Kannada CADD Nest Private Limited

SSLC ಪರೀಕ್ಷೆಯು ಮುಗಿಯಿತು ಹಾಗಾದರೆ ಮುಂದೆ ಏನು??

SSLC ಪರೀಕ್ಷೆಯು ಮುಗಿಯಿತು ಹಾಗಾದರೆ ಮುಂದೆ ಏನು??
  • ಜ್ಯೋತಿ ಪ್ರಕಾಶ್‌

ಎಲ್ಲರಿಗೂ ತಿಳಿದಿರುವ ಹಾಗೆ SSLC ಪರೀಕ್ಷೆ ಮುಗಿದಿದೆ. ಈಗ ಎಲ್ಲ ವಿದ್ಯಾರ್ಥಿಗಳಿಗೆ ಇರುವ ಪ್ರಶ್ನೆಯೆಂದರೆ ನಾನು ಯಾವ ವಿಭಾಗದಲ್ಲಿ ನನ್ನ ವಿದ್ಯಾಭ್ಯಾಸವನ್ನು ಮುಂದುವರಿಸಬೇಕು ಹಾಗೂ ಯಾವ ವಿಭಾಗವನ್ನು ನಾನು ಆಯ್ಕೆ ಮಾಡಿಕೊಂಡರೆ ನನ್ನ ಮುಂದಿನ ಜೀವನಕ್ಕೆ ಉಪಯೋಗವಾಗುತ್ತದೆ ಎಂದು.  

ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ SSLC ನಂತರ ವಿದ್ಯಾರ್ಥಿಗಳಿಗೆ ಅವರ ಆಸಕ್ತಿಗೆ ತಕ್ಕಂತೆ ಆಯ್ಕೆ ಮಾಡಿಕೊಳ್ಳುವಂತಹ ಹಾಗೂ ಪ್ರಯೋಜನವಾಗುವಂತಹ ಅನೇಕ ವಿಭಾಗಗಳಿವೆ. ಅದರಲ್ಲಿ ಎಲ್ಲರಿಗೂ ತಿಳಿದಿರುವ PUC ಮತ್ತು DIPLOMA.  

ವಿದ್ಯಾರ್ಥಿಗಳು PUC ಆಯ್ಕೆ ಮಾಡಿಕೊಂಡರೆ ಅದರಲ್ಲಿ ಕೂಡ  Arts, Science & Commerce ಎಂದು ಮೂರು ವಿಭಾಗಗಳಲ್ಲಿ ಆಯ್ಕೆಮಾಡಿಕೊಳ್ಳಬಹುದು. ಅದರಲ್ಲೂ ಕೂಡ ನಿಮಗಿಷ್ಟವಾದ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

ಇನ್ನು DIPLOMA ಎಂದರೆ CIVIL, MECHANICAL, ELECTRICAL, COMPUTER SCIENCE ಎಂದು ಇನ್ನೂ ಅನೇಕ ವಿಭಾಗಗಳಿರುತ್ತವೆ.

PUC ಮತ್ತು DIPLOMA ವಿಭಾಗಗಳನ್ನು ಬಿಟ್ಟು ಮತ್ತೊಂದು ದೊಡ್ಡ ಪ್ರಪಂಚ SSLC ವಿದ್ಯಾರ್ಥಿಗಳನ್ನು ಕೈಬೀಸಿ ಕರೆಯುತ್ತದೆ.

ಅದೇನೆಂದರೆ ಮಲ್ಟಿಮೀಡಿಯಾ ಕ್ಷೇತ್ರ.

