Kannada CADD Nest Private Limited

ಸಕ್ಸಸ್ ಟಿಪ್ಸ್: ತ್ರಿವಿಕ್ರಮ ಸಾಧನೆ ಮಾಡುವುದು ಹೇಗೆ?

ಸಕ್ಸಸ್ ಟಿಪ್ಸ್: ತ್ರಿವಿಕ್ರಮ ಸಾಧನೆ ಮಾಡುವುದು ಹೇಗೆ?

ಮೊದಲಿಗೆ ಕನ್ನಡ ಕ್ಯಾಡ್‌ನೆಸ್ಟ್‌ ಓದುಗರಿಗೆ ದೀಪಾವಳಿ ಹಬ್ಬದ ಶುಭಾಶಯಗಳು. ಜೀವನದಲ್ಲಿ ತ್ರಿವಿಕ್ರಮ ಸಾಧನೆ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುವ ಸಲುವಾಗಿ ಇವತ್ತು ಅಮೂಲ್ಯ ಸಲಹೆಯೊಂದಿಗೆ ಬಂದಿದ್ದೇವೆ. ಮೊದಲಿಗೆ ತ್ರಿವಿಕ್ರಮ ಮತ್ತು ಬಲಿಯಂದ್ರನ ಕತೆಯನ್ನು ಸಂಕ್ಷಿಪ್ತವಾಗಿ ನೆನಪಿಸಿಕೊಳ್ಳೋಣ.

ತ್ರಿವಿಕ್ರಮ ಮತ್ತು ಬಲಿಯಂದ್ರನ ಕತೆ

ಈ ದೀಪಾವಳಿ ಹಬ್ಬದ ಪೌರಾಣಿಕ ಹಿನ್ನೆಲೆ ತಿಳಿದಿರುವವರಿಗೆ ತ್ರಿವಿಕ್ರಮ, ವಾಮನ, ಬಲಿಯೇಂದ್ರ ಮುಂತಾದ ಹೆಸರುಗಳು ತಿಳಿದಿರಬಹುದು. ಪ್ರಹ್ಲಾದನ ಮಗನಾದ ವಿರೋಚನನ ಪುತ್ರ ಬಲಿಚಕ್ರವರ್ತಿ. ವಿಷ್ಣು ಭಕ್ತನಾಗಿದ್ದರೂ ಹಿಂಸಾಪ್ರವೃತ್ತಿ ಹೊಂದಿದ್ದನು. ಈತನ ರಾಜ್ಯವು ಸುಭಿಕ್ಷವಾಗಿತ್ತು. ಆದರೆ, ಎಷ್ಟು ಒಳ್ಳೆಯವನೋ ಅಷ್ಟು ಹಿಂಸಾ ಪ್ರವೃತ್ತಿಯವನಾಗಿದ್ದನು ಎಂದು ಪುರಾಣ ಕತೆಗಳು ಹೇಳುತ್ತವೆ. ಹಿಂಸಾ ಪ್ರವೃತ್ತಿ ಹೆಚ್ಚಾದಗ ಈತನ ಸಂಹಾರಕ್ಕೆ ವಿಷ್ಣು ಮುಂದಾದನು. ಇಂತಹ ಸಮಯದಲ್ಲಿ ಬಲಿಚಕ್ರವರ್ತಿಗೆ ಅಶ್ವಮೇಧಯಾಗ ಮಾಡಬೇಕೆಂಬ ಯೋಚನೆ ಬಂತು. ಯಾರು ಏನೇ ಕೇಳಲಿ, ಬಂದವರಿಗೆಲ್ಲರಿಗೂ ಕೇಳಿದ ವಸ್ತುಗಳನ್ನುದಾನವಾಗಿ ಕೊಡುವ ನಿರ್ಧಾರ ಮಾಡಿದನು.

