Kannada CADD Nest Private Limited

ಇಂಟರ್‌ವ್ಯೂ ಟಿಪ್ಸ್: ಉದ್ಯೋಗ ಸಿಗಬೇಕಿದ್ದರೆ ನಿಮ್ಮಲ್ಲಿ ಇರಬೇಕಾದ ಕೌಶಲ್ಯಗಳು

ಇಂಟರ್‌ವ್ಯೂ ಟಿಪ್ಸ್: ಉದ್ಯೋಗ ಸಿಗಬೇಕಿದ್ದರೆ ನಿಮ್ಮಲ್ಲಿ ಇರಬೇಕಾದ ಕೌಶಲ್ಯಗಳು
  • ಸ್ನೇಹ

ಝಣ ಝಣ ಕಾಂಚಾಣ – ಯಾರಿಗೆ ತಾನೆ ಬೇಡ ಹೇಳಿ. ಹಣ ಅಂದ್ರೆ ಹೆಣಾನು ಬಾಯಿ ಬಿಡೋ ಕಾಲ ಇದು. ಯಾಕೆ ಅಂದ್ರೆ ಹಣಕ್ಕೆ ಅಷ್ಟು ಮಹತ್ವಾ ಇದೆ. ನಿಮಗೆ ಹಣ ಬೇಕು ಅಂದರೆ ಮೊದಲು ವಿದ್ಯೆ-ಬುದ್ದಿ ಇರಬೇಕು, ಅದಕ್ಕೆ ತಕ್ಕ ಕೆಲಸ ಸಿಗಬೇಕು. ನಮ್ಮ ಕೆಲಸ ಬೇಕು ಅಂದ್ರೆ ಕೇವಲ ಡಿಗ್ರಿ ಅಥವಾ ವಿದ್ಯೆ ಇದ್ರೆ ಸಾಲದು. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೆಲಸ ಸಿಗಬೇಕು ಅಂದ್ರೆ ಮೊದಲು ವಿದ್ಯೆ, ನಂತರ ಬುದ್ದಿ, ಜೊತೆಗೆ ಒಂದಷ್ಟು ಕೌಶಲ್ಯಗಳು ಇರಬೇಕು. ಇಲ್ಲ ನಾನು ಲಂಚ ಕೊಟ್ಟು ಕೆಲ್ಸಕ್ಕೆ ಸೇರ್ಕೋತೀನಿ, ಅಂತ ನೀವೇನಾದ್ರು ಭ್ರಮಾತ್ಮಕ ಜಗ್ಗತ್ತಿನಲ್ಲಿ ಇದ್ರೆ ದಯವಿಟ್ಟು ಆ ತರದ ಭ್ರಮೆ ಯಿಂದ ಹೊರಗೆ ಬನ್ನಿ. ಇದು ಡಿಜಿಟಲೈಜ್ಡ್ ಇಂಡಿಯಾ, ದಿನದಿಂದ ದಿನಕ್ಕೆ ಕಾಲ ಬದಲಾಗುತ್ತಿದೆ. ನಾವು ಅಪ್ಡೇಟ್ ಆಗದೆ ನಾನು ಈ ಸ್ಪರ್ಧಾತ್ಮಕ ಜಗತ್ತಿನ ಸ್ಪರ್ಧೆಯಲ್ಲಿ ಗೆಲ್ಲಬಲ್ಲೆ ಅಂದು ಕೊಂಡ್ರೆ ಅದು ತಪ್ಪು.

