Kannada CADD Nest Private Limited

2021ಕ್ಕೆ ಸ್ವಾಗತ: ವಿದ್ಯಾರ್ಥಿಗಳು ಹೊಂದಿರಬೇಕಾದ 10 ಸಾಫ್ಟ್ ಸ್ಕಿಲ್ಸ್

2021ಕ್ಕೆ ಸ್ವಾಗತ: ವಿದ್ಯಾರ್ಥಿಗಳು ಹೊಂದಿರಬೇಕಾದ 10 ಸಾಫ್ಟ್ ಸ್ಕಿಲ್ಸ್

ಹೊಸ ವರ್ಷದ ನಿರ್ಣಯಗಳು ಅಥವಾ ರೆಸಲ್ಯೂಷನ್‌ ಕೈಗೊಳ್ಳಲು ವಿದ್ಯಾರ್ಥಿಗಳು ಯೋಚಿಸುತ್ತಿರಬಹುದು. ವಿವಿಧ ನಿರ್ಣಯಗಳನ್ನು ಪಟ್ಟಿ ಮಾಡುತ್ತಿರಬಹುದು. ವಿದ್ಯಾರ್ಥಿಗಳ ಭವಿಷ್ಯಕ್ಕೆ ಪೂರಕವಾದ ವಿವಿಧ ಲೇಖನಗಳನ್ನು “2021 ಹೊಸ ವರ್ಷಕ್ಕೆ ಸ್ವಾಗತ’ಮಾಲಿಕೆಯಲ್ಲಿ ಕನ್ನಡ ಕ್ಯಾಡ್‌ನೆಸ್ಟ್‌‌ ನಿಮ್ಮ ಮುಂದಿಡುತ್ತಿದೆ. ಮೊದಲ ಲೇಖನವು ಈ ಹೊಸ ವರ್ಷದಲ್ಲಿ ಬಹುಬೇಡಿಕೆ ಪಡೆಯುವ ಹತ್ತು ಸಾಫ್ಟ್‌ ಸ್ಕಿಲ್‌ಗಳ ಕುರಿತಾಗಿದೆ. ಇದು ಭವಿಷ್ಯದ ನಿಮ್ಮ ಉದ್ಯೋಗದಲ್ಲಿ ಕಂಪನಿಗಳು ನಿಮ್ಮಲ್ಲಿ ಬಯಸುವ ಕೌಶಲಗಳೂ ಹೌದು.

ಪ್ರಕಾಶ್‌ ಗೌಡ
ಪ್ರಕಾಶ್‌ ಗೌಡ ಎಚ್‌ಎಂ

“ಸಾಫ್ಟ್‌ಸ್ಕಿಲ್‌ ಎನ್ನುವುದು ವಿದ್ಯಾರ್ಥಿಗಳು ಮತ್ತು ಉದ್ಯೋಗದಲ್ಲಿರುವವರು ಕಲಿಯಲೇಬೇಕಾದ ಕೌಶಲ್ಯವಾಗಿದ್ದು, ಕರಿಯರ್‌ ಪ್ರಗತಿಗೆ ನೆರವಾಗುತ್ತದೆ. ನಿಮ್ಮಲ್ಲಿ ಎಷ್ಟೇ ವಿದ್ಯಾರ್ಹತೆ ಇದ್ದರೂ, ನಿಮ್ಮ ಅಂಕಪಟ್ಟಿಯಲ್ಲಿ ಎಷ್ಟೇ ಅಂಕಗಳಿದ್ದರೂ ಸಾಫ್ಟ್‌ ಸ್ಕಿಲ್‌ ಇಲ್ಲದೆ ಇದ್ದರೆ ಪ್ರಯೋಜನವಿಲ್ಲ. ವಿದ್ಯಾರ್ಥಿಗಳು ಸಂವಹನ ಕೌಶಲ್ಯ, ಪ್ರಸಂಟೇಷನ್‌ ಸ್ಕಿಲ್ಸ್‌, ಭಾವನಾತ್ಮಕ ಬುದ್ಧಿಮತ್ತೆ ಇತ್ಯಾದಿ ಹಲವು ಸಾಫ್ಟ್‌ಸ್ಕಿಲ್‌ಗಳನ್ನು ಕಲಿಯಲು ಗಮನ ನೀಡಬೇಕು”ಎಂದು ಪ್ರಕಾಶ್‌ ಇನ್ಫೋಟೆಕ್‌ ಮತ್ತು ಕ್ಯಾಡ್‌ನೆಸ್ಟ್‌‌ ಬೆಂಗಳೂರು (ಬಸವನಗುಡಿ, ರಾಜಾಜಿನಗರ, ಮಲ್ಲೇಶ್ವರಂ ಮತ್ತು ಶೇಷಾದ್ರಿಪುರಂ ಕ್ಯಾಡ್‌ನೆಸ್ಟ್‌‌ಕೌಶಲ್ಯ ತರಬೇತಿ ಕೇಂದ್ರಗಳು) ವ್ಯವಸ್ಥಾಪಕ ನಿರ್ದೇಶಕರಾದ ಪ್ರಕಾಶ್‌ ಗೌಡ ಎಚ್‌ಎಂ ಅಭಿಪ್ರಾಯಪಟ್ಟಿದ್ದಾರೆ.

