Kannada CADD Nest Private Limited

ವಿದ್ಯಾರ್ಥಿಗಳು ಯಾಕೆ ಅಡ್ವಾನ್ಸಡ್ ಎಕ್ಸೆಲ್ ಕಲಿಯಲೇಬೇಕು?

ವಿದ್ಯಾರ್ಥಿಗಳು ಯಾಕೆ ಅಡ್ವಾನ್ಸಡ್ ಎಕ್ಸೆಲ್ ಕಲಿಯಲೇಬೇಕು?

ಕಂಪ್ಯೂಟರ್‌ ಬಳಕೆದಾರರು ಇಂದು ಮೈಕ್ರೊಸಾಫ್ಟ್‌ ಉತ್ಪನ್ನಗಳನ್ನು ಒಂದಲ್ಲ ಒಂದು ರೀತಿ ಬಳಸಿಯೇ ಬಳಸುತ್ತಾರೆ .ಎಂಎಸ್‌ ವರ್ಡ್‌, ಎಕ್ಸೆಲ್‌ ಸೇರಿದಂತೆ ವಿವಿಧ ಟೂಲ್‌ಗಳ ಬಳಕೆ ನಿತ್ಯ ಜೀವನಕ್ಕೆ ಅನಿವಾರ್ಯವಾಗಿಬಿಟ್ಟಿದೆ. ಮುಖ್ಯವಾಗಿ ವಾಣಿಜ್ಯ ವಿಭಾಗದಲ್ಲಿ ಕೆಲಸ ಮಾಡುವವರಿಗೆ ಮೈಕ್ರೊಸಾಫ್ಟ್‌ ಎಕ್ಸೆಲ್‌ ಕಲಿಯುವುದು ಅತ್ಯಂತ ಅವಶ್ಯಕ. ಎಕ್ಸೆಲ್‌ ಬೇಸಿಕ್‌ ಮಾತ್ರವಲ್ಲದೆ ಅಡ್ವಾನ್ಸಡ್‌ ಎಕ್ಸೆಲ್‌ ಕಲಿತರೆ ನೀವು ಕರಿಯರ್‌ನಲ್ಲಿ ಸಾಕಷ್ಟು ಸಾಧನೆ ಮಾಡಬಹುದಾಗಿದೆ. ಕನ್ನಡ ಕ್ಯಾಡ್‌ನೆಸ್ಟ್‌ ಓದುಗ ಮಿತ್ರರಿಗೆ ಇಂದು ಅಡ್ವಾನ್ಸಡ್‌ ಎಕ್ಸೆಲ್‌ ಕುರಿತು ಹೆಚ್ಚಿನ ಮಾಹಿತಿ ನೀಡುವ ಸಲುವಾಗಿ ಈ ಬ್ಲಾಗ್‌ ಬರೆಯಲಾಗಿದೆ.

ಅಡ್ವಾನ್ಸಡ್‌ ಎಕ್ಸೆಲ್‌ ಎಂದರೇನು?

ಸಾಮಾನ್ಯ ಎಂಎಸ್‌ ಎಕ್ಸೆಲ್‌ಗೆ ಹೋಲಿಸಿದರೆ ಅಡ್ವಾನ್ಸಡ್‌ ಎಕ್ಸೆಲ್‌ ಎನ್ನುವುದು ನೂರಾರು ಹೆಚ್ಚುವರಿ ಪ್ರಯೋಜನಗಳನ್ನು ಹೊಂದಿರುವ ಅಮೂಲ್ಯವಾದ ಟೂಲ್‌ ಆಗಿದೆ. ಮೈಕ್ರೊಸಾಫ್ಟ್‌ ತನ್ನ ಅಡ್ವಾನ್ಸ್‌ ಎಕ್ಸೆಲ್‌ನಲ್ಲಿ ಇತ್ತೀಚಿನ ಮತ್ತು ಸುಧಾರಿತ ಫೀಚರ್‌ಗಳನ್ನು ನೀಡುತ್ತಿದೆ. ಗ್ರಾಫಿಕ್ಸ್‌, ಟೇಬಲ್ಸ್‌ ಇತ್ಯಾದಿಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಕೆ ಮಾಡಬಹುದು. ಎಂಐಎಸ್‌ ಅನಾಲಿಸ್ಟ್‌, ಡೇಟಾ ಅನಾಲಿಸ್ಟ್‌, ಬಿಸ್ನೆಸ್‌ ಅನಾಲಿಸ್ಟ್‌ ಇತ್ಯಾದಿ ಪ್ರಮುಖ ಕರಿಯರ್‌ ಆಯ್ಕೆ ಮಾಡಿಕೊಳ್ಳುವವರಿಗಂತೂ ಅಡ್ವಾನ್ಸಡ್‌ ಎಕ್ಸೆಲ್‌ ಕಲಿಕೆಯು ಅತ್ಯಂತ ಅನಿವಾರ್ಯವಾಗಿದೆ. ನೀವು ಸಾಮಾನ್ಯ ಅಕೌಂಟೆಂಟ್‌ ಉದ್ಯೋಗಗಳನ್ನು ಮಾಡಲು ಬಯಸಿದರೂ ಅಡ್ವಾನ್ಸ್‌ ಎಕ್ಸೆಲ್‌ ಕಲಿತರೆ ನೀವು ಬೇಗ ಭಡ್ತಿ ಪಡೆಯಬಹುದಾಗಿದೆ.

