ಸಾವಿರಾರು ವಿದ್ಯಾರ್ಥಿಗಳ ಮನಗೆದ್ದ ಕ್ಯಾಡ್ ನೆಸ್ಟ್ ಈಗ ಮತ್ತೊಂದು ಹೊಸ ಹೆಜ್ಜೆ ಇಡುತ್ತಿದೆ.ಬೆಂಗಳೂರಿನ ಎಚ್ ಬಿ ಆರ್ ಲೇಔಟ್ ಅಲ್ಲಿ ಕ್ಯಾಡ್ನೆಸ್ಟ್ ನ ಹೊಸ ಶಾಖೆ ಆರಂಭವಾಗುತ್ತಿದ್ದು ಶೀಘ್ರದಲ್ಲಿಯೇ ವಿದ್ಯಾರ್ಥಿಗಳ ದಾಖಲಾತಿ ಆರಂಭಗೊಳ್ಳಲಿದೆ.
ಬೆಂಗಳೂರಿನಲ್ಲಿ ಈಗಾಗಲೇ ಏಳು ಕಡೆಗಳಲ್ಲಿ ಶಾಖೆಗಳನ್ನು ಹೊಂದಿರುವ ಕ್ಯಾಡ್ ನೆಸ್ಟ್ ಸಂಸ್ಥೆಯು ವಿದ್ಯಾರ್ಥಿಗಳ ವೃತ್ತಿಪರ ಕೋರ್ಸ್ ಮತ್ತು ಕೌಶಲ್ಯಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದೆ.

ಈಗಾಗಲೇ 3 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಆನ್ಲೈನ್ ಮತ್ತು ಆಫ್ಲೈನ್ ಮೂಲಕ ವೃತ್ತಿಪರ ಮತ್ತು ಕೌಶಲ್ಯ ಕೋರ್ಸ್ಗಳ ತರಬೇತಿ ನೀಡಿರುವುದು ಮಾತ್ರವಲ್ಲ
ಇಲ್ಲಿ ತರಬೇತಿ ಪಡೆದವರಲ್ಲಿ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈಗಾಗಲೇ ಉದ್ಯೋಗ ಪಡೆದಿದ್ದಾರೆ ಎನ್ನುವುದು ಹೆಮ್ಮೆಯ ವಿಚಾರವಾಗಿದೆ.
ಕ್ಯಾಡ್ ನೆಸ್ಟ್ ಅಲ್ಲಿ ಟ್ಯಾಲಿ, ಅಡ್ವಾನ್ಸಡ್ ಎಕ್ಸೆಲ್, ಎಂಎಸ್ ಆಫೀಸ್, ಸ್ಯಾಪ್ ನ ಎಲ್ಲಾ ಮಾಡ್ಯುಲ್ಗಳನ್ನು ಕೂಡ ಇಲ್ಲಿ ಕಲಿಯಬಹುದು. ಅಲ್ಲದೇ ಸಿವಿಲ್ ಮತ್ತು ಮೆಕ್ಯಾನಿಕಲ್ ಕ್ಯಾಡ್ ,ರಿವೆಟ್ಸ್, ಐಟಿ ಲ್ಯಾಂಗ್ವೇಜ್ಗಳು, ಪವರ್ ಬಿಐ, ಎಐ, ಎಂಎಲ್, ಬಿಗ್ಡೇಟಾ, ಲಿನಕ್ಸ್, ಕ್ಲೌಡ್ ಕಂಪ್ಯೂಟಿಂಗ್ ಮಾತ್ರವಲ್ಲದೇ ನುಡಿ ಟೈಪಿಂಗ್ ,ಸ್ಪೋಕನ್ ಇಂಗ್ಲಿಷ್,ಗ್ರಾಫಿಕ್ಸ್ ಡಿಸೈನಿಂಗ್,ಡಿಜಿಟಲ್ ಮಾರ್ಕೆಟಿಂಗ್,ಹೀಗೆ 250 ಕ್ಕೂ ಹೆಚ್ಚು ಕೋರ್ಸ್ ಗಳು ಲಭ್ಯವಿದ್ದು ಒಂದೇ ಸೂರಿನಡಿ ವಿವಿಧ ಕೋರ್ಸ್ ಗಳನ್ನೀಗ ಕಲಿಯಬಹುದಾಗಿದೆ.

