ಇತ್ತೀಚಿನ ದಿನಗಳಲ್ಲಿ ಬಹುಬೇಡಿಕೆ ಪಡೆದುಕೊಂಡಿರುವ ಟೆಕ್ನಿಕಲ್ ಸ್ಕಿಲ್‍ಗಳ ವಿವರ ಇಲ್ಲಿದೆ.
ನೀವು ಉದ್ಯೋಗ ಜಗತ್ತಿಗೆ ಹೊಸದಾಗಿ ಕಾಲಿಟ್ಟವರು ಆಗಿರಬಹುದು ಅಥವಾ ಈಗಾಗಲೇ ಅನುಭವಿ ಉದ್ಯೋಗಿ ಎಂದು ಹಣೆಪಟ್ಟಿ ಕಟ್ಟಿಕೊಂಡಿರಬಹುದು. ಆದರೆ, ಇತ್ತೀಚಿನ ಕೌಶಲಗಳನ್ನು ಕಲಿಯದೆ ಇದ್ದರೆ ನಿಮ್ಮ ರೆಸ್ಯೂಂಗೆ ತೂಕ ಇರದು. ತಂತ್ರಜ್ಞಾನ ಜಗತ್ತಿನಲ್ಲಿ ವಿವಿಧ ಕೌಶಲಗಳು ಬೇಡಿಕೆ ಹೆಚ್ಚಿಸಿಕೊಂಡಿವೆ. ಮುಂದಿನ ದಿನಗಳಲ್ಲಿ ಇವು ಇನ್ನಷ್ಟು ಬೇಡಿಕೆ ಕಾಣುವ ನಿರೀಕ್ಷೆ ಇದೆ. ಅಂತಹ ಕೌಶಲಗಳ ವಿವರ ಇಲ್ಲಿದೆ.
ಪ್ರೋಗ್ರಾಮಿಂಗ್
ಪ್ರೋಗ್ರಾಮಿಂಗ್ ಭಾಷೆಗಳನ್ನು ಬಳಸಿಕೊಂಡು ಸಾಫ್ಟ್‍ವೇರ್ ಮತ್ತು ಅಪ್ಲಿಕೇಷನ್‍ಗಳನ್ನು ನಿರ್ಮಿಸುವುದು ಪ್ರೋಗ್ರಾಮಿಂಗ್‌ನಲ್ಲಿ ಒಳಗೊಂಡಿದೆ. ಕೋಡ್ ಮತ್ತು ಕ್ರಮಾವಳಿ ರಚನೆ ಸಮರ್ಪಕವಾಗಿದೆಯೇ ಎಂದು ಪರಿಶೀಲಿಸುವುದೂ ಇದರಲ್ಲಿ ಒಳಗೊಂಡಿದೆ. ಫೈನಾನ್ಸ್, ಮ್ಯಾನುಫ್ಯಾಕ್ಚರಿಂಗ್, ಡಿಸೈನ್, ಹೆಲ್ತ್‍ಕೇರ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕಂಪ್ಯೂಟರ್ ಸಾಫ್ಟ್‍ವೇರ್‍ಗಳ ಬಳಕೆ ಹೆಚ್ಚುತ್ತಿದ್ದು ಪ್ರೋಗ್ರಾಮರ್ ಗಳಿಗೆ ಬೇಡಿಕೆ ಹೆಚ್ಚಿದೆ.
ವೇತನ: 0-5 ವರ್ಷ ಅನುಭವ ಇರುವ ಸಾಫ್ಟ್‍ವೇರ್ ಎಂಜಿನಿಯರ್‍ಗೆ ವಾರ್ಷಿಕ ವೇತನ 4.3ರಿಂದ 7.35 ಲಕ್ಷ ರೂ. ಆಸುಪಾಸಿನಲ್ಲಿ ವೇತನ ಇರುತ್ತದೆ.
