Kannada CADD Nest Private Limited

ಸ್ಯಾಪ್ ಕಲಿಯಿರಿ, ಸೂಪರ್ ಕರಿಯರ್ ನಿಮ್ಮದಾಗಿಸಿ- ಇಲ್ಲಿದೆ ಸ್ಯಾಪ್ ಗೈಡ್

ಸ್ಯಾಪ್ ಕಲಿಯಿರಿ, ಸೂಪರ್ ಕರಿಯರ್ ನಿಮ್ಮದಾಗಿಸಿ- ಇಲ್ಲಿದೆ ಸ್ಯಾಪ್ ಗೈಡ್

ಕನ್ನಡ ಕ್ಯಾಡ್‌ನೆಸ್ಟ್‌‌ ಓದುಗರಿಗೆ ನಮಸ್ಕಾರ. ಕಳೆದ ಒಂದು ವರ್ಷದಿಂದ ಕೋವಿಡ್‌-೧೯ ಸಾಂಕ್ರಾಮಿಕ ತಂದೊಡ್ಡಿದ ಸಂಕಷ್ಟದಿಂದ ಶಾಲೆ, ಕಾಲೇಜುಗಳಲ್ಲಿ ಸರಿಯಾದ ತರಗತಿಗಳು ನಡೆದಿಲ್ಲ. ಕೆಲವು ಶಾಲಾ ಕಾಲೇಜುಗಳಲ್ಲಿ ಮುಂದಿನ ತರಗತಿಗಳಿಗೆ ಪಾಠವಿಲ್ಲದೆ ದೂಡಲಾಗುತ್ತದೆ. ಇಲ್ಲಿ ವಿದ್ಯಾರ್ಥಿಗಳು ಕಲಿತದ್ದೇನು? ಎಂದರೆ ಶೂನ್ಯ. ಹೆಚ್ಚಿನ ಕೌಶಲ್ಯ ಕಲಿಯದೆ ಒಂದು ವರ್ಷ ವ್ಯರ್ಥವಾಗಿದೆ. ಇಂತಹ ಸಮಯದಲ್ಲಿ ವಿದ್ಯಾರ್ಥಿಗಳು ತಾವೇ ತಮ್ಮ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ವಿವಿಧ ಸ್ಕಿಲ್‌ಗಳನ್ನು ಕಲಿಯುವುದು ಸೂಕ್ತ. ನಿಮ್ಮ ಭವಿಷ್ಯವನ್ನು ನೀವೇ ಮುನ್ನಡೆಸಬೇಕಿರುವುದರಿಂದ ಬಿಡುವಿನ ವೇಳೆಯನ್ನು ಕಲಿಕೆಗೆ ಮೀಸಲಿಡಿ.

ಕನ್ನಡ ಕ್ಯಾಡ್‌ನೆಸ್ಟ್‌‌ ಶಿಫಾರಸು ಮಾಡುವ ಪ್ರಮುಖ ಕೋರ್ಸ್‌ಗಳಲ್ಲಿ ಸ್ಯಾಪ್‌ ಕೋರ್ಸ್‌ ಪ್ರಮುಖವಾದದ್ದು. ಪದವಿ ಅಥವಾ ಸ್ನಾತಕೋತ್ತರ ಪದವಿ ಮುಗಿಸಿದ ಮೇಲೆ ಸ್ಯಾಪ್ ಸರ್ಟಿಫಿಕೇಟ್ ಕೋರ್ಸ್ ಕಲಿಯಲು ಹೆಚ್ಚಿನವರು ಇಷ್ಟಪಡುತ್ತಾರೆ. ಸ್ಯಾಪ್ ಗೊತ್ತಿದ್ದರೆ ಕೆಲಸ ಗ್ಯಾರಂಟಿ ಎಂಬ ಭಾವನೆ ಇದಕ್ಕೆ ಪ್ರಮುಖ ಕಾರಣ.

