ಕ್ಯಾಡ್‌ನೆಸ್ಟ್ ಬೆಂಗಳೂರು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಆಗಾಗ ಆನ್‌ಲೈನ್ ಮತ್ತು ಆಫ್‌ಲೈನ್ ಸೆಮಿನಾರ್‌ಗಳನ್ನು ಆಯೋಜಿಸುತ್ತ ಇರುತ್ತದೆ. ಹಲವು ವಿದ್ಯಾರ್ಥಿಗಳು ಇಂತಹ ಸೆಮಿನಾರ್‌ನಲ್ಲಿ ಭಾಗವಹಿಸಲು ಅತ್ಯುತ್ಸಾಹ ಇರುತ್ತದೆ. ಇನ್ನು ಕೆಲವರು ಸೆಮಿನಾರ್, ವರ್ಕ್‌ಶಾಪ್ ಯಾಕೆ, ಯಾವುದಾದರೂ ಸಿನಿಮಾ ನೋಡೋಣ ಎಂದುಕೊಳ್ಳುತ್ತಾರೆ. ಆದರೆ, ವಿದ್ಯಾರ್ಥಿ ಜೀವನದಲ್ಲಿ ಸೆಮಿನಾರ್, ವರ್ಕ್‌ಶಾಪ್ ಮತ್ತು ಕಾನ್ಫರೆನ್ಸ್‌ಗಳು ಅತ್ಯಂತ ಮಹತ್ವಪೂರ್ಣವಾಗಿದೆ. ಯಾಕೆ ಇವು ಇಂಪಾರ್ಟೆಂಟ್ ಅನ್ನುವ ಸಂಗತಿಯನ್ನು ಈ ಬ್ಲಾಗ್‌ನಲ್ಲಿ ಚರ್ಚಿಸೋಣ ಬನ್ನಿ.
ವಿದ್ಯಾರ್ಥಿ ಜೀವನದಲ್ಲಿ ಸೆಮಿನಾರ್‌ಗಳು, ವರ್ಕ್‌ಶಾಪ್‌ಗಳು ಮತ್ತು ಕಾನ್ಫರೆನ್ಸ್‌ಗಳು ಅತ್ಯಂತ ಮಹತ್ವಪೂರ್ಣ. ಇವುಗಳಲ್ಲಿ ಭಾಗವಹಿಸುವುದರ ಮೂಲಕ ಕೇವಲ ಹೊಸ ವಿಷಯಗಳನ್ನು, ದೃಷ್ಟಿಕೋನಗಳನ್ನು ಪಡೆಯುವುದು ಮಾತ್ರವಲ್ಲದೆ ಅತ್ಯುತ್ತಮ ನೆಟ್‌ವರ್ಕಿಂಗ್‌ಗೂ ಸಹಾಯ ಮಾಡುತ್ತದೆ.
ಈಗ ನೀವು ಕಾಲೇಜಿನಲ್ಲಿ ಪಡೆಯುವ ಶಿಕ್ಷಣವು ಉದ್ಯಮಗಳ ನಿರೀಕ್ಷೆಯನ್ನು ತಲುಪುತ್ತಿಲ್ಲ. ಈಗಿನ ತಲೆಮಾರಿನ ವಿದ್ಯಾರ್ಥಿಗಳಿಗೆ ಕಾಲೇಜು ಕೊಠಡಿಯಲ್ಲಿ ಪಡೆದ ಪದವಿ ಅಥವಾ ಸರ್ಟಿಫಿಕೇಟ್‌ಗಳು ಸಾಕಾಗುವುದಿಲ್ಲ. ಇಂತಹ ಸಮಯದಲ್ಲಿ ಕಾಲೇಜು ಶಿಕ್ಷಣ ಮತ್ತು ಉದ್ಯಮದ ನಿರೀಕ್ಷೆಯ ನಡುವಿನ ಅಂತರ ತಗ್ಗಿಸಲು ಇಂತಹ ಸೆಮಿನಾರ್‌ಗಳು, ವರ್ಕ್‌ಶಾಪ್‌ಗಳು ಸಹಾಯ ಮಾಡುತ್ತವೆ. ಸೆಮಿನಾರ್‌ನಲ್ಲಿ ಭಾಗವಹಿಸುವುದರಿಂದ ಇರುವ ಕೆಲವು ಅನುಕೂಲತೆಗಳು ಈ ಮುಂದಿನಂತೆ ಇವೆ.
