Kannada CADD Nest Private Limited

ಕ್ಯಾಡ್‌ನೆಸ್ಟ್‌ ಆಯೋಜಿಸಿದ ಪವರ್‌ ಸ್ಟಾರ್‌ ಉದ್ಯೋಗ ಮೇಳಕ್ಕೆ ಅದ್ಭುತ ಪ್ರತಿಕ್ರಿಯೆ, ಉದ್ಯೋಗ ಪಡೆದ ನೂರಾರು ಅಭ್ಯರ್ಥಿಗಳು

ಕ್ಯಾಡ್‌ನೆಸ್ಟ್‌ ಆಯೋಜಿಸಿದ ಪವರ್‌ ಸ್ಟಾರ್‌ ಉದ್ಯೋಗ ಮೇಳಕ್ಕೆ ಅದ್ಭುತ ಪ್ರತಿಕ್ರಿಯೆ, ಉದ್ಯೋಗ ಪಡೆದ ನೂರಾರು ಅಭ್ಯರ್ಥಿಗಳು

ಬೆಂಗಳೂರು: ರಾಜಾಜಿನಗರದಲ್ಲಿ ಪುನೀತ್‌ ಪುಣ್ಯಸ್ಮರಣೆಯ ದಿನದಂದು ಬೆಂಗಳೂರಿನ ಕ್ಯಾಡ್‌ನೆಸ್ಟ್‌ ಕೌಶಲ್ಯ ತರಬೇತಿ ಕೇಂದ್ರವೂ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡು ಗಮನ ಸೆಳೆದಿದೆ. CADD Nest Private Limited ಆಯೋಜಿಸಿದ ಪವರ್‌ ಸ್ಟಾರ್‌ ಉದ್ಯೋಗ ಮೇಳಕ್ಕೆ ನಿರೀಕ್ಷೆಗೆ ಮೀರಿ ಸ್ಪಂದನೆ ದೊರಕಿದ್ದು, ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದೆ. ಉದ್ಯೋಗ ಮೇಳಕ್ಕೆ ಸಾವಿರಾರು ಅಭ್ಯರ್ಥಿಗಳು ಹಾಜರಾಗಿ ನೂರಾರು ಅಭ್ಯರ್ಥಿಗಳು ಸ್ಥಳದಲ್ಲಿಯೇ ಉದ್ಯೋಗದ ಆಫರ್‌ ಪಡೆದರು.

ಸಾಮಾಜಿಕ ಕಾರ್ಯಗಳಿಂದ ಜನಮಾನಸದಲ್ಲಿ ಚಿರಸ್ಥಾಯಿಯಾಗಿರುವ ಎಲ್ಲರ ಮೆಚ್ಚಿನ ನಟ ಅಪ್ಪುವಿನ ಕಾರ್ಯಗಳನ್ನು ಮುಂದುವರೆಸಲು ವಿವಿಧ ಸಂಘಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳು, ಯವ ಜನತೆ ವಿನೂತನ ಕಾರ್ಯಕ್ರಮಗಳನ್ನು ಪುನೀತ್‌ ಪರ್ವದಂದು ಹಮ್ಮಿಕೊಂಡಿತ್ತು. ರಕ್ತದಾನ, ಬಡ ಮಕ್ಕಳಿಗೆ ಉಚಿತವಾಗಿ ಪುಸ್ತಕ ವಿತರಣೆ, ಅನ್ನದಾನ ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದವು.

ಬೆಂಗಳೂರಿನ ರಾಜಾಜಿನಗರ, ಬಸವನಗುಡಿ, ಶೇಷಾದ್ರಿಪುರಂ, ಮಲ್ಲೇಶ್ವರಂ, ಆರ್ ಆರ್ ನಗರ,ಆರ್ ಟಿ ನಗರ ಮತ್ತು ಮಾಗಡಿ ಮತ್ತು ಎಚ್ ಬಿ ಆರ್ ಲೇಔಟ್ ಸೇರಿದಂತೆ ಹಲವು ಕಡೆಗಳಲ್ಲಿ ಕೌಶಲ್ಯ ತರಬೇತಿ ಹೊಂದಿರುವ ಕ್ಯಾಡ್‌ನೆಸ್ಟ್‌ ವಿನೂತನವಾಗಿ ಪುನೀತ್‌ ರಾಜ್‌ಕುಮಾರ್‌ ಅವರನ್ನು ನೆನಪಿಸಿಕೊಂಡಿತ್ತು. ಅಂದು, ಪವರ್‌ ಸ್ಟಾರ್‌ ಉಚಿತ ಉದ್ಯೋಗ ಮೇಳ ಆಯೋಜಿಸಿ ನೂರಾರು ಯುವಕ ಯುವತಿಯರಿಗೆ ಭವಿಷ್ಯದ ದಾರಿ ತೋರಿಸಿತ್ತು.

