Kannada CADD Nest Private Limited

40 ಲಕ್ಷ ರೂ.ವರೆಗೆ ಜಿಎಸ್ಟಿ ವಿನಾಯಿತಿ, Tally ERP 9ಗೆ ಹೆಚ್ಚಿದ ದಾಖಲಾತಿ

40 ಲಕ್ಷ ರೂ.ವರೆಗೆ ಜಿಎಸ್ಟಿ ವಿನಾಯಿತಿ, Tally ERP 9ಗೆ ಹೆಚ್ಚಿದ ದಾಖಲಾತಿ

ವಾರ್ಷಿಕ ವಹಿವಾಟು 40 ಲಕ್ಷ ರೂ.ವರೆಗೆ ಇರುವ ವ್ಯವಹಾರಗಳಿಗೆ ಜಿಎಸ್‌ಟಿ ವಿನಾಯಿತಿಯನ್ನು ಹಣಕಾಸು ಸಚಿವಾಲಯವು ಸೋಮವಾರ ಘೋಷಿಸಿದೆ. ಇದರ ಜೊತೆಗೆ 1.5 ಕೋಟಿ ರೂ.ವರೆಗೆ ವಹಿವಾಟು ಇರುವವರು ಕಾಂಪೋಷಿಷನ್‌ ಸ್ಕೀಮ್‌ ಅನ್ನು ಆಯ್ಕೆ ಮಾಡಿಕೊಳ್ಳಬಹುದು ಮತ್ತು ಕೇವಲ ಶೇಕಡ 1 ಪರ್ಸೆಂಟ್‌ ತೆರಿಗೆ ಪಾವತಿಸಿದರೆ ಸಾಕು ಎಂದು ಹಣಕಾಸು ಸಚಿವಾಲಯ ಟ್ವಿಟ್‌ ಮಾಡಿದೆ. ಈ ಹಿಂದೆ ಜಿಎಸ್‌ಟಿ ವಿನಾಯಿತಿ ಮಿತಿಯು 20 ಲಕ್ಷ ರೂ. ಆಗಿತ್ತು.

“ಕೋವಿಡ್‌­ 19 ಸಂಕಷ್ಟದ ಸಮಯದಲ್ಲಿ ಇದು ಅತ್ಯಂತ ಒಳ್ಳೆಯ ಉಪಕ್ರಮ. ವ್ಯವಹಾರಗಳಿಗೆ ಇದರಿಂದ ಒಳ್ಳೆಯ ರಿಲೀಫ್‌ ದೊರಕಿದೆ’’ ಎಂದು ಪ್ರಕಾಶ್‌ ಇನ್ಫೋಟೆಕ್‌ ಮತ್ತು ಬೆಂಗಳೂರಿನ ರಾಜಾಜಿನಗರ, ಬಸವನಗುಡಿ, ಮಲ್ಲೇಶ್ವರಂ ಮತ್ತು ಶೇಷಾದ್ರಿಪುರಂನಲ್ಲಿರುವ ಭಾರತೀಯ ಅಕಾಡೆಮಿ ಆಫ್‌ ಲಿಂಗ್ವಿಸ್ಟಿಕ್ಸ್‌ ಮತ್ತು ಕಮ್ಯುನಿಕೇಷನ್‌ನ ನಿರ್ದೇಶಕರಾದ ಪ್ರಕಾಶ್‌ ಹೇಳುತ್ತಾರೆ.

“ಜಿಎಸ್‌ಟಿಯು ದೇಶದ ತೆರಿಗೆ ಪಾವತಿ ವಿಧಾನವನ್ನೇ ಸಾಕಷ್ಟು ಬದಲಾಯಿಸಿದೆ. ಇದು ವಿದ್ಯಾರ್ಥಿಗಳಿಗೂ ಸಾಕಷ್ಟು ಒಳ್ಳೆಯ ಅವಕಾಶವನ್ನು ತಂದುಕೊಟ್ಟಿದೆ. ಮುಖ್ಯವಾಗಿ ಜಿಎಸ್‌ಟಿ ಪಾವತಿಸಲು ಅಕೌಂಟಿಂಗ್‌ ಮತ್ತು ಟ್ಯಾಕ್ಸೆಷನ್‌ ವಿಭಾಗಕ್ಕೆ ಹೊಸ ಬಗೆಯ ಉದ್ಯೋಗವನ್ನು ಸೃಷ್ಟಿಸಿದೆ. ಇದೇ ಕಾರಣಕ್ಕೆ ನಮ್ಮ ಸಂಸ್ಥೆಯಲ್ಲಿ Tally ERP 9 ತರಗತಿಗಳಿಗೆ ವಿದ್ಯಾರ್ಥಿಗಳ ದಾಖಲಾತಿಯು ಗಮನಾರ್ಹವಾಗಿ ಏರಿಕೆಯಾಗಿದೆ’ ಎಂದು ಅವರು ಅಭಿಪ್ರಾಯಪಟ್ಟರು.

