ಕನ್ನಡ ನಾಡಿನ ಯಾವುದೇ ಮೂಲೆಯಲ್ಲಿ ಓದಿರುವ ವಿದ್ಯಾರ್ಥಿ/ವಿದ್ಯಾರ್ಥಿನಿ ಉದ್ಯೋಗ ಸಂದರ್ಶನವೊಂದರ ಬಾಗಿಲು ತೆರೆದಾಗ “ಮೇ ಐ ಕಮಿನ್ ಸರ್/ಮೇಡಮ್” ಎಂದು ಹೇಳಿ ಒಳ ಪ್ರವೇಶಿಸಬೇಕಾದ ಅನಿವಾರ್ಯತೆಯಿದೆ. ಉದ್ಯೋಗ ಸಂದರ್ಶನದ ಬಾಗಿಲು ತೆರೆದು ಕುಳಿತ ಮೇಲೂ “ಟೆಲ್ ಮಿ ಅಬೌಟ್ ಯುವರ್ ಸೆಲ್ಫ್” ಇತ್ಯಾದಿ ಪ್ರಶ್ನೆಗಳಿಗೂ ಇಂಗ್ಲಿಷ್‌ನಲ್ಲಿಯೇ ಉತ್ತರಿಸಬೇಕಾದ ಅನಿವಾರ್ಯ ಸಂದರ್ಭದಲ್ಲಿ ನಾವಿದ್ದೇವೆ.
ನಿಮ್ಮ ಬಗ್ಗೆ ನೀವು ಕನ್ನಡದಲ್ಲಿ ಏನೂ ಬೇಕಾದರೂ ಹೇಳುವ ಶಕ್ತಿ ಹೊಂದಿರುವಿರಿ. ನಿಮ್ಮಲ್ಲಿರುವ ಸ್ಕಿಲ್‌ಗಳ ಬಗ್ಗೆ, ನಿಮ್ಮ ಭವಿಷ್ಯದ ಕನಸಿನ ಕುರಿತು ಕನ್ನಡದಲ್ಲಿ ಎಷ್ಟು ಬೇಕಾದರೂ ಹೇಳುವ ಸಾಮರ್ಥ್ಯ ನಿಮಗಿರಬಹುದು. ಆದರೆ, ಈ ಮಾಹಿತಿಗಳನ್ನು ಇಂಗ್ಲಿಷ್‌ನಲ್ಲಿ ಹೇಳುವ ಅನಿವಾರ್ಯತೆ ನಿಮ್ಮ ಮುಂದೆ ಬಂದಾಗ ತಡಬಡಾಯಿಸುವಿರಿ. ನಿಮ್ಮಲ್ಲಿ ಒಳ್ಳೆಯ ಉದ್ಯೋಗ ಕೌಶಲ್ಯವಿದ್ದರೂ ಮಾತುಬಲ್ಲ ಕಡಿಮೆ ಕೌಶಲ್ಯದ ಪ್ರತಿಸ್ಪರ್ಧಿ ವಿದ್ಯಾರ್ಥಿಯ ಮುಂದೆ ನೀವು ಸೋಲಬೇಕಾಗಬಹುದು.