- ಕ್ಯಾಡ್‌ನೆಸ್ಟ್‌ನಂತಹ ಶಿಕ್ಷಣ ಸಂಸ್ಥೆಗಳು ಆಯೋಜಿಸುವ ಸೆಮಿನಾರ್‌ಗಳು ನಿಮ್ಮ ಕರಿಯರ್‌ಗೆ ಟರ್ನಿಂಗ್ ಪಾಯಿಂಟ್ ಆಗಬಲ್ಲದು. ಸದ್ಯದ ಉದ್ಯೋಗ ಟ್ರೆಂಡ್ ಬಗ್ಗೆ ನಿಮಗೆ ಸ್ಪಷ್ಟ ಚಿತ್ರಣ ನೀಡಬಹುದು.
- ನಿಮಗೆ ಪ್ರಶ್ನೆಗಳನ್ನು ಕೇಳುವ ಅವಕಾಶ ದೊರಕುತ್ತದೆ. ನೀವು ಆಯ್ಕೆ ಮಾಡಿಕೊಂಡ ಕರಿಯರ್ ಪಾಥ್ ಬಗ್ಗೆ ಇರುವ ಸಂದೇಹಗಳನ್ನು ಬಗೆಹರಿಸಿಕೊಳ್ಳಬಹುದು. ಇದರಿಂದ ನಿಮಗೆ ಭವಿಷ್ಯದ ಬಗ್ಗೆ ಭರವಸೆ ಹೆಚ್ಚುತ್ತದೆ.
- ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿಯೂ ನೆಟ್‌ವರ್ಕಿಂಗ್ ಎನ್ನುವುದು ಅತ್ಯಂತ ಮಹತ್ವದ್ದು. ನೀವು ಭವಿಷ್ಯದಲ್ಲಿ ಉದ್ಯೋಗ ಪಡೆಯಲು, ಉದ್ಯೋಗ ಬದಲಾಯಿಸಲು ಮತ್ತು ಒಳ್ಳೆಯ ಅವಕಾಶ ಪಡೆಯಲು ನಿಮ್ಮ ನೆಟ್‌ವರ್ಕ್‌ನಲ್ಲಿರುವ ಜನರು, ಮಹನೀಯರು ಸಹಾಯ ಮಾಡಬಹುದು. ಕ್ಯಾಡ್‌ನೆಸ್ಟ್ ಬೆಂಗಳೂರಿನಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು, ಬೋಧಕವರ್ಗ ಮತ್ತು ಸಿಬ್ಬಂದಿ ವರ್ಗ ಮಾತ್ರವಲ್ಲದೆ ಹಲವು ಜನರ ನೆಟ್‌ವರ್ಕ್ ದೊರಕುತ್ತದೆ.
- ನಿಮಗೆ ನೀವು ಆಯ್ಕೆ ಮಾಡಿಕೊಂಡ ಕ್ಷೇತ್ರದ ಇತ್ತೀಚಿನ ಪ್ರಗತಿಯ ಬಗ್ಗೆ ಅರಿವು ಮೂಡುತ್ತದೆ. ನೀವು ಸದಾ ಅಪ್‌ಡೇಟ್ ಆಗಿರಲು ಸೆಮಿನಾರ್‌ಗಳು, ವರ್ಕ್‌ಶಾಪ್‌ಗಳು ಸಹಾಯ ಮಾಡುತ್ತವೆ.
- ಸೆಮಿನಾರ್‌ನಲ್ಲಿ ನೀವು ಗಮನವಿಟ್ಟು ಕೇಳಿಸಿಕೊಳ್ಳುವುದು ಅತ್ಯಂತ ಮುಖ್ಯವಾಗುತ್ತದೆ. ಇದರಿಂದ ನಿಮ್ಮ ಕೇಳಿಸಿಕೊಳ್ಳುವ ಅಥವಾ ಲಿಸನಿಂಗ್ ಪವರ್ ಉತ್ತಮಗೊಳ್ಳುತ್ತದೆ.
