Kannada CADD Nest Private Limited

ಲೊಗೊ ವಿನ್ಯಾಸ ಕಲಿಯಿರಿ, ಗ್ರಾಫಿಕ್ಸ್ ಡಿಸೈನ್ ಕೋರ್ಸ್ ಕಲಿತರೆ ಅಗಣಿತ ಅವಕಾಶ

ಲೊಗೊ ವಿನ್ಯಾಸ ಕಲಿಯಿರಿ, ಗ್ರಾಫಿಕ್ಸ್ ಡಿಸೈನ್ ಕೋರ್ಸ್ ಕಲಿತರೆ ಅಗಣಿತ ಅವಕಾಶ

ಯಾವುದೇ ಕಂಪನಿಯ ವೆಬ್‌ಸೈಟ್‌ ನೋಡಿ. ಅಲ್ಲೊಂದು ಪುಟ್ಟ ಲೊಗೊ ಇರುತ್ತದೆ. ನೋಡಲು ಪುಟ್ಟದಾಗಿದ್ದರೂ ಆ ಲೊಗೊ ವಿನ್ಯಾಸ ಮಾಡುವುದು ಸರಳ ಕೆಲಸವಲ್ಲ. ಅದರ ಹಿಂದೆ ಆ ಕಂಪನಿಯ ಗುರಿ, ಮಿಷನ್‌, ವಿಷನ್‌ ಎಲ್ಲವೂ ಅಡಕವಾಗಿರುತ್ತವೆ. ಇದೇ ಕಾರಣಕ್ಕೆ ಕೆಲವು ಸಾವಿರ ರೂ.ನಿಂದ ಲಕ್ಷ ಲಕ್ಷ ಹಣ ನೀಡಿ ಲೊಗೊ ವಿನ್ಯಾಸ ಮಾಡಿಸುತ್ತಾರೆ.

ಒಂದೆರಡು ವರ್ಷದ ಹಿಂದಿನ ಸುದ್ದಿಯೊಂದನ್ನು ನೆನಪಿಸಿಕೊಳ್ಳೋಣ. ಪ್ರಧಾನಿ ನರೇಂದ್ರ ಮೋದಿ ಸರಕಾರದ ಮಹತ್ವಾಕಾಂಕ್ಷಿ ಬುಲೆಟ್ ಟ್ರೈನ್ ಯೋಜನೆಗೆ ಅಹಮದಾಬಾದಿನ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಡಿಸೈನ್ ಸಂಸ್ಥೆಯ  ದ್ವಿತೀಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಚಕ್ರಾಧರ್‌ ರೂಪಿಸಿರುವ ವಿಶಿಷ್ಟ ಲೊಗೊ ಆಯ್ಕೆಯಾದ ಸುದ್ದಿಯನ್ನು ನೀವು ಓದಿರಬಹುದು. 30 ಲೊಗೊ ಸ್ಪರ್ಧೆಗಳಲ್ಲಿ ಫೇಲಾಗಿದ್ದೆ. ಬುಲೆಟ್ ಟ್ರೈನ್‍ಗೆ ನಾನು ರಚಿಸಿದ ಲೊಗೊ ಆಯ್ಕೆಯಾಗಿದ್ದು ನನ್ನ ಮೊದಲ ಜಯ ಎಂದು ಹೇಳುವ ಚಕ್ರಾಧರ್‌ಗೆ ಆ ಸಮಯದಲ್ಲಿ ಕೇವಲ ೨೭ ವರ್ಷ ವಯಸ್ಸು.  ಅಹಮದಾಬಾದಿನ ಶಿಕ್ಷಣ ಸಂಸ್ಥೆಯಲ್ಲಿ ಡಿಸೈನ್ ವಿಷಯದಲ್ಲಿ ದ್ವಿತೀಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಾಗಲೇ ಈ ಅವಕಾಶ ಪಡೆದಿದ್ದರು.