1. ಪ್ರಗತಿಯ ಮನೋಭಾವ

`ನಿರಂತರ ಕಲಿಕೆ  ಮತ್ತು ಕೆಲಸದ ಸ್ಥಳದಲ್ಲಿನ ಬದಲಾವಣೆಗಳಿಗೆ ತೆರೆದುಕೊಳ್ಳುವ ಗ್ರೂಥ್ ಮೈಂಡ್‍ಸೆಟ್ (ಪ್ರಗತಿಯ ಮನೋಭಾವ) ಅಳವಡಿಸಿಕೊಳ್ಳುವುದು ಅತ್ಯಂತ ಪ್ರಮುಖವಾಗಿದೆ’ ಎಂದು ಉದೆಮಿ ವರದಿ ಹೇಳಿದೆ. ಸಿಬ್ಬಂದಿಗಳ ಸ್ಥಿರ ಮತ್ತು ಪ್ರಗತಿಯ ಮನೋಸ್ಥಿತಿಯ ಕುರಿತು ಕಂಪನಿಗಳು ಇಂದು ಹೆಚ್ಚು ಗಮನ ನೀಡುತ್ತಿವೆ. ಗ್ರೋಥ್ ಮೈಂಡ್‍ಸೆಟ್ ಇರುವ ಜನರು ಫೀಡ್‍ಬ್ಯಾಕ್‍ನೊಂದಿಗೆ ಹೊಸತನ್ನು ಕಲಿಯಲು ಮತ್ತು ಸುಧಾರಿಸಿಕೊಳ್ಳಲು ಗಮನ ನೀಡುತ್ತಾರೆ. ಕೌಶಲ, ವರ್ತನೆ, ಮನೋಭಾವವನ್ನು ವೇಗವಾಗಿ ಕಲಿಯಲು ಮತ್ತು ಬದಲಿಸಲು ಗಮನ ನೀಡುತ್ತಾರೆ. ತಂಡದ ಪ್ರತಿಯೊಬ್ಬ ಸಹೋದ್ಯೋಗಿಗಳನ್ನೂ ಹುರಿದುಂಬಿಸುತ್ತಾರೆ. ತಮ್ಮ ಜ್ಞಾನ ಹಂಚಿಕೊಳ್ಳಲು ಮತ್ತು ಇತರರ ಯಶಸ್ಸಿಗೆ ಸಹಾಯ ಮಾಡುತ್ತಾರೆ.

