Kannada CADD Nest Private Limited

ಕೊರೊನಾ ಕಾಲದಲ್ಲಿ ವಿದ್ಯಾರ್ಥಿಗಳು ಏನು ಕಲಿಯಬಹುದು?

ಕೊರೊನಾ ಕಾಲದಲ್ಲಿ ವಿದ್ಯಾರ್ಥಿಗಳು ಏನು ಕಲಿಯಬಹುದು?
  • ಶರದ್

ಕೋವಿಡ್ -19 ಹೆಮ್ಮಾರಿಯ ಬಗ್ಗೆ ಗೊತ್ತಿಲ್ಲದೆ ಇರುವವರು ಯಾರು ? ನಾಲ್ಕು ತಿಂಗಳುಗಳಿಂದ ಇಡೀ ವಿಶ್ವವನ್ನೇ ಕಾಡುತ್ತಿರುವ ಈ ಕಾಯಿಲೆ ಇನ್ನೂ ತನ್ನ ಕ್ರೂರ ಛಟವನ್ನು ಬಿಟ್ಟಿಲ್ಲ. ಇದಕ್ಕೆ ಬಲಿಯಾದವರ ಸಂಖ್ಯೆ ಸುಮಾರು ಐನೂರು ಸಾವಿರ. ಲೋಕದ ಪ್ರತೀ ಮೂಲೆಗೆ ವ್ಯಾಪಿಸಿದ ಕೋವಿಡ್ ಮಾನವರೆಲ್ಲರ ಜೀವನವನ್ನು ಬದಲಿಸಿದೆ. ಈಗ  “N-95 ಮಾಸ್ಕ್ ”  ಅಥವಾ ಯಾವುದೇ ಮುಖವಾಡ ಧರಿಸದೇ ಯಾರೂ ಆಚೆ ಕಾಲಿಡಲು ಅಸಾಧ್ಯ. ಆಚೆ ಬಂದವರು ಸಾಮಾಜಿಕ ಅಂತರ ಪಾಲಿಸೋದು ಅಗತ್ಯ. ಸಮಯೋಚಿತವಾಗಿ ಕೈ ತೊಳೆಯುವುದು ಈಗ ಒಂದು ಆರೋಗ್ಯಕರ ಅಭ್ಯಾಸ ಅಷ್ಟೇ ಅಲ್ಲದೇ ದೈನಂದಿನ ಜೀವನದಲ್ಲಿ ಅವಶ್ಯವಾಗಿದೆ.

ಪರಿಸ್ಥಿತಿ ಹೀಗಿದ್ದಾಗ ಕೆಲವು ಸಾಮಾಜಿಕ ಕಾರ್ಯಗಳು ಅನಿರ್ಧಿಷ್ಟ ನಿಲುಗಡೆಗೆ ಬರುವುದು ಸಹಜ . ಅವುಗಳಲ್ಲಿ ಶಿಕ್ಷಣ ಒಂದಾಗಿದೆ. ಪ್ರಾಥಮಿಕ ಶಾಲೆಯಿಂದ ಹಿಡಿದು ಕಲಾಶಾಲೆ, ಟ್ರೈನಿಂಗ್ ಇನ್ಸ್ಟಿಟ್ಯೂಟ್ ಗಳೆಲ್ಲ ತಮ್ಮ ವಿದ್ಯಾರ್ಥಿಗಳಿಗೆ ದೂರವಾಗಿವೆ. ಕ್ಲಾಸ್ರೂಮ್ಗಳಲ್ಲಿ  ಈ ವೈರಸ್ ಹರಡುವ ಅವಕಾಶ ಹೆಚ್ಚಾಗಿರುವುದರಿಂದ ಸರ್ಕಾರವೂ ಶೈಕ್ಷಣಿಕ ಸ್ಥಾಪನೆಗಳಿಗೆ ಮತ್ತೆ ತಮ್ಮ ಬಾಗಿಲುಗಳನ್ನು ತೆರೆಯಲು ಅನುಮತಿ ಇನ್ನೂ ನೀಡಿಲ್ಲ.

