ಫೇಸ್ಬುಕ್, ಇನ್ಸ್ಟಾಗ್ರಾಂ, ಯೂಟ್ಯೂಬ್ ಸೇರಿದಂತೆ ಡಿಜಿಟಲ್ ಜಗತ್ತಿನಲ್ಲಿ ಪ್ರತಿನಿತ್ಯ ಕಲರ್ಫುಲ್ ವಿನ್ಯಾಸಗಳನ್ನು ನೀವು ನೋಡಿರುತ್ತೀರಿ. ಇಂದಿನ ಡಿಜಿಟಲ್ ಯುಗದಲ್ಲಿ ಚಿತ್ರಗಳು ಕಥೆಯನ್ನು ಅದ್ಭುತವಾಗಿ ಹೇಳುವ ಶಕ್ತಿ ಹೊಂದಿವೆ. ಕಂಪನಿಗಳು ತಮ್ಮ ಉತ್ಪನ್ನಗಳು, ಸೇವೆಗಳು ಮತ್ತು ಬ್ರ್ಯಾಂಡ್ಗಳನ್ನು ಜನರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ನಿಲ್ಲಿಸಲು ದೃಶ್ಯಮಾಧ್ಯಮಗಳನ್ನು ಅವಲಂಬಿಸಿವೆ. ಈ ಹಿನ್ನೆಲೆಯಲ್ಲಿ ಗ್ರಾಫಿಕ್ ಡಿಸೈನರ್ಗಳ ಬೇಡಿಕೆ ಭಾರತದಲ್ಲಿ ಮಾತ್ರವಲ್ಲ, ಜಾಗತಿಕವಾಗಿಯೂ ದಿನೇ ದಿನೇ ಏರಿಕೆಯಾಗುತ್ತಿದೆ. ಕ್ಯಾಡ್ನೆಸ್ಟ್ ಬೆಂಗಳೂರು, ಕರ್ನಾಟಕದ ಪ್ರಮುಖ ಕೌಶಲಾಭಿವೃದ್ಧಿ ಸಂಸ್ಥೆಯಾಗಿ, ತನ್ನ ವೃತ್ತಿಪರ ಗ್ರಾಫಿಕ್ ಡಿಸೈನ್ ಕೋರ್ಸ್ ಮೂಲಕ ವಿದ್ಯಾರ್ಥಿಗಳ ಸೃಜನಶೀಲತೆಯನ್ನು ವೃತ್ತಿಯಾಗಿ ಪರಿವರ್ತಿಸುವಲ್ಲಿ ಖ್ಯಾತಿ ಪಡೆದಿದೆ.
ಗ್ರಾಫಿಕ್ ಡಿಸೈನಿಂಗ್ ಕಲಿತರೆ ಭರ್ಜರಿ ಅವಕಾಶ
ಈಗ ಎಲ್ಲರೂ ಆನ್ಲೈನ್ನಲ್ಲಿದ್ದಾರೆ. ಇದೇ ಕಾರಣಕ್ಕೆ ಡಿಜಿಟಲ್ ಮಾರ್ಕೆಟಿಂಗ್ಗೆ ಬೇಡಿಕೆ ಹೆಚ್ಚಾಗಿದೆ. ಸ್ಮಾರ್ಟ್ಫೋನ್ಗಳ ಬಳಕೆಯ ಹೆಚ್ಚಳದಿಂದ ಸಾಮಾಜಿಕ ಮಾಧ್ಯಮ ಕ್ಯಾಂಪೇನ್ಗಳಿಗೆ ಕ್ರಿಯೇಟಿವ್ ರಚಿಸುವುದು ಅಗತ್ಯವಾಗಿದೆ. ಗ್ರಾಫಿಕ್ ಡಿಸೈನಿಂಗ್ ಕಲಿತವರು ಸುಂದರ ಕ್ರಿಯೇಟಿವ್ಗಳನ್ನು ರಚಿಸಬಹುದು.