ಅಡ್ವಾನ್ಸಡ್‌ ಎಕ್ಸೆಲ್‌ ಕಲಿತರೆ ಏನೆಲ್ಲ ಪ್ರಯೋಜನಗಳು ಇವೆ?

೧. ನೀವು ಕಂಪನಿಗೆ ಹೆಚ್ಚು ಮೌಲ್ಯಯುತ ಉದ್ಯೋಗಿಯಾಗುವಿರಿ

ನೀವು ಕೆಲಸ ಮಾಡಲಿರುವ ಕಂಪನಿಯಲ್ಲಿ ಹೆಚ್ಚು ಜನರು ಅಡ್ವಾನ್ಸಡ್‌ ಎಕ್ಸೆಲ್‌ ಕೌಶಲ ಹೊಂದಿರುವುದಿಲ್ಲ. ಹೆಚ್ಚಿನ ಜನರು ಈ ಕೌಶಲ ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾಗಿರುತ್ತಾರೆ. ನಿಮಗೆ ಈ ಪರಿಣತಿ ಅಥವಾ ಕೌಶಲ್ಯ ದೊರಕಿದರೆ ನೀವು ಕಂಪನಿಯೊಂದರಲ್ಲಿ ಹೆಚ್ಚು ಮೌಲ್ಯಯುತ ಉದ್ಯೋಗಿಯಾಗುವಿರಿ.

ಇದರ ಜೊತೆಗೆ ಇಂತಹ ಕೌಶಲ್ಯ ಹೊಂದಿರುವುದರಿಂದ ನೀವು ಕಂಪನಿಯೊಂದಕ್ಕೆ ಅನಿವಾರ್ಯವಾಗಿ ಬಿಡುವಿರಿ. ನಿಮ್ಮನ್ನು ಕಳೆದುಕೊಳ್ಳಲು ಯಾವುದೇ ಕಂಪನಿ ಇಷ್ಟಪಡದು. ಉದ್ಯೋಗ ಕಡಿತದ ಸಮಯದಲ್ಲಿ ಇಂತಹ ಕೌಶಲ್ಯಗಳು ನಿಮ್ಮನ್ನು ಸುರಕ್ಷಿತವಾಗಿಸುತ್ತದೆ. ಬೇರೆ ಕಂಪನಿಯೂ ನಿಮಗೆ ಬೇಗನೇ ಉದ್ಯೋಗದ ಆಫರ್‌ ನೀಡಬಹುದು. ಉದ್ಯೋಗ ಮಾರುಕಟ್ಟೆಯಲ್ಲಿ ಹೆಚ್ಚು ಕಷ್ಟವಿಲ್ಲದೆ ಉದ್ಯೋಗ ಪಡೆಯಲು ಅಡ್ವಾನ್ಸಡ್‌ ಎಕ್ಸೆಲ್‌ ಸ್ಕಿಲ್‌ ಬೆಂಬಲ ನೀಡುತ್ತದೆ.