ಉಳಿದ ಕೋರ್ಸ್‍ಗಳಂತೆ ಸ್ಯಾಪ್ ತನ್ನ ಆಕರ್ಷಣೆ ಕಳೆದುಕೊಂಡಿಲ್ಲ. ಜಗತ್ತಿನ ದೊಡ್ಡ ದೊಡ್ಡ ಕಂಪನಿಗಳೆಲ್ಲ ಸ್ಯಾಪ್ ಹೊಂದಿರುವುದು ಮತ್ತು ಸ್ಯಾಪ್ ಗೊತ್ತಿದ್ದವರಿಗೆ ದೊಡ್ಡ ಮೊತ್ತದ ವೇತನ ದೊರಕುವುದು ಸ್ಯಾಪ್ ಆಕರ್ಷಣೆಗೆ ಪ್ರಮುಖ ಕಾರಣ. ಈಗಲೂ ಸ್ಯಾಪ್ ಕಲಿತವರಿಗೆ ಹಲವು ಕಂಪನಿಗಳಲ್ಲಿ ಅವಕಾಶ ದೊರಕುತ್ತದೆ. ಆದರೆ, ಹಲವು ವರ್ಷಗಳ ಹಿಂದೆ ಸಿಕ್ಕಷ್ಟು ವೇತನ ದೊರಕದೆ ಇರಬಹುದು. ಆದರೆ, ಈ ಕ್ಷೇತ್ರದಲ್ಲಿ ಅನುಭವ ಹೆಚ್ಚಿದಂತೆಲ್ಲ ನಿಧಾನವಾಗಿ ಉತ್ತಮ ಸ್ಯಾಲರಿ ಪಡೆದುಕೊಳ್ಳಬಹುದು.

ಏನಿದು ಸ್ಯಾಪ್?

ಸ್ಯಾಪ್ ವಿಸ್ತೃತ ರೂಪ- ಸಿಸ್ಟಮ್ಸ್ ಅಪ್ಲಿಕೇಷನ್ಸ್ ಆಂಡ್ ಪ್ರಾಡಕ್ಟ್ಸ್. ಐಬಿಎಂನ ಐವರು ಎಂಜಿನಿಯರ್‍ಗಳು 1970ರಲ್ಲಿ ಮೊದಲ ಬಾರಿಗೆ ಸ್ಯಾಪ್ ಅಭಿವೃದ್ಧಿಪಡಿಸಿದ್ದರು. ಸ್ಯಾಪ್ ಎನ್ನುವುದೊಂದು ಸಾಫ್ಟ್‌ವೇರ್‌ ಪ್ಯಾಕೇಜ್. ಜಗತ್ತಿನ ಹೆಚ್ಚಿನ ಕಂಪನಿಗಳು ಸ್ಯಾಪ್ ಬಳಸುತ್ತವೆ.

ಯಾವೆಲ್ಲ ಕೋರ್ಸ್‍ಗಳಿವೆ?