ಬೆಂಗಳೂರು, ಹೈದರಾಬಾದ್, ಪುಣೆಯಂತಹ ನಗರಗಳಲ್ಲಿ ಸ್ಟಾರ್ಟ್ಅಪ್ಗಳು ಲೋಗೋ, ಬ್ರ್ಯಾಂಡಿಂಗ್ ಮತ್ತು ಮಾರ್ಕೆಟಿಂಗ್ ಕ್ರಿಯೇಟಿವ್ಗಳಿಗಾಗಿ ಡಿಸೈನರ್ಗಳನ್ನು ಹುಡುಕುತ್ತಿವೆ. ಕೆಲವರು ಬೇರೆ ಕಂಪನಿಗಳಲ್ಲಿ ಕೆಲಸ ಮಾಡದೆ ಫ್ರಿಲ್ಯಾನ್ಸಿಂಗ್ ಗ್ರಾಫಿಕ್ ಡಿಸೈನರ್ ಕೆಲಸ ಮಾಡುತ್ತ ಕೈತುಂಬಾ ಹಣ ಸಂಪಾದಿಸುತ್ತಿದ್ದಾರೆ.
ಫ್ಲಿಪ್ಕಾರ್ಟ್, ಆಮೆಜಾನ್, ಮೀಶೋನಂತಹ ಕಂಪನಿಗಳು ಪ್ರತಿನಿತ್ಯ ಉತ್ಪನ್ನ ಪ್ರದರ್ಶನಕ್ಕಾಗಿ ಕ್ರಿಯೇಟಿವ್ಗಳನ್ನು ರಚಿಸುತ್ತವೆ.
ಯೂಟ್ಯೂಬ್ ಮತ್ತು ಕಂಟೆಂಟ್ ಕ್ರಿಯೇಷನ್ ಕ್ಷೇತ್ರದಲ್ಲಿಯೂ ಗ್ರಾಫಿಕ್ ಡಿಸೈನರ್ಗಳಿಗೆ ಬೇಡಿಕೆ ಹೆಚ್ಚುತ್ತಿದೆ. ವಿಡಿಯೋ ಥಂಬ್ನೈಲ್, ಇನ್ಫೊಗ್ರಾಫಿಕ್, ಚಾನೆಲ್ ಆರ್ಟ್ಗಾಗಿ ಫ್ರೀಲಾನ್ಸ್ ಡಿಸೈನರ್ಗಳ ಬೇಡಿಕೆ ಹೆಚ್ಚಾಗಿದೆ.
‘ಸ್ಕಿಲ್ ಇಂಡಿಯಾ’ ಮತ್ತು ‘ಡಿಜಿಟಲ್ ಇಂಡಿಯಾ’ ಯೋಜನೆಗಳು ಕೌಶಲ್ಯವಂತ ಡಿಸೈನರ್ಗಳಿಗೆ ಹೊಸ ಅವಕಾಶಗಳನ್ನು ತೆರೆದಿವೆ. ಹೀಗಾಗಿ, ಗ್ರಾಫಿಕ್ ಡಿಸೈನರ್ಗಳು ಇಂದು ತಮ್ಮ ಬೇಡಿಕೆಯನ್ನು ಹೆಚ್ಚಿಸಿಕೊಂಡಿದ್ದಾರೆ.
ಇದನ್ನೂ ಓದಿ: CADDNest Bangalore: Where SAP Dreams Become Reality
ಗ್ರಾಫಿಕ್ ಡಿಸೈನ್ ಕಲಿಯುವುದು ಯಾಕೆ ಮುಖ್ಯ?
ಪ್ರಿಂಟ್, ಡಿಜಿಟಲ್, ಸಾಮಾಜಿಕ ಮಾಧ್ಯಮ, ಅನಿಮೇಷನ್ ಕ್ಷೇತ್ರಗಳಲ್ಲಿ ಗ್ರಾಫಿಕ್ ಡಿಸೈನರ್ಗಳಿಗೆ ವಿಪುಲ ಬೇಡಿಕೆಯಿದೆ.
ಫ್ರೀಲಾನ್ಸ್ ಗ್ರಾಫಿಕ್ ಡಿಸೈನರ್ ಆಗಿ ಕೈತುಂಬಾ ಹಣ ಸಂಪಾದನೆ ಮಾಡಬಹುದು. ಮನೆಯಿಂದಲೇ ಜಾಗತಿಕ ಕ್ಲೈಂಟ್ಗಳಿಗೆ ಕೆಲಸ ಮಾಡಬಹುದು.
