Kannada CADD Nest Private Limited

ಕ್ಯಾಡ್‌ನೆಸ್ಟ್‌ ಡಿಪ್ಲೊಮಾ ಇನ್ ಅಡ್ವಾನ್ಸಡ್ 3ಡಿ ಅನಿಮೇಷನ್ ಕೋರ್ಸ್ ಬಗ್ಗೆ ನಿಮಗೆಷ್ಟು ಗೊತ್ತು?

ಕ್ಯಾಡ್‌ನೆಸ್ಟ್‌ ಡಿಪ್ಲೊಮಾ ಇನ್ ಅಡ್ವಾನ್ಸಡ್ 3ಡಿ ಅನಿಮೇಷನ್ ಕೋರ್ಸ್ ಬಗ್ಗೆ ನಿಮಗೆಷ್ಟು ಗೊತ್ತು?

ಅನಿಮೇಷನ್‌ ಎಂದರೆ ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರೂ ಕಣ್ಣರಳಿಸುತ್ತಾರೆ. ಮಗಧೀರ, ಬಾಹುಬಲಿ ಇತ್ಯಾದಿ ಸಿನಿಮಾಗಳ ಪ್ರಭಾವವೂ ಹೌದು. ವಿದ್ಯಾರ್ಥಿಗಳಿಗೂ ಅನಿಮೇಷನ್‌ ಜಗತ್ತಿಗೆ ಪ್ರವೇಶಿಸುವ ಬಯಕೆ ಇರುತ್ತದೆ. ಆದರೆ, ಅದಕ್ಕಾಗಿ ಏನು ಓದಬೇಕು? ಯಾವ ರೀತಿಯ ಅಡಿಪಾಯ ಇರಬೇಕು ಎಂದು ಸ್ಪಷ್ಟತೆ ಇರುವುದಿಲ್ಲ.

ಅನಿಮೇಷನ್‌ ಜಗತ್ತಿಗೆ ಪ್ರವೇಶ ಪಡೆಯಲು ಕ್ಯಾಡ್‌ನೆಸ್ಟ್‌‌ ಅನಿಮೇಷನ್‌ ಕೋರ್ಸ್‌ಗಳು ಸೂಕ್ತವಾಗಿದೆ. ಇಲ್ಲಿ ಸಾಕಷ್ಟು ವಿದ್ಯಾರ್ಥಿಗಳು ಅನಿಮೇಷನ್‌ ಜಗತ್ತಿಗೆ ಪ್ರವೇಶ ಪಡೆಯಲು ಮತ್ತು ಅಲ್ಲಿ ಅನನ್ಯ ಸಾಧನೆ ಮಾಡಲು ಬೆಂಬಲ ನೀಡಿರುವ ಡಿಪ್ಲೊಮಾ ಇನ್‌ ಅಡ್ವಾನ್ಸಡ್‌ 3ಡಿ ಅನಿಮೇಷನ್‌ ಕೋರ್ಸ್‌ನ ಬಗ್ಗೆ ತಿಳಿದುಕೊಳ್ಳೋಣ.

ಇದು ೨ ವರ್ಷದ ನಾಲ್ಕು ಸೆಮಿಸ್ಟಾರ್‌ನ ಕೋರ್ಸ್‌. ನಿಮಗೆ ಅನಿಮೇಷನ್‌ ಜಗತ್ತಿನಲ್ಲಿ ಉದ್ಯೋಗ ಪಡೆಯಲು ಸೂಕ್ತವಾಗುವಂತೆ ಈ ಕೋರ್ಸ್‌ ವಿನ್ಯಾಸ ಮಾಡಲಾಗಿರುತ್ತದೆ.