ವೆಬ್ ಡೆವಲಪ್‍ಮೆಂಟ್
ಈಗ ಬಹುತೇಕ ವ್ಯವಹಾರಗಳು ಮತ್ತು ಸಂಸ್ಥೆಗಳು ತಮ್ಮ ವಹಿವಾಟು ಹೆಚ್ಚಿಸಲು ಆನ್‍ಲೈನ್ ಮೊರೆ ಹೋಗಿವೆ. ಹೀಗಾಗಿ, ವೆಬ್‍ಸೈಟ್ ಇತ್ಯಾದಿಗಳನ್ನು ನಿರ್ಮಿಸಲು ವೆಬ್ ಡೆವಲಪರ್‍ಗಳ ಮೊರೆ ಹೋಗುವುದು ಹೆಚ್ಚಾಗಿದೆ. ಪ್ರೋಗ್ರಾಮಿಂಗ್ ಹಿನ್ನೆಲೆ, ಡಬ್ಲ್ಯುಡಬ್ಲ್ಯುಡಬ್ಲ್ಯು ಜಗತ್ತಿನ ಪರಿಚಯ ಸೇರಿದಂತೆ ವಿವಿಧ ಕೌಶಲ ವೆಬ್ ಡೆವಲಪರ್‍ಗೆ ಬೇಕಾಗಿರುತ್ತದೆ. 0-5 ವರ್ಷ ಅನುಭವ ಇರುವ ವೆಬ್ ಡೆವಲಪರ್‍ಗೆ 2.7ರಿಂದ 6.87 ಲಕ್ಷ ರೂ. ಆಸುಪಾಸಿನಲ್ಲಿ ವಾರ್ಷಿಕ ವೇತನ ದೊರಕುತ್ತದೆ.
ಮೊಬೈಲ್ ಆ್ಯಪ್ ಡೆವಲಪ್‍ಮೆಂಟ್
ಈಗ ಅಂಗೈನಲ್ಲಿಯೇ ಜಗತ್ತನ್ನು ಸಂಪರ್ಕಿಸಲು ಸಾಧ್ಯವಿದ್ದು, ಕೈಯಲ್ಲಿರುವ ಸ್ಮಾರ್ಟ್‍ಫೋನ್ ಕಂಪ್ಯೂಟರ್‍ನಂತೆಯೇ ಕಾರ್ಯನಿರ್ವಹಿಸುತ್ತದೆ. ಈಗ ಬಹುತೇಕರು ಮೊಬೈಲ್ ಮೂಲಕವೇ ಹೆಚ್ಚಿನ ವ್ಯವಹಾರ ನಡೆಸುತ್ತಾರೆ. ಸಂಬಂಧಪಟ್ಟ ಸಾಫ್ಟ್‍ವೇರ್ ಪ್ರೋಗ್ರಾಮಿಂಗ್, ಹಾರ್ಡ್‍ವೇರ್ ಸ್ಪೆಷಿಫಿಕೇಷನ್ಸ್ ಮತ್ತು ಯೂಸರ್ ಇಂಟರ್‍ಫೇಸ್ ವಿನ್ಯಾಸದ ಜ್ಞಾನ ಇರುವವರು ಮತ್ತು ಸಂಬಂಧಪಟ್ಟ ಕೌಶಲಗಳನ್ನು ಹೊಂದಿರುವವರು ಮೊಬೈಲ್ ಆ್ಯಪ್ ಡೆವಲಪರ್‍ಗಳಾಗಬಹುದು. 0-3 ವರ್ಷ ಅನುಭವ ಇರುವವರಿಗೆ ವಾರ್ಷಿಕ ವೇತನ 3.5 ಲಕ್ಷ ರೂ.ನಿಂದ 6.10 ಲಕ್ಷ ರೂ. ಆಸುಪಾಸಿನಲ್ಲಿ ಇರುತ್ತದೆ.
