Kannada CADD Nest Private Limited

ಕರಿಯರ್ Planning ಮಾಡಲು ಗೊತ್ತೆ?, ವಿದ್ಯಾರ್ಥಿಗಳು ಓದಲೇಬೇಕಾದ ಮಾರ್ಗದರ್ಶಿ

stickies, post-it, list

ಕರಿಯರ್ ಯೋಜನೆ ಮಾಡುವುದು ಕೊಂಚ ಕಷ್ಟದ ಕೆಲಸ. ಹೀಗಾಗಿ, ಬಹುತೇಕರು ಇದನ್ನು ಮಾಡಲು ಹೋಗುವುದಿಲ್ಲ. ಇದರಿಂದಾಗಿ ಹೆಚ್ಚಿನವರ ಕರಿಯರ್ ಬದುಕು ಗಾಳಿಬಂದ ಕಡೆ ಸಾಗುವ ಗಾಳಿಪಟದಂತಾಗುತ್ತದೆ. ಕನ್ನಡ ಕ್ಯಾಡ್‌ನೆಸ್ಟ್‌‌ ಇಂದು ವಿಶೇಷ ಮಾರ್ಗದರ್ಶಿಯ ಮೂಲಕ ನಿಮ್ಮ ಮುಂದೆ ಬಂದಿದೆ. ನೀವು ನಿಮ್ಮ ಕರಿಯರ್‌ ಕುರಿತು ಸರಿಯಾದ ಯೋಜನೆ ರೂಪಿಸಲು ನೆರವಾಗುವ Career Planning Guide ಅನ್ನು ಈ ಲೇಖನದ ಮೂಲಕ ನೀಡಿದೆ.

ಏನಿದು Career Planning?

ವ್ಯಕ್ತಿಯೊಬ್ಬರ ವೃತ್ತಿಪರ ಗುರಿಗಳನ್ನು ನಿಗದಿಪಡಿಸುವ ಮತ್ತು ಅವುಗಳನ್ನು ಸಾಸಲು ದಾರಿ ಹುಡುಕುವ ನಿರಂತರ ಪ್ರಕ್ರಿಯೆಯಾಗಿದೆ. ಇದಕ್ಕಾಗಿ ಸ್ವಯಂ ಮೌಲ್ಯಮಾಪನ, ಮಾರುಕಟ್ಟೆ ಅಧ್ಯಯನ ಮತ್ತು ನಿರಂತರ ಕಲಿಕೆ ಅತ್ಯಂತ ಅವಶ್ಯ. ನಿಮ್ಮ ಕರಿಯರ್ ಅನ್ನು ಯಶಸ್ವಿಯಾಗಿ ನಿರ್ವಹಣೆ ಮಾಡಲು ಇದು ಅಗತ್ಯವಾಗಿದೆ.

Career Planning ವಿಧಾನಗಳು

success, business woman, career

*ನಿಮ್ಮ ಗುರಿಗಳನ್ನು ಕಂಡುಕೊಳ್ಳಿ: ಗುರಿರಹಿತವಾಗಿ ಕೆಲಸ ಮಾಡುವ ಬದಲು ಕರಿಯರ್ ಪ್ಲ್ಯಾನಿಂಗ್ ಮೂಲಕ ನಿಮ್ಮ ವೈಯಕ್ತಿಕ ಉದ್ದೇಶಗಳನ್ನು ಮತ್ತು ಗುರಿಗಳನ್ನು ಕಂಡುಕೊಂಡು ಸಾಗುವುದು ಸೂಕ್ತ.

* ಸಮಯ ಮತ್ತು ಶಕ್ತಿಯ ಉಳಿತಾಯ: ನಿಮ್ಮ ವೈಯಕ್ತಿಕ ಗುರಿಗಳು ಮತ್ತು ಸಾಮರ್ಥ್ಯಗಳಿಗೆ  ಸೂಕ್ತವಾಗದ ವಿಭಾಗದಲ್ಲಿ ಕೆಲಸ ಮಾಡುವುದನ್ನು ತಪ್ಪಿಸುತ್ತದೆ. ಎಷ್ಟು ಬೇಗ ನೀವು ಯೋಜನೆ ರೂಪಿಸುವಿರೋ, ಅಷ್ಟು ಉತ್ತಮ.

