Kannada CADD Nest Private Limited

ಪವರ್‌ ಸ್ಟಾರ್‌ ಉಚಿತ ಉದ್ಯೋಗ ಮೇಳಕ್ಕೆ ಶುಭ ಹಾರೈಸಿದ ಡಾ. ಶಿವಣ್ಣ

ಪವರ್‌ ಸ್ಟಾರ್‌ ಉಚಿತ ಉದ್ಯೋಗ ಮೇಳಕ್ಕೆ ಶುಭ ಹಾರೈಸಿದ ಡಾ. ಶಿವಣ್ಣ

ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌ (Puneeth Rajkumar) ಅವರ ನೆನಪಿನಲ್ಲಿ ಕ್ಯಾಡ್‌ನೆಸ್ಟ್‌ ಬೆಂಗಳೂರು ಆಯೋಜಿಸಿರುವ “ಪವರ್‌ ಸ್ಟಾರ್‌ ಉದ್ಯೋಗ ಮೇಳ”ಕ್ಕೆ (powerstar job drive) ಶಿವರಾಜ್‌ ಕುಮಾರ್‌ ರವರು ಶುಭ ಹಾರೈಸಿದ್ದಾರೆ. ಇದೇ ಸಂದರ್ಭದಲ್ಲಿ ಕ್ಯಾಡ್‌ನೆಸ್ಟ್‌ ಸರ್ಟಿಫಿಕೇಷನ್‌ಗೆ ಶಿವರಾಜ್‌ ಕುಮಾರ್‌ ಸಹಿ ಹಾಕಿ ಚಾಲನೆ ನೀಡಿದ್ದಾರೆ.

ಇಂದು ಬೆಳಗ್ಗೆ ಕ್ಯಾಡ್‌ನೆಸ್ಟ್‌ ತಂಡವು ಶಿವರಾಜ್‌ ಕುಮಾರ್‌ ರವರ ನಿವಾಸಕ್ಕೆ ಭೇಟಿ ನೀಡಿತ್ತು. ಮಾನ್ಯತಾ ಟೆಕ್‌ ಪಾರ್ಕ್‌ ಬಳಿ ವಾಕಿಂಗ್‌ ಮಾಡುತ್ತ ಕ್ಯಾಡ್‌ನೆಸ್ಟ್‌ ತಂಡದ ಜತೆಗೆ ಶಿವರಾಜ್‌ ಕುಮಾರ್‌ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಕ್ಯಾಡ್‌ನೆಸ್ಟ್‌ ಸ್ಥಾಪಕರು ಮತ್ತು ಎಂಡಿ ಪ್ರಕಾಶ್‌ ಗೌಡ ಅವರು ಉಚಿತ ಉದ್ಯೋಗ ಮೇಳದ ವಿವರವನ್ನು ಶಿವರಾಜ್‌ ಕುಮಾರ್‌ ಅವರಿಗೆ ನೀಡಿದರು.

ಬೆಂಗಳೂರಿನ ಹಲವು ಕಡೆ ಶಾಖೆಗಳನ್ನು ಹೊಂದಿರುವ, ಯುವ ಜನರಿಗೆ ಕೌಶಲ ತರಬೇತಿ ನೀಡುತ್ತಿರುವ ಕ್ಯಾಡ್‌ನೆಸ್ಟ್‌ನ ಉಚಿತ ಉದ್ಯೋಗ ಮೇಳದ ಕುರಿತು ಶಿವರಾಜ್‌ ಕುಮಾರ್‌ ರವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಉಚಿತವಾಗಿ ಉದ್ಯೋಗ ಮೇಳದಲ್ಲಿ ಭಾಗವಹಿಸಲು ಮತ್ತು ತಮ್ಮ ಕನಸಿನ ಉದ್ಯೋಗ ಪಡೆಯಲು ಯುವ ಜನರಿಗೆ ಅವಕಾಶ ನೀಡುವ ಕ್ಯಾಡ್‌ನೆಸ್ಟ್‌ಗೆ ಅಭಿನಂದನೆ ಎಂದ ಅವರು, ಅಪ್ಪು ಸ್ಮರಣೆ ಕಾರ್ಯಕ್ರಮಗಳ ಕಾರಣದಿಂದ ಈ ಉದ್ಯೋಗ ಮೇಳದಲ್ಲಿ ಭಾಗವಹಿಸಲಾಗುತ್ತಿಲ್ಲ, ಮುಂದೊಂದು ದಿನ ಕ್ಯಾಡ್‌ನೆಸ್ಟ್‌ನ ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸುವ ಭರವಸೆ ನೀಡಿದ್ದಾರೆ.

