Kannada CADD Nest Private Limited

ನಿಮಗೆ ಉದ್ಯೋಗ ದೊರಕುತ್ತಿಲ್ಲವೇ? ನೀವು ಮಾಡಿದ ಈ ತಪ್ಪುಗಳೇ ಕಾರಣ!

ನಿಮಗೆ ಉದ್ಯೋಗ ದೊರಕುತ್ತಿಲ್ಲವೇ? ನೀವು ಮಾಡಿದ ಈ ತಪ್ಪುಗಳೇ ಕಾರಣ!

ಕನ್ನಡ ಕ್ಯಾಡ್‌ನೆಸ್ಟ್‌ ಓದುಗರಿಗೆ ನಮಸ್ಕಾರ. ಈಗಾಗಲೇ ವಿವಿಧ ಉದ್ಯೋಗ ಮತ್ತು ಶಿಕ್ಷಣ ಮಾಹಿತಿಯ ಮೂಲಕ ಸಾಕಷ್ಟು ವಿದ್ಯಾರ್ಥಿಗಳು ಕನ್ನಡಕ್ಯಾಡ್‌ನೆಸ್ಟ್‌.ಕಾಂನ ಪ್ರಯೋಜನ ಪಡೆಯುತ್ತಿದ್ದೀರಿ ಎನ್ನುವುದಕ್ಕೆ ನೀವು ಕಳುಹಿಸುವ ವಾಟ್ಸ್‌ಆಪ್ ಸಂದೇಶಗಳು, ಇಮೇಲ್‌ಗಳೇ ಸಾಕ್ಷಿ. ಇದರಿಂದ ಇನ್ನಷ್ಟು ಖುಷಿಗೊಂಡ ನಾವು ಇಂದು ಒಂದು ಒಳ್ಳೆಯ ವಿಷಯದೊಂದಿಗೆ ಬಂದಿದ್ದೇವೆ.

ನಮ್ಮಲ್ಲಿ ಸಾಕಷ್ಟು ವಿದ್ಯಾರ್ಥಿಗಳು ಏನೋ ಓದಿರುತ್ತಾರೆ. ಕಷ್ಟಪಟ್ಟು ಉದ್ಯೋಗ ಹುಡುಕುತ್ತಾರೆ. ಎಲ್ಲೆಲ್ಲೂ ರಿಜೆಕ್ಟ್‌ ಆಗುತ್ತಾರೆ. ಎಷ್ಟು ಕಷ್ಟಪಟ್ಟರೂ ಉದ್ಯೋಗ ದೊರಕುತ್ತಿಲ್ಲ ಎಂದು ಅವಲತ್ತುಕೊಳ್ಳುತ್ತಾರೆ. ಇದಕ್ಕೆ ಏನು ಕಾರಣ ಎನ್ನುವುದನ್ನು ಆಲೋಚಿಸಿ ಕನ್ನಡ ಕ್ಯಾಡ್‌ನೆಸ್ಟ್‌‌ ನಿಮಗೆ ಒಂದಿಷ್ಟು ಅಮೂಲ್ಯ ಟಿಪ್ಸ್‌ಗಳನ್ನು ಈ ಮೂಲಕ ನೀಡುತ್ತಿದೆ.

ಅಯ್ಯೋ, ನನಗಿನ್ನೂ ಜಾಬ್‌ ಸಿಕ್ಕಿಲ್ಲ!

