Kannada CADD Nest Private Limited

ಪಿಯುಸಿಯಲ್ಲಿ ಫೇಲ್ ಆದವರು ಏನೆಲ್ಲ ಮಾಡಬಹುದು? ಹೇಗೆಲ್ಲ ಯಶಸ್ಸು ಪಡೆಯಬಹುದು?

man in blue and brown plaid dress shirt touching his hair

ಮೊನ್ನೆಯಷ್ಟೇ ಪಿಯುಸಿ ಫಲಿತಾಂಶ ಬಂದಿದ್ದು, ಈ ಬಾರಿ ಪಾಸ್‌ಗಿಂತ ಫೇಲ್‌ ಆದವರ ಸಂಖ್ಯೆಯೇ ಹೆಚ್ಚಿರುವುದನ್ನು ಕಂಡು ಎಲ್ಲರೂ ಆಶ್ಚರ್ಯಚಕಿತರಾಗಿದ್ದರು. 2020-21 ನೇ ಸಾಲಿನಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ತಿರಸ್ಕರಿಸಿದ್ದ ಹೊಸ ವಿದ್ಯಾರ್ಥಿಗಳು ಖಾಸಗಿ ಹಾಗೂ ಪುನರಾವರ್ತಿತ ವಿದ್ಯಾರ್ಥಿಗಳು, ಖಾಸಗಿ ಹಾಗೂ ಪುನರಾವರ್ತಿತ ವಿದ್ಯಾರ್ಥಿಗಳಿಗೆ ಆಗಸ್ಟ್- ಸೆಪ್ಟೆಂಬರ್ ನಲ್ಲಿ ನಡೆದಿದ್ದ ವಾರ್ಷಿಕ ಪರೀಕ್ಷೆಯಲ್ಲಿ ಶೇ. 29.91 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ‌.

ಪಾಸ್‌ಗಿಂತ ಫೇಲ್‌ ಆದವರೇ ಹೆಚ್ಚಿರುವ ಈ ರಿಸಲ್ಟ್‌ ಕೊರೊನಾ ಕಾರಣದಿಂದ ಒಂದಿಷ್ಟು ವಿಶೇಷವಾದದ್ದು. ಆದರೆ, ಪ್ರತಿವರ್ಷ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಫೇಲ್‌ ಆಗುತ್ತಿದ್ದಾರೆ. ಇವರಲ್ಲಿ ಬಹುತೇಕರು ಓದಿಗೆ ತಿಲಾಂಜಲಿ ಇಟ್ಟು ಬೇರೆ ಯಾವುದೋ ತಮ್ಮದಲ್ಲದ ಕೌಶಲ್ಯದ ಉದ್ಯೋಗಕ್ಕೆ ಹೋಗುತ್ತಾರೆ. ಜೀವನಪೂರ್ತಿ ಜಿತಕ್ಕೆ ಬಿದ್ದವರಂತೆ ಕೆಲಸ ಮಾಡುತ್ತ ಇರುತ್ತಾರೆ.

ಯಶಸ್ಸಿಗೆ ಪಾಸ್‌ ಫೇಲ್‌ ಮುಖ್ಯವಲ್ಲ!

ಈ ಜಗತ್ತಿನಲ್ಲಿ ಯಶಸ್ಸು ಪಡೆದ ಲಕ್ಷಲಕ್ಷ ಜನರನ್ನು ನೋಡಿ, ಅವರಲ್ಲಿ ಬಹುತೇಕರು ಎಸ್‌ಎಸ್‌ಎಲ್‌ಸಿ, ಪಿಯುಸಿ, ಡಿಗ್ರಿಯಲ್ಲಿ ಉತ್ತೀರ್ಣ ಪಡೆದಿರುವುದಿಲ್ಲ. ಆದರೆ, ಅವರು ಚೆನ್ನಾಗಿ ಅಂಕ ಪಡೆದ ವಿದ್ಯಾರ್ಥಿಗಳಿಗಿಂತ ಉತ್ತಮ ಪೊಷಿಷನ್‌ನಲ್ಲಿದ್ದಾರೆ. ಅವರು ಪಾಸ್‌, ಫೇಲ್‌ ಬಗ್ಗೆ ತಲೆಕೆಡಿಸಿಕೊಳ್ಳದೆ ತಮ್ಮ ಭವಿಷ್ಯ ಬದಲಿಸಬಲ್ಲ ಉದ್ಯೋಗ ಕೌಶಲ್ಯ ಕಲಿತು ಯಶಸ್ಸು ಪಡೆದಿದ್ದಾರೆ.