ಕಡಿಮೆ ಹೂಡಿಕೆ, ಉತ್ತಮ ಆದಾಯ ತರುವ ಕರಿಯರ್ ಇದಾಗಿದೆ. ಕೇವಲ ಲ್ಯಾಪ್ಟಾಪ್ ಮತ್ತು ಸಾಫ್ಟ್ವೇರ್ ಮೂಲಕ ವೃತ್ತಿಯನ್ನು ಆರಂಭಿಸಬಹುದು.
ಸೃಜನಶೀಲ ಉದ್ಯೋಗವಿದು. ಖುಷಿಯಿಂದ ಕೆಲಸ ಮಾಡಬಹುದು.
ಯೂಟ್ಯೂಬ್ ಚಾನೆಲ್, ಇನ್ಸ್ಟಾಗ್ರಾಂ ಪೇಜ್ ಮೂಲಕ ಸ್ವಂತ ಬ್ರ್ಯಾಂಡ್ ರಚನೆ ಮಾಡಬಹುದು. ಡಿಜಿಟಲ್ ಇನ್ಫ್ಲ್ಯೂನ್ಸರ್ ಆಗಲು ಬಯಸುವವರು ತಪ್ಪದೇ ಈ ಕೋರ್ಸ್ ಕಲಿಯಬೇಕು.
ಕ್ಯಾಡ್ನೆಸ್ಟ್ನಲ್ಲಿ ಟ್ರೆಂಡಿಂಗ್ ಕೋರ್ಸ್

“ನಮ್ಮ ಸಂಸ್ಥೆಯಲ್ಲಿ ಕೆಲವು ಕೋರ್ಸ್ಗಳು ಟ್ರೆಂಡಿಂಗ್ನಲ್ಲಿವೆ. ಹೆಚ್ಚು ವಿದ್ಯಾರ್ಥಿಗಳು ಕಲಿಯಲು ಬಯಸುವ ಕೋರ್ಸ್ಗಳಲ್ಲಿ ಗ್ರಾಫಿಕ್ ಡಿಸೈನರ್ ಕೋರ್ಸ್ ಒಂದಾಗಿದೆ. ಈಗಿನ ಆನ್ಲೈನ್ ಜಗತ್ತಿನಲ್ಲಿ ವಿದ್ಯಾರ್ಥಿಗಳು ಮಾತ್ರವಲ್ಲದೆ ಎಲ್ಲರೂ ಗ್ರಾಫಿಕ್ ಡಿಸೈನಿಂಗ್ ಕಲಿಯಲು ಬಯಸುತ್ತಾರೆ. ನಾವು ಈ ಕೋರ್ಸ್ಗೆ ವಿಶೇಷ ಡಿಸ್ಕೌಂಟ್ ನೀಡುತ್ತಿರುವುದರಿಂದ ವಿದ್ಯಾರ್ಥಿಗಳ ಸೇರ್ಪಡೆ ಹೆಚ್ಚಾಗಿದೆ. ಕಂಪನಿಗಳ ಕ್ರಿಯೇಟಿವ್ ಬೇಡಿಕೆಗೆ ತಕ್ಕಂತೆ ನಾವು ತರಬೇತಿ ನೀಡುತ್ತೇವೆ. ಉದ್ಯೋಗ ಮತ್ತು ಫ್ರೀಲಾನ್ಸ್ ಮಾರ್ಗದರ್ಶನ ನೀಡುತ್ತೇವೆ” ಎಂದು ಕ್ಯಾಡ್ನೆಸ್ಟ್ನ ವ್ಯವಸ್ಥಾಪಕ ನಿರ್ದೇಶಕರಾದ ಪ್ರಕಾಶ್ ಗೌಡ ಎಚ್ಎಂ ಹೇಳಿದ್ದಾರೆ.