ಸೆಮಿಸ್ಟಾರ್‌ 1: ಡಿಪ್ಲೊಮಾ ಇನ್‌ ಅಡ್ವಾನ್ಸಡ್‌ 3ಡಿ ಅನಿಮೇಷನ್‌

 ಸಾಮಾನ್ಯ ಚಿತ್ರ ರಚನೆ ತರಗತಿಗಳು, ಅನಾಟಮಿ ಅಧ್ಯಯನ, ಗ್ರಾಫಿಕ್ಸ್‌f ಮತ್ತು ಇಲ್ಯುಸ್ಟ್ರೇಷನ್‌ ಬಳಕೆ ಕಲಿಯಲು ಅಡೋಬ್‌ ಇಲ್ಯುಸ್ಟ್ರೇಟರ್ ಸಿಸಿ, ಅಡೋಬ್‌ ಫೋಟೊಶಾಪ್‌ ಸಿಸಿ, ಡಿಜಿಟಲ್‌ ಇಲ್ಯುಸ್ಟ್ರೇಷನ್‌, ಕ್ಯಾರೆಕ್ಟರ್‌ ಡಿಸೈನ್‌, ಡಿಜಿಟಲ್‌ ಪೇಂಟಿಂಗ್‌, ಡಿಜಿಟಲ್‌ ಫಿಲ್ಮ್‌ ಮೇಕಿಂಗ್‌, ಆಡೋಬ್‌ ಅಡಿಷನ್‌ ಸಿಸಿ ಬಳಸಿ ಆಡಿಯೋ ಮತ್ತು ಧ್ವನಿ ಸಂಪಾದನೆ, ಅಡೋಬ್‌ ಪ್ರೀಮಿಯರ್‌ ಪ್ರೊ ಸಿಸಿ ಬಳಸಿ ವಿಡಿಯೋ ಎಡಿಟಿಂಗ್‌ ಇತ್ಯಾದಿ ಹಲವು ವಿಷಯಗಳನ್ನು ಮೊದಲ ಸೆಮಿಸ್ಟಾರ್‌ನಲ್ಲಿ ಕಲಿಯಬಹುದು. ಆಂತರಿಕ ಮೌಲ್ಯಮಾಪನ ಮತ್ತು ಅಸೈನ್‌ಮೆಂಟ್‌ಗಳು, ಸೆಮಿಸ್ಟಾರ್‌ ಕೊನೆಗೆ ಥಿಯರಿ ಪರೀಕ್ಷೆ, ಪ್ರಾಕ್ಟಿಕಲ್‌ ಇತ್ಯಾದಿಗಳು ಇರುತ್ತವೆ.

ಸೆಮಿಸ್ಟಾರ್‌ 2ರಲ್ಲಿ ಏನು ಓದುವಿರಿ?

ಎರಡನೇ ಸೆಮಿಸ್ಟಾರ್‌ ಇನ್ನಷ್ಟು ಆಸಕ್ತಿದಾಯಕ. ಇಲ್ಲಿ ನೀವು 2ಡಿ ಅನಿಮೇಷನ್‌ ಪರಿಕಲ್ಪನೆ, ಡಿಜಿಟಲ್‌ ಪ್ರಿಪ್ರೊಡಕ್ಷನ್‌ ಮತ್ತು ಸ್ಟೋರಿಬೋರ್ಡಿಂಗ್‌ ಮತ್ತು ಅನಿಮೇಟಿಕ್ಸ್‌ ಕಲಿಯುವಿರಿ. ಅಡೋಬ್‌ ಅನಿಮೇಟ್‌ ಸಿಸಿ ಬಳಸಿಕೊಂಡು 2ಡಿ ಅನಿಮೇಷನ್‌ ಹೇಗೆ ಮಾಡುವುದೆಂದೂ ಕಲಿಯುವಿರಿ. ಮುಂದೆ ನೀವು ೩ಡಿ ಅನಿಮೇಷನ್‌ ಕಲಿಯಲು ಇವು ತಳಪಾಯವಾಗುವಂತಹ ವಿಷಯಗಳು. ಇದರೊಂದಿಗೆ ಆಂತರಿಕ ಅಸೈನ್‌ಮೆಂಟ್‌ಗಳು ಮತ್ತು ಮೌಲ್ಯಮಾಪನ, ಸೆಮಿಸ್ಟಾರ್‌ ಕೊನೆಗೆ ಥಿಯರಿ ಪರೀಕ್ಷೆ ಇರುತ್ತದೆ. ೨ಡಿ ಅನಿಮೇಷನ್‌ ಪೋರ್ಟ್‌ಫೋಲಿಯೊ ಪ್ರ್ಯಾಕ್ಟಿಕಲ್‌ ಇರುತ್ತದೆ.