ಜೀವನಕ್ಕಿಂತ ಯಾವುದೂ ಹೆಚ್ಚಲ್ಲ. ಆದರೆ ವಿದ್ಯೆಯನ್ನು ಪೂರ್ಣವಾಗಿ ಬಿಟ್ಟಿರುವುದು ಸಾಧ್ಯವಿಲ್ಲ. ವಿದ್ಯೆ ಜೀವನದ ಬುನಾದಿಯಾಗಿದೆ. ಆದ್ಧರಿಂದ, ಜೀವವನ್ನು ಉಳಿಸಿಕೊಂಡ ಕೈಯಲ್ಲೇ, ನಾವು ವಿದ್ಯೆಯನ್ನು ಗಳಿಸಬೇಕಾಗಿದೆ. ಆದರೆ ಮನೆಯಲ್ಲಿ ಕೂತು ವಿದ್ಯಾಭ್ಯಾಸ ಮಾಡುವುದು ಹೇಗೆ?

ಗೊಂದಲ ಬೇಡ! ತಂತ್ರಜ್ಞಾನದ ಸಹಾಯದಿಂದ ಇಂದು ಮನೆ ಮತ್ತು ಶಿಕ್ಷಣದ ಮಧ್ಯ ಇರುವ ದೂರವು ಕ್ಷಣಗಳಲ್ಲಿ ದಾಟುವಷ್ಟು ಸುಲಭವಾಗಿದೆ. ಬಸವನಗುಡಿ, ರಾಜಾಜಿನಗರ, ಶೇಷಾದ್ರಿಪುರಂ, ಮಲ್ಲೇಶ್ವರಂನಲ್ಲಿರುವ ‘ಭಾರತೀಯ ಅಕಾಡೆಮಿ ಆಫ್ ಲಿಂಗ್ವಿಸ್ಟಿಕ್ಸ್ ಅಂಡ್ ಕಮ್ಯುನಿಕೇಷನ್ ನ’ ರವರ “ಆನ್ಲೈನ್ ಕ್ಲಾಸ್ ” ಗಳ ಜತೆ ನೀವು ನಿಮ್ಮ ವಿದ್ಯಾಭ್ಯಾಸವನ್ನು ಸರಾಗವಾಗಿ ಸಾಗಿಸಿ.

ಕ್ಯಾಡ್‌ನೆಸ್ಟ್‌ ನಲ್ಲಿ  ಕಂಪ್ಯೂಟರ್ ಸಾಫ್ಟ್ವೇರ್, ಕ್ಯಾಡ್, ಟ್ಯಾಲಿ, ಅನಿಮೇಷನ್, ಸ್ಪೋಕನ್ ಇಂಗ್ಲಿಷ್, ಕೈಬರಹ ಮುಂತಾದ ಕೋರ್ಸ್ಗಳನ್ನು ನಿಮಗೆ ಶ್ರೇಷ್ಠವಾದ ರೀತಿಯಲ್ಲಿ ಹಾಗೂ ಉತ್ತಮ ದರಗಳಲ್ಲಿ ನೀಡಲಾಗುತ್ತದೆ. ಮೇಲ್ಕಂಡ ಎಲ್ಲಾ ಜನಪ್ರಿಯ ಕೋರ್ಸ್ ಗಳಲ್ಲಿ, ಈ  ‘ಲಾಕ್ಡೌನ್ ‘ ಸಮಯದಲ್ಲಿ ನಿಪುಣತೆ ಪಡೆಯಿರಿ.