ನಿಮ್ಮ ಭವಿಷ್ಯ ಬದಲಿಸುವ ಉದ್ಯೋಗ ಕೌಶಲ್ಯ ಯಾವುದು?

ಎಸ್‌ಎಸ್‌ಎಲ್‌ಸಿ, ಪಿಯುಸಿ ಅಥವಾ ಡಿಗ್ರಿಯಲ್ಲಿ ಪಾಸ್‌ ಆದ ಅಥವಾ ಫೇಲ್‌ ಆದ ವಿದ್ಯಾರ್ಥಿಗಳೇ ಒಮ್ಮೆ ನಿಮ್ಮ ಭವಿಷ್ಯದ ಉದ್ಯೋಗವನ್ನು ಕಲ್ಪಿಸಿಕೊಳ್ಳಿ. ಹೋಟೆಲ್‌ನಲ್ಲಿ ಪಾತ್ರೆ ತೊಳೆಯುತ್ತ, ತರಕಾರಿ ಮಾರುತ್ತ (ಈ ಉದ್ಯೋಗಗಳು ಕನಿಷ್ಠ ಎಂದು ಹೇಳುತ್ತಿಲ್ಲ, ಇದು ಕಷ್ಟದ ಉದ್ಯೋಗ ಮತ್ತು ಕಷ್ಟದ ಜೀವನ ಎಂದು ನೆನಪಿಸುತ್ತಿದ್ದೇವೆ) ಬದುಕು ಸಾಗಿಸುವಿರಾ? ಯಾವುದಾದರೂ ಆಫೀಸ್‌ನಲ್ಲಿ ಆರಾಮವಾಗಿ ಕಂಪ್ಯೂಟರ್‌ ಮುಂದೆ ಕುಳಿತು ಕೈತುಂಬಾ ವೇತನ ಪಡೆಯುವ ಉದ್ಯೋಗ ಬೇಕೆ? ನೀವೇ ಓನರ್‌ ಆಗಿ ಹಲವು ಜನರಿಗೆ ಉದ್ಯೋಗ ನೀಡುವವರಾಗಬೇಕೆ? ಹೀಗೆ… ನಿಮ್ಮ ಭವಿಷ್ಯ ಹೇಗೆ ಇರಬೇಕು ಎಂದು ಕಲ್ಪಿಸಿಕೊಳ್ಳಿ.

ಕ್ಯಾಡ್‌ನೆಸ್ಟ್ ನಿಂದ ಉದ್ಯೋಗ ಕೌಶಲ್ಯ ಕಲಿಯಿರಿ

ನಿಮ್ಮ ಶಾಲಾ ಕಾಲೇಜಿನ ಅಂಕಪಟ್ಟಿಗಿಂತಲೂ ಉದ್ಯೋಗಾಧರಿತ ಕೌಶಲ್ಯಗಳ ಸರ್ಟಿಫಿಕೇಷನ್‌ಗೆ ಹೆಚ್ಚಿನ ಮಹತ್ವವಿದೆ. ಎಲ್ಲರಲ್ಲಿಯೂ ಡಿಗ್ರಿ ಸರ್ಟಿಫಿಕೇಟ್‌ ಇರಬಹುದು. ಆದರೆ, ಉದ್ಯೊಗ ಕೌಶಲ್ಯಗಳ ವಿಶೇಷ ಸರ್ಟಿಫಿಕೇಷನ್‌ಗಳು ಕೆಲವರಲ್ಲಿ ಮಾತ್ರ ಇರುತ್ತದೆ. ಇಂತಹ ಕೆಲವರು ಬೇಗನೇ ಉದ್ಯೋಗಾವಕಾಶ ಪಡೆದುಕೊಳ್ಳುತ್ತಾರೆ.

