ಬೆಂಗಳೂರು: ದಿವಂಗತ ಪುನೀತ್ ರಾಜ್ಕುಮಾರ್ ನೆನಪಿನಲ್ಲಿ ಬೆಂಗಳೂರಿನ ರಾಜಾಜಿನಗರದಲ್ಲಿ ಅಕ್ಟೋಬರ್ 29ರಂದು ಬೃಹತ್ ಉದ್ಯೋಗ ಮೇಳ ನಡೆಯಲಿದೆ. ಪವರ್ ಸ್ಟಾರ್ ಉದ್ಯೋಗ ಮೇಳದ ಹೆಸರಿನಲ್ಲಿ ಸತತ ಎರಡನೇ ವರ್ಷ ಕರ್ನಾಟಕದ ಪ್ರಮುಖ ಕೌಶಲ್ಯ ತರಬೇತಿ ಸಂಸ್ಥೆ ಕ್ಯಾಡ್ನೆಸ್ಟ್ (caddnest.org) ಈ ಉದ್ಯೋಗ ಮೇಳ ಆಯೋಜಿಸಿದೆ. ಈ ಉದ್ಯೋಗಮೇಳದಲ್ಲಿ 50ಕ್ಕೂ ಹೆಚ್ಚು ಪ್ರಮುಖ ಕಂಪನಿಗಳು ಭಾಗವಹಿಸುತ್ತಿದ್ದು, ಹೊಸ ಉದ್ಯೋಗ ಪಡೆಯಲು ಬಯಸುವವರು ಈ ಜಾಬ್ ಡ್ರೈವ್ನ ಪ್ರಯೋಜನ ಪಡೆಯಬಹುದು.
ನಿರುದ್ಯೋಗಿಗಳಿಗೆ ಕರ್ನಾಟಕ ರತ್ನ ಪುನೀತ್ ರಾಜ್ಕುಮಾರ್ ಉದ್ಯೋಗಮೇಳವನ್ನು ಕ್ಯಾಡ್ನೆಸ್ಟ್ ಕಳೆದ ವರ್ಷದಿಂದ ಬೆಂಗಳೂರಿನಲ್ಲಿ ನಡೆಸುತ್ತಿದೆ. ಐವತ್ತಕ್ಕೂ ಹೆಚ್ಚು ಖಾಸಗಿ ಕಂಪನಿಗಳು ಈ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳುವುದರಿಂದ ಒಂದೇ ವೇದಿಕೆಯಲ್ಲಿ ಹಲವು ಸಂದರ್ಶನಗಳನ್ನು ಎದುರಿಸಲು, ಉತ್ತಮ ಉದ್ಯೋಗ ಪಡೆಯಲು ಇದು ದಾರಿಯಾಗುತ್ತಿದೆ. ಕಳೆದ ವರ್ಷ ಈ ಉದ್ಯೋಗ ಮೇಳಕ್ಕೆ ದೊರಕಿದ ಅಭೂತಪೂರ್ವ ಪ್ರತಿಕ್ರಿಯೆಯನ್ನು ಗಮನದಲ್ಲಿಟ್ಟುಕೊಂಡು ಈ ವರ್ಷವೂ ಕ್ಯಾಡ್ನೆಸ್ಟ್ ಈ ಉದ್ಯೋಗ ಮೇಳ ಆಯೋಜಿಸುತ್ತಿದೆ.