ಸೆಮಿಸ್ಟಾರ್‌ 3 ಇನ್ನೂ ಇಂಟ್ರೆಸ್ಟಿಂಗ್!

ಅನಿಮೇಷನ್‌ ಜಗತ್ತಿನಲ್ಲಿ ಕರಿಯರ್‌ ರೂಪಿಸಲು ಬಯಸುವವರಿಗೆ ತಕ್ಕಂತೆ ಕ್ಯಾಡ್‌ನೆಸ್ಟ್‌‌ ಕೋರ್ಸ್‌ಗಳ ಪಠ್ಯಕ್ರಮ ವಿನ್ಯಾಸ ಮಾಡಲಾಗಿದೆ. ನೀವು ಮೂರನೇ ಸೆಮಿಸ್ಟಾರ್‌ನಲ್ಲಿ ೩ಡಿ ಬೇಸಿಕ್ಸ್‌ ಕಲಿಯುವಿರಿ. ಆಟೋಡೆಸ್ಕ್‌ ೩ಡಿಎಸ್‌ಮ್ಯಾಕ್ಸ್‌ ಬಳಸಿ ಮಾಡಿಲಿಂಗ್‌ ಟು ಅನಿಮೇಷನ್‌ ಎಂಬ ಆಸಕ್ತಿದಾಯಕ ವಿಷಯವನ್ನು ಕಲಿಯುವಿರಿ. ೩ಡಿ ಜೊತೆಗೆ ಮಾಡೆಲಿಂಗ್‌, ಟೆಕ್ಷರ್‌ (ಮೆಟಿರಿಯಲ್ಸ್‌), ಲೈಟ್ಸ್‌ ಮತ್ತು ಕ್ಯಾಮೆರಾ, ವಿ-ರೇ ಜೊತೆಗೆ ರೆಂಡರಿಂಗ್‌, ಅಡೋಬ್‌ ಆಫ್ಟರ್‌ ಎಫೆಕ್ಟ್‌ ಸಿಸಿ ಬಳಸಿ ೨.೫ಡಿ ಮತ್ತು ೩ಡಿ ಮೋಷನ್‌ ಗ್ರಾಫಿಕ್ಸ್‌ ಮತ್ತು ಎಫ್‌ಎಕ್ಸ್‌ ಕೌಶಲ ಕಲಿಯುವಿರಿ. ಡಿಜಿಟಲ್‌ ಕಂಪೊಸ್ಟಿಂಗ್‌ ಸಹ ಈ ಸೆಮಿಸ್ಟಾರ್‌ನಲ್ಲಿ ಕಲಿಯಬಹುದಾಗಿದೆ. ಉಳಿದಂತೆ ಪ್ರತಿ ಸೆಮಿಸ್ಟಾರ್‌ನಂತೆ ಆಂತರಿಕ ಮೌಲ್ಯಮಾಪನ ಮತ್ತು ಅಸೈನ್‌ಮೆಂಟ್‌ಗಳು ಇರುತ್ತವೆ. ಸೆಮಿಸ್ಟಾರ್‌ ಕೊನೆಗೆ ಥಿಯರಿ ಪರೀಕ್ಷೆ ಮತ್ತು ಪ್ರ್ಯಾಕ್ಟಿಕಲ್‌ ೩ಡಿ ಪೋರ್ಟ್‌ಫೋಲಿಯೊ ಇರುತ್ತದೆ.