ಗ್ರಾಫಿಕ್ ಡಿಸೈನ್
ಸಾಮಾನ್ಯ ಪೋಸ್ಟರ್ ಗಳು , ಪ್ರಿಂಟ್ ಜಾಹೀರಾತುಗಳನ್ನು ವಿನ್ಯಾಸ ಮಾಡುವುದು ಮಾತ್ರವಲ್ಲದೆ ಮೊಬೈಲ್ ಆ್ಯಪ್‍ಗಳಿಗೆ ಯುಐ/ಯುಎಕ್ಸ್ ಡಿಸೈನ್, ಡಿಜಿಟಲ್ ಮಾಧ್ಯಮಕ್ಕೆ ಇನೋಗ್ರಾಫಿಕ್ಸ್ ರಚಿಸುವುದು ಸೇರಿದಂತೆ ವಿವಿಧೆಡೆ ಗ್ರಾಫಿಕ್ಸ್ ಡಿಸೈನರ್‍ಗಳಿಗೆ ಬೇಡಿಕೆಯಿದೆ. 0-5 ವರ್ಷ ಕೆಲಸದ ಅನು`Àವ ಇರುವವರಿಗೆ ವಾರ್ಷಿಕ ವೇತನ 3.2ರಿಂದ 6 ಲಕ್ಷ ರೂ. ಆಸುಪಾಸಿನಲ್ಲಿ ವೇತನ ಇರುತ್ತದೆ.
ವೆಬ್ ಕಂಟೆಂಟ್ ಮ್ಯಾನೇಜ್‍ಮೆಂಟ್
ಆನ್‍ಲೈನ್ ಕಂಟೆಂಟ್ ರಚಿಸುವುದು, ಪ್ರಕಟಿಸುವುದು ಸೇರಿದಂತೆ ಇದಕ್ಕೆ ಸಂಬಂಧಪಟ್ಟ ಸಮಸ್ತ ನಿರ್ವಹಣಾ ಕೆಲಸವನ್ನು ವೆಬ್ ಕಂಟೆಂಟ್ ಮ್ಯಾನೇಜ್‍ಮೆಂಟ್ ಎನ್ನಬಹುದು. ವರ್ಡ್‍ಪ್ರೆಸ್, ಡ್ರುಪಲ್ ಇತ್ಯಾದಿ ಕಂಟೆಂಟ್ ಮ್ಯಾನೇಜ್‍ಮೆಂಟ್ ಸಿಸ್ಟಮ್‍ಗಳಲ್ಲಿ ಕಂಟೆಂಟರ್ ರಚಿಸುವವರು, ಎಡಿಟರ್ ಇತ್ಯಾದಿ ಹುದ್ದೆಗಳಿಗೆ ಈಗ ಬೇಡಿಕೆ ಹೆಚ್ಚಾಗುತ್ತಿದೆ. ಎಲ್ಲಾ ವ್ಯವಹಾರಗಳು ಆನ್‍ಲೈನ್ ಅಸ್ತಿತ್ವ ಹೆಚ್ಚಿಸಲು ಪ್ರಯತ್ನಿಸುತ್ತಿರುವುದರಿಂದ ವೆಬ್ ಕಂಟೆಂಟ್ ಪರಿಣತರಿಗೆ ಬೇಡಿಕೆ ಹೆಚ್ಚಾಗುತ್ತಿದೆ.
ಎಸ್‍ಇಒ ಮತ್ತು ಎಸ್‍ಇಎಂ
ಈಗ ಆನ್‍ಲೈನ್ ವ್ಯವಹಾರಗಳೆಲ್ಲ ಗೂಗಲ್ ಸರ್ಚ್ ಎಂಜಿನ್ ಅನ್ನು ಅವಲಂಬಿಸಿವೆ. ಸರ್ಚ್ ಎಂಜಿನ್ ಆಪ್ಟಿಮೈಜೇಷನ್ (ಎಸ್‍ಇಒ) ಮತ್ತು ಸರ್ಚ್ ಎಂಜಿನ್ ಮಾರ್ಕೆಟಿಂಗ್ (ಎಸ್‍ಇಎಂ) ಕೌಶಲ ಇರುವವರಿಗೆ ಈಗ ಬೇಡಿಕೆ ಗಮನಾರ್ಹವಾಗಿ ಹೆಚ್ಚಾಗಿದೆ. ಇದಕ್ಕೆ ಸಂಬಂ`Àಪಟ್ಟ ಕೌಶಲಗಳನ್ನು ನೀವು ಕಾಲೇಜಿನಲ್ಲಿ ಅಥವಾ ಆನ್‍ಲೈನ್‍ನಲ್ಲಿ ಕಲಿಯಬಹುದಾಗಿದೆ. ಸುಮಾರು 3-7 ವರ್ಷ ಅನುಭವ ಇರುವವರಿಗೆ ವಾರ್ಷಿಕ ವೇತನ 3-7 ಲಕ್ಷ ರೂ. ಆಸುಪಾಸಿನಲ್ಲಿ ವೇತನ ಇರುತ್ತದೆ.