“ಕಳೆದ ವರ್ಷದಿಂದ ನಾವು ಪವರ್ ಸ್ಟಾರ್ ಉದ್ಯೋಗಮೇಳವನ್ನು ಆಯೋಜಿಸುತ್ತಿದ್ದೇವೆ. ಇದಕ್ಕೆ ಕಳೆದ ವರ್ಷ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಸಾವಿರಾರು ಅಭ್ಯರ್ಥಿಗಳಿಗೆ ಹೊಸ ಉದ್ಯೋಗ ಪಡೆಯಲು ಇದು ವೇದಿಕೆಯಾಗಿತ್ತು. ಈ ವರ್ಷವೂ ಸಾಕಷ್ಟು ಅಭ್ಯರ್ಥಿಗಳು ಈ ಪವರ್ ಸ್ಟಾರ್ ಉದ್ಯೋಗಮೇಳಕ್ಕೆ ಹೆಸರು ನೋಂದಾಯಿಸಿದ್ದಾರೆ. ಬೆಂಗಳೂರಿನಲ್ಲಿ ಉದ್ಯೋಗದ ಹುಡುಕಾಟದಲ್ಲಿರುವ ಅಭ್ಯರ್ಥಿಗಳಿಗೆ ಇದೊಂದು ಉತ್ತಮ ಅವಕಾಶವಾಗಿದೆ” ಎಂದು ಕ್ಯಾಡ್ನೆಸ್ಟ್ ಆರ್ಗ್ನ ವ್ಯವಸ್ಥಾಪಕ ನಿರ್ದೇಶಕರಾದ ಪ್ರಕಾಶ್ ಗೌಡ ಎಚ್.ಎಂ ಹೇಳಿದ್ದಾರೆ.
ಉದ್ಯೋಗ ಮೇಳ ನಡೆಯುವ ದಿನಾಂಕ: ಅಕ್ಟೋಬರ್ 29, 2023
ಸಮಯ: ಬೆಳಗ್ಗೆ 10 ಗಂಟೆಯಿಂದ ಸಂಜೆ 3 ಗಂಟೆಯವರೆಗೆ.
ಸ್ಥಳ: ಕ್ಯಾಡ್ನೆಸ್ಟ್ ಪ್ರೈವೇಟ್ ಲಿಮಿಟೆಡ್ನ ರಾಜಾಜಿನಗರ ಶಾಖೆಯಲ್ಲಿ ಈ ಉದ್ಯೋಗ ಮೇಳ ನಡೆಯಲಿದೆ.
ನೋಂದಣಿ ಹೇಗೆ?: ಆನ್ಲೈನ್ ಮೂಲಕ ನೋಂದಣಿ ಮಾಡಬಹುದು. ನೋಂದಣಿ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ.
ಪುನೀತ್ ನೆನಪಲ್ಲಿ ಸಾಮಾಜಿಕ ಕಾರ್ಯ
ಸ್ಯಾಂಡಲ್ವುಡ್ ನಟ ಪುನೀತ್ ರಾಜ್ಕುಮಾರ್ ಅವರು ದೈಹಿಕವಾಗಿ ನಮ್ಮನ್ನು ಅಗಲಿ ಎರಡು ವರ್ಷ ಕಳೆದಿವೆ. ಆದರೆ, ಅವರ ಹೆಸರಿನಲ್ಲಿ ಕರ್ನಾಟಕದ್ಯಂತ ಹತ್ತು ಹಲವು ಸಾಮಾಜಿಕ ಕಾರ್ಯಗಳು ನಡೆಯುತ್ತ ಬಂದಿವೆ. ವಿಶೇಷವಾಗಿ ಶೈಕ್ಷಣಿಕ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಸಾಕಷ್ಟು ಸೋಷಿಯಲ್ ವರ್ಕ್ಗಳು ನಡೆಯುತ್ತಿವೆ. ಬಡ ಮಕ್ಕಳಿಗೆ ಶೈಕ್ಷಣಿಕ ನೆರವು, ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ದೊರಕಿಸುವಂತಹ ಪ್ರಯತ್ನ ಇತ್ಯಾದಿಗಳು ನಡೆಯುತ್ತಿವೆ. ರಕ್ತದಾನ, ನೇತ್ರದಾನ ಇತ್ಯಾದಿ ಹಲವು ಸಾಮಾಜಿಕ ಕಾರ್ಯಗಳು ನಡೆಯುತ್ತಿವೆ.