ಇದು ಲೊಗೊ ವಿನ್ಯಾಸದಲ್ಲಿ ಸಾಧನೆ ಮಾಡಿದ ಭಾರತೀಯೊಬ್ಬನ ಇತ್ತೀಚಿನ ಕತೆ. ಜಗತ್ತಿನಾದ್ಯಂತ ಲೊಗೊ ವಿನ್ಯಾಸದಲ್ಲಿ ದಂತಕತೆಯಾಗಿರುವ ಹಲವು ವ್ಯಕ್ತಿಗಳಿದ್ದಾರೆ.  ಚಿಪ್ ಕಿಡ್ ಎಂಬಾತ ನ್ಯೂಯಾರ್ಕ್‍ನ ವ್ಯಕ್ತಿ. ಜುರಾಸಿಕ್ ಪಾರ್ಕ್ ಪುಸ್ತಕಕ್ಕೆ ಲೊಗೊ ವಿನ್ಯಾಸ ಮಾಡಿ ಜನಪ್ರಿಯತೆ ಪಡೆದಿದ್ದಾರೆ. ಕೋಕೊಕೊಲಾಕ್ಕೆ ಫ್ರಾಂಕ್ ಎಂ ರೊಬಿನ್‍ಸನ್ ರಚಿಸಿದ ಲೊಗೊ ವಿನ್ಯಾಸವು ಜನಪ್ರಿಯವಾಗಿದೆ. ನೀವು ಪ್ರತಿಯೊಂದು ಜನಪ್ರಿಯ ಕಂಪನಿಯ ಲೊಗೊ ವಿನ್ಯಾಸದ ಜಾಡು ಹುಡುಕಿದರೆ ಜನಪ್ರಿಯ ಲೊಗೊ ವಿನ್ಯಾಸಕರ ಪರಿಚಯವಾಗುತ್ತದೆ.

ಹೇಗಿರಬೇಕು ಲೊಗೊ?

ಕಂಪನಿಗಳ ಲೊಗೊವೊಂದನ್ನು ನೋಡಿದಾಗ ಓಹ್, ಇದನ್ನು ರಚಿಸುವುದು ಎಷ್ಟು ಸರಳ ಎಂದುಕೊಳ್ಳಬಹುದು. ಆದರೆ, ಅದು ನೋಡಿದಷ್ಟು ಸರಳವಲ್ಲ. ಪ್ರತಿಯೊಂದು ಕಂಪನಿಯು ತನ್ನ ಬ್ರ್ಯಾಂಡ್‍ನ ಲೊಗೊ ವಿನ್ಯಾಸವನ್ನು ವಿಶಿಷ್ಟವಾಗಿರಲು ಬಯಸುತ್ತದೆ. ಇದಕ್ಕಾಗಿ ಲೊಗೊ ವಿನ್ಯಾಸಕರು ಕಂಪನಿಯ ಉತ್ಪನ್ನಗಳು ಮತ್ತು ಗುರಿಗಳನ್ನು ಗಮನದಲ್ಲಿಟ್ಟುಕೊಂಡು ಕುಶಲತೆಯಿಂದ ಲೊಗೊ ವಿನ್ಯಾಸ ಮಾಡಬೇಕಾಗುತ್ತದೆ. ಲೊಗೊ ವಿನ್ಯಾಸ ಮಾಡುವಾಗ ಈ ಮುಂದಿನ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿರಿ.

