ಮೊದಲಿಗೆ ಕನ್ನಡ ಕ್ಯಾಡ್ನೆಸ್ಟ್ ಓದುಗರಿಗೆ ಎಳ್ಳುಬೆಲ್ಲದ ಸುಂದರ ಹಬ್ಬ ಮಕರ ಸಂಕ್ರಾಂತಿಯ ಶುಭಾಶಯಗಳು. ಮಕರ ಸಂಕ್ರಾಂತಿಯೆಂದರೆ ಉತ್ತರಾಯಣ ಕಾಲದ ಆರಂಭ. ಮನುಷ್ಯರ ಒಂದು ವರ್ಷವು ದೇವರ ಒಂದು ದಿನಕ್ಕೆ ಸಮ. ಉತ್ತರಾಯಣ ಕಾಲವೆಂದರೆ ದೇವರ ಹಗಲು ಹೊತ್ತು. ಈ ಆರುತಿಂಗಳು ವಿವಿಧ ಶುಭಕಾರ್ಯಗಳಿಗೆ ಮೀಸಲು. ಹೊಸ ವ್ಯವಹಾರ, ಕಂಪನಿ ಅಥವಾ ಕಲಿಕೆ ಆರಂಭಿಸಲು ಸೂಕ್ತ ಕಾಲವಿದು.
ಕಳೆದ ಹಲವು ತಿಂಗಳಿನಿಂದ ಕೋವಿಡ್-19ನಿಂದ ಸಂಕಷ್ಟ ಅನು ಭವಿಸಿದ್ದ ಜಗತ್ತಿಗೆ ಈ ಉತ್ತರಾಯಣ ಕಾಲವು ಹೊಸ ಆಶಾಕಿರಣವೆಂದರೂ ತಪ್ಪಾಗದು. ಕಲಿಕೆಯಿಂದ ವಂಚಿತರಾಗಿದ್ದ ವಿದ್ಯಾರ್ಥಿಗಳಿಗೆ ಹೊಸತು ಕಲಿಯಲು ಈ ಸಂಕ್ರಾಂತಿಯ ಬಳಿಕ ಶುಭ ಸಮಯ ಎನ್ನಬಹುದು.
ವಿದ್ಯಾರ್ಥಿಗಳು ಏನು ಕಲಿಯಬಹುದು?
ಈ ಉತ್ತರಾಯಣದ ಕಾಲದಲ್ಲಿ ವಿದ್ಯಾರ್ಥಿಗಳು ತಮ್ಮ ಭವ್ಯ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಬೇಡಿಕೆಯಲ್ಲಿರುವ ಕೌಶಲ ಕಲಿಯಬೇಕು. ಮುಖ್ಯವಾಗಿ ಹೊಸ ಟೆಕ್ ಸ್ಕಿಲ್ಗಳ ಮೂಲಕ ತಮ್ಮ ರೆಸ್ಯೂಂ ತೂಕ ಹೆಚ್ಚಿಸಿಕೊಳ್ಳಬೇಕು. 2021ರ ಬಹುಬೇಡಿಕೆಯ ಕೌಶಲ್ಯಗಳನ್ನು ಕಲಿಯಲು ಆದ್ಯತೆ ನೀಡಬೇಕಿದೆ. ಈ ವರ್ಷದ ಬಹುಬೇಡಿಕೆಯ ಕೆಲವು ಕೌಶಲ್ಯಗಳನ್ನು ಈ ಮುಂದಿನಂತೆ ಹೆಸರಿಸಬಹುದು.