ಗ್ರಾಫಿಕ್ ಡಿಸೈನ್ ಕಲಿಯಿರಿ
ಈ ಕೋರ್ಸ್ನಲ್ಲಿ ಗ್ರಾಫಿಕ್ ಡಿಸೈನ್ ಮೂಲತತ್ವಗಳನ್ನು ಕಲಿಯಬಹುದು. ಅಟಂದರೆ, ಬಣ್ಣ, ಟೈಪೋಗ್ರಫಿ, ಲೇಔಟ್ ಕಲಿಯಬಹುದು. ಇದರೊಂದಿಗೆ ಲೋಗೋ ಡಿಸೈನ್ ಮತ್ತು ಬ್ರ್ಯಾಂಡಿಂಗ್ ತಂತ್ರಗಳನ್ನು ಕಲಿಯಬಹುದು. ಸಾಮಾಜಿಕ ಮಾಧ್ಯಮ ಕ್ರಿಯೇಟಿವ್ಸ್ ರಚಿಸುವುದನ್ನು ತಿಳಿಯಬಹುದು. ಇನ್ಸ್ಟಾಗ್ರಾಂ, ಫೇಸ್ಬುಕ್ ಜಾಹೀರಾತು ವಿನ್ಯಾಸ ಮಾಡುವವರಿಗೆ ಈಗ ಬೇಡಿಕೆ ಹೆಚ್ಚಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಅನೇಕ ಅಂಶಗಳನ್ನು ಕಲಿಸಲಾಗುತ್ತದೆ. ಇದರೊಂದಿಗೆ ಬ್ರೋಶರ್, ಪೋಸ್ಟರ್, ವಿಸಿಟಿಂಗ್ ಕಾರ್ಡ್ ವಿನ್ಯಾಸ, ಯೂಟ್ಯೂಬ್ ಥಂಬ್ನೈಲ್ ಮತ್ತು ಚಾನೆಲ್ ಆರ್ಟ್ ರಚನೆ, ಪೋರ್ಟ್ಫೋಲಿಯೊ ನಿರ್ಮಾಣ ಮತ್ತು ಫ್ರೀಲಾನ್ಸ್ ಪ್ರಾಜೆಕ್ಟ್ ತಯಾರಿ ಸೇರಿದಂತೆ ಗ್ರಾಫಿಕ್ ಡಿಸೈನ್ ಕೋರ್ಸ್ನಲ್ಲಿ ಕಲಿಯಲು ವೈವಿಧ್ಯಮಯ ಅಂಶಗಳು ಇವೆ.
ಇದನ್ನು ಓದಿದ್ದೀರಾ?: Learn Tally Prime with GST at CADD NEST Bangalore – Build Your Accounting Career
ಎಲ್ಲಿ ಉದ್ಯೋಗ ಪಡೆಯಬಹುದು?
- ಐಟಿ ಕಂಪನಿಗಳು
- ಡಿಜಿಟಲ್ ಮಾರ್ಕೆಟಿಂಗ್ ಏಜೆನ್ಸಿಗಳು
- ಜಾಹೀರಾತು ಸಂಸ್ಥೆಗಳು
- ಮುದ್ರಣ/ಪ್ರಕಾಶನ ಸಂಸ್ಥೆಗಳು
- ಯೂಟ್ಯೂಬ್ ಕಂಟೆಂಟ್ ಕ್ರಿಯೇಟರ್ಗಳು
- ಸ್ಟಾರ್ಟ್ಅಪ್ ಕಂಪನಿಗಳು
- ಫ್ರಿಲ್ಯಾನ್ಸಿಂಗ್ (Upwork, Fiverr, Freelancerನಂತಹ ವೆಬ್ಸೈಟ್ಗಳ ಮೂಲಕ ಜಾಗತಿಕ ಕ್ಲೈಂಟ್ಗಳಿಗೆ ಕೆಲಸ ಮಾಡಬಹುದು. ರಿಮೋಟ್ ವರ್ಕ್ ಮೂಲಕ ವಿದೇಶಿ ಕಂಪನಿಗಳೊಂದಿಗೆ ಭಾರತದಿಂದಲೇ ಕೆಲಸ ಮಾಡಬಹುದು.
