Kannada CADD Nest Private Limited

CADDNEST ಬಸವನಗುಡಿಗೆ ಈಗ ಹತ್ತರ ಹರೆಯ, ನಿಮಗೆ ಧನ್ಯವಾದ

CADDNEST ಬಸವನಗುಡಿಗೆ ಈಗ ಹತ್ತರ ಹರೆಯ, ನಿಮಗೆ ಧನ್ಯವಾದ

ಬೆಂಗಳೂರು ದಕ್ಷಿಣ ಭಾಗದಲ್ಲಿರುವ ಬಸವನಗುಡಿಯು ಶಾಪಿಂಗ್‌ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಹೆಸರುವಾಸಿ. ದೊಡ್ಡ ಬಸವನ ದೇಗುಲವು ಇಲ್ಲಿನ ಅತ್ಯಂತ ಹಳೆಯ ದೇಗುಲ. ಇಲ್ಲಿನ ಕಡಲೆಕಾಯಿ ಪರಿಷೆಗೆ ತನ್ನದೇ ಆದ ಇತಿಹಾಸವಿದೆ. ಪರಂಪರೆ, ಸಂಸ್ಕೃತಿ ಮತ್ತು ತನ್ನದೇ ಆದ ಸೊಬಗು ಹೊಂದಿರುವ ಬಸವನಗುಡಿಯಲ್ಲಿ ನಿಮ್ಮ ಪ್ರೀತಿಯ ಕ್ಯಾಡ್‌ನೆಸ್ಟ್‌‌ ಶಿಕ್ಷಣ ಸಂಸ್ಥೆ ಆರಂಭವಾಗಿ ಈ ಡಿಸೆಂಬರ್‌ ೨ಕ್ಕೆ ಭರ್ತಿ ಒಂಬತ್ತು ವರ್ಷಗಳಾಗಿವೆ. ಪುಟ್ಟ ಪುಟ್ಟ ಹೆಜ್ಜೆಯಿಟ್ಟು ಆರಂಭವಾದ ಈ ಸಂಸ್ಥೆಯೀಗ ಬೆಂಗಳೂರಿನ ಪ್ರಮುಖ ಕೌಶಲ್ಯ ತರಬೇತಿ ಸಂಸ್ಥೆಯೂ ಹೌದು. ನಮ್ಮ ಈ ಯಶಸ್ಸಿಗೆ ಸಹಕರಿಸಿದ ವಿದ್ಯಾರ್ಥಿಮಿತ್ರರಿಗೆ, ಬೋಧಕ ವೃಂದಕ್ಕೆ ಮೊದಲಿಗೆ ಅನಂತ ಧನ್ಯವಾದಗಳು.

ಯಶಸ್ಸಿನ ಹಿಂದಿನ ಪ್ರೇರಣೆ

ಸುಮಾರು ಒಂಬತ್ತು ವರ್ಷಗಳ ಹಿಂದೆ ಬೆಂಗಳೂರು ಹೀಗಿರಲಿಲ್ಲ. ಆಗಿನ ಸವಾಲುಗಳು, ಸಾಧ್ಯತೆಗಳು ಬೇರೆಯಿದ್ದವು. ಐಟಿ ಜಗತ್ತಿನ ಪ್ರಮುಖ ಆಕರ್ಷಣೆಯಾಗಿ ಬೆಳೆಯುತ್ತಿದ್ದ ಬೆಂಗಳೂರಿನಲ್ಲಿ ಸೂಕ್ತ ಐಟಿ ಕೌಶಲ್ಯಗಳನ್ನು ಹೊಂದಿರುವ ಕನ್ನಡಿಗರ ಸಂಖ್ಯೆ ಕಡಿಮೆಯಿತ್ತು ಮುಖ್ಯವಾಗಿ ಬಹುಬೇಡಿಕೆಯ ಸ್ಕಿಲ್‌ಗಳ ಅರಿವು ಸಾಮಾನ್ಯ ವಿದ್ಯಾರ್ಥಿಗಳಿಗೆ ಇರಲಿಲ್ಲ.