“ಉದ್ಯೋಗ ಮೇಳದಲ್ಲಿ ನೂರಾರು ಜನರಿಗೆ ಉದ್ಯೋಗದ ಆಫರ್‌ ದೊರಕಿದೆ. ಮೇಳ ನಡೆದ ಮರುದಿನವೇ ಬಹುತೇಕರಿಗೆ ಆಫರ್‌ ಲೆಟರ್‌ ತಲುಪಿದೆ. ಇನ್ನೂರು ಮುನ್ನೂರು ಅಭ್ಯರ್ಥಿಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸುವ ನಿರೀಕ್ಷೆಯಲ್ಲಿದ್ದೇವು. ಆದರೆ, ಸಾವಿರಕ್ಕಿಂತಲೂ ಹೆಚ್ಚು ಅಭ್ಯರ್ಥಿಗಳು ಈ ಉದ್ಯೋಗ ಮೇಳಕ್ಕೆ ಆಗಮಿಸಿದ್ದಾರೆ. ಸಂಜೆ ಮೂರು ಗಂಟೆಗೆ ಮುಗಿಯಬೇಕಾಗಿದ್ದ ಉದ್ಯೋಗ ಮೇಳವನ್ನು ರಾತ್ರಿ ಏಳರ ತನಕವೂ ನಡೆಸಿದೆವುʼʼ ಎಂದು ಕ್ಯಾಡ್‌ನೆಸ್ಟ್‌ ಸಂಸ್ಥಾಪಕರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಪ್ರಕಾಶ್‌ ಗೌಡ ಎಚ್‌.ಎಂ ಹೇಳಿದ್ದಾರೆ.

ವಿವಿಧ ರೀತಿಯ ಕೌಶಲ್ಯಗಳನ್ನು ಹೊಂದಿರುವ ಅಭ್ಯರ್ಥಿಗಳು ಮಾತ್ರವಲ್ಲದೆ ಕೌಶಲ್ಯ ಹೊಂದಿಲ್ಲದೆ ಇರುವವರೂ ಈ ಉದ್ಯೋಗ ಮೇಳದಲ್ಲಿ ಅವಕಾಶ ಪಡೆದಿದ್ದಾರೆ. ಕ್ಯಾಡ್‌ನೆಸ್ಟ್‌ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಸಾರ್ವಜನಿಕರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಉತ್ತಮ ಅವಕಾಶ ಪಡೆದುಕೊಂಡಿದ್ದಾರೆ. ಅಪ್ಪುವಿನ ಹೆಸರಿನಲ್ಲಿ ನಡೆಸಿದ ಈ ಕಾರ್ಯಕ್ರಮ ನಮಗೆ ತೃಪ್ತಿ ತಂದಿದೆ. ಪುನೀತ್‌ ಸರ್‌ ಅವರನ್ನು ಸ್ಪೂರ್ತಿಯಾಗಿಟ್ಟುಕೊಂಡು ಇಂತಹ ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿಯೂ ಆಯೋಜಿಸಲು ನಿರ್ಧರಿಸಿದ್ದೇವೆʼʼ ಎಂದು ಅವರು ಹೇಳಿದ್ದಾರೆ.

“ಉದ್ಯೋಗ ಮೇಳ ನಡೆಸಿದ ತಕ್ಷಣ ನಮ್ಮ ಕೆಲಸ ಮುಗಿದಿಲ್ಲ. ನಾವು ಮತ್ತೆ ಎಲ್ಲಾ ಅಭ್ಯರ್ಥಿಗಳನ್ನು ಸಂಪರ್ಕಿಸಿ ಅವರಿಗೆ ಆಫರ್‌ ಬಂದಿರುವುದನ್ನು ಖಚಿತಪಡಿಸಿದ್ದೇವೆ. ಆಫರ್‌ ಲೆಟರ್‌ ದೊರಕದೆ ಇರುವವರಿಗೆ, ಕಂಪನಿಗಳನ್ನು ಸಂಪರ್ಕಿಸಿ ಆಫರ್‌ ಲೆಟರ್‌ ದೊರಕಿಸಿಕೊಟ್ಟಿದ್ದೇವೆʼʼ ಎಂದು ಅವರು ಹೇಳಿದ್ದಾರೆ.

ಒಟ್ಟಾರೆ, ನಿರುದ್ಯೋಗಿ ಯುವಕ ಯುವತಿಯರಿಗೆ ಪುನೀತ್‌ ರಾಜ್‌ ಕುಮಾರ್‌ ಹೆಸರಿನಲ್ಲಿ ನಡೆಸಿದ ಈ ಉಚಿತ ಉದ್ಯೋಗ ಮೇಳವು ಹೊಸ ಭರವಸೆ, ದಿಕ್ಕು ನೀಡಿದ್ದು ಸುಳ್ಳಲ್ಲ.

CADD Nest Private Limited
Power star udhyoga mela 2022
Free Job Drive on 29th October
CADD Nest Private Limited Rajajinagar
Puneeth Rajkumar udyoga mela 2022
Power Star udyoga mela 2022
CADD Nest Private Limited Bangalore
job fair in bangalore
job fair 2022
CADD Nest Private Limited job fair in bangalore

Related Posts

error: Content is protected !!
Scroll to Top