ಕ್ಯಾಡ್‌ನೆಸ್ಟ್‌ ಆಯೋಜಿಸಿರುವ ಉದ್ಯೋಗ ಮೇಳಕ್ಕೆ ಈಗಾಗಲೇ ನೂರಾರು ಅಭ್ಯರ್ಥಿಗಳು ತಮ್ಮ ಹೆಸರು ನೋಂದಾಯಿಸಿದ್ದಾರೆ. ಹೆಸರು ನೋಂದಾಯಿಸದೆ ಇರುವ ಅಭ್ಯರ್ಥಿಗಳು ಈ ಮುಂದೆ ನೀಡಿರುವ ಫಾರಮ್‌ನಲ್ಲಿ ಅಥವಾ ಮುಂದೆ ಪೋಸ್ಟರ್‌ನಲ್ಲಿ ನೀಡಿರುವ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಹೆಸರು ನೋಂದಾಯಿಸಿಕೊಳ್ಳಬಹುದು.

ಉದ್ಯೋಗ ಮೇಳಕ್ಕೆ ಶುಭ ಹಾರೈಸಿದ ರಾಘವೇಂದ್ರ ರಾಜಕುಮಾರ್‌ ಪುತ್ರ ಯುವ ರಾಜಕುಮಾರ್‌
ಯುವ ಜನತೆಗೆ ಉದ್ಯೋಗ ಪಡೆಯಲು ನೆರವಾಗುವ ಪವರ್‌ ಸ್ಟಾರ್‌ ಉದ್ಯೋಗ ಮೇಳಕ್ಕೆ ರಾಘವೇಂದ್ರ ರಾಜಕುಮಾರ್‌ ಪುತ್ರ ಯುವ ರಾಜಕುಮಾರ್‌ ಶುಭ ಹಾರೈಸಿದ್ದಾರೆ. ಅಪ್ಪು ಅವರ ಸಾಮಾಜಿಕ ಕಾಳಜಿಗಳನ್ನು ವಿಸ್ತರಿಸುವ ಕ್ಯಾಡ್‌ನೆಸ್ಟ್‌ ಉಪಕ್ರಮಕ್ಕೆ ಅತೀವ ಸಂತಸ ವ್ಯಕ್ತಪಡಿಸಿದ್ದಾರೆ.

ಕನ್ನಡದ ಪವರ್‌ಸ್ಟಾರ್‌ ಪುನೀತ್‌ ರಾಜಕುಮಾರ್‌ ನಿಜ ಜೀವನದಲ್ಲಿಯೂ ತನ್ನ ಒಳ್ಳೆಯ ಕೆಲಸಗಳಿಂದ ಮಾದರಿಯಾಗಿದ್ದರು. ವಿಶೇಷವಾಗಿ ಯುವ ಜನರ ಮೇಲೆ ಅವರಿಗೆ ವಿಶೇಷ ಅಕ್ಕರೆ. ಅಪ್ಪುವಿನ ಸಮಾಜ ಸೇವೆಯನ್ನು ಸ್ಫೂರ್ತಿಯಾಗಿಟ್ಟುಕೊಂಡು ಬೆಂಗಳೂರಿನ ಪ್ರಮುಖ ಕೌಶಲ ತರಬೇತಿ ಕೇಂದ್ರವಾದ ಕ್ಯಾಡ್‌ನೆಸ್ಟ್‌ ಉಚಿತ ಉದ್ಯೋಗ ಮೇಳವನ್ನು ಪವರ್‌ ಸ್ಟಾರ್‌ ಹೆಸರಿನಲ್ಲಿ ಆಯೋಜಿಸಿದೆ.