ಇನ್ನೊಂದು ಸಮಸ್ಯೆ ಶಿಕ್ಷಣ ಸಂಸ್ಥೆಗಳದ್ದು. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸುಲಭವಾಗಿ ಅರ್ಥವಾಗದಂತೆ ಕೇವಲ ಇಂಗ್ಲಿಷ್‌ನಲ್ಲಿಯೇ ಬೋಧಿಸಲಾಗುತ್ತದೆ. ಟೆಕ್ ಕೋರ್ಸ್‌ಗಳ ವಿವರವನ್ನು ಕನ್ನಡದಲ್ಲಿ ಹೇಳಿಕೊಡುವವರಿಲ್ಲ. ಇಂತಹ ಸಂದರ್ಭದಲ್ಲಿ ಕೆಲವೇ ಕೆಲವು ಶಿಕ್ಷಣ ಸಂಸ್ಥೆಗಳು ಮಾತ್ರ ಇಂಗ್ಲಿಷ್‌ನಲ್ಲಿ ಅಷ್ಟೇನೂ ಉತ್ತಮವಾಗಿರದ ಕನ್ನಡ ವಿದ್ಯಾರ್ಥಿಗಳಿಗೆ ಕನ್ನಡ ಮತ್ತು ಇಂಗ್ಲಿಷ್‌ನಲ್ಲೆರಡಲ್ಲಿಯೂ ಹೇಳಿಕೊಳ್ಳುತ್ತವೆ. ಅಂತಹ ಅಪರೂಪದ ಶಿಕ್ಷಣ ಸಂಸ್ಥೆಗಳಲ್ಲಿ ಕರ್ನಾಟಕದ ಪ್ರಮುಖ ಕೌಶಲ್ಯ ತರಬೇತಿ ಕೇಂದ್ರ “ಕ್ಯಾಡ್‌ನೆಸ್ಟ್” ಕೂಡ ಒಂದಾಗಿದೆ.
ಇದು ಕನ್ನಡದ ತಪ್ಪಲ್ಲ, ಕನ್ನಡದ ವಿದ್ಯಾರ್ಥಿಗಳ ತಪ್ಪಲ್ಲ
ಕನ್ನಡ ವಿದ್ಯಾರ್ಥಿಗಳು ಯಾವುದೇ ಶಿಕ್ಷಣ ಸಂಸ್ಥೆಗೆ ಹೋದರೂ ಅಲ್ಲಿ ಇಂಗ್ಲಿಷ್‌ನಲ್ಲಿಯೇ ಮಾಹಿತಿ ನೀಡಲಾಗುತ್ತದೆ. ಇಂಗ್ಲಿಷ್ ಪಠ್ಯವನ್ನೇ ಉರು ಹೊಡೆಸಲಾಗುತ್ತದೆ. ಇಂಗ್ಲಿಷ್‌ನಲ್ಲಿರುವ ಮಾಹಿತಿಯನ್ನು ಕನ್ನಡದ ವಿದ್ಯಾರ್ಥಿಗಳಿಗೆ ಕನ್ನಡದಲ್ಲಿಯೇ ಹೇಳಿಕೊಡುವವರು ತೀರಾ ಅಪರೂಪ.
“ನಮ್ಮಲ್ಲಿ ಸಾಮಾನ್ಯ ಕಂಪ್ಯೂಟರ್ ಶಿಕ್ಷಣದಿಂದ ಕ್ಯಾಡ್, ಡಿಜಿಟಲ್ ಮಾರ್ಕೆಟಿಂಗ್, ಅನಿಮೇಷನ್, ಟ್ಯಾಲಿ ಸೇರಿದಂತೆ ಈಗಿನ ಉದ್ಯೋಗ ಜಗತ್ತು ಬಯಸುವ ಎಲ್ಲಾ ಕೋರ್ಸ್‌ಗಳು ಇವೆ. ಬಹುತೇಕ ಎಲ್ಲಾ ಕೋರ್ಸ್‌ಗಳನ್ನು ಕನ್ನಡ ಬಲ್ಲ ಬೋಧಕರು ಬೋಧಿಸುತ್ತಾರೆ. ಕನ್ನಡ ವಿದ್ಯಾರ್ಥಿಗಳಿಗೆ ಅರ್ಥವಾಗುವಂತೆ ಬೋಧಿಸುವುದು ನಮ್ಮ ಶಿಕ್ಷಣ ಸಂಸ್ಥೆಯ ವಿಶೇಷತೆ” ಎಂದು ಕ್ಯಾಡ್‌ನೆಸ್ಟ್ ಬೆಂಗಳೂರಿನ ನಿರ್ದೇಶಕರಾದ ಪ್ರಕಾಶ್ ಗೌಡ ಹೇಳಿದ್ದಾರೆ.