ಡಿಜಿಟಲ್ ಮಾಧ್ಯಮ ಉದ್ಯಮವು 50 ಬಿಲಿಯನ್ ಡಾಲರ್ ದಾಟಿದೆ. ಗ್ರಾಫಿಕ್ ಡಿಸೈನರ್ಗಳ ಬೇಡಿಕೆ ವಾರ್ಷಿಕವಾಗಿ ಶೇಕಡ 20 ದರದಲ್ಲಿ ಏರಿಕೆ ಕಾಣುತ್ತಿದೆ. ಯೂಟ್ಯೂಬ್ ಚಾನೆಲ್ಗಳು, ಸ್ಟಾರ್ಟ್ಅಪ್ಗಳು, ಇ-ಕಾಮರ್ಸ್ ಕಂಪನಿಗಳು ಪ್ರತಿನಿತ್ಯ ಸಾವಿರಾರು ಡಿಸೈನ್ ಬೇಡಿಕೆಗಳನ್ನು ಸೃಷ್ಟಿಸುತ್ತಿವೆ.
ಗ್ರಾಫಿಕ್ ಡಿಸೈನ್ ಕೋರ್ಸ್ ಎಲ್ಲಿ ಕಲಿಯಬಹುದು?
ಕರ್ನಾಟಕದಲ್ಲಿ ಕ್ಯಾಡ್ನೆಸ್ಟ್ ಬೆಂಗಳೂರು ಗ್ರಾಫಿಕ್ ಡಿಸೈನ್ ಕೋರ್ಸ್ ನೀಡುತ್ತಿದೆ. ಬೆಂಗಳೂರಿನ ಬಸವನಗುಡಿ ಮತ್ತು ರಾಜಾಜಿನಗರಗಳಲ್ಲಿ ಕ್ಯಾಡ್ನೆಸ್ಟ್ ಕೋರ್ಸ್ ಕಲಿಸಲಾಗುತ್ತದೆ. ಆನ್ಲೈನ್ ಮೂಲಕ ಕಲಿಯಲು ಬಯಸುವವರಿಗೂ ಇಲ್ಲಿ ಅವಕಾಶವಿದೆ. ಹೆಚ್ಚಿನ ಮಾಹಿತಿಗೆ 097404 44363 ಸಂಖ್ಯೆಯನ್ನು ವಾಟ್ಸಪ್ ಮೂಲಕ ಸಂಪರ್ಕಿಸಬಹುದು. ಕ್ಯಾಡ್ನೆಸ್ಟ್ ವೆಬ್ಸೈಟ್: www.caddnest.org ಮೂಲಕವೂ ಹೆಚ್ಚಿನ ವಿವರ ಪಡೆಯಬಹುದು. ಇಮೇಲ್: caddnestindia@gmail.com
ಗ್ರಾಫಿಕ್ ಡಿಸೈನಿಂಗ್ ಕೇವಲ ಸಾಫ್ಟ್ವೇರ್ ಕಲಿಕೆಯಲ್ಲ, ಅದು ನಿಮ್ಮ ಕಲ್ಪನೆಗೆ ಜೀವ ತುಂಬುವ ಕಲೆಯಾಗಿದೆ. ಕ್ಯಾಡ್ನೆಸ್ಟ್ ಬೆಂಗಳೂರಿನಲ್ಲಿ ಈ ಕೌಶಲ್ಯವನ್ನು ಕರಗತ ಮಾಡಿಕೊಂಡರೆ, ಭಾರತದಲ್ಲಿ ಮಾತ್ರವಲ್ಲ, ಜಾಗತಿಕವಾಗಿಯೂ ಉದ್ಯೋಗ ಮತ್ತು ಫ್ರೀಲಾನ್ಸ್ ಅವಕಾಶಗಳನ್ನು ಪಡೆಯಬಹುದು. ಕನ್ನಡಿಗರು ಡಿಜಿಟಲ್ ಜಗತ್ತಿನಲ್ಲಿ ಹೆಚ್ಚು ಬೇಡಿಕೆಯಲ್ಲಿರುವ ಕೋರ್ಸ್ಗಳನ್ನು ಕಲಿತು ವೃತ್ತಿಪರವಾಗಿ ಮುಂದೆ ಬರಬೇಕು ಎನ್ನುವುದು ಕ್ಯಾಡ್ನೆಸ್ಟ್ ಆಶಯವಾಗಿದೆ.