ನಿಮ್ಮ ಪದವಿಯೇನು? ಮುಂದೆ ಯಾವ ಕ್ಷೇತ್ರದಲ್ಲಿ ದುಡಿಯಲು ಬಯಸಿದ್ದೀರಿ ಎನ್ನುವ ಆಧಾರದ ಮೇಲೆ ಸ್ಯಾಪ್ ಕೋರ್ಸ್ ಆಯ್ಕೆ ಮಾಡಿಕೊಳ್ಳಬಹುದು. ಉದಾಹರಣೆಗೆ ನೀವು ಮಾನವ ಸಂಪನ್ಮೂಲ ವಿಭಾಗಕ್ಕೆ ಸಂಬಂಸಿದ ಸ್ಯಾಪ್ ತಂತ್ರಗಳನ್ನು ಕಲಿಯಲು ಬಯಸಿದರೆ ಅದಕ್ಕೆ ಸಂಬಂಸಿದ ಕೋರ್ಸ್ ಪಡೆಯಬಹುದು. ಫಂಕ್ಷನಲ್ ಮಾಡ್ಯುಲ್‍ನಲ್ಲಿ ಫೈನಾನ್ಸ್ ಆಂಡ್ ಕಂಟ್ರೋಲ್(ಫಿಕೊ), ಪ್ರೊಡಕ್ಷನ್ ಪ್ಲಾನಿಂಗ್(ಪಿಪಿ), ಮೆಟಿರಿಯಲ್ ಮ್ಯಾನೇಜ್‍ಮೆಂಟ್(ಎಂಎಂ), ಸೇಲ್ಸ್ ಆಂಡ್ ಡಿಸ್ಟ್ರಿಬ್ಯೂಷನ್(ಎಸ್‍ಡಿ), ಹ್ಯೂಮನ್ ರಿಸೋರ್ಸ್(ಎಚ್‍ಆರ್) ಇತ್ಯಾದಿ ಮಾಡ್ಯುಲ್‍ಗಳಿವೆ. ಸ್ಯಾಪ್ ಟೆಕ್ನಿಕಲ್ ಮಾಡ್ಯುಲ್‍ನಲ್ಲಿ ಎಬಿಎಪಿ, ಎಕ್ಸ್‍ಐ, ನೆಟ್ ವ್ಯೂವರ್, ಬೇಸಿಸ್, ಬಿಐಡಬ್ಲ್ಯು ಇತ್ಯಾದಿಗಳನ್ನು ಕಲಿಯಬಹುದು. ಒಟ್ಟಾರೆಯಾಗಿ ಸ್ಯಾಪ್‍ನಲ್ಲಿ ಎಬಿಎಪಿ, ಬಿಸಿನೆಸ್ ಒನ್, ಎಚ್‍ಆರ್, ಪಿಎಸ್, ಎಸ್‍ಸಿಎಂ, ಇಪಿ, ಎಫ್‍ಸಿಎಸ್‍ಎಂ, ಎಪಿಒ, ಎಎಲ್‍ಇ, ಟಿಆರ್‍ಎಂ, ಎಂಡಿಎಂ, ಅಡ್ಮಿನ್, ಬಿಡಬ್ಲ್ಯು, ಐಎಂ, ಪಿಎಂ, ಕ್ಯೂಎಂ, ಎಸ್‍ಆರ್‍ಎಂ, ಬಿಐ, ಬಿಒ 4.0, ಪಿಪಿಡಿಎಸ್, ಪಿಎಲ್‍ಎಂ, ಸಕ್ಸಸ್ ಫ್ಯಾಕ್ಟರ್ಸ್, ಸಿಆರ್‍ಎಂ, ಫಿಕೊ, ಎಂಎಂ, ಪಿಪಿ, ಎಸ್‍ಡಿ, ಪಿಐ, ಎಚ್‍ಎಎನ್‍ಎ, ಬಿಒಡಿಎಸ್, ಎಫ್‍ಎಸ್‍ಸಿಡಿ, ಬಿಪಿಸಿ ಇತ್ಯಾದಿ ಕೋರ್ಸ್‍ಗಳಿವೆ. ಸ್ಯಾಪ್‌ನ ಎಲ್ಲಾ ಕೋರ್ಸ್‌ಗಳ ಲಿಸ್ಟ್‌ ನೋಡಲು ಈ ಲಿಂಕ್‌ಗೆ ಭೇಟಿ ನೀಡಿ.

ಕೆಲವು ಕೋರ್ಸ್‍ಗಳ ವಿವರ

* ಸೇಲ್ಸ್ ಆಂಡ್ ಡಿಸ್ಟ್ರಿಬ್ಯೂಷನ್ ಕೋರ್ಸ್: ಇಆರ್‍ಪಿ ಬಳಕೆ ಮೂಲಕ ವಿದ್ಯಾರ್ಥಿಗಳು ಈ ಕೋರ್ಸ್‍ನಲ್ಲಿ ಟ್ರೇಡಿಂಗ್ ಕಂಪನಿ ಸೆಟಪ್ ಮಾಡುವುದು ಹೇಗೆ ಮತ್ತು ವ್ಯವಹಾರ ನಡೆಸುವುದು ಹೇಗೆ ಎನ್ನುವುದನ್ನು ಕಲಿಯುತ್ತಾರೆ. ಬಿಲ್ಲಿಂಗ್, ಡೆಲಿವರಿ ಮತ್ತು ಸೇಲ್ಸ್‍ಗೆ ಬೇಕಾದ ಸ್ಕಿಲ್ ಕಲಿಯಲು ಈ ಕೋರ್ಸ್ ಉಪಯುಕ್ತ.

* ಎಬಿಎಪಿ ಪ್ರೋಗ್ರಾಮಿಂಗ್ ಕೋರ್ಸ್: ಇದು ಸ್ಯಾಪ್‍ನ ಪ್ರೋಗ್ರಾಮಿಂಗ್ ಲ್ಯಾಗ್ವೇಜ್ ಬಗ್ಗೆ ಗಮನಹರಿಸುತ್ತದೆ. ವಿದ್ಯಾರ್ಥಿಗಳು ಎಬಿಎಪಿ ವರ್ಕ್‍ಬೆಂಚ್ ಮೂಲಕ ಕಮಾಂಡ್ ಮತ್ತು ಸಬ್‍ರೂಟಿನ್‍ಗಳನ್ನು ರಚಿಸುವುದನ್ನು  ಕಲಿಯುತ್ತಾರೆ.