“ಕನ್ನಡದ ವಿದ್ಯಾರ್ಥಿಗಳು ಈಗ ಯಾವುದೇ ಕೀಳರಿಮೆ ಹೊಂದುವ ಅಗತ್ಯವಿಲ್ಲ. ನಮ್ಮ ಸಂಸ್ಥೆಯಲ್ಲಿ ಇಂಗ್ಲಿಷ್ ಬಾರದ ವಿದ್ಯಾರ್ಥಿಗಳ ಕುರಿತು ವಿಶೇಷ ಕಾಳಜಿ ವಹಿಸಲಾಗುತ್ತದೆ. ನಾವೆಲ್ಲ ಗ್ರಾಮೀಣ ಮೂಲದಿಂದಲೇ ಬಂದವರು. ಯಶಸ್ಸಿಗೆ ಭಾಷೆ ಅಡ್ಡಿಯಾಗಬಾರದು. ಆರ್ಥಿಕತೆಯೂ ಅಡ್ಡಿಯಾಗಬಾರದು. ಹೀಗಾಗಿ ಕಡಿಮೆ ದರದಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತ ಬಂದಿದ್ದೇವೆ” ಎಂದು ಅವರು ಹೇಳಿದ್ದಾರೆ.
ಕ್ಯಾಡ್‌ನೆಸ್ಟ್‌ನಲ್ಲಿ ಗುಣಮಟ್ಟದ ಶಿಕ್ಷಣ ಪಡೆಯಲು ಬಯಸುವವರು ಹೆಚ್ಚಿನ ಮಾಹಿತಿಗಾಗಿ ಕ್ಯಾಡ್‌ನೆಸ್ಟ್.ಆರ್ಗ್‌ಗೆ ಭೇಟಿ ನೀಡಬಹುದು.
ಕನ್ನಡ ರಾಜ್ಯೋತ್ಸವದ ಬಗ್ಗೆ ತಿಳಿದುಕೊಳ್ಳಲು ಬಯಸುವವರಿಗೆ ಇಲ್ಲೊಂದಿಷ್ಟು ಮಾಹಿತಿ ನೀಡಲಾಗಿದೆ.
- ಕನ್ನಡ ರಾಜ್ಯೋತ್ಸವ ಅಥವಾ ಕರ್ನಾಟಕ ರಾಜ್ಯೋತ್ಸವ ಪ್ರತಿ ವರ್ಷದ ನವೆಂಬರ್ ೧ ರಂದು ಆಚರಿಸಲಾಗುತ್ತದೆ. ಮೈಸೂರು ರಾಜ್ಯವು(ಈಗಿನ ಕರ್ನಾಟಕ) ೧೯೫೬ರ ನವೆಂಬರ್ ೧ರಂದು ನಿರ್ಮಾಣವಾದುದರ ಸಂಕೇತವಾಗಿ ಈ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ.
- ದಕ್ಷಿಣ ಭಾರತದ ಎಲ್ಲಾ ಕನ್ನಡ ಭಾಷೆ-ಮಾತನಾಡುವ ಪ್ರದೇಶಗಳನ್ನು ವಿಲೀನಗೊಳಿಸಿ ಒಂದು ರಾಜ್ಯವನ್ನು ಘೋಷಣೆ ಮಾಡಿದ ಈ ದಿನವನ್ನು ಕನ್ನಡಿಗರು ನಾಡಹಬ್ಬವನ್ನಾಗಿ ಆಚರಿಸುತ್ತಾರೆ.
- ಕನ್ನಡದ ಕುಲಪುರೋಹಿತರಾದ ಆಲೂರು ವೆಂಕಟರಾಯರು, ಕರ್ನಾಟಕ ಏಕೀಕರಣ ಚಳುವಳಿಯನ್ನು ೧೯೦೫ ರಲ್ಲಿ ಪ್ರಾರಂಭಿಸಿದರು.