ನಿಮ್ಮ ಜೊತೆಗೆ ಓದಿರುವ, ಜಸ್ಟ್ ಪಾಸ್ ಆಗುತ್ತಿದ್ದ ಸ್ನೇಹಿತನಿಗೆ ಒಳ್ಳೆಯ ಕಂಪನಿಯಲ್ಲಿ ಉದ್ಯೋಗ ದೊರಕಿದೆ. ನೀವು ಪದವಿ ಮುಗಿಸಿ ಒಂದು ವರ್ಷ ಕಳೆದರೂ ಉದ್ಯೋಗ ಪಡೆದಿಲ್ಲ, ಆದರೆ, ನಿಮ್ಮ ಜೂನಿಯರ್‍ಗಳಿಗೆ ಉದ್ಯೋಗ ಸಿಕ್ಕಿದೆ. ನೀವು ಹಲವು ಕಂಪನಿಗಳಿಗೆ ರೆಸ್ಯೂಂ ಕಳುಹಿಸಿದ್ದೀರಿ. ಲೆಕ್ಕವಿಲ್ಲದಷ್ಟು ಇಂಟರ್‍ವ್ಯೂಗಳನ್ನು ಅಟೆಂಡ್ ಆಗಿದ್ದೀರಿ. ಎಲ್ಲೆಡೆಯೂ `ಬೆಟರ್ ಲಕ್ ನೆಕ್ಸ್ಟ್ ಟೈಂ’ ಎಂಬ ಮಾತೇ ಕೇಳುತ್ತಾದೆ. ಯಾರೂ ಜಾಬ್ ನೀಡುತ್ತಿಲ್ಲ.

ನಿಮ್ಮ ರೆಸ್ಯೂಂನಲ್ಲಿ ತಪ್ಪಿದೆ!

ಬೇರೆಬೇರೆ ಕ್ಷೇತ್ರಕ್ಕೆ ಬೇರೆ ಬೇರೆ ಬಗೆಯ ರೆಸ್ಯೂಂ ಮಾದರಿಗಳು ಇರುತ್ತವೆ. ನೀವು ರಚಿಸಿದ ರೆಸ್ಯೂಂ ಮಾದರಿಯು ನೀವು ಅರ್ಜಿ ಸಲ್ಲಿಸಿದ ಹುದ್ದೆಗೆ ಹೊಂದಾಣಿಕೆಯಾಗದೆ ಇರಬಹುದು. ಅದರಲ್ಲಿ, ಉದ್ಯೋಗದಾತರು ಬಯಸಿದ ಕೌಶಲ, ಶೈಕ್ಷಣಿಕ ಅರ್ಹತೆ, ಅನುಭವ ಇತ್ಯಾದಿ ಮಾಹಿತಿಗಳ ಜೋಡಣೆ ಸಮರ್ಪಕವಾಗಿರದೆ ಇರಬಹುದು. ನೀವು ಕೆಲಸ ಮಾಡಲು ಇಚ್ಚಿಸುವ ಉದ್ಯಮವನ್ನು ಗಮನದಲ್ಲಿಟ್ಟುಕೊಂಡು ರೆಸ್ಯೂಂ ಅಥವಾ ಸಿವಿಯನ್ನು ಸಿದ್ಧಪಡಿಸಿರಿ. ನಿರ್ದಿಷ್ಟವಾದ ರೆಸ್ಯೂಂ ಅಥವಾ ಸಿವಿ ಇಂದಿನ ಅವಶ್ಯಕತೆ ಎನ್ನುವುದನ್ನು ಮರೆಯಬೇಡಿ.

ರೆಸ್ಯೂಂ ನಾಟ್‌ ಇಂಟ್ರೆಸ್ಟಿಂಗ್‌

ಕಂಪನಿಗಳಿಗೆ ದಿನಕ್ಕೆ ಹಲವು ನೂರು ರೆಸ್ಯೂಂಗಳು ಬರುತ್ತವೆ. ಅವರ ಕಣ್ಣಿಗೆ ನಿಮ್ಮ ರೆಸ್ಯೂಂ ವಿಶೇಷವಾಗಿರುವಂತೆ ಕಾಣಿಸದೆ ಇರಬಹುದು. ಆದಷ್ಟು ಅತ್ಯುತ್ತಮವಾಗಿ ಮತ್ತು ವಿನೂತನವಾಗಿ ರೆಸ್ಯೂಂ ಬರೆದು ಕಳುಹಿಸಿರಿ. ಈಗಿನ ಟೆಕ್‌ ಜಗತ್ತಿನಲ್ಲಿ ತುಂಬಾ ಇಂಟ್ರೆಸ್ಟಿಂಗ್‌ ಆಗಿ ರೆಸ್ಯೂಂ ರಚಿಸಲು ಸಾಕಷ್ಟು ಮಾಹಿತಿಗಳು, ತಂತ್ರಜ್ಞಾನಗಳು ನೆರವಾಗುತ್ತವೆ. ಹೀಗಾಗಿ, ಕ್ರಿಯೇಟಿವ್‌ ಆಗಿ ಯೋಚಿಸಿ ರೆಸ್ಯೂಂ ರಚಿಸಿ.

