Kannada CADD Nest Private Limited

ವಿದ್ಯಾರ್ಥಿಗಳೇ ನಿಮಗೆ ಈ ಹಲವು ಫೆಲೋಶಿಪ್‌ಗಳ ಬಗ್ಗೆ ಗೊತ್ತೆ?

ವಿದ್ಯಾರ್ಥಿಗಳೇ ನಿಮಗೆ ಈ ಹಲವು ಫೆಲೋಶಿಪ್‌ಗಳ ಬಗ್ಗೆ ಗೊತ್ತೆ?

ಕನ್ನಡ ಕ್ಯಾಡ್‌ನೆಸ್ಟ್‌ ವಿದ್ಯಾರ್ಥಿಗಳಿಗೆ ಮತ್ತು ಬ್ಲಾಗ್‌ ಓದುಗರಿಗೆ ಈ ಬಾರಿ ಮೂರು ವಿಶೇಷ ಫೆಲೋಶಿಪ್‌ಗಳ ಕುರಿತು ಮಾಹಿತಿ ನೀಡುತ್ತಿದ್ದೇವೆ. ಬೆಂಗಳೂರಿನ ಬಸವನಗುಡಿ, ರಾಜಾಜಿನಗರ, ಮಲ್ಲೇಶ್ವರಂ ಮತ್ತು ಶೇಷಾದ್ರಿಪುರಂ ಕ್ಯಾಡ್‌ನೆಸ್ಟ್‌‌ ಕೌಶಲ್ಯ ತರಬೇತಿ ಕೇಂದ್ರದಲ್ಲಿ ಅಡ್ಮಿಷನ್‌ ಆಗಲು ಈ ಕೂಡಲೇ ನಮ್ಮನ್ನು ಸಂಪರ್ಕಿಸಬಹುದು. ಸಂಪರ್ಕ ವಿವರ ಇಲ್ಲಿದೆ.

Teach for India Fellowship

ದೇಶದ ಜನಪ್ರಿಯ ಫೆಲೋಶಿಪ್‌ ಯೋಜನೆಗಳಲ್ಲಿ ಇದು ಒಂದಾಗಿದೆ. ದೇಶದ ಶಿಕ್ಷಣ ಕ್ರಾಂತಿಯಲ್ಲಿ ಕ್ರಾಂತಿಯಲ್ಲಿ ಪಾಲ್ಗೊಳ್ಳಲು ಟೀಚ್ ಫಾರ್ ಇಂಡಿಯಾ ಫೆಲೋಶಿಪ್ ಯುವಜನತೆಗೆ ಒಂದು ಉತ್ತಮ ಅವಕಾಶ ಇದಾಗಿದೆ.

ಈ ಕಾರ್ಯಕ್ರಮದ ಮೂಲಕ ವಿವಿಧ ಶೈಕ್ಷಣಿಕ ಹಿನ್ನಲೆಯನ್ನು ಹೊಂದಿದ ಮತ್ತು ವಿವಿಧ ವೃತ್ತಿಗಳಲ್ಲಿ ಅನುಭವವನ್ನು ಹೊಂದಿದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡು ಫೆಲೋಶಿಪ್‌ ನೀಡಲಾಗುತ್ತದೆ. ಕೆಲವು ತಿಂಗಳುಗಳ ತರಬೇತಿಯ ನಂತರ ಶೈಕ್ಷಣಿಕವಾಗಿ ಮತ್ತು ಸಂಪನ್ಮೂಲದ ದೃಷ್ಟಿಯಿಂದ ಹಿಂದುಳಿದ ಶಾಲೆಗಳಲ್ಲಿ ಎರಡು ವರ್ಷಗಳ ಅವಧಿಯವರೆಗೆ ಬೋಧನೆ ಮಾಡಲು ಕಳಿಸಲಾಗುತ್ತದೆ.