  • ಲೊಗೊ ಅನನ್ಯವಾಗಿರಲಿ ಮತ್ತು ಬುದ್ಧಿವಂತಿಕೆಯಿಂದ ರಚಿಸಿ.
  • ಬ್ರ್ಯಾಂಡ್ ಅನ್ನು ಅರ್ಥಮಾಡಿಕೊಂಡು ಲೊಗೊ ರಚಿಸಿ. ನೀವು ಆ್ಯಪಲ್ ಸ್ಮಾರ್ಟ್‍ಫೋನ್ ಕಂಪನಿಯ ಲೊಗೊ ನೋಡಿರಬಹುದು. ಅದರಲ್ಲಿ ಕಚ್ಚಿರುವ ಆ್ಯಪಲ್ ಇದೆ. ಬೈಟ್ ಅಂದರೆ ಕಚ್ಚುವುದು ಎಂದಾಗುತ್ತದೆ. ಇದರೊಂದಿಗೆ ಬೈಟ್ ಎನ್ನುವುದು ಕಂಪ್ಯೂಟರ್ ತಂತ್ರಜ್ಞಾನ ಲೋಕದಲ್ಲಿ ಜನಪ್ರಿಯವಾದ ಪದವೂ ಹೌದು.
  • ಬಣ್ಣದ ಆಯ್ಕೆಯ ಕುರಿತು ಗಮನವಿರಲಿ. ಕೆಂಪು ಬಣ್ಣವು ಎನರ್ಜಿಟಿಕ್, ಸೆಕ್ಸಿ ಮತ್ತು ಬೊಲ್ಡ್ ಸಂಕೇತ. ಆರೇಂಜ್ ಬಣ್ಣವು ಕ್ರಿಯೆಟಿವ್, ಫ್ರೆಂಡ್ಲಿ, ಯೂತ್‍ಫುಲ್ ಸಂಕೇತ. ಹಳದಿ ಬಣ್ಣವು ಆಶಾವಾದವನ್ನು ಸೂಚಿಸುತ್ತದೆ. ಹಸಿರು ಬಣ್ಣವು ಪ್ರಗತಿ, ಸಾಂಸ್ಥಿಕ, ಆರ್ಗಾನಿಕ್ ಇತ್ಯಾದಿಗಳನ್ನು ಸೂಚಿಸುತ್ತದೆ. ನೀಲಿಯು ವೃತ್ತಿಪರ, ವೈದ್ಯಕೀಯ, ನಂಬಿಕೆ ಇತ್ಯಾದಿಗಳನ್ನು ಪ್ರತಿನಿದಿಸುತ್ತದೆ. ಕಪ್ಪು  ನಂಬಲರ್ಹ ಮತ್ತು ಶಕ್ತಿಯನ್ನು ಸೂಚಿಸುತ್ತದೆ ಮತ್ತು ಬಿಳಿ ಬಣ್ಣವು ಸರಳತೆ, ಶುದ್ಧತೆಯನ್ನು ಪ್ರತಿನಿಸುತ್ತದೆ. ಹೀಗೆ ಪ್ರತಿಯೊಂದು ಬಣ್ಣವನ್ನೂ ಆಯ್ಕೆ ಮಾಡಿಕೊಳ್ಳುವಾಗ ಈ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿರಿ.
  • ಲೊಗೊವು ವರ್ಡ್‍ಮಾರ್ಕ್ ಮತ್ತು ಸಿಂಬಲ್ ಅನ್ನು ಒಳಗೊಂಡಿರಬೇಕು. ರೇಬಾನ್, ಕೊಕೊಕೊಲಾ ಮತ್ತು ಐಬಿಎಂ ಲೊಗೊಗಳನ್ನು ಗಮನಿಸಿರಿ.
  • ಸರಳವಾಗಿರಲಿ. ಅಮೇಝಾನ್.ಕಾಂ, ಫೆಡ್‍ಎಕ್ಸ್, ಆಡಿದಾಸ್, ಇತ್ಯಾದಿಗಳ ಲೊಗೊಗಳು ಸರಳತೆಯಿಂದ ಗಮನ ಸೆಳೆಯುತ್ತದೆ.

ಗ್ರಾಫಿಕ್ ವಿನ್ಯಾಸಕರು

`ಯಾವುದು ಚೆನ್ನಾಗಿ ಕಾಣುತ್ತದೆಯೋ, ಅದೇ ಮಾರಾಟವಾಗುತ್ತದೆ!’ ಎನ್ನುವ ಮಾತಿದೆ. ನೀವು ಯಾವುದಾದರೂ ಉತ್ಪನ್ನವನ್ನು ಖರೀದಿಸುವಾಗ ಅದರ ಪ್ಯಾಕೇಜಿಂಗ್ ಸಹ ನಿಮ್ಮನ್ನು ಆಕರ್ಷಿಸುವ ವಿಷಯಗಳಲ್ಲಿ ಒಂದಾಗಿದೆ. ಎಲ್ಲಾ ಉತ್ಪನ್ನಗಳು ಬಹುತೇಕ  ಒಂದೇ ರೀತಿ ಇರುತ್ತವೆ ಮತ್ತು ಅದರ ಪ್ಯಾಕೇಜಿಂಗ್ ಮಾತ್ರ ಭಿನ್ನವಾಗಿರುತ್ತವೆ. ಉತ್ಪನ್ನವನ್ನು ಮೊದಲ ನೋಟಕ್ಕೆ ಆಕರ್ಷಿಸುವಂತೆ ಮಾಡುವ ಕೆಲಸ ಗ್ರಾಫಿಕ್ ಡಿಸೈನರ್‍ಗಳದ್ದು. ಈ ರೀತಿಯ ವಿನ್ಯಾಸ ಗ್ರಾಹಕರ ಗಮನ ಸೆಳೆಯುವಂತೆ ಇರಬೇಕು.