2. ಕ್ರಿಯೆಟಿವಿಟಿ ಅಥವಾ ಕ್ರಿಯಾಶೀಲತೆ

2020ರಲ್ಲಿ ಬಹುಬೇಡಿಕೆಯಲ್ಲಿರುವ ಸಾಫ್ಟ್‌ಸ್ಕಿಲ್‍ಗಳಲ್ಲಿ ಸೃಜನಶೀಲತೆ ಅಥವಾ ಕ್ರಿಯೆಟಿವಿಟಿಯು ಒಂದಾಗಿದೆ. ಸೃಜನಶೀಲತೆ ಎನ್ನುವುದು ಯಾರೋ ಒಬ್ಬರ ಸ್ವತ್ತಲ್ಲ. ಪ್ರತಿಯೊಬ್ಬರಲ್ಲಿಯೂ ತಮ್ಮದೇ ಆದ ಕ್ರಿಯೆಟಿವಿಟಿ ಇದ್ದೇ ಇರುತ್ತದೆ. ಯಾರು ತಮ್ಮ ಕ್ರಿಯೆಟಿವಿಟಿಯನ್ನು ಕೆಲಸದ ಸ್ಥಳದಲ್ಲಿ ಬಳಸುತ್ತಾರೋ ಅವರಿಗೆ ಕಂಪನಿಗಳು ಆದ್ಯತೆ ನೀಡುತ್ತವೆ. ತಂಡದಲ್ಲಿರುವ ಪ್ರತಿಯೊಬ್ಬರ ಸೃಜನಶೀಲತೆಯನ್ನು ಒರೆಗೆ ಹಚ್ಚಿ ಕೆಲಸ ತೆಗೆಯುವುದು ಅತ್ಯಂತ ಅವಶ್ಯಕ. ಕ್ರಿಯೆಟಿವಿಟಿ ಥಿಂಕಿಂಗ್ ಅಥವಾ  ಸೃಜನಶೀಲ ಯೋಚನೆ ಹೊಂದಿರುವವರಿಗೆ ಈ ವರ್ಷ ಬೇಡಿಕೆ ಉತ್ತಮವಾಗಿರಲಿದೆ.

3. ಗಮನ ಕೇಂದ್ರೀಕರಣ

ಫೋಕಸ್ ಮಾಸ್ಟರಿ ಎನ್ನುವುದು ಈ ೨೦೨೧ರ ವರ್ಷದ ಬಹುಬೇಡಿಕೆಯ ಸಾಫ್ಟ್‌ ಸ್ಕಿಲ್ ಆಗಿರಲಿದೆ.  ನೀವು ಮಾಡುವ ಕೆಲಸದಲ್ಲಿ ಪೂರ್ಣವಾಗಿ ತೊಡಗಿಸಿಕೊಳ್ಳುವುದು ಅತ್ಯಂತ ಅವಶ್ಯಕವಾಗಿದೆ. ಕೆಲಸದ ಸ್ಥಳದಲ್ಲಿ ಇಂದು ನಿಮ್ಮ ಚಿತ್ತವನ್ನು ಕೆಡಿಸಲು ವಾಟ್ಸ್‍ಆ್ಯಪ್, ಫೇಸ್‍ಬುಕ್ ನೋಟಿಫಿಕೇಷನ್‍ಗಳೇ ಸಾಕು. ಕೆಲಸದ ಮೇಲೆ ಗಮನ ಕೇಂದ್ರೀಕರಿಸಲು ಬಿಡದ ಇಂತಹ ಹಲವು ಅಂಶಗಳಿಂದ ಅಂತರ ಕಾಯ್ದುಕೊಂಡು ಕಂಪನಿ ನೀಡಿದ ಕೆಲಸದ ಮೇಲೆ ಸಮರ್ಥವಾಗಿ ಗಮನ ಕೇಂದ್ರೀಕರಿಸುವುದು ಅವಶ್ಯವಾಗಿದೆ.

4. ಅನ್ವೇಷಣೆ

ಇನ್ನೋವೇಷನ್ ಎನ್ನುವುದೂ ಒಂದು ಸಾಫ್ಟ್‌ ಸ್ಕಿಲ್ ಆಗಿದೆ. 2020ರಲ್ಲಿ ಈ ಸಾಫ್ಟ್‌ ಸ್ಕಿಲ್‌ಗೆ ಬೇಡಿಕೆ ಅಧಿಕವಾಗಿರಲಿದೆ. ಕ್ರಿಯೆಟಿವಿಟಿಯು ಇನ್ನೋವೇಷನ್‍ನ ತಾಯಿ ಇದ್ದಹಾಗೆ. ತಾಂತ್ರಿಕ ಕೌಶಲ ಕಲಿಯುವುದರ ಜೊತೆಗೆ ಬದಲಾಗುತ್ತಿರುವ ವರ್ತನೆಯ ಕಡೆಗೂ ಗಮನ ನೀಡಿ. ನೀವು ಕಲಿತು ಬಂದ ತಾಂತ್ರಿಕ ಕೌಶಲಗಳನ್ನು ಮಾತ್ರ ಕಂಪನಿಗಳು ನೋಡುವುದಿಲ್ಲ. ಪ್ರತಿದಿನ ಕೆಲಸ ಮಾಡುವಾಗ ಯಾವುದಾದರೂ ಅನ್ವೇಷಣೆ ಮಾಡಿ ಕಂಪನಿಯ ಪ್ರಗತಿಗೆ ನೆರವಾಗುತ್ತೀರಾ ಎಂದು ಗಮನಿಸುತ್ತವೆ. 2020ರಲ್ಲಿ ನಿಮ್ಮ ಅನ್ವೇಷಣಾ ಮನೋಭಾವವನ್ನು ಸಮರ್ಥವಾಗಿ ಬಳಸಿಕೊಂಡರೆ ಇತರಿಗಿಂತ ಬೇಗ ಪ್ರಗತಿ ಕಾಣುವಿರಿ.

