರುವ ದಾರಿ. ಎಲ್ಲವೂ ಆನ್‌ಲೈನ್‌ಮಯವಾಗುತ್ತಿರುವ ಈ ಪರ್ವಕಾಲದಲ್ಲಿ ನಮ್ಮ ಕಲಿಕೆ, ಕರಿಯರ್ ಕನಸು ಸಹ ಡಿಜಿಟಲ್ ಕ್ಷೇತ್ರದತ್ತ ಇದ್ದರೆ ಒಳ್ಳೆಯದು. ಜೊತೆಗೆ ಮನರಂಜನೆ ಜಗತ್ತು ಹೊಸ ದಿಕ್ಕಿನತ್ತ ತೆರೆದುಕೊಳ್ಳುತ್ತಿದ್ದು, ಯೂಟ್ಯೂಬ್, ಒಟಿಟಿ ಇತ್ಯಾದಿಗಳು ಬಳಕೆ ಹೆಚ್ಚುತ್ತಿದೆ. ಇಂತಹ ಸಮಯದಲ್ಲಿ ಅನಿಮೇಷನ್, ವಿಡಿಯೋ ಎಡಿಟಿಂಗ್ ಇತ್ಯಾದಿಗಳಲ್ಲಿ ಪರಿಣತಿ ಪಡೆದವರು ಒಳ್ಳೆಯ ಅವಕಾಶಗಳನ್ನು ಪಡೆಯುತ್ತಾರೆ.
ಈಗ ಕೇವಲ ಕಾಲೇಜು ಡಿಗ್ರಿ ಪಡೆದರೆ ಸಾಲದು. ನೀವು ಪಡೆದ ಎಂಜಿನಿಯರಿಂಗ್ ಪದವಿ, ಎಂಎ ಪದವಿ ಸಾಕಾಗದು. ಅದರೊಂದಿಗೆ ನಿಮ್ಮ ಕೋರ್ಸ್‌ಗೆ ಬೆಂಬಲ ನೀಡುವ ಸರ್ಟಿಫಿಕೇಷನ್‌ಗಳನ್ನು ಪಡೆಯಬೇಕು. ಇಂತಹ ಸರ್ಟಿಫಿಕೇಷನ್‌ಗಳು ನಿಮ್ಮ ರೆಸ್ಯೂಂನ ತೂಕ ಹೆಚ್ಚಿಸುವುದರ ಜೊತೆಗೆ ಯಾವುದಾದರೂ ಹುದ್ದೆಗೆ ಬಂದ ನೂರಾರು ಅರ್ಜಿಗಳಲ್ಲಿ ನಿಮಗೆ ಉದ್ಯೋಗ ದೊರಕಿಸಿಕೊಡುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.
ಕನ್ನಡ ಕ್ಯಾಡ್ ನೆಸ್ಟ್ ಕಾಂ ನಿಮ್ಮ ಕರಿಯರ್, ವ್ಯಕ್ತಿತ್ವವಿಕಸನ, ಕೌಶಲ ಮಾರ್ಗದರ್ಶಕ. ಮುಂದಿನ ದಿನಗಳಲ್ಲಿ ಇಲ್ಲಿ ನೀವು ಕರಿಯರ್ ಟಿಪ್ಸ್, ಇಂಗ್ಲಿಷ್ ಕಲಿಕೆ, ಉದ್ಯೋಗ ಜಗತ್ತಿನಲ್ಲಿ ಬಹುಬೇಡಿಕೆಯಲ್ಲಿರುವ ಸ್ಕಿಲ್ಸ್‌ಗಳ ಮಾಹಿತಿ, ಸರ್ಟಿಫಿಕೇಷನ್ ಕೋರ್ಸ್ ಸೇರಿದಂತೆ ವೈವಿಧ್ಯಮಯ ಮಾಹಿತಿ ಪಡೆಯಲಿದ್ದೀರಿ.