* ಭರವಸೆಯ ಆಯ್ಕೆ: ಕರಿಯರ್ ಪ್ಲ್ಯಾನಿಂಗ್ ಮೂಲಕ ನಿಮ್ಮ ಕರಿಯರ್ ಪ್ರಯಾಣದಲ್ಲಿ ನೀವು ಚಾಲಕನ ಸೀಟ್‍ನಲ್ಲಿ ಕುಳಿತಬಹುದು ಮತ್ತು `Àವಿಷ್ಯದ ಪ್ರಯಾಣವನ್ನು ಭರವಸೆಯಿಂದ ಮಾಡಬಹುದು.

* ಗಮನ: ಕರಿಯರ್ ಪ್ಲ್ಯಾನಿಂಗ್ ಮೂಲಕ ನಿರ್ದಿಷ್ಟ ಗುರಿಯೆಡೆಗೆ ಲಕ್ಷ್ಯವಿಟ್ಟು ಸಾಗಲು ನಿಮ್ಮಿಂದ ಸಾಧ್ಯವಾಗಲಿದೆ.

1. ಯಶಸ್ವಿ ಯೋಜನೆ ಹೇಗೆ?

* ಸ್ವಯಂ ಮೌಲ್ಯಮಾಪನ

ನಿಮ್ಮ ಸ್ವಂತ ಆಸಕ್ತಿಗಳು, ಸಾಮಥ್ರ್ಯಗಳು, ದೌರ್ಬಲ್ಯಗಳು ಮತ್ತು ಗುರಿಗಳನ್ನು ಅರ್ಥಮಾಡಿಕೊಳ್ಳುವುದು ಮೊದಲ ಹೆಜ್ಜೆಯಾಗಿದೆ. ಇದಕ್ಕಾಗಿ ಈ ಮುಂದಿನ ಪ್ರಶ್ನೆಗಳನ್ನು ನಿಮ್ಮಲ್ಲಿಯೇ ಕೇಳಿಕೊಳ್ಳಿ.

– ಯಾವ ಕೆಲಸ ನಿಮಗೆ ಆನಂದ ನೀಡುತ್ತದೆ?

– ಯಾವುದು ನಿಮಗೆ ಸೂರ್ತಿ ನೀಡಬಲ್ಲದು?

– ನಾನು ಯಾವುದರಲ್ಲಿ ಉತ್ತಮವಾಗಿದ್ದೇನೆ?  ಯಾವುದರಲ್ಲಿ ಕೆಟ್ಟದ್ದಾಗಿದ್ದೇನೆ?

– ಭವಿಷ್ಯದಲ್ಲಿ ಯಾವ ಬಗೆಯ ಜೀವನ ಶೈಲಿ ನನ್ನದಾಗಬೇಕು?

– ನನ್ನ ವೈಯಕ್ತಿಕ ಗುರಿಗಳು ಯಾವುವು?

– ನನ್ನ ದೊಡ್ಡ ಸಾಧನೆಗಳು ಮತ್ತು ವೈಫಲ್ಯಗಳು ಯಾವುವು?

– ನನ್ನಲ್ಲಿ ಯಾವೆಲ್ಲ ವಿದ್ಯಾರ್ಹತೆ ಮತ್ತು ಅನುಭವ ಇದೆ?

– ನನಗೆ ಯಾವೆಲ್ಲ ಉದ್ಯೋಗ ಸೂಕ್ತವಾಗಬಲ್ಲದು?

ಆನ್‍ಲೈನ್ ನೆರವು ಪಡೆಯಿರಿ

ನಿಮ್ಮ ಆಸಕ್ತಿಗೆ ತಕ್ಕಂತೆ ಸೂಕ್ತ ಕರಿಯರ್‍ಗಳನ್ನು ಸೂಚಿಸುವ ವಿವಿಧ ಆನ್‍ಲೈನ್ ಟೂಲ್‍ಗಳು ಇವೆ. ಅವುಗಳನ್ನು ಬಳಸಬಹುದು.

