ವಿದ್ಯಾರ್ಥಿಗಳು ಮತ್ತು ಉದ್ಯೋಗಾಕಾಂಕ್ಷಿಗಳು ಕಾತರದಿಂದ ಕಾಯುತ್ತಿರುವ ಟೆಕ್ನೋ ಚತುರ್ಥಿ 2025 ಹತ್ತಿರದಲ್ಲಿದೆ. ನಾಡಿದ್ದು ಅಂದರೆ, ಇದೇ ಸೋಮವಾರ ಸೆಪ್ಟೆಂಬರ್ 15ರಂದು ರಾಜಾಜಿನಗರದ ಕ್ಯಾಡ್ನೆಸ್ಟ್ನಲ್ಲಿ ಸಂಪೂರ್ಣ ಹಬ್ಬದ ವಾತಾವರಣ ಇರಲಿದೆ. ಗಣೇಶ ಚತುರ್ಥಿಯ ಆಧ್ಯಾತ್ಮಿಕ ಆಚರಣೆಯ ಜೊತೆಗೆ ಎಂಜಿನಿಯರ್ ದಿನಾಚರಣೆಯನ್ನು ಸಂಯೋಜಿಸಿ, ವಿದ್ಯಾರ್ಥಿಗಳಿಗೆ ಮತ್ತು ವೃತ್ತಿಪರರಿಗೆ ಕೌಶಲ್ಯ ವೃದ್ಧಿಯ ಸುವರ್ಣಾವಕಾಶವನ್ನು ಒದಗಿಸುವ ವಿಶಿಷ್ಟ ಕಾರ್ಯಕ್ರಮ ಇದಾಗಿದೆ. “ಈ ಸುಂದರ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳು, ಉದ್ಯೋಗಾಕಾಂಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕಾಗಿ ಕೋರುತ್ತಿದ್ದೇನೆ. ನೀವು ಬನ್ನಿ, ನಿಮ್ಮ ಸ್ನೇಹಿತರು, ಬಂಧುಬಳಗದವರನ್ನೂ ಕರೆತನ್ನಿ” ಎಂದು ಕ್ಯಾಡ್ನೆಸ್ಟ್ ವ್ಯವಸ್ಥಾಪಕರ ನಿರ್ದೇಶಕರಾದ ಪ್ರಕಾಶ್ ಗೌಡ ತಿಳಿಸಿದ್ದಾರೆ.
ದಿನಾಂಕ: 15 ಸೆಪ್ಟೆಂಬರ್ 2025 (ಸೋಮವಾರ)
ಸ್ಥಳ: ಕ್ಯಾಡ್ನೆಸ್ಟ್, ರಾಜಾಜಿನಗರ, ಬೆಂಗಳೂರು
ಸಮಯ: ಬೆಳಿಗ್ಗೆ 9:00 ರಿಂದ ಸಂಜೆ 6:00 ರವರೆಗೆ

“ನಾವು ಪ್ರತಿವರ್ಷ ವಿದ್ಯಾರ್ಥಿಗಳಿಗೆ ಕಲಿಕೆಯ ಉತ್ಸಾಹವನ್ನು ಹೆಚ್ಚಿಸುವ ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸುತ್ತೇವೆ. ಈ ಬಾರಿ ಟೆಕ್ನೋ ಚತುರ್ಥಿ 2025ರಲ್ಲಿ, ಗಣೇಶ ಚತುರ್ಥಿಯ ಸಾಂಸ್ಕೃತಿಕ ಮಹತ್ವದ ಜೊತೆಗೆ ತಾಂತ್ರಿಕ ಕೌಶಲ್ಯಗಳನ್ನು ಒಂದುಗೂಡಿಸಿ, ಭವಿಷ್ಯದ ಉದ್ಯೋಗ ಮಾರುಕಟ್ಟೆಗೆ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸುವ ಗುರಿಯನ್ನು ಹೊಂದಿದ್ದೇವೆ” ಎಂದು ಕ್ಯಾಡ್ನೆಸ್ಟ್ನ ವ್ಯವಸ್ಥಾಪಕ ನಿರ್ದೇಶಕರಾದ ಪ್ರಕಾಶ್ ಗೌಡ ಎಚ್ಎಂ ತಿಳಿಸಿದ್ದಾರೆ.