ಇನ್ನುಳಿದಂತೆ ಪ್ರಾಜೆಕ್ಟ್ ಮ್ಯಾನೇಜ್‍ಮೆಂಟ್, ಬಿಗ್‍ಡೇಟಾ ಅನಾಲಿಟಿಕ್ಸ್, ಸೈಬರ್ ಸೆಕ್ಯುರಿಟಿ, ಕ್ಲೌಡ್ ಕಂಪ್ಯೂಟಿಂಗ್, ಆರ್ಟಿಫಿಶಿಯಲ್ ಇಂಟಲಿಜೆನ್ಸ್, ಆಗ್ಯುಮೆಂಟೆಡ್ ರಿಯಾಲ್ಟಿ ಇತ್ಯಾದಿಗಳು ಬಹುಬೇಡಿಕೆಯಲ್ಲಿರುವ ಟೆಕ್ ಕೌಶಲಗಳಾಗಿವೆ.
ಭವಿಷ್ಯದ ಬಹುಬೇಡಿಕೆಯ ಸ್ಕಿಲ್‌ಗಳನ್ನು ಕಲಿಯಲು ಈಗಲೇ ಕರ್ನಾಟಕದ ನಂಬರ್‌ಒನ್ ಕೌಶಲ್ಯ ತರಬೇತಿ ಸಂಸ್ಥೆ ಕ್ಯಾಡ್‌ನೆಸ್ಟ್ ಅನ್ನು ಸಂಪರ್ಕಿಸಿ.
ಹೆಚ್ಚಿನ ಮಾಹಿತಿಗೆ ಭೇಟಿ ನೀಡಬೇಕಾದ ವೆಬ್‌ಸೈಟ್ ವಿಳಾಸ: https://caddnest.org/
ನಿಮ್ಮ ಭವಿಷ್ಯ ಬದಲಿಸುವ ಕೋರ್ಸ್‌ಗಳ ಕುರಿತು ಈಗಲೇ ಈ ಮುಂದೆ ನೀಡಿರುವ ವಿಳಾಸಗಳಿಗೆ ಭೇಟಿ ನೀಡಿ ಅಥವಾ ಫೋನ್ ಮಾಡಿ ವಿಚಾರಿಸಿ.
CADDNEST RAJAJINAGAR
MAIN BRANCH: CADD NEST, Doctor Rajkumar Road, opp. Navarang theatre, Mariyappanapalya, Rajajinagar, Bengaluru, Karnataka -560010
Phone : 9740444363
Email : [email protected]
CADDNEST BASAVANAGUDI
# 16, 1st Floor, Siddaiah Complex, Mount Joy Road near Basavanagudi,, Basavanagudi, Bull Temple Road, Bengaluru, Karnataka 560019
Phone : 099721 77744
Email : [email protected]
CADD NEST SESHADRIPURAM
No 187, 2nd Floor, SC Road, ABC Arcade, near Nataraja Theater, Seshadripuram, Bengaluru, Karnataka 560020
Phone : +91 9535666300
Email : [email protected]
CADD NEST MALLESWARAM
# 64,1st Floor, Above Syndicate Bank, 18th Cross,Margosa Road, Malleshwaram, Bengaluru Karnataka 560055.
Email : [email protected]
CADD NEST RAJARAJESHWARINAGAR
# 1135, 1st Floor, Nehru Road, 3rd stage BEML Layout, Rajarajeshwarinagar, Bengaluru, Karnataka 560098
Phone : 096069 68139
Email : [email protected]
CADD NEST RT NAGAR
No. 92A, Vasanthappa Block, CBI Main Road, RT Nagar, Bangalore -560032.
Phone : 9606666470/ 9972544344
Email : [email protected]