5.ಸಂವಹನ ಕೌಶಲ

ಇದು 2020ರಲ್ಲಿ ಮಾತ್ರಲ್ಲದೆ ಪ್ರತಿ ಸಮಯದಲ್ಲಿಯೂ ಅವಶ್ಯವಾಗಿರುವ ಸಾಫ್ಟ್‌ಸ್ಕಿಲ್ ಆಗಿದೆ. ಕಂಪನಿಗಳು ಅತ್ಯುತ್ತಮವಾಗಿ ಮಾತನಾಡುವವರಿಗೆ ಮಣೆ ಹಾಕುತ್ತವೆ. ಉತ್ತಮ ಮಾತುಗಾರಿಕೆ ಎಲ್ಲರಲ್ಲೂ ಇರಬೇಕಾದ ಅವಶ್ಯ ಕೌಶಲವಾಗಿದೆ. ಸಂವಹನ ಕೌಶಲಗಳಲ್ಲಿ ಪರಿಣಾಮಕಾರಿಯಾಗಿ ಮಾತನಾಡುವುದು, ಸಂಕ್ಷಿಪ್ತವಾಗಿ ಬರೆಯುವುದು, ಗಮನವಿರಿಸಿ ಕೇಳುವುದು, ಯೋಚನೆಗಳನ್ನು ವ್ಯಕ್ತಪಡಿಸುವುದು, ಗುಂಪುಚರ್ಚೆಯಲ್ಲಿ ಪರಿಣತರಾಗಿರುವುದು, ಸಮರ್ಪಕ ಫೀಡ್‍ಬ್ಯಾಕ್ ನೀಡುವುದೂ ಸೇರಿವೆ.

6. ಸ್ಟೋರಿ ಟೆಲ್ಲಿಂಗ್ ಅಥವಾ ಕತೆ ಹೇಳುವುದು

ಕತೆ ಹೇಳುವುದು ಎಂದರೆ ನಿಮಗೆ ನೀಡಿದ ಕೆಲಸ ಮಾಡದೆ ಸಬೂಬು ಹೇಳುವುದಲ್ಲ. ಈಗಿನ ಡಿಜಿಟಲ್ ಜಗತ್ತಿನಲ್ಲಿ ಜನರಿಗೆ ಅರ್ಥವಾಗುವಂತೆ ಉತ್ಪನ್ನಗಳು, ಸೇವೆಗಳ ವಿವರಗಳನ್ನು ಪ್ರಕಟಿಸಬೇಕು. ಡಿಜಿಟಲ್ ಪ್ರೋಗ್ರಾಮ್‌ ಮ್ಯಾನೇಜರ್‍ಗಳು, ಕಂಟೆಟ್ ಮಾಡುವವರು, ಎಸ್‍ಇಒ ಸ್ಟ್ರಾಟರ್ಜಿ ಮಾಡುವವರು, ಸಾಫ್ಟ್‌ವೇರ್‌  ಡೆವಲಪರ್‍ಗಳು ಮತ್ತುಪ್ರೋಗ್ರಾಮರ್‌ಗಳು  ಸ್ಟೋರಿ ಟೆಲ್ಲಿಂಗ್ ಎಂಬ ಅನನ್ಯ ಸಾಫ್ಟ್‌ ಸ್ಕಿಲ್ ಹೊಂದಿರುವುದು ಅತ್ಯಂತ ಅವಶ್ಯ.

7. ಕಲ್ಚರ್ ಅವರ್ನೆಸ್

ಸಂಸ್ಕøತಿಯ ಕುರಿತು ತಿಳಿವಳಿಕೆಯೂ ಉದ್ಯೋಗಿಗಳಿಗೆ ಅವಶ್ಯಘಿ. ಅದು ಕಂಪನಿಯ ಕಲ್ಚರ್ ಆಗಿರಬಹುದು, ತಾವು ಕೆಲಸ ಮಾಡುವ ದೇಶದ ಕಲ್ಚರ್ ಆಗಿರಬಹುದು. ಪ್ರತಿಯೊಬ್ಬರೂ ತಮ್ಮ ಕಂಪನಿಯ ಕೆಲಸದ ಸಂಸ್ಕøತಿಯನ್ನು ಅರಿತು ಕೆಲಸ ಮಾಡಬೇಕು.

