Kannada CADD Nest Private Limited

ಆನ್‌ಲೈನ್‌ ಕೋರ್ಸ್‌ಗೆ ಸೇರುವ ಮೊದಲು ಗಮನಿಸಬೇಕಾದ ಅಂಶಗಳೇನು?

ಆನ್‌ಲೈನ್‌ ಕೋರ್ಸ್‌ಗೆ ಸೇರುವ ಮೊದಲು ಗಮನಿಸಬೇಕಾದ ಅಂಶಗಳೇನು?

ಈ ಕೊರೊನಾ ಸಂಕಷ್ಟದ ಸಮಯದಲ್ಲಿ ನೀವು ನಿಮ್ಮ ಕರಿಯರ್‌ ಕುರಿತು ಗಂಭೀರವಾಗಿ ಆಲೋಚಿಸುತ್ತಿದ್ದೀರಿ ಎಂದುಕೊಂಡಿದ್ದೇವೆ. ಈ ಸಮಯವನ್ನು ನಿಮ್ಮ ಕೌಶಲವೃದ್ಧಿಗೆ ಅಥವಾ ಅಪ್‌ ಸ್ಕಿಲ್‌ಗೆ ಬಳಸಿಕೊಳ್ಳುತ್ತಿದ್ದೀರಿ ಎಂದಿರಲಿ. ಗ್ರೇಟ್‌, ಅಪ್‌ಸ್ಕಿಲ್‌ ಬಗ್ಗೆ ಯೋಚಿಸುವಾಗ ನಿಮ್ಮ ಮುಂದಿರುವ ಅತ್ಯುತ್ತಮ ಆಯ್ಕೆ ಎಂದರೆ ಕ್ಯಾಡ್‌ನೆಸ್ಟ್‌‌ ಆನ್‌ಲೈನ್‌ ಕೋರ್ಸ್‌. ಈಗಾಗಲೇ ಸಾಕಷ್ಟು ವಿದ್ಯಾರ್ಥಿಗಳಿಂದ ಮೆಚ್ಚುಗೆ ಪಡೆದಿರುವ ಕ್ಯಾಡ್‌ನೆಸ್ಟ್‌‌ ಆನ್‌ಲೈನ್‌ ಕೋರ್ಸ್‌ಗಳು ನಿಮಗೆ ಸೂಕ್ತವಾಗಿದೆ.

ಆದರೆ, ಎಲ್ಲಾ ಆನ್‌ಲೈನ್‌ ಕೋರ್ಸ್‌ಗಳು ಉತ್ತಮ ಎಂದಲ್ಲ. ಕೆಲವೊಂದು ಹಣದಾಸೆಗೆ ಅತ್ಯುತ್ತಮ ಜ್ಞಾನ ನೀಡದ ಆನ್‌ಲೈನ್‌ ಕೋರ್ಸ್‌ಗಳು ಇರಬಹುದು. ಅಂತಹ ಕೋರ್ಸ್‌ಗಳಿಗೆ ಸೇರಿ ನಿಮ್ಮ ಸಮಯ ಮತ್ತು ಹಣ ವ್ಯರ್ಥ ಮಾಡಿಕೊಳ್ಳಬೇಡಿ. ಹೀಗಾಗಿ, ಆನ್‌ಲೈನ್‌ ಕೋರ್ಸ್‌ಗಳಿಗೆ ಸೇರುವ ಮೊದಲು ಈ ಮುಂದಿನ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ.

