Kannada CADD Nest Private Limited

Tally ERP 9 ಕಲಿಯಿರಿ, GST ಯುಗದಲ್ಲಿ ಬೇಡಿಕೆಯ ಉದ್ಯೋಗಿ ನೀವಾಗಿ

Tally ERP 9  ಕಲಿಯಿರಿ, GST ಯುಗದಲ್ಲಿ ಬೇಡಿಕೆಯ ಉದ್ಯೋಗಿ ನೀವಾಗಿ

ಕನ್ನಡ ಕ್ಯಾಡ್‌ನೆಸ್ಟ್‌‌ನ ನಲ್ಮೆಯ ಓದುಗರಿಗೆ, ವಿದ್ಯಾರ್ಥಿ ಮಿತ್ರರಿಗೆ ನಮಸ್ಕಾರ. ಈ ಬಾರಿ ನಾವು ವಿಶೇಷ ಕೋರ್ಸೊಂದರ ಮಾಹಿತಿಯೊಂದಿಗೆ ಬಂದಿದ್ದೇವೆ. ಅದರ ಹೆಸರು Tally ERP 9. ಭಾರತದ ಅತ್ಯಂತ ಜನಪ್ರಿಯ ಅಕೌಂಟಿಂಗ್‌ ಸಾಫ್ಟ್‌ವೇರ್‌ಗೆ ಸಂಬಂಧಪಟ್ಟ ಕೋರ್ಸ್‌ ಇದಾಗಿದ್ದು, ಇದನ್ನು ಕಲಿತರೆ ನೀವು ಈ ಜಿಎಸ್‌ಟಿ ಯುಗದಲ್ಲಿ ಬಹುಬೇಡಿಕೆಯ ಉದ್ಯೋಗಿಯಾಗಬಹುದು.

ಮೊದಲಿಗೆ Tally ERP 9ಎಂದರೇನು ಎಂದು ತಿಳಿದುಕೊಳ್ಳೋಣ. ಇದು ದೇಶದ ಅತ್ಯಂತ ಜನಪ್ರಿಯ ಮತ್ತು ಅನುಕೂಲಕರವಾದ ಅಕೌಂಟಿಂಗ್‌ ಸಾಫ್ಟ್ವೇರ್‌ ಆಗಿದೆ. ಇದು ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಅವಶ್ಯವಿರುವ ಕಂಪ್ಲಿಟ್‌ ಎಂಟರ್‌ಪ್ರೈಸಸ್‌ ಸಾಫ್ಟ್‌ವೇರ್‌. ಈಗಿನ ಜಿಎಸ್‌ಟಿ ಯುಗದಲ್ಲಿ ಜಿಎಸ್‌ಟಿ ಮಾನದಂಡಗಳನ್ನು, ಕಾರ್ಯಗಳನ್ನು ಗಮನದಲ್ಲಿಟ್ಟುಕೊಂಡು ಈ ಸಾಫ್ಟ್ವೇರ್‌ ಅಭಿವೃದ್ಧಿಪಡಿಸಲಾಗಿದೆ.

ಯಾರು ಕಲಿಯಬಹುದು ಟ್ಯಾಲಿ ಇಆರ್‌ಪಿ ಕೋರ್ಸ್‌?

  • ಮುಖ್ಯವಾಗಿ 10+2 ವಿದ್ಯಾರ್ಹತೆ ಪೂರ್ಣಗೊಳಿಸಿರುವವರಿಗೆ ಸೂಕ್ತವಾದ ಕೋರ್ಸ್‌.
  • ಬಿಸ್ನೆಸ್‌ ಮ್ಯಾನೇಜ್‌ಮೆಂಟ್‌ ಕುರಿತು ಸಾಮಾನ್ಯ ಜ್ಞಾನ ಇದ್ದರೆ ಒಳ್ಳೆಯದು. ಇವರಿಗೆ ಈ ಕೋರ್ಸ್‌ ಸುಲಭವಾಗಿ ಅರ್ಥವಾಗಬಹುದು.
  • ಪಿಯುಸಿಯಲ್ಲಿ ಕಾಮರ್ಸ್‌ ಓದಿದವರಿಗೂ ಸೂಕ್ತ.
  • ಬಿಕಾಂ, ಎಂಕಾಂ ಓದಿದವರೂ ಕಲಿಯಬೇಕಾದ ಕೋರ್ಸ್‌ ಇದು.

ಎಲ್ಲಿ ಕಲಿಯಬಹುದು ಟ್ಯಾಲಿ ಇಆರ್‌ಪಿ೯ ಕೋರ್ಸ್‌?