8. ಕ್ರಿಟಿಕಲ್ ಥಿಂಕಿಂಗ್

ಮುಕ್ತವಾಗಿ, ತೆರೆದ ಮನಸ್ಸಿನಿಂದ ಚಿಂತನೆ ಮಾಡುವುದನ್ನು ಕ್ರಿಯೇಟಿವ್ ಥಿಂಕಿಂಗ್ ಎನ್ನಬಹುದು. ಚಿಂತನೆ ಮಾಡುವ ಕುರಿತು ಯಾವುದೇ ನಿರ್ಬಂಧಗಳು ಇರುವುದಿಲ್ಲ.

* ಹೊಸ ಮತ್ತು ವಿಭಿನ್ನ ಆಲೋಚನೆಗಳ ಕುರಿತು ಪ್ರಶ್ನೆಗಳನ್ನು ಕೇಳುವುದು. ಎಲ್ಲಾ ಐಡಿಯಾಗಳ ಕುರಿತು ಮಾತನಾಡುವುದು ಮತ್ತು ಕೇಳುವುದು. ಕೆಲವೊಂದು ಸಾಧ್ಯವಿಲ್ಲದ ಐಡಿಯಾಗಳ ಕುರಿತೂ ಆಲೋಚಿಸುವುದು.

* ಯೋಜಿತ  ನಿರ್ಧಾರವನ್ನು ಬದಲಾಯಿಸಿ ಹೊಸ ವಿಧಾನದಲ್ಲಿ ಮಾಡುವುದು.

* ಕೆಲವೊಂದು ನಿಗದಿತ ಕೆಲಸವನ್ನು ಮಾಡಲು ಹೊಸ  ವಿಧಾನವನ್ನು ವಿನ್ಯಾಸ ಮಾಡುವುದು.

* ಸಾಧ್ಯವಿರುವ, ಅಸಾಧ್ಯವಾದ ಅಥವಾ ತಿಳಿಯದೆ ಇರುವ ಐಡಿಯಾ ಕುರಿತು ಆಲೋಚಿಸುವುದು.

9. ನಾಯಕತ್ವ ಅಥವಾ ಲೀಡರ್‌ಶಿಪ್‌

ಇದು ಕೂಡ ಪ್ರತಿ ಸಮಯದಲ್ಲಿಯೂ ಬೇಡಿಕೆಯಲ್ಲಿರುವ ಸಾಫ್ಟ್‌ ಸ್ಕಿಲ್ ಆಗಿದೆ. ತಂಡವನ್ನು ಉತ್ತೇಜಿಸಿ ಕೆಲಸ ತೆಗೆಸುವುದು, ಖಚಿತ ನಿರ್ಧಾರ ತೆಗೆದುಕೊಳ್ಳುವುದು, ಸಾಮರ್ಥ್ಯ ಮತ್ತು ದೌರ್ಬಲ್ಯದ ಅರಿವು ಸೇರಿದಂತೆ ಹಲವು ಅಂಶಗಳು ಲೀಡರ್‍ಗೆ ಅವಶ್ಯ.

10. ಭಾವನಾತ್ಮಕ ಬುದ್ಧಿಮತ್ತೆ

ಇಮೋಷನಲ್ ಇಂಟಲಿಜೆನ್ಸ್ ಎನ್ನುವುದು 2021ರ ಬಹುಬೇಡಿಕೆಯ ಸಾಫ್ಟ್‌ಸ್ಕಿಲ್‌ ಆಗಿರಲಿದೆ ಉದ್ಯೋಗ ಕ್ಷೇತ್ರದ ತಜ್ಞರುಗಳು ಅಭಿಪ್ರಾಯಪಟ್ಟಿದ್ದಾರೆ.

ಭವಿಷ್ಯದ ಬಹುಬೇಡಿಕೆಯ ಕೌಶಲ್ಯಗಳನ್ನು ಕಲಿಯಲು ಈ ವೆಬ್‌ ಲಿಂಕ್‌ಗೆ ಭೇಟಿ ನೀಡಿ

Ad Widget

Related Posts

error: Content is protected !!
Scroll to Top