ಕನ್ನಡದ ಪವರ್‌ಸ್ಟಾರ್ ಪುನೀತ್ ರಾಜಕುಮಾರ್ ನಿಜ ಜೀವನದಲ್ಲಿಯೂ ತನ್ನ ಒಳ್ಳೆಯ ಕೆಲಸಗಳಿಂದ ಮಾದರಿಯಾಗಿದ್ದರು. ವಿಶೇಷವಾಗಿ ಯುವ ಜನರ ಮೇಲೆ ಅವರಿಗೆ ವಿಶೇಷ ಅಕ್ಕರೆ. ಅಪ್ಪುವಿನ ಸಮಾಜ ಸೇವೆಯನ್ನು ಸ್ಫೂರ್ತಿಯಾಗಿಟ್ಟುಕೊಂಡು ಬೆಂಗಳೂರಿನ ಪ್ರಮುಖ ಕೌಶಲ ತರಬೇತಿ ಕೇಂದ್ರವಾದ ಕ್ಯಾಡ್‌ನೆಸ್ಟ್ ಉಚಿತ ಉದ್ಯೋಗ ಮೇಳವನ್ನು ಪವರ್ ಸ್ಟಾರ್ ಹೆಸರಿನಲ್ಲಿ ಆಯೋಜಿಸಿದೆ.
ಬೆಂಗಳೂರಿನಲ್ಲಿ ಸಾಕಷ್ಟು ಜನರು ಉದ್ಯೋಗದ ಹುಡುಕಾಟದಲ್ಲಿರುತ್ತಾರೆ. ಶಿಕ್ಷಣ ಅಥವಾ ಕೌಶಲವಿದ್ದರೂ ಕೆಲವರಿಗೆ ಉದ್ಯೋಗಾವಕಾಶ ದೊರಕಿರುವುದಿಲ್ಲ. ಸಾಕಷ್ಟು ಕಂಪನಿಗಳಿಗೆ ಅರ್ಜಿ ಸಲ್ಲಿಸಿದರೂ ಮಾರುತ್ತರ ಬಂದಿರುವುದಿಲ್ಲ. ಇಂತಹ ಯುವ ಜನರಿಗಾಗಿ, ನಿರುದ್ಯೋಗಿ ಯುವಕ-ಯುವತಿಯರಿಗಾಗಿ ಬೆಂಗಳೂರಿನ ರಾಜಾಜಿನಗರದಲ್ಲಿ ಕ್ಯಾಡ್‌ನೆಸ್ಟ್ ವಿಶೇಷ ಉದ್ಯೋಗ ಮೇಳ ಆಯೋಜಿಸಿದೆ.
ಈ ಉದ್ಯೋಗ ಮೇಳದಲ್ಲಿ ಪ್ರಮುಖ ಕಂಪನಿಗಳು ಭಾಗವಹಿಸುತ್ತಿದ್ದು, ಹೊಸ ಉದ್ಯೋಗದ ಹುಡುಕಾಟದಲ್ಲಿರುವರಿಗೆ ಇದು ಅಪೂರ್ವ ಅವಕಾಶವಾಗಲಿದೆ.
ಕರ್ನಾಟಕ ರತ್ನ ಪವರ್ ಸ್ಟಾರ್ ಉದ್ಯೋಗ ಮೇಳ-2023: ದಿನಾಂಕ
ಬೆಂಗಳೂರಿನ ರಾಜಾಜಿನಗರದಲ್ಲಿ ಪವರ್ ಸ್ಟಾರ್ ಉದ್ಯೋಗ ಮೇಳ-2023 ಇದೇ ಅಕ್ಟೋಬರ್ 29ರಂದು ನಡೆಯಲಿದೆ.
ಕರ್ನಾಟಕ ರತ್ನಪವರ್ ಸ್ಟಾರ್ ಉದ್ಯೋಗ ಮೇಳ-2023: ಸಮಯ
ಬೆಳಗ್ಗೆ 9 ಗಂಟೆಯಿಂದ ಅಪರಾಹ್ನ 3 ಗಂಟೆಯವರೆಗೆ ಈ ಉದ್ಯೋಗ ಮೇಳ ನಡೆಯಲಿದೆ.
ಪವರ್ ಸ್ಟಾರ್ ಉದ್ಯೋಗ ಮೇಳ-2023: ನಡೆಯುವ ಸ್ಥಳ
ಪವರ್ ಸ್ಟಾರ್ ಉದ್ಯೋಗ ಮೇಳವು ಕ್ಯಾಡ್‌ನೆಸ್ಟ್ (ಪ್ರೈ) ಲಿಮಿಟೆಡ್, ರಾಜಾಜಿನಗರ ಶಾಖೆಯಲ್ಲಿ ನಡೆಯಲಿದೆ.
ಹೆಸರು ನೋಂದಣಿ ಹೇಗೆ?
ಆಸಕ್ತರು ಇಲ್ಲಿ ಕ್ಲಿಕ್ ಮಾಡುವ ಮೂಲಕ ಹೆಸರು ನೋಂದಾಯಿಸಬಹುದು.
https://forms.gle/CQkjFpaH3JiM5AKN9