ಈ ಕಾರ್ಯ ಮಾಡಬೇಡ ಎಂದು ಶುಕ್ರ ಎಂಬ ಋಷಿಯ ಸಲಹೆಯನ್ನೂ ಬಲಿ ಕೇಳಲಿಲ್ಲ. ಇದೇ ಸೂಕ್ತ ಸಮಯವೆಂದು ವಿಷ್ಣು ವಾಮನ ರೂಪದಲ್ಲಿ ಬಲಿಯಲ್ಲಿಗೆ ಬಂದನು. ತನಗೆ ದಾನ ನೀಡಬೇಕು ಎಂದು ಕೇಳಿಕೊಂಡನು.

`ನನಗೆ ಮೂರು ಹೆಜ್ಜೆ ಜಾಗ ಸಾಕು’ ಎಂದು ವಾಮನ ಕೇಳಿದಾಗ ಬಲಿಚಕ್ರವರ್ತಿ ಒಪ್ಪಿದನು. ವಾಮನ ತ್ರಿವಿಕ್ರಮನಾದನು. ಅಂದರೆ, ಅಗಲವಾದ ಪಾದಗಳನ್ನು ಹೊಂದಿರುವ ವ್ಯಕ್ತಿಯಾದನು. ತ್ರಿವಿಕ್ರಮನು ಒಂದು ಹೆಜ್ಜೆ ಭೂಮಿಯನ್ನುಘಿಆವರಿಸಿತು. ಎರಡನೇ ಹೆಜ್ಜೆ ಆಕಾಶದ ಮೇಲೆ ಇಟ್ಟನು. ಮೂರನೇ ಹೆಜ್ಜೆ ಎಲ್ಲಿಡಲಿ ಎಂದಾಗ ತನ್ನ ತಲೆ ಮೇಲೆ ಇಡುವಂತೆ ಕೇಳಿಕೊಂಡನು. ಆತನ ತಲೆಯ ಮೇಲೆ ಕಾಲಿಟ್ಟ ತ್ರಿವಿಕ್ರಮ ಬಲಿಚಕ್ರವರ್ತಿಯನ್ನು ಪಾತಾಳಕ್ಕೆ ತಳ್ಳಿದನು.

ಇದನ್ನೂ ಓದಿ: ದೀಪಾವಳಿಯ ಭರ್ಜರಿ ಕೊಡುಗೆ- ಕ್ಯಾಡ್‌ನೆಸ್ಟ್‌‌ನ ಎಲ್ಲಾ ಕೋರ್ಸ್‌ಗಳಿಗೆ 50% ಡಿಸ್ಕೌಂಟ್

ತ್ರಿವಿಕ್ರಮ ಸಾಧನೆ ಮಾಡಿದ ಮಹನೀಯರು

ನಾರಾಯಣ ಮೂರ್ತಿ: ಕೇವಲ 10 ಸಾವಿರ ರೂಪಾಯಿಂದ ಆರಂಭವಾದ ಇನ್ಫೋಸಿಸ್ ಸಂಸ್ಥೆ ಈಗ 3 ಲಕ್ಷ 24 ಸಾವಿರ ಕೋಟಿ ರೂ. ವಹಿವಾಟು ನಡೆಸುತ್ತಿದೆ. 42 ದೇಶಗಳಲ್ಲಿ 162 ಶಾಖೆಗಳನ್ನು ಹೊಂದಿದೆ. ಅತಿಚಿಕ್ಕದಾಗಿ ಆರಂಭವಾದ ಸಂಸ್ಥೆ ಇಷ್ಟು ಬೆಳೆಯಲು ನಾರಾಯಣ ಮೂರ್ತಿ ಕಾರಣ. ವಾಮನನಂತೆ ಇದ್ದ ಮೂರ್ತಿಯವರು ತ್ರಿವಿಕ್ರಮ ಬೆಳೆದ ಆಸಕ್ತಿದಾಯಕ ಇಂಟರ್‍ನೆಟ್‍ನಲ್ಲಿ ಲಭ್ಯವಿದ್ದು, ವಿವರವಾಗಿ ಓದಿಕೊಳ್ಳಿ.

