ವಿದ್ಯಾರ್ಥಿಗಳಿಗೆ, ಪೋಷಕರಿಗೆ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಈ ಅಕ್ಟೋಬರ್ ಎಂದಿನಂತೆ ಇಲ್ಲ. ಪ್ರತಿಶಾಲೆ ಕಾಲೇಜುಗಳಲ್ಲಿ ಜೂನ್ ಬಳಿಕ ಕಾಣುತ್ತಿದ್ದ ಗಡಿಬಿಡಿ ಈ ತಿಂಗಳಲ್ಲಿ ಕಾಣುತ್ತಿದೆ. ಕೋವಿಡ್-೧೯ ಎಂಬ ಸಾಂಕ್ರಾಮಿಕವು ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಸೇರಿದಂತೆ ಈ ವರ್ಷ ಸಾಕಷ್ಟು ಸವಾಲುಗಳನ್ನೇ ನೀಡಿತ್ತು. ಇದೀಗ ನಾಡಿದ್ದು ಹದಿನೈದರ ಬಳಿಕ ಎಲ್ಲಾ ಶಾಲೆ ಕಾಲೇಜುಗಳು ತೆರೆಯುವ ಸೂಚನೆಯಿದೆ. ಬೆಂಗಳೂರಿನ ಕ್ಯಾಡ್ನೆಸ್ಟ್ ಕೌಶಲ ಅಭಿವೃದ್ಧಿ ಸಂಸ್ಥೆಯಂತಹ ಸ್ಕಿಲ್ ಸೆಂಟರ್ಗಳು ಈಗಾಗಲೇ ತೆರೆದಿದ್ದು, ವಿದ್ಯಾರ್ಥಿಗಳ ಅಡ್ಮಿಷನ್ ಆರಂಭವಾಗಿದೆ. ನಮ್ಮ ಆನ್ಲೈನ್ ತರಗತಿಗಳೂ ಇದ್ದು, ವಿದ್ಯಾರ್ಥಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಆನ್ಲೈನ್ ಅಥವಾ ಆಫ್ಲೈನ್ ಕ್ಲಾಸ್ಗೆ ಸೇರಬಹುದು.
ಈ ವರ್ಷ ವಿದ್ಯಾರ್ಥಿಗಳು ಗಮನದಲ್ಲಿಟ್ಟುಕೊಳ್ಳಬೇಕಾದ ೧೦ ಸಂಗತಿಗಳು ಇಲ್ಲಿವೆ.
1
ಆರೋಗ್ಯದ ಬಗ್ಗೆ ಅಲಕ್ಷ್ಯ ಬೇಡ ಎನ್ನುವುದನ್ನು ಈ ದಿನದಿಂದಲೇ ವಿದ್ಯಾರ್ಥಿಗಳು ಗಮನದಲ್ಲಿಟ್ಟುಕೊಳ್ಳಬೇಕು. ಶಾಲಾ, ಕಾಲೇಜು ಅಥವಾ ತರಬೇತಿ ಕೇಂದ್ರಗಳಲ್ಲಿ ಸ್ನೇಹಿತ, ಸ್ನೇಹಿತೆಯರೆಂದು ತುಂಬಾ ಹತ್ತಿರ ಕುಳಿತು ಮಾತನಾಡುವುದು, ಹಗ್ ಮಾಡುವುದು, ಆಟವಾಡುವುದು ಬೇಡ. ಸಾಮಾಜಿಕ ಅಂತರವನ್ನು ಪಾಲಿಸುವುದನ್ನು ಪ್ರತಿಕ್ಷಣ ಮರೆಯಬೇಡಿ.