ನಮ್ಮ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದಂತೆ ಕೊರೋನಾ ವಿರುದ್ಧ ನಾವು ಪಾಲಿಸಬೇಕಾದ ಏಕೈಕ ನಿಯಮ : “ಜಾನ್ ಹೆ ತೊ ಜಹಾನ್ ಹೆ ” (ಜೀವವಿದ್ದರೆ ಜಗತ್ತು). ಹಾಗಂತ ವಿದ್ಯಾರ್ಥಿಗಳು ಅತ್ಯಮೂಲ್ಯವಾದ ತಮ್ಮ ಸಮಯವನ್ನು ವ್ಯರ್ಥ ಮಾಡುವುದು ಸರಿಯಲ್ಲ. ಪ್ರಧಾನ ಮಂತ್ರಿಯವರ ಮಾತನ್ನು ಅನುಸರಿಸುತ್ತ, ವಿದ್ಯಾರ್ಥಗಳ ವ್ಯಥೆಯನ್ನು ತಿಳಿದುಕೊಂಡು
“ಕ್ಯಾಡ್‌ನೆಸ್ಟ್‌ ಕಂಪ್ಯೂಟರ್ ತರಬೇತಿ ಸಂಸ್ಥೆ “ ಈ  ಸೂಕ್ಷ್ಮ ಪರಿಸ್ಥಿತಿಯಲ್ಲೂ ವಿದ್ಯಾಭ್ಯಾಸಕ್ಕೆ ಯಾವ ಅಡಚಣೆ ಉಂಟಾಗಬಾರದೆಂಬ ಧೃಢ ನಿರ್ಧಾರ ತೆಗೆದುಕೊಂಡು “ONLINE CLASS” ಪ್ರತಿ ಶಿಕ್ಷಣ  ನೀಡಲು ಸಿದ್ಧರಾಗಿದ್ದಾರೆ.  

 CAD,ANIMATION, TALLY, ಮುಂತಾದ SOFTWARE ಕೋರ್ಸ್ಗಳು, ಹಾಗೂ TYPING, SPOKEN ENGLISH, HANDWRITING – ಇದೆಲ್ಲಾ ವಿಷಯ ಗಳಲ್ಲಿ ನೈಪುಣ್ಯ ಹೊಂದಿರುವ ಶಿಕ್ಷಕರು ನಿಮಗೆ ಸರಳ ಮತ್ತು ಪ್ರಭಾವಶಾಲಿ ಯಾಗಿ ತರಬೇತಿ ನೀಡುವರು. CADD Nest Private Limited  ಎಂದರೆ ಈಗ ಸಾಫ್ಟ್ವೇರ್ ಮತ್ತು ಸ್ಪೋಕನ್ ಇಂಗ್ಲಿಷ್ ಶಿಕ್ಷಣಕ್ಕೆ ಇನ್ನೊಂದು ಹೆಸರಾಗಿದೆ. ಇದು ನಮ್ಮ ಹಾಗು ನಮ್ಮ ವಿದ್ಯಾರ್ಥಿಗಳ ಅಡೆತಡೆಯಿಲ್ಲದ ಕುತೂಹಲ, ಶ್ರಮಗಳ ಫಲ.

ಭಾರತ ಇಂದು IT-ವಲಯದಲ್ಲಿ ಮೊದಲ ಸ್ಥಾನದ್ಲಲಿ ನಿಂತು ಕೀರ್ತಿ ಸಾಧಿಸಿರುವುದು ನಿಮ್ಮ-ನಮ್ಮೆಲ್ಲರ ಗೆಲುವು. ಈ ವಿಜಯವನ್ನು ಸಂರಕ್ಷಿಸುವುದು ಕೂಡ ನಮ್ಮ ಕರ್ತವ್ಯ .

ನಮ್ಮ ರಾಜ್ಯ ಮತ್ತು ರಾಷ್ಟ್ರಗಳ ನ್ನು ಕೋವಿಡ್-19 ಹೆಮ್ಮಾರಿಯಿಂದ ರಕ್ಷಿಸೋಣ, ಅದೇ ಸಮಯದಲ್ಲಿ ವಿದ್ಯಾಭ್ಯಾಸ ಮುಂದುವರಿಸಿ ಯಶಸ್ಸು ಪಡೆಯೋಣ!

Ad Widget

Related Posts

error: Content is protected !!
Scroll to Top