ಬೆಂಗಳೂರಿನಲ್ಲಿ ಸಾಕಷ್ಟು ಜನರು ಉದ್ಯೋಗದ ಹುಡುಕಾಟದಲ್ಲಿರುತ್ತಾರೆ. ಶಿಕ್ಷಣ ಅಥವಾ ಕೌಶಲವಿದ್ದರೂ ಕೆಲವರಿಗೆ ಉದ್ಯೋಗಾವಕಾಶ ದೊರಕಿರುವುದಿಲ್ಲ. ಸಾಕಷ್ಟು ಕಂಪನಿಗಳಿಗೆ ಅರ್ಜಿ ಸಲ್ಲಿಸಿದರೂ ಮಾರುತ್ತರ ಬಂದಿರುವುದಿಲ್ಲ. ಇಂತಹ ಯುವ ಜನರಿಗಾಗಿ, ನಿರುದ್ಯೋಗಿ ಯುವಕ-ಯುವತಿಯರಿಗಾಗಿ ಬೆಂಗಳೂರಿನ ರಾಜಾಜಿನಗರದಲ್ಲಿ ಕ್ಯಾಡ್‌ನೆಸ್ಟ್‌ ವಿಶೇಷ ಉದ್ಯೋಗ ಮೇಳ ಆಯೋಜಿಸಿದೆ.

ಈ ಉದ್ಯೋಗ ಮೇಳದಲ್ಲಿ ಪ್ರಮುಖ ಕಂಪನಿಗಳು ಭಾಗವಹಿಸುತ್ತಿದ್ದು, ಹೊಸ ಉದ್ಯೋಗದ ಹುಡುಕಾಟದಲ್ಲಿರುವರಿಗೆ ಇದು ಅಪೂರ್ವ ಅವಕಾಶವಾಗಲಿದೆ.

ಪವರ್‌ ಸ್ಟಾರ್‌ ಉದ್ಯೋಗ ಮೇಳ-2022: ದಿನಾಂಕ


ಬೆಂಗಳೂರಿನ ರಾಜಾಜಿನಗರದಲ್ಲಿ ಪವರ್‌ ಸ್ಟಾರ್‌ ಉದ್ಯೋಗ ಮೇಳ-2022 ಇದೇ ಅಕ್ಟೋಬರ್‌ 29ರಂದು ನಡೆಯಲಿದೆ.

ಪವರ್‌ ಸ್ಟಾರ್‌ ಉದ್ಯೋಗ ಮೇಳ-2022: ಸಮಯ


ಬೆಳಗ್ಗೆ 9 ಗಂಟೆಯಿಂದ ಅಪರಾಹ್ನ 3 ಗಂಟೆಯವರೆಗೆ ಈ ಉದ್ಯೋಗ ಮೇಳ ನಡೆಯಲಿದೆ.

ಪವರ್‌ ಸ್ಟಾರ್‌ ಉದ್ಯೋಗ ಮೇಳ-2022: ನಡೆಯುವ ಸ್ಥಳ

ಪವರ್‌ ಸ್ಟಾರ್‌ ಉದ್ಯೋಗ ಮೇಳವು ಕ್ಯಾಡ್‌ನೆಸ್ಟ್‌ (ಪ್ರೈ) ಲಿಮಿಟೆಡ್‌, ರಾಜಾಜಿನಗರ ಶಾಖೆಯಲ್ಲಿ ನಡೆಯಲಿದೆ.

ಹೆಸರು ನೋಂದಣಿ ಹೇಗೆ?
ಆಸಕ್ತರು ಇಲ್ಲಿ ಕ್ಲಿಕ್‌ ಮಾಡುವ ಮೂಲಕ ಹೆಸರು ನೋಂದಾಯಿಸಬಹುದು.

https://forms.gle/RczWEnicuvV4VD7g8

Related Posts

error: Content is protected !!
Scroll to Top