Kannada CADD Nest Private Limited

ಬೆಂಗಳೂರಿನ ಬೃಹತ್‌ ಬೇಸಿಗೆ ಶಿಬಿರಕ್ಕೆ ಅಡ್ಮಿಷನ್‌ ಆರಂಭ, ಸ್ಕಿಲ್ಸ್‌ ಕಲಿಯಬಯಸುವ ಕ್ಯೂಟ್‌ ಮಕ್ಕಳಿಗೆ ಕಿಡ್ಸ್‌ನೆಸ್ಟ್‌ಗೆ ಸುಸ್ವಾಗತ

children doing arts and crafts at school

ಬೆಂಗಳೂರು: ಮನೆಯ ಪುಟ್ಟ ಮಕ್ಕಳಿಗೆ ಬೇಸಿಗೆ ರಜೆ ಆರಂಭವಾಗಿದೆ. ರಜೆಯಲ್ಲಿ ಮಕ್ಕಳನ್ನು ಬೇಸಿಗೆ ಶಿಬಿರಕ್ಕೆ ಕಳುಹಿಸುವ ಯೋಜನೆ ನಿಮ್ಮಲ್ಲಿರಬಹುದು. ಬೇಸಿಗೆ ರಜೆಯಲ್ಲಿ ಆಡುತ್ತ, ನಲಿಯುತ್ತ ವಿವಿಧ ಕೌಶಲ್ಯಗಳನ್ನು ಕಲಿತರೆ ಮಕ್ಕಳು ಇನ್ನಷ್ಟು ಬುದ್ಧಿವಂತರಾಗುತ್ತಾರೆ.

ನಿಮಗೆ ಗೊತ್ತೆ, ಮಕ್ಕಳು ಹೇಗಿದ್ದರೂ ಕ್ಯೂಟ್‌. ಮಕ್ಕಳಲ್ಲಿ ಹಲವು ಟ್ಯಾಲೆಂಟ್‌ ಇದ್ರೆ ಇನ್ನಷ್ಟು ಕ್ಯೂಟ್‌. ಸ್ಕಿಲ್ಸ್‌ ಕಲಿತ ಮಕ್ಕಳಂತೂ ತುಂಬಾ ಕ್ಯೂಟ್‌. ಇದೇ ಕಾರಣಕ್ಕೆ ಮಕ್ಕಳಿಗೆ ವಿವಿಧ ಸ್ಕಿಲ್ಸ್‌ ಕಲಿಸಲು ಎಲ್ಲರೂ ಬಯಸುತ್ತಾರೆ. ಬೇಸಿಗೆ ಶಿಬಿರದಲ್ಲಿ ಮಕ್ಕಳ ಬುದ್ಧಿಗೆ ಒರೆಹಚ್ಚುವ, ಮಕ್ಕಳ ಸ್ವಂತ ಯೋಚನಾ ಶಕ್ತಿ ಹೆಚ್ಚಿಸುವ, ಮಕ್ಕಳನ್ನು ಇನ್ನಷ್ಟು ಬುದ್ಧಿವಂತರಾಗಿಸುವಂತಹ ವಾತಾವರಣ ಅತ್ಯಂತ ಮುಖ್ಯ.

ಇಂತಹ ಹತ್ತು ಹಲವು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಬೆಂಗಳೂರಿನ ಬೃಹತ್‌ ಬೇಸಿಗೆ ಶಿಬಿರ ಆರಂಭವಾಗಿದೆ. ಆ ಬೇಸಿಗೆ ಶಿಬಿರದ ಹೆಸರು ಕಿಡ್ಸ್‌ನೆಸ್ಟ್‌. ಇದು ಬೆಂಗಳೂರು ಬೃಹತ್‌ ಕೌಶಲ ತರಬೇತಿ ಕೇಂದ್ರವಾದ ಕ್ಯಾಡ್‌ನೆಸ್ಟ್‌ನ ಉಪಕ್ರಮ. ವಿವಿಧ ಬ್ಯಾಚ್‌ಗಳಿಗೆ ಈಗಾಗಲೇ ನೋಂದಣಿ ಆರಂಭವಾಗಿದೆ.

ಕಿಡ್ಸ್‌ನೆಸ್ಟ್‌ ಬೇಸಿಗೆ ಶಿಬಿರದಲ್ಲಿ ಏನು ಕಲಿಯಬಹುದು?