ಸೋಮವಾರ ಬೆಳಿಗ್ಗೆ 9:00ಕ್ಕೆ ಕಾರ್ಯಕ್ರಮವು ಔಪಚಾರಿಕ ಸ್ವಾಗತ ಸಮಾರಂಭದೊಂದಿಗೆ ಆರಂಭವಾಗಲಿದೆ. ಗಣೇಶ ಚತುರ್ಥಿಯ ಸಾಂಪ್ರದಾಯಿಕ ಪೂಜೆಯೊಂದಿಗೆ ಆರಂಭವಾಗುವ ಈ ಕಾರ್ಯಕ್ರಮವು, ವಿದ್ಯಾರ್ಥಿಗಳಿಗೆ ಉತ್ಸಾಹದಾಯಕ ವಾತಾವರಣವನ್ನು ಸೃಷ್ಟಿಸಲಿದೆ. ಈ ಸಮಾರಂಭದಲ್ಲಿ ಕ್ಯಾಡ್ನೆಸ್ಟ್ ತಂಡದಿಂದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮತ್ತು ಪ್ರೇರಣೆಯ ಮಾತುಗಳು ಇರಲಿವೆ.

ಸ್ಪರ್ಧೆಗಳು ಮತ್ತು ಚಟುವಟಿಕೆಗಳು
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಮತ್ತು ವೃತ್ತಿಪರರಿಗೆ ತಮ್ಮ ಕೌಶಲ್ಯವನ್ನು ಪ್ರದರ್ಶಿಸಲು ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ
ಕ್ರಿಯೇಟಿವ್ ಸ್ಟುಡೆಂಟ್ ಪ್ರಾಜೆಕ್ಟ್ಸ್: ಸಿವಿಲ್ ಮತ್ತು ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ಈ ಸ್ಪರ್ಧೆಯು ತಂಡದ ಕೆಲಸ, ಯೋಜನಾ ನಿರ್ವಹಣೆ ಮತ್ತು ತಾಂತ್ರಿಕ ಕೌಶಲ್ಯಗಳನ್ನು ವೃದ್ಧಿಸುವ ಗುರಿಯನ್ನು ಹೊಂದಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸುವವರು ತಮ್ಮ ವಿನೂತನ ಯೋಜನೆಗಳನ್ನು ಪ್ರದರ್ಶಿಸಲಿದ್ದಾರೆ.
ಟೈಪಿಂಗ್ ಸ್ಪೀಡ್ ಟೆಸ್ಟ್: ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಟೈಪಿಂಗ್ ಕೌಶಲ್ಯವನ್ನು ಪರೀಕ್ಷಿಸುವ ಈ ಸ್ಪರ್ಧೆಯು ವಿದ್ಯಾರ್ಥಿಗಳ ಭಾಷಾ ಕೌಶಲ್ಯವನ್ನು ಉತ್ತೇಜಿಸುತ್ತದೆ.
ರೀಲ್ಸ್ ಸ್ಪರ್ಧೆ: ಡಿಜಿಟಲ್ ಕಂಟೆಂಟ್ ನಿರ್ಮಾಣದಲ್ಲಿ ಆಸಕ್ತಿಯಿರುವವರಿಗೆ ಈ ಸ್ಪರ್ಧೆಯು ಸೃಜನಶೀಲತೆಯನ್ನು ಪ್ರದರ್ಶಿಸಲು ಅವಕಾಶವನ್ನು ನೀಡುತ್ತದೆ.
ಪ್ರೆಸೆಂಟೋಪಿಯಾ: ಪ್ರಸೆಂಟೇಷನ್ ಅನ್ನು ಆಕರ್ಷಕವಾಗಿ ಮಂಡಿಸುವ ಕೌಶಲ್ಯವನ್ನು ವೃದ್ಧಿಸಲು ಈ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಡ್ಯಾನ್ಸ್ ಮತ್ತು ಮನರಂಜನೆ: ಸಾಂಸ್ಕೃತಿಕ ಆಕರ್ಷಣೆಯಾಗಿ, ಡ್ಯಾನ್ಸ್ ಪ್ರದರ್ಶನಗಳು ಕಾರ್ಯಕ್ರಮಕ್ಕೆ ಹೆಚ್ಚಿನ ಉತ್ಸಾಹವನ್ನು ತುಂಬಲಿವೆ.
ಟೆಕ್ನೋ ಚತುರ್ಥಿಗೆ ಪ್ರವೇಶ ಸಂಪೂರ್ಣ ಉಚಿತವಾಗಿದ್ದು, ವಿದ್ಯಾರ್ಥಿಗಳು ಮತ್ತು ವೃತ್ತಿಪರರು ಭಾಗವಹಿಸಬಹುದು. ಸ್ಪರ್ಧೆಗಳಲ್ಲಿ ಭಾಗವಹಿಸುವವರಿಗೆ ಕ್ಯಾಡ್ನೆಸ್ಟ್ನಿಂದ ಪ್ರಮಾಣ ಪತ್ರಗಳನ್ನು ನೀಡಲಾಗುವುದು, ಮತ್ತು ಅತ್ಯುತ್ತಮ ಪ್ರದರ್ಶನ ನೀಡಿದವರಿಗೆ ಆಕರ್ಷಕ ಬಹುಮಾನಗಳು ದೊರೆಯಲಿವೆ.
