Kannada CADD Nest Private Limited

ಕ್ಯಾಡ್‌ನೆಸ್ಟ್‌ಗೆ ಮೊದಲ ವಾರ್ಷಿಕೋತ್ಸವ, ಸಾವಿರಾರು ವಿದ್ಯಾರ್ಥಿಗಳಿಗೆ ಅಮಿತೋತ್ಸವ

ಕ್ಯಾಡ್‌ನೆಸ್ಟ್‌ಗೆ ಮೊದಲ ವಾರ್ಷಿಕೋತ್ಸವ, ಸಾವಿರಾರು ವಿದ್ಯಾರ್ಥಿಗಳಿಗೆ ಅಮಿತೋತ್ಸವ

ಈ ಯುಗಾದಿ ಹಬ್ಬದ ಸಮಯದಲ್ಲಿನಮ್ಮ ಸಂಭ್ರಮಕ್ಕೆ ಹಲವು ಕಾರಣಗಳಿವೆ. ಮೊದಲನೆಯದಾಗಿ ಉತ್ಸಾಹಿ ವಿದ್ಯಾರ್ಥಿಗಳು ಮತ್ತು ಆತ್ಮೀಯ ಸಹೋದ್ಯೋಗಿಗಳ ನೆರವಿನಿಂದ ಕ್ಯಾಡ್‌ನೆಸ್ಟ್‌ ಮೊದಲ ವರ್ಷ ಪೂರೈಸಿದೆ. ಮೊದಲ ವಾರ್ಷಿಕೋತ್ಸವದ ಈ ಸಮಯದಲ್ಲಿನಮ್ಮ ಕಳೆದ ಹದಿನೆಂಟು ವರ್ಷಗಳ ಅನುಭವದಿಂದ ಸಾಕಷ್ಟು ಸಾಧಿಸಲು ಸಾಧ್ಯವಾಗಿದೆ. ನಮ್ಮ ಸಂಸ್ಥೆಯ ಭಾಗವಾದ ಪ್ರತಿಯೊಬ್ಬರಿಗೂ ಮೊದಲಿಗೆ ಪ್ರೀತಿಯ ಧನ್ಯವಾದ. ಕೊರೊನಾ ಮತ್ತು ಕೊರೊನೋತ್ತರ ಕಾಲದಲ್ಲಿನೀವು ನಮ್ಮ ಮೇಲಿಟ್ಟ ಪ್ರೀತಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು.


ಈ ಸಮಯದಲ್ಲಿಸುಮಾರು 3 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಮತ್ತು ಆಫ್‌ಲೈನ್‌ ಮೂಲಕ ವೃತ್ತಿಪರ ಮತ್ತು ಕೌಶಲ್ಯ ಕೋರ್ಸ್‌ಗಳ ತರಬೇತಿ ನೀಡಿದ್ದೇವೆ. ಈ ರೀತಿ ತರಬೇತಿ ಪಡೆದವರಲ್ಲಿ500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈಗಾಗಲೇ ಉದ್ಯೋಗ ಪಡೆದಿದ್ದಾರೆ. ಉಳಿದವರಲ್ಲಿಬಹುತೇಕರು ವಿದ್ಯಾರ್ಥಿಗಳು, ಅವರಿನ್ನೂ ಕಾಲೇಜುಗಳಲ್ಲಿಓದುತ್ತಿದ್ದಾರೆ. ಕಾಲೇಜಿನಲ್ಲಿಓದುತ್ತಿರುವುದರ ಜೊತೆಗೆ ನಮ್ಮಲ್ಲಿಕೋರ್ಸ್‌ಗಳನ್ನು ಕಲಿತು ತಮ್ಮ ರೆಸ್ಯುಮೆ ತೂಕ ಹೆಚ್ಚಿಸಿಕೊಂಡಿದ್ದಾರೆ. ಅವರಿಗೆ ಖಂಡಿತವಾಗಿಯೂ ಮುಂದೆ ಒಳ್ಳೆಯ ಉದ್ಯೋಗ ದೊರಕುವ ಭರವಸೆ ನಮಗಿದೆ.


