Kannada CADD Nest Private Limited

ಅದೃಷ್ಟಕ್ಕಾಗಿ ಕಾಯಬೇಡಿ, ಅವಕಾಶಗಳನ್ನು ಬಳಸಿಕೊಳ್ಳಿ

man sitting on boat

ಈ ಕಥೆ ನಿಮಗೆ ಗೊತ್ತಿರಬಹುದು. ಒಂದು ಊರಿಗೆ ಪ್ರವಾಹ ಬಂತು. ಎಲ್ಲರೂ ಸುರಕ್ಷಿತ ಸ್ಥಳ ಹುಡುಕುತ್ತ ಓಡಿದರು. ಆದರೆ  ಆತ ಮಾತ್ರ ಓಡಲಿಲ್ಲ.

ನೀನ್ಯಾಕೆ ಓಡುತ್ತಿಲ್ಲ’ ಎಂದು ಎಲ್ಲರೂ  ಅವನಲ್ಲಿ ಕೇಳಿದರು.

ಅದಕ್ಕೆ ಆತ `ನನ್ನನ್ನು ದೇವರು ಕಾಪಾಡುತ್ತಾನೆ. ನನಗೆ ಆತನ ಮೇಲೆ ನಂಬಿಕೆಯಿದೆ’ ಎನ್ನುತ್ತಾನೆ.

ನೀರಿನ ಪ್ರಮಾಣ ಸ್ವಲ್ಪ ಹೆಚ್ಚಾದಗ  ಒಂದು ಕಾರು ಬಂತು.  

ಆದರೆ  ನನ್ನನ್ನು ದೇವರು ಕಾಪಾಡುತ್ತಾನೆ’ ಎಂದು ಅವನು ಕಾರನ್ನು ವಾಪಸ್ ಕಳುಹಿಸಿದ.

ನೀರಿನ ಪ್ರಮಾಣ ಇನ್ನೂ ಹೆಚ್ಚಾದಗ  ಲಾರಿಯೊಂದು  ಬಂತು. ದೇವರು ಬಂದು ಕಾಪಾಡುತ್ತಾನೆ ಎಂದು ಲಾರಿಯನ್ನೂ ವಾಪಸ್ ಕಳುಹಿಸಿದ. ನೀರು ಮತ್ತೂ  ಹೆಚ್ಚಾಯಿತು.

ಆಗ ಒಂದು ದೋಣಿ ಬಂತು. ನನ್ನನ್ನು ಕಾಪಾಡಲು ದೇವರು ಬರುತ್ತಾನೆ ಎಂದ.

ಅದನ್ನೂ ವಾಪಸ್ ಕಳುಹಿಸಿದ.

ನೀರಿನ ಪ್ರಮಾಣ ಹೆಚ್ಚಾಗಿ ಮನೆಯ ಮಹಡಿಯನ್ನು ಏರಿ ಕುಳಿತ.

ಆಗ ಅಲ್ಲಿಗೆ ಹೆಲಿಕಾಪ್ಟರ್ ಬಂತು.

ದೇವರು ಬಂದು ಕಾಪಾಡುತ್ತಾನೆ ಎಂದು ಹೆಲಿಕಾಪ್ಟರ್‍ನಲ್ಲೂ ಆತ ಹೋಗಲಿಲ್ಲ.

ನೀರು ಹೆಚ್ಚಾಯಿತು. ಆತ ನೀರಲ್ಲಿ ಮುಳುಗಿ ಸತ್ತ.

ಕತೆ ಇಲ್ಲಿಗೆ ಮುಗಿಯಲಿಲ್ಲ. ಆತ ದೇವರಲ್ಲಿಗೆ ತಲುಪಿದ.

ದೇವರೇ ನಾನು ನಿನ್ನಷ್ಟು ಇಷ್ಟೊಂದು ಭಕ್ತಿಯಿಂದ ಕರೆದರೂ ನೀನ್ಯಾಕೆ ಬಂದು ನನ್ನ ಕಾಪಾಡಲಿಲ್ಲ ಎಂದು ದೇವರ ಮೇಲೆಯೇ ಕೋಪಗೊಂಡ. ದೇವರು ನಗುತ್ತ ಹೇಳಿದ ಎಲೈ ಭಕ್ತನೇ, ನಿನಗೆ ಕಾರು, ಲಾರಿ, ದೋಣಿ, ಹೆಲಿಕಾಪ್ಟರ್ ಎಲ್ಲವನ್ನೂ ಕಳುಹಿಸಿದ್ದು ಯಾರೆಂದುಕೊಂಡೆ. ನಾನೇ ಕಳುಹಿಸಿದ್ದೆ, ನೀನೇ ನಿರಾಕರಿಸಿಬಿಟ್ಟೆ’. ಆಗ ಭಕ್ತನಿಗೆ ತನ್ನ ತಪ್ಪಿನ ಅರಿವಾಯಿತು.