ಅತ್ಯಂತ ಕಡಿಮೆ ಶುಲ್ಕದಲ್ಲಿ ಅತ್ಯುತ್ತಮ ಕೌಶಲ್ಯಗಳನ್ನು ಕಲಿಸಿಕೊಡುವ ಉದ್ದೇಶದಿಂದ 9 ವರ್ಷಗಳ ಹಿಂದೆ ಬಸವನಗುಡಿಯೆಂಬ ಸುಂದರ ಪರಿಸರದಲ್ಲಿ ಕ್ಯಾಡ್‌ನೆಸ್ಟ್‌‌ ಕೌಶಲ್ಯ ತರಬೇತಿ ಸಂಸ್ಥೆಯನ್ನು ಆರಂಭಿಸಲಾಯಿತು. ವಿದ್ಯಾರ್ಥಿಗಳಿಗೆ ಕಂಪ್ಯೂಟರ್‌ ತರಬೇತಿ, ವಿವಿಧ ಐಟಿ ಮತ್ತು ಐಟಿಯೇತರ ಉದ್ಯೋಗ ಕೌಶಲ್ಯಗಳನ್ನು ಕಲಿಸಲು ಪುಟ್ಟದಾಗಿ ಕ್ಯಾಡ್‌ನೆಸ್ಟ್‌‌ ಬಸವನಗುಡಿ ಕೌಶಲ್ಯ ತರಬೇತಿ ಸಂಸ್ಥೆಯನ್ನು ಆರಂಭಿಸಲಾಯಿತು.

ಶೂನ್ಯದಿಂದ ಆರಂಭವಾದ ಕ್ಯಾಡ್‌ನೆಸ್ಟ್‌‌ ಬಸವನಗುಡಿಯು ಬಳಿಕ ಕ್ಯಾಡ್‌ನೆಸ್ಟ್‌‌ ರಾಜಾಜಿನಗರ, ಕ್ಯಾಡ್‌ನೆಸ್ಟ್‌ ಮಲ್ಲೇಶ್ವರಂ, ಕ್ಯಾಡ್‌ನೆಸ್ಟ್‌‌ ಶೇಷಾದ್ರಿಪುರಂ ಇತ್ಯಾದಿ ಶಾಖೆಗಳನ್ನು ತನ್ನೊಂದಿಗೆ ಸೇರಿಸಿಕೊಂಡಿತ್ತು. ಈ ನಾಲ್ಕು ಶಾಖೆಗಳ ವಿದ್ಯಾರ್ಥಿಗಳಿಗೆ ಕಲಿಯಲು ಈಗ ಸುಸಜ್ಜಿತ ತರಗತಿ ಕೊಠಡಿಗಳು, ಕಂಪ್ಯೂಟರ್‌ಗಳು, ಲೈಸನ್ಸ್‌ ಹೊಂದಿರುವ ಸಾಫ್ಟ್‌ವೇರ್‌ಗಳು, ಹಲವು ವರ್ಷಗಳ ಪರಿಣತಿ ಹೊಂದಿರುವ ಬೋಧಕವರ್ಗವನ್ನು ಹೊಂದಿದೆ. ಪ್ರತಿತಿಂಗಳೂ ನೂರಾರು ವಿದ್ಯಾರ್ಥಿಗಳು ಇಲ್ಲಿ ಕೌಶಲ್ಯ ತರಬೇತಿ ಪಡೆದು ತಮ್ಮ ಕರಿಯರ್‌ ರೂಪಿಸಿಕೊಳ್ಳುತ್ತಿದ್ದಾರೆ. ಈ ಅಭೂತಪೂರ್ವ ಯಶಸ್ಸಿಗೆ ಕಲಿಯುವ ಆಸಕ್ತಿಯ ವಿದ್ಯಾರ್ಥಿಗಳು ಮತ್ತು ಕಲಿಸುವ ಮನೋಭಾವದ ಬೋಧಕವರ್ಗವೇ ಕಾರಣ ಮತ್ತು ಪ್ರೇರಣೆ.

ಪಬ್ಲಿಕ್‌ ಪರೀಕ್ಷೆಯ ಕಾಲವಿದು!

