ಕೋವಿಡ್-೧೯ನಿಂದ ಇಡೀ ಜಗತ್ತಿಗೆ ಒಂದಲ್ಲ ಒಂದು ರೀತಿಯಾಗಿ ಹಾನಿಯಾಗಿದೆ ಮತ್ತು ಸಂಕಷ್ಟ ಎದುರಾಗಿದೆ. ಆದರೆ, ಈ ಸಮಯದಲ್ಲಿ ಜಗತ್ತು ಒಂದಿಷ್ಟು ವೇಗವಾಗಿ ಮುಂದೆ ಸಾಗಿರುವುದು ಸುಳ್ಳಲ್ಲ. ರಾಜ್ಯದ ಕುಗ್ರಾಮದ ಶಾಲೆಗಳಲ್ಲಿಯೂ ಇ-ಕಲಿಕೆ ಪರಿಚಯಿಸಿದ ಸಮಯವಿದು. ವ್ಯವಹಾರಗಳು ಸಹ ಹೊಸ ಪ್ರಯತ್ನಗಳನ್ನು, ಮಾರುಕಟ್ಟೆ ವಿಸ್ತರಣೆಗೆ ಹೊಸ ಹಾದಿಗಳನ್ನು ಆಯ್ಕೆ ಮಾಡಿಕೊಂಡಿವೆ. ಇತ್ತೀಚಿನ ಅಧ್ಯಯನದ ಪ್ರಕಾರ ಮುಂದಿನ ದಿನಗಳಲ್ಲಿ ಸೈಬರ್ ಸೈಕ್ಯುರಿಟಿ, ಡೇಟಾ ಸೈನ್ಸ್, ಕ್ಲೌಡ್ ಕಂಪ್ಯೂಟಿಂಗ್, ಲಾಜಿಸ್ಟಿಕ್ ಮತ್ತು ಸಪ್ಲೈ ಚೈನ್ ಮ್ಯಾನೇಜ್‌ಮೆಂಟ್ ಮತ್ತು ಡಿಜಿಟಲ್ ಮಾರ್ಕೆಟಿಂಗ್‌ಗೆ ಬೇಡಿಕೆ ಹೆಚ್ಚಲಿದೆ ಎಂದು ಇತ್ತೀಚಿನ ಅಧ್ಯಯನವೊಂದು ಹೇಳಿದೆ.
ಡಿಜಿಟಲ್ ಮಾರ್ಕೆಟಿಂಗ್‌ಗೆ ಬಹುಬೇಡಿಕೆ
ಕೋವಿಡ್-೧೯ ಬಳಿಕ ಇ-ಕಾಮರ್ಸ್‌ಗಳ ಬಳಕೆ ಇನ್ನಷ್ಟು ಹೆಚ್ಚಲಿದೆ, ಡಿಜಿಟಲೈಜೇಷನ್ ಅಗತ್ಯವೂ ಹೆಚ್ಚಲಿದೆ ಮತ್ತು ಆನ್‌ಲೈನ್ ಮೀಡಿಯಾಗಳ ಸಂಖ್ಯೆಯೂ ಏರಿಕೆ ಕಾಣಲಿದೆ. ಇದೇ ಕಾರಣಕ್ಕೆ ಡಿಜಿಟಲ್ ಮಾರ್ಕೆಟ್ ಟ್ರೆಂಡ್‌ಗೆ ತಕ್ಕಂತೆ ವ್ಯವಹಾರ ಹೆಚ್ಚಿಸುವ ಪರಿಣಿತರಿಗೂ ಬೇಡಿಕೆ ಹೆಚ್ಚಲಿದೆ ಎಂದು ಎಕಾನಾಮಿಕ್ ಟೈಮ್ಸ್ ವರದಿ ಹೇಳಿದೆ.
ಡಿಜಿಟಲ್ ಮಾರ್ಕೆಟಿಂಗ್ ಪರಿಣಿತರ ಕೊರತೆ
ಈ ಸಾಂಕ್ರಾಮಿಕದ ಸಮಯದಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿರುವ ಡಿಜಿಟಲ್ ಮಾರ್ಕೆಟಿಂಗ್ ಕ್ಷೇತ್ರವು ಕಳೆದ ಕೆಲವು ವರ್ಷಗಳಿಂದಲೇ ಬಳಕೆಯಲ್ಲಿದೆ. ಆದರೆ, ಈಗಿನ ಸಾಂಕ್ರಾಮಿಕವು ಡಿಜಿಟಲ್ ಮಾರ್ಕೆಟಿಂಗ್ ಅಗತ್ಯವನ್ನು ಹೆಚ್ಚಿಸಿದೆ ಎನ್ನುತ್ತಾರೆ ತಜ್ಞರು.