* ಸಪ್ಲೈ ಚೈನ್ ಸಾಫ್ಟ್‍ವೇರ್ ಕೋರ್ಸ್: ಸಪ್ಲೈ ಪ್ಲಾನಿಂಗ್, ನ್ಯಾವಿಗೇಷನ್ ಟೆಕ್ನಿಕ್ಸ್, ಫಾರ್‍ಕಾಸ್ಟಿಂಗ್ ಆ್ಯಂಡ್ ಇನ್‍ವೆಂಟರಿ ಸಿಸ್ಟಮ್ಸ್‍ಗಳನ್ನು ಬಳಸಿ ಈ ಕೋರ್ಸ್ ಮೂಲಕ ವಿದ್ಯಾರ್ಥಿಗಳು ಸ್ಯಾಪ್ ಸಾಫ್ಟ್‍ವೇರ್ ಅಭ್ಯಾಸ ಮಾಡಬಹುದು.

* ಸ್ಯಾಪ್ ಬಿಸಿನೆಸ್ ಇನಾರ್ಮೆಷನ್ ವೇರ್‍ಹೌಸ್ ಕೋರ್ಸ್: ಇದು ಅಪರೇಟಿಂಗ್ ಸಿಸ್ಟಮ್‍ನಲ್ಲಿ ಡೇಟಾಗಳನ್ನು ಎಲ್ಲಿ ಸಂಗ್ರಹಿಸಿಡಲಾಗಿದೆ ಇತ್ಯಾದಿಗಳನ್ನು ಕಲಿಯುವ ಮತ್ತು ಅದರ ಪರಿಭಾಷೆ, ಆರ್ಕಿಟೆಕ್ಚರ್‍ಗಳನ್ನು ತಿಳಿದುಕೊಳ್ಳಲು ಸಹಾಯ ಮಾಡುವ ಕೋರ್ಸ್.

* ಎಂಟರ್‍ಪ್ರೈಸ್ ಸಾಫ್ಟ್‍ವೇರ್ ಕೋರ್ಸ್:  ಸ್ಯಾಪ್ ಆರ್/3 ಎಂಟರ್‍ಪ್ರೈಸ್ ಸಾಫ್ಟ್‍ವೇರ್ ಅನ್ನು ಬಿಸಿನೆಸ್‍ನಲ್ಲಿ ಬಳಕೆ ಮಾಡುವುದನ್ನು ಪರಿಶೀಲಿಸುವ ಕೆಲಸವನ್ನು ಈ ಕೋರ್ಸ್‍ನಲ್ಲಿ ಕಲಿಯಬಹುದು. ರಿಸೋರ್ಸ್ ಪ್ಲಾನಿಂಗ್ ಮತ್ತು ಪ್ರೊಡಕ್ಷನ್ ಪ್ಲಾನಿಂಗ್‍ನ ವಿವಿಧ ಎಂಟರ್‍ಪ್ರೈಸ್ ಸಿಸ್ಟಮ್‍ಗಳನ್ನು ವಿಶ್ಲೇಷಿಸಬೇಕು.

ಇನ್ನಷ್ಟು ಕೋರ್ಸ್‌ಗಳ ವಿವರ ಪಡೆಯಲು ಈ ಲಿಂಕ್‌ ಕ್ಲಿಕ್‌ ಮಾಡಿ.

ಕ್ಯಾಡ್‌ನೆಸ್ಟ್‌‌ ಅಕಾಡೆಮಿ ಮೂಲಕ ಸ್ಯಾಪ್‌ ಕಲಿಯಿರಿ

CADD NEST, No.1 Software (IT) Training Institute in Bangalore
CADD NEST computer education
CADD NEST rajajinagar
CADD NEST computer education near me
CADD NEST computer education fees
CADD NEST computer education website
CADD NEST computer centre
CADD NEST computer training institute
CADD NEST near me
CADD NEST bangalore
CADD NEST computer education near me
CADD NEST full form
CADD NEST cadd centre
CADD NEST cadd
CADD NEST cadd address
CADD NEST cadd phone
CADD NEST cadd near me
CADD NEST computer education rajajinagar
CADD NEST computer education basavanagudi
CADD NEST computer education seshadripuram
CADD NEST computer education malleshwaram
CADD NEST cadd malleswaram
CADD NEST cadd seshadripuram
CADD NEST cadd rajajinagar
CADD NEST cadd basavanagudi
CADD NEST cadd centre malleswaram
CADD NEST cadd centre sheshadripuram
CADD NEST cadd centre rajajinagar
CADD NEST cadd centre basavanagudi

Related Posts

error: Content is protected !!
Scroll to Top