ಕ್ಯಾಡ್ ಕೋರ್ಸ್ಗಳಿಗೆ ಬೇಡಿಕೆ
ಹಿಂದೆಯೂ, ಮುಂದೆಯೂ ಸದಾ ಬಹುಬೇಡಿಕೆ ಇರುವ ಕೋರ್ಸ್ಗಳಲ್ಲಿ ಕ್ಯಾಡ್ ಕೋರ್ಸ್ಗಳು ಒಂದಾಗಿದೆ. ನಿಮ್ಮ ಆಸಕ್ತಿಯ ಕ್ಷೇತ್ರಕ್ಕೆ ತಕ್ಕಂತೆ ಕ್ಯಾಡ್ನ ವಿವಿಧ ಮಾಡ್ಯುಲ್ಗಳಲ್ಲಿ ಯಾವುದಾದರೂ ಸ್ಕಿಲ್ ಅನ್ನು ನಿಮ್ಮದಾಗಿಸಿಕೊಳ್ಳಬಹುದು. ಕ್ಯಾಡ್ ಕೋರ್ಸ್ಗಳ ಸಂಪೂರ್ಣ ಮಾಹಿತಿಗೆ ಇಲ್ಲಿ ಭೇಟಿ ನೀಡಿ.
ಡಿಜಿಸ್ಕಿಲ್ಗಳನ್ನು ಕಲಿಯಿರಿ
ಕೋವಿಡ್-19 ಬಳಿಕ ಜಗತ್ತು ಡಿಜಿಟಲ್ ಮಾರ್ಕೆಟಿಂಗ್ಗೆ ಹೆಚ್ಚು ತೆರೆದುಕೊಂಡಿದೆ. ಇಂತಹ ಸಂದ`ರ್Àದಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಕೌಶಲ್ಯಗಳನ್ನು ವಿದ್ಯಾರ್ಥಿಗಳು ಅಥವಾ ಬಿಸ್ನೆಸ್ಮ್ಯಾನ್ಗಳು ಕಲಿಯಬಹುದು. ಈ ಕುರಿತು ಹೆಚ್ಚಿನ ವಿವರ ಇಲ್ಲಿದೆ.
ಬೇಡಿಕೆಯ ಕೌಶಲ
ಉದ್ಯೋಗ ಮಾರುಕಟ್ಟೆಯಲ್ಲಿ ಬೇಡಿಕೆಯಲ್ಲಿರುವ ಹಲವು ಕೌಶಲಗಳ ವಿವರ ಇಲ್ಲಿದೆ.
* ಕ್ಲೌಡ್ ಮತ್ತು ಡಿಸ್ಟ್ರಿಬ್ಯೂಟೆಡ್ ಕಂಪ್ಯೂಟಿಂಗ್.
* ಸ್ಟಾಟಿಸ್ಟಿಕಲ್ ಅನಾಲಿಸಿಸ್ ಮತ್ತು ಡೇಟಾ ಮೈನಿಂಗ್
* ಸ್ಟೋರೇಜ್ ಸಿಸ್ಟಮ್ಸ್ ಮತ್ತು ಮ್ಯಾನೇಜ್ಮೆಂಟ್.
* ಯೂಸರ್ ಇಂಟರ್Éೀಸ್ ಡಿಸೈನ್
* ಪಿಆರ್ ಆ್ಯಂಡ್ ಕಮ್ಯುನಿಕೇಷನ್.
* ನೆಟ್ವರ್ಕ್ ಮತ್ತು ಇನ್Áರ್ಮೆಷನ್ ಸೆಕ್ಯುರಿಟಿ.
* ವೆಬ್ ಆರ್ಕಿಟೆಕ್ಚರ್ ಮತ್ತು ಡೆವಲಪ್ಮೆಂಟ್ ಫ್ರೇಮ್ವಕ್ರ್ಸ್.
* ಪರ್ಲ್/ಪೈಥನ್/ರೂಬಿ
* ವಚ್ರ್ಯುಯಲೈಜೇಷನ್.
* ಎಲೆಕ್ಟ್ರಾನಿಕ್ ಮತ್ತು ಎಲೆಕ್ಟ್ರಿಕಲ್ ಎಂಜಿನಿಯರಿಂಗ್.
* ಡೇಟಾ ಪ್ರಸೆಂಟೇಷನ್.
* ಮ್ಯಾಕ್, ಲಿನಕ್ಸ್ ಮತ್ತು ಯುನಿಕ್ಸ್ ಸಿಸ್ಟಮ್ಸ್
* ಗೇಮ್ ಅಭಿವೃದ್ಧಿ.
* ಡೇಟಾ ಎಂಜಿನಿಯರಿಂಗ್ ಮತ್ತು ಡೇಟಾ ವೇರ್ಹೌಸಿಂಗ್.