– ಕರಿಯರ್ ಕ್ವಿಜ್- ನಿಮ್ಮ ಪರ್ಸನಾಲಿಟಿಯ ಕುರಿತು ಸಮಗ್ರ ಮಾಹಿತಿ ಒದಗಿಸುತ್ತದೆ ಮತ್ತು ಯಾವ ಉದ್ಯೋಗ ಸೂಕ್ತವೆಂಬ ಆಯ್ಕೆಗಳನ್ನು ನಿಮಗೆ ಒದಗಿಸುತ್ತದೆ.

– ಪರ್ಸನಾಲಿಟಿ ಟೆಸ್ಟ್- ನಿಮ್ಮ ಪರ್ಸನಾಲಿಟಿಯ ಕುರಿತು ಸಮಗ್ರ ಸಾರಾಂಶವನ್ನು ಈ ಪರೀಕ್ಷೆ ಒದಗಿಸುತ್ತದೆ. ಇದನ್ನು ಜಗತ್ತಿನಾದ್ಯಂತ ನೇಮಕದಾರರು ಮತ್ತು ಉದ್ಯೋಗ ಸಮಲೋಚಕರು ಬಳಸುತ್ತಾರೆ.

2. ಮಾರುಕಟ್ಟೆ ರಿಸರ್ಚ್ ಮಾಡಿ

ಒಮ್ಮೆ ನಿಮ್ಮ ಸ್ವಂತ ಆಸಕ್ತಿಗಳನ್ನು ಮತ್ತು ಸಾಮಥ್ರ್ಯಗಳನ್ನು ಅನ್ವೇಷಣೆ ಮಾಡಿದ ಬಳಿಕ ಮಾರ್ಕೆಟ್ ರಿಸರ್ಚ್ ಮಾಡಬೇಕು. ನಿಮ್ಮ ಗುರಿಗಳು, ಆಸಕ್ತಿಗಳು ಮತ್ತು ಸಾಮಥ್ರ್ಯಗಳಿಗೆ ಸೂಕ್ತವಾದ ವಿವಿಧ ಉದ್ಯೋಗಗಳನ್ನು ಪಟ್ಟಿ ಮಾಡಿ. ಮಾರುಕಟ್ಟೆ ಟ್ರೆಂಡ್‍ಗಳನ್ನು ಗಮನಿಸಿ. ಕಂಪನಿಗಳ ಕುರಿತು ಪರಾಮರ್ಶೆ ಮಾಡಿ. ವೇತನ, ಉದ್ಯೋಗ ಸಂಸ್ಕøತಿ, ಪ್ರಗತಿ ಅವಕಾಶ ಇತ್ಯಾದಿಗಳ ಮಾಹಿತಿ ಪಡೆಯಿರಿ. ನೀವು ಪ್ರತಿಯೊಂದು ಉದ್ಯೋಗವನ್ನು ಪಟ್ಟಿ ಮಾಡಿದಾಗ ಈ ಮುಂದಿನ ಪ್ರಶ್ನೆಗಳನ್ನು ನಿಮ್ಮಲ್ಲಿಯೇ ಕೇಳಿಕೊಳ್ಳಿರಿ.

– ನನ್ನ ಆಸಕ್ತಿಗೆ ಈ ಉದ್ಯೋಗ ಸೂಕ್ತವಾಗಿದೆಯೇ?

– ನನ್ನ ಗುರಿ ಸಾಧನೆಗೆ ಇದು ನೆರವು ನೀಡಬಲ್ಲದೆ?

– ನನಗೆ ಯಾವ ಬಗೆಯ ಹುದ್ದೆಗಳು ಸೂಕ್ತವಾಗಿದೆ?

 – ಈ ಉದ್ಯೋಗಕ್ಕೆ ನನ್ನ ವಿದ್ಯಾರ್ಹತೆ ಮತ್ತು ಸಾಮಥ್ರ್ಯಗಳು ಸೂಕ್ತವಾಗಿದೆಯೇ?