೨. ಸಾಕಷ್ಟು ಸಮಯ ಉಳಿಸುತ್ತದೆ

ಈಗ ಹಾರ್ಡ್‌ ವರ್ಕರ್‌ಗಿಂತ ಸ್ಮಾರ್ಟ್‌ ವರ್ಕರ್‌ಗೆ ಎಲ್ಲಿಲ್ಲದ ಆದ್ಯತೆ. ನಿಮ್ಮಲ್ಲಿ ಅಡ್ವಾನ್ಸಡ್‌ ಎಕ್ಸೆಲ್‌ ಕೌಶಲವಿದ್ದರೆ ಕಠಿಣ ಕೆಲಸಗಳನ್ನು ಹೆಚ್ಚು ಸಮಯ ಬಯಸದೆ ತ್ವರಿತವಾಗಿ ಮಾಡಬಹುದು. ಡೇಟಾವನ್ನು ನಿರ್ವಹಿಸಲು ಮತ್ತು ವಿಶ್ಲೇಷಣೆ ಮಾಡಲು ಹೆಚ್ಚು ಸಮಯದ ಅಗತ್ಯ ಬೇಕಾಗುವುದಿಲ್ಲ. ಇದಕ್ಕಾಗಿ ನೀವು ಅಡ್ವಾನ್ಸಡ್‌ ಎಕ್ಸೆಲ್‌ ಕೌಶಲ್ಯ ನಿಮ್ಮದಾಗಿಸಿಕೊಳ್ಳಲೇ ಬೇಕು.

೩. ಜ್ಞಾನ ಮತ್ತು ಮ್ಯಾನೇಜ್‌ಮೆಂಟ್‌ ಕೌಶಲ್ಯ ಹೆಚ್ಚಿಸುತ್ತದೆ

ಅಡ್ವಾನ್ಸಡ್‌ ಎಕ್ಸೆಲ್‌ ಕಲಿತರೆ ನೀವು ಎಕ್ಸೆಲ್‌ ಟೂಲ್‌ನಲ್ಲಿ ಮಾತ್ರವೇ ಪರಿಣತಿ ಪಡೆಯುವುದಲ್ಲ. ಆಡಳಿತ ಕೌಶಲ್ಯಗಳಲ್ಲಿಯೂ ನಿಮ್ಮ ತಜ್ಞತೆ ಹೆಚ್ಚುತ್ತದೆ. ಸೆಲ್‌ ಫಾರ್ಮೆಟಿಂಗ್‌, ಮ್ಯಾಕ್ರೊ ಇತ್ಯಾದಿ ಸಂಕೀರ್ಣ ಫಂಕ್ಷನ್‌ಗಳನ್ನು ಕಲಿತರೆ ನಿಮ್ಮ ಉದ್ಯೋಗದಲ್ಲಿ ಕೆಲಸ ಕಾರ್ಯಗಳು ಸರಾಗವಾಗುತ್ತದೆ. ನಿಮ್ಮ ಮ್ಯಾನೇಜ್‌ಮೆಂಟ್‌ ಕೌಶಲ್ಯವೂ ಹೆಚ್ಚುವುದರಿಂದ ಉದ್ಯೋಗ ಸ್ಥಳದಲ್ಲಿ ನೀವು ಹೆಚ್ಚು ಗುರುತಿಸಲ್ಪಡುವಿರಿ.

ಇದನ್ನೂ ಓದಿ: Tally ERP 9 ಕಲಿಯಿರಿ, GST ಯುಗದಲ್ಲಿ ಬೇಡಿಕೆಯ ಉದ್ಯೋಗಿ ನೀವಾಗಿ

೪. ಅತ್ಯುತ್ತಮ ವೇತನ ಗ್ಯಾರಂಟಿ

ನೀವು ಅಡ್ವಾನ್ಸಡ್‌ ಎಕ್ಸೆಲ್‌ನಲ್ಲಿ ಪರಿಣತಿ ಪಡೆದಿದ್ದರೆ ಕಂಪನಿಗಳು ಹೆಚ್ಚು ವೇತನ ಆಫರ್‌ ಮಾಡಲು ಹಿಂಜರಿಯುವುದಿಲ್ಲ. ನೀವು ವೇತನದ ಕುರಿತು ಚಿಂತಿಸುವ ಅಗತ್ಯವೇ ಇರುವುದಿಲ್ಲ. ವರ್ಷದಿಂದ ವರ್ಷಕ್ಕೆ ಇನ್‌ಕ್ರಿಮೆಂಟ್‌ ಸಹ ಉತ್ತಮವಾಗಿರುತ್ತದೆ. ಯಾಕೆಂದರೆ ಅಡ್ವಾನ್ಸಡ್‌ ಎಕ್ಸೆಲ್‌ ಎನ್ನುವುದು ಅತ್ಯಂತ ಅಮೂಲ್ಯ ಕೌಶಲ್ಯ. ಸಂದೇಹವಿದ್ದರೆ ನೌಕ್ರಿ ಅಥವಾ ಇನ್ಯಾವುದೇ ಉದ್ಯೋಗ ಪೋರ್ಟಲ್‌ಗಳಿಗೆ ಹೋಗಿ ಅಡ್ವಾನ್ಸಡ್‌ ಎಕ್ಸೆಲ್‌ ಸ್ಕಿಲ್‌ಗೆ ಲಭ್ಯವಿರುವ ಉದ್ಯೋಗಗಳ ರಾಶಿಯನ್ನು ಪರಿಶೀಲಿಸಿರಿ.