ತಯಾರಿ ಇಲ್ಲದೆ ಸಂದರ್ಶನಕ್ಕೆ ಬರುವುದು

ನೀವು ತುಂಬಾ ಪ್ರತಿಭಾನ್ವಿತರು. ಆದರೆ, ಸಂದರ್ಶನದ ವಿಷಯಕ್ಕೆ ಬಂದಾಗ ಏನೋ ಅಳುಕು, ನರ್ವಸ್‌ ಆಗುವಿರಿ. ಇದಕ್ಕೆ ಕಾರಣವಾಗಿರುವುದು ನೀವು ಸಿದ್ಧತೆ ನಡೆಸದೆ ಸಂದರ್ಶನಕ್ಕೆ ಬರುವುದಾಗಿದೆ. ಬಹುತೇಕರು ಯಾವುದೇ ಸಿದ್ಧತೆ ನಡೆಸದೆ ಬಂದು ಸಂದರ್ಶಕರ ಮುಂದೆ ತಬ್ಬಿಬ್ಬಾಗುತ್ತಾರೆ. ಉದ್ಯೋಗ ಕ್ಷೇತ್ರಕ್ಕೆ ಸಂಬಂಧಪಟ್ಟ ಇತ್ತೀಚಿನ ಮಾಹಿತಿಗಳು ತಿಳಿಯದೆ ಇರುವುದು, ಕಂಪನಿಯ ವೆಬ್‍ಸೈಟ್‍ನಲ್ಲಿ ಕಂಪನಿಯ ಕುರಿತಾಗಿ ಇರುವ ಮಾಹಿತಿಗಳನ್ನು ಅಧ್ಯಯನ ಮಾಡದೆ ಇರುವುದು, ಅರ್ಜಿ ಸಲ್ಲಿಸಿದ ಉದ್ಯೋಗ ಏನು ಕೌಶಲ ಬಯಸುತ್ತದೆ ಎಂದು ತಿಳಿದುಕೊಳ್ಳದೆ ಇರುವುದು… ಹೀಗೆ ಹಲವು ವಿಷಯಗಳನ್ನು ಸಂದರ್ಶನಕ್ಕೆ ಬರುವ ಮೊದಲೇ ತಿಳಿದುಕೊಳ್ಳದೆ ಬಂದರೆ ಸಂದರ್ಶನದಲ್ಲಿ ವಿಫಲವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಕನ್ನಡ ಕ್ಯಾಡ್‌ನೆಸ್ಟ್‌‌ನ ವಿದ್ಯಾರ್ಥಿ ಸ್ನೇಹಿತರೇ ಸಿದ್ಧತೆ ಮಾಡದೆ ಸಂದರ್ಶನ ಎದುರಿಸಬೇಡಿ.