ನಿಮ್ಮ ಕರಿಯರ್ ಕುರಿತು ಮಾಹಿತಿಪೂರ್ಣ ನಿರ್ಧಾರ ಕೈಗೊಳ್ಳಲು ಮಾರುಕಟ್ಟೆ ರಿಸರ್ಚ್ ನೆರವಾಗುತ್ತದೆ.

3. ಕೊರತೆಗಳನ್ನು ಗುರುತಿಸಿ

ನೀವು ಪಟ್ಟಿ ಮಾಡಿದ ಎಲ್ಲಾ ಹುದ್ದೆಗಳಿಗೆ ಅವಶ್ಯವಿರುವ ಕೌಶಲಗಳು, ಅನುಭವಗಳು ಮತ್ತು ಸಂಪನ್ಮೂಲಗಳನ್ನು ಪಟ್ಟಿ ಮಾಡಿ. ನಿಮ್ಮಲ್ಲಿರುವ ಕೌಶಲ, ಅನುಭವಗಳಿಗೂ, ಈ ಉದ್ಯೋಗಗಳು ಬಯಸುವ ಕೌಶಲ, ಅನು`Àವಗಳ ನಡುವೆ ಇರುವ ಅಂತರವನ್ನು ಗುರುತಿಸಿ. ಅಂದರೆ, ಕೌಶಲಗಳ ಅಂತರ, ಅನುಭವದ ಅಂತರ, ವಿದ್ಯಾರ್ಹತೆ ಅಂತರ ಇತ್ಯಾದಿ.

4. ಕೊರತೆಯನ್ನು ತುಂಬಿರಿ

ನಿಮ್ಮಲ್ಲಿರುವುದಕ್ಕೂ, ಆ ಉದ್ಯೋಗ ಬೇಡುವುದಕ್ಕೂ ಇರುವ ಅಂತರವನ್ನು ಗುರುತಿಸಿದ ಬಳಿಕ, ಈ ಗ್ಯಾಪ್ ಅನ್ನು ಭರ್ತಿ ಮಾಡಲು ವಿವಿಧ  ದಾರಿಗಳನ್ನು ಹುಡುಕಿ. ಅಂದರೆ, ಹೊಸ ಕೌಶಲಗಳನ್ನು ಕಲಿಯಿರಿ ಮತ್ತು ಸಂಬಂಧಪಟ್ಟ ಅನುಭವಗಳನ್ನು ಸಂಪಾದಿಸಲು ಇಂಟರ್ನ್‍ಶಿಪ್‍ಗೆ ಅರ್ಜಿ ಸಲ್ಲಿಸಿ. ಕೆಲವೊಂದು ಕರೆಸ್ಪಾಡೆನ್ಸ್ ಕೋರ್ಸ್‍ಗಳಿಗೂ ಸೇರಬಹುದು.

5. ಒಂದನ್ನು ಆಯ್ಕೆ ಮಾಡಿ

ನೀವು ಪಟ್ಟಿ ಮಾಡಿರುವ ವಿವಿಧ ಉದ್ಯೋಗಗಳಲ್ಲಿ ಒಂದನ್ನು ಆಯ್ಕೆ ಮಾಡಿ. ಈ ಉದ್ಯೋಗ ಪಡೆಯಲು ನೀವು ಮಾಡಬೇಕಾದ ಪ್ರಯತ್ನ, ತ್ಯಾಗ ಇತ್ಯಾದಿಗಳ ಕುರಿತು ಯೋಚಿಸಿ. ನೀವು ಆಯ್ಕೆ ಮಾಡಿಕೊಂಡ ಗುರಿಯ ಕುರಿತು ಮತ್ತೆಮತ್ತೆ ಆಲೋಚಿಸಿ. ಅದೇ ಅಂತಿಮವೆಂಬ ನಿರ್ಧಾರಕ್ಕೆ ಬನ್ನಿ.