ಇದೇ ಕಾರಣಕ್ಕೆ ಭಾರತದಲ್ಲಿ ಗ್ರಾಫಿಕ್ ವಿನ್ಯಾಸಕರಿಗೆ ಬೇಡಿಕೆ ಹೆಚ್ಚಿದೆ. ಈಗಿನ ಡಿಜಿಟಲ್ ಕ್ಷೇತ್ರದಲ್ಲಿಯಂತೂ ಇವರಿಗೆ ಬೇಡಿಕೆ ಇನ್ನೂ ಹೆಚ್ಚಾಗಿದೆ. ಪ್ರತಿಯೊಂದು ಕಂಪನಿಗಳೂ ಈಗ ಗ್ರಾಫಿಕ್ ಡಿಸೈನರ್‍ಗಳನ್ನು ನೇಮಕ ಮಾಡಿಕೊಳ್ಳಲು ಬಯಸುತ್ತಿವೆ. `ಕಂಪನಿಯು ಶೇಕಡ 40ರಷ್ಟು ಸಂವಹನವನ್ನು ವಿಶುಯಲ್ ಆಗಿ ಮಾಡುತ್ತದೆ. ಪ್ರತಿಯೊಂದು ಉತ್ಪನ್ನವೂ ಗ್ರಾಹಕರ ಸೆಳೆಯುವಂತೆ ಮಾಡುವ ಕೆಲಸ ಇವರದ್ದು. ಹೀಗಾಗಿ ಮಾಧ್ಯಮಗಳು, ಪ್ರಕಾಶಕರು, ಎಫ್‍ಎಂಸಿಜಿ, ರಿಟೇಲ್, ಸಾಫ್ಟ್‌ವೇರ್ ಸೇರಿದಂತೆ ಎಲ್ಲಾ ವಲಯಗಳಲ್ಲಿಯೂ ಗ್ರಾಫಿಕ್ ವಿನ್ಯಾಸಕರಿಗೆ ಬೇಡಿಕೆಯಿದೆ.

ಲೊಗೊ ವಿನ್ಯಾಸವನ್ನು ಮಾತ್ರ ಕಲಿಸುವ ಶಿಕ್ಷಣ ಸಂಸ್ಥೆಗಳಿಲ್ಲ. ಇದು ಗ್ರಾಫಿಕ್ ವಿನ್ಯಾಸ ಅಥವಾ ಅನಿಮೇಷನ್ ಕೋರ್ಸ್‍ನಲ್ಲೇ ಬರುವ ಒಂದು ವಿಭಾಗವಾಗಿದೆ. ಕನ್ನಡ ಕ್ಯಾಡ್‌ನೆಸ್ಟ್‌‌ ಮೂಲಕ ನಿಮಗೆ ವಿವಿಧ ಶೈಕ್ಷಣಿಕ ಮಾಹಿತಿ ನೀಡುವ ಬಸವನಗುಡಿ, ರಾಜಾಜಿನಗರ, ಮಲ್ಲೇಶ್ವರಂ ಮತ್ತು ಶೇಷಾದ್ರಿಪುರಂ ಕ್ಯಾಡ್‌ನೆಸ್ಟ್‌‌ ಸಂಸ್ಥೆಯೂ ಗ್ರಾಫಿಕ್ ವಿನ್ಯಾಸ ಕೋರ್ಸ್‌ ಕಲಿಸುತ್ತದೆ. ನೀವು ಡಿಸೈನ್‌ ಕುರಿತು ಆಸಕ್ತಿ ಹೊಂದಿದ್ದರೆ ಈ ವಿಷಯದಲ್ಲಿ ಕೋರ್ಸ್‌ ಮಾಡಬಹುದು.

Ad Widget

Related Posts

error: Content is protected !!
Scroll to Top