ಹಣಕಾಸು ಸಚಿವಾಲಯವು ಸರಣಿ ಟ್ವಿಟ್‌ಗಳನ್ನು ಮಾಡಿದ್ದು, ನಿರ್ಮಾಣ ವಲಯ, ಮುಖ್ಯವಾಗಿ ಹೌಸಿಂಗ್‌ ಸೆಕ್ಟರ್‌ಗೂ ಹಲವು ವಿನಾಯಿತಿ ನೀಡಿದೆ. ಈ ವಲಯಕ್ಕೆ ಶೇಕಡ ೫ ತೆರಿಗೆ ದರ ವಿಧಿಸಲಾಗಿದೆ. ಇದರೊಂದಿಗೆ ಅಫರ್ಡೆಬಲ್‌ ಹೌಸಿಂಗ್‌ಗೆ ಜಿಎಸ್‌ಟಿ ದರವನ್ನು ಶೇಕಡ 1ಕ್ಕೆ ಇಳಿಸಲಾಗಿದೆ.

ಜಿಎಸ್‌ಟಿ ಎಂದರೇನು?

ಸರಕು ಮತ್ತು ಸೇವಾ ತೆರಿಗೆಯನ್ನು ಸಂಕ್ಷಿಪ್ತವಾಗಿ ಜಿಎಸ್‌ಟಿ ಎನ್ನುತ್ತಾರೆ. ಸರಕು ಮತ್ತು ಸೇವೆಗಳ (ತಯಾರಿ, ಮಾರಾಟ, ಬಳಕೆ ಒಳಗೊಂಡಂತೆ) ವ್ಯಾಪಕ ಮತ್ತು ಸಮಗ್ರ ಆಧರಿತ ತೆರಿಗೆ ವಿಧಿಸುವ ವ್ಯವಸ್ಥೆ ಇದಾಗಿದೆ. ಈ ಮೂಲಕ ದೇಶಾದ್ಯಂತ ಏಕರೂಪದ ತೆರಿಗೆ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ರಾಜ್ಯಗಳು ವಿಧಿಸುತ್ತಿದ್ದ ವಿವಿಧ ತೆರಿಗೆಗಳನ್ನು ರದ್ದು ಪಡಿಸಲಾಗಿದೆ. ಒಂದೇ ದೇಶ ಒಂದೇ ತೆರಿಗೆ ಇದರ ಧ್ಯೇಯವಾಗಿದೆ.

ಜಿಎಸ್‌ಟಿಯೊಳಗೆ ಹಲವು ತೆರಿಗೆಗಳು ಅಂತರ್ಗತವಾಗಿವೆ. ಅಂದರೆ, ಕೇಂದ್ರೀಯ ಅಬಕಾರಿ ಸುಂಕ, ಹೆಚ್ಚುವರಿ ಅಬಕಾರಿ ಸುಂಕ, ಹೆಚ್ಚುವರಿ ಸೀಮಾ ಶುಲ್ಕ, ಸೇವಾ ತೆರಿಗೆ, ಸರ್‌ ಚಾರ್ಜ್, ರಾಜ್ಯ ಸರಕಾರಗಳ ವ್ಯಾಟ್‌, ಕೇಂದ್ರ ಮಾರಾಟ ತೆರಿಗೆ, ಐಷಾರಾಮಿ ಮತ್ತು ಮನರಂಜನಾ ತೆರಿಗೆ, ಪ್ರವೇಶ ತೆರಿಗೆ, ಜಾಹೀರಾತು ತೆರಿಗೆ, ಖರೀದಿ ತೆರಿಗೆ, ಲಾಟರಿ, ಬೆಟ್ಟಿಂಗ್‌, ಜೂಜಾಟದ ಮೇಲಿನ ತೆರಿಗೆ, ಸೆಸ್‌ ಇತ್ಯಾದಿಗಳು ಜಿಎಸ್‌ಟಿಯೊಳಗೆ ಬಂದಿವೆ.

Tally ERP 9 ಎಂದರೇನು?

ಈಗಾಗಲೇ ಟ್ಯಾಲಿ ಸಂಬಂಧಪಟ್ಟ ಕೋರ್ಸ್‌ಗಳಿಗೆ ವಿದ್ಯಾರ್ಥಿಗಳ ಬೇಡಿಕೆ ಹೆಚ್ಚಿದೆ. ಈ ಕ್ಷೇತ್ರದಲ್ಲಿ ಗಮನಾರ್ಹ ಉದ್ಯೋಗ ಅವಕಾಶಗಳು ಇರುವುದು ಇದರ ಬೇಡಿಕೆಗೆ ಕಾರಣ. ಈ ಕ್ಷೇತ್ರಕ್ಕೆ ಪ್ರವೇಶಿಸಲು ಪಡೆಯಲು ಬಯಸುವ ಇತರೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಟ್ಯಾಲಿ ಇಆರ್‌ಪಿ ೯ ಕುರಿತು ಇಲ್ಲೊಂದಿಷ್ಟು ಮಾಹಿತಿ ನೀಡಲಾಗಿದೆ.