6. ಕ್ರಿಯಾ ಯೋಜನೆ ಮಾಡಿ

ನೀವು ಆಯ್ಕೆ ಮಾಡಿಕೊಂಡಿರುವ ಗುರಿಯನ್ನು ಸಾಸಲು ಅವಶ್ಯವಿರುವ ಆ್ಯಕ್ಷನ್ ಪ್ಲ್ಯಾನ್ ಅನ್ನು ಮಾಡಿ. ಅಂದರೆ, ಅವಶ್ಯವಿರುವ ಕೋರ್ಸ್ ಕಲಿಕೆ, ಕವರ್ ಲೆಟರ್ ಬರೆಯುವುದು, ರೆಸ್ಯೂಂ ಅಪ್‍ಡೇಟ್ ಮಾಡುವುದು… ಇತ್ಯಾದಿಗಳನ್ನು ಮಾಡಿ. ಪ್ರತಿಯೊಂದು ಹಂತಗಳನ್ನು ಪೂರೈಸಲು ಸೂಕ್ತ ಟೈಮ್‍ಲೈನ್ ಮಾಡಿಕೊಳ್ಳಿ. ನಿಗದಿತ ಸಮಯದೊಳಗೆ ಪ್ರತಿಯೊಂದು ಹಂತಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸಿ.

7. ಆಯ್ಕೆಯ ಪುನರ್‌ ವಿಮರ್ಶೆ

ಈ ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ಮಾರುಕಟ್ಟೆ ಅಥವಾ ವೈಯಕ್ತಿಕ ಗುರಿಗಳು ಬದಲಾಗಬಹುದು. ಹೀಗಾಗಿ, ಆಗಾಗ ನೀವು ಸಾಗುತ್ತಿರುವ ದಾರಿಯ ಕುರಿತು ಮೌಲ್ಯಮಾಪನ ಮಾಡುವುದು ಒಳ್ಳೆಯದು. ಇದಕ್ಕಾಗಿ ನೀವು ಹೊಸ ಕೌಶಲ ಕಲಿಯಬೇಕಾಗಬಹುದು.

 ಕರಿಯರ್ ಪ್ಲ್ಯಾನಿಂಗ್ ಎನ್ನುವುದು ಜೀವನಪರ್ಯಂತದ ಪ್ರಕ್ರಿಯೆಯಾಗಿದೆ. ಬದಲಾಗುತ್ತಿರುವ ಮಾರುಕಟ್ಟೆಗೆ ತಕ್ಕಂತೆ ಅಪ್‍ಡೇಟ್ ಆಗಬೇಕು. ನೀವು ಆಯ್ಕೆ ಮಾಡಿಕೊಂಡ ನಗರದಲ್ಲಿಯೇ ನೀವು ಬಯಸಿದ ಹುದ್ದೆ ಅಥವಾ ಕಂಪನಿ ದೊರಕದೆ ಇದ್ದರೆ ಇತರೆ ಪ್ರದೇಶಗಳಿಗೆ ಹೋಗಲೂ ಸಿದ್ಧವಾಗಿರಿ.

ಸ್ನೇಹಿತರೇ, ಕರಿಯರ್‌ ಪ್ಲ್ಯಾನಿಂಗ್‌ ಮಾಡುವುದು ಹೇಗೆ ಎಂಬ ಐಡಿಯಾ ಬಂತೆ, ಹಾಗಾದರೆ, ನಿಮ್ಮ ಕರಿಯರ್‌ಗೆ ಸೂಕ್ತವಾದ ಕೌಶಲಗಳ ವಿವರವನ್ನು ಇಲ್ಲಿ ಪಡೆಯಿರಿ.

ಕಡಿಮೆ ದರಕ್ಕೆ ಅದ್ಭುತ ಔದ್ಯೋಗಿಕ ಕೌಶಲ ಕಲಿಯಲು ನಮ್ಮ ಕೌಶಲ ತರಬೇತಿ ಕೇಂದ್ರಗಳಿಗೆ ಭೇಟಿ ನೀಡಿ

Related Posts

error: Content is protected !!
Scroll to Top