2
ನಿಮ್ಮ ಬ್ಯಾಗ್ನಲ್ಲಿ ಸ್ಯಾನಿಟೈಜರ್ ಇಟ್ಟುಕೊಳ್ಳಲು ಮರೆಯಬೇಡಿ. ನಮ್ಮ ಕ್ಯಾಡ್ನೆಸ್ಟ್ ತರಬೇತಿ ಕೇಂದ್ರಗಳಲ್ಲಿ ಕೈಗಳನ್ನು ಸ್ಯಾನಿಟೈಜರ್ ಮಾಡಲು ಸಾಕಷ್ಟು ವ್ಯವಸ್ಥೆಯನ್ನು ಮಾಡಿರುತ್ತೇವೆ. ಕ್ಲಾಸ್ಗೆ ಪ್ರವೇಶಿಸುವ ಮೊದಲು ಸ್ಯಾನಿಟೈಜರ್ ಮಾಡಲು ಮರೆಯಬೇಡಿ. ಈ ಅಕ್ಟೋಬರ್ನಿಂದ ನೀವೆಲ್ಲ ಬ್ಯಾಗ್ನಲ್ಲಿ ಟಿಫಿನ್ ಬಾಕ್ಸ್, ಪುಸ್ತಕಗಳು… ಇತ್ಯಾದಿಗಳ ಜೊತೆ ಸ್ಯಾನಿಟೈಜರ್ವೊಂದನ್ನು ಇಟ್ಟುಕೊಳ್ಳಲು ಮರೆಯಬೇಡಿ.
3
ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಸೌಂದರ್ಯ ಪ್ರಜ್ಞೆ ಜಾಗೃತವಾಗಿರುತ್ತದೆ. ಹುಡುಗರನ್ನು ಸೆಳೆಯಬೇಕೆಂದು ಹುಡುಗಿಯರು, ಹುಡುಗಿಯರನ್ನು ಸೆಳೆಯಬೇಕೆಂದು ಹುಡುಗರು ಕಲಿಕೆಯ ಹಂತದಲ್ಲಿ ಕಸರತ್ತು ಮಾಡುವುದು ಸಹಜ. ಆದರೆ, ಈ ಕೋವಿಡ್-೧೯ ಸಂಕಷ್ಟದ ಸಮಯದಲ್ಲಿ ಚೆಲ್ಲಾಟಗಳಿಗೆ ಬ್ರೇಕ್ ಹಾಕಿ. ನನ್ನ ಮುಖ ಕಾಣದು ಎಂದು ಮುಖದಿಂದ ಮಾಸ್ಕ್ ತೆಗೆಯುತ್ತ ಇರಬೇಡಿ. ಸದ್ಯ ಮಾಸ್ಕ್ ಧರಿಸುವುದೇ ಸೌಂದರ್ಯ ಮತ್ತು ಆರೋಗ್ಯಕ್ಕೆ ಅಗತ್ಯ ಎಂದು ತಿಳಿಯಿರಿ. ಬೇಕಿದ್ದರೆ ಮಾರುಕಟ್ಟೆಯಲ್ಲಿ ದೊರಕುವ ಆಕರ್ಷಕ ಮತ್ತು ಮ್ಯಾಚಿಂಗ್ ಮಾಸ್ಕ್ಗಳನ್ನು ಧರಿಸಿರಿ.
4
ನಿಮಗೆ ಈ ವರ್ಷದ ಕಲಿಕೆ ಪ್ರತಿವರ್ಷದಂತೆ ಇರುವುದಿಲ್ಲ. ಸಿಲೆಬಸ್ಗಳಿಗೆ ಕತ್ತರಿ ಹಾಕುವ ಸಾಧ್ಯತೆಯೂ ಇರಬಹುದು. ಮುಂದಿನ ಶೈಕ್ಷಣಿಕ ವರ್ಷದ ಮೊದಲು ಸಿಲೆಬಸ್ ಮುಗಿಸುವ ಒತ್ತಡ ಇರುತ್ತದೆ. ಹೀಗಾಗಿ, ನಿಮಗೆ ಈ ಬಾರಿ ಅತ್ಯಂತ ಕಡಿಮೆ ಸಮಯ ದೊರಕಲಿದೆ. ಇಂದಿನಿಂದ ಸಮಯ ವ್ಯರ್ಥ ಮಾಡದೆ ಪಠ್ಯ ಮತ್ತು ನಿಮ್ಮ ಭವಿಷ್ಯಕ್ಕೆ ಪೂರಕವಾದ ಕೋರ್ಸ್ಗಳನ್ನು ಕಲಿಯಲು ಆದ್ಯತೆ ನೀಡಿ.