ಇಂತಹ ಶಾಲೆಗಳಲ್ಲಿ  ಟೀಚ್‌ ಫಾರ್‌ ಇಂಡಿಯಾ ಕಾರ್ಯಕ್ರಮದ ಮೂಲಕ ಆಯ್ಕೆಯಾದ ಫೇಲೋಗಳು ವಿಭಿನ್ನ ಹಾಗು ಆಧುನಿಕ ಕಲಿಕಾ ವಿಧಾನಗಳ ಮೂಲಕ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ಕಾರ್ಯವನ್ನು ಮಾಡುತ್ತಾರೆ.  ಬೋಧನೆಯ ಜೊತೆಜೊತೆಗೆ ಅಭ್ಯರ್ಥಿಗಳ ನಾಯಕತ್ವ ಗುಣಗಳನ್ನು, ಕೌಶಲಗಳನ್ನು ವೃದ್ಧಿಸುವ ನಿಟ್ಟಿನಲ್ಲಿ ಕೂಡ ತರಬೇತಿಯನ್ನು ನೀಡಲಾಗುತ್ತದೆ.

ಹೆಚ್ಚಿನ ವಿವರಕ್ಕೆ ಟೀಚ್ ಫಾರ್‌ ಇಂಡಿಯಾ ವೆಬ್‌ಸೈಟ್‌ಗೆ ಭೇಟಿ ನೀಡಿ

Youth for India Fellowship

ಇದು ಸಹ ಇನ್ನೊಂದು ಆಕರ್ಷಕ ಫೆಲೋಶಿಪ್‌ ಯೋಜನೆ. ಯುವಕರಿಗೆ ಈಗ ಕಾರ್ಪೊರೆಟ್‌ ಜಗತ್ತಿನ ಕುರಿತು ಹೆಚ್ಚು ಆಕರ್ಷಣೆಯಿದೆ. ಆದರೆ, ಗ್ರಾಮೀಣ ಕ್ಷೇತ್ರದಲ್ಲಿ ಮೂಲಭೂತ ಸಮಸ್ಯೆಗಳನ್ನು ಸರಿಪಡಿಸಲು ಯುವಕರು ಮುಂದಾಗಬೇಕಿದೆ. ನಮ್ಮ ಯುವಕರಿಗೆ ಈ ರೀತಿ ಗ್ರಾಮೀಣ ಭಾಗಗಳಲ್ಲಿ ಕೆಲಸ ಮಾಡುವ ಆಸಕ್ತಿ ಇರುತ್ತದೆ. ಆದರೆ, ಅವಕಾಶಗಳು ಸಿಕ್ಕಿರುವುದಿಲ್ಲ.

ಈ ನಿಟ್ಟಿನಲ್ಲಿ ಯೂತ್‌ ಫಾರ್‌ ಇಂಡಿಯಾ ಫೆಲೋಶಿಪ್‌ ಕಾರ್ಯಕ್ರಮವು ಕೆಲಸ ಮಾಡುತ್ತಿದೆ.

ಗ್ರಾಮೀಣ ಪ್ರದೇಶಗಳ ಅಭಿವೃದ್ದಿಗೆಂದು ಮೀಸಲಿರುವ ಕೆಲವು ಸರ್ಕಾರೇತರ ಸಂಸ್ಥೆಗಳಲ್ಲಿ ಎಷ್ಟೋ ಬಾರಿ ನುರಿತ ಅನುಭವಿ ವ್ಯಕ್ತಿಗಳ ಕೊರತೆ ಇರುತ್ತದೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಂಸ್ಥೆಯು ಕೆಲವು ಸರ್ಕಾರೇತರ ಸಂಸ್ಥೆಗಳ ಜೊತೆ ಸೇರಿ ಈ ಫೆಲೋಶಿಪ್‌ ನೀಡುತ್ತದೆ. ಆಸಕ್ತರು ಈ ಫೆಲೋಶಿಪ್‌ ಕುರಿತು ಹೆಚ್ಚಿನ ಮಾಹಿತಿಯನ್ನು Youth for India Fellowship ವೆಬ್‌ಸೈಟ್‌ ಮೂಲಕ ಪಡೆಯಬಹುದು.