ಈ ಬೇಸಿಗೆ ಶಿಬಿರ ನಿಮ್ಮ ಮಕ್ಕಳಿಗೆ ವಿವಿಧ ಕೌಶಲ್ಯಗಳನ್ನು ಕಲಿಸಲಿದೆ. ಕಿಡ್ಸ್‌ನೆಸ್ಟ್‌ನ ಪ್ರಮುಖ ಆಕರ್ಷಣೆಗಳು ಈ ಮುಂದಿನಂತೆ ಇವೆ.
ಸ್ಪೋಕನ್‌ ಇಂಗ್ಲಿಷ್‌: ಈ ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ಅತ್ಯಂತ ಅಗತ್ಯವಾದ ಇಂಗ್ಲಿಷ್‌ ಸಂವಹನ ಕೌಶಲ ಕಲಿಸಲಾಗುತ್ತದೆ.
ಹ್ಯಾಂಡ್‌ ರೈಟಿಂಗ್‌: ಕೈಬರಹ ವ್ಯಕ್ತಿಯ ವ್ಯಕ್ತಿತ್ವದ ಸೂಚಕ. ನಿಮ್ಮ ಮಕ್ಕಳ ಅಂದವಾದ ಕೈಬರಹಕ್ಕೆ ಸಹಕರಿಸುವ ಹ್ಯಾಂಡ್‌ರೈಟಿಂಗ್‌ ಕೂಡ ಕಿಡ್ಸ್‌ನೆಸ್ಟ್‌ನ ಪ್ರಮುಖ ಆಕರ್ಷಣೆ.
ಸ್ಪೀಡ್‌ ರೈಟಿಂಗ್‌: ಮಕ್ಕಳು ಚೆನ್ನಾಗಿ ಓದಿದರೆ ಸಾಲದು, ಪರೀಕ್ಷೆಗೆ ನಿಗದಿಪಡಿಸಿದ ಸಮಯದಲ್ಲಿ ಎಲ್ಲಾ ಉತ್ತರಗಳನ್ನು ಬರೆಯುವುದು ಅಗತ್ಯ. ನಿಮ್ಮ ಮಕ್ಕಳಿಗೆ ಸ್ಪೀಡ್‌ ರೈಟಿಂಗ್‌ ಕೌಶಲ್ಯ ಅತ್ಯಂತ ಅಗತ್ಯ. ಇದು ಕೂಡ ಕಿಡ್ಸ್‌ನೆಸ್ಟ್‌ನ ಆಕರ್ಷಣೆ.
ಕ್ಯಾಲಿಗ್ರಫಿ: ನಿಮ್ಮ ಮಕ್ಕಳಿಗೆ ಕಲಾತ್ಮಕವಾಗಿ ಬರೆಯಲು ಈ ಬೇಸಿಗೆ ಶಿಬಿರ ನೆರವಾಗುತ್ತದೆ.
ಪೇಪರ್‌ ಕ್ರಾಫ್ಟ್‌, ಕ್ಲೇ ಮಾಡೆಲಿಂಗ್‌ ಕೂಡ ಕಿಡ್ಸ್‌ನೆಸ್ಟ್‌ನ ಪ್ರಮುಖ ಆಕರ್ಷಣೆಯಾಗಿದ್ದು, ಇದು ಮಕ್ಕಳ ಕ್ರಿಯಾಶೀಲತೆ ಹೆಚ್ಚಿಸಲಿದೆ.
ಡ್ರಾಯಿಂಗ್‌/ಪೇಟಿಂಗ್‌: ಮಕ್ಕಳಿಗೆ ಚಿತ್ರ ಬಿಡಿಸುವುದು, ಪೇಟಿಂಗ್‌ ಬಿಡಿಸುವುದು ಇಷ್ಟ. ಕಿಡ್ಸ್‌ನೆಸ್ಟ್‌ ಬೇಸಿಗೆ ಶಿಬಿರದಲ್ಲಿ ಮಕ್ಕಳ ಕನಸಿಗೆ ಬಣ್ಣ ಹಚ್ಚಲಾಗುವುದು.

ಟೆಕ್‌ ಆಕರ್ಷಣೆ
ಕಿಡ್ಸ್‌ನೆಸ್ಟ್‌ ಬೇಸಿಗೆ ಶಿಬಿರದಲ್ಲಿ ಇನ್ನೂ ಹಲವು ಆಕರ್ಷಣೆಗಳಿವೆ.
ಗೂಗಲ್‌ ಜೀನಿಯಸ್‌, ಗ್ರಾಫಿಕ್‌ ಡಿಸೈನಿಂಗ್‌, ಕಿಡೋಸ್‌ ಕೋಡಿಂಗ್‌, ವೆಬ್‌ ಡಿಸೈನಿಂಗ್‌, ಯಂಗ್‌ ಆಫೀಸ್‌ ಅಡ್ಮಿನಿಸ್ಟ್ರೇಷನ್‌, ಡಿಜಿಟಲ್‌ ಮಾರ್ಕೆಟಿಂಗ್‌ ಇತ್ಯಾದಿ ಸ್ಕಿಲ್ಸ್‌ ಕಲಿಯಲು ಅವಕಾಶವಿದೆ.
ವರ್ತಮಾನ, ಭವಿಷ್ಯದ ಬಹುಬೇಡಿಕೆಯ ಇಂತಹ ಕೌಶಲ್ಯಗಳನ್ನು ಮಕ್ಕಳಿಗೆ ಇಂದೇ ಪರಿಚಯಿಸಿದರೆ ಮಕ್ಕಳಲ್ಲಿ ತಂತ್ರಜ್ಞಾನ ಆಧರಿತ ಜಗತ್ತಿನ ಕುರಿತು ಆಕರ್ಷಣೆ ಬೆಳೆಯಲಿದೆ.

ಸ್ಕಿಲ್ಸ್‌ ಕಲಿತ ಮಕ್ಕಳು ತುಂಬಾ ಕ್ಯೂಟ್‌
ಕಿಡ್ಸ್‌ನೆಸ್ಟ್‌ ನಿಮ್ಮ ಮಕ್ಕಳಿಗೆ ಬೆಸ್ಟ್‌

ಈಗಲೇ ಕಿಡ್ಸ್‌ನೆಸ್ಟ್‌ಗೆ ಮಕ್ಕಳ ಹೆಸರು ನೋಂದಾಯಿಸಿ

ಕಿಡ್ಸ್‌ನೆಸ್ಟ್‌ ಬ್ಯಾಚುಗಳು ಏಪ್ರಿಲ್‌ 10, 12, 17, 24 ಮತ್ತು ಮೇ 1 ಮತ್ತು 3ಕ್ಕೆ ಆರಂಭವಾಗುತ್ತವೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 9035682069

Ad Widget

Related Posts

error: Content is protected !!
Scroll to Top