5
ಕೋವಿಡ್-೧೯ನಿಂದಾಗಿ ಇನ್ನು ಕೆಲವು ವರ್ಷ ಉದ್ಯೋಗ ಜಗತ್ತಿನಲ್ಲಿ ಹೆಚ್ಚು ಸವಾಲು, ಸ್ಪರ್ಧೆ ಇರುತ್ತದೆ. ನಿಮ್ಮಲ್ಲಿರುವ ಪಿಯುಸಿ, ಡಿಗ್ರಿ ಸರ್ಟಿಫಿಕೇಟ್ಗಳಷ್ಟೇ ಉದ್ಯೋಗ ಪಡೆಯಲು ಸಾಕಾಗದು, ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉದ್ಯೋಗವೊಂದಕ್ಕೆ ನೀವು ಹೆಚ್ಚುವರಿಯಾಗಿ ಯಾವೆಲ್ಲ ಕೌಶಲ್ಯ ಹೊಂದಿರುವಿರಿ ಎನ್ನುವುದು ಮುಖ್ಯವಾಗುತ್ತದೆ. ಹೀಗಾಗಿ ಸಮಯ ವ್ಯರ್ಥ ಮಾಡದೆ ಹೊಸ ಸ್ಕಿಲ್ಗಳನ್ನು, ಸರ್ಟಿಫಿಕೇಟ್ಗಳನ್ನು ಪಡೆದು ನಿಮ್ಮ ರೆಸ್ಯೂಂನ ತೂಕ ಹೆಚ್ಚಿಸಿಕೊಳ್ಳಿ.
6
ನಿಮ್ಮ ಸಂವಹನ ಕೌಶಲ್ಯಗಳನ್ನು ವೃದ್ಧಿಸಿಕೊಂಡರೆ ಮಾತ್ರ ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅವಕಾಶಗಳನ್ನು ಪಡೆಯಬಹುದು. ಮುಖ್ಯವಾಗಿ ನಿಮಗೆ ಇಂಗ್ಲಿಷ್ನಲ್ಲಿ ಮಾತನಾಡಲು ತಿಳಿದಿರಲೇಬೇಕು ಎಂಬಂತಹ ಪರಿಸ್ಥಿತಿ ಇದೆ. ಕ್ಯಾಡ್ನೆಸ್ಟ್ನಲ್ಲಿರುವ ಅನನ್ಯ ಸ್ಪೋಕನ್ ಇಂಗ್ಲಿಷ್ ಕೋರ್ಸ್ಗೆ ಈಗಲೇ ಸೇರುವ ಮನಸ್ಸು ಮಾಡಿರಿ.
7
ಉದ್ಯೋಗ ಮಾರುಕಟ್ಟೆಯಲ್ಲಿ ಬೇಡಿಕೆಯಲ್ಲಿರುವ ಸ್ಕಿಲ್ಗಳನ್ನು ಕಲಿಯುವುದು ನಿಮ್ಮ ಆದ್ಯತೆಯಾಗಲಿ. ಈಗ ಹೊಸದಾಗಿ ಕೋರ್ಸ್ಗೆ ಸೇರುವವರು ಉತ್ತಮ ಬೇಡಿಕೆಯ ಕೋರ್ಸ್ಗಳನ್ನು ಆಯ್ಕೆ ಮಾಡಿ. ಕ್ಯಾಡ್ನೆಸ್ಟ್ ಕೌಶಲ ಕೇಂದ್ರದಲ್ಲಿರುವ ಕೋರ್ಸ್ಗಳ ಲಿಸ್ಟ್ ಇಲ್ಲಿದ್ದು, ಪರಿಶೀಲಿಸಬಹುದು.