ಜಾಕ್ ಮಾ: ನೋಡಲು ವಾಮನನಂತೆ ಕಂಡರೂ ಜಗತ್ತಿನ ಪ್ರಮುಖ ಇ-ಕಾಮರ್ಸ್ ಕಂಪನಿ ಆಲಿಬಾಬಾ.ಕಾಂ ಸ್ಥಾಪಿಸಿ ತ್ರಿವಿಕ್ರಮನಂತೆ ಬೆಳೆದ ವ್ಯಕ್ತಿ ಚೀನಾದ ಜಾಕ್ ಮಾ. ಚೀನಾದ ಅಗ್ರ ಶ್ರೀಮಂತರಾಗಿರುವ ಜಾಕ್ ಮಾ ಅವರು ಚಿನ್ನದ ಚಮಚ ಬಾಯಿಗಿಟ್ಟುಕೊಂಡು ಹುಟ್ಟಿದವರಲ್ಲ. ಹುಟ್ಟಿದಾಗಲೇ ಬಡತನ ಜೊತೆಗಿತ್ತುಘಿ. ಈಗ ಬಹುತೇಕರಿಗೆ ಅನುಭವ ಆಗುವಂತೆ ಆಗಲೂ ಜಾಕ್ ಮಾಗೂ ನಿರುದ್ಯೋಗದ ಅನುಭವ ಹೆಚ್ಚಿತ್ತು. ಹತ್ತಕ್ಕೂ ಹೆಚ್ಚು ಕಂಪನಿಗಳು ಇವರ ರೆಸ್ಯೂಂ ಅನ್ನು ಕಸದಬುಟ್ಟಿಗೆ ಹಾಕಿದವು. ನಂತರ ಆರಂಭಿಸಿದ ಎರಡೂ ಕಂಪನಿಗಳೂ ವಿÀಲವಾದವು. ನಂತರ ಸ್ಥಾಪಿಸಿದ್ದು ಆಲಿಬಾಬಾ. ನಂತರ ನಡೆದದ್ದು ಈಗ ಇತಿಹಾಸ. ಈಗ ಚೀನಾದ ಅಗ್ರ ಮತ್ತು ಜಗತ್ತಿನ ಪ್ರಮುಖ ಆನ್ ಲೈನ್ ಕಂಪನಿಯಾಗಿ ಬೆಳೆದಿದೆ.

ಅಮಿತಾಬ್ ಬಚ್ಚನ್: ಅಮಿತಾಬ್ ಬಚ್ಚನ್ ಕಾರ್ಪೋರೇಷನ್  ಲಿಮಿಟೆಡ್(ಎಬಿಸಿಎಲ್) ಜೊತೆಗೆ ಅಮಿತಾಬ್ ಸಹ ದಿವಾಳಿಯಾಗಿದ್ದರು. ಆದರೆ, ದಿವಾಳಿಯಾಗಿ ಏನೂ ಇಲ್ಲದೆ ಇದ್ದರೂ ಇವರು ಪ್ರಯತ್ನ ಕೈಬಿಡಲಿಲ್ಲ. ಕೌನ್ ಬನೇಗಾ ಕರೋಡ್‍ಪತಿ ನಂತರ ಮತ್ತೆ ನಂಬರ್ ಒನ್ ಸ್ಥಾನಕ್ಕೆ ಏರಿದರು.