ಕ್ಯಾಡ್, ಅನಿಮೇಷನ್, ಸ್ಪೋಕನ್ ಇಂಗ್ಲಿಷ್, ಕ್ಯಾಲಿಗ್ರಾಫಿ, ಕೈಬರಹ ಅಂದಗೊಳಿಸುವುದು, ವೇಗವಾಗಿ ಬರೆಯುವುದು, ಐಟಿ ಕೋರ್ಸ್‌ಗಳ ಮಾಹಿತಿ, ಪ್ರಾಜೆಕ್ಟ್ ಪ್ಲ್ಯಾನಿಂಗ್ ಮತ್ತು ಮ್ಯಾನೇಜ್‌ಮೆಂಟ್, ಇಂಟೀರಿಯರ್ ಡಿಸೈನ್, ಸಿ, ಸಿಪ್ಲಸ್‌ಪ್ಲಸ್, ಬೂಟ್‌ಸ್ಟ್ರಾಪ್, ಪೈಥಾನ್ ಇತ್ಯಾದಿ ಬಹುಬೇಡಿಕೆಯ ಕಂಪ್ಯೂಟರ್ ಪ್ರೋಗ್ರಾಮಿಂಗ್ ಮಾಹಿತಿ, ಡೇಟಾಸೈನ್ಸ್, ಆರ್ಟಿಫಿಶಿಯಲ್ ಇಂಟಲಿಜೆನ್ಸ್, ಮೆಷಿನ್ ಲರ್ನಿಂಗ್, ಎಥಿಕಲ್ ಹ್ಯಾಕಿಂಗ್, ಡೇಟಾ ಅನಾಲಿಟಿಕ್ಸ್, ಕ್ಲೌಡ್ ಕಂಪ್ಯೂಟಿಂಗ್ ಸೇರಿದಂತೆ ಈ ಉದ್ಯೋಗ ಜಗತ್ತು ಯಾವೆಲ್ಲ ಕೌಶಲ ಬಯಸುತ್ತದೆಯೋ ಅವುಗಳೆಲ್ಲವನ್ನು ನಿಮಗೆ ಪರಿಚಯಿಸಲಿದ್ದೇವೆ.
ಈಗ ನಿಮ್ಮ ಉದ್ಯೋಗ ಕ್ಷೇತ್ರಕ್ಕೆ ಸಂಬಂಧಪಟ್ಟ ಯಾವುದಾದರೂ ಒಂದು ಕೋರ್ಸ್ ಕಲಿತು ಸುಮ್ಮನಾದರೆ ಸಾಲದು. ಒಂದು ಪ್ರಾಜೆಕ್ಟ್ ಅನ್ನು ಸಂಪೂರ್ಣವಾಗಿ ನೋಡಿಕೊಳ್ಳಲು ಸಾಮರ್ಥ್ಯವಿರುವ ಪೂರ್ಣ ಪ್ರಮಾಣದ ಕೌಶಲವಂತರಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಇದನ್ನು ಮನಗೊಂಡು ನಾವು ನಮ್ಮ ಸಂಸ್ಥೆಗಳಲ್ಲಿ ಫುಲ್‌ಸ್ಟಾಕ್ ಕೋರ್ಸ್‌ಗಳನ್ನು ಕಲಿಸುತ್ತಿದ್ದೇವೆ. ಇದಕ್ಕಾಗಿ ವಿವಿಧ ಬಗೆಯ ಫುಲ್‌ಸ್ಟಾಕ್ ಡೆವಲಪರ್ ಕೋರ್ಸ್‌ಗಳು ನಮ್ಮಲ್ಲಿವೆ.
ಈಗಾಗಲೇ ಹೇಳಿದಂತೆ ಭವಿಷ್ಯದಲ್ಲಿ ವಿಡಿಯೋ ಕಂಟೆಂಟ್‌ಗಳಿಗೆ ಬೇಡಿಕೆ ಹೆಚ್ಚಿರಲಿದೆ. ಇಂತಹ ಸಮಯದಲ್ಲಿ ವಿವಿಧ ಎಡಿಟಿಂಗ್, ಗ್ರಾಫಿಕ್ ಡಿಸೈನ್ ಕೌಶಲಗಳಿಗೆ ಬೇಡಿಕೆ ಹೆಚ್ಚಾಗಲಿದೆ. ೩ಡಿ ಅನಿಮೇಷನ್, ವಿಎಫ್‌ಎಕ್ಸ್, ೨ಡಿ ಕ್ಲಾಸಿಕ್ ಅನಿಮೇಷನ್, ಗ್ರಾಫಿಕ್ಸ್ ಡಿಸೈನ್, ಡ್ರೀಮ್ ವ್ಯೂವರ್, ಫೋಟೊ ಮತ್ತು ವಿಡಿಯೋ ಎಡಿಟಿಂಗ್ ಸೇರಿದಂತೆ ವಿವಿಧ ಸ್ಕಿಲ್ ಗಳ ಮಾಹಿತಿಯನ್ನು ಇಲ್ಲಿ ಒದಗಿಸಲಿದ್ದೇವೆ.