ಕಳೆದ ಯುಗಾದಿ ಹಬ್ಬದ ಸಮಯದಲ್ಲಿಕ್ಯಾಡ್‌ನೆಸ್ಟ್‌ ಆರಂಭಿಸಿದ್ದು ನಿಜಕ್ಕೂ ನಮ್ಮ ಪಾಲಿಗೆ ಹೊಸ ವರ್ಷವಾಗಿದೆ. ಸಾಕಷ್ಟು ಸವಾಲುಗಳ ನಡುವೆಯೂ ನಮಗಿದು ಭರವಸೆಯ ವರ್ಷ. ಈ ಸಮಯದಲ್ಲಿಮೂರು ಕಡೆ ಹೊಸ ಶಾಖೆಗಳನ್ನು ಆರಂಭಿಸಿದ್ದೇವೆ. ಹೌದು, ನಾವೀಗ ಬೆಂಗಳೂರಿನಲ್ಲಿಏಳು ಕಡೆ ತರಬೇತಿ ಕೇಂದ್ರಗಳನ್ನು ಹೊಂದಿದ್ದೇವೆ. ದಯವಿಟ್ಟು ನಿಮ್ಮ ಹತ್ತಿರದ ಕ್ಯಾಡ್‌ನೆಸ್ಟ್‌ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ಸೌಲಭ್ಯಗಳನ್ನು ಪರಿಶೀಲಿಸಿ ನಿಮಗೆ ಇಷ್ಟವಾದ ಕೋರ್ಸ್‌ಗಳಿಗೆ ಸೇರಿ. ಈ ವಾರ್ಷಿಕೋತ್ಸವದ ಸಮಯದಲ್ಲಿಆಯ್ದ ಕೋರ್ಸ್‌ಗಳಿಗೆ ಶೇಕಡ 50 ಡಿಸ್ಕೌಂಟ್‌ ನೀಡುತ್ತೇವೆ, ದಯವಿಟ್ಟು ಇದರ ಪ್ರಯೋಜನ ಪಡೆಯಿರಿ, ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ತಿಳಿಸಿರಿ.


ಇಷ್ಟು ಮಾತ್ರವಲ್ಲದೆ ನಾವು ಎರಡು ಯಶಸ್ವಿ ಉದ್ಯೋಗ ಮೇಳಗಳನ್ನು ಆಯೋಜಿಸಿದ್ದೇವೆ. ಬಸವನಗುಡಿ ಕ್ಯಾಡ್‌ನೆಸ್ಟ್‌ ಮತ್ತು ಆರ್‌ಟಿ ನಗರ ಕ್ಯಾಡ್‌ನೆಸ್ಟ್‌ನಲ್ಲಿಜಾಬ್‌ ಫೇರ್‌ ಆಯೋಜಿಸಿದಾಗ ಸಾಕಷ್ಟು ಒಳ್ಳೆಯ ಪ್ರತಿಕ್ರಿಯೆ ಬಂದಿದೆ. ಸಾಕಷ್ಟು ಅಭ್ಯರ್ಥಿಗಳು ಉದ್ಯೋಗಗಳನ್ನೂ ಪಡೆದುಕೊಂಡಿದ್ದಾರೆ. ಬಸವನಗುಡಿ ಉದ್ಯೋಗ ಮೇಳದಲ್ಲಿ1000ಕ್ಕೂ ಹೆಚ್ಚು ಅಭ್ಯರ್ಥಿಗಳು ಭಾಗವಹಿಸಿದ್ದು, 250ಕ್ಕೂ ಹೆಚ್ಚು ಅಭ್ಯರ್ಥಿಗಳು ಉದ್ಯೋಗ ಪಡೆದುಕೊಂಡಿದ್ದಾರೆ. ಆರ್‌ಟಿ ನಗರ ಉದ್ಯೋಗ ಮೇಳದಲ್ಲಿ400ಕ್ಕೂ ಹೆಚ್ಚು ಅಭ್ಯರ್ಥಿಗಳು ಪಾಲ್ಗೊಂಡಿದ್ದರು. ಅವರಲ್ಲಿ150ಕ್ಕೂ ಹೆಚ್ಚು ಪ್ರೊಫೈಲ್‌ಗಳಿಗೆ ಪ್ಲೇಸ್‌ಮೆಂಟ್‌ ಆಗಿದೆ.


ಇದರೊಂದಿಗೆ ಕ್ಯಾಡ್‌ನೆಸ್ಟ್‌ನ ಸಾಂಸ್ಕೃತಿಕ ಕೊಡುಗೆಯನ್ನೂ ಇಲ್ಲಿದಾಖಲಿಸಬೇಕು. ಮೂರು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸ್ಪಾನ್ಸರ್‌ಷಿಪ್‌ ಮಾಡಿದ್ದೇವೆ. ಭರತನಾಟ್ಯ, ಮೋಟರ್‌ಬೈಕ್‌ ರೇಸ್‌, ಫ್ಯಾಷನ್‌ ಶೋ ಇತ್ಯಾದಿಗಳನ್ನು ಆಯೋಜಿಸಿ ಯುವ ಜನತೆಗೆ ಪ್ರೋತ್ಸಾಹ ನೀಡಿದ್ದೇವೆ.
ಇದರೊಂದಿಗೆ ಕಾರ್ಪೊರೇಟ್‌ ಕಂಪನಿಗಳಲ್ಲಿಉದ್ಯೋಗ ಮಾಡಲು ವಿದ್ಯಾರ್ಥಿಗಳಿಗೆ ತರಬೇತಿಯನ್ನೂ ನೀಡಿದ್ದೇವೆ. ನಾಲ್ಕು ಕಾಲೇಜುಗಳಲ್ಲಿಸೆಮಿನಾರ್‌ಗಳನ್ನು ಆಯೋಜಿಸಿದ್ದೇವೆ. ಇವುಗಳಲ್ಲಿಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ.