“ಕೋವಿಡ್-೧೯ ಯಾವುದೇ ಹೊಸ ಬಗೆಯ ಎಚ್‌ಆರ್ ಟ್ರೆಂಡ್ ಸೃಷ್ಟಿಸಿಲ್ಲ. ಆದರೆ, ಈ ಹಿಂದೆ ಇದ್ದ ಕೆಲವು ಸ್ಕಿಲ್‌ಗಳ ಅವಶ್ಯಕತೆಯನ್ನು ಹೆಚ್ಚಿಸಿದೆ. ಡಿಜಿಟಲ್ ಮಾರ್ಕೆಟಿಂಗ್ ಮುಂತಾದ ಕೌಶಲಗಳಿಗೆ ಈ ಹಿಂದೆಯೂ ಬೇಡಿಕೆ ಇತ್ತು. ಆದರೆ, ಇದರ ಬಳಕೆ ಕೆಲವು ವ್ಯವಹಾರಗಳಿಗೆ ಸೀಮಿತವಾಗಿತ್ತು. ಆದರೆ, ಇದೀಗ ಇವುಗಳ ಬಳಕೆ ವ್ಯಾಪಕವಾಗಿದೆ. ಇದರಿಂದ ದೇಶದಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಪರಿಣಿತರಿಗೆ ಬೇಡಿಕೆ ಹೆಚ್ಚಾಗಿದೆ. ಆದರೆ, ಮಾರುಕಟ್ಟೆಯ ಬೇಡಿಕೆಗೆ ತಕ್ಕಂತೆ ಈ ಕ್ಷೇತ್ರದ ಪರಿಣಿತರ ಪೂರೈಕೆಯಿಲ್ಲ’ ಎಂದು ಟೀಮ್‌ಲೀಸ್‌ನ ಉಪಾಧ್ಯಕ್ಷರಾದ ರಿತುಪರ್ಣ ಚಕ್ರವರ್ತಿ ಅವರು ಲೈವ್‌ಮಿಂಟ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
“ಈಗಿನ ಜಗತ್ತಿನಲ್ಲಿ ಅತ್ಯಂತ ಸವಾಲಿನ, ಸೃಜನಶೀಲ, ತೃಪ್ತಿದಾಯಕ, ಲಾಭದಾಯಕ ಮತ್ತು ಸದಾ ಅಪ್‌ಡೇಟ್ ಬಯಸುವ ವೃತ್ತಿ ಡಿಜಿಟಲ್ ಮಾರ್ಕೆಟಿಂಗ್ ಆಗಿದೆ. ಡಿಜಿಟಲ್ ಮಾರ್ಕೆಟಿಂಗ್ ನಿಮಗೆ ಉತ್ತಮ ಉದ್ಯೋಗಾವಕಾಶ ಒದಗಿಸುವುದು ಮಾತ್ರವಲ್ಲ, ನಿಮ್ಮ ಕಲಿಕೆಯನ್ನು ನಿರಂತರವಾಗಿಸುತ್ತದೆ’ ಎಂದು ತಜ್ಞರು ಹೇಳುತ್ತಾರೆ. ಆದರೆ, ಡಿಜಿಟಲ್ ಮಾರ್ಕೆಟಿಂಗ್‌ನಲ್ಲಿ ಪ್ರಗತಿ ಕಾಣಲು ಶಿಸ್ತು ಅತ್ಯಂತ ಅವಶ್ಯಕ. ಡಿಜಿಟಲ್ ಮಾರ್ಕೆಟಿಂಗ್‌ನಲ್ಲಿ ಸುದೀರ್ಘ, ನಿರಂತರ ಮತ್ತು ಲಾಭದಾಯಕ ವೃತ್ತಿಜೀವನವನ್ನು ಆನಂದಿಸಲು ನೀವು ಆರಂಭದಲ್ಲಿ ಅವಶ್ಯ ಕೌಶಲವನ್ನು ಕಲಿಯುವುದು ಅಗತ್ಯವಾಗಿದೆ.
ಯಾವೆಲ್ಲ ಕೌಶಲಗಳ ಅಗತ್ಯವಿದೆ?