* ನಾನು ಒಳ್ಳೆಯ ರಾಂಕ್ ಹೋಲ್ಡರ್ ನನಗೆ ಕೆಲಸ ಹುಡುಕಿಕೊಂಡು ಬರುತ್ತದೆ ಎಂದು ಕಾಯಬೇಡಿ. ನೀವು ಕಾಲೇಜು ಮುಗಿಸಿ ಉದ್ಯೋಗ ಹುಡುಕಾಟಕ್ಕೆ ಸತತ ಪ್ರಯತ್ನ ಮಾಡಬೇಕು. ವಿನಾಕಾರಣ ಸಮಯ ವ್ಯರ್ಥಮಾಡದೆ ಒಳ್ಳೆಯ ಅವಕಾಶವನ್ನು ಹುಡುಕಬೇಕು.

* ಉದ್ಯೋಗ ದೊರಕಿದ ಬಳಿಕ ಕಂಫರ್ಟ್ ಝೋನ್‍ಗೆ ಹೋಗಿಬಿಡಬೇಡಿ. ಯಾಕೆಂದರೆ, ನೀವು ಕಠಿಣ ಪರಿಶ್ರಮಪಟ್ಟು ಹೊಸ ಕೌಶಲಗಳು, ಕೆಲಸಗಳನ್ನು ಸರಿಯಾಗಿ ಕಲಿತರೆ ಮಾತ್ರ ಬೆಳೆಯಬಹುದು.

* ಆಫೀಸ್‍ನಲ್ಲಿ ಏನಾದರೂ ಸಮಸ್ಯೆಯ ಸಣ್ಣ ಸೂಚನೆ ದೊರಕಬಹುದು. ಈ ಮೇಲೆ ತಿಳಿಸಿದ ಕತೆಯಲ್ಲಿ ನೀರುಬಂದಂತೆ. ಏನಾಗದೂ, ಮುಂದೆ ತೊಂದರೆ ಬಂದಾಗ ನೋಡಿಕೊಂಡರಾಯ್ತು ಎಂದುಕೊಳ್ಳಬೇಡಿ. ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉಳಿದುಕೊಳ್ಳಲು ಸಜ್ಜಾಗಿರಿ.

* ಈ ಕತೆಯಲ್ಲಿ ಕಾರು, ಲಾರಿ, ದೋಣಿ ಬಂದಂತೆ  ನಮ್ಮ ಜೀವನದಲ್ಲಿ ಅವಕಾಶಗಳು ನಾನಾ ರೂಪದಲ್ಲಿ ಬರುತ್ತವೆ. ಸೂಕ್ತ ಅವಕಾಶವನ್ನು ಪಡೆದುಕೊಂಡು ಮುಂದುವರೆಯಿರಿ.

* ನಿಮ್ಮ ಜೀವನದ ಗುರಿ ಈ ಕತೆಯ ನಾಯಕನಂತೆ ದೇವರು ಕಾಪಾಡುವುದು ಅಥವಾ ಉನ್ನತವಾದದ್ದನ್ನು ಪಡೆಯುವುದಾಗಿರಬಹುದು. ಆದರೆ, ಅದು ತಕ್ಷಣಕ್ಕೆ ಬರುವುದಿಲ್ಲ. ಆ ಹಂತವನ್ನು ತಲುಪಲು ಸಾಕಷ್ಟು ಪ್ರಯತ್ನಗಳೆಂಬ ಮೆಟ್ಟಿಲನ್ನು ದಾಟಿ ಸಾಗಬೇಕು.

* ಅದೃಷ್ಟವನ್ನು ಅವಲಂಬಿಸಬೇಡಿ, ಇದರ ಬದಲು ನಿಮ್ಮ ಸ್ವಂತ ಯೋಜನೆಗಳನ್ನು ರೂಪಿಸಿಕೊಂಡು ಮುಂದುವರೆಯಿರಿ. ಇದರಿಂದ ನಿಮ್ಮ ಯಶಸ್ಸಿನತ್ತ ಪ್ರಯಾಣ ಸುಲಭವಾಗುತ್ತದೆ.