ಕೇವಲ ಟೆಕ್ ಕೌಶಲಗಳಿಗೆ ಸೀಮಿತವಾಗದೆ ಬಹುಬೇಡಿಕೆಯ ನಿಮ್ಮ ಸಂವಹನ ಕೌಶಲ, ಸಾಫ್ಟ್ ಸ್ಕಿಲ್ಸ್, ಇಂಟರ್‌ವ್ಯೂ ಸ್ಕಿಲ್ಸ್ ಸೇರಿದಂತೆ ಹಲವು ಸ್ಕಿಲ್‌ಗಳನ್ನು ಉತ್ತಮಪಡಿಸಲು ಅಮೂಲ್ಯ ಸಲಹೆಗಳನ್ನು ತಜ್ಞರು ಇಲ್ಲಿ ನೀಡಲಿದ್ದಾರೆ.
ನಿಯಮಿತವಾಗಿ ಕನ್ನಡಕ್ಯಾಡ್‌ನೆಸ್ಟ್.ಕಾಂಗೆ ಭೇಟಿ ನೀಡುತ್ತ ಇರಿ. ಜ್ಞಾನವನ್ನು ಉಚಿತವಾಗಿ ಹಂಚಿಕೊಳ್ಳೋಣ. ಇಲ್ಲಿರುವ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿರಿ, ಸೋಷಿಯಲ್ ಮೀಡಿಯಾದಲ್ಲಿ ಷೇರ್ ಮಾಡಿ. ಭವಿಷ್ಯದಲ್ಲಿ ಏನಾಗಬೇಕು? ಯಾವ ಕೋರ್ಸ್ ಮಾಡಬೇಕು ಎಂಬ ಗೊಂದಲವಿದ್ದರೂ ನಮ್ಮನ್ನು ಸಂಪರ್ಕಿಸಬಹುದು.
ಹೆಚ್ಚಿನ ಮಾಹಿತಿ ಪಡೆಯಲು ಕನ್ನಡ ಕ್ಯಾಡ್‌ನೆಸ್ಟ್ ಸಂಪರ್ಕಿಸಿ ವಿಭಾಗಕ್ಕೆ ಭೇಟಿ ನೀಡಬಹುದು. ಅಥವಾ ಈ ಮುಂದೆ ನೀಡಲಾದ ವಿಳಾಸಕ್ಕೆ ಭೇಟಿ ನೀಡಬಹುದು.
ಕ್ಯಾಡ್ ನೆಸ್ಟ್ ರಾಜಾಜಿನಗರ
ನಂ .1760, 1 ನೇ ಮಹಡಿ, ಎದುರು.ನವರಂಗ್ ಥಿಯೇಟರ್, ಬಿಎಸ್‌ಎನ್‌ಎಲ್ ಗ್ರಾಹಕ ಸೇವಾ ಕೇಂದ್ರದ ಮೇಲೆ, ಡಾ.ರಾಜ್‌ಕುಮಾರ್ ರಸ್ತೆ,ರಾಜಾಜಿ ನಗರ 2 ನೇ ಹಂತ, ಬೆಂಗಳೂರು -560010.
080-41608308 / 9740444363
ಕ್ಯಾಡ್ ನೆಸ್ಟ್ ಬಸವನಗುಡಿ
ನಂ. 16, 1 ನೇ ಮಹಡಿ, ಸಿದ್ದಯ್ಯ ಕಾಂಪ್ಲೆಕ್ಸ್, ಮೌಂಟ್ ಜಾಯ್ ರಸ್ತೆ, ಹನುಮಂತನಗರ, (ಬುಲ್ ಟೆಂಪಲ್ ರಸ್ತೆ ಎದುರು) ಬಸವನಗುಡಿ, ಬೆಂಗಳೂರು -560019 .
ಕ್ಯಾಡ್ ನೆಸ್ಟ್ ಶೇಷಾದ್ರಿಪುರಂ
ನಂ.187, 2 ನೇ ಮಹಡಿ, ಎಬಿಸಿ ಆರ್ಕೇಡ್, ಎಸ್‌ಸಿ ರಸ್ತೆ ಶೇಷಾದ್ರಿಪುರಂ, ನಟರಾಜ್ ಥಿಯೇಟರ್ ಹತ್ತಿರ ಬೆಂಗಳೂರು -560020.
080-41514154 / 9535666300
ಕ್ಯಾಡ್ ನೆಸ್ಟ್ ಮಲ್ಲೇಶ್ವರಂ
ನಂ. 64,1 ನೇ ಮಹಡಿ, ಸಿಂಡಿಕೇಟ್ ಬ್ಯಾಂಕ್ ಮೇಲೆ, 18 ನೇ ಕ್ರಾಸ್,
ಮಾರ್ಗೋಸಾ ರಸ್ತೆ, ಮಲ್ಲೇಶ್ವರಂ, ಬೆಂಗಳೂರು-560055.
080-29604444 / 9606666480