- ಸೆಮಿನಾರ್‌ನಲ್ಲಿ ದೊರಕುವ ಅತ್ಯಂತ ಪ್ರಮುಖ ಲಾಭವೆಂದರೆ ನಿಮ್ಮ ಸಾಫ್ಟ್ ಸ್ಕಿಲ್ ಉತ್ತಮಗೊಳ್ಳುವುದು. ಸಾಫ್ಟ್ ಸ್ಕಿಲ್‌ಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಕನ್ನಡ ಕ್ಯಾಡ್‌ನೆಸ್ಟ್ ಬ್ಲಾಗ್‌ನಲ್ಲಿ ಬರೆದ ಈ ಲೇಖನ ಓದಬಹುದು.
- ವರ್ಬಲ್ ಕಮ್ಯುನಿಕೇಷನ್ ಅಥವಾ ಮೌಖಿಕ ಸಂವಹನ ಸಾಮರ್ಥ್ಯ ಉತ್ತಮಗೊಳಿಸುತ್ತದೆ. ಈಗಿನ ಬಹುತೇಕ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದಿಂದ ಬಂದಿರುತ್ತಾರೆ. ಕೆಲವು ವಿದ್ಯಾರ್ಥಿಗಳಲ್ಲಿ ಒಳ್ಳೆಯ ಸ್ಕೋರ್ ಇದ್ದರೂ ಸಂವಹನ ಕೌಶಲ್ಯ ಉತ್ತಮವಾಗಿರುವುದಿಲ್ಲ. ಉದ್ಯಮ ಅಥವಾ ತಾವು ಆಯ್ಕೆ ಮಾಡಿಕೊಂಡ ಕ್ಷೇತ್ರದ ಆಳಅಗಲದ ಪರಿಚಯ ಇರುವುದಿಲ್ಲ. ಇಂತಹ ಸಮಸ್ಯೆಯನ್ನು ಸೆಮಿನಾರ್‌ಗಳಲ್ಲಿ ಭಾಗವಹಿಸುವ ಮೂಲಕ ಹೋಗಲಾಡಿಸಬಹುದು.
- ಇಂತಹ ಸೆಮಿನಾರ್‌ಗಳಲ್ಲಿ ಭಾಗವಹಿಸುವ ಮೂಲಕ ವಿದ್ಯಾರ್ಥಿಗಳ ವ್ಯಕ್ತಿತ್ವ ಉತ್ತಮಗೊಳ್ಳುತ್ತದೆ. ಪ್ರೋತ್ಸಾಹ ಮತ್ತು ಸ್ಪೂರ್ತಿಗಳು ದೊರಕುತ್ತವೆ.
- ನೀವು ವಿವಿಧ ಸೆಮಿನಾರ್‌ಗಳಲ್ಲಿ ಭಾಗವಹಿಸಿದಂತೆ ನಿಮ್ಮ ವರ್ಬಲ್ ಕಮ್ಯುನಿಕೇಷನ್ ಉತ್ತಮಗೊಳ್ಳುತ್ತ ಹೋಗುತ್ತದೆ.
- ನಿರ್ದಿಷ್ಟ ಕ್ಷೇತ್ರದ ಕುರಿತು ಜ್ಞಾನ ಹೆಚ್ಚಿಸಿಕೊಳ್ಳಲು ಸೆಮಿನಾರ್ ಅಥವಾ ವರ್ಕ್‌ಶಾಪ್‌ಗಳು ಸಹಾಯ ಮಾಡುತ್ತವೆ. ಇದರಿಂದ ವಿದ್ಯಾರ್ಥಿಯು ಲೇಟೆಸ್ಟ್ ಮಾಹಿತಿ ಪಡೆಯುವುದು ಮಾತ್ರವಲ್ಲದೆ ಹೊಸ ಕೌಶಲ್ಯಗಳನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳಲು ಸಾಧ್ಯವಾಗುತ್ತದೆ.