Techno Chaturthi 2025: ಕರ್ನಾಟಕದ ಪ್ರಮುಖ ಕೌಶಲ್ಯ ಅಭಿವೃದ್ಧಿಸಂಸ್ಥೆಯಾಗಿರುವ ಕ್ಯಾಡ್ನೆಸ್ಟ್ ಬೆಂಗಳೂರು ಇದೇ ಸೆಪ್ಟೆಂಬರ್ 15ರಂದು ತನ್ನ ರಾಜಾಜಿನಗರ ಶಾಖೆಯಲ್ಲಿ “ಟೆಕ್ನೋ ಚತುರ್ಥಿ 2025” ಹಮ್ಮಿಕೊಂಡಿದೆ. ಗಣೇಶ ಚತುರ್ಥಿ ಮತ್ತು ಎಂಜಿನಿಯರ್ ದಿನಾಚರಣೆ ಎರಡನ್ನೂ ಒಟ್ಟಿಗೆ ಆಚರಿಸುವ ವಿನೂತನ ಕಾರ್ಯಕ್ರಮ ಇದಾಗಿದೆ. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಕರಿಯರ್ ಅಪ್ಗ್ರೇಡ್ ಮಾಡಲು ಬಯಸುವ ವೃತ್ತಿಪರರಿಗೆ ವಿವಿಧ ಸ್ಪರ್ಧೆಗಳು ನಡೆಯಲಿವೆ.
ಕಾರ್ಯಕ್ರಮದ ವಿವರ
ದಿನಾಂಕ: 15 ಸೆಪ್ಟೆಂಬರ್ 2025 (ಸೋಮವಾರ)
ಸ್ಥಳ: ಕ್ಯಾಡ್ ನೆಸ್ಟ್, ರಾಜಾಜಿನಗರ
ಸಮಯ: ಬೆಳಿಗ್ಗೆ 9:00 – ಸಂಜೆ 6:00
“ಪ್ರತಿವರ್ಷ ಕ್ಯಾಡ್ನೆಸ್ಟ್ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿದ್ಯಾರ್ಥಿಗಳಲ್ಲಿ ಕಲಿಕಾ ಸಂಭ್ರಮ ಹೆಚ್ಚಿಸುತ್ತಿದೆ. ಇದರೊಂದಿಗೆ ಕ್ಷಿಪ್ರವಾಗಿ ಬದಲಾಗುತ್ತಿರುವ ಉದ್ಯೋಗ ಮಾರುಕಟ್ಟೆಗೆ ತಕ್ಕಂತೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ. ಈ ಹಿಂದೆ ಕ್ಯಾಡ್ನೆಸ್ಟ್ ಹಮ್ಮಿಕೊಂಡ ಪುನೀತ್ ರಾಜ್ಕುಮಾರ್ ಉದ್ಯೋಗ ಮೇಳಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಸಾವಿರಾರು ಉದ್ಯೋಗಾಕಾಂಕ್ಷಿಗಳು ಭಾಗವಹಿಸಿದ್ದರು. ಸಾಕಷ್ಟು ಜನರಿಗೆ ಉದ್ಯೋಗ ದೊರಕಿತ್ತು. ಈ ಬಾರಿ ಕ್ಯಾಡ್ನೆಸ್ಟ್ ಟೆಕ್ನೋ ಚತುರ್ಥಿ” ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದೆ” ಎಂದು ಕ್ಯಾಡ್ನೆಸ್ಟ್ನ ವ್ಯವಸ್ಥಾಪಕ ನಿರ್ದೇಶಕರಾದ ಪ್ರಕಾಶ್ ಗೌಡ ಎಚ್ಎಂ ಮಾಹಿತಿ ನೀಡಿದ್ದಾರೆ.
ಕ್ರಿಯೇಟಿವ್ ಸ್ಟುಡೆಂಟ್ಸ್ ಮಾರ್ವೆಲ್ಸ್
“ಅಂದು ಹಲವು ವಿಶೇಷ ಗೇಮ್ಸ್ ಮತ್ತು ಕಾರ್ಯಕ್ರಮಗಳನ್ನು ಹಮ್ಮಿಕೊಡಿದ್ದೇವೆ. ಸಿವಿಲ್ ಮತ್ತು ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ “ಕ್ರಿಯೇಟಿವ್ ಸ್ಟುಡೆಂಟ್ ಪ್ರಾಜೆಕ್ಟ್ಸ್” ಎಂಬ ಸ್ಪರ್ಧೆ ಏರ್ಪಡಿಸಲಾಗಿದೆ. ವಿದ್ಯಾರ್ಥಿಗಳಲ್ಲಿ ಟೀಂವರ್ಕ್ ಮತ್ತು ಪ್ರಾಜೆಕ್ಟ್ ನಿರ್ವಹಣಾ ಕೌಶಲ್ಯಗಳನ್ನು ವೃದ್ಧಿಸುವುದು ಹಾಗೂ ಭವಿಷ್ಯದ ಇಂಜಿನಿಯರಿಂಗ್ ಮತ್ತು ಡಿಸೈನ್ ವೃತ್ತಿಗೆ ತಯಾರಿ ನಡೆಸಲು ಉತ್ತೇಜನ ನೀಡುವುದು ಈ ಸಿವಿಲ್ & ಮೆಕ್ಯಾನಿಕಲ್ ಪ್ರಾಜೆಕ್ಟ್ ಮತ್ತು ಎಕ್ಸಿಬಿಷನ್ನ ಪ್ರಮುಖ ಉದ್ದೇಶವಾಗಿದೆ” ಎಂದು ಅವರು ಮಾಹಿತಿ ನೀಡಿದ್ದಾರೆ.