ಜಗತ್ತಿನ ಶಿಕ್ಷಣ ಕ್ಷೇತ್ರ ಮಾತ್ರವಲ್ಲದೆ ಎಲ್ಲಾ ಕ್ಷೇತ್ರಗಳು ಈ ವರ್ಷ ಕೋವಿಡ್‌-೧೯ ಸಾಂಕ್ರಾಮಿಕದಿಂದಾಗಿ ಸಾಕಷ್ಟು ತೊಂದರೆ ಅನುಭವಿಸಿದ್ದವು. ಒಂಬತ್ತರ ಹರೆಯದಲ್ಲಿದ್ದ ಕ್ಯಾಡ್‌ನೆಸ್ಟ್‌‌ ಬಸವನಗುಡಿಗೂ ಇದರ ಬಿಸಿ ತಟ್ಟಿದೆ. ಆದರೆ, ಸವಾಲುಗಳ ಸಮಯದಲ್ಲಿ ಅಂಜಬಾರದು ಎಂದು ವಿದ್ಯಾರ್ಥಿಗಳಿಗೆ ಕಲಿಸಿಕೊಡುವ ನಾವು ಕೂಡ ಈ ಸಮಯದಲ್ಲಿ ಹೆದರದೆ ದೃಢವಾಗಿ ನಿಲ್ಲಲು ಸಕಲ ಪ್ರಯತ್ನಪಟ್ಟೆವು.

ಮುಖ್ಯವಾಗಿ ವಿದ್ಯಾರ್ಥಿಗಳಿಗೆ ಉಪಯೋಗವಾಗುವಂತಹ ಹಲವು ಉಪಕ್ರಮಗಳನ್ನು ಕೈಗೊಂಡೆವು. ವಿದ್ಯಾರ್ಥಿಗಳಿಗೆ ಅತ್ಯಂತ ಕಡಿಮೆ ದರದಲ್ಲಿ ಮತ್ತು ಭರ್ಜರಿ ಡಿಸ್ಕೌಂಟ್‌ನಲ್ಲಿ ವಿವಿಧ ಕೋರ್ಸ್‌ಗಳನ್ನು ನೀಡಿದೆವು. ಕನ್ನಡ ಕ್ಯಾಡ್‌ನೆಸ್ಟ್‌‌ ಬ್ಲಾಗ್‌ ಮೂಲಕ ವಿವಿಧ ಕರಿಯರ್‌ ಮಾರ್ಗದರ್ಶಿ ಲೇಖನಗಳನ್ನು ಬರೆದು ವಿದ್ಯಾರ್ಥಿಗಳಿಗೆ ಕೌಶಲ್ಯ ಮಾಹಿತಿ ನೀಡಿದೆವು. ವಿವಿಧ ಸೆಮಿನಾರ್‌ಗಳನ್ನು ಆಯೋಜಿಸಿ ವಿದ್ಯಾರ್ಥಿಗಳ ಜ್ಞಾನ ಹೆಚ್ಚಿಸಲು ಪ್ರಯತ್ನಿಸಿದೆವು. ಸಾಮಾಜಿಕ ಅಂತರದ ಕಾಲದಲ್ಲಿ ವಿವಿಧ ವೆಬಿನಾರ್‌ಗಳನ್ನು ನಡೆಸಿದೆವು. ಆನ್ಲೈನ್‌ ಕ್ಲಾಸ್‌ ನಡೆಸಿದೆವು. ಹತ್ತನೇ ವರ್ಷಕ್ಕೆ ಕಾಲಿಡುವ ಮೊದಲು ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಠವಿಡಿದು ಸಿದ್ಧತೆ ನಡೆಸುವ ವಿದ್ಯಾರ್ಥಿಗಳಂತೆ ನಾವೂ ಸವಾಲಿಗೆ ಎದೆಯೊಡ್ಡಿ ಮುನ್ನುಗಿದೆವು. ನಮ್ಮ ಈ ಪ್ರಯತ್ನಗಳಿಂದ ಹತ್ತನೇ ವರ್ಷಕ್ಕೆ ಕಾಲಿಟ್ಟ ಈ ಸಂದರ್ಭದಲ್ಲಿ ನಮ್ಮಲ್ಲಿ ಹುಮ್ಮಸ್ಸು, ಉತ್ಸಾಹ, ಕಲಿಸುವ ಬದ್ಧತೆ ಹಲವು ಪಟ್ಟು ಹೆಚ್ಚಾಗಿದೆ.

ಬಸವನಗುಡಿಗೆ ಸುಸ್ವಾಗತ.