ಯುವಜನತೆಗೆ ಈಗಿನ ಉದ್ಯಮದ ಗುಣಮಟ್ಟಕ್ಕೆ ತಕ್ಕಂತೆ ಕೌಶಲ್ಯ ತರಬೇತಿ ನೀಡುತ್ತಿದ್ದೇವೆ. ಈಗಿನ ಉದ್ಯೋಗ ಜಗತ್ತು ಹೊಸ ಬಗೆಯ ಕೌಶಲಗಳನ್ನು ಬಯಸುತ್ತಿದ್ದು, ಅದಕ್ಕೆ ಎಲ್ಲರನ್ನೂ ಸಜ್ಜುಗೊಳಿಸುವುದು ನಮ್ಮ ಉದ್ದೇಶ. ಬಡ ವಿದ್ಯಾರ್ಥಿಗಳಿಗೂ ಹೊರೆಯಾಗದಂತೆ ಕಡಿಮೆ ದರದಲ್ಲಿಗುಣಮಟ್ಟದ ಶಿಕ್ಷಣ ನೀಡುತ್ತಿರುವ ಹೆಮ್ಮೆ ಕ್ಯಾಡ್‌ನೆಸ್ಟ್‌ನದ್ದು.


ಟ್ಯಾಲಿ, ಅಡ್ವಾನ್ಸಡ್‌ ಎಕ್ಸೆಲ್‌, ಎಂಎಸ್‌ ಆಫೀಸ್‌, ಸ್ಯಾಪ್‌ (ಎಲ್ಲಾಮಾಡ್ಯುಲ್‌ಗಳು), ಸಿವಿಲ್‌ ಮತ್ತು ಮೆಕ್ಯಾನಿಕಲ್‌ ಕ್ಯಾಡ್‌, ಐಟಿ ಲ್ಯಾಂಗ್ವೇಜ್‌ಗಳು, ಪವರ್‌ ಬಿಐ, ಎಐ, ಎಂಎಲ್‌, ಬಿಗ್‌ಡೇಟಾ, ಲಿನಕ್ಸ್‌, ಕ್ಲೌಡ್‌ ಕಂಪ್ಯೂಟಿಂಗ್‌ ಇತ್ಯಾದಿ ನೂರಾರು ಕೋರ್ಸ್‌ಗಳನ್ನು ನಮ್ಮಲ್ಲಿಕಲಿಯಬಹುದು. ಆನ್‌ಲೈನ್‌ ಮೂಲಕವೂ ಕಲಿಯಬಹುದು. ನಮ್ಮೆಲ್ಲಕೋರ್ಸ್‌ಗಳನ್ನು ಮತ್ತು ಹೆಚ್ಚಿನ ಮಾಹಿತಿಗಳನ್ನು ಪಡೆಯಲು ನಮ್ಮ ವಿವಿಧ ವೆಬ್‌ಸೈಟ್‌ಗಳಿಗೆ ಭೇಟಿ ನೀಡಬಹುದು.
ಕ್ಯಾಡ್‌ನೆಸ್ಟ್‌ ವೆಬ್‌ಸೈಟ್‌ಗಳು

ಕ್ಯಾಡ್‌ನೆಸ್ಟ್‌ ಆರ್ಗ್‌ https://caddnest.org/

ಕ್ಯಾಡ್‌ನೆಸ್ಟ್‌ ಅಕಾಡೆಮಿ, ಸ್ಯಾಪ್‌ ಕಲಿಕೆಗೆ https://caddnestacademy.com/

ಡಿಜಿಸ್ಕಿಲ್‌ ಕಲಿಕೆಗೆ https://caddnestdmapiie.com/

https://www.caddnestrbsm.com/

Job Oriented Software Training Institutes in Bangalore with Best Placements Courses
Hadoop Training in Bangalore
AngularJS Training in Bangalore
Selenium Training in Bangalore
Salesforce Training in Bangalore
Python Training in Bangalore
AWS Training in Bangalore
Spring Training in Bangalore
Excel VBA Training in Bangalore
Android Training in Bangalore
Digital Marketing Training in Bangalore

Data Science Training in Bangalore
DevOps Training in Bangalore
Web Designing Training in Bangalore
Mean Stack Training in Bangalore
Core Java Training in Bangalore
Tableau Training in Bangalore
Oracle Training in Bangalore
iOS Training in Bangalore
Informatica Training in Bangalore
Machine Learning Training in Bangalore

Related Posts

error: Content is protected !!
Scroll to Top