ತೆರಿಗೆ, ಜಿಎಸ್‌ಟಿ ಇತ್ಯಾದಿಗಳ ಕುರಿತು ಆಸಕ್ತಿ ಇರುವ ಯಾರು ಬೇಕಾದರೂ ಬೆಂಗಳೂರಿನ ರಾಜಾಜಿನಗರ, ಬಸವನಗುಡಿ, ಮಲ್ಲೇಶ್ವರಂ ಮತ್ತು ಶೇಷಾದ್ರಿಪುರಂನಲ್ಲಿರುವ ಕ್ಯಾಡ್‌ನೆಸ್ಟ್‌‌ ಸಂಸ್ಥೆಯಲ್ಲಿ Tally ERP 9 ಕೋರ್ಸ್‌ ಕಲಿಯಬಹುದು.

ಕೋರ್ಸ್‌ನ ವಿಶೇಷತೆಗಳೇನು?

ಅಕೌಂಟಿಂಗ್‌: ಇದು ಟ್ಯಾಲಿ ಇಆರ್‌ಪಿಯ ಪ್ರಮುಖ ಆಕರ್ಷಕ ಫೀಚರ್‌. ಪ್ರತಿಯೊಬ್ಬರೂ ಇದನ್ನು ಕಲಿಯುವುದು ಅತ್ಯಂತ ಅವಶ್ಯಕ.

ಬಿಲ್ಲಿಂಗ್‌: ಯಾವುದೇ ವ್ಯವಹಾರಕ್ಕೂ ಬಿಲ್ಲಿಂಗ್‌ ಅತ್ಯಂತ ಅವಶ್ಯಕ. ಟ್ಯಾಲಿಯಲ್ಲಿರುವ ಬಿಲ್ಲಿಂಗ್‌ ಆಯ್ಕೆಯನ್ನು ಹೇಗೆ ನಿರ್ವಹಿಸಬೇಕು ಎಂದು ಕಲಿತರೆ ನೀವು ಜಿಎಸ್‌ಟಿ ಸಾಫ್ಟ್‌ವೇರ್‌ ಅನ್ನು ಸುಲಭವಾಗಿ ಬಳಸಬಹುದು. ನಿಮ್ಮ ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡಬಹುದು.

ಪೇರೋಲ್‌: ಹೆಚ್ಚು ಸಂಖ್ಯೆಯ ಉದ್ಯೋಗಿಗಳನ್ನು ಹೊಂದಿರುವ ಕಂಪನಿಗಳಿಗೆ ನೀವು ಸೇವೆ ಸಲ್ಲಿಸುವುದಾದರೆ ಟ್ಯಾಲಿ ಇಆರ್‌ಪಿಯಲ್ಲಿರುವ ಪೇರೋಲ್‌ ಬಗ್ಗೆ ಕಲಿತಿರಬೇಕಾದದ್ದು ಅತ್ಯಂತ ಅಗತ್ಯ. ಈ ಕೋರ್ಸ್‌ನಲ್ಲಿ ಪೇರೋಲ್‌ ಬಗ್ಗೆಯೂ ಕಲಿಯಬಹುದು.

ಬ್ಯಾಂಕಿಂಗ್‌: ಯಾವುದೇ ವ್ಯವಹಾರಕ್ಕೂ ಬ್ಯಾಂಕಿಂಗ್‌ ಅತ್ಯಂತ ಅಗತ್ಯ. ಟ್ಯಾಲಿ ಇಆರ್‌ಪಿ ಮೂಲಕ ಪ್ರತ್ಯಕ್ಷ ಮತ್ತು ಪರೋಕ್ಷ ತೆರಿಗೆಗಳನ್ನು ಸ್ವಯಂಚಾಲಿತವಾಗಿ ಕ್ಯಾಲ್ಕ್ಯುಲೇಟ್‌ ಮಾಡಬಹುದು. ಅದರ ರಿಟರ್ನ್‌ ಅನ್ನು ಆನ್‌ಲೈನ್‌ನಲ್ಲಿ ಸಲ್ಲಿಸಬಹುದು. ಇದನ್ನು ಟ್ಯಾಲಿ ಇಆರ್‌ಪಿ ಕೋರ್ಸ್‌ ನಿಮಗೆ ಕಲಿಸುತ್ತದೆ.