೧. ಅನಾಲಿಟಿಕ್ಸ್ ಮತ್ತು ಅಡ್ವರ್ಟೈಸಿಂಗ್
ಡಿಜಿಟಲ್ ಡೇಟಾವೆನ್ನುವುದು ಅಮೂಲ್ಯ ಸಂಪತ್ತು ಎಂದು ವ್ಯವಹಾರಗಳು ಪರಿಗಣಿಸುವ ಕಾಲಘಟ್ಟದಲ್ಲಿ ನಾವಿದ್ದೇವೆ. ಇಂತಹ ಡಿಜಿಟಲ್ ಡೇಟಾವನ್ನು ಸಂಗ್ರಹಿಸಿ ವಿಶ್ಲೇಷಿಸಿ, ಬಿಸ್ನೆಸ್‌ಗೆ ಲಾಭ ತರುವ ಯೋಜನೆಗಳನ್ನು ರೂಪಿಸುವ ಕಾರ್ಯ ಡಿಜಿಟಲ್ ಮಾರ್ಕೆಟರ್‌ನದ್ದು. ಇದಕ್ಕಾಗಿ ಡಿಜಿಟಲ್ ಮಾರ್ಕೆಟಿಂಗ್ ವೃತ್ತಿಪರರು ಅಗತ್ಯ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಮತ್ತು ಪರಿಣಾಮಕಾರಿಯಾದ ಕ್ಯಾಂಪೈನ್‌ಗಳನ್ನು ಕೈಗೊಳ್ಳಬೇಕು.
ಇದಕ್ಕಾಗಿ ನೀವು ಗೂಗಲ್ ಅನಾಲಿಟಿಕ್ಸ್ ಕಲಿಯಬೇಕು. ಪೇ ಪರ್ ಕ್ಲಿಕ್ ಜಾಹೀರಾತುಗಳ ಬಗ್ಗೆ ಕಲಿಯಬೇಕು. ಈ ಎರಡು ಕೌಶಲವಿದ್ದರೆ ನಿಮಗೆ ಡಿಜಿಟಲ್ ಮಾರ್ಕೆಟಿಂಗ್ ನ ಆರಂಭಿಕ ಹಂತದ ಉದ್ಯೋಗ ಪಡೆಯಬಹುದಾಗಿದೆ.
ಎಸ್‌ಇಒ ಅಥವಾ ಸರ್ಚ್ ಎಂಜಿನ್ ಆಪ್ಟಿಮೈಜೇಷನ್
ಡಿಜಿಟಲ್ ಮಾರ್ಕೆಟಿಂಗ್‌ನಲ್ಲಿ ಅತ್ಯಂತ ಅವಶ್ಯವಾದ ಅಂಶವಿದು. ಪಿಪಿಸಿ ಜಾಹೀರಾತು, ಕಂಟೆಂಟ್ ಮಾರ್ಕೆಟಿಂಗ್ ಇತ್ಯಾದಿಗಳೊಂದಿಗೆ ಎಸ್‌ಇಒ ಕಲಿಕೆಯು ಅತ್ಯಂತ ಅಗತ್ಯವಾಗಿದೆ. ಬ್ರ್ಯಾಂಡ್‌ಗಳು ಆನ್‌ಲೈನ್‌ನಲ್ಲಿ ತಮ್ಮ ಮಾರುಕಟ್ಟೆಯನ್ನು ವಿಸ್ತರಿಸಲು ಎಸ್‌ಇಒ ಅತ್ಯಂತ ಅವಶ್ಯ. ಹೀಗಾಗಿ, ಡಿಜಿಟಲ್ ಮಾರ್ಕೆಟಿಂಗ್ ಪರಿಣಿತರಾಗಬೇಕಾದರೆ ಎಸ್‌ಇಒ ಜ್ಞಾನ ಅತ್ಯಂತ ಅವಶ್ಯವಾಗಿದೆ.
ಕಂಟೆಂಟ್ ಬರವಣಿಗೆ
ಡಿಜಿಟಲ್ ಮಾರ್ಕೆಟಿಂಗ್‌ನಲ್ಲಿ ನೀವು ಯಶಸ್ಸು ಪಡೆಯಬೇಕಾದರೆ ಕಾಪಿ ರೈಟಿಂಗ್ ಮತ್ತು ಕಂಟೆಂಟ್ ರೈಟಿಂಗ್‌ನಲ್ಲಿ ನಿಮಗೆ ಪರಿಣತಿ ಇರಬೇಕು. ಫೇಸ್‌ಬುಕ್‌ನಲ್ಲಿ ಏನೋ ಬರೆದು ಬೂಸ್ಟ್ ಮಾಡಿದರೆ ಸಾಲದು. ನಿಮ್ಮ ಕಂಪನಿಯ ನಿಗದಿತ ಗ್ರಾಹಕರನ್ನು ಗುರಿಯಾಗಿಸಿಕೊಂಡು ಅನನ್ಯ ಕಂಟೆಂಟ್‌ಗಳನ್ನು ಬರೆಯಬೇಕು.