ಇತ್ತೀಚಿನ ದಿನಗಳಲ್ಲಿ INTERNET ಮತ್ತು SMART PHONE ಬಳಕೆ ಹೆಚ್ಚಾಗುತ್ತಿದ್ದಂತೆ  ಮಲ್ಟಿಮೀಡಿಯಾ ಕ್ಷೇತ್ರಗಳಲ್ಲಿ ಬೇಡಿಕೆ ಹೆಚ್ಚಾಗುತ್ತದೆ. SMARTPHONE ಗಳಲ್ಲಿ ಉಪಯೋಗಿಸಲ್ಪಡುವ APPS, GAMES ಮತ್ತು WEBSITE, VIDEO ಇವುಗಳನ್ನೆಲ್ಲ ಸೃಷ್ಟಿಸಲು ಮಲ್ಟಿಮೀಡಿಯಾ  ಕ್ಷೇತ್ರವೂ ಆಸ್ಪದ ಮಾಡಿಕೊಟ್ಟಿದೆ.

ಹಾಗಾಗಿ ಈಗಿನ ಪೀಳಿಗೆಯ ವಿದ್ಯಾರ್ಥಿಗಳಿಗೆ ಮಲ್ಟಿಮೀಡಿಯಾ ಕ್ಷೇತ್ರವು ಒಂದು ದೊಡ್ಡ ವೃತ್ತಿಜೀವನ ವಾಗಿ ಮಾರ್ಪಾಟಾಗಿದೆ. ಈ ಮಲ್ಟಿಮೀಡಿಯಾ  ಕ್ಷೇತ್ರದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಲು ಯಾವುದೇ ವಿದ್ಯಾರ್ಹತೆಯ ಅವಶ್ಯಕತೆ ಇರುವುದಿಲ್ಲ. ವಿದ್ಯಾರ್ಹತೆ ಇರುವ ಮತ್ತು ಇಲ್ಲದಿರುವ ಎಲ್ಲರೂ ಕೂಡ ಈ ಮಲ್ಟಿಮೀಡಿಯಾ  ತರಬೇತಿಯನ್ನು ಪಡೆಯಬಹುದು. 

SSLC ಯಲ್ಲಿ ಕೆಲವು ವಿದ್ಯಾರ್ಥಿಗಳು ಫೇಲಾದರೂ ಏನೂ ವ್ಯತ್ಯಾಸವಾಗುವುದಿಲ್ಲ. ಫೇಲಾದ ವಿದ್ಯಾರ್ಥಿಗಳಲ್ಲಿ ವಿದ್ಯಾಭ್ಯಾಸವನ್ನು ಮುಂದುವರೆಸುವ ಆಸಕ್ತಿ ಇರುವುದಿಲ್ಲ. ಅಂತಹ ವಿದ್ಯಾರ್ಥಿಗಳು ಈ ತರಬೇತಿಯನ್ನು ಪಡೆಯುವುದರಿಂದ ಅವರ ಜೀವನಕ್ಕೆ ಸಹಾಯವಾಗುತ್ತದೆ .ನಮ್ಮಲ್ಲಿ ಕ್ರಿಯಾಶೀಲತೆ, ಸೃಜನಶೀಲ ವಿನ್ಯಾಸದ ಕಲೆ ಇದ್ದರೆ ಅಷ್ಟೇ ಸಾಕು. ಮಲ್ಟಿಮೀಡಿಯಾ ಕ್ಷೇತ್ರದಲ್ಲಿಯೂ ತುಂಬಾ ವಿಭಾಗಗಳಿದ್ದು ವಿದ್ಯಾರ್ಥಿಗಳು ತಮಗೆ ಇಷ್ಟವಾದ ವಿಭಾಗವನ್ನು ಆಯ್ಕೆ ಮಾಡಿಕೊಳ್ಳಬಹುದು.

1. 2D ಅನಿಮೇಷನ್

DRAWING, SKETCHING ಗಳಲ್ಲಿ ಆಸಕ್ತಿಯುಳ್ಳ ವಿದ್ಯಾರ್ಥಿಗಳಿಗೆ ಈ ವಿಭಾಗವು ಉತ್ತಮವಾಗಿದೆ.ಇದಕ್ಕೆ ತಕ್ಕ ಉದಾಹರಣೆ ಎಂದರೆ TOM AND JERRY ಕಾರ್ಯಕ್ರಮ.