೧೯೫೦ರಲ್ಲಿ, ಭಾರತವು ಗಣರಾಜ್ಯವಾದ ನಂತರ ಭಾರತದ ವಿವಿಧ ಪ್ರಾಂತ್ಯಗಳು, ಭಾಷೆಗಳ ಆಧಾರದ ಮೇಲೆ ರಾಜ್ಯಗಳಾಗಿ ರೂಪಗೊಂಡವು. ಈ ಹಿಂದೆ ರಾಜರ ಆಳ್ವಿಕೆಯಲ್ಲಿ ದಕ್ಷಿಣ ಭಾರತದಲ್ಲಿ ಹಲವಾರು ಸಂಸ್ಥಾನಗಳನ್ನು ಒಳಗೊಂಡಂತೆ ರಾಜ್ಯಗಳು ರೂಪುಗೊಂಡಿದ್ದವು. ಕನ್ನಡ ಮಾತನಾಡುವ ಪ್ರಾಂತ್ಯಗಳು ಸೇರಿ, ಮೈಸೂರು ರಾಜ್ಯವು ಉದಯವಾಯಿತು.
- ೧೯೫೬ ರ ನವೆಂಬರ್ ೧ ರಂದು, ಮದ್ರಾಸ್, ಮುಂಬಯಿ, ಹೈದರಬಾದ್ ಪ್ರಾಂತ್ಯದ ಕನ್ನಡ ಮಾತನಾಡುವ ಪ್ರದೇಶಗಳು ವಿಲೀನಗೊಂಡು ಮೈಸೂರು ರಾಜ್ಯ ಉದಯವಾಯಿತು ಹಾಗೂ ಉತ್ತರ ಕರ್ನಾಟಕ, ಮಲೆನಾಡು ಮತ್ತು ಹಳೆಯ ಮೈಸೂರು ಎಂಬುದಾಗಿ ಹೊಸದಾಗಿ ರೂಪುಗೊಂಡ ಮೈಸೂರು ರಾಜ್ಯವನ್ನು ಮೂರು ಪ್ರದೇಶಗಳಲ್ಲಿ ಗುರುತಿಸಲಾಯಿತು.
- ಹೊಸದಾಗಿ ಏಕೀಕೃತಗೊಂಡ ರಾಜ್ಯದ ಆರಂಭದಲ್ಲಿ ಹೊಸ ಘಟಕದ ಕೋರ್ ರೂಪುಗೊಂಡು ಮುಂಚಿನ ರಾಜ್ಯದ ಹೆಸರು ಇರಲೆಂದು “ಮೈಸೂರು” ಹೆಸರನ್ನು ಉಳಿಸಿಕೊಂಡರು. ಆದರೆ ಉತ್ತರ ಕರ್ನಾಟಕದ ಜನರ ತರ್ಕ ಮಾನ್ಯತೆಗಾಗಿ, ರಾಜ್ಯದ ಹೆಸರು ನವೆಂಬರ್ ೧, ೧೯೭೩ ರಂದು “ಕರ್ನಾಟಕ” ಎಂದು ಬದಲಾಯಿತು.
- ಈ ಸಂದರ್ಭದಲ್ಲಿ ದೇವರಾಜ ಅರಸ್ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಕರ್ನಾಟಕ ಏಕೀಕರಣದ ಮನ್ನಣೆ ಇತರ ವ್ಯಕ್ತಿಗಳಿಗೂ ಸೇರುತ್ತದೆ. ಅವರೆಂದರೆ ಅನಕೃ, ಕೆ. ಶಿವರಾಮ ಕಾರಂತ, ಕುವೆಂಪು, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಎ.ಎನ್.ಕೃಷ್ಣರಾವ್ ಮತ್ತು ಬಿ.ಎಂ.ಶ್ರೀಕಂಠಯ್ಯ.
- ರಾಜ್ಯೋತ್ಸವದ ಪ್ರಯುಕ್ತ ಕರ್ನಾಟಕ ಸರ್ಕಾರದ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವಿಶ್ವದಾದ್ಯಂತ ಹಮ್ಮಿಕೊಳ್ಳಲಾಗುತ್ತದೆ. ರಾಜ್ಯದ ಮುಖ್ಯಮಂತ್ರಿ ಸಾಧಕರಿಗೆ ಈ ಪ್ರಶಸ್ತಿಯನ್ನು ವಿತರಿಸುತ್ತಾರೆ.