ದೀಪಾವಳಿಯ ಭರ್ಜರಿ ಕೊಡುಗೆ- ಕ್ಯಾಡ್‌ನೆಸ್ಟ್‌‌ನ ಎಲ್ಲಾ ಕೋರ್ಸ್‌ಗಳಿಗೆ 50% ಡಿಸ್ಕೌಂಟ್

ಧೀರುಭಾಯ್ ಅಂಬಾನಿ: ಈಗಿನ ರಿಲಯೆನ್ಸ್ ಎಂಬ ಸಾವಿರಾರು ಕೋಟಿ ಉದ್ಯಮದ ಸ್ಥಾಪಕರು ಧೀರುಬಾಯ್ ಅಂಬಾನಿ. ಅವರ ಮಕ್ಕಳಂತೆ ಧೀರುಬಾಯ್ ಚಿನ್ನದ ಚಮಚ ಬಾಯಿಗಿಟ್ಟುಕೊಂಡು ಬೆಳೆದವರಲ್ಲ. ತನ್ನ 16ನೇ ವಯಸ್ಸಿನಲ್ಲಿ ಯೆಮೆನ್‍ಗೆ ತೆರಳಿ ಅಲ್ಲಿ ಕ್ಲರ್ಕ್ ವೃತ್ತಿ ಆರಂಭಿಸಿದರು. ನಂತರ ಭಾರತಕ್ಕೆ ಹಿಂತುರುಗಿ ಸ್ನೇಹಿತನೊಬ್ಬನ ಜೊತೆ ಸೇರಿ ಕಂಪನಿಯೊಂದನ್ನು ಕಟ್ಟಿದರು. ಆದರೆ, ಅವರ ಸ್ನೇಹಿತ ಆ ಕಂಪನಿಯಿಂದ ಅಂಬಾನಿಯನ್ನು ಕೈಬಿಟ್ಟರು. ಎದೆಗುಂದದ ಅಂಬಾನಿ ಷೇರು ಮಾರುಕಟ್ಟೆಗೆ ಪ್ರವೇಶೀಸಿದರು. ಹೀಗೆ ಹಂತಹಂತವಾಗಿ ತನ್ನ ರಿಲಯೆನ್ಸ್ ಸಾಮ್ರಾಜ್ಯವನ್ನು ಕಟ್ಟಿದರು.

ಫ್ಲಿಪ್ ಕಾರ್ಟ್‌ ಆರಂಭದ ಕತೆ, ಕೆಎಫ್‌ಡಿ ಸ್ಥಾಪಕರ ಕತೆ ಸೇರಿದಂತೆ ಜಗತ್ತಿನ ಬಹುತೇಕ ಯಶಸ್ಸಿನ ಕತೆಗಳು ವಾಮನನಂತೆ ಕಂಡು ತ್ರಿವಿಕ್ರಮನಂತೆ ಬೆಳೆದ ಕತೆಗಳೇ ಆಗಿವೆ.

ವಿದ್ಯಾರ್ಥಿಗಳೇ ಈ ಮುಂದಿನ ಸಲಹೆ ಗಮನದಲ್ಲಿಟ್ಟುಕೊಳ್ಳಿ

ಸಾಂದರ್ಭಿಕವಾಗಿ ಉತ್ತಮರಾಗುವುದಕ್ಕಿಂತ, ನಿರಂತರವಾಗಿ ಗ್ರೇಟ್ ಆಗಿರುವುದು ಒಳ್ಳೆಯದು. ನೀವು ವರ್ಷಕ್ಕೊಮ್ಮೆ, 6 ತಿಂಗಳಿಗೊಮ್ಮೆ ಏನೋ ಸಾಧನೆ ಮಾಡುವುದಲ್ಲ, ಪ್ರತಿನಿತ್ಯವೂ ಏನಾದರೂ ಸಾಧಿಸಲು ಯತ್ನಿಸಿ.

ಓದಿ. ಹೆಚ್ಚು ಓದಿ. ಒಳ್ಳೆಯ ಪುಸ್ತಕ ಓದುವುದರಿಂದ ದೊರಕುವ ಪ್ರತಿಸಲವು ಅಗಾಧವಾದದ್ದು. ಕರಿಯರ್‍ನಲ್ಲಿ ಸಾಧನೆ ಮಾಡಿದವರು, ಸ್ಫೂರ್ತಿದಾಯಕ ವ್ಯಕ್ತಿಗಳ ಆತ್ಮಚರಿತ್ರೆಯನ್ನು ಓದಿ. ನಿಮಗೆ ಆಸಕ್ತಿ ಇರುವ ಕ್ಷೇತ್ರಕ್ಕೆ ಸಂಬಂಧಪಟ್ಟ ಪುಸ್ತಕಗಳನ್ನು ಓದಿ. ಓದುವುದರಿಂದ ಜ್ಞಾನದೊಂದಿಗೆ ಮನಸ್ಸಿಗೆ ಅತ್ಯುತ್ತಮ ವ್ಯಾಯಾಮವೂ ದೊರಕುತ್ತದೆ. ಯೋಚನಾಕ್ರಮಕ್ಕೆ ಹೊಸ ಆಯಾಮಗಳೂ ದೊರಕುತ್ತವೆ.