ಟೈಪಿಂಗ್ ಸ್ಪೀಡ್ ಟೆಸ್ಟ್ (ಕನ್ನಡ ಮತ್ತು ಇಂಗ್ಲಿಷ್), ರೀಲ್ಸ್ ಸ್ಪರ್ಧೆ ಮತ್ತು ಡ್ಯಾನ್ಸ್
ಇದೇ ರೀತಿ ವಿದ್ಯಾರ್ಥಿಗಳ– ಭಾಷಾ ಹಾಗೂ ತಂತ್ರಜ್ಞಾನ ಕೌಶಲ್ಯಗಳಿಗೆ ಉತ್ತೇಜನ ನೀಡಲು ಕನ್ನಡ ಮತ್ತು ಇಂಗ್ಲಿಷ್ನಲ್ಲಿ ಟೈಪಿಂಗ್ ಸ್ಪೀಡ್ ಗೇಮ್ಸ್ ಹಮ್ಮಿಕೊಳ್ಳಲಾಗಿದೆ. ಕ್ರಿಯೇಟಿವಿಟಿ ಮತ್ತು ಡಿಜಿಟಲ್ ಕಂಟೆಂಟ್ ನಿರ್ಮಾಣಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ ರೀಲ್ಸ್ ಸ್ಪರ್ಧೆ ಏರ್ಪಡಿಸಲಾಗಿದೆ. ವಿದ್ಯಾರ್ಥಿಗಳಲ್ಲಿ ಪ್ರೆಸೆಂಟೇಷನ್ ಸ್ಕಿಲ್ ಹೆಚ್ಚಿಸಲು “presentopia” ಎಂಬ ಸ್ಪರ್ಧೆಯೂ ಇದೆ. ಇಂತಹ ಗೇಮ್ಸ್ ಮಾತ್ರವಲ್ಲದೆ ಡ್ಯಾನ್ಸ್ ಪರ್ಫಾಮೆನ್ಸ್ ಮುಂತಾದ ಮನರಂಜನೆ ಆಕರ್ಷಣೆಗಳೂ ಟೆಕ್ನೋ ಚತುರ್ಥಿ ಕಾರ್ಯಕ್ರಮದಲ್ಲಿ ಇರಲಿದೆ” ಎಂದು ಪ್ರಕಾಶ್ ಗೌಡ ಎಚ್ಎಂ ಮಾಹಿತಿ ನೀಡಿದ್ದಾರೆ.
ಉಚಿತ ಪ್ರವೇಶ
“ಈ ಟೆಕ್ನೋ ಚತುರ್ಥಿ ಕಾರ್ಯಕ್ರಮಕ್ಕೆ ಪ್ರವೇಶ ಉಚಿತವಾಗಿದ್ದು, ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳು ಸೇರಿದಂತೆ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ. ಸ್ಪರ್ಧೆಯಲ್ಲ ಭಾಗವಹಿಸಿದವರಿಗೆ ಕ್ಯಾಡ್ನೆಸ್ಟ್ ವತಿಯಿಂದ ಪ್ರಮಾಣ ಪತ್ರ ನೀಡಲಾಗುವುದು. ಅತ್ಯುತ್ತಮ ಪ್ರದರ್ಶನ ನೀಡಿದವರಿಗೆ ಆಕರ್ಷಕ ಬಹುಮಾನವೂ ಇದೆ” ಎಂದು ಅವರು ತಿಳಿಸಿದ್ದಾರೆ. ಕಾರ್ಯಕ್ರಮದ ಆಮಂತ್ರಣ ಪತ್ರ ಡೌನ್ಲೋಡ್ ಮಾಡಲು ಮುಂದೆ ನೀಡಲಾದ ಡೌನ್ಲೋಡ್ ಬಟನ್ ಕ್ಲಿಕ್ ಮಾಡಿ
