ಬೆಂಗಳೂರು: ಕರ್ನಾಟಕದ ಪ್ರಮುಖ ಕೌಶಲ್ಯ ತರಬೇತಿ ಸಂಸ್ಥೆಯಾಗಿ ಬೆಳೆಯುತ್ತಿರುವ ಬೆಂಗಳೂರಿನ ವಿವಿಧೆಡೆ ಶಾಖೆಗಳನ್ನು ಹೊಂದಿರುವ ಕ್ಯಾಡ್‌ನೆಸ್ಟ್ (CADD Nest Private Limited (P) Ltd ) ಗೆ ಉನ್ನತ ಶಿಕ್ಷಣ ಸಚಿವರಾದ ಶ್ರೀಯುತ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ಶುಭ ಹಾರೈಸಿದ್ದಾರೆ.
ಕ್ಯಾಡ್‌ನೆಸ್ಟ್ ತಂಡವು ಇತ್ತೀಚೆಗೆ ಉನ್ನತ ಶಿಕ್ಷಣ ಸಚಿವರಾದ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರನ್ನು ಭೇಟಿಯಾಗಿತ್ತು. ಈ ಸಂದರ್ಭದಲ್ಲಿ ಕ್ಯಾಡ್‌ನೆಸ್ಟ್‌ನ ಇತ್ತೀಚಿನ ಉಪಕ್ರಮಗಳ ಕುರಿತು ಸಚಿವರಿಗೆ ಮಾಹಿತಿ ನೀಡಲಾಯಿತು. ಇತ್ತೀಚೆಗೆ ನಡೆಸಿದ ಉಚಿತ ಉದ್ಯೋಗ ಮೇಳದ ಕುರಿತು ಮಾಹಿತಿ ನೀಡಲಾಯಿತು.
ಈ ಸಂದರ್ಭದಲ್ಲಿ, ಉದ್ಯೋಗಾಧಾರಿತ ಕೌಶಲ್ಯಗಳನ್ನು ವಿದ್ಯಾರ್ಥಿಗಳಿಗೆ ಕಲಿಸುವ ಕ್ಯಾಡ್‌ನೆಸ್ಟ್‌ನ ಕೋರ್ಸ್‌ಗಳ ಕುರಿತು ಸಚಿವರು ಸಂತಸ ವ್ಯಕ್ತಪಡಿಸಿದರು. ಯುವ ಜನತೆಗೆ ಉದ್ಯೋಗ ಪಡೆಯಲು ನೆರವಾಗುವಂತಹ ಇನ್ನಷ್ಟು ಕೋರ್ಸ್‌ಗಳನ್ನು ನೀಡಿ ಎಂದು ಸಚಿವರು ಶುಭ ಹಾರೈಸಿದ್ದಾರೆ.
ಈಗಾಗಲೇ ಕ್ಯಾಡ್‌ನೆಸ್ಟ್ ರಾಜಾಜಿನಗರ, ಬಸವನಗುಡಿ, ಶೇಷಾದ್ರಿಪುರಂ, ಮಲ್ಲೇಶ್ವರಂ, ಆರ್ ಆರ್ ನಗರ,ಆರ್ ಟಿ ನಗರ ಮತ್ತು ಮಾಗಡಿ ಮತ್ತು ಎಚ್ ಬಿ ಆರ್ ಲೇಔಟ್ ಸೇರಿದಂತೆ ಹಲವು ಕಡೆ ಶಾಖೆಗಳನ್ನು ಹೊಂದಿರುವ ಕುರಿತು ಮಾನ್ಯ ಸಚಿವರು ಸಂತಸ ವ್ಯಕ್ತಪಡಿಸಿದ್ದಾರೆ. ಕ್ಯಾಡ್‌ನೆಸ್ಟ್ ಶಾಖೆಗಳು ಬೆಂಗಳೂರು ಮಾತ್ರವಲ್ಲದೆ ರಾಜ್ಯದ ವಿವಿಧೆಡೆ ವ್ಯಾಪಿಸಲಿ ಎಂದು ಅವರು ಶುಭ ಹಾರೈಸಿದ್ದಾರೆ.
ಕ್ಯಾಡ್‌ನೆಸ್ಟ್ (CADD Nest Private Limited (P) Ltd ) ದೇಶದ ಕಂಪನಿ ಕಾಯಿದೆಯಡಿ ನೋಂದಣಿಯಾದ ಅಧಿಕೃತ ಕೌಶಲ್ಯ ತರಬೇತಿ ಸಂಸ್ಥೆಯಾಗಿದ್ದು, ಉದ್ಯೋಗಾದಾರಿತ ಕೌಶಲ್ಯಗಳನ್ನು ಕಲಿಯಲು ಬಯಸುವ ವಿದ್ಯಾರ್ಥಿಗಳಿಗೆ ಕಡಿಮೆದರದಲ್ಲಿ ಕೋರ್ಸ್‌ಗಳನ್ನು ಕಲಿಸುತ್ತಿದೆ. ವಿದ್ಯಾರ್ಥಿಗಳ ಅವಶ್ಯಕತೆ, ಬೇಡಿಕೆಗೆ ತಕ್ಕಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಇರುವ ಸರ್ಟಿಫಿಕೇಷನ್‌ಗಳನ್ನೂ ಇಲ್ಲಿ ಪಡೆಯಬಹುದು.