ಬೆಂಗಳೂರು: ಕರ್ನಾಟಕದ ಪ್ರಮುಖ ಉದ್ಯೋಗ ಕೌಶಲ್ಯ ಕೇಂದ್ರವೆಂದು ಖ್ಯಾತಿ ಪಡೆದಿರುವ ಕ್ಯಾಡ್ನೆಸ್ಟ್ (Caddnest) ಸಂಸ್ಥೆ, ದೊಡ್ಡ ಗಣಪತಿ ದೇಗುಲದ ಸಮೀಪವಿರುವ ತನ್ನ ಬಸವನಗುಡಿಯ ಶಾಖೆಯಲ್ಲಿ ಇಂದು ಗಣೇಶ ಹಬ್ಬವನ್ನು ಭಕ್ತಿ, ಸಂಭ್ರಮ ಮತ್ತು ಸಡಗರದಿಂದ ಆಚರಿಸಿತು. ಕಾರ್ಯಕ್ರಮದ ಆರಂಭದಲ್ಲಿ ಕ್ಯಾಡ್ನೆಸ್ಟ್ ಬೆಂಗಳೂರಿನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಪ್ರಕಾಶ್ ಗೌಡ ಅವರು ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು. ಪೂಜೆ ಬಳಿಕ ಎಲ್ಲರೂ ಒಟ್ಟಾಗಿ ಸಿಹಿತಿಂಡಿ ಮತ್ತು ಪ್ರಸಾದವನ್ನು ಸವಿದರು. ವಿದ್ಯಾರ್ಥಿಗಳು ಪರಸ್ಪರ ಶುಭಾಶಯಗಳನ್ನು ಹಂಚಿಕೊಂಡು, ಹಬ್ಬದ ಸಂಭ್ರಮವನ್ನು ಹೆಚ್ಚಿಸಿದರು.
ಗಣೇಶ ಹಬ್ಬದ ಸಂಭ್ರಮದ ಚಿತ್ರಗಳು