ಬೆಂಗಳೂರಿನ ಬಸವನಗುಡಿ, ರಾಜಾರಾಜೇಶ್ವರಿ ನಗರ, ರಾಜಾಜಿನಗರ, ಆರ್‌ಟಿ ನಗರ, ಮಲ್ಲೇಶ್ವರಂ, ಶೇಷಾದ್ರಿಪುರಂಗಳಲ್ಲಿ ಶಾಖೆಗಳನ್ನು ಹೊಂದಿರುವ ಕರ್ನಾಟಕದ ಪ್ರಮುಖ ಕೌಶಲ್ಯ ತರಬೇತಿ ಸಂಸ್ಥೆ ಕ್ಯಾಡ್‌ನೆಸ್ಟ್‌ ನಲ್ಲಿ ನಿಮ್ಮ ಭವಿಷ್ಯ  ಬದಲಿಸುವ ನೂರಾರು ಉದ್ಯೋಗಾಧರಿತ ಕೋರ್ಸ್‌ಗಳಿವೆ. ವಿಶೇಷವೆಂದರೆ ಅತ್ಯಂತ ಕಡಿಮೆ ದರಕ್ಕೆ ಕ್ಯಾಡ್‌ನೆಸ್ಟ್‌ ಗುಣಮಟ್ಟದ ಶಿಕ್ಷಣ ನೀಡುತ್ತ ಬಂದಿದೆ.

ನಿಮ್ಮ ಭವಿಷ್ಯ ಬದಲಿಸುವ ಕೋರ್ಸ್‌ಗಳ ಕುರಿತು ಈಗಲೇ ಈ ಮುಂದೆ ನೀಡಿರುವ ವಿಳಾಸಗಳಿಗೆ ಭೇಟಿ ನೀಡಿ ಅಥವಾ ಫೋನ್‌ ಮಾಡಿ ವಿಚಾರಿಸಿ.  


CADDNEST RAJAJINAGAR

MAIN BRANCH: CADD NEST, Doctor Rajkumar Road, opp. Navarang theatre, Mariyappanapalya, Rajajinagar, Bengaluru, Karnataka -560010

Phone : 9740444363

Email : [email protected]


CADDNEST BASAVANAGUDI

# 16, 1st Floor, Siddaiah Complex, Mount Joy Road near Basavanagudi,, Basavanagudi, Bull Temple Road, Bengaluru, Karnataka 560019

Phone : 099721 77744

Email : [email protected]


CADD NEST SESHADRIPURAM

No 187, 2nd Floor, SC Road, ABC Arcade, near Nataraja Theater, Seshadripuram, Bengaluru, Karnataka 560020

Phone : +91 9535666300

Email : [email protected]


CADD NEST MALLESWARAM

# 64,1st Floor, Above Syndicate Bank, 18th Cross,Margosa Road, Malleshwaram, Bengaluru Karnataka 560055.

Phone : 91 9606666480

Email : [email protected]


CADD NEST RAJARAJESHWARINAGAR

 # 1135, 1st Floor, Nehru Road, 3rd stage BEML Layout, Rajarajeshwarinagar, Bengaluru, Karnataka 560098

Phone :  096069 68139

Email : [email protected]


CADD NEST RT NAGAR

No. 92A, Vasanthappa Block, CBI Main Road, RT Nagar, Bangalore -560032.

Phone : 9606666470/ 9972544344

Email : [email protected]

Related Posts

error: Content is protected !!
Scroll to Top