Tally ERP 9 ಎನ್ನುವುದು ತುಂಬಾ ಜನಪ್ರಿಯವಾದ ಅಕೌಂಟಿಂಗ್‌ ಸಾಫ್ಟ್ವೇರ್‌. ಮುಖ್ಯವಾಗಿ ಭಾರತದಲ್ಲಿ ಬಳಕೆ ಮಾಡುವ ಅಕೌಂಟಿಂಗ್‌ ಸಾಫ್ಟ್ವೇರ್‌. ನೀವು ಅಕೌಂಟಿಂಗ್‌ ಸಂಬಂಧಪಟ್ಟ ಉದ್ಯೋಗಕ್ಕೆ ಹೋಗುವಿರಾದರೆ ಅತ್ಯಂತ ಅಗತ್ಯವಾಗಿ ಕಲಿತುಕೊಳ್ಳಬೇಕಾದ ಸಾಫ್ಟ್‌ವೇರ್‌ ಸ್ಕಿಲ್‌ ಇದಾಗಿದೆ. ಇದು ಉದ್ಯಮಗಳ ಸಾಫ್ಟ್‌ವೇರ್‌ ಆಗಿದ್ದು, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಗೆ ಸೂಕ್ತವಾಗಿದೆ. ಟ್ಯಾಲಿ ಇಆರ್‌ಪಿ ೯ನಲ್ಲಿರುವ ಜಿಎಸ್‌ಟಿ ಸಾಫ್ಟ್‌ವೇರ್‌ಗೆ ಇಂದು ಬೇಡಿಕೆ ಹೆಚ್ಚಿದೆ. ಇಂದಿನ ಜಿಎಸ್‌ಟಿ ಯುಗದಲ್ಲಿ ಇದು ಅತ್ಯಂತ ಅವಶ್ಯವಾದ ಸಾಫ್ಟ್‌ವೇರ್‌ ಸಹ ಹೌದು.

Tally ERP 9 ಬಳಕೆ ಹೇಗೆ?

ಮೊದಲಿಗೆ ಈ ಸಾಫ್ಟ್ವೇರ್‌ ಇನ್‌ಸ್ಟಾಲ್‌ ಮಾಡಿಕೊಳ್ಳಬೇಕು. ಬಳಿಕ ನ್ಯಾವಿಗೇಷನ್‌ ಪ್ರಕ್ರಿಯೆ ಮಾಡಬೇಕು. ಬಳಿಕ ಕಂಪನಿ ರಚಿಸಬೇಕು. ಅಂದರೆ ನಿಮ್ಮ ಕಂಪನಿಯ ವಿವರ ನಮೂದಿಸಬೇಕು. ಬಳಿಕ ಅಲ್ಲಿಂದಲೇ ವಿವಿಧ ಜಿಎಸ್‌ಟಿ ನಮೂನೆಗಳನ್ನು ದಾಖಲಿಸುವುದು, ಸರಿಯಾದ ಲೆಕ್ಕಾಚಾರ ಮಾಡುವುದು ಸೇರಿದಂತೆ ಜಿಎಸ್‌ಟಿ ಸಮಸ್ತ ಕಾರ್ಯಗಳನ್ನು ಮಾಡಬಹುದು. ಈ ಕೆಲಸವನ್ನು ಕಂಪನಿಗಳಿಗೆ ಮಾಡಲುTally ERP 9 ಪರಿಣಿತರ ಅವಶ್ಯಕತೆ ಇರುತ್ತದೆ. ಮುಖ್ಯವಾಗಿ Tally ERP 9 ಸಾಫ್ಟ್‌ವೇರ್‌ ಸಂಬಂಧಪಟ್ಟಂತೆ ಕೋರ್ಸ್‌ ಮಾಡಿರುವವರಿಗೆ ಆದ್ಯತೆ ನೀಡಲಾಗುತ್ತದೆ.

ಬೆಂಗಳೂರಿನ ರಾಜಾಜಿನಗರ, ಬಸವನಗುಡಿ, ಶೇಷಾದ್ರಿಪುರಂ ಮತ್ತು ಮಲ್ಲೇಶ್ವರಂನಲ್ಲಿರುವ ಕ್ಯಾಡ್‌ನೆಸ್ಟ್‌‌ ಸೆಂಟರ್‌ಗಳಲ್ಲಿ ನೀವು ಈ ಕೋರ್ಸ್‌ ಮಾಡಬಹುದು. ವಿಶೇಷವೆಂದರೆ ಈ ಕೋರ್ಸ್‌ ಅನ್ನು ಕ್ಯಾಡ್‌ನೆಸ್ಟ್‌‌ನ ಆನ್‌ಲೈನ್ ತರಗತಿಗಳ ಮೂಲಕವೂ ಕಲಿಯಬಹುದು. ಈ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್‌ ಮಾಡಿರಿ.

Related Posts

error: Content is protected !!
Scroll to Top