೪ನೇ ಸೆಮಿಸ್ಟಾರ್‌

ಇಲ್ಲಿ ನೀವು ಇನ್ನೂ ಆಕರ್ಷಕ ಮತ್ತು ಅವಶ್ಯಕ ಸ್ಕಿಲ್‌ಗಳನ್ನು ಕಲಿಯುವಿರಿ. ಆಟೋಡೆಸ್ಕ್‌ ಮಾಯಾ ಬಳಸಿ ೩ಡಿ ಮಾಡೆಲಿಂಗ್‌ ಮಾಡಬಹುದು. ಕ್ಯಾರೆಕ್ಟರ್‌ ಅನಿಮೇಷನ್‌ ಕಲಿಯಬಹುದು. ಟೆಕ್ಷರಿಂಗ್‌, ಲೈಟಿಂಗ್‌, ಅನಿಮೇಷನ್‌ ಮತ್‌ತು ರೆಂಡರಿಂಗ್, ಪೇಂಟ್‌ ಇಫೆಕ್ಟ್ಸ್‌ ಇತ್ಯಾದಿ ಪಠ್ಯಕ್ರಮಗಳು ಇರುತ್ತವೆ.

ಕೊನೆಗೆ ಥಿಯರಿ ಪರೀಕ್ಷೆ ಇರುತ್ತದೆ. ಪೋರ್ಟ್‌ಫೋಲಿಯೊ ಡೆಮೊ ರೀಲ್‌ ಪ್ರ್ಯಾಕ್ಟಿಕಲ್‌ ಇರುತ್ತದೆ. ಕ್ರೌಡ್‌ ಸ್ಟಿಮ್ಯುಲೇಷನ್‌, ಪ್ರೊಜೆಕ್ಷನ್‌ ಮ್ಯಾಪಿಂಗ್‌, ೩ಡಿ ಫಾರ್‌ ಆಗ್ಯುಮೆಂಟೆಂಡ್‌ ರಿಯಾಲ್ಟಿ, ಮ್ಯಾಚ್‌ ಮೂವರ್‌ ಈ ಸೆಮಿಸ್ಟಾರ್‌ನ ಪ್ರಮುಖ ಆಕರ್ಷಣೆಗಳು ಮತ್ತು ಹೈಲೈಟ್‌ಗಳು.

ಕ್ಯಾಡ್‌ನೆಸ್ಟ್‌‌ ಡಿಪ್ಲೊಮಾ ಇನ್‌ ಅಡ್ವಾನ್ಸಡ್‌ ೩ಡಿ ಅನಿಮೇಷನ್‌ ಕೋರ್ಸ್‌ ಕಲಿಸಲು ಅನುಭವಿ ಬೋಧಕರನ್ನು ಕ್ಯಾಡ್‌ನೆಸ್ಟ್‌‌ ಶಿಕ್ಷಣ ಸಂಸ್ಥೆಯು ಹೊಂದಿದೆ. ಈ ಕುರಿತು ಹೆಚ್ಚಿನ ಮಾಹಿತಿಗೆ ನೀವು ಕ್ಯಾಡ್‌ನೆಸ್ಟ್‌ ಅನಿಮೇಷನ್‌ ಸ್ಟುಡಿಯೋಸ್‌ಗೆ ಭೇಟಿ ನೀಡಬಹುದು. ಕ್ಯಾಡ್‌ನೆಸ್ಟ್‌‌ ಕಲಿಕಾ ಕೇಂದ್ರಗಳು ಬೆಂಗಳೂರಿನ ರಾಜಾಜಿನಗರ, ಬಸವನಗುಡಿ, ಶೇಷಾದ್ರಿಪುರಂ, ಮಲ್ಲೇಶ್ವರಂನಲ್ಲಿವೆ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್‌ ಮಾಡಿ.

Related Posts

error: Content is protected !!
Scroll to Top