ಇಲ್ಲಿ ನುರಿತ ಅನುಭವಿ ಶಿಕ್ಷಕರು ಕೋರ್ಸ್ ಗಳನ್ನು ಕಲಿಸುವ ಕಾರಣ ಕ್ವಾಲಿಟಿ ಯ ಬಗ್ಗೆ ಎರಡು ಮಾತಿಲ್ಲ. ಅಲ್ಲದೇ ಕ್ಲಿಷ್ಟಕರ ವಿಷಯಗಳನ್ನು ಮನದಟ್ಟು ಮಾಡುವ ಚಾಣಾಕ್ಷತನ ಹೊಂದಿರುವ ಸ್ಟಾಫ್ ಗಳನ್ನು ಹೊಂದಿರುವ ಕ್ಯಾಡ್ ನೆಸ್ಟ್ ಸಂಸ್ಥೆಯ ಈಗಾಗಲೇ ತನ್ನ ಅತ್ಯುತ್ತಮ ಗುಣಮಟ್ಟದ ಶಿಕ್ಷಣದಿಂದಲೇ ಸಾವಿರಾರು ವಿದ್ಯಾರ್ಥಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಕ್ಯಾಡ್ನೆಸ್ಟ್ ಈ ಹಿಂದೆ ರಾಜಾಜಿನಗರ, ಬಸವನಗುಡಿ, ಶೇಷಾದ್ರಿಪುರಂ, ಮಲ್ಲೇಶ್ವರಂ, ಆರ್ ಆರ್ ನಗರ,ಆರ್ ಟಿ ನಗರ ಮತ್ತು ಮಾಗಡಿಯಲ್ಲಿ ಶಾಖೆಗಳನ್ನು ಹೊಂದಿತ್ತು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಇದೀಗ ಎಚ್ ಬಿ ಆರ್ ಲೇಔಟ್ ನಲ್ಲಿ ಹೊಸ ಶಾಖೆಯನ್ನು ಆರಂಭಿಸುತ್ತಿದೆ.
ಬದಲಾವಣೆ ಜಗದ ನಿಯಮ. ಎನ್ನುವಂತೆ ಇಂದಿನ ಜಗತ್ತು ಉದ್ಯೋಗಗಳಲ್ಲಿ ಹೊಸ ಬಗೆಯ ಕೌಶಲಗಳನ್ನು ಬಯಸುತ್ತಿದೆ ಅದಕ್ಕಾಗಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವುದು ನಮ್ಮ ಮೂಲ ಉದ್ದೇಶವಾಗಿದೆ. ಬಡ ವಿದ್ಯಾರ್ಥಿಗಳಿಗೂ ಹೊರೆಯಾಗದಂತೆ ಕಡಿಮೆ ದರದಲ್ಲಿ ಗುಣಮಟ್ಟದ ಶಿಕ್ಷಣ ನೀಡಬೇಕೆನ್ನುವುದೇ ನಮ್ಮ ಗುರಿ. ಎನ್ನುತ್ತಾರೆ ಕ್ಯಾಡ್ನೆಸ್ಟ್ ಸ್ಥಾಪಕರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಪ್ರಕಾಶ್ ಗೌಡರು.

ಹೊಸ ಕೌಶಲ್ಯ ಕಲಿಯಲು ಬಯಸುವ ವಿದ್ಯಾರ್ಥಿಗಳಿಗೆ ಶಿಕ್ಷಣ ಗುಣಮಟ್ಟದಲ್ಲಿ ರಾಜಿಯಿಲ್ಲದೆ ಕಡಿಮೆ ದರದಲ್ಲಿ ವಿವಿಧ ಕೋರ್ಸ್ಗಳ ಕಲಿಯುವ ಅವಕಾಶವನ್ನು ಕ್ಯಾಡ್ನೆಸ್ಟ್ ನೀಡುತ್ತಿದೆ. ಅಲ್ಲದೇ ಈ ಶುಭಸಂದರ್ಭದಲ್ಲಿ ಆಯ್ದ ಕೋರ್ಸ್ಗಳಿಗೆ ಶೇಕಡ 50% ಡಿಸ್ಕೌಂಟ್ ನೀಡುವ ಕಾರಣ ಅದರ ಪ್ರಯೋಜನ ಪಡೆದುಕೊಳ್ಳಿ.
ಸ್ಮಾರ್ಟ್ ಯುಗದಲ್ಲಿ ಸ್ಮಾರ್ಟ್ ಆಗೋದ್ ಹೇಗೆಎಂದು ನೀವು ಯೋಚಿಸುತ್ತಿದ್ದರೆ ಕ್ಯಾಡ್ ನೆಸ್ಟ್ ಗೆ ಬನ್ನಿ , ನಿಮ್ಮ ಸ್ನೇಹಿತರನ್ನು ಕರೆತನ್ನಿ..
ಕ್ಯಾಡ್ ನೆಸ್ಟ್ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಳನ್ನು ಪಡೆಯಲು http://www.caddnest.org ಭೇಟಿ ನೀಡಿ . ಇಲ್ಲವಾದಲ್ಲಿ ಹೆಚ್ಚಿನ ವಿವರಗಳಿಗಾಗಿ ನಿಮ್ಮ ಹತ್ತಿರದ ಕ್ಯಾಡ್ನೆಸ್ಟ್ ತರಬೇತಿ ಕೇಂದ್ರವನ್ನು ಸಂಪರ್ಕಿಸಿ.