ಕಂಟೆಂಟ್ ಮತ್ತು ಸೋಷಿಯಲ್ ಮಾರ್ಕೆಟಿಂಗ್
ಡಿಜಿಟಲ್ ಮಾರ್ಕೆಟಿಂಗ್ ವೃತ್ತಿಯಲ್ಲಿ ನೀವು ಯಶಸ್ಸು ಪಡೆಯಲು ಕಂಟೆಂಟ್ ಮಾರ್ಕೆಟಿಂಗ್‌ನ ಕೌಶಲಗಳು ತಿಳಿದಿರಬೇಕು. ಡಿಜಿಟಲ್ ಮಾರ್ಕೆಟಿಂಗ್‌ಗೂ ಸೋಷಿಯಲ್ ಮೀಡಿಯಾಕ್ಕೂ ಅವಿನಾಭವ ನಂಟು. ನಿಮ್ಮ ಗ್ರಾಹಕರ ಮನದಲ್ಲಿ ನೂರಾರು ಪ್ರಶ್ನೆಗಳು ಇರುತ್ತವೆ. ಅವುಗಳಿಗೆ ಉತ್ತರ ನೀಡುವಂತಹ ಮತ್ತು ಆ ಗ್ರಾಹಕರನ್ನು ನಿಮ್ಮ ಕಂಪನಿಯತ್ತ ಸೆಳೆಯುವಂತಹ ಕೌಶಲ ನಿಮ್ಮಲ್ಲಿ ಇರಬೇಕು. ಇದನ್ನು ಕಂಟೆಂಟ್ ಮತ್ತು ಸೋಷಿಯಲ್ ಮೀಡಿಯಾ ಮಾರ್ಕೆಟಿಂಗ್ ಮೂಲಕ ಮಾಡುವ ಸಾಮರ್ಥ್ಯ ನಿಮ್ಮಲ್ಲಿರಬೇಕು.
ಟ್ರೆಂಡ್ ಬಗ್ಗೆ ಅರಿವಿರಬೇಕು
ಡಿಜಿಟಲ್ ಮಾರ್ಕೆಟಿಂಗ್ ವೃತ್ತಿಪರರು ಸದಾ ಕ್ರಿಯಾಶೀಲರಾಗಿರಬೇಕು. ಈಗಿನ ಟ್ರೆಂಡ್‌ಗಳ ಅರಿವಿರಬೇಕು. ಬದಲಾಗುತ್ತಿರುವ ಟ್ರೆಂಡ್‌ಗಳ ಕಡೆಗೆ ಕಣ್ಣಿಟ್ಟಿರಬೇಕು.
ಎಲ್ಲಿ ಕಲಿಯಬಹುದು?
ಡಿಜಿಟಲ್ ಮಾರ್ಕೆಟಿಂಗ್ ಕಲಿಯಲು ಸಾಕಷ್ಟು ಸಂಸ್ಥೆಗಳು ಇವೆ. ಆದರೆ, ಕೆಲವೊಂದು ಸಂಸ್ಥೆಗಳು ತುಂಬಾ ದುಬಾರಿ ಶುಲ್ಕ ಬಯಸುತ್ತವೆ. ಆದರೆ, ಡಿಜಿಟಲ್ ಮಾರ್ಕೆಟಿಂಗ್ ಸೂಕ್ಷ್ಮಗಳನ್ನು ಕಲಿಯಲು ನೀವು ಲಕ್ಷಗಟ್ಟಲೆ ಖರ್ಚು ಮಾಡಬೇಕಿಲ್ಲ. ಕೆಲವು ಸಾವಿರ ರೂಪಾಯಿಗಳಲ್ಲಿ ಬೆಂಗಳೂರು ಕ್ಯಾಡ್‌ನೆಸ್ಟ್‌ನ ರಾಜಾಜಿನಗರ, ಬಸವನಗುಡಿ, ಶೇಷಾದ್ರಿಪುರಂ ಮತ್ತು ಮಲ್ಲೇಶ್ವರಂ ಶಾಖೆಗಳಲ್ಲಿ ಕಲಿಯಬಹುದು. ಹೆಚ್ಚಿನ ಮಾಹಿತಿಗೆ ಈಗಾಗಲೇ ಸಂಪರ್ಕಿಸಿ. ದೂರವಾಣಿ ಸಂಖ್ಯೆ ಮತ್ತು ವಿಳಾಸ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.
ಅಂದಹಾಗೆ ಕೋವಿಡ್-೧೯ ಬಳಿಕ ನಮ್ಮ ಸಂಸ್ಥೆಯಲ್ಲಿ ಈಗ ವಿದ್ಯಾರ್ಥಿಗಳ ದಾಖಲಾತಿ ಆರಂಭವಾಗಿದೆ. ಹೆಚ್ಚಿನ ಮಾಹಿತಿಗೆ ಈ ಪೋಸ್ಟ್ ನೋಡಿ.
CADD Nest Private Limited Advanced Digital Marketing Course
Learn 60+ Modules | 100+ Tools | 3 – 6 Months Flexi Batches | Week Day & Weekend Batches | Online and Classroom batches | Experienced Instructors.
CADD Nest Private Limited – The best computer traning centre in Bangalore
CADD Courses | Computer Courses | Spoken English | Animation Courses | Digital Marketing Courses | Handwriting Courses