* ಡಿಜಿಟಲ್ ಮತ್ತು ಆನ್ಲೈನ್ ಮಾರುಕಟ್ಟೆ.
* ಆಟೋಮೋಟಿವ್ ಸರ್ವೀಸಸ್, ಪಾಟ್ರ್ಸ್ ಮತ್ತು ಡಿಸೈನ್.
ಈ ಸ್ಕಿಲ್ಸ್ ನಿಮ್ಮಲ್ಲಿ ಇದೆಯಾ?
ಪ್ರತಿಯೊಬ್ಬ ಉದ್ಯೋಗಾರ್ಥಿಯಲ್ಲೂ ಪ್ರತಿವರ್ಷ, ಪ್ರತಿದಿನ, ಪ್ರತಿಕ್ಷಣವೂ ಇರಬೇಕಾದ ಎವರ್ಗ್ರೀನ್ ಸ್ಕಿಲ್ಗಳ ಮಾಹಿತಿ ಇಲ್ಲಿದೆ.
ಸಂವಹನ ಕೌಶಲ: ಉತ್ತಮ ಮಾತುಗಾರಿಕೆ ಎಲ್ಲರಲ್ಲೂ ಇರಬೇಕಾದ ಅವಶ್ಯ ಕೌಶಲವಾಗಿದೆ. ಸಂವಹನ ಕೌಶಲವೆಂದರೆ ಪರಿಣಾಮಕಾರಿಯಾಗಿ ಮಾತನಾಡುವುದು, ಸಂಕ್ಷಿಪ್ತವಾಗಿ ಬರೆಯುವುದು, ಗಮನವಿರಿಸಿ ಕೇಳುವುದು, ಯೋಚನೆಗಳನ್ನು ವ್ಯಕ್ತಪಡಿಸುವುದು, ಗುಂಪುಚರ್ಚೆಯಲ್ಲಿ ಪರಿಣತರಾಗಿರುವುದು, ಸಮರ್ಪಕ ಫೀಡ್ಬ್ಯಾಕ್ ನೀಡುವುದೂ ಸೇರಿದೆ.
ಯೋಜನಾ ಕೌಶಲ: ಮುನ್ನೋಟ ನೀಡುವುದು, ಐಡಿಯಾ ಮಾಡುವುದು, ಪರ್ಯಾಯ ವಿ`Áನಗಳನ್ನು ಕಂಡುಹಿಡಿಯುವುದು, ಸಂಪನ್ಮೂಲಗಳನ್ನು ಗುರುತಿಸುವುದು, ಮಾಹಿತಿಗಳನ್ನು ಕಲೆಹಾಕುವುದು, ಗುರಿ ನಿಶ್ಚಯಿಸಿಕೊಳ್ಳುವುದು, ವಿಶ್ಲೇಷಿಸುವುದು ಸೇರಿದಂತೆ ಹಲವು ಯೋಜನಾ ಕೌಶಲಗಳೂ ನಿಮ್ಮಲ್ಲಿ ಇರಲಿ.
ಇಂಗ್ಲಿಷ್ ಬರುತ್ತಾ?: ಈಗ ಬಹುತೇಕ ಉದ್ಯೋಗ ಮಾಡುವುದು ಇಂಗ್ಲಿಷ್ ಗೊತ್ತಿರುವುದು ಅವಶ್ಯ. ಇಂಗ್ಲಿಷ್ನಲ್ಲಿ ಸಂವಹನ ಕೌಶಲ ಹೆಚ್ಚಿಸಿಕೊಳ್ಳಲು ಪ್ರಯತ್ನಿಸಿ. ಇದಕ್ಕಾಗಿ ತರಬೇತಿಯನ್ನೂ ಪಡೆಯಬಹುದು. ದಿನನಿತ್ಯ ಕನ್ನಡದೊಂದಿಗೆ ಇಂಗ್ಲಿಷ್ ಪತ್ರಿಕೆಯನ್ನೂ ಓದುವುದು ಒಳ್ಳೆಯ ಅಭ್ಯಾಸ.