ಗಮನಿಸಿ: ಕ್ಯಾಡ್‌ನೆಸ್ಟ್‌‌ ಬೆಂಗಳೂರಿನಲ್ಲಿ ಅಡ್ವಾನ್ಸಡ್‌ ಎಕ್ಸೆಲ್‌ ಕೋರ್ಸ್‌ ಅತ್ಯಂತ ಕಡಿಮೆ ದರದಲ್ಲಿ ಲಭ್ಯವಿದ್ದು, ಹೆಚ್ಚಿನ ಮಾಹಿತಿಗೆ ಕ್ಯಾಡ್‌ನೆಸ್ಟ್‌‌ ಬಸವನಗುಡಿ, ಕ್ಯಾಡ್‌ನೆಸ್ಟ್‌‌ ಮಲ್ಲೇಶ್ವರಂ, ಕ್ಯಾಡ್‌ನೆಸ್ಟ್‌‌ ರಾಜಾಜಿನಗರ ಮತ್ತು ಕ್ಯಾಡ್‌ನೆಸ್ಟ್‌‌ ಶೇಷಾದ್ರಿಪುರಂ ಕೌಶಲ ತರಬೇತಿ ಕೇಂದ್ರಗಳಿಗೆ ಭೇಟಿ ನೀಡಬಹುದು.

CADD Nest Private Limited Computer Training Institute | Best Spoken English training institute in Bangalore | CADD Nest Private Limited CADD Civil / Mechanical / interior design courses Training | Best Cad Training Institute In Bengaluru | CADD Nest Private Limited CADD Courses | Computer training centre – IT skills |The best IT courses | Fast track training | Customised courses | Advanced Digital Marketing Course | 2D and 3D Animation, VFX Course | CADD Nest Private Limited Institute: Best Training Institute for e-Accounting Tally Prime | [Tally ERP9 Including GST (Goods and Services Tax) Finance, Banking, Taxation, e-Filing, TDS, Income Tax], Computers [Basics of Computer, Complete MS-Office, Advanced MS-Excel], Personality Development [Professional English Speaking], Multimedia Designing [Web Designing, Graphic Designing (DTP), AutoCAD, 3D’s Max VFx Animation], [Fashion  Designing, Advanced Diploma in Computer Applications, IT Training  and Internship etc. Join our Institute for 100% Job Guaranteed Courses and Training Classes in Rajajinagar, Basavanagudi , Sheshadripuram & Malleshwaram | THE BEST DIGITAL MARKETING TRAINING INSTITUTE IN BANGALORE | No.1 Software Training Institute in bangalore | CADD Nest Private Limited, No.1 Software (IT) Training Institute in Bangalore | balc computer education | balc rajajinagar
balc computer education near me | balc computer education fees | balc computer education website | balc computer centre  | balc computer training institute | balc near me | balc bangalore | balc computer education near me | balc full form | balc cadd centre | balc cadd | balc cadd address | balc cadd phone |balc cadd near me | balc computer education rajajinagar | balc computer education basavanagudi
balc computer education seshadripuram | balc computer education malleshwaram | balc cadd malleswaram | balc cadd seshadripuram
balc cadd rajajinagar | balc cadd basavanagudi | balc cadd centre malleswaram | balc cadd centre sheshadripuram | balc cadd centre rajajinagar
balc cadd centre basavanagudi | JOB Oriented & Certification Training Courses | Popular & Trending courses | Best Tally ERP 9 Training in bangalore & Best Tally ERP 9 Training Institute in Rajajinagar, Basavanagudi , Sheshadripuram & Malleshwaram | Advanced Digital Marketing Course | CADD Nest Private Limited – Bharatiya Academy of Linguistics and Communication | The best computer training centre in Magadi Road, Bangalore, Karnataka.
best computer training institute | Join CADD Nest Private Limited | CADD courses | IT courses | Animation courses | Digital Marketing courses | Spoken English | Handwriting courses | CADD Nest Private Limited computer training centre in Rajajinagar, Basavanagudi , Sheshadripuram & Malleshwaram offers wide  range of skill development courses | CADD Nest Private Limited CADD Courses | 

Related Posts

error: Content is protected !!
Scroll to Top