8
ವಿದ್ಯಾರ್ಥಿಗಳು ಭಯದಿಂದ ಬದುಕುವ ಬದಲು, ಜಾಗೃತಿಯಿಂದ ಬದುಕಲು ಕಲಿಯಬೇಕು. ಈ ವರ್ಷ ಇದು ಕೊರೊನಾ ಕಲಿಸಿದ ಪಾಠವೆಂದೇ ತಿಳಿಯಬಹುದು. ಇದು ನಿಮ್ಮನ್ನು ನೀವು ಸ್ಟ್ರಾಂಗ್ ಮಾಡಿಕೊಳ್ಳಲು ಸಿಕ್ಕ ಅವಕಾಶವೆಂದೇ ತಿಳಿಯಿರಿ.
9
ಅತ್ಯಂತ ಮುಖ್ಯವಾಗಿ ಇದು ಸಂಕಷ್ಟದ ಕಾಲ ಎನ್ನುವುದನ್ನು ವಿದ್ಯಾರ್ಥಿಗಳು ನೆನಪಿನಲ್ಲಿಟ್ಟುಕೊಳ್ಳಬೇಕು. ನಿಮ್ಮ ಹೆತ್ತವರಿಗೆ ಈ ಸಮಯದಲ್ಲಿ ಸಾಕಷ್ಟು ಹಣಕಾಸು ಒತ್ತಡಗಳು, ಕಷ್ಟಗಳು ಇರಬಹುದು. ವೇತನ, ಉದ್ಯೋಗ, ವ್ಯವಹಾರಕ್ಕೆ ತೊಂದರೆಯಾಗಿರಬಹುದು. ಹೀಗಾಗಿ, ವಿದ್ಯಾರ್ಥಿಗಳು ಇನ್ನು ಮುಂದೆ ಹಣಕಾಸು ದುಂದುವೆಚ್ಚ ಮಾಡಬಾರದು. ಹೊರಗಡೆ ತಿಂಡಿ ತಿನಿಸು, ಶಾಪಿಂಗ್ ಕಡಿಮೆ ಮಾಡಿ. ನಿಮ್ಮ ಹೆತ್ತವರ ಕನಸು ಈಡೇರಿಸಲು ಚೆನ್ನಾಗಿ ಓದಿ. ಖರ್ಚು ಮಾಡುವ ಹಣದ ಮೇಲೆ ನಿಗಾ ಇರಲಿ.
10
ಅತ್ಯಂತ ಮುಖ್ಯವಾಗಿ ಈ ವರ್ಷವನ್ನು ವ್ಯರ್ಥವಾಗಲು ಬಿಡಬೇಡಿ. ನಿಮ್ಮ ಜೀವನದಲ್ಲಿ ವ್ಯರ್ಥವಾಗುವ ಪ್ರತಿಯೊಂದು ಕ್ಷಣವೂ ಅಮೂಲ್ಯವಾದದ್ದು ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಿ. ಬಿಡುವು ಸಿಕ್ಕಾಗ ಕಾಲಹರಣ ಮಾಡದೆ ಹೊಸ ಕೌಶಲ್ಯಗಳನ್ನು, ಕೋರ್ಸ್ಗಳನ್ನು ಕಲಿಯಲು ಆದ್ಯತೆ ನೀಡಿ. ಈ ರೀತಿ ಮಾಡಿದರೆ ಮಾತ್ರ ಇನ್ನು ಕೆಲವು ವರ್ಷ ಹೆಚ್ಚು ಸ್ಪರ್ಧಾತ್ಮಕವಾಗಿರುವ ಜಗತ್ತಿನಲ್ಲಿ ನೀವು ಒಳ್ಳೆಯ ಅವಕಾಶ ಪಡೆಯಲು ಸಾಧ್ಯ.