ಜಗತ್ತು ಈಗ ಮೊದಲಿಗಿಂತಲೂ ಹೆಚ್ಚು ಕನೆಕ್ಟೆಡ್ ಆಗಿದೆ. ಹೀಗಾಗಿ, ನೀವು ಸದಾ ನಿಮ್ಮ ಘನತೆಯ ಕಡೆಗೆ ಗಮನ ನೀಡಬೇಕು. ಪ್ರತಿನಿತ್ಯವೂ ಒಳ್ಳೆಯದನ್ನೇ ಮಾಡಿ. ಯಾರೂ ನೋಡುತ್ತಿಲ್ಲವೆಂದೆನಿಸಿರೂ ಕೆಟ್ಟದನ್ನು ಮಾಡಲು ಹೋಗಬೇಡಿ. ಒಳ್ಳೆಯದನ್ನು ನೀವು ಮಾಡಿದರೆ ನಿಮಗೆ ಉತ್ತಮವಾಗಿರುವ ಪ್ರತಿಫಲವೇ ದೊರಕುತ್ತದೆ.

ನಿನ್ನೆಗಿಂತ ಇಂದು ಹೆಚ್ಚು ಬುದಿಟಛಿವಂತಿಕೆಯಿಂದ ವರ್ತಿಸಿ, ನಿನ್ನೆಗಿಂತ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಿ. ಪ್ರತಿದಿನ ಹೀಗೆ, ನಿನ್ನೆಗಿಂತ ಹೆಚ್ಚಿನದ್ದನ್ನು ಸಾಧಿಸಲು ಪ್ರಯತ್ನಿಸಿರಿ.

ನೀವು ಕೆಲಸ ಮಾಡುವ ಕಂಪನಿಗೆ ಮತ್ತು ನಿಮ್ಮ ಕುಟುಂಬಕ್ಕೆ ಹಣ ಉಳಿತಾಯ ಮಾಡುವವರಾಗಿರಿ. ನೀವು ಮಾಡುವ ಖರ್ಚುವೆಚ್ಚಗಳ ಕುರಿತು ನಿಗಾವಹಿಸಿ. ನೆನಪಿರಲಿ, ನೀವು ಏನನ್ನು ಉಳಿಸುವಿರೋ ಅದು ನಿಮ್ಮ ಗಳಿಕೆಯಾಗಿದೆ.

ಇತರರಿಗಿಂತ ಹೆಚ್ಚು ಉದಾರತೆ ನಿಮ್ಮಲ್ಲಿ ಇರಲಿ. ಇತರರಿಗೆ ಸಹಾಯ ನೀಡಲು ಹಿಂಜರಿಯಬೇಡಿ. ಕರಿಯರ್‍ನಲ್ಲಿ ನೀವು ಇತರರಿಗೆ ಕಲಿಸುವ ಸಂಗತಿಗಳು, ಮಾಡುವ ಉಪಕಾರಗಳು ನಿಮ್ಮ ಬೆಳವಣಿಗೆಗೂ ಕಾರಣವಾಗುತ್ತದೆ.

ನಿಮ್ಮ ಅಹಂ ಅನ್ನು ನಿಯಂತ್ರಣದಲ್ಲಿಡುವುದು ಪ್ರತಿನಿತ್ಯದ ಸವಾಲು. ಪ್ರತಿದಿನವೂ ಅದನ್ನು ಕಡಿಮೆಗೊಳಿಸಲು ಪ್ರಯತ್ನಿಸಿ. ಯಾಕೆಂದರೆ, ಅಹಂನಿಂದ ನಿಮ್ಮ ಪ್ರಗತಿಗೂ ಅಡ್ಡಿಯಾಗುತ್ತದೆ. ಇತರರ ಪ್ರಗತಿಗೂ ತಡೆ ಉಂಟಾಗುತ್ತದೆ.