ಭಾರತದ ಸದ್ಯ ಪರಿಸ್ಥಿತಿಯಲ್ಲಿ ಒಟ್ಟಾರೆಯಾಗಿ ಶೇಕಡ 23.5% ಅಷ್ಟು ನಿರುದ್ಯೋಗ ಇದೆ. ಅಂದರೆ, 138 ಕೋಟಿ ಜನ ಸಂಖ್ಯೆ ಹೊಂದಿರುವ ನಮ್ಮ ದೇಶದಲ್ಲಿ ಸುಮಾರೂ 30 ಕೋಟಿ ಜನರಿಗೆ ಕೆಲಸ ಇಲ್ಲ. ಅವರೆಲ್ಲರಿಗೂ, ವಿದ್ಯೆ ಇಲ್ಲ ಅಥವಾ ಲಂಚ ಕೊಡೋಕೆ ಸ್ಸಾಮರ್ಥ್ಯ ಇಲ್ಲ ಅಂತ ಮಾತ್ರ ಅರ್ಥ ಅಲ್ಲ, ಅವರಲ್ಲಿ ಕೆಲವರಿಗೆ ಉದ್ಯೋಗ ಗಿಟ್ಟಿಸಿಕೊಳ್ಳುವ ಸಾಮರ್ಥ್ಯ, ಕೌಶಲ್ಯಗಳು ಇಲ್ಲ ಅಂತ ಅರ್ಥ. 
ಹಾಗಾದ್ರೆ ಯಾವೆಲ್ಲ ಕೌಶಲ್ಯಗಳು ಬೇಕು ಈಗಿನ ಸಮಾಜದಲ್ಲಿ   ಕೆಲಸ ಪಡೆದುಕೊಳ್ಳೋದಕ್ಕೆ?? ಈ ಪ್ರಶ್ನೆಗೆ ಉತ್ತರ ನಿಮಗೆ ಇಲ್ಲಿ ಸಿಗುತ್ತೆ.
ಕೆಲ್ಸಕ್ಕೆ ಸೇರಲು ಬೇಕಾಗುವ ವೈಯಕ್ತಿಕ ಕೌಶಲ್ಯಗಳು ಈ ಕೆಳಗಿನಂತಿವೆ:
೧. ವಿದ್ಯಾಭ್ಯಾಸ –
ದುಡ್ಡೇ ದೊಡ್ಡಪ್ಪ ಹೌದು ಆದ್ರೆ ವಿದ್ಯೆ ಅದರಪ್ಪ ಅನ್ನೋದನ್ನ ಮರಿಯಬಾರದು. ಯಾಕಂದ್ರೆ, ವಿದ್ಯೆ ನಮಗೆ ಬುದ್ದಿಯನ್ನ ಕೊಡುತ್ತೆ, ಸಮಾಜದ ಹಾಗು-ಹೋಗುಗಳ ಬಗ್ಗೆ ತಿಳಿಸಿ ಕೊಡುತ್ತೆ, ವಿನಯತೆಯನ್ನ ಕೊಡುತ್ತೆ, ವ್ಯವಹಾರ ಜ್ಙಾನ ಕೊಡುತ್ತೆ, ಸಮಾಜದಲ್ಲಿ ಸಾಮಾನತೆ ತಂದು ಕೊಡುತ್ತೆ. ಹಲವಾರು ವೈವಿಧ್ಯಮಯ ವಿಶೇಷ ವಿಷಯಗಳ ಬಗ್ಗೆ ತಿಳಿಸಿ ಕೊಡುತ್ತೆ. ಇವೆಲ್ಲವೂ ಕೆಲಸ ಗಿಟ್ಟಿಸುವಲ್ಲಿ ಬಹಳ ಮುಖ್ಯ. 
೨. ಸಂವಹನ –
ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಮಾತಿನಂತೆ – ಮಾತು ಬಹಳ ಮುಖ್ಯ ನಾವು ಯಾವುದೇ ಕಂಪನಿಯಲ್ಲಿ ಸಂದರ್ಶನಕ್ಕೆ ಹೋದಾಗ ನಮಲ್ಲಿ ಉತ್ತಮ ಮಾತುಗಾರಿಕೆ ಇದೆಯೇ ಅನ್ನೋದನ್ನ ಮೊದಲು ಚೆಕ್ ಮಾಡಲಾಗುತ್ತೆ.  ಮತ್ತೊಂದು ಮಾತಿದೆ- ಮಾತು ಮನೆ ಕೆಡಿಸಿತು ತೂತು ಒಲೆ ಕೆಡಿಸಿತು ಅಂತ- ಇದರಂತೆ, ನಮ್ಮ ಮಾತಿನಲ್ಲಿ ವಿವೇಚನೆ, ವಿಧೇಯತೆ, ವಿನಯ ಎಂಬ ಮುಖ್ಯ ಅಂಶಗಳು ಇರಬೇಕು ಇಲ್ಲದೆ , ನಾನು ಮಾತನಾಡಬಲ್ಲೆ ಅಂತ ಅಸಭ್ಯವಾಗಿ, ಬೇಡದಿರುವ ಮಾತುಗಳನ್ನಾಡಿ ಅಸಮರ್ಥ ಅಂತ ಸಾಬೀತುಪಡಿಸೋದಲ್ಲ. 
೩. ಕೇಳುವಿಕೆ –
ಸಂಭಾಷಣೆ ಎಂದರೆ ಕೇವಲ ಮಾತನಾಡುವುದಲ್ಲ, ಎಚ್ಚರಿಕೆಯಿಂದ ಕೇಳಿಸಿಕೊಳ್ಳುವುದು ಬಹಳ ಮುಖ್ಯ. ಉದಾಹರಣೆಗೆ – ಕಂಪನಿನಿಯ ಸಂದರ್ಶಕ  ಕೇಳುವ ಪ್ರಶ್ನೆಗೆ ತಕ್ಕಂತೆ ಉತ್ತರ ನೀಡುವುದು ಬಹಳ ಮುಖ್ಯ, ಯಾವುದೊ ಪ್ರಶ್ನೆಗೆ ಮತ್ಯಾವುದೋ ಉತ್ತರ ತರವಲ್ಲ.
೪. Team work ಅಥವಾ ತಂಡದ ಕೆಲಸ –ಎಲ್ಲ ಕಂಪನಿಯ ಸಂದರ್ಶಕರು ಕಂಪನಿಯ ಉದ್ಯೋಗಿಯಾಗುವವನು /ಉದ್ಯೋಗಿಯಾಗುವವಳು ಎಲ್ಲ ಇತರ ಉದ್ಯೋಗಿಗಳೊಂದಿಗೆ ಹೊಂದುಕೊಂಡು ಕೆಲಸ ಮಾಡಬಲ್ಲರಾ ಎಂಬ ಅಂಶವನ್ನು ಪರೀಕ್ಷಿಸುತ್ತಾರೆ. ಹಾಗಾಗಿ ನೀವು ನಿಮ್ಮ ತಂಡದೊಂಡನೆ ಉತ್ತಮ ಬಾಂಧವ್ಯ ಹೊಂದುವುದು ಬಹಳ ಮುಖ್ಯ. 
೫. ಸಮಯ ನಿರ್ವಹಣೆ -ಪ್ರತಿ ಕಂಪನಿಗಳು ತಮ್ಮ ಕೆಲಸಗಾರರು ಸಮಯ ಪ್ರಜ್ಞೆ ಹೊಂದಿರಬೇಕು ಎಂಬುದನ್ನ ಬಯಸುತ್ತಾರೆ. ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಬರಬೇಕು ಸಮಯಕ್ಕೆ ಅನುಗುಣವಾಗಿ ಕೊಟ್ಟ ಕೆಲಸವವನ್ನೆಲ್ಲ ಮುಗಿಸಬೇಕು ಹೀಗೆ…