ನೆಟ್ಟಕಲ್ಲಪ್ಪ, ಡಿವಿ ಗುಂಡಪ್ಪ, ಮಾಸ್ತಿ ವೆಂಕಟೇಶ ಅಯ್ಯಂಗಾರ್‌, ಟಿ.ಆರ್‌. ಶಾಮಣ್ಣ ಮುಂತಾದ ಮಹನೀಯರು ನೆಲೆಸಿದ್ದ ಬಸವನಗುಡಿಗೆ ನಿಮಗೆ ಸ್ವಾಗತ. ದೊಡ್ಡ ಬಸವಣ್ಣ ದೇಗಲ, ಗಣಪತಿ ದೇವಸ್ಥಾನ, ಬ್ಯೂಗಲ್‌ ರಾಕ್‌ ,ಗಾಂಧಿಬಜಾರ್‌, ವಿದ್ಯಾರ್ಥಿ ಭವನ, ಡಿ.ವಿ.ಜಿ ರಸ್ತೆ, ಕೃಷ್ಣ ರಾವ್‌ ಪಾರ್ಕ್‌, ಡಿವಿಜಿ ರಸ್ತೆ, ರಾಮಕೃಷ್ಣ ಆಶ್ರಮ, ಲಾಲ್‌ಬಾಗ್‌, ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ವಲ್ಡ್‌ ಕಲ್ಚರ್‌ ಇತ್ಯಾದಿ ಆಕರ್ಷಣೆಗಳಿರುವ ಈ ಸುಂದರ ಸ್ಥಳದಲ್ಲಿ ನೀವು ಕ್ಯಾಡ್‌ನೆಸ್ಟ್‌‌ ಮೂಲಕ ಶಿಕ್ಷಣ ಪಡೆಯಿರಿ. ಈಗ ವಿವಿಧ ಡಿಸ್ಕೌಂಟ್‌ಗಳು ನಡೆಯುತ್ತಿದ್ದು, ಸಮಯ ವ್ಯರ್ಥ ಮಾಡದೆ ಹೊಸ ಕೌಶಲ್ಯ ಕಲಿಯಲು ಆರಂಭಿಸಿ. ನಮ್ಮ ಯಶಸ್ಸಿಗೆ ಸಹಕರಿಸಿದ ನಿಮಗೆಲ್ಲರಿಗೂ ಮತ್ತೊಮ್ಮೆ ಧನ್ಯವಾದ. ಮುಂದಿನ ದಿನಗಳಲ್ಲಿಯೂ ಇದೇ ರೀತಿಯ ಸಹಕಾರ ಬಯಸುತ್ತೇವೆ.

ನಮ್ಮಲ್ಲಿ ಲಭ್ಯವಿರುವ ಕೋರ್ಸ್‌ಗಳ ಮಾಹಿತಿಯನ್ನು ಪಡೆಯಲು ಈ ಪುಟಕ್ಕೆ ಭೇಟಿ ನೀಡಿ


ಕ್ಯಾಡ್‌ನೆಸ್ಟ್‌‌ ಬಸವನಗುಡಿ ಮತ್ತು ಇತರೆ ಶಾಖೆಗಳ ವಿಳಾಸ ಪಡೆಯಲು ಈ ಲಿಂಕ್‌ಗೆ ಭೇಟಿ ನೀಡಿ

ನಮ್ಮನ್ನು ಸಂಪರ್ಕಿಸಲು ಈ ವೆಬ್‌ಸೈಟ್‌ನಲ್ಲಿರುವ ವಾಟ್ಸಪ್‌ ಬಟನ್‌ ಕ್ಲಿಕ್‌ ಮಾಡಿ

Programming Courses Training | CADD Nest Private Limited Computer Training Centre | CADD Nest Private Limited Computer Training Institute | Python Training | Java Training | C,C++ Training | Advance Excel Training
The Best Digital Marketing Training Institute In bangalore | Basic to Advance programming courses | Learn Basic to advance tally prime |CADD Nest Private Limited | CAD Training | CADD Nest Private Limited CADD
CIVIL CADD |ARCHITECTURAL CADD |ELECTRICAL CADD | ANIMATION Courses

Learn Basic to advanced tally Erp 9 +GST | tally Prime | online classes | 100% Placements Assistance | Learn Tally Erp9 at CADD Nest Private Limited Rajajinagar , CADD Nest Private Limited Basavanagudi, CADD Nest Private Limited Sheshadripuram, CADD Nest Private Limited Malleshwaram.



Related Posts

error: Content is protected !!
Scroll to Top