೧. ಲಭ್ಯವಿರುವ ವಿವಿಧ ಕರಿಯರ್‌ ಆಯ್ಕೆಗಳನ್ನುತಿಳಿದುಕೊಳ್ಳಿ

ನಿಮ್ಮ ಕರಿಯರ್‌ ಅನ್ನು ಮೇಲ್ದರ್ಜೆಗೆ ಏರಿಸಬಲ್ಲ ವಿವಿಧ ಕರಿಯರ್‌ ಆಯ್ಕೆಗಳನ್ನು ಮೌಲ್ಯಮಾಪನಮಾಡುವುದು ಅಷ್ಟು ಸುಲಭವಲ್ಲ. ಆದರೆ, ನೀವು ಕಲಿಕೆಗೆ ಹೂಡಿಕೆ ಮಾಡಿದ ಸಮಯ ಮತ್ತು ಹಣದ ಕುರಿತು ಮೊದಲು ಆಲೋಚಿಸಬೇಕು. ಅಷ್ಟು ಖರ್ಚು ಮಾಡಿ ಓದಿದ್ದು, ನಿಮಗೆ ಭವಿಷ್ಯಕ್ಕೆ ಪ್ರಯೋಜನಕ್ಕೆಬರುವಂತೆ ಇರಬೇಕು. ಈಗಾಗಲೇ ನಿಮ್ಮಲ್ಲಿ ಇರುವ ಶಿಕ್ಷಣ ಅಥವಾ ಜ್ಞಾನಕ್ಕೆ ಹೊಸದಾಗಿ ಕೌಶಲ ಸೇರ್ಪಡೆಗೊಳಿಸುವುದು ಸೂಕ್ತ. ಇದಕ್ಕಾಗಿ ನೀವು ಯಾವುದಾದರೂ ಅಲ್ಪಾವಧಿ ಕೋರ್ಸ್‌ಗಳನ್ನು ಮಾಡಬಹುದು. ಉದಾಹರಣೆಗೆ ನೀವು ಎಂಜಿನಿಯರಿಂಗ್‌ ಪದವಿ ಪಡೆದಿದ್ದರೆ ಹೆಚ್ಚುವರಿಯಾಗಿ ಕ್ಯಾಡ್‌ ಸರ್ಟಿಫಿಕೇಷನ್‌ ನಿಮ್ಮದಾಗಿಸಿಕೊಳ್ಳಬಹುದು.

೨. ನಿಮ್ಮ ಸಮಯದ ಹೊಂದಾಣಿಕೆ

ನೀವು ವಿದ್ಯಾರ್ಥಿಯಾಗಿರಬಹುದು ಅಥವಾ ಯಾವುದಾದರೂ ಉದ್ಯೋಗದಲ್ಲಿರಬಹುದು. ಇಂತಹ ಸಮಯದಲ್ಲಿ ಆನ್‌ಲೈನ್‌ ತರಗತಿಗೆ ಸಮಯ ಹೊಂದಿಸಿಕೊಳ್ಳುವ ಅವಕಾಶವಿದೆಯೇ ಎಂದು ತಿಳಿದುಕೊಳ್ಳಿ. ನೀವು ಯಾವುದೇ ಸಮಯದಲ್ಲಿ ಬೇಕಾದರೂ ತೆಗೆದುಕೊಳ್ಳಲು ಪೂರಕವಾದಂತಹ ಆನ್‌ಲೈನ್‌ ಕೋರ್ಸ್‌ಗಳ ಲಭ್ಯತೆ ಇದೆಯೇ ತಿಳಿದುಕೊಳ್ಳಿ.

೩. ಸಂಸ್ಥೆಯ ಬಗ್ಗೆ ತಿಳಿದುಕೊಳ್ಳಿ

ಈಗಾಗಲೇ ಹೇಳಿದಂತೆ ಎಲ್ಲರೂ ಕ್ಯಾಡ್‌ನೆಸ್ಟ್‌‌ ಆನ್‌ಲೈನ್‌ ತರಗತಿಗಳಷ್ಟು ಉತ್ತಮವಾಗಿ ಆನ್‌ಲೈನ್‌ ಕ್ಲಾಸ್‌ಗಳನ್ನು ನೀಡುತ್ತಾರೆ ಎನ್ನಲಾಗದು. ನೀವು ಆನ್‌ಲೈನ್‌ ಕ್ಲಾಸ್‌ಗೆ ಸೇರಿರುವ ಸಂಸ್ಥೆಯು ಪ್ರತಿಷ್ಠತ ಸಂಸ್ಥೆಯೇ ತಿಳಿದುಕೊಳ್ಳಿ. ಉದಾಹರಣೆಗೆ ಕ್ಯಾಡ್‌ನೆಸ್ಟ್‌‌ ಸಂಸ್ಥೆಯು ಬಸವನಗುಡಿ, ಶೇಷಾದ್ರಿಪುರಂ, ಮಲ್ಲೇಶ್ವರಂ, ರಾಜಾಜೀನಗರಗಳಲ್ಲಿ ಶಾಖೆಗಳನ್ನು ಹೊಂದಿದ್ದು, ಹಲವು ವರ್ಷಗಳಿಂದ ಸಾವಿರಾರು ವಿದ್ಯಾರ್ಥಿಗಳ ಕರಿಯರ್‌ ಪ್ರಗತಿಗೆ ಬೆಂಬಲ ನೀಡಿದೆ.