* ನಾವೆಲ್ಲ ನಮ್ಮದೇ ಆದ ಮಿತಿಗಳನ್ನು ಹೊಂದಿದ್ದೇವೆ. ಅಗತ್ಯ ಬಿದ್ದಾಗ ನಾವು ಈ ಮಿತಿಗಳ ಹಿಂದೆ ನಿಂತು ಆ ಮಿತಿಗಳನ್ನು ತಳ್ಳಬೇಕು.

* ನಿಮ್ಮ ಜೀವನದಲ್ಲಿ ದೊರಕುವ ಪ್ರತಿಯೊಂದು ಅವಕಾಶವನ್ನು ಬಳಸಿಕೊಳ್ಳಿ. ಕೆಲವೊಮ್ಮೆ ಕೆಲವು ಅವಕಾಶಗಳು ಒಮ್ಮೆ ಮಾತ್ರ ಬರುತ್ತವೆ. ಈ ಕತೆಯಲ್ಲಿ ಬಂದಂತೆ ಕಾರು, ಲಾರಿ, ದೋಣಿ ಇತ್ಯಾದಿ ಹಲವು ಅವಕಾಶಗಳು ಬಾರದೆ ಇರಬಹುದು.

* ಒಳ್ಳೆಯದು ಸುಲಭಕ್ಕೆ ದೊರಕುವುದಿಲ್ಲ. ತೊಂದರೆ ನಿಮ್ಮ ಸಾಮರ್ಥ್ಯ  ಹೆಚ್ಚಿಸುತ್ತದೆ, ಬಿರುಗಾಳಿ ನಿಮ್ಮನ್ನು ಸದೃಢಗೊಳಿಸುತ್ತದೆ. ಸವಾಲುಗಳನ್ನು ಮೆಟ್ಟಿನಿಂತು ಮುಂದುವರೆಯಿರಿ.

ಕೊರೊನಾದಿಂದಾಗಿ ವಿದ್ಯಾರ್ಥಿಗಳಿಗೆ ಸಾಕಷ್ಟು ಬಿಡುವಿನ ವೇಳೆ ದೊರಕಿದೆ. ಈ ಸಮಯವನ್ನು ವ್ಯರ್ಥ ಮಾಡಬೇಡಿ. ನಿಮ್ಮ ಯಶಸ್ಸಿಗೆ ನೆರವಾಗುವ ಕೋರ್ಸ್‌ಗಳನ್ನು ಕ್ಯಾಡ್‌ನೆಸ್ಟ್‌ನಿಂದ ಕಲಿಯಿರಿ.

ನಿಮ್ಮ ಭವಿಷ್ಯ ಬದಲಿಸುವ ಕೋರ್ಸ್‌ಗಳ ಕುರಿತು ಈಗಲೇ ಈ ಮುಂದೆ ನೀಡಿರುವ ವಿಳಾಸಗಳಿಗೆ ಭೇಟಿ ನೀಡಿ ಅಥವಾ ಫೋನ್‌ ಮಾಡಿ ವಿಚಾರಿಸಿ.  


CADDNEST RAJAJINAGAR

MAIN BRANCH: CADD NEST, Doctor Rajkumar Road, opp. Navarang theatre, Mariyappanapalya, Rajajinagar, Bengaluru, Karnataka -560010

Phone : 9740444363

Email : [email protected]


CADDNEST BASAVANAGUDI

# 16, 1st Floor, Siddaiah Complex, Mount Joy Road near Basavanagudi,, Basavanagudi, Bull Temple Road, Bengaluru, Karnataka 560019

Phone : 099721 77744

Email : [email protected]


CADD NEST SESHADRIPURAM

No 187, 2nd Floor, SC Road, ABC Arcade, near Nataraja Theater, Seshadripuram, Bengaluru, Karnataka 560020

Phone : +91 9535666300

Email : [email protected]


CADD NEST MALLESWARAM

# 64,1st Floor, Above Syndicate Bank, 18th Cross,Margosa Road, Malleshwaram, Bengaluru Karnataka 560055.

Phone : 91 9606666480

Email : [email protected]


CADD NEST RAJARAJESHWARINAGAR

 # 1135, 1st Floor, Nehru Road, 3rd stage BEML Layout, Rajarajeshwarinagar, Bengaluru, Karnataka 560098

Phone :  096069 68139

Email : [email protected]


CADD NEST RT NAGAR

No. 92A, Vasanthappa Block, CBI Main Road, RT Nagar, Bangalore -560032.

Phone : 9606666470/ 9972544344

Email : [email protected]

Ad Widget

Related Posts

error: Content is protected !!
Scroll to Top