Lamp Fellowship

ಲ್ಯಾಂಪ್ ಫೆಲೋಶಿಪ್ ಕಾರ್ಯಕ್ರಮವು ಪಿ.ಆರ್.ಎಸ್. ಲೆಜಿಸ್ಲೇಟಿವ್ ರೀಸರ್ಚ್ ಸಂಸ್ಥೆಯ ಅಡಿಯಲ್ಲಿ  ನಡೆಯುತ್ತಿದೆ. ಇದು ೨೦೧೦ರಲ್ಲಿ ಆರಂಭವಾದ ಜನಪ್ರಿಯ ಫೆಲೋಶಿಪ್‌ ಕಾರ್ಯಕ್ರಮವಾಗಿದೆ. ನಿಮಗೆ ಸಂಸತ್‌ನಲ್ಲಿ ಕೆಲಸ ಮಾಡಲು ಆಸಕ್ತಿ ಇರಬಹುದು. ದೇಶದ ಯುವಕರಿಗೆ ಸಂಸತ್ತಿನ ಸದಸ್ಯರ ಜೊತೆ ಕಾರ್ಯನಿರ್ವಹಿಸುವ ಅಪೂರ್ವ ಅವಕಾಶವನ್ನು ಲ್ಯಾಂಪ್‌ ಫೆಲೋಶಿಪ್‌ ಕಾರ್ಯಕ್ರಮವು ನೀಡುತತಿದೆ. ಆಯ್ಕೆಯಾದ ವಿದ್ಯಾರ್ಥಿಗಳು ಸುಮಾರು ೧೧ ತಿಮಗಳ ಕಾಲ ಸಂಸತ್ತಿನ ಸದಸ್ಯರ ಜೊತೆ ಕೆಲಸ ಮಾಡಬಹುದು. ಕೆಲಸ ಮಾಡುವ ಅವಧಿಯು ಮುಂಗಾರು ಅಧಿವೇಶನದಿಂದ ಆರಂಭವಾಗಿ ಬಜೆಟ್ ಅಧಿವೇಶನದ ತನಕ ಇರುತ್ತದೆ.

ಈ ಫೆಲೋಶಿಪ್‌ಗೆ ಆಯ್ಕೆಯಾದ ಅಭ್ಯರ್ಥಿಗಳು ಸಂಸತ್‌ ಸದಸ್ಯರಿಗೆ ಸಂಶೋಧನಾ ಮಾಹಿತಿ ಒದಗಿಸಲು ಸಹಾಯ ಮಾಡುತ್ತಾರೆ. ದೇಶದ ವಿದೇಶಾಂಗ ನೀತಿ, ಆಹಾರ ಭದ್ರತೆ, ಆರ್ಥಿಕ ನೀತಿ ಇತ್ಯಾದಿ ಕ್ಷೇತ್ರಗಳಲ್ಲಿ ಸದಸ್ಯರ ಜೊತೆ ಕೆಲಸ ಮಾಡುವ ಅಪೂರ್ವ ಅವಕಾಶ ಪಡೆಯುತ್ತಾರೆ.

ಲ್ಯಾಂಪ್‌ ಫೆಲೋಶಿಪ್‌ ಮಾಹಿತಿಗೆ ವೆಬ್‌

ಬದುಕಿನಲ್ಲಿ ಹೊಸ ಅನುಭವ ಪಡೆಯಲು, ನಿಮ್ಮ ಪರ್ಸನಾಲಿಟಿ ಡೆವಲಪ್‌ಮೆಂಟ್‌ಗೆ ಫೆಲೋಶಿಪ್‌ ಕಾರ್ಯಕ್ರಮಗಳು ಸಾಥ್‌ ನೀಡುತ್ತವೆ. ಕನ್ನಡ ಕ್ಯಾಡ್‌ನೆಸ್ಟ್‌‌ನಲ್ಲಿ ಪ್ರಕಟಗೊಂಡ ಪರ್ಸನಾಲಿಟಿ ಟಿಪ್ಸ್‌ಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Related Posts

error: Content is protected !!
Scroll to Top