2. 3D  ಅನಿಮೇಶನ್

ಈ ವಿಭಾಗದಲ್ಲಿ ವಿದ್ಯಾರ್ಥಿಗಳು ತಮಗೆ ಇಷ್ಟವಾದ ಕ್ಯಾರೆಕ್ಟರ್ ಗಳನ್ನು ಸೃಷ್ಟಿಸಿ  ಅವುಗಳನ್ನು ಮನುಷ್ಯನಂತೆ  ಜೀವ ತುಂಬಬಹುದು. ಈ ವಿಭಾಗಕ್ಕೆ ಉತ್ತಮ ಉದಾಹರಣೆಯೆಂದರೆ ANGRY BIRD, JUNGLE BOOK & THE LION KING

3. VFX

VISUAL EFFECTS ಎಂದು ಕರೆಯಲ್ಪಡುವ VFX ಅಲ್ಲಿ ನಾವು ಚಿತ್ರನಿರ್ಮಾಣದಲ್ಲಿ ಸಹಾಯಕವಾಗುವ ನೈಜ ಚಿತ್ರಣಗಳನ್ನು ಹಾಗೂ ವಾಸ್ತವಿಕ ಪರಿಸರವನ್ನು ಸೃಷ್ಟಿಸಲು ಸಹಾಯಕವಾಗುತ್ತದೆ. ಉದಾಹರಣೆಯೆಂದರೆ BAHUBALI & AVENGERS

4. GAMING

ಮಕ್ಕಳಿಗೆ ತುಂಬಾ ಇಷ್ಟವಾಗುವಂತಹ ಗೇಮ್ ಗಳನ್ನು ಸೃಷ್ಟಿಸಲು ಈ ವಿಭಾಗವು ಸಹಾಯ ಮಾಡುತ್ತದೆ.

ಮಲ್ಟಿಮೀಡಿಯಾದಲ್ಲಿ ಇನ್ನೂ ಅನೇಕ ವಿಭಾಗಗಳಿದ್ದು ಯುವ ಪೀಳಿಗೆಗೆ ತಮ್ಮ ಪ್ರತಿಭೆ ಮತ್ತು ಆಸಕ್ತಿಗೆ ತಕ್ಕಹಾಗೆ ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಕ್ಯಾಡ್‌ನೆಸ್ಟ್‌ಕಲ್ಪಿಸಿಕೊಟ್ಟಿದೆ.ಮಲ್ಟಿಮೀಡಿಯಾ ಕ್ಷೇತ್ರದಲ್ಲಿ ದೀರ್ಘಾವಧಿ ಮತ್ತು ಅಲ್ಪಾವಧಿಯ ಕೋರ್ಸಗಳಿದ್ದು ವಿದ್ಯಾರ್ಥಿಗಳು ಅದರ ಉಪಯೋಗ ಪಡೆದುಕೊಳ್ಳಬಹುದು.ಇಂತಹ ಹಲವು ವಿಷಯಗಳನ್ನು ತಿಳಿಯಲು ಕನ್ನಡ ಕ್ಯಾಡ್‌ನೆಸ್ಟ್‌. ಕಾಂ ಗೆ ಭೇಟಿ ನೀಡುತ್ತಿರಿ . ಅನಿಮೇಶನ್ ತರಬೇತಿ ಯನ್ನು ಪಡೆಯಲು ಭಾರತೀಯ ಅಕಾಡೆಮಿ ಆಫ್ ಲಿಂಗ್ವಿಸ್ಟಿಕ್ಸ್ ಅಂಡ್ ಕಮ್ಯುನಿಕೇಷನ್ ಬಸವನಗುಡಿ,ರಾಜಾಜಿನಗರ ,ಶೇಷಾದ್ರಿಪುರಂ,ಮಲ್ಲೇಶ್ವರಂ ಶಾಖೇಗಳನ್ನು ಸಂಪರ್ಕಿಸಿ.

Related Posts

error: Content is protected !!
Scroll to Top