ಕೆಲಸಕ್ಕೆ ಸೇರಲು ಬೇಕಾಗುವ ಪರಿಣಾಮಕಾರಿ ಸಂದರ್ಶನ ಕೌಶಲ್ಯಗಳು
೧. ಕಂಪನಿ ಬಗೆಗಿನ ವಿಶ್ಲೇಷಣೆ –
ಯಾವುದೇ ಕಂಪನಿಯಲ್ಲಿ ಸಂದರ್ಶನ್ನಕೆ ಹೋಗುವ ಮುನ್ನ ಆ ಕಂಪನಿಯ ಬಗ್ಗೆ ವಿಶ್ಲೇಷಣೆ ನಡೆಸಿ, ಕಂಪನಿ, ಕಂಪನಿಯ ಕೆಲಸ ಕಾರ್ಯಗಳು, ಕಂಪನಿಯ ನಿರ್ವಾಹಕರು ಹೀಗೆ ಹಲವಾರು ವಿಷಯಗಳ ಬಗ್ಗೆ ತಿಳಿಯುವುದು ತುಂಬ ಮುಖ್ಯ. ಸಂದರ್ಶದಲ್ಲಿ  ಸಂದರ್ಶಕರು ಕಂಪನಿ ಬಗ್ಗೆ ನಿಮಗೆ ಏನು ಗೊತ್ತು? ಎಂದು ಕೇಳಿದಾಗ, ನೀವು ತಲೆ ಕೆಳಗೆ ಮಾಡಿ ಏನು ಗೊತ್ತಿಲ್ಲ ಎಂಬುದು ಸರಿಯಲ್ಲ, ಯಾಕಂದ್ರೆ ನೀವು ಆ ಕಂಪನಿಯ ಕೆಲಸಕ್ಕಾಗಿ ಹೋದ ಮೇಲೆ, ಕಂಪನಿಯ ಬಗ್ಗೆ ತಿಳಿದಿರುವು ಬಹಳ ಮುಖ್ಯ .
೨. ಪರೀಕ್ಷೆಗಳಿಗೆ ತಯಾರಿ ನಡೆಸಿ –ಸರ್ವೇ ಸಾಮಾನ್ಯವಾಗಿ ಕಂಪೆನಿಗಳ ಸಂದರ್ಶನದಲ್ಲಿ ನಿಮ್ಮ ಜ್ಞಾನ ಹಾಗು ಬರವಣಿಗೆಯ ಪರೀಕ್ಷೆ ನಡೆಸಲಾಗುತ್ತೆ. ಅದಕ್ಕೆ ಬೇಕಾದ  ಎಲ್ಲ ತಯಾರಿಕೆಗಳು ಅಂದರೆ, ನಿಮ್ಮ ವಿದ್ಯಾಭ್ಯಾಸಕ್ಕೆ ಅನುಗುಣವಾಗಿ ತಿಳುವಳಿಕೆ, ಸಾಮಾನ್ಯ ಜ್ಞಾನ, ಕಂಪನಿ  ಬಗೆಗಿನ ಒoದಷ್ಟು ಮಾಹಿತಿ ತಿಳಿದಿರಬೇಕು.
೩. ಉತ್ತಮ body language –ಕಂಪನಿಯ ಸಂದರ್ಶಕರು ಕೇಳುವ ಎಲ್ಲ ಪ್ರಶ್ನೆಗಳಿಗೆ ನಿಮ್ಮಲ್ಲಿ ಉತ್ತರವಿದ್ದರೆ ಸಾಲದು, ಅದನ್ನು ಹೇಳುವೆ ರೀತಿ-ನೀತಿ ಬಹಳ ಮುಖ್ಯ. ನಿಮ್ಮ ಆತ್ಮವಿಶ್ವಾಸ ನಿಮ್ಮ ನಡೆನುಡಿಯಲ್ಲಿ ಕಾಣಬೇಕು. ನಿಮ್ಮ ಚಲನ-ವಲನಗಳು ಎಲ್ಲವೂ ವೃತ್ತಿಪರವಾಗಿ ಇರಬೇಕು. 
೪. ಉತ್ತಮ ಕಣ್ಣಿನ ಸಂಪರ್ಕ ಅಥವಾ eye contact ಇರಬೇಕು –ಸಂದರ್ಶಕರು ಕೇಳುವ ಎಲ್ಲ ಪ್ರಶ್ನೆಗಳಿಗೂ ನೀವು ಧೈರ್ಯವಾಗಿ, ಅವರ ಕಣ್ಣನ್ನು ನೋಡುತ್ತಾ ಉತ್ತರಿಸಬೇಕು, ಇದು ನಿಮ್ಮ ವಿಶ್ವಾಸದ ಸಂಕೇತವಾಗಿರುತ್ತೆ. ನೀವು ಎಲ್ಲೊ ನೋಡುತ್ತಾ ಉತ್ತರಿಸುವುದು, ಉತ್ತರ ನೀಡುವಾಗ ತತ್ತರಿಸುವುದು ಇವೆಲ್ಲವನ್ನೂ ತಪ್ಪಿಸಬೇಕು.
5. ಪ್ರೇರೇಪಿತವಾಗಿರಿ –ನಿಮ್ಮ ಆತ್ಮವಿಶ್ವಾಸ, ನಂಬಿಕೆ, ನಗು ಇವೆಲ್ಲವೂ, ನೀವು ಪ್ರೇರೇಪಿತರಾಗಿದ್ದೀರಿ  ಎಂಬುವುದನ್ನು ಸೂಚಿಸುತ್ತದೆ. ಹಾಗಾಗಿ ಏನೆ ಆದರೂ ನಿಮ್ಮ ಛಲ ಮತ್ತು ಧೈರ್ಯವನ್ನು ಕಳೆದುಕೊಳ್ಳಬೇಡಿ.
6. ಪ್ರಾಯೋಗಿಕವಾಗಿರಿ –ಸಂದರ್ಶನ ಅಂದ ಮೇಲೆ ಪಾಸ್ ಅಥವಾ ಫೇಲ್  ಇದ್ದದ್ದೇ. ಎರಡನ್ನು ಸಮಾನವಾಗಿ  ಸ್ವೀಕರಿಸುವ ಮನೋಭಾವ ನಿಮ್ಮದಾಗಿರಲಿ. 
7. ನಕಲಿ ಮಾಡಬೇಡಿ –ನಿಮಗೆ ಗೊತ್ತಿಲ್ಲದಿರುವುದನ್ನು, ಗೊತ್ತಿದೆ ಎಂದು ನಕಲಿ ಮಾಡಬಾರದು. ಸಂದರ್ಶಕರು ಕೇಳುವ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಗೊತ್ತಿಲ್ಲದೇ ಇದ್ದರು, ಗೊತ್ತಿದೆ ಎಂದು ಸುಳ್ಳು ಆಶ್ವಾಸನೆ ಕೊಡೋದಕ್ಕಿಂತಲೂ “ಗೊತ್ತಿಲ್ಲ” ಎಂದು ಪ್ರಾಮಾಣಿಕವಾಗಿ ಹೇಳಿ. ಆ ಪ್ರಾಮಾಣಿಕತೆ ನಿಮ್ಮನ್ನು ವಿಶ್ವಾಸಾರ್ಹ ವ್ಯಕ್ತಿಯನ್ನಾಗಿ ಮಾಡುತ್ತದೆ.
“ಉತ್ತಮ ಕೆಲಸ ಬೇಕೆಂಬ ಕನಸು, ನಿಮ್ಮ ಕೌಶಲ್ಯಗಳಿಂದಾಗಿಯೇ ಆಗುವುದು ನನಸು”

Related Posts

error: Content is protected !!
Scroll to Top