ಟ್ಯಾಕ್ಸೆಷನ್‌: ಇದು ಎಲ್ಲರೂ ಕಲಿತಿರಬೇಕಾದ ವಿಷಯ. ಟ್ಯಾಕ್ಸೆಷನ್‌ ಸರಿಯಾಗಿ ಮಾಡದೆ ಇದ್ದರೆ ಕಷ್ಟ. ಯಾವುದೇ ಕಂಪನಿ ಅಥವಾ ವ್ಯವಹಾರವು ಸರಿಯಾದ ತೆರಿಗೆ ಪಾವತಿಸಲೇಬೇಕು. ಈ ಲೆಕ್ಕಾಚಾರವನ್ನು ಟ್ಯಾಲಿ ಇಆರ್‌ಪಿ ಸಾಫ್ಟ್‌ವೇರ್‌ ಮೂಲಕ ಸುಲಭವಾಗಿ ಮಾಡಬಹುದಾಗಿದೆ.

ಇನ್ವೆಂಟರಿ: ಯಾವುದೇ ವ್ಯವಹಾರಗಳು ಕೂಡ ಇನ್ವೆಂಟರಿ ಅಥವಾ ದಾಸ್ತಾನು ನಿರ್ವಹಣೆ ಮಾಡುವುದು ಅತ್ಯಂತ ಮುಖ್ಯವಾಗಿದೆ. ಮಾರಾಟದ ಉತ್ತಮ ನಿಯಂತ್ರಣಕ್ಕೆ ಇದು ಅವಶ್ಯ.

ಫಂಡಮೆಂಟಲ್ಸ್‌ ಆಫ್‌ ಅಕೌಂಟಿಂಗ್‌, ಟ್ಯಾಲಿ ಪರಿಚಯ, ಟ್ಯಾಲಿಯಲ್ಲಿ ಕಂಪನಿ ರಚನೆ ಮತ್ತು ಅಕೌಂಟಿಂಗ್‌ ತೆರೆಯುವುದು ಹೇಗೆ, ಕಂಪನಿ ಅಥವಾ ಇಂಡಸ್ಟ್ರಿ ವಿವರ ಪರಿಷ್ಕರಣೆ ಹೇಗೆ? ಕಾಸ್ಟ್‌ ಕೆಟಗರಿ ಮತ್ತು ಕಾಸ್ಟ್‌ ಸೆಂಟರ್‌ ಆಯ್ಕೆ ಮಾಡುವುದು, ದರಪಟ್ಟಿ ಮತ್ತು ಬಜೆಟ್‌ ಸೆಟಪ್‌ ಮಾಡುವುದು ಹೇಗೆ? ಟಿಡಿಎಸ್‌, ಎಕ್ಸೈಸ್‌ ಡ್ಯೂಟಿ, ಕಸ್ಟಮ್‌ ಡ್ಯೂಟಿ ಹೇಗೆ ಸೇರಿಸುವುದು ಸೇರಿದಂತೆ ನೂರಾರು ವಿಷಯಗಳನ್ನು ಟ್ಯಾಲಿ ಇಆರ್‌ಪಿ ೯ ಕೋರ್ಸ್‌ ನಿಮಗೆ ಕಲಿಸುತ್ತದೆ.

ಟ್ಯಾಲಿ ಇಆರ್‌ಪಿ ೯ ಕೋರ್ಸ್‌ನ ಸಂಪೂರ್ಣ ವಿವರ ಅಥವಾ ಬ್ರೋಷರ್‌ ಪಡೆಯಲು ನೀವು ಈಗಲೇ ಕನ್ನಡ ಕ್ಯಾಡ್‌ನೆಸ್ಟ್‌‌ನ ಸಂಪರ್ಕ ವಿಭಾಗದಲ್ಲಿರುವ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಬಹುದು ಅಥವಾ ಇಮೇಲ್‌ ಮಾಡಬಹುದು.

ಬೆಂಗಳೂರಿನ ರಾಜಾಜಿನಗರ, ಬಸವನಗುಡಿ, ಮಲ್ಲೇಶ್ವರಂ ಮತ್ತು ಶೇಷಾದ್ರಿಪುರಂನಲ್ಲಿರುವ ಕ್ಯಾಡ್‌ನೆಸ್ಟ್‌‌ ಸಂಸ್ಥೆಯಲ್ಲಿ ಇರುವ ನೂರಾರು ಕೋರ್ಸ್‌ಗಳ ಮಾಹಿತಿ ಪಡೆಯಲು ಈ ಲಿಂಕ್‌ ಕ್ಲಿಕ್‌ ಮಾಡಿರಿ.

Related Posts

error: Content is protected !!
Scroll to Top