ಬೆಂಗಳೂರಿನ ರಾಜಾಜಿನಗರದ ಕ್ಯಾಡ್ನೆಸ್ಟ್ ಶಿಕ್ಷಣ ಸಂಸ್ಥೆಯಲ್ಲಿ ಸೆಪ್ಟೆಂಬರ್ 15ರ ಸೋಮವಾರದಂದು ಬಹುನಿರೀಕ್ಷಿತ “ಕ್ಯಾಡ್ನೆಸ್ಟ್ ಟೆಕ್ನೋ ಚತುರ್ಥಿ” ಕಾರ್ಯಕ್ರಮ ನಡೆಯಲಿದೆ. ಗಣೇಶ ಹಬ್ಬ, ಎಂಜಿನಿಯರಿಂಗ್ ದಿನವೆರಡರ ಸಂಯೋಜನೆಯ ಈ ಟೆಕ್ನೋ ಚತುರ್ಥಿಯಲ್ಲಿ ವಿದ್ಯಾರ್ಥಿಗಳ ಭವಿಷ್ಯದ ಕರಿಯರ್ಗೆ ಟಾನಿಕ್ ನೀಡುವಂತಹ ಆಸಕ್ತಿದಾಯಕ ಸ್ಪರ್ಧೆಗಳು ಇವೆ.

ಟೆಕ್ನೋ ಚತುರ್ಥಿಯಲ್ಲಿ ಏನೆಲ್ಲ ಸ್ಪರ್ಧೆಗಳಿವೆ?
ಕ್ರಿಯೇಟಿವ್ ಸ್ಟುಡೆಂಟ್ ಪ್ರಾಜೆಕ್ಟ್ಸ್: ಸಿವಿಲ್ ಮತ್ತು ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ಈ ಸ್ಪರ್ಧೆಯು ತಂಡದ ಕೆಲಸ, ಯೋಜನಾ ನಿರ್ವಹಣೆ ಮತ್ತು ತಾಂತ್ರಿಕ ಕೌಶಲ್ಯಗಳನ್ನು ವೃದ್ಧಿಸುವ ಗುರಿಯನ್ನು ಹೊಂದಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸುವವರು ತಮ್ಮ ವಿನೂತನ ಯೋಜನೆಗಳನ್ನು ಪ್ರದರ್ಶಿಸಲಿದ್ದಾರೆ.
ಟೈಪಿಂಗ್ ಸ್ಪೀಡ್ ಟೆಸ್ಟ್: ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಟೈಪಿಂಗ್ ಕೌಶಲ್ಯವನ್ನು ಪರೀಕ್ಷಿಸುವ ಈ ಸ್ಪರ್ಧೆಯು ವಿದ್ಯಾರ್ಥಿಗಳ ಭಾಷಾ ಕೌಶಲ್ಯವನ್ನು ಉತ್ತೇಜಿಸುತ್ತದೆ.
ರೀಲ್ಸ್ ಸ್ಪರ್ಧೆ: ಡಿಜಿಟಲ್ ಕಂಟೆಂಟ್ ನಿರ್ಮಾಣದಲ್ಲಿ ಆಸಕ್ತಿಯಿರುವವರಿಗೆ ಈ ಸ್ಪರ್ಧೆಯು ಸೃಜನಶೀಲತೆಯನ್ನು ಪ್ರದರ್ಶಿಸಲು ಅವಕಾಶವನ್ನು ನೀಡುತ್ತದೆ.
ಪ್ರೆಸೆಂಟೋಪಿಯಾ: ಪ್ರಸೆಂಟೇಷನ್ ಅನ್ನು ಆಕರ್ಷಕವಾಗಿ ಮಂಡಿಸುವ ಕೌಶಲ್ಯವನ್ನು ವೃದ್ಧಿಸಲು ಈ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಸಖತ್ ಮನರಂಜನೆಯೂ ಇದೆ
ಸಾಂಸ್ಕೃತಿಕ ಆಕರ್ಷಣೆಯಾಗಿ, ಡ್ಯಾನ್ಸ್ ಪ್ರದರ್ಶನಗಳು ಇರಲಿವೆ.
ಸ್ಪರ್ಧೆಗಳಲ್ಲಿ ಭಾಗವಹಿಸುವವರಿಗೆ ಕ್ಯಾಡ್ನೆಸ್ಟ್ನಿಂದ ಪ್ರಮಾಣ ಪತ್ರಗಳನ್ನು ನೀಡಲಾಗುವುದು, ಮತ್ತು ಅತ್ಯುತ್ತಮ ಪ್ರದರ್ಶನ ನೀಡಿದವರಿಗೆ ಆಕರ್ಷಕ ಬಹುಮಾನಗಳು ದೊರೆಯಲಿವೆ ಎಂದು ಕ್ಯಾಡ್ನೆಸ್ಟ್ ವ್ಯವಸ್ಥಾಪಕ ನಿರ್ದೇಶಕರಾದ ಪ್ರಕಾಶ್ ಗೌಡ ಎಚ್ಎಂ ಹೇಳಿದ್ದಾರೆ.