ಕೆಲವೊಮ್ಮೆ ತಂತ್ರಜ್ಞಾನದಿಂದ ನಿಮಗೆ ಕಷ್ಟವಾಗಬಹುದು. ಕೆಲವೊಮ್ಮೆ ಅದರಿಂದ ಸಹಾಯವಾಗಬಹುದು. ಈಗಿನ ಉದ್ಯೋಗಕ್ಕೆ ಯಾವೆಲ್ಲ ಟೆಕ್ ಕೌಶಲಗಳು ಬೇಕೋ ಅವೆಲ್ಲವನ್ನು ಕಲಿಯಲು ಆದ್ಯತೆ ನೀಡಿರಿ.

ಎಷ್ಟು ಹಣ ಪಾವತಿ ಮಾಡುವಿರೋ ಅಷ್ಟೇ ಕೆಲಸ ಮಾಡುವುದು ಈಗಿನ ಉದ್ಯೋಗಿಗಳ ರೀತಿಯಾಗಿದೆ. ನೀಡುವ ಹಣಕ್ಕೆ ತಕ್ಕಂತೆ ಕೆಲಸ ಮಾಡಿದರೆ ಕರಿಯರ್ ಪ್ರಗತಿ ಆಗದು. ಹಣಕ್ಕಾಗಿ ಕೆಲಸ ಮಾಡುತ್ತೇನೆ ಎಂಬ ಮನಸ್ಥಿತಿಯನ್ನು ತೆಗೆದುಹಾಕಿ. ಕೆಲಸವನ್ನು ಪ್ರೀತಿಯಿಂದ ಮಾಡಲು ಕಲಿಯಿರಿ.

ನಿಮಗೆ ಅವಶ್ಯಕತೆ ಇಲ್ಲದ ಸಂಗತಿಗಳಿಂದ ದೂರವಿರಿ. ನಿಮ್ಮ ಪ್ರಗತಿಗೆ ಅಡ್ಡಿಯಾಗುವ ವ್ಯಕ್ತಿಗಳನ್ನೂ (ಸ್ನೇಹಿತರಾಗಿದ್ದರೂ ಕೂಡ) ಅಂತರದಲ್ಲಿಟ್ಟುಕೊಳ್ಳಿ. ಉದಾಹರಣೆಗೆ ನೀವು ಏನಾದರೂ ಸಾಧನೆ ಮಾಡಲು ಬಯಸಿರಬಹುದು. ಆಗ ನಿಮ್ಮ ಸ್ನೇಹಿತರು `ಅದೆಲ್ಲ ನಿನ್ನಿಂದ ಸಾಧ್ಯವಿಲ್ಲ’ ಎಂದು ಕೊಂಕು ನುಡಿಯಬಹುದು. ಇಂತಹ ಸ್ನೇಹಿತರಿಂದ, ಸಹೋದ್ಯೋಗಿಗಳಿಂದ ದೂರವಿರಿ.

ನಿಮ್ಮ ಆಲೋಚನೆಗಳ ಕುರಿತು ಎಚ್ಚರವಿರಲಿ. ನಿಮ್ಮ ಆಲೋಚನೆಗಳೇ ನಿಮ್ಮ ಬಾಯಲ್ಲಿ ಪದಗಳಾಗಿ ಹೊರಬರಬಹುದು. ನೀವು ಬಳಸುವ ಪದಗಳ ಕುರಿತು ಎಚ್ಚರವಿರಲಿ. ನೀವು ಹೇಳುವ ಮಾತುಗಳೇ ನಿಮ್ಮ ವ್ಯಕ್ತಿತ್ವಾಗಿದೆ.