೪. ಪಠ್ಯಕ್ರಮ ತಿಳಿದುಕೊಳ್ಳಿ

ಆನ್‌ಲೈನ್‌ ಕ್ಲಾಸ್‌ನ ಕರಿಕ್ಯುಲಮ್‌ ಅವಲೋಕನ ಮಾಡುವುದು ಉತ್ತಮ. ಇದರಿಂದ ಮುಂದಿನ ದಿನಗಳಲ್ಲಿ ಯಾವುದನ್ನುಕಲಿಯಲಿದ್ದೀರಿಎಂಬ ಸ್ಪಷ್ಟ ಚಿತ್ರಣ ದೊರಕಲಿದೆ.ಜೊತೆಗೆ ಬೇರೆ ಆನ್‌ಲೈನ್‌ ತರಗತಿಗಳ ಜೊತೆ ಹೋಲಿಕೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.

೫. ಹಣದ ವಿಷಯ ತಿಳಿದುಕೊಳ್ಳಿ

ಅಗ್ಗವಾಗಿ ದೊರಕುವುದೆಲ್ಲವೂ ಕೆಟ್ಟವಲ್ಲ, ದುಬಾರಿಯಾಗಿರುವುದೆಲ್ಲವೂ ಒಳ್ಳೆಯದಾಗಿರಬೇಕೆಂದಿಲ್ಲ. ಹೀಗಾಗಿ, ಬಜೆಟ್‌ ಮತ್ತು ಗುಣಮಟ್ಟದ ವಿಷಯದಲ್ಲಿ ಗಮನ ನೀಡಿ.

ಈಗಿನ ಕೊರೊನಾದಂತಹ ಸವಾಲಿನ ಸಮಯದಲ್ಲಿ ಕೌಶಲವೃದ್ಧಿ ಮಾಡಿಕೊಳ್ಳುವುದು ಸೂಕ್ತವಾದ ನಿರ್ಧಾರ. ವಿಶೇಷವೆಂದರೆ ನಿಮಗೆ ಸೂಕ್ತವಾದ ಅವಧಿಯಲ್ಲಿ ಕಲಿಯುವ ಅವಕಾಶವನ್ನು ಹೆಚ್ಚಿನ ಆನ್‌ಲೈನ್‌ ತರಗತಿಗಳು ನೀಡುತ್ತವೆ.

ಕ್ಯಾಡ್‌ನೆಸ್ಟ್‌‌ ಆನ್‌ಲೈನ್‌ ತರಗತಿಗಳಿಗೆ ಸೇರುವಿರಾ?

ಅತ್ಯುತ್ತಮ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಕ್ಯಾಡ್‌ನೆಸ್ಟ್‌‌ ಬಸವನಗುಡಿ, ಶೇಷಾದ್ರಿಪುರಂ, ಮಲ್ಲೇಶ್ವರಂ, ರಾಜಾಜೀನಗರ ಶಾಖೆಗಳು ಈಗಾಗಲೇ ಹೆಸರು ಮಾಡಿದೆ. ಇದಕ್ಕಾಗಿ ಹಲವು ಪ್ರಶಸ್ತಿಗಳಿಗೂ ಭಾಜನವಾಗಿದೆ.

ಕ್ಯಾಡ್‌ನೆಸ್ಟ್‌‌ ಆನ್‌ಲೈನ್‌ ಕ್ಲಾಸ್‌ಗೆ ಸೇರುವುದು ಖಂಡಿತವಾಗಿಯೂ ನಿಮ್ಮ ಅತ್ಯುತ್ತಮ ನಿರ್ಧಾರಗಳಲ್ಲಿ ಒಂದಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು ಈ ಮುಂದಿನಂತೆ ಇವೆ.

ಕ್ಯಾಡ್‌ನೆಸ್ಟ್‌ ರಾಜಾಜಿನಗರ: 080-41608308 / 9740444363

ಕ್ಯಾಡ್‌ನೆಸ್ಟ್‌ ಬಸವನಗುಡಿ:  919035333733

ಕ್ಯಾಡ್‌ನೆಸ್ಟ್‌ ಶೇಷಾದ್ರಿಪುರಂ: 080-41514154 / 9535666300

ಕ್ಯಾಡ್‌ನೆಸ್ಟ್‌ ಮಲ್ಲೇಶ್ವರಂ: 080-29604444 / 9606666480

ವಾಟ್ಸಪ್‌ ಮೂಲಕವೂ ನೀವು ಕ್ಯಾಡ್‌ನೆಸ್ಟ್‌‌ ಕೋರ್ಸ್‌ಗಳ ವಿವರ ಪಡೆಯಬಹುದು. ವಾಟ್ಸಾಪ್‌ ನಂಬರ್‌: 919035333733

 

 

 

 

Ad Widget

Related Posts

error: Content is protected !!
Scroll to Top