ಡ್ರೆಸಿಂಗ್‌ ಬಗ್ಗೆ ಗಮನ ನೀಡದೆ ಇರುವುದು

ಉದ್ಯೋಗ ಸಂದರ್ಶನಕ್ಕೆ ಹೋಗುವಾಗ ಯಾವ ಡ್ರೆಸ್ ಹಾಕುವಿರಿ? ಯೆಸ್‌, ಸಂದರ್ಶಕರ ಗಮನ ಸೆಳೆಯುವಲ್ಲಿ ನಿಮ್ಮ ಡ್ರೆಸಿಂಗ್‌ ಸೆನ್ಸ್‌ ಸಹ ಪ್ರಮುಖ ಪಾತ್ರ ವಹಿಸುತ್ತದೆ. ಆಯಾ ಕಂಪನಿಯ ಸಂಸ್ಕøತಿಗಳನ್ನು ಗಮನದಲ್ಲಿಟ್ಟುಕೊಂಡು ನೀಟಾಗಿ ಡ್ರೆಸ್ ಮಾಡಿಕೊಂಡು ಸಂದರ್ಶನಕ್ಕೆ ಹೋಗಿ. ಆದಷ್ಟು ನಿಮ್ಮ ಉಡುಗೆ ತೊಡುಗೆ ವೃತ್ತಿಪರವಾಗಿರಲಿ.

ನಿಮ್ಮ ವರ್ತನೆ ಪ್ರೊಫೆಷನಲ್‌ ಆಗಿದೆಯೇ?

ಸಂದರ್ಶನದ ಸಮಯದಲ್ಲಿ ನಿಮ್ಮ ವರ್ತನೆಯು ವೃತ್ತಿಪರವಾಗಿರಬೇಕು. ನಿಮ್ಮ ವರ್ತನೆಯು ಆ ಕಂಪನಿಯ ಸಂಸ್ಕøತಿಗೆ ಸೂಕ್ತವಾಗಿಲ್ಲವೆಂದು ಸಂದರ್ಶಕರಿಗೆ ಅನಿಸಿದರೆ ನೀವು ಅವಕಾಶವನ್ನು ಕಳೆದುಕೊಳ್ಳಬೇಕಾಗಬಹುದು. ಇದಕ್ಕಾಗಿ ನೀವು ಆಂಗಿಕ ಅಭಿನಯ ಮತ್ತು ಸಂದರ್ಶನ ಕೌಶಲಗಳನ್ನು ಕಲಿತುಕೊಳ್ಳಿ.

ಉತ್ಸಾಹ ಇಲ್ಲದಿದ್ದರೆ ನೋ ಜಾಬ್‌!

ಬಹುತೇಕ ಅಭ್ಯರ್ಥಿಗಳು ಸಂದರ್ಶನದಲ್ಲಿ ಸಪ್ಪೆ ಮುಖ ಮಾಡಿಕೊಂಡು ಇರುತ್ತಾರೆ. ನಿಮ್ಮಲ್ಲಿ ಕಂಪನಿಯ ಕುರಿತು, ಸಂದರ್ಶನದ ಕುರಿತು ಉತ್ಸಾಹ ಇರಬೇಕು. ಸಂದರ್ಶನದಲ್ಲಿ ಕೇಳಬಹುದಾದ ಒಂದಿಷ್ಟು ಪ್ರಶ್ನೆಗಳನ್ನು  ಅಂದಾಜು ಮಾಡಿಕೊಂಡು ಅದಕ್ಕೆ ಹೇಗೆ ಉತ್ತರಿಸುವುದೆಂದು ಮನೆಯಲ್ಲಿಯೇ ಸಿದ್ಧತೆ ನಡೆಸಿಕೊಳ್ಳಿ.