ಪ್ರತಿಯೊಂದು ವೃತ್ತಿಯಲ್ಲಿಯೂ ಯಶಸ್ಸು ಗಳಿಸುವುದು ಎಂದರೆ ಕೇವಲ ಉನ್ನತ ಸ್ಥಾನಕ್ಕೆ ಏರುವುದು ಮಾತ್ರವಲ್ಲ, ಹಣ ಗಳಿಸುವುದೂ ಮಾತ್ರವಲ್ಲ. ಅತ್ಯುತ್ತಮ ಆರೋಗ್ಯದಿಂದ ಇರುವುದು ಸಹ ವೃತ್ತಿಯಲ್ಲಿನ ಯಶಸ್ಸಾಗಿದೆ. ಇದಕ್ಕಾಗಿ ಕೆಲಸದ ಜೊತೆ, ನಿಮ್ಮ ಆರೋಗ್ಯದ ಕಡೆಗೂ ಗಮನ ನೀಡಿರಿ.

ನಿಮ್ಮ ಯಶಸ್ಸಿಗೆ ಬೆಂಬಲ ನೀಡಲು ಬೆಂಗಳೂರು ಕ್ಯಾಡ್‌ನೆಸ್ಟ್‌‌ ಕೌಶಲ ತರಬೇತಿ ಕೇಂದ್ರ ಸದಾ ಬೆಂಬಲ ನೀಡುತ್ತದೆ. ನಿಮ್ಮ ಕನಸುಗಳನ್ನು ಈಡೇರಿಸಿಕೊಳ್ಳಲು ಬೇಕಾದ ಕೌಶಲ್ಯ ಕಲಿಯಲು ನಮ್ಮ ಶಾಖೆಗಳಿಗೆ ಬನ್ನಿ. ಗಮನಿಸಿ, ನಮ್ಮ ಶಾಖೆಗಳು ಬೆಂಗಳೂರಿನ ಬಸವನಗುಡಿ, ರಾಜಾಜಿನಗರ, ಮಲ್ಲೇಶ್ವರಂ ಮತ್ತು ಶೇಷಾದ್ರಿಪುರಂನಲ್ಲಿ ಮಾತ್ರವಿದೆ. ಮತ್ತೊಮ್ಮೆ ನಿಮಗೆ ದೀಪಾವಳಿಯ ಹಾರ್ದಿಕ ಶುಭಾಶಯಗಳು. ಗುಡ್‌ಲೈಕ್‌.

ಕ್ಯಾಡ್‌ನೆಸ್ಟ್‌‌ ಕೌಶಲ್ಯ ತರಬೇತಿ ಕೇಂದ್ರದ ವೆಬ್‌ಸೈಟ್‌ ಲಿಂಕ್ ಇಲ್ಲಿದೆ

ಈ ದೀಪಾವಳಿ ಹಬ್ಬಕ್ಕೆ ಭರ್ಜರಿ ಕೊಡುಗೆಯಾಗಿ ಶೇಕಡ ೫೦ ವಿನಾಯಿತಿಯೊಂದಿಗೆ ಬೆಂಗಳೂರಿನ ರಾಜಾಜಿನಗರ, ಮಲ್ಲೇಶ್ವರಂ, ಶೇಷಾದ್ರಿಪುರಂ ಮತ್ತು ಬಸವನಗುಡಿ ಕ್ಯಾಡ್‌ನೆಸ್ಟ್‌ ಕೌಶಲ್ಯ ತರಬೇತಿ ಕೇಂದ್ರದಲ್ಲಿ ವಿದ್ಯಾರ್ಥಿಗಳು ಕೋರ್ಸ್‌ ಕಲಿಯಬಹುದು. ಈ ಆಫರ್‌ ಸೀಮಿತ ಅವಧಿಗೆ ಮಾತ್ರ. ಈಗಲೇ ನಿಮ್ಮ ಯಶಸ್ಸಿಗೆ ಸೂಕ್ತವಾದ ಕೋರ್ಸ್‌ ಆಯ್ಕೆ ಮಾಡಿಕೊಳ್ಳಿ.

ದೀಪಾವಳಿಯ ಭರ್ಜರಿ ಕೊಡುಗೆ- ಕ್ಯಾಡ್‌ನೆಸ್ಟ್‌‌ನ ಎಲ್ಲಾ ಕೋರ್ಸ್‌ಗಳಿಗೆ 50% ಡಿಸ್ಕೌಂಟ್

Related Posts

error: Content is protected !!
Scroll to Top