- ಭಾರತ ಇನ್ನಿತರ ಪ್ರದೇಶಗಳಾದ ಮುಂಬಯಿ, ದೆಹಲಿ ಮುಂತಾದ ಕಡೆಯು ಕರ್ನಾಟಕ ರಾಜ್ಯೋತ್ಸವ ಆಚರಿಸಲಾಗುತ್ತದೆ. ಇದಲ್ಲದೆ ಗುರಗಾಂವ್ ಮತ್ತು ಚೆನೈ, ಸಾಗರೋತ್ತರದಲ್ಲಿ ಕನ್ನಡ ಸಂಸ್ಥೆ, ಅಮೇರಿಕಾ, ಸಿಂಗಾಪುರ್, ದುಬೈ , ಮಸ್ಕಟ್, ದಕ್ಷಿಣ ಕೊರಿಯಾ , ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ಮೊದಲಾದ ಕಡೆಗಳಲ್ಲಿ ನೆಲೆಸಿರುವ ಕನ್ನಡಿಗರು ಕರ್ನಾಟಕ ರಾಜ್ಯೋತ್ಸವ ಆಚರಿಸುತ್ತಾರೆ.
ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ತಮ್ಮ ಭವಿಷ್ಯದ ಕುರಿತು ವಿಶೇಷ ಕಾಳಜಿಯಿಂದ ಕೌಶಲ್ಯ ಹೆಚ್ಚಿಸಿಕೊಳ್ಳಲು ಬಯಸುವ ವಿದ್ಯಾರ್ಥಿಗಳು ಕ್ಯಾಡ್‌ನೆಸ್ಟ್‌ನ ಬೆಂಗಳೂರಿನ ಶಾಖೆಗಳನ್ನು ಸಂಪರ್ಕಿಸಬಹುದು.
ನಿಮ್ಮ ಭವಿಷ್ಯ ಬದಲಿಸುವ ಕೋರ್ಸ್‌ಗಳ ಕುರಿತು ಈಗಲೇ ಈ ಮುಂದೆ ನೀಡಿರುವ ವಿಳಾಸಗಳಿಗೆ ಭೇಟಿ ನೀಡಿ ಅಥವಾ ಫೋನ್ ಮಾಡಿ ವಿಚಾರಿಸಿ.
CADDNEST RAJAJINAGAR
MAIN BRANCH: CADD NEST, Doctor Rajkumar Road, opp. Navarang theatre, Mariyappanapalya, Rajajinagar, Bengaluru, Karnataka -560010
Phone : 9740444363
Email : info@caddnest.org
CADDNEST BASAVANAGUDI
# 16, 1st Floor, Siddaiah Complex, Mount Joy Road near Basavanagudi,, Basavanagudi, Bull Temple Road, Bengaluru, Karnataka 560019
Phone : 099721 77744
Email : info@caddnest.org
CADD NEST SESHADRIPURAM
No 187, 2nd Floor, SC Road, ABC Arcade, near Nataraja Theater, Seshadripuram, Bengaluru, Karnataka 560020
Phone : +91 9535666300
Email : info@caddnest.org
CADD NEST MALLESWARAM
# 64,1st Floor, Above Syndicate Bank, 18th Cross,Margosa Road, Malleshwaram, Bengaluru Karnataka 560055.
Email : info@caddnest.org
CADD NEST RAJARAJESHWARINAGAR
# 1135, 1st Floor, Nehru Road, 3rd stage BEML Layout, Rajarajeshwarinagar, Bengaluru, Karnataka 560098
Phone : 096069 68139
Email : info@caddnest.org
CADD NEST RT NAGAR
No. 92A, Vasanthappa Block, CBI Main Road, RT Nagar, Bangalore -560032.
Phone : 9606666470/ 9972544344
Email : info@caddnest.org