ಸುಳ್ಳು ಹೇಳಿದರೆ ಗೊತ್ತಾಗುತ್ತದೆ…

ರೆಸ್ಯೂಂನಲ್ಲಿ ನೀವು ಯಾವುದಾದರೂ ವ್ಯಕ್ತಿಯ ಹೆಸರನ್ನು ರೆಫರೆನ್ಸ್ ಆಗಿ ನೀಡಿರಬಹುದು. ಆದರೆ, ಆ ರೆಫರೆನ್ಸ್ ಸಂಖ್ಯೆ ಅಸ್ತಿತ್ವದಲ್ಲಿ ಇರದೆ ಇರುವುದು, ಅಥವಾ ರೆಫರೆನ್ಸ್‍ನಲ್ಲಿ ತಿಳಿಸಿದ ವ್ಯಕ್ತಿಗೆ ನಿಮ್ಮ ಬಗ್ಗೆ ತಿಳಿಯದೆ ಇರುವುದು ಇತ್ಯಾದಿ ಅಂಶಗಳು ಉದ್ಯೋಗದಾತರಿಗೆ ನಿಮ್ಮ ಬಗ್ಗೆ ಇರುವ ನಂಬಿಕೆಯನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ಹೀಗಾಗಿ, ರೆಫರೆನ್ಸ್ ವಿಭಾಗದ ಕಡೆಗೂ ಗಮನ ನೀಡಿರಿ.

ಫಾಲೊಅಪ್ ಮಾಡದೆ ಇರುವುದು

ಸಂದರ್ಶನ ಮುಗಿಸಿದ ನಂತರ ಕಂಪನಿಯ ಕಡೆಯಿಂದ ನಿಮಗೆ ಇಮೇಲ್ ಬರಬಹುದು. ಅದಕ್ಕೆ ಹೆಚ್ಚು ತಡಮಾಡದೆ ಉತ್ತರಿಸಿ. ಎಲ್ಲಾದರೂ ಇಮೇಲ್ ಬರದೆ ಇದ್ದರೂ, ಸಂದರ್ಶನಕ್ಕೆ ಅವಕಾಶ ನೀಡಿದ್ದಕ್ಕೆ ಧನ್ಯವಾದ ತಿಳಿಸಿ ಕಂಪನಿಗೊಂದು ಇಮೇಲ್ ಕಳುಹಿಸಿ. ಭವಿಷ್ಯದಲ್ಲಿ ನಿಮಗೆ ಅವಕಾಶ ನೀಡಲು ಈ ಸಂವಹನ ನೆರವಾಗಬಹುದು.

ಸರಿಯಾದ ಸ್ಕಿಲ್‌ಗಳು ಇಲ್ಲದೆ ಇರುವುದು

ಇದು ಅತ್ಯಂತ ಪ್ರಮುಖ ವಿಷಯ. ನೀವು ಪಡೆದ ಡಿಗ್ರಿಯಿಂದ ಮಾತ್ರ ಉದ್ಯೋಗ ದೊರಕದು. ಆಯಾ ಕ್ಷೇತ್ರಕ್ಕೆ ಬೇಕಾದ ಕೌಶಲಗಳನ್ನು ಕಲಿಯಿರಿ. ಸ್ಕಿಲ್‌ ಕಲಿಯಲು ನೀವು ಹೆಚ್ಚು ಖರ್ಚು ಮಾಡಬೇಕಿಲ್ಲ. ಬೆಂಗಳೂರಿನ ಬಸವನಗುಡಿ, ರಾಜಾಜಿನಗರ, ಶೇಷಾದ್ರಿಪುರಂ ಮತ್ತು ಮಲ್ಲೇಶ್ವರಂನಲ್ಲಿರುವ ಕ್ಯಾಡ್‌ನೆಸ್ಟ್‌‌ ಸಂಸ್ಥೆಯು ಮುಖ್ಯವಾಗಿ ಕರ್ನಾಟಕದ ಬಡ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಕೈಗೆಟುಕುವ ದರದಲ್ಲಿ ವಿವಿಧ ಉದ್ಯೋಗಾಧರಿತ ಕೋರ್ಸ್‌ಗಳನ್ನು ನೀಡುತ್ತದೆ.

ಈಗಲೇ ವಾಟ್ಸಪ್‌ ಮೂಲಕ ನಿಮಗೆ ಬೇಕಾದ ಕೋರ್ಸ್‌ನ ಮಾಹಿತಿ ಪಡೆಯಿರಿ.

ನೀವು ಓದಲೇಬೇಕಾದ ಇತರೆ ಲೇಖನಗಳು

Ad Widget

Related Posts

error: Content is protected !!
Scroll to Top